Search
  • Follow NativePlanet
Share
» »ಇಲ್ಲಿನ ಕಲ್ಲನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟಿದ್ರೆ ಯಾವುದೇ ವಿಘ್ನ ಬರೋದಿಲ್ಲವಂತೆ

ಇಲ್ಲಿನ ಕಲ್ಲನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟಿದ್ರೆ ಯಾವುದೇ ವಿಘ್ನ ಬರೋದಿಲ್ಲವಂತೆ

ಗಣೇಶನನ್ನು ವಿಘ್ನನಿವಾರಕ ಎನ್ನಲಾಗುತ್ತದೆ. ಹಾಗಾಗಿ ಯಾವುದೇ ಶುಭ ಕಾರ್ಯದ ಆರಂಭವನ್ನು ಗಣೇಶನ ಸ್ತುತಿಯಿಂದಲೇ ಪ್ರಾರಂಭಿಸುತ್ತಾರೆ. ಗಣೇಶ ಎಲ್ಲಾ ಕಷ್ಟಗಳನ್ನು ನಿವಾರಿಸಿ ಕೆಲಸವನ್ನು ಸುಗಮವಾಗಿ ನಿರ್ವಹಿಸಿಕೊಡುತ್ತಾನೆ ಎನ್ನುವ ನಂಬಿಕೆ ಜನರದ್ದು. ಇದಕ್ಕೆ ಸಂಬಂಧಿಸಿದ ಗಣೇಶನ ದೇವಸ್ಥಾನವೊಂದು ರಾಜಸ್ಥಾನದಲ್ಲಿದೆ. ಅದುವೇ ಚಮತ್ಕಾರಿ ತ್ರಿನೇತ್ರಾ ಗಣೇಶ ಮಂದಿರ. ಮನೆಕಟ್ಟಬೇಕೆಂದಿರುವವರು ಇಲ್ಲಿಗೆ ಬರುತ್ತಾರಂತೆ.

ಎಲ್ಲಿದೆ ಈ ಚಮತ್ಕಾರಿ ಮಂದಿರ

ಎಲ್ಲಿದೆ ಈ ಚಮತ್ಕಾರಿ ಮಂದಿರ

ರಾಜಸ್ತಾನದ ಜೈಪುರದಲ್ಲಿನ ಸವೈ ಮಾದವ್‌ಪುರಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ರಣಥಂಬೋರ್‌ಗೆ ಬರಬಹುದು. ಇದು ಸವೈ ಮಾದವ್‌ಪುರದಿಂದ ಸುಮಾರು 12 ಕಿ.ಮಿ ದೂರದಲ್ಲಿದೆ. ರಣಥಂಬೋರ್ ಕೋಟೆಯ ಮೇಲಿರುವ ಈ ದೇವಸ್ಥಾನವನ್ನು ತಲುಪಬೇಕಾದರೆ ಸಾಕಷ್ಟು ಮೆಟ್ಟಿಲು ಹತ್ತಿಕೊಂಡು ಗಣೇಶನ ದರ್ಶನಕ್ಕೆ ಹೋಗಬೇಕು.

 ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಶೂಟಿಂಗ್ ನಡೆದಿದ್ದು ಎಲ್ಲೆಲ್ಲಿ ಗೊತ್ತಾ? ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಶೂಟಿಂಗ್ ನಡೆದಿದ್ದು ಎಲ್ಲೆಲ್ಲಿ ಗೊತ್ತಾ?

ಲಗ್ನ ಪತ್ರಿಕೆ

ಲಗ್ನ ಪತ್ರಿಕೆ

ಇದು ಅತ್ಯಂತ ಪ್ರಾಚೀನ ಮಂದಿರವಾಗಿದೆ. ಚಮತ್ಕಾರಿ ಮಂದಿರವೂ ಆಗಿದೆ. ಇಲ್ಲಿ ಜನರು ಭಕ್ತಿಯಿಂದ ಬೇಡಿಕೊಂಡರೆ ಆಸೆ ಈಡೇರುತ್ತದಂತೆ. ಇಲ್ಲಿ ಪ್ರತಿದಿನ ಸಾವಿರಾರು ಮದುವೆ ಆಮಂತ್ರಣ ಕಾರ್ಡ್ ಬರುತ್ತದೆ. ದೇಶದಾದ್ಯಂತ ಜನರು ತಮ್ಮ ವಿವಾಹದ ಮೊದಲ ವಿವಾಹ ಪತ್ರಿಕೆಯನ್ನು ಇಲ್ಲಿಗೆ ಕಳಿಸುತ್ತಾರೆ. ಪ್ರತಿ ಲಗ್ನ ಪತ್ರಿಕೆಯನ್ನು ಗಣೇಶನ ಮುಂದೆ ಓದಲಾಗುತ್ತದೆ.

ಮನೆಕಟ್ಟಲು ಕಲ್ಲು

ಮನೆಕಟ್ಟಲು ಕಲ್ಲು

ಇಲ್ಲಿನ ಮನೆಕಟ್ಟಲು ಬೇಡಿಕೊಂಡರೆ ಅವರ ಮನೆ ನಿರ್ಮಾಣ ಯಾವುದೇ ವಿಘ್ನವಿಲ್ಲದೆ ನೆರವೇರುತ್ತಂತೆ. ಯಾರಾದರೂ ಮನೆ ಕಟ್ಟುವ ಮುನ್ನ ಮನೆ ಕಟ್ಟುವ ಒಂದು ಕಲ್ಲನ್ನು ಇಲ್ಲಿ ಗಣೇಶನ ಮುಂದೆ ಪ್ರಾರ್ಥೀಸಿ ಅದನ್ನು ತೆಗೆದುಕೊಂಡು ಮನೆಕಟ್ಟಲು ಪ್ರಾರಂಭಿಸಿದರೆ ಯಾವುದೇ ವಿಘ್ನವಿಲ್ಲದೆ ಅವರ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ ಎನ್ನಲಾಗುತ್ತದೆ.

ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !

ಸಂತಾನ ಭಾಗ್ಯ

ಸಂತಾನ ಭಾಗ್ಯ

ಯಾವುದೇ ವ್ಯಕ್ತಿ ತನ್ನ ಗದ್ದೆಯಲ್ಲಿ ಬೆಳೆದ ಬೆಳೆಯನ್ನು ಗಣೇಶನ ಮುಂದೆ ಇಟ್ಟು ಅದನ್ನು ಮತ್ತೆ ತನ್ನ ಮನೆಗೆ ಕೊಂಡೊಯ್ದಲ್ಲಿ ಆವರಿಗೆ ಉತ್ತಮ ಬೆಳೆ ಬೆಳೆಯುತ್ತದೆ ಎನ್ನಲಾಗುತ್ತದೆ. ಸಂತಾನ ಭಾಗ್ಯ ಇಲ್ಲದವರು ಸಂತಾನಕ್ಕಾಗಿ ಈ ದೇವಸ್ಥಾನಕ್ಕೆ ಬಂದು ಬೇಡಿಕೊಂಡರೆ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತಂತೆ.

ಕನಸಿನಲ್ಲಿ ಬಂದ ಗಣೇಶ

ಕನಸಿನಲ್ಲಿ ಬಂದ ಗಣೇಶ

ಕ್ರಿ.ಶ1299 ದಲ್ಲಿ ರಾಜ ಹಮ್ಮೀರ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವೆ ಯುದ್ಧ ನಡೆಯುತ್ತದೆ. ರಾಜನು ಪ್ರಜೆಗಳಿಗೆ ಬೇಕಾಗುವಷ್ಟು ಆಹಾರವನ್ನು ರಣಥಂಬೋರ್‌ ಕೋಟೆಯಲ್ಲಿ ಬಚ್ಚಿಟ್ಟಿದ್ದನು. ಯುದ್ಧ ಅನೇಕ ದಿನಗಳ ವರೆಗೆ ಮುಂದುವರೆಯಿತು. ಗೋಡಾನ್‌ನಲ್ಲಿದ್ದ ಆಹಾರವೆಲ್ಲಾ ಕಾಲಿಯಾಗುತ್ತಾ ಬಂದವು. ರಾಜ ಗಣೇಶನ ಪರಮ ಭಕ್ತನಾಗಿದ್ದನು. ಗಣೇಶ ರಾಜನ ಕನಸಿನಲ್ಲಿ ಬಂದು ನಾಳೆ ಬೆಳಗ್ಗೆ ಹೊತ್ತಿಗೆ ಎಲ್ಲವೂ ಸರಿಯಾಗಿ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ.

 ದೇವಸ್ಥಾನದ ನಿರ್ಮಾಣ

ದೇವಸ್ಥಾನದ ನಿರ್ಮಾಣ

ಬೆಳಗ್ಗೆ ಎದ್ದು ಕೋಟೆಯ ಗೋಡೆಯ ಮೇಲೆ ತ್ರಿ ನೇತ್ರ ಗಣೇಶನ ಚಿತ್ರವನ್ನು ಅಂಟಿಸಲಾಗಿತ್ತು. ಯುದ್ಧ ಕೊನೆಗೊಂಡಿತ್ತು. ಹಾಗಾಗಿ ರಾಜನು ಕ್ರಿ.ಶ 1300 ರಲ್ಲಿ ಗಣೇಶನ ಈ ದೇವಸ್ಥಾನವನ್ನು ನಿರ್ಮಿಸಿದನು.

ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X