• Follow NativePlanet
Share
» »ಈ ದೇವಾಲಯ ತ್ರಿಮೂರ್ತಿಗಳು ನೆಲೆಸಿರುವ ಪವಿತ್ರ ಪುಣ್ಯ ಕ್ಷೇತ್ರ....

ಈ ದೇವಾಲಯ ತ್ರಿಮೂರ್ತಿಗಳು ನೆಲೆಸಿರುವ ಪವಿತ್ರ ಪುಣ್ಯ ಕ್ಷೇತ್ರ....

Written By:

ತ್ರ್ಯಂಬಕೇಶ್ವರ ದೇವಾಲಯವು ಹಿಂದೂಗಳ ಪವಿತ್ರವಾದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯದ ವಿಶೇಷವೆನೆಂದರೆ ತ್ರಿಮೂರ್ತಿಗಳು ಒಂದೇ ಸ್ಥಳದಲ್ಲಿ ನೆಲೆಸಿರುವುದು. ಈ ತೀರ್ಥಕ್ಷೇತ್ರವು ಮಾಹಾರಾಷ್ಟ್ರದಲ್ಲಿದೆ. ಇದೊಂದು ಪ್ರಾಚೀನವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ನಾಶಿಕ್ ನಗರದಿಂದ 28 ಕಿ.ಮೀ ದೂರದಲ್ಲಿ ಗೋದಾವರಿ ನದಿಯ ಉಗಮಸ್ಥಾನದ ಬಳಿಯಲ್ಲಿದೆ. ಇಲ್ಲಿನ ಲಿಂಗವು ದ್ವಾದಶ ಜ್ಯೋರ್ತಿಲಿಂಗಗಳಲ್ಲಿ ಒಂದಾಗಿದೆ.

ತ್ರ್ಯಂಬಕೇಶ್ವರದ ವೈಶಿಷ್ಟತೆ ಏನೆಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು, ಆ ಮುಖಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಪ್ರತೀಕವಾಗಿದೆ. ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ತ್ರ್ಯಂಬಕೇಶ್ವರ ದೇವಾಲಯವನ್ನು ಕರಿ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಸ್ಥಳ ಪುರಾಣ ಅತ್ಯಂತ ರೋಚಕವಾಗಿದೆ.

ಪ್ರಸ್ತುತ ಲೇಖನದಲ್ಲಿ ತ್ರ್ಯಂಬಕೇಶ್ವರದಲ್ಲಿನ ತ್ರಿಮೂರ್ತಿಗಳು ನೆಲೆಸಿರುವುದರ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ತ್ರ್ಯಂಬಕೇಶ್ವರ ತೀರ್ಥಕ್ಷೇತ್ರವು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿದೆ. ಇದೊಂದು ಪ್ರಾಚೀನವಾದ ಹಿಂದೂ ದೇವಾಲಯವಾಗಿದೆ. ಇದು ನಾಶಿಕ್ ನಗರದಿಂದ ಸುಮಾರು 28 ಕಿ.ಮೀ ದೂರದಲ್ಲಿದೆ.

ನಿರ್ಮಾಣ

ನಿರ್ಮಾಣ

ಈ ತ್ರ್ಯಂಬಕೇಶ್ವರ ದೇವಾಲಯವನ್ನು ಕ್ರಿ.ಶ 1755 ನಿಂದ 1786ರ ಮಧ್ಯ ಭಾಗದಲ್ಲಿ ನಾನಾ ಸಾಹೇಬ್ ಪೇಶ್ವೆ ನಿರ್ಮಾಣ ಮಾಡಿದನು. ಈ ದೇವಾಲಯವು ನೋಡುವುದಕ್ಕೆ ಅತ್ಯಂತ ಸುಂದರವಾಗಿದ್ದು, ಕಪ್ಪು ಕಲ್ಲನ್ನು ಬಳಸಿ ನಿರ್ಮಾಣ ಮಾಡಲಾಗಿದೆ.

ಮಾಹಿಮಾನ್ವಿತ ದೇವಾಲಯ

ಮಾಹಿಮಾನ್ವಿತ ದೇವಾಲಯ

ಪಂಚ ಧಾತೂಗಳಿಂದ ನಿರ್ಮಾಣ ಮಾಡಿರುವ ಧ್ವಜ ಸ್ತಂಭ ಈ ಮಂದಿರ ಮತ್ತೊಂದು ಆರ್ಕಷಣೆಯಾಗಿದೆ. ದೇವಾಲಯದ ಮುಂದೆ ಮಾಹಾ ನಂದಿಯು ನೆಲಸಿದ್ದಾನೆ. ಒಳ ಪ್ರವೇಶ ಮಾಡಿದರೆ ಶಿವನ ಜ್ಯೋರ್ತಿಲಿಂಗವನ್ನು ದರ್ಶನ ಮಾಡಿಕೊಳ್ಳಬಹುದು.

ತ್ರಿಮೂರ್ತಿಗಳು

ತ್ರಿಮೂರ್ತಿಗಳು

ಈ ಮಾಹಿಮಾನ್ವಿತವಾದ ಲಿಂಗದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ. ಇಂಥಹ ಅದ್ವಿತೀಯವಾದ ವಿಶೇಷವನ್ನು ಈ ತ್ರ್ಯಂಬಕೇಶ್ವರ ದೇವಾಲಯದಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ.

ಅಲಂಕಾರ

ಅಲಂಕಾರ

ಈ ದೇವಾಲಯದಲ್ಲಿ ತ್ರಿಮೂರ್ತಿಗಳ ಅಲಂಕಾರ ಹೇಗೆ ಇರುತ್ತದೆ ಎಂದರೆ ಬಂಗಾರದ ಮುಖವಾಡವನ್ನು ಲಿಂಗದ ಮೇಲೆ ಇಟ್ಟು, ಅದರ ಮೇಲೆ ಚಿನ್ನದ ಕಿರೀಟವನ್ನು ಹಾಕಿ ಅಲಂಕಾರ ಮಾಡುತ್ತಾರೆ. ಪೇಶ್ವೆಯರ ಕಾಲದಿಂದಲೂ ಕೂಡ ಸ್ವಾಮಿಯರಿಗೆ ಸ್ವರ್ಣ ಭರಿತ ಭೂಷಿತರಾಗಿ ಅಲಂಕಾರ ಮಾಡುತ್ತಾರಂತೆ.

ಕಿರೀಟ

ಕಿರೀಟ

ತ್ರ್ಯಂಬಕೇಶ್ವರನಿಗೆ ಅಲಂಕಾರಕ್ಕೆ ಹಾಕಲಾಗುವ ಆ ಕಿರೀಟವು ರತ್ನ, ವಜ್ರ, ವೈಡೂರ್ಯಗಳಿಂದ ಕೂಡಿರುವ ಬೆಲೆ ಕಟ್ಟಲಾಗದಷ್ಟು ಸುಂದರವಾಗಿದೆ. ಈ ಕಿರೀಟವನ್ನು ಪಾಂಡವರ ಕಾಲದ್ದು ಎಂದು ಹೇಳಲಾಗುತ್ತದೆ.

ಯಾವಾಗ ಅಲಂಕರಿಸುತ್ತಾರೆ.

ಯಾವಾಗ ಅಲಂಕರಿಸುತ್ತಾರೆ.

ಮಹಾ ಶಿವರಾತ್ರಿ, ಕಾರ್ತಿಕ ಪೌರ್ಣಮಿ, ಪ್ರತಿ ಸೋಮವಾರ ದಿನಗಳಲ್ಲಿ ಕುಶಾವರ್ತ ತೀರ್ಥ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ನಂತರ ಉತ್ಸವದಲ್ಲೂ ಕೂಡ ಹಾಕುತ್ತಾರೆ. ಒಂದು ಕಾಲದಲ್ಲಿ ನಾಸಿಕ್ ಮಣಿ ಎಂದು ಕರೆಯುವ ನೀಲ ಮಣಿ ಕೂಡ ಕಿರೀಟದ ಅಲಂಕಾರದಲ್ಲಿ ಇರುತ್ತಿತ್ತಂತೆ.

ಯುದ್ಧಗಳು

ಯುದ್ಧಗಳು

ಮರಾಠರ ಹಾಗು ಆಂಗ್ಲರ ನಡುವೆ ನಡೆದ ಯುದ್ಧದಲ್ಲಿ ಆಂಗ್ಲಿಯರ ಕೈಗೆ ಸೇರಿತು ನೀಲ ಮಣಿ. ದೇವಾಲಯದಿಂದ 5 ನಿಮಿಷಗಳ ನಡಿಗೆ ಮಾಡಿದರೆ ಕುಶಾವರ್ಥ ತೀರ್ಥವಿದೆ. ಇದನ್ನು ಓಲ್ ಓಕರ್ ರಾವಜಿ ಸಾಹೇಬ್ ಪಾಟ್ನೇಕರ್ ಕ್ರಿ,ಶ 1699 ರಲ್ಲಿ ನಿರ್ಮಾಣ ಮಾಡಿದನಂತೆ.

ಕುಂಭಮೇಳ

ಕುಂಭಮೇಳ

ಈ ಕುಶಾವರ್ಥ ತೀರ್ಥವು 12 ವರ್ಷಕ್ಕೆ ಒಮ್ಮೆ ಬರುವ ಕುಂಭಮೇಳಕ್ಕೆ ಆರಂಭ ಸ್ಥಳವಾಗಿದೆ. ದೇಶದ ಮೂಲೆ ಮೂಲೆಗಳಿಂದ ಸಾಧುಗಳು ಇಲ್ಲಿಗೆ ಸ್ನಾನ ಮಾಡಲು ಭೇಟಿ ನೀಡುತ್ತಾರೆ. ಸಾಧುಗಳು ಸ್ನಾನ ಮಾಡಿದ ನಂತರವೇ ಸಾಮಾನ್ಯರಿಗೆ ಸ್ನಾನ ಮಾಡಲು ಅವಕಾಶ ನೀಡುತ್ತಾರೆ.

ಗೌತಮ ಮಹರ್ಷಿ

ಗೌತಮ ಮಹರ್ಷಿ

ಗೌತಮ ಮಹರ್ಷಿ ತನ್ನ ಗೋಹತ್ಯ ಪಾತಕವನ್ನು ಈ ಕುಶಾರ್ಥ ತೀರ್ಥದಲ್ಲಿ ಸ್ನಾನ ಆಚರಿಸಿದರೆ ದೋಷ ಹೋಗಿಸಿಕೊಂಡರಂತೆ ಎಂಬುದು ಪುರಾಣ ಇತಿಹಾಸ. ಅಂದಿಗೆ ಭಾರಿ ಮಳೆಯಿಂದಾಗಿ ಬರಗಾಲ ಏರ್ಪಟ್ಟಿತಂತೆ. ತನ್ನ ಆಶ್ರಯ ತಾಣದಲ್ಲಿನ ಸ್ವಲ್ಪಭಾಗದಲ್ಲಿಯೇ ಧಾನ್ಯಗಳನ್ನು ಬೆಳಸಿ ಋಷಿಗಳಿಗೆ ಭೋಜನವನ್ನು ಬಡಿಸುತ್ತಿದ್ದರಂತೆ ಗೌತಮ ಮಹರ್ಷಿ.

ಹಸು

ಹಸು

ಒಮ್ಮೆ ಆತನ ಹೊಲದಲ್ಲಿ ದನವು ಮೇಯುತ್ತರುವುದನ್ನು ಕಂಡು ಒಮ್ಮೆ ದರ್ಭೆಯಿಂದ ಹೊಡೆದನಂತೆ, ಸೂಜಿಯು ಚುಚ್ಚಿಕೊಂಡು ಆ ದನವು ಹಾಗೆಯೇ ಸತ್ತು ಹೋಯಿತ್ತಂತೆ. ಇದರಿಂದ ಗೋಹತ್ಯೆ ಪಾತಕದ ದೋಷವನ್ನು ಪರಿಹಾರ ಮಾಡಿಕೊಳ್ಳಲು ಗಂಗೆಯಲ್ಲಿ ಸ್ನಾನ ಮಾಡಬೇಕು ಎಂದು ಕೊಂಡನಂತೆ.

ಬ್ರಹ್ಮಗಿರಿ

ಬ್ರಹ್ಮಗಿರಿ

ಬ್ರಹ್ಮಗಿರಿಯಲ್ಲಿ ತಪಸ್ಸು ಮಾಡುವ ಸಮಯದಲ್ಲಿ ಶಿವನು ಗಂಗೆಯನ್ನು ಬಿಟ್ಟನಂತೆ. ಶಿವನನ್ನು ಬಿಟ್ಟು ಬರಲು ಇಷ್ಟವಿಲ್ಲದಿದ್ದ ಗಂಗಮ್ಮ ಮೊದಲು ಬ್ರಹ್ಮಗಿರಿ, ಗಂಗಾದ್ವಾರ, ತ್ರ್ಯಂಬಕಾರ, ವರಹ, ರಾಮಲಕ್ಷ್ಮಣ, ಗಂಗಾ ಸಾಗರ, ಹೀಗೆ ಆನೇಕ ಸ್ಥಳದಲ್ಲಿ ಇದ್ದು, ಮಾಯವಾಗುತ್ತಿದ್ದಳಂತೆ. ಅಡ್ಡಕಟ್ಟಿ ನೀರನ್ನು ನಿಲ್ಲಿಸಿ ಗೌತಮ ಸ್ನಾನ ಮಾಡಿನಂತೆ. ಅದೇ ಕುಶಾವರ್ಥ ತೀರ್ಥವಾಗಿದೆ.

ಅಂಜನೇರಿ

ಅಂಜನೇರಿ

ಈ ತ್ರ್ಯಂಬಕೇಶ್ವರ ದೇವಾಲಯದಿಂದ ಸುಮಾರು 2 ಕಿ.ಮೀ ದೂರದಲ್ಲಿ ಅಂಜನೇರಿ ಪರ್ವತವಿದೆ. ಈ ಪರ್ವತವೇ ಹನುಮಂತನ ಜನ್ಮ ಸ್ಥಳ ಎಂದು ಹೇಳಲಾಗುತ್ತದೆ.

ಇತರೆ ದೇವಾಲಯಗಳು

ಇತರೆ ದೇವಾಲಯಗಳು

ಇಲ್ಲಿನ ನೀಲ ಪರ್ವತದ ಮೇಲೆ ನೀಲಾಂಬ, ಮನ್ನಾಂಬಾ, ರೇಣುಕಾ ದೇವಿಯರ ಇನ್ನೂ ಹಲವಾರು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ವೇದ ಪಾಠ ಶಾಲೆ ಮತ್ತು ವೇದ ಗುರುಕುಲಗಳನ್ನು ಕಾಣಬಹುದಾಗಿದೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಈ ತ್ರ್ಯಂಬಕೇಶ್ವ ದೇವಾಲಯಕ್ಕೆ ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಮುಂಬೈ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ 166 ಕಿ.ಮೀ ದೂರದಲ್ಲಿ ತ್ರ್ಯಂಬಕೇಶ್ವರ ದೇವಾಲಯವಿದೆ. ಮತ್ತೊಂದು ವಿಮಾನ ನಿಲ್ದಾಣವೆಂದರೆ ಅದು ಔರಂಗಬಾದ್ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 204 ಕಿ.ಮೀ ದೂರದಲ್ಲಿ ಈ ತ್ರ್ಯಂಬಕೇಶ್ವರ ದೇವಾಲಯವಿದೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ತ್ರ್ಯಂಬಕೇಶ್ವರ ದೇವಾಲಯಕ್ಕೆ ತಲುಪಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ನಾಶಿಕ್. ಇಲ್ಲಿಂದ ಸುಮಾರು 36 ಕಿ.ಮೀ ದೂರದಲ್ಲಿ ದೇವಾಲಯವಿದೆ. ಈ ರೈಲು ಭಾರತದ ಹಲವಾರು ಪ್ರಧಾನ ನಗರಗಳ ಸಂಪರ್ಕವನ್ನು ಸಾಧಿಸುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ