Search
  • Follow NativePlanet
Share
» »ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವನನ್ನು ಪತಿಯ ರೂಪದಲ್ಲಿ ಪಡೆಯಲು ದೇವಿ ಪಾರ್ವತಿ ಕಠೋರ ತಪಸ್ಸು ಮಾಡಿದ್ದರು. ಕಠೋರ ತಪಸ್ಸಿನ ಬಳಿಕ ಶಿವನು ಪವಾರ್ವತಿಯ ಮದುವೆಯ ಪ್ರಸ್ತಾಪವನ್ನು ಸ್ವೀಕರಿಸಿದ್ದನು. ಶಿವ-ಪಾರ್ವತಿಯರ ವಿವಾಹ ಉತ್ತರಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡೆದಿತ್ತು ಎನ್ನಲಾಗಿದೆ.

ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

ತ್ರಿಯೋಗಿ ನಾರಾಯಣ

ತ್ರಿಯೋಗಿ ನಾರಾಯಣ

PC:Naresh Balakrishnan
ರುದ್ರಪ್ರಯಾಗ ಜಿಲ್ಲೆಯಲ್ಲಿ ತ್ರಿಯೋಗಿ ನಾರಾಯಣ ಎನ್ನುವ ಸ್ಥಳದಲ್ಲಿ ಶಿವ ಪಾರ್ವತಿಯನ್ನು ವರಿಸಿದ್ದನು. ಈ ಜಿಲ್ಲೆಯಲ್ಲಿ ವಿಷ್ಣು ಹಾಗೂ ಲಕ್ಷ್ಮೀಯರ ಮಂದಿರ ಕೂಡಾ ಇದೆ. ಅದನ್ನು ಶಿವ ಪಾರ್ವತಿಯರ ವಿವಾಹವಾದ ಸ್ಥಳದ ರೂಪದಲ್ಲಿ ಗುರುತಿಸಲಾಗುತ್ತದೆ. ಶಿವ-ಪಾರ್ವತಿಯರ ವಿವಾಹಕ್ಕೆ ಸಂಬಂಧಿಸಿದಂತಹ ಅನೇಕ ವಸ್ತುಗಳು ಈ ಮಂದಿರದ ಪರಿಸರದಲ್ಲಿ ಇನ್ನೂ ಇವೆ.

ಕುಳಿತುಕೊಂಡಂತಹ ಸ್ಥಳ

ಕುಳಿತುಕೊಂಡಂತಹ ಸ್ಥಳ

PC:Naresh Balakrishnan
ಶಿವ ಹಾಗೂ ಪಾರ್ವತಿ ಮದುವೆ ಸಂದರ್ಭದಲ್ಲಿ ಕುಳಿತಿದ್ದ ಸ್ಥಳ ಇಂದಿಗೂ ಕಾಣ ಸಿಗುತ್ತದೆ. ಇಂದಿಗೂ ಈ ಕುಂಡದಲ್ಲಿ ಅಗ್ನಿಯನ್ನು ಇಡಲಾಗಿದೆ. ಇದೇ ಸ್ಥಳದಲ್ಲಿ ಬ್ರಹ್ಮ ದೇವ ಶಿವ-ಪಾರ್ವತಿಯರ ವಿವಾಹ ನಡೆಸಿದ್ದರು.

ವಿಷ್ಣು ಕುಂಡವಿದೆ

ವಿಷ್ಣು ಕುಂಡವಿದೆ

PC:Shainy Omer
ಶಿವಪಾರ್ವತಿಯರ ವಿವಾಹದಲ್ಲಿ ವಿಷ್ಣು ಪಾರ್ವತಿಯ ಅಣ್ಣನ ಸ್ಥಾನದಲ್ಲಿದ್ದರು. ಹಾಗಾಗಿ ಒಬ್ಬ ಅಣ್ಣ ತನ್ನ ತಂಗಿಯ ಮದುವೆಯಲ್ಲಿ ಯಾವೆಲ್ಲಾ ರೀತಿ ನೀತಿಗಳನ್ನು ಅನುಸರಿಸಬೇಕೋ ಅದೆಲ್ಲವನ್ನೂ ವಿಷ್ಣು ನಿಭಾಯಿಸಿದ್ದಾನೆ. ಈ ಕುಂಡದಲ್ಲಿ ಸ್ನಾನ ಮಾಡಿ ವಿಷ್ಣು ವಿವಾಹ ಕಾರ್ಯದಲ್ಲಿ ಭಾಗವಹಿಸಿದ್ದನಂತೆ ಹಾಗಾಗಿ ಇದಕ್ಕೆ ವಿಷ್ಣು ಕುಂಡ ಎನ್ನುವ ಹೆಸರು ಬಂದಿದೆ.

ಪೂಜಾರಿಯಾದ ಬ್ರಹ್ಮದೇವ

ಪೂಜಾರಿಯಾದ ಬ್ರಹ್ಮದೇವ

PC:Shaq774
ಶಿವಪಾರ್ವತಿಯರ ಮದುವೆಯಲ್ಲಿ ಬ್ರಹ್ಮದೇವ ಪುರೋಹಿತರಾಗಿದ್ದರು. ವಿವಾಹ ಕಾರ್ಯದಲ್ಲಿ ಪಾಲ್ಗೊಳ್ಳುವ ಮೊದಲು ಬ್ರಹ್ಮ ದೇವ ಇದೇ ಕುಂಡದಲ್ಲಿ ಸ್ನಾನ ಮಾಡಿದ್ದರು. ಹಾಗಾಗಿ ಇದನ್ನು ಬ್ರಹ್ಮಕುಂಡ ಎನ್ನಲಾಗುತ್ತದೆ. ಹಾಗಾಗಿ ಭಕ್ತರು ಈ ಬ್ರಹ್ಮ ಕುಂಡದಲ್ಲಿ ಸ್ನಾನ ಮಾಡಿ ಬ್ರಹ್ಮದೇವನ ಆಶೀರ್ವಾದ ಪಡೆಯುತ್ತಾರೆ.

ರುದ್ರಕುಂಡ

ರುದ್ರಕುಂಡ

PC: Youtube
ಶಿವನ ಮದುವೆಗೆ ಆಗಮಿಸಿದ್ದ ಎಲ್ಲಾ ದೇವಿ ದೇವತೆಯರು ರುದ್ರಕುಂಡದಲ್ಲಿ ಸ್ನಾನ ಮಾಡಿದ್ದರು.

 ಸಪ್ತಪದಿ ತುಳಿದ ಅಗ್ನಿ ಕುಂಡ

ಸಪ್ತಪದಿ ತುಳಿದ ಅಗ್ನಿ ಕುಂಡ

PC: youtube

ಶಿವ ಇದೇ ಕುಂಡದಲ್ಲಿ ಪಾರ್ವತಿ ಜೊತೆ ಸಪ್ತಪದಿ ತುಳಿದಿದ್ದರು. ಕಟ್ಟಿಗೆಯನ್ನು ಈ ಅಗ್ನಿ ಕುಂಡಕ್ಕೆ ಹಾಕುತ್ತಾರೆ. ಭಕ್ತರು ಪ್ರಸಾದ ರೂಪದಲ್ಲಿ ಅದರ ಬೂದಿಯನ್ನು ತಮ್ಮ ಮನೆಗೆ ತೆಗದುಕೊಂಡು ಹೋಗುತ್ತಾರೆ. ಈ ಬೂದಿ ವೈವಾಹಿಕ ಸಂಬಂಧದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತದೆ ಎನ್ನಲಾಗುತ್ತದೆ.

ಸ್ಥಂಭ

ಸ್ಥಂಭ

ಶಿವನಿಗೆ ವಿವಾಹದಲ್ಲಿ ಒಂದು ಹಸು ಸಿಕ್ಕಿತ್ತು. ಆ ಹಸುವನ್ನು ಒಂದು ಕಂಬಕ್ಕೆ ಕಟ್ಟಲಾಗಿತ್ತು. ಹಾಗಾಗಿ ಅದನ್ನು ಸ್ಥಂಭ ಎನ್ನಲಾಗುತ್ತದೆ.

Read more about: uttarakhand temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X