Search
  • Follow NativePlanet
Share
» »ತ್ರಿಪುರ ಸುಂದರಿ ಶಕ್ತಿ ಪೀಠದ ದರ್ಶನ ಪಡೆದಿದ್ದೀರಾ?

ತ್ರಿಪುರ ಸುಂದರಿ ಶಕ್ತಿ ಪೀಠದ ದರ್ಶನ ಪಡೆದಿದ್ದೀರಾ?

ತ್ರಿಪುರ ಸುಂದರಿ ದೇವಸ್ಥಾನ, ತ್ರಿಪುರದ ಉದೈಪುರದಲ್ಲಿರುವ ಈ ದೇವಸ್ಥಾನವನ್ನು ಸ್ಥಳೀಯವಾಗಿ ತ್ರಿಪುರೇಶ್ವರಿ ಎಂದು ಕರೆಯಲಾಗುತ್ತದೆ.

ದೇವಿಯ 51ಶಕ್ತಿ ಪೀಠಗಳಲ್ಲಿ ತ್ರಿಪುರದಲ್ಲಿರುವ ತ್ರಿಪುರ ಸುಂದರಿ ದೇವಸ್ಥಾನವೂ ಒಂದು. ದೇವಿಯ ಬಲ ಮೊಣಗಾಲು ಬಿದ್ದಿರುವ ಈ ಸ್ಥಳದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC:ARKA SENGUPTA
ತ್ರಿಪುರ ಸುಂದರಿ ದೇವಸ್ಥಾನ, ತ್ರಿಪುರದ ಉದೈಪುರದಲ್ಲಿರುವ ಈ ದೇವಸ್ಥಾನವನ್ನು ಸ್ಥಳೀಯವಾಗಿ ತ್ರಿಪುರೇಶ್ವರಿ ಎಂದು ಕರೆಯಲಾಗುತ್ತದೆ. ಇದು ಅಗರ್ತಾಲ್‌ನಿಂದ ಸುಮಾರು 55 ಕಿ.ಮೀ ದೂರದಲ್ಲಿದೆ .

51 ಶಕ್ತಿ ಪೀಠದಲ್ಲಿ ಒಂದು

51 ಶಕ್ತಿ ಪೀಠದಲ್ಲಿ ಒಂದು

PC: Bodhisattwa
ತ್ರಿಪುರ ಸುಂದರಿ ದೇವಸ್ಥಾನವು ತ್ರಿಪುರಾದ ಜನಪ್ರಿಯ ದೇವಸ್ಥಾನಗಳಲ್ಲಿ ಒಂದು. ಹಿಂದೂ ಪುರಾಣದ ಪ್ರಕಾರ ಕಾಳಿ ದೇವಿಯ 51 ಶಕ್ತಿ ಪೀಠದಲ್ಲಿ ಒಂದಾಗಿದೆ. ಕಾಳಿ ದೇವಿಯ 'ಸೋರೋಷಿ' ಆಕಾರವನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ದೇವಸ್ಥಾನವು ಆಮೆಯ ಅಥವಾ ಕೂರ್ಮ ದ ಆಕಾರದಲ್ಲಿದ್ದ, 'ಕೂರ್ಮ ಪೀಠ' ಎಂದೂ ಕರೆಯಲ್ಪಡುತ್ತದೆ.

ಹಿಂದೂ ಪುರಾಣದ ಪ್ರಕಾರ

ಹಿಂದೂ ಪುರಾಣದ ಪ್ರಕಾರ

PC: Unknown
ಸತಿಯ ಬಲ ಕಾಲು ಇಲ್ಲಿ ಬಿದ್ದಿತ್ತು ಎಂದು ನಂಬಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ಸತಿಯ ಸಾವಿನಿಂದ ಖಿನ್ನನಾದ ಶಿವನು, ಸತಿಯ ಮೃತ ಶರೀರವನ್ನು ಎತ್ತಿಕ್ಕೊಂಡು ತಾಂಡವ ನೃತ್ಯವನ್ನು ಆರಂಬಿಸಿದ. ಶಿವನ ರೌದ್ರತೆಗೆ ಎಲ್ಲಾ ದೇವರುಗಳು ನಡುಗಿಹೋದರು. ಇದನ್ನು ತಪ್ಪಿಸಲು ವಿಷ್ಣುವು ಸತಿಯ ದೇಹವನ್ನು ತುಂಡರಿಸಿದ್ದಾಗಿ ಹಾಗೂ ಈ ತುಂಡುಗಳು ಭಾರತ, ಪಾಕಿಸ್ತಾನ, ಬರ್ಮ ಹಾಗೂ ನೇಪಾಳದ ಮೇಲೆ ಬಿದ್ದಿರುವುದಾಗಿ ನಂಬಿಕೆಯಿದೆ.

ಪೀಠ್‍ಸ್ಥಾನ್

ಪೀಠ್‍ಸ್ಥಾನ್

PC: Bodhisattwa
ಸತಿಯ ಬಲಗಾಲು ಬಿದ್ದ ಸ್ಥಳವನ್ನು ಪೀಠ್‍ಸ್ಥಾನ್ ಎಂದು ಪೂಜಿಸಲಾಗುತ್ತದೆ. ಈ ದೇವಸ್ಥಾನದ ವಾಸ್ತು ಬೆಂಗಾಲಿ ಮಾದರಿಯಲ್ಲಿದ್ದು. ಇದರ ಛಾವಣಿ, 'ಕೋನ್' ಅನ್ನು ಹೋಲುತ್ತದೆ. ಕಲ್ಯಾಣ್ ಸಾಗರ್ ಇಲ್ಲಿ ಹತ್ತಿರದಲ್ಲಿರುವ ದೊಡ್ಡ ಸರೋವರವಾಗಿದೆ.

ದೇವಸ್ಥಾನ ನಿರ್ಮಾಣದ ಹಿಂದಿನ ಕಥೆ

ದೇವಸ್ಥಾನ ನಿರ್ಮಾಣದ ಹಿಂದಿನ ಕಥೆ

PC: BiswajitBholaTripura
ಪುರಾಣದಲ್ಲಿ 15 ನೇ ಶತಮಾನದ ಅಂತ್ಯದಲ್ಲಿ ತ್ರಿಪುರವನ್ನು ಆಳಿದ ರಾಜ ಧನ್ಯ ಮಾಣಿಕ್ಯನ ಕನಸಿನಲ್ಲಿ ಒಂದು ರಾತ್ರಿಯನ್ನು ದೇವತೆ ತ್ರಿಪುರಾ ಸುಂದರಿ ಬಂದು ಉದೈಪುರದ ಬಳಿಯ ಬೆಟ್ಟದ ಮೇಲೆ ತನ್ನ ಆರಾಧನೆಯನ್ನು ಪ್ರಾರಂಭಿಸುವಂತೆ ಸೂಚಿಸಿದಳು. ಆದರೆ ಬೆಟ್ಟದ ಮೇಲೆಈಗಾಗಲೇ ವಿಷ್ಣುನಿಗೆ ಸಮರ್ಪಿತವಾದ ದೇವಸ್ಥಾನ ಇರುವುದನ್ನು ಕಂಡುಕೊಂಡು ಗೊಂದಲಕ್ಕೀಡಾದನು. ವಿಷ್ಣುಗೆ ಸಮರ್ಪಿತವಾದ ದೇವಾಲಯದಲ್ಲಿ ಶಕ್ತಿಯ ವಿಗ್ರಹವನ್ನು ಹೇಗೆ ಇಡುವುದುಇ ನಿರ್ಧರಿಸಲು ಸಾಧ್ಯವಾಗಲಿಲ್ಲ. ಮರುದಿನ ರಾತ್ರಿ, ದೈವಿಕ ದೃಷ್ಟಿ ಮತ್ತೆ ಕನಸಿನಲ್ಲಿ ಬಂದಾಗ ರಾಜನು ವಿಷ್ಣು ಮತ್ತು ಶಕ್ತಿ ಅದೇ ಮುಖ್ಯ ದೇವತೆಯ ವಿಭಿನ್ನ ಸ್ವರೂಪಗಳೆಂದು ಅರ್ಥಮಾಡಿಕೊಂಡನು. ಹೀಗಾಗಿ, 1501 AD ಯಲ್ಲಿ ತ್ರಿಪುರಾ ಸುಂದರಿ ದೇವಾಲಯವು ಅಸ್ತಿತ್ವಕ್ಕೆ ಬಂದಿತು.

ಕಪ್ಪು ಕಲ್ಲಿನ ವಿಗ್ರಹಗಳು

ಕಪ್ಪು ಕಲ್ಲಿನ ವಿಗ್ರಹಗಳು

PC:BiswajitBholaTripura
ದೇವಾಲಯದ ಗರ್ಭಗುಡಿಯಲ್ಲಿ ದೇವತೆಯ ಎರಡು ರೀತಿಯ ವಿವಿಧ ಗಾತ್ರದ ಕಪ್ಪು ಕಲ್ಲಿನ ವಿಗ್ರಹಗಳು ಇವೆ. 5 ಅಡಿ ಎತ್ತರದ ದೊಡ್ಡ ಮತ್ತು ಹೆಚ್ಚು ಪ್ರಮುಖವಾದ ವಿಗ್ರಹವು ತ್ರಿಪುರ ಸುಂದರಿಯ ದೇವತೆಯದಾಗಿದ್ದು, ಇನ್ನೊಂದು ಚೊಟೊ-ಮಾ ಎಂದು ಕರೆಯಲ್ಪಡುವ 2 ಅಡಿ ಎತ್ತರದ ಚಂಡಿ ದೇವಿಯ ವಿಗ್ರಹವಾಗಿದೆ. ಈ ಸಣ್ಣ ವಿಗ್ರಹವನ್ನು ತ್ರಿಪುರ ರಾಜರು ಯುದ್ಧಭೂಮಿಗೆ ಕರೆದೊಯ್ಯುತ್ತಿದ್ದರು ಎಂದು ಜಾನಪದ ಕಥೆಯು ಹೇಳುತ್ತದೆ.

ಕಲ್ಯಾಣ್ ಸಾಗರ

ಕಲ್ಯಾಣ್ ಸಾಗರ

PC:Scorpian ad
ಕಲ್ಯಾಣ್ ಸಾಗರ ದೇವಾಲಯದ ಪೂರ್ವ ಭಾಗದಲ್ಲಿದೆ. 6.4 ಎಕರೆಗಳಷ್ಟು ವಿಸ್ತಾರವಾಗಿದ್ದು, 224 ಗಜಗಳಷ್ಟು ಉದ್ದ ಮತ್ತು 160 ಗಜಗಳಷ್ಟು ಅಗಲವಿದೆ. ಈ ದೊಡ್ಡ ವಿಸ್ತಾರವಾದ ನೀರನ್ನು ದೇವಾಲಯದ ಸುತ್ತಮುತ್ತಲ ಪ್ರದೇಶಗಳಿಗೆ ದೊಡ್ಡ ಸೌಂದರ್ಯದ ಒಂದು ಆಯಾಮವನ್ನು ಸೇರಿಸುತ್ತದೆ. ನೀರಿನ ತುಂಬಾ ಆಮೆಗಳು ತುಂಬಿವೆ.ಇಲ್ಲಿಗೆ ಭೇಟಿ ನೀಡುವವರು ಆಮೆಗಳಿಗೆ ಮಂಡಕ್ಕಿ , ಬಿಸ್ಕೆಟ್‌ಗಳನ್ನು ಹಾಕುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Ganesh Paudel
ತ್ರಿಪುರೇಶ್ವರಿ ದೇವಸ್ಥಾನವನ್ನು ತಲುಪಲು ಹತ್ತಿರದ ವಿಮಾನ ನಿಲ್ದಾಣ ಅಗರ್ತಲಾ. ಹತ್ತಿರದ ರೈಲು ನಿಲ್ದಾಣವು ಎನ್. ಇ. ರೈಲ್ವೆಯ ಮೇಲೆ ಕೋಲ್ಕತ್ತಾದಿಂದ 1475 ಕಿ.ಮೀ. ಮತ್ತು ಗುವಾಹಾಟಿ ಮೂಲಕ 140 ಕಿ.ಮೀ ಮತ್ತು ಅಗರ್ತಲಾದಿಂದ 140 ಕಿ.ಮೀ ದೂರದಲ್ಲಿದೆ. ರಸ್ತೆಯ ಮೂಲಕ ತ್ರಿಪುರೇಶ್ವರಿ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದು. ತ್ರಿಪುರೇಶ್ವರಿ ದೇವಸ್ಥಾನವು ಟ್ಯಾಕ್ಸಿಗಳು, ಬಸ್ಸುಗಳ ಮೂಲ ನೇರ ಪ್ರವೇಶವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X