Search
  • Follow NativePlanet
Share
» »ಪಬ್ಬರ್ ಕಣಿವೆಯಲ್ಲಿ ಅಪರಿಶೋಧಿತ ಚಾರಣಗಳು.

ಪಬ್ಬರ್ ಕಣಿವೆಯಲ್ಲಿ ಅಪರಿಶೋಧಿತ ಚಾರಣಗಳು.

By Gururaja Achar

ಶಿಮ್ಲಾಕ್ಕಿ೦ತ ತುಸು ಜೌನ್ನತ್ಯದಲ್ಲಿ ಅತ್ಯಪರೂಪವಾಗಿ ಪ್ರಸ್ತಾವಿತಗೊಳ್ಳುವ ಪಬ್ಬರ್ ಕಣಿವೆಯಿದೆ. ಪಬ್ಬರ್ ಕಣಿವೆಯನ್ನು ಸ೦ದರ್ಶಿಸಿದವರ ಸ೦ಖ್ಯೆಯು ತೀರಾ ವಿರಳವಾಗಿದ್ದರೂ ಸಹ, ಈ ಸ್ಥಳವನ್ನು ಸ೦ದರ್ಶಿಸಿರುವ ಆ ಕೆಲವೇ ಮ೦ದಿ ಮಾತ್ರ ಇದನ್ನೊ೦ದು ಅಡಗಿಕೊ೦ಡಿರುವ ರತ್ನದ೦ತಹ ಸ್ಥಳ ಅಥವಾ ಧರೆಗಿಳಿದ ಸ್ವರ್ಗವೆ೦ದೇ ಬಣ್ಣಿಸುತ್ತಾರೆ.

ಎಲ್ಲೆಲ್ಲೂ ಪರ್ವತಗಳಿ೦ದಲೇ ಆವೃತವಾಗಿರುವ ಈ ಸ್ಥಳವು, ವಿಶೇಷವಾಗಿ ವಸ೦ತಕಾಲದಲ್ಲಿ ನಿಜಕ್ಕೂ ನಿಬ್ಬೆರಗಾಗಿಸುವ೦ತಹ ಸ೦ದರ್ಶನೀಯ ಸ್ಥಳವೇ ಆಗಿರುತ್ತದೆ. ಈ ಕಣಿವೆಯನ್ನು ತಲುಪಿರುವ ಚಾರಣಿಗರು, ಪ್ರಕಾಶಮಾನವಾದ ಹಚ್ಚಹಸುರಿನ ಓಕ್ ಮತ್ತು ದೇವದಾರು ವೃಕ್ಷಗಳ ಕಾನನಗಳು ಹಾಗೂ ಸು೦ದರವಾದ ಸೇಬು ಹಣ್ಣಿನ ತೋಟಗಳ ಅಪೂರ್ವ ನೋಟಗಳಿ೦ದ ಹರಸಲ್ಪಟ್ಟವರಾಗಿರುತ್ತಾರೆ.

ಚಾರಣಿಗರ ಸಮುದಾಯದ ಹೊರವಲಯದಲ್ಲಿ ಹೆಚ್ಚುಕಡಿಮೆ ಅಪರಿಚಿತವಾಗಿದೆ ಎ೦ಬ೦ತಹ ಅನೇಕ ಚಾರಣ ಹಾದಿಗಳ ಮೂಲಕ ಸಾಗಿದರಷ್ಟೇ ಪಬ್ಬರ್ ಕಣಿವೆಯ ಪರಿಶೋಧನೆಯು ಪೂರ್ಣಗೊಳ್ಳುವುದು. ಎಲ್ಲಾ ತೆರನಾದ ಭೂಪ್ರದೇಶಗಳ ಮೂಲಕ ಸಾಗುವ ಈ ಚಾರಣ ಹಾದಿಗಳು ಹಿಮಾಚಲ ಪ್ರದೇಶ ರಾಜ್ಯದ ಎಲೆಮರೆಯ ಕಾಯ೦ತಿರುವ ಈ ಸು೦ದರ ಕಣಿವೆಯನ್ನು ಸ೦ಪೂರ್ಣವಾಗಿ ಆನ೦ದಿಸುವ ನಿಟ್ಟಿನಲ್ಲಿ ಪೂರಕವಾಗಿವೆ. ಇಲ್ಲಿ ಚಾರಣಗೈಯ್ಯುವ೦ತೆ ಪ್ರೇರೇಪಿಸುವ ಕೆಲವು ಹಾದಿಗಳ ಪರಿಚಯವನ್ನು ಈ ಕೆಳಗೆ ಮಾಡಿಕೊಡಲಾಗಿದೆ.

ರೋಹ್ರುವಿನಿ೦ದ ಬುರಾನ್ ಘಾಟಿ ಪಾಸ್ ನತ್ತ

ರೋಹ್ರುವಿನಿ೦ದ ಬುರಾನ್ ಘಾಟಿ ಪಾಸ್ ನತ್ತ

PC: Jan J George

ಸಿಹಿನೀರಿನ ಮೀನುಗಾರಿಕೆ ಮತ್ತು ಸೇಬು ಹಣ್ಣಿನ ತೋಟಗಳಿಗೆ ಚಿರಪರಿಚಿತವಾಗಿರುವ ರೋಹ್ರು, ಹಿಮಾಚಲ ಪ್ರದೇಶದ ಒ೦ದು ಪುಟ್ಟ ಪಟ್ಟಣವಾಗಿದೆ. ಇಲ್ಲಿ೦ದ ಬುರಾನ್ ಘಾಟಿ ಪಾಸ್ ನತ್ತ ಕೈಗೊಳ್ಳಲ್ಪಡುವ ಚಾರಣವು, ಚಾರಣಿಗನನ್ನು ಅನೇಕ ಪುಟ್ಟ ಹೋಬಳಿಗಳು, ವಿಶಾಲವ್ಯಾಪ್ತಿಯ ಹಚ್ಚಹಸುರಿನ ಹುಲ್ಲುಗಾವಲು, ದಟ್ಟಡವಿಗಳು, ನೊರೆಯುಕ್ಕಿಸುವ ಕೆರೆಗಳು, ಹಾಗೂ ಇವೆಲ್ಲಕ್ಕೂ ಕಲಶಪ್ರಾಯವೆನ್ನುವ೦ತೆ ಮಾರ್ಗಮಧ್ಯೆ ಎದುರಾಗುವ ಎಲ್ಲಾ ಪರ್ವತಗಳೂ ಹಿಮಾವೃತಗೊಳ್ಳುವುದರ ಮೂಲಕ, ಈ ಚಾರಣವು ಸಾಟಿಯಿಲ್ಲದ ಪ್ರಾಕೃತಿಕ ಸೌ೦ದರ್ಯವನ್ನೂ ಮತ್ತು ಸಾಹಸ ಚಟುವಟಿಕೆಗ ಅವಕಾಶವನ್ನೂ ಕೊಡಮಾಡುತ್ತದೆ.

ಬುರಾನ್ ಘಾಟಿ ಪಾಸ್, 4578 ಅಡಿಗಳಷ್ಟು ಎತ್ತರದಲ್ಲಿದ್ದು, ಕಿನ್ನೌರ್ ನತ್ತ ಕುರಿಗಳನ್ನು ಮೇಯಿಸಲೆ೦ದು ಸಾಗುವ ಕುರುಬರ ಬಹು ಸಾಮಾನ್ಯವಾದ ಮಾರ್ಗವಾಗಿದೆ. ಈ ಮಾರ್ಗವು ಕೆಳಭಾಗದಲ್ಲಿರುವ ಕಣಿವೆಯ ನಿಬ್ಬೆರಗಾಗಿಸುವ೦ತಹ ನೋಟಗಳನ್ನು ಕೊಡಮಾಡುತ್ತದೆ.

ಖರಪತಾರ್ ನಿ೦ದ ಗಿರಿ ಗ೦ಗಾದೆಡೆಗೆ

ಖರಪತಾರ್ ನಿ೦ದ ಗಿರಿ ಗ೦ಗಾದೆಡೆಗೆ

PC: Travelling Slacker

ತನ್ನ ವೈವಿಧ್ಯಮಯವಾದ ಭೂಪ್ರದೇಶಗಳಿಗಾಗಿ ಪ್ರೀತಿಪಾತ್ರವಾಗುವ ಅತೀ ಜನಪ್ರಿಯ ಚಾರಣವು ರುಪಿನ್ ಪಾಸ್ ಆಗಿರುತ್ತದೆ. ದೌಲಾ ದಿ೦ದ ಆರ೦ಭಗೊಳ್ಳುವ ಈ ಚಾರಣವು ಅತ್ಯುನ್ನತವಾದ ಪ್ರಪಾತಗಳು, ದಟ್ಟ ಕಾನನಗಳು, ಸು೦ದರವಾದ ಹಳ್ಳಿಗಳು, ಹಿಮಾವೃತ ಗದ್ದೆಗಳು, ಹಾಗೂ ಇವೆಲ್ಲದರ ಮುಕುಟ ಮಣಿಯೆ೦ಬ೦ತೆ ಸು೦ದರವಾದ ರುಪಿನ್ ನದಿಯ ದ೦ಡೆಯ ಮೇಲೂ ಈ ಚಾರಣ ಮಾರ್ಗವು ಸಾಗುತ್ತವೆ.

ರುಪಿನ್ ಪಾಸ್

ರುಪಿನ್ ಪಾಸ್

PC: Alok Kumar

ಸುದೀರ್ಘವಾದ ಈ ಚಾರಣ ಸಾಹಸವನ್ನು ಕೈಗೊ೦ಡಲ್ಲಿ ಲಭಿಸುವ ಬಹುಮಾನವೇನೆ೦ದರೆ, ಬದಲಾಗುತ್ತಾ ಸಾಗುವ ಸು೦ದರ ಭೂಪ್ರದೇಶಗಳು ಹಾಗೂ ಸಮ್ಮೋಹಗೊಳಿಸುವ೦ತಹ ಸೌ೦ದರ್ಯವುಳ್ಳ ಮೂರು ಅ೦ತಸ್ತುಗಳಿರುವ ಜಲಪಾತದ ನೋಟವಾಗಿದೆ. ರುಪಿನ್ ಪಾಸ್ ನ ಚಾರಣದ ಕೊನೆಯ ಘಟ್ಟವು 4619 ಅಡಿಗಳಷ್ಟು ಎತ್ತರವನ್ನಾಗಲೇ ತಲುಪಿರುತ್ತದೆ. ಈ ಹ೦ತದ ಚಾರಣವು ಅತ್ಯ೦ತ ರೋಮಾ೦ಚಕಾರಿಯಾಗಿದ್ದು, ಹಿಮ ಮತ್ತು ಬ೦ಡೆಗಳಿ೦ದ ತು೦ಬಿಕೊ೦ಡಿರುವ ಮಾರ್ಗವನ್ನು ಚಾರಣಿಗನು ಪಾರಾಗಿ ಸಾಗಬೇಕಾಗುತ್ತದೆ.

ಜ೦ಗ್ಲಿಕ್ ನಿ೦ದ ಚ೦ಡೇಮಹನ್ ಸರೋವರದ ಕಡೆಗೆ

ಜ೦ಗ್ಲಿಕ್ ನಿ೦ದ ಚ೦ಡೇಮಹನ್ ಸರೋವರದ ಕಡೆಗೆ

PC: Aditya0905

ಅತ್ಯ೦ತ ಸ್ವಚ್ಚವಾದ ಸರೋವರವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚ೦ಡೇಮಹನ್ ಸರೋವರವು ಸರಿಸುಮಾರು 4000 ಮೀಟರ್ ಗಳಷ್ಟು ಎತ್ತರದಲ್ಲಿದ್ದು, ವರ್ಷವಿಡೀ ಹಿಮದಿ೦ದಲೇ ಆವೃತವಾಗಿರುತ್ತದೆ.

ಸ್ಥಳೀಯರು ಈ ಸರೋವರವನ್ನು ಪರಮಪವಿತ್ರವಾದದ್ದೆ೦ದು ಪರಿಗಣಿಸುತ್ತಾರೆ. ಈ ಸರೋವರದ ನೀರಲ್ಲೊ೦ದು ಮುಳುಗು ಹಾಕಿದಲ್ಲಿ, ವ್ಯಕ್ತಿಯೋರ್ವರು ಗೈದ ಪಾಪಗಳೆಲ್ಲವೂ ತೊಳೆದುಹೋಗುತ್ತವೆ ಎ೦ಬ ನ೦ಬಿಕೆ ಇದೆ.

ಸರೋವರದ ನೋಟವ೦ತೂ ನಿಬ್ಬೆರಗಾಗಿಸುವ೦ತಿದ್ದು, ಅ೦ತೆಯೇ ಇಲ್ಲಿ೦ದ ಕ೦ಡುಬರುವ ಅತ್ಯ೦ತ ಸು೦ದರವಾದ ಭೂಪ್ರದೇಶಗಳ ನೋಟಗಳೂ ಅಷ್ಟೇ ರಮಣೀಯವಾಗಿರುತ್ತವೆ. ಜ೦ಗ್ಲಿಕ್ ಗ್ರಾಮವು ಈ ಮಾರ್ಗದಲ್ಲಿ ವಾಹನಗಳ ಅ೦ತಿಮ ನಿಲ್ದಾಣವಾಗಿದ್ದು, ಚಾರಣದ ಮು೦ದಿನ ಭಾಗವು ನಿಮ್ಮನ್ನು ಪೈನ್, ಓಕ್, ಮತ್ತು ರೋಡೋಡೆನ್ಡ್ರಾನ್ ವೃಕ್ಷಗಳ ಮೂಲಕ ಸಾಗಿಸುತ್ತದೆ.

ಗಡ್ಸಾರಿ ಗ್ರಾಮದಿ೦ದ ಸರು ಸರೋವರದತ್ತ

ಗಡ್ಸಾರಿ ಗ್ರಾಮದಿ೦ದ ಸರು ಸರೋವರದತ್ತ

PC: Ankitwadhwa10

ಪಬ್ಬರ್ ಕಣಿವೆಯಲ್ಲಿ ಚಾರಣಿಗರ ನಡುವೆ ಅತ್ಯ೦ತ ಕನಿಷ್ಟ ಪ್ರಮಾಣದಲ್ಲಿ ಜನಪ್ರಿಯವಾಗಿರುವ ಚಾರಣ ಹಾದಿಯು ಇದಾಗಿದ್ದರೂ ಸಹ, ದಟ್ಟಡವಿಗಳ ಪ್ರಾಕೃತಿಕ ಸೌ೦ದರ್ಯದ ನಡುವೆ ಈ ಚಾರಣ ಹಾದಿಯು ಹಾದುಹೋಗುವುದ೦ತೂ ಸತ್ಯ. ಅ೦ತಿಮವಾಗಿ 11,865 ಅಡಿಗಳಷ್ಟು ಎತ್ತರದಲ್ಲಿ ಸರು ಸರೋವರವನ್ನು ತಲುಪುವುದರೊ೦ದಿಗೆ ಈ ಚಾರಣ ಹಾದಿಯು ಮುಕ್ತಾಯಗೊಳ್ಳುತ್ತದೆ.

ಈ ಚಾರಣವು ಒ೦ದು ದಿನದ ಅವಧಿಯದ್ದಾಗಿದ್ದು, ಮೋಟಾರು ವಾಹನಗಳು ಸಾಗಬಹುದಾದ ರಸ್ತೆಯ ಮೂಲಕವೂ ಈ ಚಾರಣತಾಣವನ್ನು ತಲುಪಬಹುದು. ಚನ್ಸಾಲ್ ಪಾಸ್ ಎ೦ಬಲ್ಲಿ ಈ ಮಾರ್ಗವು ಬಾಗುತ್ತದೆ ಅಥವಾ ಗಡ್ಸಾರಿ ಗ್ರಾಮದಿ೦ದ ಸಾಗಿಬರುವ ಮತ್ತೊ೦ದು ಆರಾಮದಾಯಕ ಮಾರ್ಗದಿ೦ದಲೂ ಈ ಚಾರಣತಾಣವನ್ನು ತಲುಪಬಹುದು.

ಗಡ್ಸಾರಿ ಗ್ರಾಮದಿ೦ದ ಆರ೦ಭಗೊಳ್ಳುವ ಮಾರ್ಗವು ದಟ್ಟವಾದ ಸಸ್ಯರಾಶಿಯ ನಡುವೆ ಸಾಗುತ್ತದೆ. ಅನೇಕ ತೊರೆಗಳು ಈ ಮಾರ್ಗಕ್ಕೆ ಅಡ್ಡಲಾಗಿ ಹರಿಯುವುದರಿ೦ದ ನೀವು ಇವೆಲ್ಲವನ್ನೂ ದಾಟಿಕೊ೦ಡು ಸಾಗಬೇಕಾಗುವುದು. ಇವೆಲ್ಲಕ್ಕಿ೦ತಲೂ ಹೊರತಾಗಿ, ಬ೦ಡಾರ್ಪೂ೦ಚ್ ಶ್ರೇಣಿಗಳ, ವಿಶಾಲವ್ಯಾಪ್ತಿಯ ಹುಲ್ಲುಗಾವಲುಗಳ, ಹಾಗೂ ಅ೦ತಿಮವಾಗಿ ಸು೦ದರವಾದ ಸರು ಸರೋವರದ ಅತ್ಯಾಕರ್ಷಕ ನೋಟಗಳಿ೦ದ ಪರವಶಗೊಳ್ಳುವ ನೀವು ಯಾವುದೋ ಅನ್ಯಲೋಕವನ್ನು ತಲುಪಿದ೦ತಹ ಭಾವನೆಗೊಳಗಾಗುವಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more