Search
  • Follow NativePlanet
Share
» »ಬೆಂಗಳೂರಿನ ತುರಾಹಳ್ಳಿ ಅರಣ್ಯಕ್ಕೆ ಹೋಗಿದ್ದೀರಾ?

ಬೆಂಗಳೂರಿನ ತುರಾಹಳ್ಳಿ ಅರಣ್ಯಕ್ಕೆ ಹೋಗಿದ್ದೀರಾ?

ಬೆಂಗಳೂರಿನ ಸುತ್ತಮುತ್ತಲು ಕಾಡನ್ನು ನೋಡಿದ್ದೀರಾ? ಬೆಂಗಳೂರು ನಗರದಲ್ಲಿ ಕಾಡು ಕಾಣಸಿಗೋದು ಬಹಳ ಕಡಿಮೆ ಅಂತಾನೇ ಹೇಳಬಹುದು. ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ನಾಶಮಾಡಲಾಗಿದೆ. ಹೀಗಿರುವಾಗ ಬೆಂಗಳೂರಿನಲ್ಲಿರುವ ತುರಾಹಲ್ಲಿ ಕಾಡಿನ ಬಗ್ಗೆ ಗೊತ್ತಾ? ಇದು ಬೆಂಗಳೂರಿನಿಂದ ಹೆಚ್ಚೇನೂ ದೂರದಲ್ಲಿಲ್ಲ.

 ಕನಕಪುರ ರಸ್ತೆ

ಕನಕಪುರ ರಸ್ತೆ

PC: Shashank Bhagat

ತುರಾಹಳ್ಳಿ ಅರಣ್ಯ ಅಥವಾ ತುರಾಹಳ್ಳಿಪಾರ್ಕ್ ಒಣ ಮತ್ತು ಪತನಶೀಲ ಅರಣ್ಯವಾಗಿದೆ. ಇದು ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ 20 ಕಿ.ಮೀ ದೂರದಲ್ಲಿದೆ. ಬನಶಂಕರಿಯಿಂದ 13 ಕಿಮೀ ದೂರದಲ್ಲಿದೆ. ಪಾರ್ಕ್‌ನ ಒಳಗೆ ವಾಹನಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಇದು ಸೈಕ್ಲಿಸ್ಟ್‌ಗಳು, ಜಾಗರ್‌ಗಳು, ವಾಕಿಂಗ್‌ ಹೋಗುವವರು, ಬೆಟ್ಟ ಹತ್ತುವವರಿಗೆ ಇದೊಂದು ಉತ್ತಮ ತಾಣವಾಗಿದೆ.

ತುಮಕೂರಿನಲ್ಲಿನ ಸಿದ್ಧರ ಬೆಟ್ಟ, ಗೊರವನಹಳ್ಳಿ ಲಕ್ಷ್ಮೀ ಮಂದಿರ ನೋಡಿದ್ದೀರಾ? ತುಮಕೂರಿನಲ್ಲಿನ ಸಿದ್ಧರ ಬೆಟ್ಟ, ಗೊರವನಹಳ್ಳಿ ಲಕ್ಷ್ಮೀ ಮಂದಿರ ನೋಡಿದ್ದೀರಾ?

ಛಾಯಾಗ್ರಾಹಕರಿಗೆ ಸೂಕ್ತವಾದ ತಾಣ

ಛಾಯಾಗ್ರಾಹಕರಿಗೆ ಸೂಕ್ತವಾದ ತಾಣ

PC: Sagar Sakre

ಹಕ್ಕಿ ವೀಕ್ಷಕರಿಗೆ ಮತ್ತು ಛಾಯಾಗ್ರಾಹಕರಿಗೆ ಸರಿಯಾದ ಶಾಟ್ ಪಡೆಯಲು ಅರಣ್ಯವು ಪ್ರೇರಣೆ ನೀಡುತ್ತದೆ. ತುರಾಹಲ್ಲಿ ಬೆಳಿಗ್ಗೆ ಅಥವಾ ಸಂಜೆಯ ವಾಕಿಂಗ್‌ಗೆ ಉತ್ತಮ ಸ್ಥಳವಾಗಿದೆ. ಈ ಗುಡ್ಡವನ್ನು ಎಲ್ಲಾ ವಯಸ್ಸಿನ ಜನರಿಂದ ಹತ್ತಬಹುದು. ಆದರೆ, ಕತ್ತಲಾದ ನಂತರ ಈ ಪ್ರದೇಶವು ಅಸುರಕ್ಷಿತವಾಗಿರುವುದರಿಂದ ನೀವು ಮುಸ್ಸಂಜೆಯ ಮುಂಚೆ ಹೊರಟು ಹೋದರೆ ಇದು ಸೂಕ್ತವಾಗಿದೆ.

 ದೇವಾಲಯವಿದೆ

ದೇವಾಲಯವಿದೆ

PC: Sagar Sakre

ಈ ಬೆಟ್ಟದ ಮೇಲೆ ಒಂದು ಸಣ್ಣ ದೇವಾಲಯವಿದೆ. ಆರಾಧಕರು ಈ ದೇವಸ್ಥಾನಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಈ ದೇವಾಲಯವು ಪ್ರಶಾಂತತೆ ಮತ್ತು ಸೌಂದರ್ಯದಿಂದ ಸುತ್ತುವರಿದಿದೆ ಮತ್ತು ಐಟಿ ನಗರದ ಸುಂದರ ನೋಟವನ್ನು ಆನಂದಿಸಲು ಇದು ಒಂದು ಉತ್ತಮ ಸ್ಥಳವಾಗಿದೆ. ಬೆಂಗಳೂರಿನ ಸುತ್ತಮತ್ತ ಇನ್ನೂ ಉಳಿದಿರುವ ಏಕೈಕ ಕಾಡು ಇದು ಎಂದರೂ ತಪ್ಪಾಗಲಾರದು.

ಕಾಲ ಕಳೆಯಬಹುದು

ಕಾಲ ಕಳೆಯಬಹುದು

PC:Sagar Sakre

ಒಂದು ವೇಳೆ ನೀವು ಹಲವು ಗಂಟೆಗಳ ವರೆಗೆ ಅಲ್ಲೇ ಕಾಲ ಕಳೆಯಬೇಕೆಂದಿದ್ದರೆ ಕುಡಿಯುವ ನೀರಿನಿಂದ ಹಿಡಿದು ತಿನ್ನುವ ಆಹಾರದ ವರಗೆ ಎಲ್ಲವನ್ನೂ ಒಂದು ಚೀಲದಲ್ಲಿ ಹಾಕಿಕೊಂಡು ಹೋಗಿ.

1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?<br /> 1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?

ಅಕ್ರಮ ಕಸದ ಡಂಪ್

ಅಕ್ರಮ ಕಸದ ಡಂಪ್

PC:Raghuraj Hegde

ಇದು ಅಕ್ರಮ ಕಸದ ಡಂಪ್ ಆಗಿಯೂ ಬಳಸಲ್ಪಟ್ಟಿದೆ, ಇದು ವನ್ಯಜೀವಿಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಿದೆ. ಬೇಸಿಗೆಯಲ್ಲಿ ಆಗಾಗ್ಗೆ ಬೆಂಕಿ, ನೈಸರ್ಗಿಕ ಮತ್ತು ಸ್ಥಳೀಯರು ಉಂಟಾದವುಗಳು, ಈ ಕಾಡಿನಲ್ಲಿ ಬೆಳೆಯುವ ಕೆಲವು ಪ್ರಭೇದ ಸಸ್ಯಗಳ ಮೇಲೆ ಪರಿಣಾಮ ಬೀರಿವೆ. ಬಿಬಿಎಂಪಿ ಕಾಡಿನ ಬಳಿ ಚರಂಡಿ ಸಂಸ್ಕರಣ ಘಟಕವನ್ನು ತೆರೆಯಿತು,

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X