Search
  • Follow NativePlanet
Share
» »ಚುಂಬಕದಂತೆ ಆಕರ್ಷಿಸುವ ಎರಡು ಕುತೂಹಲಕರ ಗುಹೆಗಳು!

ಚುಂಬಕದಂತೆ ಆಕರ್ಷಿಸುವ ಎರಡು ಕುತೂಹಲಕರ ಗುಹೆಗಳು!

By Vijay

ಇವು ಎರಡು ಗುಹಾ ಸಮೂಹಗಳಾಗಿದ್ದು ಪ್ರವಾಸಿಗರಲ್ಲಿ ಸಾಕಷ್ಟು ಕುತೂಹಲ ಕೆರಳಿಸುತ್ತವೆ. ವಿಶೇಷವೆಂದರೆ ಈ ಗುಹೆಗಳಲ್ಲಿ ಕೆಲವು ಗುಹೆಗಳು ಪ್ರಕೃತಿ ಸಹಜ ಗುಹೆಗಳಾಗಿದ್ದರೆ ಮತ್ತೆ ಕೆಲವು ಮಾನವ ನಿರ್ಮಿತ ಗುಹೆಗಳಾಗಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇವು ಅರ್ಧ ನಿಸರ್ಗ ಹಾಗೂ ಅರ್ಧ ಕೃತಕ ಗುಹೆಗಳಾಗಿದ್ದು ಪ್ರಮುಖ ಪ್ರವಾಸಿ ತಾಣವಾಗಿದೆ.

ಚಕಿತಗೊಳಿಸುತ್ತವೆ, ಈ ಗುಹಾಂತರ ದೇವಾಲಯಗಳು!

ಇನ್ನೊಂದು ಗಮನಿಸ ಬೇಕಾದ ಅಂಶವೆಂದರೆ ಈ ಗುಹೆಗಳು ಪುರಾತತ್ವ ಶಾಸ್ತ್ರಜ್ಞರಿಗೆ, ಇತಿಹಾಸಕಾರರಿಗೆ ಹಾಗೂ ಧಾರ್ಮಿಕ ಆಸಕ್ತರಿಗೆ ಬೇಕಾದ ಗುಹೆಗಳಾಗಿವೆ. ಅಂದರೆ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಸಾಕಷ್ಟು ಮಹತ್ವಗಳಿಸಿದ ಗುಹೆಗಳಾಗಿವೆ ಇವು. ಇವುಗಳನ್ನು ಉದಯಗಿರಿ ಹಾಗೂ ಖಂಡಗಿರಿ ಗುಹೆಗಳೆಂದು ಕರೆಯುತ್ತಾರೆ.

ಪ್ರಸ್ತುತ ಲೇಖನದ ಮೂಲಕ ಈ ಎರಡೂ ಗುಹೆಗಳ ಕುರಿತು ಮಾಹಿತಿ ಪಡೆಯಿರಿ ಹಾಗೂ ನಿಮಗೆ ಅವಕಾಶ ಸಿಕ್ಕರೆ ಈ ಸುಂದರ ಹಾಗೂ ಅದ್ಭುತ ಗುಹಾ ರಚನೆಗಳಿಗೊಮ್ಮೆ ಭೇಟಿ ನೀಡಿ.

ಎಲ್ಲಿ?

ಎಲ್ಲಿ?

ಉದಯಗಿರಿ ಹಾಗೂ ಖಂಡಗಿರಿ ಗುಹೆಗಳು ಭಾರತದ ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರ ನಗರ ಕೇಂದ್ರದಿಂದ ಸುಮಾರು ಆರು ಕಿ.ಮೀ ಗಳಷ್ಟು ದೂರದಲ್ಲಿರುವ ಎರಡು ಗುಡ್ಡಗಳಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Itikanta Mohapatra

ಗುಹಾ ತಾಣ

ಗುಹಾ ತಾಣ

ವಿಶಾಲವಾದ ಸಮತಟ್ಟಾದ ಮೈದಾನದಲ್ಲಿ ಎರಡು ಗುಡ್ಡಗಳು ವಿಚಿತ್ರವಾಗಿ ನೆಲೆಸಿದ್ದು ಆ ಗುಡ್ಡಗಳಲ್ಲಿ ಈ ಗುಹೆಗಳನ್ನು ನೋಡಬಹುದಾಗಿದೆ. ಅಂತೆಯೆ ಒಂದು ಗುಡ್ಡದಲ್ಲಿರುವ ಗುಹೆಗಳನ್ನು ಉದಯಗಿರಿ ಗುಹೆಗಳು ಎಂತಲೂ ಇನ್ನೊಂದರಲ್ಲಿರುವ ಗುಹೆಗಳನ್ನು ಖಂಡಗಿರಿ ಎಂತಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Kamalakanta777

ಇಂದು ಉತ್ತಮ ಪಿಕ್ನಿಕ್ ಸ್ಪಾಟ್

ಇಂದು ಉತ್ತಮ ಪಿಕ್ನಿಕ್ ಸ್ಪಾಟ್

ಹೆಸರೆ ಸೂಚಿಸುವ ಹಾಗೆ ಈ ಎರಡು ಗುಡ್ಡಗಳನ್ನು ಉದಯಗಿರಿ ಗುಡ್ಡ ಹಾಗೂ ಖಂಡಗಿರಿ ಗುಡ್ಡ ಎಂದು ಕರೆಯಲಾಗುತ್ತದೆ. ಹಿಂದೆ ಖಂಡಗಿರಿಯನ್ನು ಕುಮಾರ ಪರ್ವತ ಹಾಗೂ ಉದಯಗಿರಿಯನ್ನು ಕುಮಾರಿ ಪರ್ವತ ಎಂದು ಕರೆಯುತ್ತಿದ್ದರು.

ಚಿತ್ರಕೃಪೆ: Krishnan Iyer

ಆಕರ್ಷಕ ಕೆತ್ತನೆಗಳು

ಆಕರ್ಷಕ ಕೆತ್ತನೆಗಳು

ಪ್ರತಿ ಗುಡ್ಡದಲ್ಲಿ ಗುಹೆಗಳಿವೆ. ಉದಯಗಿರಿಯಲ್ಲಿ 18 ಗುಹೆಗಳಿದ್ದರೆ, ಖಂಡಗಿರಿಯಲ್ಲಿ 15 ಗುಹೆಗಳಿವೆ. ಈ ಗುಹೆಗಳನ್ನು ಕಳಿಂಗ ಸಾಮ್ರಾಜ್ಯದ ದೊರೆಯಾದ ಖಾರವೇಲನ ಸಮಯದಲ್ಲಿ ಕೆತ್ತಲಾದ ಗುಹೆಗಳೆಂದು ಇತಿಹಾಸದಿಂದ ತಿಳಿದುಬರುತ್ತದೆ. ಅಂದರೆ ಸುಮಾರು ಒಂದು ಅಥವಾ ಎರಡನೇಯ ಶತಮಾನದಲ್ಲಿ ನಿರ್ಮಿತವಾದ ಗುಹೆಗಳು ಇವಾಗಿವೆ.

ಚಿತ್ರಕೃಪೆ: Kamalakanta777

ಚಿಕ್ಕ ಗುಹೆ

ಚಿಕ್ಕ ಗುಹೆ

ಈ ಗುಹೆಗಳನ್ನು ಪ್ರಮುಖವಾಗಿ ಜೈನ ಸನ್ಯಾಸಿಗಳು ವಾಸಿಸಲು ಅನುಕೂಲವಾಗುವಂತೆ ನಿರ್ಮಿಸಲಾದವುಗಳಾಗಿವೆ ಎಂದು ನಂಬಲಾಗುತ್ತದೆ. ಗುಹಾ ರಚನೆಯು ಸಾಕಷ್ಟು ಚಿಕ್ಕದಾಗಿದ್ದು ಸರಿಯಾಗಿ ಎದ್ದು ನಿಲ್ಲಲೂ ಆಗದಷ್ಟಿವೆ. ಇವು ಪ್ರಮುಖವಾಗಿ ಧ್ಯಾನಕ್ಕೆಂದು ಬಳಸಲ್ಪಡುತ್ತಿದ್ದವು.

ಚಿತ್ರಕೃಪೆ: Thamizhpparithi Maari

ಎರಡು ಅಂತಸ್ತಿನ ಕೆತ್ತನೆ

ಎರಡು ಅಂತಸ್ತಿನ ಕೆತ್ತನೆ

ಉದಯಗಿರಿಯನ್ನು ಅನ್ವೇಷಿಸುವಾಗ ಸಾಮಾನ್ಯವಾಗಿ ಎಲ್ಲರ ಗಮನ ಸೆಳೆವ ಗುಹೆಯೆಂದರೆ ಒಂದನೇಯ ಗುಹೆ. ಇದನ್ನು ರಾಣಿ ಗುಂಫಾ ಅಥವಾ ರಾಣಿಯ ಗುಹೆ ಎಂದು ಕರೆಯುತ್ತಾರೆ. ಇದು ಎರಡು ಅಂತಸ್ತುಗಳುಳ್ಳ ಗುಹಾ ರಚನೆಯಾಗಿದೆ.

ಚಿತ್ರಕೃಪೆ: Bernard Gagnon

ನೋಡಲೇಬೇಕಾದ ಸ್ಥಳ

ನೋಡಲೇಬೇಕಾದ ಸ್ಥಳ

ಈ ಎರಡೂ ಗುಡ್ಡಗಲಲ್ಲಿ ಕೆತ್ತಲಾದ ಗುಹೆಗಳೆಷ್ಟು ಎಂಬುದರ ಕುರಿತು ಗೊಂದಲವಿದೆಯಾದರೂ ಪ್ರಸ್ತುತ ಕಣ್ಣಿಗೆ ಕಾಣಿಸುವ ಗುಹೆಗಳು ಉದಯಗಿರಿಯಲ್ಲಿ 18 ಹಾಗೂ ಖಂಡಗಿರಿಯಲ್ಲಿ 15.

ಚಿತ್ರಕೃಪೆ: Bernard Gagnon

ಅದ್ಭುತ ಕಲೆ

ಅದ್ಭುತ ಕಲೆ

ಉದಯಗಿರಿಯಲ್ಲಿ ಹಾತಿ ಗುಂಫಾ ಹಾಗೂ ಗಣೇಶ ಗುಂಫಾ ಸಾಕಷ್ಟು ಪ್ರಸಿದ್ಧಿ ಪಡೆದ ಗುಹೆಗಳಾಗಿವೆ. ಏಕೆಂದರೆ ಈ ಗುಹೆಗಳು ಅತ್ಯಂತ ಪ್ರಾಚೀನ ಸಮಯದಲ್ಲೆ ಚಾಲ್ತಿಯಲ್ಲಿದ್ದ ಅದ್ಭುತ ಕಲೆಗಾರಿಕೆಗೆ ಸಾಕ್ಷಿಯಾಗಿವೆ. ಹಾತಿ ಗುಂಫಾ.

ಚಿತ್ರಕೃಪೆ: Abinash Gupta

ಖಂಡಗಿರಿ

ಖಂಡಗಿರಿ

ಇವನ್ನು ಹೊರತುಪಡಿಸಿದರೆ ಖಂಡಗಿರಿಯ ಮೂರನೇಯ ಗುಹೆಯಾದ ಅನಂತ ಗುಹೆಯೂ ಸಹ ಆಕರ್ಷಕ ಕೆತ್ತನೆಗಳನೊಳಗೊಂಡಿದೆ. ಆನೆ, ಮಹಿಳೆಯರು, ಕ್ರೀಡಾಪಟುಗಳು ಹೀಗೆ ವೈವಿಧ್ಯಮಯ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Zing007

ಐತಿಹಾಸಿಕ ಮಹತ್ವ

ಐತಿಹಾಸಿಕ ಮಹತ್ವ

ಹಾತಿ ಗುಂಫಾ (ಆನೆಯ ಗುಹೆ) ಐತಿಹಾಸಿಕವಾಗಿ ಸಾಕಷ್ಟು ಮಹತ್ವಗಳಿಸಿದೆ. ಎಕೆಂದರೆ ಇಲ್ಲಿ ಹಾತಿ ಗುಂಫಾ ಶಾಸನವನ್ನು ಕಾಣಬಹುದಾಗಿದೆ. ಈ ಶಾಸನವನ್ನು ಕಳಿಂಗ ದೊರೆ ಖಾರವೇಲನೆ ಸ್ವತಃ ಎರಡನೇಯ ಶತಮಾನದಲ್ಲಿ ಬರೆದಿದ್ದಾನೆನ್ನಲಾಗಿದೆ.

ಚಿತ್ರಕೃಪೆ: Bernard Gagnon

ಅತಿ ಪುರಾತನ

ಅತಿ ಪುರಾತನ

ಉಳಿದಂತೆ ಚಿಕ್ಕ ಪುಟ್ಟ ಶಾಸನಗಳು ಸಹ ಇಲ್ಲಿ ದೊರೆತಿದ್ದು, ಅವು ನಿರ್ದಿಷ್ಟ ಗುಹೆ ಯಾರಿಗೆ ಮುಡಿಪಾಗಿದೆಯೆಂದು ಸೂಚಿಸುತ್ತವೆ. ಈ ಶಾಸನಗಳಿಂದ ಇತಿಹಾಸ ಪಂಡಿತರು ಆ ಸಮಯದಲ್ಲಿನ ಸಾಕಷ್ಟು ವಿಷಯಗಳನ್ನು ಅರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರಕೃಪೆ: Thamizhpparithi Maari

ಭುವನೇಶ್ವರದ ಹೆಮ್ಮೆ

ಭುವನೇಶ್ವರದ ಹೆಮ್ಮೆ

ಶ್ರೀಮಂತ ಐತಿಹಾಸಿಕ ಹಿನ್ನಿಲೆಯುಳ್ಳ ಈ ಅದ್ಭುತ ಗುಹೆಗಳು ಒಂದೊಮ್ಮೆಯಾದರೂ ಇತಿಹಾಸ ಪ್ರಿಯ ಪ್ರವಾಸಿಗರು ನೋಡಲೇಬೇಕಾದ ಆಕರ್ಷಣೆಯಾಗಿದೆ. ಈ ತಾಣಕ್ಕೆ ಪ್ರವೇಶ ಶುಲ್ಕವಿದೆ. ಆದರೆ ಹದಿನೈದು ವರ್ಷಕ್ಕಿಂತ ಕಡಿಮೆಯಿರುವವರು ಮುಕ್ತವಾಗಿ ಪ್ರವೇಶಿಸಬಹುದು.

ಚಿತ್ರಕೃಪೆ: Subhodeepmukherjee1985

ಇಲ್ಲಿದೆ ಮಾರ್ಗ

ಇಲ್ಲಿದೆ ಮಾರ್ಗ

ಭುವನೇಶ್ವರ ನಗರ ಕೇಂದ್ರದಿಂದ ಇಲ್ಲಿಗೆ ತೆರಳಲು ಸಾಕಷ್ಟು ಬಸ್ಸು ಹಾಗೂ ಬಾಡಿಗೆ ಟ್ಯಾಕ್ಸಿಗಳು ಸುಅಲಭವಾಗಿ ದೊರೆಯುತ್ತವೆ. ಅಲ್ಲದೆ ಈ ಗುಹೆಗಳು ನಗರದಿಂದ ಕೇವಲ ಆರು ಕಿ.ಮೀ ದೂರವಿದೆ. ಇನ್ನೂ ಭುವನೇಶ್ವರು ಭಾರತದ ಪ್ರಮುಖ ನಗರಗಳಲ್ಲೊಂದಾಗಿದ್ದು ಇತರೆ ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Kamalakanta777

ಸುಂದರ ಕೆತ್ತನೆ

ಸುಂದರ ಕೆತ್ತನೆ

ಹಾತಿ ಗುಂಫಾದ ಬಳಿ ಅದ್ಭುತವಾಗಿ ಕೆತ್ತಲಾದ ಆನೆಗಳು. ಆ ಸಮಯದಲ್ಲೆ ಕಲಾ ಕೌಶಲ್ಯತೆ ಹೇಗಿತ್ತೆಂದು ಇದರಿಂದ ಅರಿಯಬಹುದಲ್ಲವೆ!

ಚಿತ್ರಕೃಪೆ: Sailesh Patnaik

ಅರಳಿದ ಕಲಾ ವಿಸ್ಮಯ

ಅರಳಿದ ಕಲಾ ವಿಸ್ಮಯ

ಇದು ಗಣೇಶ ಗುಂಫಾ. ಇಲ್ಲಿಯೂ ಸಹ ಸಾಕಷ್ಟು ಆಕರ್ಷಕವಾಗಿ ಕೆತ್ತಲಾದ ರಚನೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Bernard Gagnon

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X