Search
  • Follow NativePlanet
Share
» »ದೆಹಲಿಯಲ್ಲಿರುವಾಗ ಮಾಡಬಹುದಾದ ಅಸಮಾನ್ಯ ವಿಷಯಗಳು

ದೆಹಲಿಯಲ್ಲಿರುವಾಗ ಮಾಡಬಹುದಾದ ಅಸಮಾನ್ಯ ವಿಷಯಗಳು

ದೆಹಲಿ ಪಟ್ಟಣದಲ್ಲಿ ಕಾಣಸಿಗುವಂತಹ ಅಸಮಾನ್ಯವಾದ ಅನುಭವಗಳ ಬಗ್ಗೆ ಓದಿ ಮತ್ತಷ್ಟು ತಿಳಿದುಕೊಳ್ಳಿ.

By Manjula Balaraj Tantry

ದೆಹಲಿಯು ಭಾರತದ ರಾಜಧಾನಿ ಮಾತ್ರವಲ್ಲದೆ ಮೊಘಲರು, ಬ್ರಿಟಿಷರು ಮತ್ತು ಅನೇಕರಿಂದ ನಿರ್ಮಿಸಲ್ಪಟ್ಟ ಸ್ಮಾರಕಗಳ ನೆಲೆಯಾಗಿದೆ. ಇದಲ್ಲದೆ ಮರೆತಿರುವಂತಹ ಅನೇಕ ಸಂಖ್ಯೆಯ ವಿಷಯಗಳು ಇಲ್ಲಿವೆ.

ದೆಹಲಿಯು ಭಾರತದ ರಾಜಧಾನಿ ಮಾತ್ರವಲ್ಲದೆ ಇಲ್ಲಿ ಅನೇಕ ಪ್ರಾಚೀನ ಸ್ಮಾರಕಗಳ ನೆಲೆಯಾಗಿದೆ ಅವುಗಳಲ್ಲಿ ಕೋಟೆಗಳು, ಮಸೀದಿಗಳು, ದೇವಾಲಯಗಳು ಮುಂತಾದವು ಸೇರಿವೆ. ಈ ಸ್ಮಾರಕಗಳು ಸುಂದರ ಹಾಗೂ ಬೆರಗುಗೊಳಿಸುವಂತಿದೆ ಎಂಬುದರಲ್ಲಿ ಸಂಶಯವಿಲ್ಲ.

ಆದರೂ ಇರಿ! ಇದಲ್ಲದೆ ಇಲ್ಲಿ ಮಾಡಬೇಕಾದ ಮತ್ತು ನೋಡಬಹುದಾದ ಇನ್ನೂ ಕೆಲವು ವಿಷಯಗಳು ಈ ನಗರದಲ್ಲಿದೆ. ಈ ನಗರವು ಮಾರುಕಟ್ಟೆಗಳು, ಕಲಾ ಗ್ಯಾಲರಿಗಳು, ಮುಂಚಿನಿಂದಲೂ ತಮ್ಮದೇ ಆದ ಕಥೆಗಳನ್ನು ಸಾರುವ ಸಣ್ಣದಾದ ಹಾದಿಗಳು, ಮತ್ತು ಬೈಲೈನ್ ಗಳನ್ನು ಹೊಂದಿದೆ.

ಮೊದಲ ಸಲ ದೆಹಲಿಗೆ ಭೇಟಿಕೊಡುವವರು ನಗರದಲ್ಲಿ ಹೆಚ್ಚಾಗಿ ಪ್ರಸಿದ್ದಿ ಪಡೆದ ಸ್ಮಾರಕಗಳಿಗೆ ಭೇಟಿ ಕೊಡಲು ಬಯಸುತ್ತಾರೆ ಅವುಗಳಲ್ಲಿ ಮೊಘಲರ ಯುಗದ ಸ್ಮಾರಕಗಳಿಂದ ಹಿಡಿದು ಬ್ರಿಟಿಷರು ಮತ್ತು ಹೊಸದಾಗಿ ನಿರ್ಮಾಣಗೊಂಡ ರಚನೆಗಳೂ ಸೇರಿವೆ.

ದೆಹಲಿಯಂತಹ ದೊಡ್ಡ ನಗರದಲ್ಲಿ ಕಡಿಮೆ ಪ್ರಸಿದ್ದಿ ಪಡೆದ ಸ್ಥಳಗಳಿಗೆ ಭೇಟಿ ನೀಡುವ ಸಾಹಸವನ್ನು ಕೆಲವರು ಮಾಡುವುದಿಲ್ಲ. ಇದು ನಗರದ ಕಾರ್ಯನಿರ್ವಹಣೆ ಹೇಗಿದೆಯೋ ಎಂಬ ಯೋಚನೆ ಗೊಳಗಾಗುವಂತೆ ಮಾಡುತ್ತದೆ . ದೆಹಲಿಯಲ್ಲಿರುವಾಗ ಮಾಡಬೇಕಾದ ಕೆಲವು ವಿಭಿನ್ನ ವಿಷಯಗಳ ಬಗ್ಗೆ ನೋಡೋಣ.

ನಿಜಾಮುದ್ದೀನ್ ದರ್ಗಾದಲ್ಲಿನ ಖವಾಲಿಗಳನ್ನು ಕೇಳಿ

ನಿಜಾಮುದ್ದೀನ್ ದರ್ಗಾದಲ್ಲಿನ ಖವಾಲಿಗಳನ್ನು ಕೇಳಿ

PC: Varun Shiv Kapur

ಹಝರತ್ ನಿಜಾಮುದ್ದೀನ್ ದರ್ಗಾವು ಪ್ರಸಿದ್ಧ ಸೂಫಿ ಸಂತರಾದ ನಿಜಾಮುದ್ದೀನ್ ಔಲಿ ಅವರ ಸಮಾಧಿಯನ್ನು ಹೊಂದಿದೆ. ಈ ದರ್ಗಾವು ಜಗತ್ತಿನಾದ್ಯಂತದ ಸೂಫಿ ಮತ ಅನುಸರಿಸುವವರನ್ನು ಆಕರ್ಷಿಸುತ್ತದೆ. ಅಲ್ಲದೆ ಈ ಪ್ರಶಾಂತವಾದ ಸ್ಥಳವು ಪ್ರತೀ ಗುರುವಾರ ಸಂಜೆ ಕವ್ವಾಲಿ ಗಾಯಕರಿಂದ ಸುಮಧುರ ಗಾಯನವು ಕೇಳಿಬರುತ್ತದೆ.

ಇಲ್ಲಿಯ ಕವ್ವಾಲಿಯ ನೇರಪ್ರದರ್ಶನವು ಭಾರತದ ಸಾಂಪ್ರದಾಯಿಕ ಸಂಗೀತ ವಾದ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುತ್ತದೆ ಮತ್ತು ಇದರ ಕಂಪನ್ನು ಹರಡಿಸುತ್ತದೆ.

ಏಷ್ಯಾದ ಅತಿದೊಡ್ಡ ಮಸಾಲೆ (ಸ್ಪೈಸ್) ಮಾರುಕಟ್ಟೆಗೆ ಭೇಟಿ ನೀಡಿ

ಏಷ್ಯಾದ ಅತಿದೊಡ್ಡ ಮಸಾಲೆ (ಸ್ಪೈಸ್) ಮಾರುಕಟ್ಟೆಗೆ ಭೇಟಿ ನೀಡಿ

PC: it's me neosiam

ಹಳೆ ದೆಹಲಿಯ ಫತೇಪುರಿ ಮಸೀದಿಗೆ ಸಮೀಪದಲ್ಲಿರುವ ಖರಿ ಬವೋಲಿ ರಸ್ತೆ, ಏಷ್ಯಾದಲ್ಲೇ ಅತಿ ದೊಡ್ಡ ಸಗಟು ಮಸಾಲೆ ಮಾರುಕಟ್ಟೆಯಾಗಿದೆ. ಪಾಶ್ಚಿಮಾತ್ಯ ದೇಶಗಳು ಭಾರತದೊಡನೆ ಸಂಪರ್ಕ ಹೊಂದಲು ಮೊದಲ ಕಾರಣ ಈ ಮಸಾಲೆಗಳದ್ದಾಗಿದೆ. ಮಾರುಕಟ್ಟೆಯು 17 ನೇ ಶತಮಾನದಿಂದಲೂ ವ್ಯವಹಾರವನ್ನು ನಡೆಸುತ್ತಾ ಬಂದಿದೆ.

ಇದಕ್ಕೆ ಸಮೀಪದಲ್ಲಿಯೇ ಇನ್ನೊಂದು ಮಾರುಕಟ್ಟೆ ಪ್ರದೇಶವಿದೆ ಅದೇ ಗಡೋಡಿಯಾ ಮಾರುಕಟ್ಟೆ ಇಲ್ಲಿ ಅನೇಕ ಮಸಾಲೆ ಅಂಗಡಿಗಳಿವೆ. ಮತ್ತು ಇದನ್ನು 1920 ರಲ್ಲಿ ಒಬ್ಬ ಸ್ಥಳೀಯ ಧನಿಕ ವ್ಯಾಪಾರಿಯಿಂದ ಕಟ್ಟಲ್ಪಟ್ಟಿತು.

ಆಹಾರ ಪ್ರವಾಸಕ್ಕಾಗಿ ಸಿದ್ದರಾಗಿರಿ

ಆಹಾರ ಪ್ರವಾಸಕ್ಕಾಗಿ ಸಿದ್ದರಾಗಿರಿ

PC: gillnisha

ನೀವು ತಿನಿಸು ಪ್ರಿಯರೇ? ಹಾಗಿದ್ದಲ್ಲಿ ನಗರದಲ್ಲಿ 5 ರಿಂದ 6 ಗಂಟೆಗಳ ಕಾಲ ಆಹಾರ ಪ್ರವಾಸಕ್ಕಾಗಿ ಮೀಸಲಿಡಿ ಇಲ್ಲಿ ನೀವು ದೆಹಲಿಯ ಪ್ರಸಿದ್ದ ಆಹಾರ ಕೇಂದ್ರಗಳನ್ನು ನೋಡಬಹುದು ಮತ್ತು ರುಚಿಯನ್ನು ಸವಿಯಬಹುದು. ಇಲ್ಲಿ ಕೆಲವು ಆಹಾರ ಕೇಂದ್ರಗಳು ಶತಮಾನಗಳಷ್ಟು ಹಳೆಯದಾಗಿದೆ.

ಇಲ್ಲಿಯ ಕವಲು ದಾರಿಗಳಲ್ಲಿ ಮತ್ತು ಆಧುನಿಕ ಬೀದಿಗಳಲ್ಲಿಯೂ ಅನೇಕ ತಿನಿಸುಗಳ ಅಂಗಡಿಗಳನ್ನು ಕಾಣಬಹುದು. ಇನ್ನು ಕೆಲವು ಪ್ರವಾಸಿಗರಿಗೆ ಅರಿವಿಗೆ ಬಾರದಂತೆ ನಗರದ ಬೀದಿಗಳ ಮೂಲೆ ಮೂಲೆ ಗಳಲ್ಲೂ ಕಾಣಬಹುದಾಗಿದೆ. ಈ ಪ್ರವಾಸವು ನಿಮ್ಮನ್ನು ಹಳೇ ದೆಹಲಿಯ ಮಸಾಲೆಗಳ ಮಾರುಕಟ್ಟೆಯಿಂದ ಗುರುದ್ವಾರದ ಅಡಿಗೆ ಸಮುದಾಯದ ಕಡೆಗೆ ಕೊಂಡೊಯ್ಯುತ್ತದೆ.

ಇಲ್ಲಿಯ ಬೀದಿಗಳಲ್ಲಿ ಅಡ್ಡಾಡಿ

ಇಲ್ಲಿಯ ಬೀದಿಗಳಲ್ಲಿ ಅಡ್ಡಾಡಿ

PC: Unknown

ದೆಹಲಿಯ ಇನ್ನೊಂದು ಭಾಗದ ಬಗ್ಗೆ ತಿಳಿಯಲು ನೀವು ಒಂದು ಮಾರ್ಗದರ್ಶನದಲ್ಲಿ ಪಹಾರ್ಗಂಜ್ ಬೀದಿಗಳಲ್ಲಿ ಮತ್ತು ನವದೆಹಲಿ ರೈಲ್ವೆ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ನಡಿಗೆಯ ಮೂಲಕ ಅಡ್ದಾಡಿ, ಸಲಾಮ್ ಬಾಲಾಕ್ ಟ್ರಸ್ಟ್ ಆಯೋಜಿಸುವ ಪ್ರವಾಸವು ನಗರದಲ್ಲಿನ ಅತ್ಯುತ್ತಮ ವಾಕಿಂಗ್ ಪ್ರವಾಸಗಳಲ್ಲಿ ಒಂದಾಗಿದೆ.

ಇದರ ಮಾರ್ಗದರ್ಶಕರು ಒಂದೊಮ್ಮೆ ಬೀದಿಗಳಲ್ಲಿ ವಾಸ ಮಾಡುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ಮಕ್ಕಳಾಗಿದ್ದು ಈ ಸಂಸ್ಥೆಯಲ್ಲಿ ಪುನರ್ವಸತಿ ಪಡೆದವರಾಗಿದ್ದಾರೆ. ಈ ವಾಕ್ ನಿಜವಾಗಿಯೂ ಕಣ್ಣು ತೆರೆದು ನೋಡುವಂತಹುದು ಒಂದು ಕಡೆಯಾದರೆ ಇನ್ನೊಂದು ಕಡೆ ನಗರದ ಕೆಲವು ದೌರ್ಭಾಗ್ಯವನ್ನು ಕೂಡಾ ಸಮಾನಾಗಿ ನೋಡುವಂತೆ ಮಾಡುತ್ತದೆ.

ಗಾರ್ಡ್ ಬದಲಾಯಿಸುವುದು ವೀಕ್ಷಿಸಿ

ಗಾರ್ಡ್ ಬದಲಾಯಿಸುವುದು ವೀಕ್ಷಿಸಿ

PC: Official Site

ರಾಷ್ಟ್ರಪತಿ ಭವನದಲ್ಲಿ ನಡೆಯುವ ಗಾರ್ಡ ಬದಲಾವಣೆ ಸಮಾರಂಭವು ವಿಶ್ವದಾದ್ಯಂತ ನಡೆಯುವ ಅನೇಕ ರೀತಿಯ ಸಮಾರಂಭಗಳಲ್ಲಿ ಒಂದಾಗಿದೆ. ಇದೂ ಕೂಡಾ ಹೆಚ್ಚಾಗಿ ಪ್ರಸಿದ್ದಿ ಪಡೆಯದ ನಗರದ ಆಕರ್ಷಣೆಯಾಗಿದೆ. 2007 ರಲ್ಲಿ ಪ್ರಾರಂಭವಾದ ಈ ಸಮಾರಂಭವನ್ನು 2012 ರ ಕೊನೆಯಲ್ಲಿ ಪುನರ್ ರಚಿಸಲಾಯಿತು.

ಈ ಸಮಾರಂಭವು ಪ್ರತಿ ಶನಿವಾರ ಬೆಳಗ್ಗೆ ಅಧ್ಯಕ್ಷರ ನಿವಾಸದಲ್ಲಿ ಸೀಮಿತ ಸಂಖ್ಯೆಯ 200 ಪ್ರೇಕ್ಷಕರ ಮುಂಭಾಗದಲ್ಲಿ ನಡೆಯುತ್ತದೆ. ಕುದುರೆಯ ಮೇಲೆ ಅಧ್ಯಕ್ಷರ ರಕ್ಷಕರು ತಮ್ಮ ವಿದ್ಯುಕ್ತ ಲಾಂಛನಗಳಲ್ಲಿ ಒಂದು ಕುದುರೆ ಸವಾರಿ ಪ್ರದರ್ಶನವನ್ನು ನಡೆಸುತ್ತಾರೆ.

ರಾಷ್ಟ್ರಪತಿ ಭವನಕ್ಕೆ ಪ್ರವೇಶವನ್ನು ಸಾಮಾನ್ಯವಾಗಿ ನಿರ್ಬಂಧಿಸಲಾಗಿದೆ, ಸಮಾರಂಭದ ಸಮಯದಲ್ಲಿ ಹೊಸ ದೆಹಲಿಯ ಹೃದಯ ಭಾಗದಲ್ಲಿರುವ ಈ ಭವ್ಯ ಕಟ್ಟಡದ ವಾಸ್ತುಶಿಲ್ಪ ಅಧ್ಯಯನ ಮಾಡುವ ಅವಕಾಶವನ್ನು ಒದಗಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X