Search
  • Follow NativePlanet
Share
» »ವಿಶ್ವದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ವಿಶ್ವನಾಥ

ವಿಶ್ವದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ವಿಶ್ವನಾಥ

By Vijay

ಭಾರತದ ಉತ್ತರಾಖಂಡವು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದ ರಾಜ್ಯವಾಗಿದೆ. ಹಿಮಾಲಯ ಪರ್ವತ ಶ್ರೇಣಿಯ ಅದ್ಭುತ ನೋಟಗಳನ್ನು ಒದಗಿಸುವ ಹಾಗೂ ಅತಿ ಸನಿಹದಲ್ಲಿರುವ ಈ ರಾಜ್ಯದ ತುಂಬೆಲ್ಲ ಅಪಾರವಾದ ಸಂಖ್ಯೆಯಲ್ಲಿ ಪಾವಿತ್ರ್ಯತೆ ಹೊಂದಿರುವ ಹಿಂದೂ ದೇವಾಲಯಗಳನ್ನು ಕಾಣಬಹುದು.

ಹೋಟೆಲ್ ಮತ್ತು ವಿಮಾನ ಹಾರಾಟ ದರಗಳ ಮೇಲೆ 50% ರಷ್ಟು ಕಡಿತ, ತ್ವರೆ ಮಾಡಿ!

ಹಿಂದೂ ಧರ್ಮದ ಹಲವು ಪೌರಾಣಿಕ ಕಥೆಗಳಲ್ಲಿ ಉಲ್ಲೇಖಗೊಂಡಿರುವ ಸಾಕಷ್ಟು ಸ್ಥಳಗಳು, ದೇವಸ್ಥಾನಗಳು, ನದಿ, ಕೆರೆ, ತೊರೆಗಳು ಇಲ್ಲಿರುವುದರಿಂದ ಉತ್ತರಾಖಂಡ ರಾಜ್ಯವನ್ನು "ದೇವ ಭೂಮಿ" ಎಂಬ ಹೆಸರಿನಿಂದಲೂ ಸಹ ಸಂಭೋದಿಸಲಾಗುತ್ತದೆ. ಈ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ತುಂಗನಾಥವು ಶಿವನ ದೇವಸ್ಥಾನಕ್ಕೆ ಬಹು ಪ್ರಖ್ಯಾತವಾಗಿದೆ.

ವಿಶೇಷ ಲೇಖನ : ಹರಿದ್ವಾರದ ವಿಶೇಷತೆಗಳು

ಕಲ್ಮಶರಹಿತ ವಾತಾವರಣದ, ತಾಜಾ ಹಸಿರಿನ ಛಾಯೆಗಳ, ರುದ್ರಮಯ ಪರ್ವತ ರಹದಾರಿಗಳ, ಗಡ ಗಡ ನಡುಗಿಸುವಂತಹ ಶಿತವಲಯದ ತುಂಗನಾಥದಲ್ಲಿ ನೆಲೆಸಿರುವ ಶಿವನು ವಿಶ್ವದ ಅತಿ ಎತ್ತರದಲ್ಲಿ ನೆಲೆಸಿರುವ ಶಿವನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಹೌದು, ಭೂಮಟ್ಟದಿಂದ ಇಷ್ಟೊಂದು ಎತ್ತರದಲ್ಲಿರುವ ಶಿವನ ಈ ದೇವಸ್ಥಾನವನ್ನು ಪ್ರಪಂಚದಲ್ಲೆಲ್ಲೂ ಕಾಣಲಾಗದು.

ವಿಶೇಷ ಲೇಖನ : ಅತಿ ಎತ್ತರದ ಗಿರಿ ಶಿಖರಗಳು

ಹರಿದ್ವಾರವು ಇಲ್ಲಿಗೆ ತಲುಪಲು ಹತ್ತಿರದಲ್ಲಿರುವ ಸ್ಥಳ. ಹರಿದ್ವಾರದಿಂದ 225 ಕಿ.ಮೀ ಕ್ರಮಿಸಿ ಚೊಪ್ಟಾ ತಲುಪಬೇಕು. ಚೊಪ್ಟಾ ತಲುಪಲು ಹರಿದ್ವಾರದಿಂದ ವಾಹನಗಳು ದೊರೆಯುತ್ತವೆ. ನಂತರ ಚೊಪ್ಟಾದಿಂದ ಕೇವಲ ಟ್ರೆಕ್ ಮೂಲಕ ಮಾತ್ರವೆ ತುಂಗನಾಥ ತಲುಪಬಹುದಾಗಿದೆ.

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಹರಿದ್ವಾರವನ್ನು ದೆಹಲಿಯಿಂದ ಶತಾಬ್ದಿ ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಇದು ದೆಹಲಿಯಿಂದ 212 ಕಿ.ಮೀ ಗಳಷ್ಟು ದೂರವಿದೆ. ಮುಂದೆ ಹರಿದ್ವಾರದಿಂದ ಚೊಪ್ಟಾ ತಲುಪಿ ಅಲ್ಲಿಂದ ಐದು ಕಿ.ಮೀ ಮೊನಚಾದ ಚಾರಣದ ಮೂಲಕ ತುಂಗನಾಥ ತಲುಪಬಹುದಾಗಿದೆ. ತುಂಗನಾಥಕ್ಕೆ ತೆರಳಲು ಫೆಬ್ರುವರಿಯಿಂದ ಎಪ್ರಿಲ್ ವರೆಗಿನ ಸಮಯ ಆದರ್ಶಮಯವಾಗಿದೆ.

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ಚಂದ್ರಪರ್ವತ ಗಿರಿ ಶಿಖರದಲ್ಲಿ ಪಂಚ ಕೇದಾರಗಳ ಪೈಕಿ ಒಂದಾದ ಪವಿತ್ರ ತುಂಗನಾಥವು ನೆಲೆಸಿದೆ. ಇಲ್ಲಿಗೆ ಚಾರಣದ ಮೂಲಕ ತಲುಪಲು ಚೊಪ್ಟಾ ಆಧಾರ ಸ್ಥಳವಾಗಿದೆ.

ಚಿತ್ರಕೃಪೆ: Travelling Slacker

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಚೊಪ್ಟಾ ಸ್ಥಳವೂ ಸಹ ಅತ್ಯದ್ಭುತವಾದ ವಾತಾವರಣವನ್ನು ಹೊಂದಿದೆ. ನೀವು ತುಂಗನಾಥಕ್ಕೆ ಹೋಗುವ ಸಂದರ್ಭದಲ್ಲಿ ಚೊಪ್ಟಾದಲ್ಲೂ ಸಹ ಕೆಲ ಸಮಯ ವ್ಯಯಿಸುವುದು ಉತ್ತಮ ಆಯ್ಕೆಯಾಗಬಹುದು, ಏಕೆಂದರೆ....

ಚಿತ್ರಕೃಪೆ: Travelling Slacker

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಕೇವಲ ತುಂಗನಾಥವಲ್ಲದೆ ಅಲ್ಲಿಂದ ಮುಂದೆ 1.5 ಕಿ.ಮೀ ಗಳಷ್ಟು ಚಾರಣದ ಮೂಲಕ ಚಂದ್ರಶಿಲಾ ಶಿಖರವನ್ನು ತಲುಪಲೂ ಸಹ ಚೊಪ್ಟಾ ಪ್ರಾರಂಭಿಕ ಸ್ಥಳವಾಗಿದೆ.

ಚಿತ್ರಕೃಪೆ: Travelling Slacker

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಚೊಪ್ಟಾ ಕೇವಲ ಪ್ರಕೃತಿ ಸೌಂದರ್ಯವಲ್ಲದೆ ಇಂತಹ ವಿಶಿಷ್ಟ ವಾತಾವರಣದಲ್ಲಿ ಕಂಡು ಬರುವ ವಿಶಿಷ್ಟ ಜೀವಿ ಹಾಗೂ ಅಪರೂಪದ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ.

ಚಿತ್ರಕೃಪೆ: soumyajit nandy

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಲ ಹಿಮಾಲಯದಲ್ಲಿ ಕಂಡುಬರುವ ವ್ರೆನ್ ಎಂಬ ಪುಟ್ಟ ಹಿಮಾಲಯ ಹಕ್ಕಿ. ಚೊಪ್ಟಾದಲ್ಲೂ ಸಹ ಇದು ಕಂಡುಬರುತ್ತದೆ.

ಚಿತ್ರಕೃಪೆ: Koshy Koshy

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಇನ್ನು ತುಂಗನಾಥ ಕುರಿತು : ತುಂಗನಾಥದಲ್ಲಿರುವ ಶಿವನ ದೇವಸ್ಥಾನವು ಸಮುದ್ರ ಮಟ್ಟದಿಂದ 3,680 ಮೀ. ಅಥವಾ 11,220 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಸುಮಾರು 1000 ವರ್ಷಗಳಷ್ಟು ಪುರಾತನವಾದುದು ಎಂದು ಅಂದಾಜಿಸಲಾಗಿದೆ.

ಚಿತ್ರಕೃಪೆ: Varun Shiv Kapur

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಇಲ್ಲಿರುವ ಶಿವನನ್ನು ಮೂಲತಃ ಆದಿ ಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆಂದು ಪ್ರತೀತಿ ಇದೆ. ಅಲ್ಲದೆ ಪಾರ್ವತಿ ಹಾಗೂ ಇತರೆ ದೇವತೆಗಳ ಚಿಕ್ಕ ಪುಟ್ಟ ದೇಗುಲಗಳನ್ನೂ ಸಹ ಇಲ್ಲಿ ಕಾಣಬಹುದು. ಪ್ರಸ್ತುತ ಮಾಖು ಹಳ್ಳಿಯ ಬ್ರಾಹ್ಮಣ ಕುಟುಂಬವೊಂದು ಈ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದೆ.

ಚಿತ್ರಕೃಪೆ: Varun Shiv Kapur

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ತುಂಗನಾಥ ಕ್ಷೇತ್ರವೂ ಸಹ ಅತಿ ರೋಚಕವಾದ ಹಿನ್ನಿಲೆಯನ್ನು ಹೊಂದಿದ್ದು ತನ್ನದೆ ಆದ ವಿಶಿಷ್ಟತೆಯಿಂದ ಜನರನ್ನು ಸೆಳೆಯುತ್ತದೆ. ಇದರ ಹಿನ್ನಿಲೆಯು ಹೀಗಿದೆ....

ಚಿತ್ರಕೃಪೆ: Varun Shiv Kapur

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಮಹಾಭಾರತದ ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು, ಎಷ್ಟೇ ಆದರೂ ತಮ್ಮ ಸಹೋದರರನ್ನೆ ವಧಿಸಿದ್ದರಿಂದ ಪಾಪ ಪೀಡಿತರಾಗಿರುತ್ತಾರೆ. ಈ ಭಾರದಿಂದ ಮುಕ್ತಿ ಪಡೆಯಲು ವ್ಯಾಸ ಋಷಿಗಳ ಮೊರೆ ಹೋಗುತ್ತಾರೆ.

ಚಿತ್ರಕೃಪೆ: Varun Shiv Kapur

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಅದಕ್ಕೆ ವ್ಯಾಸ ಮಹರ್ಷಿಗಳು ಪಾಂದವರನ್ನು ಕುರಿತು: "ನೀವು ಪಾಪ ಪ್ರಜ್ಞೆಯಿಂದ ಬಳಲುತ್ತಿದ್ದು ಪರಮೇಶ್ವರನಲ್ಲಿ ಬೇಡಿ ಕೊಳ್ಳಿ. ಶಿವನು ಕ್ಷಮಿಸಿದಾಗ ಮಾತ್ರವೆ ನೀವು ಅದರಿಂದ ಮುಕ್ತರಾಗುತ್ತೀರಿ" ಎಂದು ಸಲಹೆ ಇಡುತ್ತಾರೆ.

ಚಿತ್ರಕೃಪೆ: Varun Shiv Kapur

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಇತ್ತ ಶಿವನಿಗೆ ಈ ವಿಚಾರ ತಿಳಿದು ಆ ಪ್ರಸಂಗವನ್ನೇ ತಡೆಯುವ ಉದ್ದೇಶದಿಂದ ಎತ್ತಿನ ವೇಷಧರಿಸಿ ಭೂಗತನಾಗಿ ನೆಲೆಸುತ್ತಾನೆ, ಎಂದು ದಂತ ಕಥೆಯು ಹೇಳುತ್ತದೆ.

ಚಿತ್ರಕೃಪೆ: Travelling Slacker

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಹೀಗೆ ಭೂಗತನಾಗಿ ನೆಲೆಸಿದ ಶಿವನ ಎತ್ತಿನ ವೇಷದ ಐದು ಭಾಗಗಳು ಪಂಚ ಅಂದರೆ ಐದು ಕೇದಾರ ಸ್ಥಾನಗಳಾಗಿ ಪಾವಿತ್ರ್ಯತೆಯನ್ನು ಪಡೆದಿವೆ. ಅದರಲ್ಲೂ ತುಂಗನಾಥವು ಎತ್ತಿನ ಬಾಹು ಭಾಗವನ್ನು ಸೂಚಿಸುತ್ತದೆ.

ಚಿತ್ರಕೃಪೆ: Travelling Slacker

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಜಗತ್ತಿನ ಅತಿ ಎತ್ತರದ ತುಂಗನಾಥವನ್ನು ಪ್ರಮುಖವಾಗಿ ದೂರವನ್ನು ಗಮನದಲ್ಲಿಟ್ಟು ನೋಡಿದಾಗ ಸುಲಭವಾಗಿ ತಲುಪಬಹುದೆಂದೆನಿಸಿದರೂ ಸಹ ಅಷ್ಟೆ ಜಾಗರೂಕತೆಯಿಂದ ತೆರಳುವಂತೆ ಸವಾಲೊಡ್ಡುತ್ತವೆ ಚಾರಣದ ಮೊನಚಾದ ಹಾದಿ.

ಚಿತ್ರಕೃಪೆ: Travelling Slacker

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಚಳಿಗಾಲದ ಸಂದರ್ಭದಲ್ಲಿ ಅಂದರೆ ನವಂಬರ್ ನಂತರದಿಂದ ಹಿಡಿದು ಫೆಬ್ರುವರಿ ಮಧ್ಯದವರೆಗಿನ ಸಮಯದಲ್ಲಿ ತುಂಗನಾಥ್ ಅತಿ ಹಿಮಪಾತ ಅನುಭವಿಸುವುದರಿಂದ ತಲುಪಲು ಸಾಧ್ಯವಾಗುವುದಿಲ್ಲ. ಆದರೆ ಫೆಬ್ರುವರಿಯ ನಂತರ ಅನುಭವವುಳ್ಳ ಮಾರ್ಗದರ್ಶಕರೊಂದಿಗೆ ಚಾರಣ ಮಾಡಿ ತಲುಪಬಹುದು. ಚಾರಣ ಸಂದರ್ಭದಲ್ಲಿ ಸಿಗುವ ಕೊಂಚ ಹೊತ್ತು ವಿಶ್ರಾಂತಿ ಪಡೆಯಬಹುದಾದ ದೇವ ದರ್ಶಿನಿ. ಇಲ್ಲಿ ನೀರು ಹಾಗೂ ನಿಯಮಿತ ಲಘು ಆಹಾರ ಮಾತ್ರವೆ ದೊರೆಯುತ್ತದೆ.

ಚಿತ್ರಕೃಪೆ: Varun Shiv Kapur

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ಮತ್ತೊಂದು ಪ್ರಮುಖ ವಿಚಾರವೆಂದರೆ ಒಂದೊಮ್ಮೆ ತುಂಗನಾಥ ತಲುಪಿದಲ್ಲಿ ಅಲ್ಲಿಂದ ಮತ್ತೆ ಎತ್ತರಕ್ಕೆ 1.5 ಕಿ.ಮೀ ಕ್ರಮಿಸಿ ಚಂದ್ರಶಿಲಾ ಶೃಂಗ ತಲುಪಬೇಕು. ಈ ಅದ್ಭುತ ಶಿಖರ ಶೃಂಗದಿಂದ ಹಿಮಾಲಯದ ಹಿಮಚ್ಛಾದಿತ ಪರ್ವತ ಶ್ರೇಣಿಯ 270 ಡಿಗ್ರಿಯಷ್ಟು ವಿಶಾಲವಾಗಿ ಹರಡಿದ ಅತ್ಯಂತ ಸುಂದರವಾದ ದೃಶ್ಯಾವಳಿಗಳನ್ನು ಕಾಣಬಹುದು.

ಚಿತ್ರಕೃಪೆ: Paul Hamilton

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ನೀವಿ ಚಂದ್ರಶಿಲಾ ಶೃಂಗಕ್ಕೆ ಹೋಗಲು ಬಯಸ್ಸಿದ್ದಲ್ಲಿ ಮಾರ್ಚ್ ನಂತರದ ಸಮಯ ಉತ್ತಮ. ಏಕೆಂದರೆ ಚಳಿಗಾಲದ ಸಂದರ್ಭದಲ್ಲಿ ತುಂಗನಾಥದಿಂದ ಮೇಲೆ ಚಂದ್ರಶಿಲಾ ಶಿಖರಕ್ಕೆ ಹೋಗುವ ಮಾರ್ಗವು ಅತ್ಯಂತ ದಟ್ಟವಾಗಿ ಹಿಮದಿಂದ ಕೂಡಿರುತ್ತದೆ. ಚಂದ್ರಶಿಲಾ ಶೃಂಗವನ್ನು ಹೊಳಪಿನಿಂದ ಅಲಂಕರಿಸಿದ ಚಂದ್ರನ ಬೇಲಕು.

ಚಿತ್ರಕೃಪೆ: Vvnataraj

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ತುಂಗನಾಥದಿಂದ ಕಂಡುಬರುವ ಅದ್ಭುತ, ವಿಹಂಗಮ, ಮನಸೂರೆಗೊಳ್ಳುವ ಪರ್ವತ ದೃಶ್ಯಾವಳಿಗಳು.

ಚಿತ್ರಕೃಪೆ: Paul Hamilton

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ತುಂಗನಾಥದಿಂದ ಕಂಡುಬರುವ ಅದ್ಭುತ, ವಿಹಂಗಮ, ಮನಸೂರೆಗೊಳ್ಳುವ ಪರ್ವತ ದೃಶ್ಯಾವಳಿಗಳು.

ಚಿತ್ರಕೃಪೆ: Paul Hamilton

ವಿಶ್ವದ ಅತಿ ಎತ್ತರದ ವಿಶ್ವನಾಥ:

ವಿಶ್ವದ ಅತಿ ಎತ್ತರದ ವಿಶ್ವನಾಥ:

ತುಂಗನಾಥದಿಂದ ಕಂಡುಬರುವ ಅದ್ಭುತ, ವಿಹಂಗಮ, ಮನಸೂರೆಗೊಳ್ಳುವ ಪರ್ವತ ದೃಶ್ಯಾವಳಿಗಳು.

ಚಿತ್ರಕೃಪೆ: Paul Hamilton

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X