Search
  • Follow NativePlanet
Share
» »ಈ ದೇವಸ್ಥಾನಕ್ಕೆ ಜೀವಂತ ಹಾವನ್ನು ಸಮರ್ಪಿಸುತ್ತಾರಂತೆ!

ಈ ದೇವಸ್ಥಾನಕ್ಕೆ ಜೀವಂತ ಹಾವನ್ನು ಸಮರ್ಪಿಸುತ್ತಾರಂತೆ!

ದಕ್ಷಿಣ ಭಾರತದ ಕೇರಳವು ತನ್ನ ಸಮುದ್ರ ತೀರ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಡೀ ವಿಶ್ವದಲ್ಲಿ ಉತ್ತಮ ಪ್ರವಾಸಿತಾಣವಾಗಿದೆ. ಅಲ್ಲಿನ ನದಿಗಳು, ಸಮುದ್ರ ತೀರ, ಬ್ಯಾಕ್‌ವಾಟರ್, ಅಲ್ಲಿನ ಸಂಸ್ಕೃತಿ ನಿಮ್ಮನ್ನು ಮತ್ತೆ ಮತ್ತೆ ಕೇರಳಕ್ಕೆ ಬರುವಂತೆ ಮಾಡುತ್ತದೆ. ಈ ಮೂಲಕ ಅಲ್ಲಿನ ಸಂಸ್ಕೃತಿ, ಜೀವನಶೈಲಿಯ ಬಗ್ಗೆಯು ತಿಳಿಯುವ ಅವಕಾಶ ಸಿಗುತ್ತದೆ. ಇಂದು ನಾವು ಕೇರಳದ ತಿರೂರು ಎನ್ನುವ ಊರಿನಲ್ಲಿರುವ ದೇವಸ್ಥಾನದ ಬಗ್ಗೆ ಹಾಗೂ ಅಲ್ಲಿನ ಪರಂಪರೆಯ ಬಗ್ಗೆ ಹೇಳಹೊರಟಿದ್ದೇವೆ.

ಬೆಂಗಳೂರಿನಲ್ಲಿ ಫೇಮಸ್ ಪುಸ್ತಕ ಮಾರಾಟ ಮಳಿಗೆಗಳು ಎಲ್ಲೆಲ್ಲಿವೆ ಗೊತ್ತಾ?ಬೆಂಗಳೂರಿನಲ್ಲಿ ಫೇಮಸ್ ಪುಸ್ತಕ ಮಾರಾಟ ಮಳಿಗೆಗಳು ಎಲ್ಲೆಲ್ಲಿವೆ ಗೊತ್ತಾ?

ಕೇರಳದ ಮಲಪ್ಪುರಂನ ತಿರೂರು

ಕೇರಳದ ಮಲಪ್ಪುರಂನ ತಿರೂರು

PC- Jaseem Hamza

ತಿರೂರು ಕೇರಳ ಮಲಪ್ಪುರಂ ಜಿಲ್ಲೆಯಲ್ಲಿರುವ ಒಂದು ಸ್ಥಳವಾಗಿದೆ. ಜಿಲ್ಲೆಯ ವ್ಯಾಪಾರ ಕೇಂದ್ರಗಳಲ್ಲಿ ಈ ಸ್ಥಳವೂ ಒಂದು. ಈ ಸ್ಥಳವು ಮಲಪ್ಪುರಂ ನಿಂದ 26ಕಿ.ಮೀ ದೂರದಲ್ಲಿದ್ದರೆ, ಕೋಜಿಕೋಡ್‌ನಿಂದ ಸುಮಾರು 41 ಕಿ.ಮೀ ದೂರದಲ್ಲಿದೆ. ಇಲ್ಲಿ ಮೀನು ಹಾಗೂ ಎಲೆ ಅಡಿಕೆಗೆ ಬಹಳ ಫೇಮಸ್.

ದೇವರಿಗೆ ಜೀವಂತ ಹಾವನ್ನು ಅರ್ಪಿಸಲಾಗುತ್ತದೆ

ದೇವರಿಗೆ ಜೀವಂತ ಹಾವನ್ನು ಅರ್ಪಿಸಲಾಗುತ್ತದೆ

PC- Pranchiyettan

ತಿರೂರಿನಿಂದ 6ಕಿ.ಮೀ ದೂರದಲ್ಲಿ ಒಂದು ಮಂದಿರವಿದೆ. ಅದು ಗರುಡ ದೇವತೆಗೆ ಸಮರ್ಪಿತವಾದ ಮಂದಿರ. ಈ ಮಂದಿರವು ಸುಮಾರು 1800 ವರ್ಷಗಳ ಕಾಲ ಹಳೆಯದ್ದಾಗಿದೆ. ಯಾರ ಕುಟುಂಬದಲ್ಲಿ ಯಾರಾದರೂ ಗಂಭೀರ ರೋಗದಿಂದ ನರಳುತ್ತಿದ್ದಾರೋ ಅಥವಾ ಮನೆಯಲ್ಲಿ ಯಾರಿಗಾದರೂ ಹಾವು ಕಚ್ಚಿದೆಯೋ ಅಂತವರೇ ಜಾಸ್ತಿಯಾಗಿ ಈ ದೇವಸ್ಥಾನಕ್ಕೆ ಬರುವುದು.

ಹಾವಿನ ವಿಷ ಕಡಿಮೆಯಾಗುತ್ತದೆ

ಹಾವಿನ ವಿಷ ಕಡಿಮೆಯಾಗುತ್ತದೆ

ಇಲ್ಲಿ ಬಂದು ಪೂಜೆ ಮಾಡಿದರೆ ಹಾವಿನ ವಿಷದಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಇಲ್ಲಿಗೆ ಹಾವಿನಿಂದ ಕಚ್ಚಿಸಿಕೊಂಡಿರುವವರು ಅದೇ ಹಾವನ್ನು ಜೀವಂತವಾಗಿ ಹಿಡಿದು ತರುತ್ತಾರೆ. ಇದರಿಂದ ಆ ವ್ಯಕ್ತಿಯ ದೇಹದಲ್ಲಿರುವ ಹಾವಿನ ವಿಷ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ.

ತ್ರಿಪ್ರಂಗೋಡ್ ಕಾಲಾಶ್ರಮ ಮೂರ್ತಿ ಮಂದಿರ

ತ್ರಿಪ್ರಂಗೋಡ್ ಕಾಲಾಶ್ರಮ ಮೂರ್ತಿ ಮಂದಿರ

PC- Navaneeth Krishnan S

ತಿರೂರಿನ ಬಳಿ ತ್ರಿಪ್ರಗೊಂಡ ಎನ್ನುವ ಶಿವ ಮಂದಿರವಿದೆ. ಅದನ್ನು ಕೂಡಾ ನೀವು ದರ್ಶನ ಮಾಡಬಹುದು. ಈ ದೇವಸ್ಥಾನದ ಹಿಂದೆಯು ಒಂದು ಪೌರಾಣಿಕ ಕಥೆ ಇದೆ. ಇಲ್ಲಿ ಮಾರ್ಕಂಡೇಯ ಎನ್ನುವ ಒಬ್ಬ ಶಿವ ಭಕ್ತನಿದ್ದ ಅವನ ಮೇಲೆ ತನ್ನ ತಂದೆ ತಾಯಿಯರ ಮೇಲಿನ ಎಲ್ಲಾ ಜವಬ್ದಾರಿ ಇತ್ತು. ಆದರೆ ಆತನ ಆಯುಷ್ಯ ಬಹಳ ಕಡಿಮೆ ಇತ್ತು. ಯಮದೇವನು ಆತನ ಆತ್ಮವನ್ನು ಕರೆದೊಯ್ಯಲು ವಿಷ್ಣುವಿನ ಬಳಿ ಬಂದನು. ವಿಷ್ಣು ಯಮದೇವನಿಗೆ ಶಿವನ ಬಳಿ ಹೋಗಲು ಹೇಳಿದನು. ಮಾರ್ಕಂಡೆಯ ತ್ರಿಪಂಗೋಡದಲ್ಲಿರುವ ಶಿವಲಿಂಗವನ್ನು ಅಪ್ಪಿ ಪ್ರಾರ್ಥನೆ ಮಾಡಿದ್ದನು. ಇಂದಿಗೂ ಇಲ್ಲಿ 5 ಶಿವಲಿಂಗವಿದೆ. ಇಂದಿಗೂ ಶಿವಲಿಂಗನ ದರ್ಶನಕ್ಕೆ ದೂರದೂರದ ಊರಿನಿಂದ ಇಲ್ಲಿಗೆ ಬರುತ್ತಾರೆ.

ಪಕ್ಷಿ ವಿಹಾರದ ಆನಂದವನ್ನು ಪಡೆಯಬಹುದು

ಪಕ್ಷಿ ವಿಹಾರದ ಆನಂದವನ್ನು ಪಡೆಯಬಹುದು

ಇಲ್ಲೊಂದು ಪಕ್ಷಿ ವಿಹಾರ ಸ್ಥಳವಿದೆ. ಅಲ್ಲಿ ಬಣ್ಣ ಬಣ್ಣದ ದೇಶಿ ಹಾಗು ಪ್ರವಾಸಿ ಪಕ್ಷಿಯನ್ನು ನೋಡಬಹುದು. ನದಿಗಳು ಹಾಗೂ ಸಮುದ್ರಗಳು ಸೇರುವ ಈ ದೃಶ್ಯವು ನೋಡಲು ರಮಣೀಯವಾಗಿದೆ.

ತಿರೂರನ್ನು ತಲುಪುವುದು ಹೇಗೆ?

ತಿರೂರನ್ನು ತಲುಪುವುದು ಹೇಗೆ?

PC-Anashasainar

ಮಲಪ್ಪುರಂನ ಅಂತರ್ಗತದಲ್ಲಿ ಕೇರಳವಿದೆ. ಇಲ್ಲಿಗೆ ನೀವು ರಸ್ತೆ, ರೈಲು, ವಿಮಾನ ಮಾರ್ಗದಿಂದಲೂ ತಲುಪಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಕ್ಯಾಲಿಕಟ್. ರೈಲಿನ ಮೂಲಕ ಹೋಗುವುದಾದರೆ ತಿರೂರು ರೈಲ್ವೆ ಸ್ಟೇಶನ್‌ ಮೂಲಕ ಹೋಗಬಹುದು. ರಸ್ತೆ ಮಾರ್ಗದಿಂದಾದರೆ ಎಲ್ಲಾ ನಗರಗಳಿಂದಲೂ ಇಲ್ಲಿಗೆ ಬಸ್‌ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X