Search
  • Follow NativePlanet
Share
» »ಈ ಬೀಚ್‍ನಲ್ಲಿದೆ ಆಗೋಚರ ಆತ್ಮಗಳ ಸಂಚಾರ.... ರಾತ್ರಿಯಾದರೇ....

ಈ ಬೀಚ್‍ನಲ್ಲಿದೆ ಆಗೋಚರ ಆತ್ಮಗಳ ಸಂಚಾರ.... ರಾತ್ರಿಯಾದರೇ....

ಬೀಚ್‍ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕವರಿಂದ ಹಿಡಿದು ದೊಡ್ಡವರ ತನಕವು ಬೀಚ್‍ಗಳು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಮ್ಮ ಭಾರತ ದೇಶದಲ್ಲಿ ಹಲವಾರು ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಬೀಚ್‍ಗಳಿವೆ. ಕೆಲವು ಬೀಚ್‍ಗಳಲ್ಲಿ

ಬೀಚ್‍ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕವರಿಂದ ಹಿಡಿದು ದೊಡ್ಡವರ ತನಕವು ಬೀಚ್‍ಗಳು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಮ್ಮ ಭಾರತ ದೇಶದಲ್ಲಿ ಹಲವಾರು ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಬೀಚ್‍ಗಳಿವೆ. ಕೆಲವು ಬೀಚ್‍ಗಳಲ್ಲಿ ವಾಟರ್ ಗೇಮ್ಸ್‍ನಂತಹ ಆಟಗಳನ್ನು ಪ್ರವಾಸಿಗರಿಗೆ ಆಡಲು ಅವಕಾಶ ಮಾಡಿಕೊಟ್ಟರೆ ಇನ್ನು ಕೆಲವು ಬೀಚ್‍ನಲ್ಲಿ ಪ್ರವಾಸಿಗರು ಅಡ್ಡಾಡುವುದನ್ನು ನಿರ್ಬಂಧ ಹೇರಲಾಗಿರುತ್ತದೆ.

ನಿಮಗೆ ತಿಳಿದಿರಲಿ ಕೆಲವೊಂದು ಬೀಚ್‍ಗಳು ತನ್ನ ಅದ್ಭುತವಾದ ಸೌಂದರ್ಯದ ಜೊತೆ ಜೊತೆಗೆ ಭಯಾನಕತೆಯನ್ನು ಕೂಡ ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಅಂದರೆ ಬೆಳಗಿನ ಸಮಯದಲ್ಲಿ ಪ್ರವಾಸಿಗರಿಗೆ ಮನರಂಜನೆಯನ್ನು ನೀಡುವ ಬೀಚ್, ರಾತ್ರಿಯಾಗುತ್ತಿದ್ದಂತೆ ಭಯಾನಕತೆ ಅವರಿಸುತ್ತದೆ.

ಅಲ್ಲಿ ಅಗೋಚರ ಶಕ್ತಿಗಳ ಸಂಚಾರ ಪ್ರಾರಂಭವಾಗುತ್ತದೆ. ಅಂಥಹ ಬೀಚ್‍ಗಳಲ್ಲಿ ಸೂರತ್‍ನಲ್ಲಿರುವ ದುಮಾಸ್ ಬೀಚ್ ಕೂಡ ಒಂದು. ಈ ಬೀಚ್‍ನಲ್ಲಿ ತಮ್ಮ ಭಯಾನಕತೆಯ ಅನುಭವವನ್ನು ಕೂಡ ಅನೇಕರು ಹಂಚಿಕೊಂಡಿದ್ದಾರೆ. ಅಲ್ಲಿ ಹಲವಾರು ಮಂದಿ ದೆವ್ವದ ಅಸ್ತಿತ್ವವಿದೆಯೇ ಇಲ್ಲವೇ ಎಂಬುದರ ಕುರಿತು ಪರೀಕ್ಷೆಗಳನ್ನು ಕೂಡ ಮಾಡಿದ್ದಾರೆ. ಹಾಗಾದರೆ ಆ ಪರೀಕ್ಷೆಗಳ ಫಲಿತಾಂಶವೇನು? ಎಂಬುದರ ಕುರಿತು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ ಬನ್ನಿ.

ಎಲ್ಲಿದೆ?

ಎಲ್ಲಿದೆ?

ದುಮಾಸ್ ಬೀಚ್ ಎಂಬ ಭಯಾನಕವಾದ ಬೀಚ್ ಗುಜರಾತ್ ರಾಜ್ಯದ ಸೂರತ್ ನಗರದಿಂದ ಸುಮಾರು 21 ಕಿ.ಮೀದ ನೈರುತ್ಯದಲ್ಲಿರುವ ಈ ಬೀಚ್ ಅರಬ್ಬೀ ಸಮುದ್ರದ ಉದ್ದಕ್ಕೂ ಹರಡಿಕೊಂಡಿದೆ. ದಕ್ಷಿಣ ಗುಜರಾತಿನಲ್ಲಿ ಇದು ಒಂದು ಪ್ರವಾಸಿ ತಾಣವಾಗಿದೆ. ತನ್ನ ಸುಂದರವಾದ ಸೌಂದರ್ಯದಿಂದ ಮತ್ತು ರುಚಿಕರವಾದ ಆಹಾರದಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.


PC: Marwada

ಆಕರ್ಷಣೆ

ಆಕರ್ಷಣೆ

ಬೀಚ್ ಅನ್ನು ಹೊರತುಪಡಿಸಿದರೆ, ದುಮಾಸ್‍ನಲ್ಲಿ ಆಸಕ್ತಿಕರವಾದ ಸ್ಥಳಗಳೆಂದರೆ ದಯಾರಿಯಾ ಗಣೇಶ ದೇವಾಲಯ. ಇದು ಬೀಚ್‍ನ ಪಕ್ಕದಲ್ಲಿಯೇ ಇದೆ. ಇಲ್ಲಿ ರುಚಿಕರವಾದ ಸೂರತ್ ಸ್ಪೇಷಲ್ ಬಿದಿ ತಿನಿಸುಗಳು ದೊರೆಯುತ್ತವೆ. ಭಾರತೀಯ ತಿಂಡಿಗಳನ್ನು ಮಾರುವ ಅಂಗಡಿಗಳನ್ನು ಹೊಂದಿದೆ. ರುಚಿಕರವಾದ ಪಾವ್‍ಭಾಜಿ, ಚೀನಿಯರ ಆಹಾರಗಳು, ಸಿಹಿ ಕಾರ್ನ್ ಇನ್ನು ಹಲವಾರು ಹೋಟೆಲ್‍ಗಳು ಕೂಡ ಇಲ್ಲಿವೆ.


PC: Marwada

ಸಮಾಧಿ

ಸಮಾಧಿ

ಈ ಅದ್ಭುತವಾದ ಬೀಚ್‍ನಲ್ಲಿ ಕಾಲ ಕಳೆಯಲು ನೂರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ವಾರಾಂತ್ಯ ಬಂದರೆ ಸಾಕು ಸಾಕಷ್ಟು ಸ್ಥಳಗಳಿಂದ ಈ ಬೀಚ್‍ನ ಸೌಂದರ್ಯವೆಲ್ಲಾ ಅಸ್ವಾಧಿಸಲು ಪ್ರವಾಸಿಗರು ಕಾತುರರಾಗಿರುತ್ತಾರೆ. ಈ ದುಮಾಸ್ ಬೀಚ್ ವಿಶೇಷವಾಗಿ ಕಪ್ಪು ಮರಗಳನ್ನು ಹೊಂದಿದೆ. ಇಲ್ಲಿ ಹಲವಾರು ಜನರು ಕಣ್ಮರೆಯಾಗಿರುವ ಘಟನೆಗಳು ಕೂಡ ನಡೆದಿವೆ. ಆಶ್ಚರ್ಯ ಏನಪ್ಪ ಎಂದರೆ ಈ ಬೀಚ್ ಮೊದಲು ಸಮಾಧಿ ಸ್ಥಳವಾಗಿ ಬಳಸಲಾಗುತ್ತಿತ್ತು ಎಂದು ನಂಬಲಾಗಿದೆ.


PC: Harshal 04

ಭಾರತದ ಟಾಪ್ 10 ಹಂಟೆಡ್ ಸ್ಥಳಗಳ

ಭಾರತದ ಟಾಪ್ 10 ಹಂಟೆಡ್ ಸ್ಥಳಗಳ

ವಿಷಯಕ್ಕೆ ಬರೋಣ. ಈ ಸುಂದರವಾದ ಬೀಚ್ ಭಾರತದ ಟಾಪ್ 10 ಹಂಟೆಡ್ ಸ್ಥಳಗಳ ಪಟ್ಟಿಯಲ್ಲಿ ಈ ಬೀಚ್ ಕೂಡ ಒಂದಾಗಿದೆ. ಅಂದರೆ ಗುಜರಾತ್ ರಾಜ್ಯದ ಸೂರತ್ ನಗರದಲ್ಲಿರುವ ದುಮಾಸ್ ಬೀಚ್ ಕೂಡ ಒಂದಾಗಿದೆ. ಈ ಬೀಚ್‍ನ ಬಗ್ಗೆ ಹಲವಾರು ಪ್ರವಾಸಿಗರು ಪರೀಕ್ಷೆಯನ್ನು ಮಾಡಿದ್ದಾರೆ. ಅವರಲ್ಲಿ ಒಬ್ಬರು ದುಮಾಸ್‍ನಲ್ಲಿ ನಿಜವಾಗಿಯೂ ಅತೃಪ್ತ ಆತ್ಮಗಳ ಸಂಚಾರವಿದೆಯೇ ಎಂದು ಕಂಡುಹಿಡಿಯಲು ನಿರ್ಧರಿಸಿದರಂತೆ.

PC:Rahul Bhadane

ಆತ್ಮಗಳ ಸಂಚಾರ

ಆತ್ಮಗಳ ಸಂಚಾರ

ಹಲವಾರು ವರ್ಷಗಳ ಹಿಂದೆ ಸಮುದ್ರ ತೀರವಿರುವ ಸ್ಥಳದಲ್ಲಿ ಸಮಾಧಿಗಳು ಇದ್ದವಂತೆ. ಹಾಗಾಗಿಯೇ ಇಲ್ಲಿ ಬಹಳಷ್ಟು ಆತ್ಮಗಳ ಸಂಚಾರವಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ರಾತ್ರಿಯ ಸಮಯದಲ್ಲಿ ಯಾರೋ ಮಾತಾನಾಡುತ್ತಿರುವುದು, ದೂರದಲ್ಲಿ ನಿಂತ ಹಾಗೆ ಭಾಸವಾಗುವುದು, ಕಿರುಚುವುದು, ಅಳುವ ಶಬ್ಧಗಳೆಲ್ಲಾ ಕೇಳಿಸುತ್ತದೆ ಎಂತೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಬೀಚ್ ಸತ್ತ ಜನರ ಆತ್ಮಗಳು ತುಂಬಿರುವ ಸ್ಥಳವೆಂದೇ ಹೇಳಲಾಗುತ್ತದೆ. ಭೂತಗಳು ನಾಯಿಗಳ ವೇಷದಲ್ಲಿ ಬಂದು ಅದೃಶ್ಯವಾಗುತ್ತವೆ. ದುಮಾಸ್ ಬೀಚ್‍ಗೆ ಸೂರತ್ ರೈಲ್ವೆ ನಿಲ್ದಾಣವು ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ 22 ಕಿ.ಮೀ ದೂರದಲ್ಲಿದೆ. ಸುಮಾರು 26 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X