Search
  • Follow NativePlanet
Share
» »ಭಾರತದ ಈ ಕೆಲವು ಗುಪ್ತ ಅದ್ಬುತಗಳನ್ನು ಅನಾವರಣಗೊಳಿಸಿ

ಭಾರತದ ಈ ಕೆಲವು ಗುಪ್ತ ಅದ್ಬುತಗಳನ್ನು ಅನಾವರಣಗೊಳಿಸಿ

ಭಾರತದ ಗುಪ್ತ ಅದ್ಬುತಗಳ ಬಗ್ಗೆ ಓದಿ. ಈ ಅನ್ವೇಷಣೆಗೊಳಗಾಗದೆ ಇರುವ ಸ್ಥಳಗಳನ್ನು ಅನಾವರಣಗೊಳಿಸಿ. ಅವುಗಳಲ್ಲಿ ಖಿಮ್ಸರ್ ಡುನೆಸ್ ವಿಲೇಜ್, ಫುಕ್ಟಾಲ್ ಮೊನಾಸ್ಟರಿ, ಭಿಂಬೆಟ್ಕಾ ರಾಕ್ ಶೆಲ್ಟರ್ಸ್, ಲೋಕ್ಟಾಕ್ ಸರೋವರ, ಚಾಂದ್ ಬೋರಿ ಮತ್ತು ಬೋರಾ ಗು

By Manjula Balaraj Tantry

ಭಾರತವು ಅತ್ಯಂತ ಶ್ರೀಮಂತ ಸಂಸ್ಕೃತಿ ಅಥವಾ ಐತಿಹಾಸಿಕ ಹಿನ್ನೆಲೆಯ ಕಾರಣದಿಂದಾಗಿ ಕೇವಲ ಭೇಟಿಗೆ ಆದ್ಯತೆಯ ಸ್ಥಳ ಮಾತ್ರವಾಗಿರದೆ ಇಲ್ಲಿ ಅನ್ವೇಷಿಸಲು ಸಾಕಷ್ಟು ಅವಕಾಶಗಳನ್ನು ಒಳಗೊಂಡಿದೆ. ಇಲ್ಲಿ ಹೊರಗಿನ ಜಗತ್ತಿಗೆ ಪರಿಚಯಕ್ಕೆ ಬರದೇ ಇರುವಂತಹ ಇನ್ನೂ ಅನೇಕ ಸ್ಥಳಗಳಿವೆ.

ಇದು ಪರ್ವತ ಶ್ರೇಣಿಗಳಿಂದ ಹಿಡಿದು ಸರೋವರಗಳವರೆಗೆ, ಹಳ್ಳಿಗಳಿಂದ ಹಿಡಿದು ಮರುಭೂಮಿಗಳವರೆಗೆ, ಗುಹೆಗಳಿಂದ ಕಂದಕಗಳವರೆಗೆ ಆಗಿರಬಹುದು ಈ ರೀತಿ ಅನ್ವೇಷಣೆಗೆ ಒಳಗಾಗದೇ ಇರುವ ಅನೇಕ ವಿಷಯಗಳು ಭಾರತದಲ್ಲಿದೆ. ಭಾರತವು ಅಚ್ಚರಿಗಳನ್ನೊಳಗೊಂಡ ಒಂದು ಕೇಂದ್ರವೇ ಆಗಿದ್ದು ಇದನ್ನು ಪತ್ತೆ ಹಚ್ಚಲು ಕೆಲ ಸಮಯವೇ ಬೇಕಾಗುವುದು.

ಇದು ಈಗ ಪ್ರತಿ ಪ್ರಯಾಣಿಕರ ಮೊದಲ ಮತ್ತು ಕೊನೆಯ ತಾಣವಾಗಿದೆ. ಇಲ್ಲಿ, ನಾವು ಎಲ್ಲರೂ ತಿಳಿದಿರದ ಭಾರತದ ಗುಪ್ತ ಕೆಲವು ಅದ್ಭುತಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ನೀವು ನಿಮ್ಮ ಪ್ರವಾಸದ ಬಗ್ಗೆ ಇನ್ನೂ ಯೋಜಿಸಿಲ್ಲವಾದಲ್ಲಿ ಮತ್ತು ಯಾವುದಾದರೂ ಸ್ಥಳಕ್ಕೆ ಪ್ರವಾಸ ಮಾಡುವ ಇಚ್ಚೆ ಇದ್ದಲ್ಲಿ ಇಲ್ಲಿ ಓದಿ ತಿಳಿಯಿರಿ. ಕೆಳಗಿನ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ ಮತ್ತುಅದರ ಸುತ್ತಮುತ್ತಲಿನ ಮೋಡಿ ಮಾಡುವ ಅತಿವಾಸ್ತವಿಕತೆಯ ಬಗ್ಗೆ ತಿಳಿಯಿರಿ.

1) ಖಿಮ್ಸರ್ ಡುನ್ಸ್ ಗ್ರಾಮ (ರಾಜಸ್ಥಾನ)

1) ಖಿಮ್ಸರ್ ಡುನ್ಸ್ ಗ್ರಾಮ (ರಾಜಸ್ಥಾನ)

ಸುತ್ತಲೂ ಥಾರ್ ಮರುಭೂಮಿ ಮತ್ತು ಮರಳು ದಿಬ್ಬಗಳ ಮಧ್ಯೆ ಇರುವ, ಈ ಚದುರಿದ ಮತ್ತು ಅಸ್ಫುಟವಾದ ಈ ಹಳ್ಳಿಯು ನಿಜವಾಗಿಯೂ ಅದ್ಭುತವಾಗಿದೆ. ಇದರ ಇರುವಿಕೆಯಿಂದಾಗಿ ಥಾರ್ ಮರುಭೂಮಿಯ ಸೌಂದರ್ಯ ಮತ್ತು ಸೊಬಗು ಇನ್ನೂ ಹೆಚ್ಚಿದೆ. ಇಲ್ಲಿಯ ಶಿಖರದಲ್ಲಿ ಕಾಣುವ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ದೃಶ್ಯವು ಇದರ ಸೌಂದರ್ಯತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಖಂಡಿತವಾಗಿಯೂ ಅಲ್ಲಗಳೆಯುವಂತಿಲ್ಲ

ಈ ಸುಂದರ ಸ್ಥಳದ ಇನ್ನೊಂದು ಅದ್ಬುತವೆಂದರೆ ಈ ಹಳ್ಳಿಯಿಂದ ಕೇವಲ 15 ನಿಮಿಷಗಳ ದೂರವಿರುವ ಕಿಮ್ಸರ್ ಕೋಟೆ. ನೀವು ಹಳ್ಳಿ ಜೀವನದ ಅಚ್ಚರಿಗಳನ್ನು ಅನುಭವಿಸಬೇಕೆಂದಿದ್ದಲ್ಲಿ ಇಲ್ಲಿಗೆ ಭೇಟಿ ಕೊಡುವುದು ಸೂಕ್ತವಾಗಿದೆ. ಭೇಟಿ ನೀಡಲು ಸೂಕ್ತ ಸಮಯ - ನವೆಂಬರ್ ನಿಂದ - ಫೆಬ್ರವರಿ

PC- Ankur2436

2) ಫುಕ್ಟಾಲ್ ಮಠ (ಜಮ್ಮು ಮತ್ತು ಕಾಶ್ಮೀರ)

2) ಫುಕ್ಟಾಲ್ ಮಠ (ಜಮ್ಮು ಮತ್ತು ಕಾಶ್ಮೀರ)

ಇದು ಆದ್ಯಾತ್ಮಿಕ ಮತ್ತು ಧಾರ್ಮಿಕ ಆಶ್ರಮವಾಗಿದ್ದು, ಸುಮಾರು ಎಪ್ಪತ್ತು ಬೌದ್ದ ಸನ್ಯಾಸಿಗಳಿಗೆ ನೆಲೆಯಾಗಿದೆ. ಫುಕ್ಟಾಲ್ ಮಠವು ಲಡಾಖಿನ ಝನ್ಸ್ಕಾರ್ ನ ಲುಂಗ್ನಾಕ್ ಕಣಿವೆಯಲ್ಲಿದೆ. ಕಡಿದಾದ ಪರ್ವತದ ಪಕ್ಕದಲ್ಲಿದೆ ಮತ್ತು ಈ ಮಠವನ್ನು ಗುಹೆಯ ಸುತ್ತಲೂ ನಿರ್ಮಿಸಲಾಗಿದೆ. ಇಲ್ಲಿಗೆ ಹಲವಾರು ಪ್ರಭಲ ಮತ್ತು ಜನಪ್ರಿಯ ಸನ್ಯಾಸಿಗಳು ವಿದ್ವಾಂಸರು ಮತ್ತು ಶಿಕ್ಷಕರು ಭೇಟಿ ನೀಡಿದ್ದಾರೆ.

ಈ ಸ್ಥಳವನ್ನು ಧಾರ್ಮಿಕ ಮತ್ತು ಪವಿತ್ರ ಎಂದು ನಂಬಲಾಗಿದೆ ಆದ್ದರಿಂದ, ಇಲ್ಲಿ ಧ್ಯಾನ ಮತ್ತು ಆಧ್ಯಾತ್ಮಿಕತೆಯ ತಾಂತ್ರಿಕ ವಿಧಾನಗಳನ್ನು ಸುಲಭವಾಗಿ ಕಲಿಯಬಹುದು.

ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಜೂನ್ ನಿಂದ ಸೆಪ್ಟೆಂಬರ್ ವರೆಗೆ.

PC- hamon jp

3) ಭೀಮ್ಬೆಟ್ಕಾ ರಾಕ್ ಶೆಲ್ಟರ್ಸ್ (ಮಧ್ಯ ಪ್ರದೇಶ)

3) ಭೀಮ್ಬೆಟ್ಕಾ ರಾಕ್ ಶೆಲ್ಟರ್ಸ್ (ಮಧ್ಯ ಪ್ರದೇಶ)

ಭೀಂಬೆಟ್ಕಾ ರಾಕ್ ಶೆಲ್ಟರ್ಸ್ ಅತ್ಯಂತ ಗಮನಾರ್ಹವಾದ ಮತ್ತು ಅದ್ಭುತವಾದ ಗುಪ್ತ ಅದ್ಭುತಗಳಲ್ಲಿ ಒಂದಾಗಿದೆ. ಇದು ಹಳೆಯ ಶಿಲಾಯುಗ ಕಾಲದ್ದಾಗಿದ್ದು ಹಳೆಯ ಕಾಲದ ಮಾನವನ ಜೀವನ ಶೈಲಿಯ ಮುದ್ರಣಗಳನ್ನು ಇಲ್ಲಿ ಕಾಣಬಹುದಾಗಿದೆ. ಯುನೆಸ್ಕೋದ ವಿಶ್ವ ಪರಂಪರೆಯ ತಾಣವೆನಿಸಿದ ಈ ಅತ್ಯದ್ಬುತವಾದ ಸ್ಥಳವು ಏಳು ಬೆಟ್ಟಗಳು ಮತ್ತು 750 ಕಲ್ಲಿನ ಶೆಲ್ಟರ್ (ಆಶ್ರಯ) ಗಳನ್ನು ಹೊಂದಿದೆ.

ಸಂಸ್ಕೃತಿ, ಸಂಪ್ರದಾಯ, ಜೀವನ, ಮುಂತಾದ ವಿಷಯಗಳನ್ನು ಹೊಂದಿರುವ ಈ ಬಂಡೆಗಳ ಮೇಲೆ ರಚಿಸಲಾದ ಅನೇಕ ಗುಹೆಯ ವರ್ಣಚಿತ್ರಗಳನ್ನು ಸಹ ಕಾಣಬಹುದು. ನೀವು ಇತಿಹಾಸದ ಅದ್ಬುತಗಳನ್ನು ನೋಡಬಯಸುವವರಾಗಿದ್ದಲ್ಲಿ, ಭೀಂಬೆಟ್ಕ ರಾಕ್ ಶೆಲ್ಟರ್ ನಿಮ್ಮ ಪ್ರಯಾಣ ಪಟ್ಟಿಯಲ್ಲಿ ಸೇರಿಸ ಬಹುದಾದ ಒಂದು ಸೂಕ್ತವಾದ ಸ್ಥಳವಾಗಿದೆ.

PC- Michael Gunther

4) ಲೋಕ್ಟಾಕ್ ಸರೋವರ (ಮಣಿಪುರ)

4) ಲೋಕ್ಟಾಕ್ ಸರೋವರ (ಮಣಿಪುರ)

ಇದು ಮಣಿಪುರದ ಪರ್ವತ ಶ್ರೇಣಿಗಳ ಮಧ್ಯೆ ನೆಲೆಸಿದ್ದು, ಲೋಕ್ಟಾಕ್ ಸರೋವರವು ಈಶಾನ್ಯ ಭಾರತದ ಅತಿದೊಡ್ಡ ಸಿಹಿ ನೀರಿನ ಸರೋವರವಾಗಿದೆ. ಇದು ತೇಲುವ ಫಮ್ಡಿಸ್ (ಸಸ್ಯವರ್ಗ ಮತ್ತು ಸಾವಯವ ವಸ್ತು) ಗಾಗಿ ಪ್ರಸಿದ್ಧವಾಗಿದೆ, ಈ ನಯನ ಮನೋಹರ ಮತ್ತು ಆಕರ್ಷಕ ಸರೋವರವು ವಿಶ್ವದಲ್ಲೇ ವಿಭಿನ್ನವಾದ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ವಿಶೇಷವಾದ ಸರೋವರದ ಮೇಲ್ಮೈಯಲ್ಲಿ ತೇಲುತ್ತಿರುವ ಕೀಬುಲ್ ಲಾಮ್ಜೋ ರಾಷ್ಟ್ರೀಯ ಉದ್ಯಾನವನ್ನೂ ನೀವು ವೀಕ್ಷಿಸಬಹುದು.

ಜೀವವೈವಿಧ್ಯದಲ್ಲಿ ಶ್ರೀಮಂತವಾಗಿರುವ, ಲೋಕ್ಟಾಕ್ ಸರೋವರ ಒಂದು ಫಮ್ಮಡಿಯ ಮೇಲಿರುವ ಒಂದು ಪ್ರವಾಸಿ ಮನೆಯನ್ನು ಹೊಂದಿದೆ. ಈ ಸರೋವರದ ಅದ್ಬುತಗಳನ್ನು ಅನುಭವಿಸಬೇಕೆಂದಿದ್ದಲ್ಲಿ ನಿಮ್ಮ ಪ್ರಯಾಣವನ್ನು ಈ ನೈಸರ್ಗಿಕ ಅದ್ಬುತ ಇರುವ ಕಡೆಗೆ ಏಕೆ ಆಯೋಜಿಸಬಾರದು?

ಭೇಟಿ ನೀಡಲು ಸೂಕ್ತ ಸಮಯ - ಮಾರ್ಚ್ ನಿಂದ ನವೆಂಬರ್


PC- Sharada Prasad CS

5) ಚಾಂದ್ ಬಾವೊರಿ (ರಾಜಸ್ಥಾನ)

5) ಚಾಂದ್ ಬಾವೊರಿ (ರಾಜಸ್ಥಾನ)

ಜೈಪುರದಿಂದ 95 ಕಿ.ಮೀ ಅಂತರದಲ್ಲಿರುವ ಈ ಜಾಗವು ವಾಸ್ತುಶಿಲ್ಪ ಶೈಲಿಯ ತುಣುಕಿನ ಒಂದು ದೊಡ್ಡ ಗುರುತಾಗಿದೆ. 3500 ಕಿರಿದಾದ ಮೆಟ್ಟಿಲುಗಳು ಮತ್ತು 13 ಅಂತಸ್ತನ್ನು ಇದು ಹೊಂದಿದೆ. ಚಂದ್ ಬಾವೊರಿ ಭಾರತದ ಅತ್ಯಂತ ದೊಡ್ಡ ಮತ್ತು ಆಳವಾದ ಮೆಟ್ಟಿಲು ಬಾವಿಗಳಲ್ಲಿ ಒಂದಾಗಿದೆ.

ಕ್ರಿ.ಶ. 800ರಲ್ಲಿ ನೀರನ್ನು ಸಂರಕ್ಷಿಸಲು ಇದನ್ನು ಕಟ್ಟಲಾಗಿದೆ. ಚಾಂದ್ ಬಾವೊರಿ ಈಗ ಒಂದು ಪಿಕ್ನಿಕ್ ತಾಣವಾಗಿದೆ. ಈ ಮೇರುಕೃತಿಯು ಅದರ ಐತಿಹಾಸಿಕ ಪ್ರಾಮುಖ್ಯತೆಗಾಗಿ ಅಲ್ಲವಾದರೂ ಅದರ ಕಲಾತ್ಮಕ ಮತ್ತು ಸೌಂದರ್ಯದ ಕೆಲಸಕ್ಕಾಗಿ ಅದ್ಬುತವೆನಿಸಿದ್ದು ಇದು ಭಾರತದ ಗುಪ್ತ ಅದ್ಬುತಗಳಲ್ಲೊಂದಾಗಿದೆ.

ಈ ಅದ್ಬುತವಾದ ಸ್ಟೆಪ್ ವೆಲ್ ನ ಇತಿಹಾಸದೊಳಗೆ ಇಣುಕದಿರಬಹುದೇ? ನಂಬಿ ಇದು ಖಂಡಿತವಾಗಿಯೂ ಮೌಲ್ಯವುಳ್ಳದ್ದಾಗಿದೆ. ಭೇಟಿ ನೀಡಲು ಸೂಕ್ತ ಸಮಯ - ನವೆಂಬರ್ ನಿಂದ ಮಾರ್ಚ್ ವರೆಗೆ


PC- Adityavijayavargia


6) ಬೋರಾ ಗುಹೆಗಳು (ಆಂಧ್ರ ಪ್ರದೇಶ)

6) ಬೋರಾ ಗುಹೆಗಳು (ಆಂಧ್ರ ಪ್ರದೇಶ)

ಆಂಧ್ರಪ್ರದೇಶದ ಅರಕು ಕಣಿವೆಯಲ್ಲಿರುವ ಬೊರ್ರ ಗುಹೆಗಳು ಭಾರತದ ಆಳವಾದ ಗುಹೆಗಳೆಂದು ಪರಿಗಣಿಸಲಾಗಿದೆ.1807 ರಲ್ಲಿ ಈ ಅಫೊಟಿಕ್ ಗುಹೆಗಳು ಸಾಮಾನ್ಯವಾಗಿ ಸುಣ್ಣದ ರಚನೆಗಳಾಗಿದ್ದು ಸುಮಾರು 2,313 ಅಡಿ ಎತ್ತರದಲ್ಲಿವೆ.ಪಾದರಸ, ಸೋಡಿಯಂ ಆವಿ ಮತ್ತು ಹ್ಯಾಲೊಜೆನ್ ದೀಪಗಳ ಇರುವಿಕೆಯು ಗುಹೆಗಳ ಅಸ್ತಿತ್ವದಲ್ಲಿರುವ ಆಕರ್ಷಣೆಯ ಗ್ಲಾಮರ್ ಅನ್ನು ವರ್ಧಿಸುತ್ತದೆ.

ಗೋಸ್ಥಾನಿ ನದಿಯ ಮೂಲದ ಸ್ಥಳವಾಗಿರುವುದರಿಂದ ಈ ಸ್ಥಳವು ಅತಿವಾಸ್ತವಿಕವಾದದ್ದು ವರ್ಷಪೂರ್ತಿ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೀಗೆ ಈ ಊಹಿಸಲಾಗದ ಭಾರತದ ಕೆಲವು ಗುಪ್ತ ಆಶ್ಚರ್ಯಗಳನ್ನು ಅನಾವರಣಗೊಳಿಸಿ ಭಾರತದ ಶ್ರೀಮಂತಿಕೆಯ ಬಗ್ಗೆ ತಿಳಿದುಕೊಳ್ಳಿ.

PC- rajaraman sundaram

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X