Search
  • Follow NativePlanet
Share
» »ಟ್ರಕ್ಕಿಂಗ್ (ಚಾರಣ) ಮಾಡಲು ಅನುಕೂಲವಾಗುವ ಕೂರ್ಗ್ ನ 5 ಶಿಖರಗಳು

ಟ್ರಕ್ಕಿಂಗ್ (ಚಾರಣ) ಮಾಡಲು ಅನುಕೂಲವಾಗುವ ಕೂರ್ಗ್ ನ 5 ಶಿಖರಗಳು

ಕೊಡಗಿನ ಕೆಲವು ಅತ್ಯುತ್ತಮ ಟ್ರೆಕ್ಕಿಂಗ್ ತಾಣಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಓದಿ.

By Manjula Balaraj Tantry

ಕೂರ್ಗ್ ಅನ್ನು ದಿ ಸ್ಕಾಟ್ಲೆಂಡ್ ಆಫ್ ದಿ ಈಸ್ಟ್ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ ಮತ್ತು ಇದು ದೇಶದಾದ್ಯಂತದ ಚಾರಣ ಉತ್ಸಾಹಿಗಳನ್ನು ಆಕರ್ಷಿಸುವ ದೊಡ್ಡ ಪರ್ವತ ಶಿಖರಗಳಿಗೆ ನೆಲೆಯಾಗಿದೆ.

ಟ್ರಕ್ಕಿಂಗ್ ನಂತಹ ಸಾಹಸಮಯ ಚಟುವಟಿಕೆಗಳು ಜನರು ತುಂಬಾ ಇಷ್ಟ ಪಡುವಂತಹ ಅಭಿರುಚಿಗಳಲ್ಲೊಂದು. ಕೆಲವು ಟಕ್ಕಿಂಗ್ ಗಳನ್ನು ಕೆಲವೇ ಗಂಟೆಗಳಲ್ಲಿ ಮುಗಿಸಬಹುದು ಆದರೆ ಕೆಲವು ಸುಮಾರು 20 ದಿವಸಗಳಿಗಿಂತಲೂ ಹೆಚ್ಚಿನ ಕಾಲವನ್ನು ತೆಗೆದುಕೊಳ್ಳುತ್ತದೆ. ಚಾರಣ ಪ್ರಿಯರು ಯಾವಾಗಲೂ ಪರ್ವತದ ಶಿಖರ, ಎತ್ತರ ಹಾಗೂ ಭಯ ಹುಟ್ಟಿಸುವಂತಹ ಸ್ಥಳಗಳನ್ನೇ ಆಯ್ಕೆ ಮಾಡುತ್ತಾರೆ.

ವೇಗವಾಗಿ ಓಡುತ್ತಿರುವ ದೈನಂದಿನ ಜೀವನದಲ್ಲಿ ಜನರು ತಮಗಾಗಿ ಕಾಲವನ್ನು ವ್ಯಯಿಸುವುದೇ ಕಡಿಮೆಯಾಗಿದೆ. ಆದುದರಿಂದ ಜನರು ರಜಾದಿನಗಳನ್ನು ಕಳೆಯಲು ಅಥವಾ ವಾರಾಂತ್ಯವನ್ನು ಕಳೆಯಲು ಯಾವುದಾದರೂ ತಾಣಗಳಿಗೆ ಮೊರೆಹೋಗುತ್ತಾರೆ. ಬೆಂಗಳೂರು ಒಂದು ಅಂತಹ ಸ್ಥಳ ಅಂದರೆ ಇಲ್ಲಿಂದ ಕೆಲವು ಜಾಗಗಳನ್ನು ರಾತ್ರಿ ಕಳೆಯುವಷ್ಟರಲ್ಲಿ ತಲುಪಬಹುದಾಗಿದೆ. ಇಲ್ಲಿಂದ ಸುಮಾರು 4 ತಾಸುಗಳ ಅವಧಿಯಲ್ಲಿ ತಲುಪುವ ಒಂದು ಜಾಗವಿದೆ ಅದೇ ನಿತ್ಯ ಮನಮೋಹಕ ಕೂರ್ಗ್.

ಇದು ಬೆಂಗಳೂರಿನಿಂದ ಸುಮಾರು 250 ಕಿ.ಮೀ ಅಂತರದಲ್ಲಿದೆ. ಕೂರ್ಗನ್ನು ಕೊಡಗು ಎಂದೂ ಕರೆಯುತ್ತಾರೆ. ಈ ಪರ್ವತಶ್ರೇಣಿಗಳ ನಗರವು ಅನೇಕ ಪರ್ವತಗಳು ಮತ್ತು ಕಣಿವೆಗಳ ಮಧ್ಯೆ ನೆಲೆಸಿದೆ ಮತ್ತು ಇಲ್ಲಿಂದ ಕೆಲವು ಸುಂದರವಾದ ಪರ್ವತಗಳನ್ನು ಸುಲಭವಾಗಿ ತಲುಪಬಹುದು.

ಇಲ್ಲಿನ ಶಿಖರಗಳಲ್ಲಿ ಅನೇಕ ಭೂ ಪ್ರದೇಶಗಳನ್ನು ಅನ್ವೇಷಿಸಬಹುದಾಗಿದೆ. ಚಾರಣಿಗರಿಗೆ, ಇಲ್ಲಿ ಚಾರಣ ಮಾಡಲು ಸುಲಭವಾದ ರೀತಿಯಿಂದ ಹಿಡಿದು ಕಷ್ಟಕರವಾದ ಮತ್ತು ಅನೇಕ ಅನೇಕ ಸವಾಲುಗಳನ್ನು ನೀಡುವ ಪರ್ವತ ಶ್ರೇಣಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ಕೋಪಟ್ಟಿ

ಕೋಪಟ್ಟಿ

PC: Rajeev Rajagopalan

ಇದು 4300 ಅಡಿ ಎತ್ತರದಲ್ಲಿದೆ, ಕೋಪಟ್ಟಿಯು ಈ ಪ್ರದೇಶದ ಗುಪ್ತ ಮಾಣಿಕ್ಯವಾಗಿದೆ. ಇಲ್ಲಿ ಚಾರಣವು ಚೆರಂಬಾಣೆಯಿಂದ ಪ್ರಾರಂಭಗೊಳ್ಳುತ್ತದೆ. ಇದು ಮಡಿಕೇರಿಯಿಂದ ಸುಮಾರು 50 ಕಿ. ಮೀ ದೂರದಲ್ಲಿದೆ. ಇದು ನಿಮ್ಮನ್ನು ದಟ್ಟವಾದ ಕಾಡುಗಳ ಮಧ್ಯದಲ್ಲಿ ಕರೆದುಕೊಂಡುಹೋಗುತ್ತದೆ. ಸಣ್ಣ ಸಣ್ಣ ತೊರೆಗಳು, ಭತ್ತದ ಆವೃತ್ತವಾಗಿರುವ ಗದ್ದೆಗಳು, ತಾಜಾ ಹಸಿರು ಹುಲ್ಲುಗಾವಲು ಪ್ರದೇಶಗಳು ಮತ್ತು ಹಲವಾರು ಇತರ ಭೂಪ್ರದೇಶಗಳನ್ನು ಇಲ್ಲಿ ಕಾಣಬಹುದಾಗಿದೆ.

ಈ ಭೂ ಪ್ರದೇಶವು ನಿಮ್ಮನ್ನು ಮಂಡಲಪಟ್ಟಿ ಶ್ರೇಣಿಗಳ ವರೆಗೆ ಕೊಂಡೊಯ್ಯುತ್ತದೆ. ಅಲ್ಲಿಂದ ನಿಮಗೆ ಕೋಪಟ್ಟಿ ಎನ್ನುವ ಸ್ಥಳ ಕಾಣಸಿಗುತ್ತದೆ. ಇಲ್ಲಿ ಚಾರಣ ಮಾಡುವುದು ತುಂಬಾ ಕಷ್ಟಕರವಾದುದರಿಂದ ಅರಣ್ಯದ ಚೆಕ್ ಪೋಸ್ಟ್ ನಲ್ಲಿರುವ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುವುದು.

ಬ್ರಹ್ಮಗಿರಿ

ಬ್ರಹ್ಮಗಿರಿ

PC: Rajeev Rajagopalan

ಬ್ರಹ್ಮಗಿರಿಯು ಕೂರ್ಗ್ ಮತ್ತು ವಯನಾಡಿನ ಗಡಿಪ್ರದೇಶದಲ್ಲಿದೆ. ಇದು 5,276 ಅಡಿ ಎತ್ತರದಲ್ಲಿದೆ. ಇಲ್ಲಿನ ಚಾರಣ ತುಂಬಾ ಪ್ರಸಿದ್ದಿ ಪಡೆದಿದ್ದು ಇದು ಕೂರ್ಗ್ ನ ಎರಡನೇ ದೊಡ್ಡ ಪರ್ವತ ವಾಗಿದೆ. ಇಲ್ಲಿ ಚಾರಣದ ಪ್ರವೇಶಕ್ಕೆ ಕೆಲವು ಮಾರ್ಗಗಳಿವೆ ಮತ್ತು ಅವುಗಳಲ್ಲಿ ಹೆಚ್ಚಾಗಿ ಮಡಿಕೇರಿನಿಂದ 80 ಕಿ.ಮೀ ಮತ್ತು ಶ್ರೀಮಂಗಲದಿಂದ 10 ಕಿ.ಮೀ ದೂರದಲ್ಲಿರುವ ಇರುಪ್ಪು ಜಲಪಾತದಿಂದ ಇರುವ ಮಾರ್ಗವನ್ನು ಆಯ್ಕೆಮಾಡಲಾಗುತ್ತದೆ. .

ಶಿಖರವನ್ನು ಹತ್ತುವ ಮೊದಲು ಶ್ರೀಮಂಗಲದಿಂದ ಅನುಮತಿಯನ್ನು ಪಡೆಯಬೇಕಾಗುವುದು. ಈ ಚಾರಣವು ಸಾಕಷ್ಟು ಸವಾಲುದಾಯಕವಾಗಿದ್ದು ನಿಮ್ಮ ಶಕ್ತಿಯ ಮಟ್ಟ ಮತ್ತು ಸಹನೆಯನ್ನು ಪರೀಕ್ಷಿಸುತ್ತದೆ.

ಕೋಟೆ ಬೆಟ್ಟ

ಕೋಟೆ ಬೆಟ್ಟ

PC: Abhijit Shylanath

ಫೋರ್ಟ್ ಹಿಲ್ ಎಂದೂ ಕೂಡಾ ಇದನ್ನು ಕರೆಯಲಾಗುತ್ತದೆ. ಇದು ಕೂರ್ಗನ ಮೂರನೇ ಅತೀ ಎತ್ತರದ ಪರ್ವತವಾಗಿದೆ. ಇಲ್ಲಿ ಮಂಡಾಪುರದಿಂದ ಚಾರಣವು ಪ್ರಾರಂಭವಾಗುತ್ತದೆ ಇದು ಮಡಿಕೇರಿಯಿಂದ ಸುಮಾರು 15 ಕಿ.ಮೀ ಅಂತರದಲ್ಲಿದೆ.

ಇದು ನಿಮ್ಮನ್ನು ಕಾಡಿನ ಮಾರ್ಗಗಳು ಮತ್ತು ತೆರೆದ ಹುಲ್ಲುಗಾವಲುಗಳ, ತೋಟಗಳು ಹಾಗು ಕೆಲವು ಹಳ್ಳಿಗಳ ಮಾರ್ಗವಾಗಿ ಕರೆದೊಯ್ಯುತ್ತವೆ. ಇಲ್ಲಿ ಚಾರಣ ಮಾಡುವುದು ಅಷ್ಟೇನು ಕಷ್ಟಕರವಲ್ಲ ಆದುದರಿಂದ ಯಾವುದೇ ಅನುಮತಿಯು ಬೇಕಾಗುವುದಿಲ್ಲ.

ನಿಶಾನಿ ಬೆಟ್ಟ

ನಿಶಾನಿ ಬೆಟ್ಟ

PC: Subharnab Majumdar

ಸಮುದ್ರ ಮಟ್ಟದಿಂದ 1270 ಮೀಟರ್ ಎತ್ತರದಲ್ಲಿರುವ ಬ್ರಹ್ಮಗಿರಿ ಶ್ರೇಣಿ ಮತ್ತು ತಲಕಾವೇರಿ ವನ್ಯಜೀವಿಧಾಮದ ಒಂದು ಭಾಗವಾದ ಕಡಿಮೆ ಪ್ರಸಿದ್ಧ ಟ್ರೆಕಿಂಗ್ ತಾಣವೆಂದರೆ ಅದುವೇ ನಿಶಾನಿ ಬೆಟ್ಟ. ಇಲ್ಲಿ ಚಾರಣವು ಭಾಗಮಂಡಲ ನಗರದಿಂದ ಪ್ರಾರಂಭವಾಗುತ್ತದೆ ಇದು ಮಡಿಕೇರಿಯಿಂದ 50 ಕಿ.ಮೀ ದೂರದಲ್ಲಿದೆ.

ಹಸಿರು ಹಸಿರು ಕಾಡು ಮತ್ತು ಹಸಿರು ಹುಲ್ಲುಗಾವಲು ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ನಿಮಗೆ ಕೆಲವು ವನ್ಯಜೀವಿಗಳು ನೋಡಲು ಸಿಗುತ್ತವೆ. ಇಲ್ಲಿ ಚಾರಣವು ಸುಲಭವಾಗಿದ್ದರೂ ಅರಣ್ಯದ ಚೆಕ್ ಪೋಸ್ಟ್ ನಿಂದ ಅನುಮತಿ ಪಡೆಯಲೇ ಬೇಕಾಗುತ್ತದೆ.

ತಡಿಯಂಡಮೋಲ್:

ತಡಿಯಂಡಮೋಲ್:

PC: snapper san

ಇದು ಸುಮಾರು 5735 ಅಡಿ ಎತ್ತರದಲ್ಲಿದ್ದು ಕೂರ್ಗನ ಅತ್ಯಂತ ಪ್ರಸಿದ್ದ ಚಾರಣ ಕೇಂದ್ರವಾಗಿದೆ. ತಡಿಯಂಡಮೋಲ್ ಇಲ್ಲಿನ ಅತ್ಯಂತ ಎತ್ತರದ ಪರ್ವತ ಶಿಖರವಾಗಿದ್ದು ಇದು ಕರ್ನಾಟಕದ ಮೂರನೇ ಎತ್ತರದ ಪರ್ವತ ಶ್ರೇಣಿಯಾಗಿದೆ.

ಇಲ್ಲಿ ಟ್ರಕ್ಕಿಂಗ್ ನಲ್ಕನಾಡ್ ಅರಮನೆಯಿಂದ ಪ್ರಾರಂಭವಾಗುತ್ತದೆ. ಇದು ಮಡಿಕೇರಿಯಿಂದ ಸುಮಾರು 45 ಕಿ.ಮೀ ಅಂತರದಲ್ಲಿದೆ. ಈ ರಸ್ತೆಯಲ್ಲಿ ನಿಮ್ಮ ವಾಹನದಲ್ಲಿ ಕೊನೆಯ ಹೊಮ್ ಸ್ಟೇ ಸಿಗುವವರೆಗೆ ಹೋಗಬಹುದು ಅಲ್ಲಿ ನಿಮಗೆ ಕಾಂಕ್ರೀಟ್ ರಸ್ತೆಯು ಇರುತ್ತದೆ. ಇಲ್ಲಿ ತೊರೆಗಳನ್ನು ದಾಟಲು ಸಿದ್ದರಾಗಿರ ಬೇಕಾಗುತ್ತದೆ ಮತ್ತು ಇಲ್ಲಿ ಹೋಗುವಾಗ ಜಿಗಣೆಗಳು ದಾಳಿಮಾಡಬಹುದು ಆದರೂ ಇಲ್ಲಿಯ ಬೆರಗುಗೊಳಿಸುವ ದೃಶ್ಯಗಳನ್ನು ಚಾರಣಿಗರು ಆಸ್ವಾದಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X