Search
  • Follow NativePlanet
Share
» »ತುಳಸಿವನ ಮಾರ್ಖಂಡೇಯ ಕ್ಷೇತ್ರ ದರ್ಶನ!

ತುಳಸಿವನ ಮಾರ್ಖಂಡೇಯ ಕ್ಷೇತ್ರ ದರ್ಶನ!

ತಂಜಾವೂರು ಜಿಲ್ಲೆಯ ತಿರುನಾಗೇಶ್ವರಂ ಎಂಬಲ್ಲಿರುವ ಉಪ್ಪಿಲಿಯಪ್ಪನ ದೇವಾಲಯವು ವಿಷ್ಣುವಿಗೆ ಮುಡಿಪಾದ ವಿಶೇಷ ದೇವಾಲಯವಾಗಿದ್ದು ಅಪಾರವಾಗಿ ಭಕ್ತರನ್ನು ಆಕರ್ಷಿಸುತ್ತದೆ

By Vijay

ಶ್ರೀಮನ್ನಾರಾಯಣ ಅಥವ ವೈಕುಂಠವಾಸಿಯಾದ ವಿಷ್ಣು ದಯಾಮಯ. ತನ್ನ ಭಕ್ತರ ಇಚ್ಛೆಗಳು ಎಷ್ಟೆ ಚಿತ್ರ, ವಿಚಿತ್ರವಾಗಿರಲಿ ಅವನ್ನು ನೆರವೇರಿಸಿಯೆ ತೀರುತ್ತಾನೆ. ಇದಕ್ಕೆ ಸಮ್ಬಂಧಿಸಿದಂತೆ ಹಲವಾರು ರೋಚಕ ಕಥೆಗಳನ್ನು ಪುರಾಣ-ಪುಣ್ಯ ಗ್ರಂಥಗಳಲ್ಲಿ ಇಂದು ನಾವು ಓದಬಹುದಾಗಿದೆ.

ಅದರಂತೆ ಭಾರತದಲ್ಲಿರುವ ಅದೆಷ್ಟೊ ಕ್ಷೇತ್ರಗಳು ಕೆಲವು ಅದ್ಭುತವಾದ ಕಥೆಗಳಿಂದಾಗಿಯೆ ಪ್ರವರ್ಧಮಾನಕ್ಕೆ ಬಂದಿವೆ ಅಲ್ಲದೆ ಪುಣ್ಯ ಕ್ಷೇತ್ರಗಳಾಗಿ ಭಕ್ತರನ್ನು ಆಕರ್ಷಿಸುತ್ತವೆ. ಅಂತಹ ಒಂದು ಕ್ಷೇತ್ರದ ಪೈಕಿ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಅದೆ ತುಳಸಿವನ ಮಾರ್ಖಂಡೇಯ ಕ್ಷೇತ್ರ.

ಈ ಕ್ಷೇತ್ರವು ನಾರಾಯಣನು ಸದಾ ನೆಲೆಸಿರುವ ಪುಣ್ಯದಾಯಕ ದೇವಾಲಯವೊಂದಕ್ಕೆ ತವರಾಗಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ಜನಸುವವರು ಅಥವಾ ಮರಣಿಸುವವರಿಗೆ ವೈಕುಂಠ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ಬನ್ನಿ ಈ ಕ್ಷೇತ್ರದ ಕುರಿತು ಅದು ಯಾವುದು? ಎಲ್ಲಿದೆ ಹಾಗೂ ಇದರ ವಿಶೇಷತೆ ಏನು ಮುಂತಾದ ವಿಷಯಗಳ ತಿಳಿದುಕೊಳ್ಳೋಣ.

ತುಳಸಿವನ

ತುಳಸಿವನ

ಇದನ್ನು ತುಳಸಿವನ ಅಥವಾ ಮಾರ್ಖಂಡೇಯ ಕ್ಷೇತ್ರ ಎಂದು ಕರೆಯುತ್ತಾರೆ. ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಕ್ಷೇತ್ರ ಇದಾಗಿದ್ದು ವಿಷ್ಣು ಇಲ್ಲಿ ಭೂದೇವಿ ಸಮೇತನಾಗಿ ನೆಲೆಸಿದ್ದು ಉಪ್ಪಿಲಿಯಪ್ಪನನಾಗಿ ಆರಾಧಿಸಲ್ಪಡುತ್ತಾನೆ.

ಚಿತ್ರಕೃಪೆ: oppiliappanswamytemple

ಸಾಕಷ್ಟು ಮಹತ್ವ

ಸಾಕಷ್ಟು ಮಹತ್ವ

ಅಲ್ಲದೆ ತುಳಸಿ ಎಲೆಗಳಿಂದ ಇಲ್ಲಿ ದೇವರನ್ನು ಆರಾಧಿಸಲಾಗುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತುಳಸಿ ದಳಗಳ ಮಹತ್ವವೂ ಸಾಕಷ್ಟಿದೆ. ಮಾರ್ಖಂಡೇಯ ಮುನಿಗಳು ಸ್ವತಃ ಇಲ್ಲಿ ನೆಲೆಸಿದ್ದರಿಂದ ವಿಷ್ಣುವನ್ನು ಪ್ರಸನ್ನಗೊಳಿಸಿಕೊಂಡು ಮೂರು ವರದಾನಗಳನ್ನು ಬೇಡಿದ್ದರು. ಅಷ್ಟಕ್ಕೂ ಈ ದೇವಾಲಯದ ಹಿನ್ನೆಲೆಯಾದರೂ ಏನು? ಎಂಬ ಕುತೂಹಲವಿದ್ದರೆ ಮುಂದಿನ ಸ್ಲೈಡುಗಳನ್ನು ಓದಿ.

ಚಿತ್ರಕೃಪೆ: Arunasank

ಬ್ರಹ್ಮ ಹೇಳಿದ್ದು

ಬ್ರಹ್ಮ ಹೇಳಿದ್ದು

ಬ್ರಹ್ಮನ ಮಾನಸ ಪುತ್ರ ಹಾಗೂ ವಿಷ್ಣುವಿನ ಪರಮ ಭಕ್ತನಾದ ದೇವರ್ಷಿ ನಾರದರು ಒಂದೊಮ್ಮೆ ಬ್ರಹ್ಮ ದೇವರನ್ನು ಕುರಿತು ವಿಷ್ಣುವಿನ ಬಗ್ಗೆ ಹಾಗೂ ಮಾರ್ಖಂಡೇಯ ಕ್ಷೇತ್ರದ ಕುರಿತು ಕೇಳುತ್ತಾರೆ. ಆ ಸಮಯದಲ್ಲಿ ಬ್ರಹ್ಮ ದೇವರು ಹೇಳಿದ ಕಥೆಯೆ ಈ ದೇವಾಲಯದ ಹಿಂದಿರುವ ಅದ್ಭುತ ಹಿನ್ನೆಲೆಯಾಗಿದೆ.

ಚಿತ್ರಕೃಪೆ: sowrirajan s

ಪುತ್ರಿ

ಪುತ್ರಿ

ಅದರಂತೆ, ಮಾರ್ಖಂಡೇಯ ಋಷಿಗಳು ಒಂದು ಹೆಬ್ಬಯಕೆಯನ್ನು ಇಟ್ಟುಕೊಂಡಿದ್ದರು. ಆ ಬಯಕೆಯಂತೆ ಲಕ್ಷ್ಮಿ ದೇವಿಯು ಅವರಿಗೆ ಪುತ್ರಿಯಾಗಿಯೂ ಹಾಗೂ ಶ್ರಿಮನ್ನಾರಾಯಣನು ತಮಗೆ ಅಳೀಯನಾಗಿಯೂ ದೊರೆಯಬೇಕೆಂಬ ಇಚ್ಛೆ ಇತ್ತು.

ಚಿತ್ರಕೃಪೆ: Ssriram mt

ವ್ಯಕ್ತಪಡಿಸಿದಳು

ವ್ಯಕ್ತಪಡಿಸಿದಳು

ಇತ್ತ ಸಮುದ್ರ ಮಂಥನದಿಂದ ಅಮೃತದೊಡನೆ ಉತ್ಪತ್ತಿಯಾಗಿದ್ದ ತುಳಸಿಗೂ ಸಹ ಲಕ್ಷ್ಮಿಯಂತೆ ವಿಷ್ಣುವಿನ ಬಳಿ ಇರುವ ಪ್ರಬಲವಾದ ಆಸೆ ಇತ್ತು. ಅದನ್ನು ಅವಳು ವಿಷ್ಣುವಿನ ಮುಂದೆ ನಿವೇದಿಸಿಕೊಂಡಾಗ, ವಿಷ್ಣು ತುಳಸಿಯ ಕುರಿತು, ಲಕ್ಷ್ಮಿ ದೇವಿಯು ಕಠಿಣವಾದ ತಪಸ್ಸಿನಿಂದ ಈ ಸ್ಥಿತಿಗೆ ಬಂದಿದ್ದು ತುಳಸಿಯೂ ಸಹ ಕಾಲ ಕೂಡಿ ಬರುವವರೆಗೂ ಕಾಯಬೇಕೆಂದನು.

ಚಿತ್ರಕೃಪೆ: Raji.srinivas

ಧನಾತ್ಮಕತೆ

ಧನಾತ್ಮಕತೆ

ಹೀಗೆ ದಿನಗಳು ಉರುಳಿ ಒಮ್ಮೆ ಈ ಪ್ರಸ್ತುತ ದೇವಾಲಯವಿರುವ ಕ್ಷೇತ್ರಕ್ಕೆ ಮಾರ್ಖಂಡೇಯರು ಬಂದಾಗ ಇಲ್ಲಿನ ಧನಾತ್ಮಕತೆಗೆ ಮಾರು ಹೋದರು. ಇದೆ ಸುಸ್ಥಳವೆಂದು ಅರಿತು ತಪಸ್ಸು ಪ್ರಾರಂಭಿಸಿಯೆ ಬಿಟ್ಟರು. ಇವರ ತಪಸ್ಸು ಬರಬರುತ್ತ ಸಾಕಷ್ಟು ಕಠಿಣವಾಯಿತು.

ಚಿತ್ರಕೃಪೆ: oppiliappanswamytemple

ತುಳಸಿ ಸಿದ್ಧ

ತುಳಸಿ ಸಿದ್ಧ

ಈ ಸಂದರ್ಭದಲ್ಲಿ ವಿಷ್ಣುವಿನಿಂದ ತುಳಸಿಗೆ ಆದೇಶವೊಂದು ಹೋಗಿ ಅದರಂತೆ ತುಳಸಿಯು ಮಾರ್ಖಂಡೇಯರು ತಪಗೈಯುತ್ತಿದ್ದ ಸ್ಥಳಕ್ಕೆ ಬಂದು ಎಲ್ಲೆಡೆ ಆವರಿಸಿಬಿಟ್ಟಳು. ದಿನಗಳೆದಂತೆ ಮುನಿಗಳ ತಪಸ್ಸು ಮುಂದುವರೆದು ಕೊನೆಗೆ ವಿಷ್ಣು ಜ್ಞಾನದೃಷ್ಟಿಯಲ್ಲಿ ಮುನಿಗಳಿಗೆ ಪ್ರತ್ಯಕ್ಷನಾಗಿ ಚಿಕ್ಕ ಮಗುವೊಂದರ ಕುರಿತು ಹೇಳಿದನು.

ಚಿತ್ರಕೃಪೆ: oppiliappanswamytemple

ಹೆಣ್ಣು ಮಗು

ಹೆಣ್ಣು ಮಗು

ಇದರಿಂದ ಎಚ್ಚರಗೊಂಡ ಮುನಿಗಳು ಅಲ್ಲಿಲ್ಲಿ ನೋಡಿದಾಗ ತುಳಸಿ ವನದಲ್ಲಿ ಭೂಮಿಯ ಮೇಲೆ ಹರಡಿದ್ದ ತುಳಸಿ ದಳಗಳ ಮಧ್ಯೆ ಚಿಕ್ಕ ಹೆಣ್ಣು ಮಗುವೊಂದು ನಲಿಯುತ್ತ ಅಡ್ಡಾಗಿತ್ತು. ಅದನ್ನು ಕಂಡು ಸಂತಸಗೊಂಡ ಅವರು ಮಗುವನ್ನು ಎತ್ತಾಡಿ ಮುದ್ದಾಡಿಸಿ ತನ್ನ ಮಗಳಾಗಿ ಅವಳನ್ನು ಸ್ವೀಕರಿಸಿದರು. ಭುಮಿಯ ಮೇಲೆ ದೊರಕಿದ್ದರಿಂದ ಅವಳಿಗೆ ಭೂದೇವಿ ಎಂದು ನಾಮಕರಣ ಮಾಡಿದರು.

ಚಿತ್ರಕೃಪೆ: oppiliappanswamytemple

ಪ್ರೀತಿಯಿಂದ

ಪ್ರೀತಿಯಿಂದ

ಸ್ವತಃ ಲಕ್ಷ್ಮಿ ದೇವಿಯೆ ಭೂದೇವಿಯಾಗಿ ಜನ್ಮ ತಳೆದಿದ್ದಳು. ಹೀಗೆ ಮುನಿಗಳು ಭೂದೇವಿಯನ್ನು ಬಲು ಪ್ರೀತಿಯಿಂದ ಬೆಳೆಸಿದರು. ಹುಡುಗಿಯು ಬೆಳೆದು ಕನ್ಯಾಮಣಿಯಾದಳು. ಈಗ ಮಾರ್ಖಂಡೇಯರು ಅವಳಿಗೆ ತಕ್ಕುದಾದ ವರಾನ್ವೇಷಣೆಯಲ್ಲಿ ತೊಡಗಿದರು.

ಚಿತ್ರಕೃಪೆ: oppiliappanswamytemple

ಕಡು ಮುದುಕ

ಕಡು ಮುದುಕ

ಹೀಗಿರುವಾಗ ಒಮ್ಮೆ ವಿಷ್ಣು ಪರೀಕ್ಷಿಸುವ ದೃಷ್ಟಿಯಿಂದ ಹಳೆಯ ವಸ್ತ್ರಧಾರಿಯಾದ ಕಡು ಮುದುಕ ಬ್ರಾಹ್ಮಣನೋರ್ವನ ವೇಷ ತೊಟ್ಟು ಮಾರ್ಖಂಡೇಯನ ಕುಟಿರಕ್ಕೆ ಆಗಮಿಸಿದ. ಅತಿಥಿಯನ್ನು ನೋಡಿದ ತಕ್ಷಣವೆ ಮಾರ್ಖಂಡೇಯ ಮುನಿಗಳು ಬಲು ಗೌರವಾದರಗಳಿಂದ ಆ ಮುದಿ ಬ್ರಾಹ್ಮಣನನ್ನು ಸ್ವಾಗತಿಸಿ ಆದರಾತಿಥ್ಯ ಮಾಡಿದರು.

ಚಿತ್ರಕೃಪೆ: oppiliappanswamytemple

ಆದರಾತಿಥ್ಯ

ಆದರಾತಿಥ್ಯ

ಊಟೋಪಚಾರವಾದ ನಂತರ ಮಾರ್ಖಂಡೇಯ ಮುನಿಗಳು ಆ ಬ್ರಾಹ್ಮಣನನ್ನುದ್ದೇಶಿಸಿ ಬಂದ ಕಾರಣವನ್ನು ಕೇಳಿದರು. ಅದಕ್ಕೆ ಆ ಬ್ರಾಹ್ಮಣನು ತಾನು ಜೀವನದಲ್ಲಿ ಇನ್ನೂ ನೆಲೆಯೂರಲು ಹಾಗೂ ಸದ್ಗುಣಗಳ ಮಕ್ಕಳನ್ನು ಪಡೆಯಲು ಮದುವೆಯಾಗಲು ಬಯಸಿರುವುದಾಗಿಯೂ ಅದಕ್ಕೆ ಕನ್ಯಾನ್ವೇಷಣೆ ಮಾಡುತ್ತಿರುವುದಾಗಿಯೂ ಹೇಳಿದ.

ಚಿತ್ರಕೃಪೆ: oppiliappanswamytemple

ಭೂದೇವಿ

ಭೂದೇವಿ

ಅಲ್ಲದೆ ಯೌವ್ವನದಲ್ಲಿರುವ ಭೂದೇವಿಯನ್ನು ತಾನು ಮದುವೆ ಮಾಡಿಕೊಳ್ಳಲು ನಿಶ್ಚಯಿಸಿರುವುದಾಗಿಯೂ ಅದಕ್ಕೆ ಸಮ್ಮತಿಸಿ ಮಗಳನ್ನು ಧಾರೆ ಎರೆದುಕೊಡಬೇಕೆಂದು ಹೇಳಿದನು. ಈ ವಿಷಯ ಕೇಳಿದ ನಂತರ ಮುನಿಗಳು ದಿಗ್ಭ್ರಾಂತರಾದರು. ತುಸು ಧೈರ್ಯ ತಂದುಕೊಂಡು ಅದು ತಕ್ಕ ಸಂಬಂಧವಲ್ಲವೆಂತಲೂ ವಯಸ್ಸಿನ ಅಂತರ ಬಹುವಾಗಿರುವುದೆಂದಲೂ ಹೇಳಿದರು.

ಚಿತ್ರಕೃಪೆ: oppiliappanswamytemple

ಮುನಿಗಳ ಪ್ರಯತ್ನ

ಮುನಿಗಳ ಪ್ರಯತ್ನ

ಮುನಿಗಳು ಎಷ್ಟೆ ಪ್ರಯತ್ನಿಸಿದರೂ ಆ ಮುದಿ ಬ್ರಾಹಣ ಒಪ್ಪಲೆ ಇಲ್ಲ. ಏನೆ ಆಗಲಿ ತಾನು ಅವಳನ್ನೆ ಮದುವೆಯಾಗುವುದಾಗಿ ಹಟ ಹಿಡಿದ. ಕೊನೆಗೆ ಮುನಿಗಳು ಅವಳಿಗೆ ಅಡುಗೆಯೂ ಸಹ ಸರಿಯಾಗಿ ಮಾಡಲು ಬರುವುದಿಲ್ಲವೆಂತಲೂ ಅಡುಗೆಯಲ್ಲಿ ಉಪ್ಪನ್ನು ಹಾಕಲು ಮರೆಯುತ್ತಾಳೆಂತಲೂ ಉಪಾಯದಿಂದ ಹೇಳಿದ. ಅದಕ್ಕೆ ಬ್ರಾಹ್ಮಣ ಉಪ್ಪಿಲ್ಲದ ಅಡುಗೆಯಿದ್ದರೂ ಅದನ್ನು ಸ್ವೀಕರಿಸುವೆ ಹಾಗಾಗಿ ಅವಳನ್ನೆ ಮದುವೆಯಾಗುವೆ ಎಂದ.

ಚಿತ್ರಕೃಪೆ: Pragadish Nandakumar

ಒಪ್ಪಲೆ ಇಲ್ಲ

ಒಪ್ಪಲೆ ಇಲ್ಲ

ಕೊನೆಗೆ ಮುನಿಗಳು ದಾರಿ ತೋರದೆ ಭೂದೇವಿಯನ್ನು ಕುರಿತು ಅವಳ ಮನಸ್ಸಿನ ವಿಚಾರ ತಿಳಿಯಬಯಸಿದ. ಅವಳು ಕ್ರೋಧಳಾಗಿ ತನಗೆ ಈ ಮುದಿ ಬ್ರಾಹ್ಮಣನ ಜೊತೆ ಮದುವೆಯಾಗಲು ಮನಸ್ಸಿಲವೆಂತಲೂ ಒತ್ತಡ ಹೇರಿದರೆ ಪ್ರಾಣ ತ್ಯಾಗ ಮಾಡುವುದಾಗಿಯೂ ಹೇಳಿ ಬಿಟ್ಟಳು. ಈಗ ನಿಜಕ್ಕೂ ಮಾರ್ಖಂಡೆಯರು ಅತಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಬಿಟ್ಟಿದ್ದರು.

ಚಿತ್ರಕೃಪೆ: oppiliappanswamytemple

ವಿಷ್ಣು ಪ್ರತ್ಯಕ್ಷ!

ವಿಷ್ಣು ಪ್ರತ್ಯಕ್ಷ!

ಕೊನೆಗೆ ಕಣ್ಣು ಮುಚ್ಚಿಕೊಂಡು ತಮ್ಮ ನೆಚ್ಚಿನ ದೈವನಾದ ವಿಷ್ಣುವಿನನ್ನು ಮನಸ್ಸಿನಲ್ಲಿಯೆ ಅತಿ ಭಕ್ತಿಯಿಂದ ಪ್ರಾರ್ಥಿಸಿ ಈ ಪರಿಸ್ಥಿತಿಯಿಂದ ಪಾರು ಮಾಡುವಂತೆ ಕೋರಿದರು. ತಮ್ಮ ಕಣ್ಣುಗಳನ್ನು ತೆಗೆದಾಗ ಆ ಬ್ರಾಹ್ಮಣನ ಸ್ಥಳದಲ್ಲಿ ಸ್ವತಃ ವಿಷ್ಣು ಪ್ರತ್ಯಕ್ಷನಾಗಿರುವುದನ್ನು ಕಂಡು ಆನಂದತುಂದಿಲರಾಗಿ ವಿಷ್ಣುವೆ ಮಾಡಿದ ನಾಟಕವೆಂದು ಅರಿತು ಆನಂದ ಭಾಷ್ಪಗಳನ್ನು ಸುರಿಸಿದನು.

ಚಿತ್ರಕೃಪೆ: Ssriram mt

ಉಪ್ಪಿಲಿಯಪ್ಪನನಾಗಿ

ಉಪ್ಪಿಲಿಯಪ್ಪನನಾಗಿ

ನಂತರ ಶಾಸ್ತ್ರೋಕ್ತವಾಗಿ ತನ್ನ ಮಗಳನ್ನು ವಿಷ್ಣುವಿಗೆ ಧಾರೆ ಎರೆದುಕೊಟ್ಟನು. ಈ ರಿತಿಯಾಗಿ ಮಾರ್ಖಂಡೇಯ ಕ್ಷೇತ್ರವು ವಿಷ್ಣು ಭೂದೇವಿ ಸಮೇತನಾಗಿ ಸದಾ ನೆಲೆಸಿರುವ ಅದ್ಭುತ ಕ್ಷೇತ್ರವಾಗಿ ಹೆಸರುವಾಸಿಯಾಯಿತು. ಇಂದಿಗೂ ಇಲ್ಲಿ ತಯಾರಿಸಲಾಗುವ ಪ್ರಸಾದದಲ್ಲಿ ಉಪ್ಪನ್ನು ಹಾಕುವುದಿಲ್ಲ. ಹಾಗಾಗಿ ಉಪ್ಪಿಲ್ಲದ ಉಪ್ಪಿಲಿಯಪ್ಪನನಾಗಿ ವಿಷ್ಣು ಹೆಸರುವಾಸಿಯಾಗಿದ್ದಾನೆ.

ಚಿತ್ರಕೃಪೆ: Ssriram mt

ವಿಶೇಷವಾಗಿದೆ

ವಿಶೇಷವಾಗಿದೆ

ಇನ್ನುಳಿದಂತೆ ಈ ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯೂ ಸಹ ವಿಶಿಷ್ಟವಾಗಿದೆ. ದಿನ ಹಾಗೂ ರಾತ್ರಿ ಯಾವುದೆ ಸಂದರ್ಭದಲ್ಲಿ ಮಿಂದರೂ ಪಾವಿತ್ರ್ಯತೆ ನೀಡುವ ಏಕೈಕ ಕಲ್ಯಾಣಿ ತೀರ್ಥ ಇದಾಗಿದೆ. ಇದಕ್ಕೂ ಸಹ ಒಂದು ರೋಚಕ ಕಥೆಯಿದೆ.

ಚಿತ್ರಕೃಪೆ: Gitakart

ಓಡಿಹೋದ

ಓಡಿಹೋದ

ಒಂದೊಮ್ಮೆ ಈ ಕ್ಷೇತ್ರದಲ್ಲಿ ರಾಜನೊಬ್ಬ ಋಷಿಯ ಮಗಳೊಬ್ಬಳನ್ನು ಪ್ರೇಮಿಸಿ ಅವಳನ್ನು ಕರೆದುಕೊಂಡು ಪರಾರಿಯಾದ. ಇದರಿಂದ ಕೋಪಗೊಂಡು ಮುನಿಯೋರ್ವರು ಆ ರಾಜನಿಗೆ ಹಕ್ಕಿಯಾಗುವಂತೆ ಶಾಪವಿತ್ತರು.

ಚಿತ್ರಕೃಪೆ: commons.wikimedia

ವಿಶ್ರಾಂತಿ

ವಿಶ್ರಾಂತಿ

ಈ ಶಾಪದಿಂದ ರಾಜನು ಹಕ್ಕಿಯಾಗಿ ವಿಹರಿಸತೊಡಗಿದ. ಒಂದೊಮ್ಮೆ ಈ ಕಲ್ಯಾಣಿಯ ಪಕ್ಕದ ಮರವೊಂದರ ಮೇಲೆ ರಾತ್ರಿಯ ಸಮಯ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಆ ರಾತ್ರಿ ಘೋರವಾಗಿದ್ದು ಮಳೆ ಸುರಿಯುತ್ತಿತ್ತು. ಗಾಳಿಗೆ ಆ ಹಕ್ಕಿ ಕುಳಿತಿದ್ದ ಮರದ ಟೊಂಗೆಯು ಮುರಿದು ಕಲ್ಯಾಣಿಯಲ್ಲಿ ಬಿತ್ತು.

ಚಿತ್ರಕೃಪೆ: commons.wikimedia

ಅಹೋರಾತ್ರ ಪುಷ್ಕರಿಣಿ

ಅಹೋರಾತ್ರ ಪುಷ್ಕರಿಣಿ

ಆ ಹಕ್ಕಿಯು ಕಲ್ಯಾಣಿಯ ನೀರಿನಲ್ಲಿ ಬಿದ್ದ ಕ್ಷಣವೆ ತನ್ನ ಮೂಲ ರೂಪವಾದ ರಾಜನ ವೇಷಕ್ಕೆ ಪರಿವರ್ತಿತವಾಯಿತು. ಇದರಿಂದ ಸಮ್ತಸಗೊಂಡ ರಾಜ ಕಲ್ಯಾಣಿಯನ್ನು ಅತ್ಯಾದರದಿಂದ ನೋಡತೊಡಗಿದ. ಹಾಗಾಗಿ ಈ ಕ್ಲಯಾಣಿಯು ಸಾಕಷ್ಟು ಪವಿತ್ರಮಯವಾಗಿದೆ. ಇದನ್ನು "ಅಹೋರಾತ್ರ ಪುಷ್ಕರಿಣಿ" ಎಂದು ಕರೆಯುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Prasanna lakshmipura

ಎಲ್ಲಿದೆ?

ಎಲ್ಲಿದೆ?

ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುನಾಗೇಶ್ವರಂ ಎಂಬಲ್ಲಿರುವ ಉಪ್ಪಿಲಿಯಪ್ಪನ ದೇವಾಲಯವು ವಿಷ್ಣುವಿಗೆ ಮುಡಿಪಾದ ವಿಶೇಷ ದೇವಾಲಯವಾಗಿದ್ದು ಅಪಾರವಾಗಿ ಭಕ್ತರನ್ನು ಆಕರ್ಷಿಸುತ್ತದೆ. ಮತ್ತೊಂದು ಶ್ರೀಕ್ಷೇತ್ರವಾದ ಕುಂಭಕೊಣಂಗೆ ಹತ್ತಿರದಲ್ಲಿದ್ದು ಸುಲಭವಾಗಿ ಈ ದೇವಾಲಯವನ್ನು ತಲುಪಬಹುದಾಗಿದೆ. ತಿರುನಾಗೇಶ್ವರಂನ ಸೋಮಸ್ಕಂದ.

ಚಿತ್ರಕೃಪೆ: Jothi Balaji

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X