Search
  • Follow NativePlanet
Share
» »ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ಕರ್ನಾಟಕದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿರುವ ಕುಗ್ರಾಮವಾದ ವಿಘ್ನಸಂತೆ ಎಂಬಲ್ಲಿರುವ ವಿಘ್ನನಿವಾರಕ ಲಕ್ಷ್ಮಿನರಸಿಂಹನ ದೇವಾಲಯವು ಸಾಕಷ್ಟು ಪ್ರಾಚೀನ ದೇವಾಲಯವಾಗಿದೆ

By Divya

ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಹಳ್ಳಿಗಳ ಕೊಡುಗೆ ಅಪಾರ. ಇದರ ಜೊತೆ ಜೊತೆಗೆ ವಿಶಿಷ್ಟ ಪ್ರದೇಶಗಳನ್ನು ಹಳ್ಳಿಗಳು ತಮ್ಮ ಮಡಿಲಲ್ಲಿ ಇಟ್ಟು ಕೊಂಡಿರುವುದು ವಿಶೇಷ. ಅಂತಹ ಒಂದು ಕುಗ್ರಾಮದಲ್ಲಿ ಪುರಾತನ ಕಾಲದ ಶ್ರೀಮಂತ ದೇಗಲವೊಂದು ತನ್ನ ವಿಶಿಷ್ಟ ವಾಸ್ತುಶಿಲ್ಪ ಹಾಗೂ ಕಲಾಕೃತಿಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅದೇ ವಿಘ್ನಸಂತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ದೇಗುಲ.

ಎಲ್ಲಿದೆ ಈ ದೇಗುಲ?

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿರುವ ಕುಗ್ರಾಮ ವಿಘ್ನಸಂತೆ. ತುರುವೇ ಕೆರೆಯಿಂದ 12 ಕಿ.ಮೀ. ಮತ್ತು ನೊಣವಿನ ಕೆರೆಯಿಂದ ಸುಮಾರು 5 ಕಿ.ಮೀ ದೂರದಲ್ಲಿದೆ.

ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ಚಿತ್ರಕೃಪೆ: Dineshkannambadi

ಕಲೆಯ ವೈಭವ

ಈ ಹಳ್ಳಿ ಚಿಕ್ಕದಾದರೂ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿರುವ ದೇವಾಲಯಗಳು ಹಲವಾರು. ಅದರಲ್ಲಿ ಲಕ್ಷ್ಮೀ ನರಸಿಂಹ ದೇಗುಲದ ಹಿರಿಮೆ ಹೆಚ್ಚು. ಈ ದೇವಾಲಯ ಹಳೆಬೀಡು, ಬೇಲೂರು ದೇವಾಲಯಗಳ ಕಲಾಕೃತಿಯನ್ನೇ ಸ್ವಲ್ಪ ಹೋಲುತ್ತದೆ.

ದೇವಾಲಯದ ಮುಂಭಾಗದಲ್ಲಿ ಆನೆಗಳ ಮೂರ್ತಿ, ಮೂರ್ತಿಯ ಹಿಂದೆ ಬೃಹತ್ತಾದ ಎರಡು ಆಧಾರ ಕಂಬಗಳು, ಮುಖ ಮಂಟಪ, ದೇಗುಲದ ಗೋಪುರದ ಮೇಲೆ ಸೂಕ್ಷ್ಮ ಕಲಾಕೃತಿಗಳು, ದೇವಾಲಯದ ಶಿಖರದಲ್ಲಿರುವ ನಾಟ್ಯ ಗಣಪ ಇರುವುದು ವಿಶೇಷ. ಹೊಯ್ಸಳರ ಶೈಲಿಯಲ್ಲಿರುವ ಈ ದೇಗುಲ ತ್ರಿಕೂಟರ ಯೋಜನೆ ಅಡಿ ನಿರ್ಮಾಣಗೊಂಡಿದೆ.

ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ಚಿತ್ರಕೃಪೆ: Dineshkannambadi

ಇಲ್ಲಿರುವ ಲಕ್ಷ್ಮೀನಾರಾಯಣ ಹಾಗೂ ವೇಣುಗೋಪಾಲಸ್ವಾಮಿ ವಿಗ್ರಹಗಳು ಬಹಳ ಆಕರ್ಷಣೀಯ. ವಿಶಿಷ್ಟ ವಿನ್ಯಾಸ ಮತ್ತು ವಿಶೇಷ ಕೆತ್ತನೆಗಳಿಂದ ಕೂಡಿದ ಈ ಹೊಯ್ಸಳ ಶೈಲಿಯ ದೇಗುಲದ ಹೊರ ಭಿತ್ತಿಯ ಮೇಲೆ ಹೆಚ್ಚಿನ ಕೆತ್ತನೆಗಳಿಲ್ಲದಿದ್ದರೂ, ಶಿಖರದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ.

ಇತಿಹಾಸ

ಈ ಗ್ರಾಮಕ್ಕೆ ಹಿಂದೆ ಇಗನ ಸಂತೆ ಎಂದು ಕರೆಯುತ್ತಿದ್ದರಂತೆ. ಕಾಲಕ್ರಮೇಣ ಇದು ವಿಘ್ನಸಂತೆ ಎಂದಾಯಿತು. ಹೊಯ್ಸಳರ ಕಾಲದಲ್ಲಿ ಇದೊಂದು ಪ್ರಮುಖ ಸ್ಥಳವಾಗಿತ್ತು ಎಂಬುದನ್ನು ದೇವಾಲಯದ ಎಡಭಾಗದಲ್ಲಿರುವ ಶಾಸನಗಳಲ್ಲಿ ಬರೆಯಲಾಗಿದೆ. ಹೊಯ್ಸಳರ ಮೂರನೇ ನರಸಿಂಹನ ದಂಡನಾಯಕ, ಮಲ್ಲಿದೇವ ದಂಡನಾಯಕನ ಮಕ್ಕಳೂ ಆದ ಅಪ್ಪಯ್ಯ, ಗೋಪಾಲ ಮತ್ತು ಮಾಧವ ಎಂಬುವರು ಈ ದೇವಾಲಯವನ್ನು 1286ರಲ್ಲಿ ಕಟ್ಟಿಸಿದರು ಎನ್ನಲಾಗುತ್ತದೆ. ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ.

ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ಚಿತ್ರಕೃಪೆ: Dineshkannambadi

ಸ್ಥಿತಿ-ಗತಿ

ಸ್ವಲ್ಪ ಕಾಲದ ಹಿಂದೆ ಈ ದೇವಾಲಯದ ಬಗ್ಗೆ ಸರಿಯಾದ ನಿರ್ವಹಣೆ ಇಲ್ಲದೆ ಕಳಾಹೀನ ಸ್ಥಿತಿಗೆ ಬಂದಿತ್ತು. ದೇವಾಲಯದ ಮೇಲೆ ಹಾಗೂ ಸುತ್ತಲೂ ಹುಲ್ಲು, ಗಿಡ-ಗಂಟೆಗಳು ಬೆಳೆದುಕೊಂಡಿತ್ತು. ಇಲ್ಲಿರುವ ವಿಗ್ರಹಗಳು ಸಾಕು ಪ್ರಾಣಿಗಳನ್ನು ಕಟ್ಟುವ ಕಂಬಗಳಾಗಿದ್ದವು. ಸ್ವಲ್ಪ ಕಾಲದಿಂದೀಚೆಗೆ ಸಾಕಷ್ಟು ಸುಧಾರಣೆ ಮಾಡಲಾಗಿದೆ.

ತುಮಕೂರಿನಲ್ಲಿರುವ ಪ್ರಸಿದ್ಧ ಆಕರ್ಷಣೆಗಳು!

ದೇಗುಲದ ಸುತ್ತ

ಈ ಗ್ರಾಮದಲ್ಲಿ ಹರಿಯುವ ಹಳ್ಳದ ಪಕ್ಕದಲ್ಲಿ ಬಾಲಲಿಂಗೇಶ್ವರ ದೇವಾಲಯವಿದೆ. ಗ್ರಾಮದ ಉತ್ತರದಲ್ಲಿರುವ ಬಯಲಲ್ಲಿ ನೂತನವಾಗಿ ನಿರ್ಮಾಣಗೊಂಡ ಬನಶಂಕರಿ ದೇವಾಲಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X