Search
  • Follow NativePlanet
Share
» »ಉತ್ತರ ಕರ್ನಾಟಕದ ಉತ್ಸವ ರಾಕ್ ಗಾರ್ಡನ್

ಉತ್ತರ ಕರ್ನಾಟಕದ ಉತ್ಸವ ರಾಕ್ ಗಾರ್ಡನ್

By Vijay

ಸುಮಾರು 80, 90 ರ ದಶಕದ ಅಥವಾ ಪ್ರಸ್ತುತ ಕರ್ನಾಟಕದ ಗ್ರಾಮೀಣ ಬದುಕಿನ ಜೀವನ ಶೈಲಿ ಹೇಗಿರಬಹುದೆಂದು ಒಂದೊಮ್ಮೆ ಯೋಚಿಸಿದ್ದಿರಾ? ಅಥವಾ ಇಂದಿನ ಪೀಳಿಗೆಯ ಪುಟಾಣಿ ಮಕ್ಕಳಿಗೆ ಹಳ್ಳಿಗಳ ಜೀವನ ಕುರಿತು ಏನಾದರೂ ತಿಳಿದಿದೆಯಾ? ಪ್ರಸ್ತುತ ರಭಸದ ಜೀವನದಲ್ಲಿ ಕುಟುಂಬದೊಡನೆ ಕುಳಿತು ಸಮಯ ಕಳೆಯುವುದೆ ನಿಲುಕದಾದಾಗ ಇನ್ನೂ ಮಕ್ಕಳಿಗೆ ಹಳ್ಳಿಯ ಜೀವನದ ಕುರಿತು ಹೇಳುವುದಾದರೂ ಹೇಗೆ...ಎಂಬುದು ನಿಮ್ಮುತ್ತರವಾದರೂ ಅಚ್ಚರಿ ಪಡಬೇಕಾಗಿಲ್ಲ ಏಕೆಂದರೆ ಮಹಾನಗರಗಳಲ್ಲಿ ಕಂಡುಬರುವ ವಾಸ್ತವದ ಸಂಗತಿ ಇದು.

ಇಷ್ಟಾದರೂ ನಗರವಾಸಿಗಳು ನಿರಂತರವಾಗಿ ಬರುವ ವಾರಾಂತ್ಯದ ರಜೆಗಳಲ್ಲಿ ಒತ್ತಡ ನಿವಾರಣಾರ್ಥದ ಉದ್ದೇಶವಾಗಿ ಅಲ್ಲಲ್ಲಿ ಪ್ರವಾಸ ಹೊರಡುವುದು ಸಾಮಾನ್ಯ. ಆದರೆ ಒಮ್ಮೆ ಯೋಚಿಸಿ, ಯಾವಾಗಲೂ ಭೇಟಿ ನೀಡುವ ಪ್ರಕೃತಿ ಮೈಸಿರಿಯಿಂದ ತುಂಬಿಕೊಂಡಿರುವ ಸ್ಥಳಗಳ ಬದಲಾಗಿ, ಕೇವಲ ಒಂದು ಸ್ಥಳದಲ್ಲೆ ಹಳ್ಳಿ ಜೀವನಶೈಲಿಯ ಸಮಗ್ರ ವಾತಾವರಣ ನಿಮ್ಮ ಅಕ್ಷಿ ಪಟಲದಲ್ಲಿ ಕಟ್ಟಿಕೊಡುವ ಸ್ಥಳಕ್ಕೆ ಭೇಟಿ ನೀಡಿದರೆ ಹೇಗೆ? ಮಕ್ಕಳ ವಿಕಸನ ದೃಷ್ಟಿಯಿಂದ ಅದೊಂದು ಮಾದರಿಯ ಪ್ರವಾಸವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೆ ಇಂದಿನ ಯುವ ಪೀಳಿಗೆಗೂ ಗ್ರಾಮೀಣ ಸೊಗಡಿನ ಸೊಬಗನ್ನು ಪರಿಚಯಿಸುವ ಗಮ್ಯ ತಾಣವಾಗಬಹುದು.

ಪ್ರಸ್ತುತ ಲೇಖನವು ಇಂತಹ ಒಂದು ಗಮ್ಯ ತಾಣದ ಕುರಿತು ನಿಮಗೆ ಪರಿಚಯಿಸುತ್ತದೆ. ಉತ್ಸವ ರಾಕ್ ಗಾರ್ಡನ್ ಎಂಬ ಹೆಸರಿನ ಈ ತಾಣವು ಇರುವುದು ಉತ್ತರ ಕರ್ನಾಟಕದಲ್ಲಿ. ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣದಿಂದ ವಾಯವ್ಯ ದಿಕ್ಕಿಗೆ 30 ಕಿ.ಮೀ ಚಲಿಸಿದರೆ ಸಿಗುವ ಪಟ್ಟಣ ಶಿಗ್ಗಾಂವ್. ಇಲ್ಲಿಂದ ಮತ್ತೆ ವಾಯವ್ಯ ದಿಕ್ಕಿಗೆ ಸುಮಾರು 10 ಕಿ.ಮೀ ಕ್ರಮಿಸಿದರೆ ಗೊಟಗೋಡಿ ಎಂಬ ಹಳ್ಳಿಯ ಸರಹದ್ದಿನಲ್ಲಿರುವ ಉತ್ಸವ ರಾಕ್ ಗಾರ್ಡನ್ ಸಿಗುತ್ತದೆ. ಹಳ್ಳಿಯ ಸಮಗ್ರ ಜೀವನದ ಚಿತ್ರಣವನ್ನು ಮಾದರಿ ಪ್ರತಿಮೆಗಳ ಮೂಲಕ ಸುಂದರವಾಗಿ ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಸುಂದರವಾದ ಉದ್ಯಾನವನವನ್ನೂ ಸಹ ಇಲ್ಲಿ ಕಾಣಬಹುದು. ಹುಬ್ಬಳ್ಳಿ ಹಾಗೂ ಹಾವೇರಿಗಳಿಂದ ಗೊಟಗೋಡಿಯವರೆಗೆ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ.

ದಾಸನೂರು ಸಮೂಹದವರಿಂದ ನಿರ್ವಹಿಸಲ್ಪಡುತ್ತಿರುವ ಈ ಕಲಾ ತಾಣವು ಒಂದು ಅನನ್ಯ ಪ್ರವಾಸಿ ಆಕರ್ಷಣೆಯಾಗಿದೆ. ಇನ್ನೊಂದು ವಿಶೇಷವೆಂದರೆ ಇತ್ತೀಚಿಗಷ್ಟೆ ದೋಣಿ ವಿಹಾರವನ್ನೂ ಸಹ ಒದಗಿಸಲಾಗಿದೆ.

ಚಿತ್ರಕೃಪೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : http://www.utsavrock.com/

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ನಿಜವಾದ ರೈತನೆ....ಇಲ್ಲ..ನೇಗಿಲು ಉಳುವ ರೈತನ ಸುಂದರ ಮಾದರಿ ಪ್ರತಿಮೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ದಂಪತಿ ಸಮೇತ ರೈತ ಕುಟುಂಬ ಹೊಲದ ಕೆಲಸದಲ್ಲಿ ನಿರತರಾದಾಗ..

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಹಳ್ಳಿಗಾಡಿನ ಬುಡಕಟ್ಟು ಜನಾಂಗವನ್ನು ಬಿಂಬಿಸುವ ಸುಂದರ ಮಾದರಿ ವಿನ್ಯಾಸ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾಣಸಿಗುವ ಭವಿಷ್ಯ ನುಡಿಯುವ ದಾಸಯ್ಯನ ಮೂರ್ತಿ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಸಾಂಪ್ರದಾಯಿಕ ಮನೆಯ ಒಂದು ನೋಟ. ಜೋಗುಳ ಹಾಡಿ ತೊಟ್ಟಿಲಲ್ಲಿ ಕಂದಮ್ಮನನ್ನು ಮಲಗಿಸುತ್ತಿರುವ ತಾಯಿ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಸಾಂಪ್ರದಾಯಿಕ ವೃತ್ತಿಗಳನ್ನು ಅನಾವರಣಗೊಳಿಸುತ್ತಿರುವ ಸ್ತಬ್ಧ ಚಿತ್ರಣ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ವಿರಾಮದ ಸಮಯದಿ ಚಕ್ಕಾ ವಚ್ಚಿ ಆಟದಲ್ಲಿ ನಿರತರಾಗಿರುವ ಹಳ್ಳಿಗರು.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ದಿನಸಿ ಅಂಗಡಿ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಹಳ್ಳಿಗಳಲ್ಲಿ ಕಂಡುಬರುವ ಜಮೀಂದಾರನ ಮನೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಬೆಣ್ಣೆ ಕಡೆಯುತ್ತಿರುವ ಹಳ್ಳಿ ಮಹಿಳೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಗ್ರಾಮ ಲೆಕ್ಕಾಧಿಕಾರಿಯಲ್ಲ! ಜಮೀಂದಾರನ ಮನೆಯ ಲೆಕ್ಕಾಧಿಕಾರಿ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ದೇವರಿಗೂ ಸಮಯ ಮೀಸಲು ಹಳ್ಳಿಗಳ ಕುಟುಂಬಗಳಲ್ಲಿ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಹಾಡು ಹೇಳುತ್ತ ಬೀಸುತ್ತಿರುವ ಮಹಿಳೆಯರು.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಕುರಿಗಳನ್ನು ಕಾಯುತ್ತಿರುವ ಕುರುಬರು.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ತೋಟಗಳಿಗೆ ನೀರುಣಿಸುತ್ತಿರುವ ನೋಟ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಕತ್ತೆಯೂ ಕೆಲಸಗಳ ಅವಿಭಾಜ್ಯ ಅಂಗ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಅನನ್ಯವಾಗಿ ನಿರ್ಮಿಸಲಾದ ವಿರಾಮ ತಾಣ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಮತ್ತೊಂದು ನೋಟ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಇತ್ತೀಚಿಗಷ್ಟೆ ಪರಿಚಯಿಸಲಾದ ದೋಣಿ ವಿಹಾರ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ರಾಕ್ ಉದ್ಯಾನದಲ್ಲಿರುವ ಹಸಿರು ಉದ್ಯಾನ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಹಾಗೂ ಅನನ್ಯ ಕಲಾ ಚಿತ್ತಾರ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಮತ್ತೊಂದು ನೋಟ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಉಬ್ಬು ತೆಗ್ಗುಗಳೊಂದಿಗೆ ವಿಶಾಲವಾಗಿ ಚಾಚಿರುವ ಉದ್ಯಾನ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೂ ಆದರ್ಶಪ್ರಾಯವಾದ ಮಾದರಿ ತಾಣ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಮಾದರಿ ಉದ್ಯಾನದಲ್ಲಿ ವಿಶಿಷ್ಟ ಕಲಾ ವಿನ್ಯಾಸ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಜೀವಂತ ನವೀಲುಗಳಂತೆ ಗೋಚರಿಸುವ ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಜಿಂಕೆಗಳಿಗೂ ಲಭ್ಯವಿದೆ ಜಾಗ ಇಲ್ಲಿ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಸಮರದಲ್ಲಿ ತೊಡಗಿರುವ ಸಾರಂಗಗಳ ಮಾದರಿಗಳು.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಕಂದಮ್ಮನನ್ನು ಸುರಕ್ಷಿತ ಜಾಗಕ್ಕೆ ವರ್ಗಾಯಿಸುತ್ತಿರುವ ಚಿರತೆಯ ಪ್ರತಿಮೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಬಾಗ್ ಅಥವಾ ಕಪ್ಪು ಚಿರತೆಯ ಭಯ ಹುಟ್ಟಿಸುವ ಪ್ರತಿಮೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಕಾಡಿನ ಆನೆಯಂತೆಯೆ ಆಭಾಸ ಮೂಡಿಸುವ ಆನೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಚಿರತೆಯ ಕುಟುಂಬ...

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಒಂದು ಕೊಂಬಿನ ಘೇಂಡಮೃಗದ ಸುಂದರ ಪ್ರತಿಮೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

"ಹಾಯಾಗಿ ವಿಹರಿಸುತ್ತಿರುವ ಕೃಷ್ಣ ಮೃಗಗಳು"!

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ನೈಜ ಕೊಟ್ಟಿಗೆಯಂತೆಯೆ ಭಾಸ ಮೂಡಿಸುವ ದನಕರುಗಳ ಕೊಟ್ಟಿಗೆಯ ಮಾದರಿ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ನಿಜವಾದ ಎಮ್ಮೆನಾ? ಅಲ್ಲ...ಆದರೂ ವ್ಯತ್ಯಾಸ ತುಸು ಕಷ್ಟ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯೂ ಇಲ್ಲಿ ನಿಮ್ಮನ್ನು ಸ್ವಾಗತಿಸುತ್ತವೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ಉತ್ಸವ ರಾಕ್ ಉದ್ಯಾನ:

ಉತ್ಸವ ರಾಕ್ ಉದ್ಯಾನ:

ಆಧುನಿಕ ಕಲೆಯ ಒಂದು ಶಿಲ್ಪ ಕಲೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X