Search
  • Follow NativePlanet
Share
» »ಮೇಘಾಲಯದ ಉಮ್ಮಂಗೋಟ್ ನದಿ ಸುತ್ತಮುತ್ತಲಿನ ಆಕರ್ಷಣೆಗಳಿವು

ಮೇಘಾಲಯದ ಉಮ್ಮಂಗೋಟ್ ನದಿ ಸುತ್ತಮುತ್ತಲಿನ ಆಕರ್ಷಣೆಗಳಿವು

ಕೇಬಲ್ ಸೇತುವೆ ಭಾರತ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುತ್ತದೆ. ಬಾಂಗ್ಲಾದೇಶದ ಪರ್ವತ ಶಿಖರಗಳು ಮತ್ತು ಬಯಲು ಪ್ರದೇಶಗಳ ಸುಂದರ ನೋಟವನ್ನು ಈ ಸೇತುವೆಯ ಮೇಲೆ ನಡೆದುಕೊಂಡು ಹೋಗುವಾಗ ಕಾಣಬಹುದು .

ಭಾರತದಲ್ಲಿನ ಅನೇಕ ರಸ್ತೆಗಳು ಸುಸಜ್ಜಿತವಾಗಿದ್ದರೂ, ಇಂದಿಗೂ ಸಹ ಹಲವು ಹಳ್ಳಿಗಳು ಸೇತುವೆಯನ್ನೇ ಅವಲಂಬಿಸಿವೆ. ಈಶಾನ್ಯ ರಾಜ್ಯದ ಮೇಘಾಲಯವು ನದಿಗಳ ನೈಸರ್ಗಿಕ ವೈಭವ, ಬುಡಕಟ್ಟು ಸಂಸ್ಕೃತಿ, ಇತಿಹಾಸ ಮತ್ತು ವನ್ಯಜೀವಿಗಳ ವಾಸಸ್ಥಾನವಾಗಿದೆ.

ಬಾಂಗ್ಲಾದೇಶ ಮತ್ತು ಭಾರತದ ಗಡಿಯುದ್ದಕ್ಕೂ ನೆಲೆಸಿರುವ ಡಾವ್ಕಿ ಮೇಘಾಲಯದಲ್ಲಿನ ವಿಲಕ್ಷಣ ಪಟ್ಟಣ. ಇದು ಶಿಲ್ಲಾಂಗ್‌ನಿಂದ ಸುಮಾರು 82 ಕಿ.ಮೀ. ದೂರದಲ್ಲಿದೆ ಮತ್ತು ಏಷ್ಯಾದ ಸ್ವಚ್ಛವಾದ ಹಳ್ಳಿಗಳಲ್ಲಿ ಒಂದಾದ ಮಾವ್ಲಿನಾಂಗ್‌ಗೆ ಸಮೀಪದಲ್ಲಿದೆ. ಡಾವ್ಕಿಯ ಆಕರ್ಷಣೆಗಳಲ್ಲಿ ಉಮ್ಮಂಗೋಟ್ ನದಿ ಕೂಡಾ ಒಂದು.

ಬೋಟ್ ರೇಸ್

ಬೋಟ್ ರೇಸ್

PC: Jyotishkardey
ಕೇಬಲ್ ಸೇತುವೆ ಭಾರತ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುತ್ತದೆ. ಬಾಂಗ್ಲಾದೇಶದ ಪರ್ವತ ಶಿಖರಗಳು ಮತ್ತು ಬಯಲು ಪ್ರದೇಶಗಳ ಸುಂದರ ನೋಟವನ್ನು ಈ ಸೇತುವೆಯ ಮೇಲೆ ನಡೆದುಕೊಂಡು ಹೋಗುವಾಗ ಕಾಣಬಹುದು . ಪ್ರತಿವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ಬೋಟ್ ರೇಸ್ ನಡೆಯುತ್ತದೆ. ಸರೋವರದ ಸೌಂದರ್ಯವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ಬೋಟ್ ಸವಾರಿ. ಬಾಂಗ್ಲಾದೇಶ ಮತ್ತು ಭಾರತೀಯ ಮೀನುಗಾರರಿಗೆ ಉಮ್ಂಗೋಟ್ ನದಿಯು ಪ್ರಮುಖ ಮೀನುಗಾರಿಕಾ ಸ್ಥಳವಾಗಿದೆ.

ಜಾಫ್ಲಾಂಗ್ ಝೀರೊ ಪಾಯಿಂಟ್

ಜಾಫ್ಲಾಂಗ್ ಝೀರೊ ಪಾಯಿಂಟ್

PC:Bijoy91
ಜಾಫ್ಲಾಂಗ್ ಝೀರೊ ಪಾಯಿಂಟ್ ಡಾವ್ಕಿ ಮಾರುಕಟ್ಟೆಗೆ ಸುಮಾರು ಒಂದು ಕಿ.ಮೀ. ದೂರದಲ್ಲಿದೆ . ಇದು ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿದೆ. ಇದು ಉಮ್ಂಗೋಟ್ ನದಿಯು ನೆರೆಯ ಬಾಂಗ್ಲಾದೇಶಕ್ಕೆ ಹರಿಯುತ್ತದೆ. ಮಾವ್ಲಿನಾಂಗ್ ಏಷ್ಯಾದ ಸ್ವಚ್ಛವಾದ ಹಳ್ಳಿ ಎಂದು ಖ್ಯಾತಿ ಪಡೆದಿದೆ. ಮೇಘಾಲಯದ ಪರ್ವತ ಶಿಖರಗಳ ಮಧ್ಯೆ ನೆಲೆಸಿರುವ ಮವ್ಲಿನಾಂಗ್ 80 ಮನೆಗಳಿಂದ ಕೂಡಿರುವ ಒಂದು ಚಿಕ್ಕದಾದ ಹಳ್ಳಿ. ಹಳ್ಳಿಯ ಮೂಲಕ ಅಲೆದಾಡುವ ಸಂದರ್ಭದಲ್ಲಿ, ನೀವು ಮನೆಗಳ ಕ್ರಮಬದ್ಧವಾದ ಸಾಲುಗಳಿಂದ ಪ್ರಭಾವಿತರಾಗುವಿರಿ ಮತ್ತು ಪ್ರತಿ ಮನೆಯು ಒಂದು ಪ್ರಾಣಿ, ಹೂವು ಮತ್ತು ತರಕಾರಿ ತೋಟವನ್ನು ಹೊಂದಿದೆ. ಇದು ಡಾವ್ಕಿಯಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ.

ಲಿವಿಂಗ್ ರೂಟ್ ಸೇತುವೆ

ಲಿವಿಂಗ್ ರೂಟ್ ಸೇತುವೆ

PC: AditiVerma2193
ಈ ಸೇತುವೆಯು 300 ವರ್ಷಗಳಷ್ಟು ಹಳೆಯದಾಗಿದೆ ಎಂದು ನಂಬಲಾಗಿದೆ. ಇದನ್ನು ಹಲವಾರು ಬುಡಕಟ್ಟು ಜನಾಂಗದವರು ನಿರ್ಮಿಸಿದ್ದಾರೆ. ರಿವಾಯ್ ಗ್ರಾಮವು ಸಿಟ್ರಸ್ ಹಣ್ಣುಗಳನ್ನು ಹೊಂದಿರುವ ರಾಬಾಬ್ ಟೆಂಗ ಮರಗಳನ್ನು ಹೇರಳವಾಗಿ ಹೊಂದಿದೆ. ಲಿವಿಂಗ್ ರೂಟ್ ಸೇತುವೆಯಿಂದ 5 ಕಿ.ಮೀ ದೂರದಲ್ಲಿ ನಿರಿಯಾಂಗ್ ಫಾಲ್ಸ್ ಇದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Vikramjit Kakati
ಉಮಾಂಗ್ಔಟ್ ನದಿಯನ್ನು ಭೇಟಿ ಮಾಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮೇ. ಮಾನ್ಸೂನ್ ಸಮಯದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾಗಿದ್ದು, ಬೋಟಿಂಗ್ ಚಟುವಟಿಕೆಯನ್ನು ಈ ಅವಧಿಯಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಚಳಿಗಾಲವು ಸಾಮಾನ್ಯವಾಗಿ ತಂಪಾಗಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನದ ಮೂಲಕ: ಗುವಾಹಾಟಿಯಲ್ಲಿರುವ ಲೋಕ್ಪ್ರಿಯ ಗೋಪಿನಾಥ್ ಬೋರ್ಡೋಲೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಡಾವ್ಕಿ ಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಗುವಾಹಾಟಿಯಿಂದ ಶಿಲ್ಲಾಂಗ್‌ಗೆ ಹೆಲಿಕಾಪ್ಟರ್ ಸೇವೆ ಲಭ್ಯವಿದೆ. ಶಿಲ್ಲಾಂಗ್ ನಿಂದ, ನೀವು ಡಾವ್ಕಿ ಯನ್ನು ರಸ್ತೆಯ ಮೂಲಕ ತಲುಪಬಹುದು.
ರೈಲಿನ ಮೂಲಕ: ಗುವಾಹಾಟಿ ರೈಲ್ವೆ ನಿಲ್ದಾಣವು ಖಾಸಗಿ ಮತ್ತು ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್ ಸೇವೆಗಳು ಡಾವ್ಕಿ ಗೆ ತಲುಪಲು ಇರುವ ಹತ್ತಿರದ ನಿಲ್ದಾಣವಾಗಿದೆ.
ಬಸ್ ಮೂಲಕ: ಡಾವ್ಕಿ ಶಿಲ್ಲಾಂಗ್‌ನಿಂದ ಸುಮಾರು 90 ಕಿ.ಮೀ. ದೂರದಲ್ಲಿದ್ದು, ಖಾಸಗಿ ಮತ್ತು ರಾಜ್ಯ ಬಸ್ಸುಗಳು ಶಿಲ್ಲಾಂಗ್‌ನಿಂದ ಇವೆ. ಶಿಲ್ಲಾಂಗ್‌ನಲ್ಲಿ ಡಾವ್ಕಿ ಗೆ ಬಡಾ ಬಜಾರ್‌ನಿಂದ ಕೂಡ ಬಸ್ಸುಗಳು ಬರುತ್ತವೆ.

Read more about: meghalaya ಮೇಘಾಲಯ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X