Search
  • Follow NativePlanet
Share
» »ಮೂರು ತಲೆಯ ರಾಕ್ಷಸನಿರುವ ತಿರುಚುರಾಪಲ್ಲಿ...

ಮೂರು ತಲೆಯ ರಾಕ್ಷಸನಿರುವ ತಿರುಚುರಾಪಲ್ಲಿ...

By Sowmyabhai

ದಕ್ಷಿಣ ಭಾರತ ದೇಶದಲ್ಲಿ ತಮಿಳುನಾಡು ರಾಜ್ಯದಲ್ಲಿ ತಿರುಚ್ಚಿ ಅಥವಾ ತಿರುಚುರಾಪಲ್ಲಿ ಒಂದು ಪಾರಿಶ್ರಮಿಕ ವಿದ್ಯಾಕೇಂದ್ರ ನಗರವಾಗಿದೆ. ತಿರುಚ್ಚಿ ಅದೇ ಹೆಸರಿನ ಜಿಲ್ಲೆಗೆ ಒಂದು ಪ್ರಧಾನವಾದ ಕೇಂದ್ರವಾಗಿದೆ. ಈ ನಗರವು ಕಾವೇರಿ ನದಿ ತೀರದಲ್ಲಿದೆ. ಈ ಪ್ರದೇಶದ ಹೆಸರು, ಹುಟ್ಟಿನ ಬಗ್ಗೆ ಅನೇಕ ಕಥೆಗಳು ಪ್ರಚಾರದಲ್ಲಿದೆ.

ಸಂಸ್ಕøತದಲ್ಲಿ ತ್ರಿಶಿರ ಎಂದರೆ ಮೂರು ತಲೆ, ಪಲ್ಲಿ ಅಥವಾ ಪುರಂ ಎಂದರೆ ನಗರ ಎಂಬ ಅರ್ಥ ಬರುವ 2 ಪದಗಳು ಸೇರಿ ತ್ರಿಶಿರಾಪುರಂವಾಗಿದೆ. ತ್ರಿಶಿರಾಪುರಂದಿಂದ ತಿರುಚುನಾಪಲ್ಲಿಗೆ ಹೆಸರು ಬಂದಿದೆ. ಮೂರು ತಲೆಯ ರಾಕ್ಷಸನು ತ್ರಿಸುರನು, ಇಲ್ಲಿ ಶಿವನಿಗಾಗಿ ತಪಸ್ಸು ಮಾಡಿ ಅನೇಕ ವರಗಳನ್ನು ಪಡೆದನಂತೆ.

1.ತಿರುಶಿಲಾಪಲ್ಲಿ

1.ತಿರುಶಿಲಾಪಲ್ಲಿ

16 ನೇ ಶತಮಾನಕ್ಕೆ ಸೇರಿದ ಕಲ್ಲಿನ ಶಾಸನದ ಮೇಲೆ ಪವಿತ್ರವಾದ ಶಿಲಾ ನಗರ ಎಂಬ ಅರ್ಥ ಬರುವ ತಿರುಶಿಲಾಪಲ್ಲಿ ಎಂಬ ಪದದಿಂದ ತಿರುಚುರಾಪಲ್ಲಿ ಎಂಬ ಹೆಸರು ಬಂದಿತು ಎಂದು ಹೇಳುತ್ತಾರೆ. ಮೂರು ತಲೆಯ ರಾಕ್ಷಸನು ತ್ರಿಸುರನು, ಇಲ್ಲಿ ಶಿವನಿಗಾಗಿ ತಪಸ್ಸು ಮಾಡಿ ಅನೇಕ ವರಗಳನ್ನು ಪಡೆದನಂತೆ. ಹಾಗಾಗಿಯೇ ಆತನ ಹೆಸರೇ ಈ ನಗರಕ್ಕೆ ಇಡಲಾಗಿದೆ.

2.ತಿರುಚ್ಚಿ

2.ತಿರುಚ್ಚಿ

ಜನರು ವಾಸಿಸಲು ಏರ್ಪಟ್ಟ ಅತಿ ಪ್ರಾಚೀನವಾದ ನಗರಗಳಲ್ಲಿ ತಿರುಚ್ಚಿ ಕೂಡ ಒಂದು. ದೊಡ್ಡ ಸಾಂಸ್ಕøತಿಕ ವೈಭವವಿರುವ ನಗರ ಹಾಗು ಅನೇಕ ರಾಜ್ಯಗಳ ಪತನವನ್ನು ಕೂಡ ಕಂಡಿದೆ. ಅನೇಕ ರಾಜಮನೆತನಗಳು ಇಲ್ಲಿ ಆಳ್ವಿಕೆ ಮಾಡಿವೆ.

3.ಗುಹಾಲಯಗಳು

3.ಗುಹಾಲಯಗಳು

ಕ್ರಿ.ಪೂ 2 ನೇ ಶತಮಾನಕ್ಕೆ ಸಂಬಂಧಿಸಿದ ಜನರ ಅವಶೇಷಗಳು ಇಲ್ಲಿ ದೊರೆತಿವೆ. ಮಧ್ಯಯುಗದಲ್ಲಿ ಕ್ರಿ.ಶ 6 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳ್ವಿಕೆ ಮಾಡಿದ ಪಲ್ಲವರಾಜನಲ್ಲಿ ಒಬ್ಬನಾದ ಮಹೇಂದ್ರವರ್ಮನ್ ರಾಕ್ ಫೋರ್ಟ್‍ನಲ್ಲಿ ಅನೇಕ ಗುಹೆಗಳನ್ನು ನಿರ್ಮಾಣ ಮಾಡಿದ್ದಾನೆ.

4.ಚೋಳರು

4.ಚೋಳರು

ಪಲ್ಲವರ ನಂತರ ಮಧ್ಯಯುಗದಲ್ಲಿ ಚೋಳರು ತಿರುಚ್ಚಿಯನ್ನು ಜಯಿಸಿ ಕ್ರಿ.ಶ 17 ನೇ ಶತಮಾನದವರೆವಿಗೂ ಈ ಪ್ರದೇಶವನ್ನು ಆಳ್ವಿಕೆ ಮಾಡಿದ್ದಾರೆ. ಅನೇಕ ರಾಜ ಮನೆತನದವರು ತಮ್ಮದೇ ಆದ ಅನೇಕ ಕೊಡುಗೆಗಳನ್ನು ನೀಡಿ ಈ ನಗರವನ್ನು ಶ್ರೀಮಂತಗೊಳಿಸಿದ್ದಾರೆ.

5.ದೊಡ್ಡ ಸಾಂಸ್ಕøತಿಕ ವೈಭವ

5.ದೊಡ್ಡ ಸಾಂಸ್ಕøತಿಕ ವೈಭವ

ತಿರುಚ್ಚಿ ತನ್ನದೇ ಆದ ಸಾಂಸ್ಕøತಿಕ ವೈಭವವನ್ನು ಹಾಗು ಸಂಪ್ರದಾಯವನ್ನು ಹೊಂದಿರುವ ಅದ್ಭುತವಾದ ಚಾರಿತ್ರಿಕ, ಧಾರ್ಮಿಕ ಪ್ರದೇಶಗಳು, ಕೋಟೆಗಳನ್ನು ಕೂಡ ಹೊಂದಿದೆ. ಹಾಗಾಗಿಯೇ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

6.ಪ್ರಾಚೀನ ಕಟ್ಟಡಗಳು

6.ಪ್ರಾಚೀನ ಕಟ್ಟಡಗಳು

ಇಲ್ಲಿ ವಿರಳಿಮಲೈ ಮರುಗನ್ ದೇವಾಲಯಗಳು, ರಾಕ್ ಫೋರ್ಟ್ ದೇವಾಲಯಗಳು, ಶ್ರೀ ರಂಗನಾಥಸ್ವಾಮಿ ದೇವಾಲಯ, ಜಂಬುಕೇಶ್ವರ ದೇವಾಲಯ, ಸಮಯಪುರಂ ಮರಿಯಮ್ಮನ್ ದೇವಾಲಯ ಹೀಗೆ ಎಷ್ಟೊ ಸುಂದರವಾದ ದೇವಾಲಯಗಳು ಇಲ್ಲಿವೆ. ನವಾಬ್ ಅಂತಃಪುರಂ, ಮುಕ್ಕಾಂಬು ಡ್ಯಾಂ, ತಿರುಚ್ಚಿಯಲ್ಲಿ ಕೆಲವು ಪ್ರಾಚೀನವಾದ ಕಟ್ಟಡಗಳು ಕೂಡ ಇವೆ.

7.ತೆರಳುವ ಬಗೆ ಹೇಗೆ?

7.ತೆರಳುವ ಬಗೆ ಹೇಗೆ?

ತಮಿಳುನಾಡಿನಲ್ಲಿರುವ ತಿರುಚ್ಚಿಗೆ ಭೇಟಿ ನೀಡಲು ಅನೇಕ ಬಸ್ಸು ಸೌಕರ್ಯವಿದೆ. ರೈಲು, ವಿಮಾನ ಹಾಗು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಿರುಚ್ಚಿಗೆ ತೆರಳಬಹುದಾಗಿದೆ. ಬೆಂಗಳೂರಿನಿಂದ ತಿರುಚುನಾಪಲ್ಲಿಗೆ ಸುಮಾರು 342 ಕಿ.ಮೀ ದೂರದಲ್ಲಿದೆ. ಖಾಸಗಿ ಅಥವಾ ಸರ್ಕಾರಿ ಬಸ್ಸಿನ ಮುಖಾಂತರ ನೇರವಾಗಿ ತಿರುಚುನಾಪಲ್ಲಿಗೆ ತೆರಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X