Search
  • Follow NativePlanet
Share
» »ಇವು ವಿಶೇಷವಾದ ದೇವಾಲಯಗಳು...ಒಮ್ಮೆ ಸಂದರ್ಶಿಸಿ

ಇವು ವಿಶೇಷವಾದ ದೇವಾಲಯಗಳು...ಒಮ್ಮೆ ಸಂದರ್ಶಿಸಿ

By Sowmyabhai

ನಮ್ಮ ದೇಶದಲ್ಲಿ ಹಲವಾರು ಚಿತ್ರ ವಿಚಿತ್ರಗಳು ದಿನನಿತ್ಯ ಕಾಣುತ್ತೆವೆ. ಅವುಗಳು ಕೆಲವೊಮ್ಮೆ ಬೆಳಕಿಗೆ ಬಂದರೆ ಇನ್ನೂ ಕೆಲವು ನಮಗೆ ತಿಳಿದಿರುವುದಿಲ್ಲ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ದೇವಾಲಯಗಳು ಪ್ರತಿಯೊಂದು ದೇವಾಲಯಕ್ಕೆ ಅದರದೇ ಆದ ವಿಶಿಷ್ಟತೆಗಳಿವೆ. ಪೂರ್ವದಲ್ಲಿ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಮೊದಲು ಆ ದೇಗುಲಕ್ಕೆ ಒಂದು ಪ್ರತ್ಯೇಕವಾದ ಲಕ್ಷಣವಿರಬೇಕೆಂದು ಕೆಲವು ಅದ್ಭುತಗಳನ್ನು ಸೃಷ್ಟಿಸುತ್ತಿದ್ದರು. ಅವುಗಳಲ್ಲಿ ಕೆಲವು ಹೇಗೆ ಮಾಡಿದರೊ ಎಂಬುದಕ್ಕೆ ಉತ್ತರ ಸಿಕ್ಕಿದ್ದರೆ ಇನ್ನೂ ಕೆಲವು ಅದ್ಭುತಗಳಿಗೆ ಉತ್ತರ ಸಿಗದೆ ರಹಸ್ಯವಾಗಿಯೇ ಉಳಿದಿದೆ. ಆದರೆ ಕೆಲವು ದೇವಾಲಯಗಳು ವಿಭಿನ್ನವಾದ ಆಚಾರಗಳಿಗೂ ವಿಶಿಷ್ಟತೆ ಹೊಂದಿವೆ.

1.ವೇಲೂರು ದೇವಾಲಯ

1.ವೇಲೂರು ದೇವಾಲಯ

PC:James_1972

ತಮಿಳುನಾಡಿನ ವೇಲೂರು ಎಂಬಲ್ಲಿ ಒಂದು ದೇವಾಲಯವಿದೆ. ಈ ದೇವಾಲಯದಲ್ಲಿ ಪ್ರತ್ಯೇಕವಾದ ಸನ್ ಡಯಾಲ್ ಇದೆ. ಈ ಸನ್ ಡಯಾಲ್ ದೇವಾಲಯದ ಸ್ತಂಭಗಳಲ್ಲಿ ಅರ್ಧಚಂದ್ರಕಾರದಂತೆ ಇದ್ದು 1 ರಿಂದ 6 ರವರೆ ಹಾಗೂ 6 ರಿಂದ 1 ರವರೆಗೆ ಸಂಖ್ಯೆಗಳಿರುತ್ತವೆ. ಅರ್ಧಚಂದ್ರಕಾರದ ಮೇಲೆ ಒಂದು ಹೂವು ಇಟ್ಟರೆ ಸಂಖ್ಯೆಗಳ ಮೇಲೆ ನೆರಳು ಬೀಳುತ್ತದೆ. ನೆರಳು ಯಾವ ಸಂಖ್ಯೆಯ ಮೇಲೆ ನೆರಳು ಬೀಳುತ್ತದೆಯೋ ಅದೇ ಗಡಿಯಾರದ ನಿರ್ಧಿಷ್ಟವಾದ ಸಮಯವಾಗಿರುತ್ತದೆ. ಒಂದು ಸ್ತಂಭ ನಿರ್ಧಿಷ್ಟವಾದ ಅವಧಿಯನ್ನು ತೋರಿಸುವುದು ಆಶ್ಚರ್ಯವೇ ಸರಿ.

2.ಗುರುದ್ವಾರ

2.ಗುರುದ್ವಾರ

PC:Jed Blues

ಗುರುದ್ವಾರದ ಹಳ್ಳಿಯಲ್ಲಿರುವ ಜಲಂದರದಲ್ಲಿರುವ ನದಿಯಲ್ಲಿ ತೇಲುತ್ತಿರುವ ಅದೆಷ್ಟೂ ಆಟದ ವಸ್ತುಗಳನ್ನು ಕಾಣಬಹುದಾಗಿದೆ. ಭಕ್ತರು ಇಂತಹ ಆಟದ ವಸ್ತುಗಳನ್ನು ಬಿಡುವ ಕಾರಣ ಹೀಗೆ ಆಟ ಸಾಮನುಗಳನ್ನು ಈ ಪವಿತ್ರ ದೇವಾಲಯದಲ್ಲಿ ಬಿಟ್ಟರೆ ವಿದೇಶಕ್ಕೆ ಹೋಗಲು ವಿಸಾ ದೊರೆಯುತ್ತದೆ ಎಂಬ ಕಾರಣದಿಂದ ಹೀಗೆ ಮಾಡುತ್ತಾರೆ.

3.ಐರಾವತೇಶ್ವರ ದೇವಾಲಯ

3.ಐರಾವತೇಶ್ವರ ದೇವಾಲಯ

PC:YOUTUBE

ತಮಿಳುನಾಡಿನ ಕುಂಭಕುಣಂನಲ್ಲಿ ತಾರಾಸುರ ಎಂಬ ಗ್ರಾಮದಲ್ಲಿ ಐರಾವತೇಶ್ವರ ಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಇಲ್ಲಿನ ಶಿಲ್ಪಕಲಾ ಚಾರ್ತುಯತೆಗೆ ಅತ್ಯಂತ ಪ್ರಖ್ಯಾತ ಹೊಂದಿದ ದೇವಾಲಯವಾಗಿದೆ. ಇಲ್ಲಿ 2 ಸ್ತಂಭಗಳಲ್ಲಿ ವಾಲಿ ಹಾಗೂ ಸುಗ್ರೀವರ ಯುದ್ಧದಲ್ಲಿ ರಾಮ ವಾಲಿಯನ್ನು ಕೊಲ್ಲುವ ಸನ್ನಿವೇಶವನ್ನು ಚಿತ್ರಿಸಿದ್ದಾರೆ. ಇಲ್ಲಿನ ವಿಶಿಷ್ಟತೆ ಏನೆಂದರೆ ಒಂದು ಸ್ತಂಭದಿಂದ ನೋಡಿದರೆ ವಾಲಿ ಸುಗ್ರೀವ ಮಾತ್ರ ಕಾಣುತ್ತಾರೆ. ಇನ್ನೊಂದು ಸ್ತಂಭದಿಂದ ನೋಡಿದರೆ ರಾಮ ಸ್ಪಷ್ಟವಾಗಿ ಕಾಣುತ್ತಾನೆ. ಇದು ಅಂದಿನ ಶಿಲ್ಪಿಗಳ ಮಹೋನ್ನತ ಕಲಾ ಕೌಶಲ್ಯಕ್ಕೆ ಸಾಕ್ಷಿ ಎನ್ನಬಹುದಾಗಿದೆ.

4.ಕುಂಭಕೋಣಂ ವಿಷ್ಣು ಮೂರ್ತಿ ದೇವಾಲಯ

4.ಕುಂಭಕೋಣಂ ವಿಷ್ಣು ಮೂರ್ತಿ ದೇವಾಲಯ

PC:YOUTUBE

ಕುಂಣಕೋಣಂನ ನಾಚ್ಚಿಯಾರ್ ಕೋವೆಲ್ ಎಂಬ ಪ್ರದೇಶದಲ್ಲಿ ವಿಷ್ಣು ಮೂರ್ತಿ ದೇವಾಲಯವಿದೆ. ಅಲ್ಲಿನ ಉತ್ಸವದ ಸಮಯದಲ್ಲಿ ಸ್ವಾಮಿಯ ಉತ್ಸವ ವಿಗ್ರಹಗಳನ್ನು ಕಲ್ಲಿನಿಂದ ನಿರ್ಮಿಸಿದ ಗರುಡವಾಹನದ ಮೇಲೆ ಉತ್ಸವ ನಡೆಸುತ್ತಾರೆ.

ಉತ್ಸವಕೆಂದು ಮೂರ್ತಿಯನ್ನು ಕೇವಲ 4 ಜನರು ತೆಗೆದುಕೊಂಡು ಬರುತ್ತಾರೆ. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಉತ್ಸವ ಮೂರ್ತಿಯು 8 ಜನರು ಹಿಡಿದುಕೊಳ್ಳಬೇಕಾದಷ್ಟು ಭಾರವಾಗುತ್ತದೆ. ನಂತರ 16 ಮಂದಿ ಕ್ರಮೇಣ 30 ಜನರು ನಂತರ 62 ಜನರು ಹಿಡಿದುಕೊಳ್ಳಬೇಕಾದ ಭಾರವಾಗುತ್ತಾ ಬರುತ್ತದೆ. ಉತ್ಸವ ಮೂರ್ತಿಯ ಭಾರವು ಕ್ರಮೇಣ ದುಪ್ಪಟ್ಟುವಾಗುತ್ತಾ ಹೋಗುತ್ತದೆ. ಇದು ನಂಬಲು ಅಸಾಧ್ಯವಾದರೂ ಇದು ನಿಜ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X