Search
  • Follow NativePlanet
Share
» »ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?

ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?

ಮುಂಬೈ ಸಮೀಪದಲ್ಲಿರುವ ಕಲಾವಂತಿನ್ ದುರ್ಗಾ ಅಪಾಯಕಾರಿ ಟ್ರಕ್ಕಿಂಗ್‌ಗೆ ಹೆಸರುವಾಸಿಯಾದಂತಹ ತಾಣವಾಗಿದೆ. ಇದು ಸಾಕಷ್ಟು ಚಾರಣಿಗರನ್ನು ಭಯಬೀತಗೊಳಿಸಿದೆ. ಆದರೂ ಇದೂ ಮತ್ತಷ್ಟು ಚಾರಣಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಈ ಭೀಕರ ಕೋಟೆಯು ಮಹಾರಾಷ್ಟ್ರದ ಮಾಥೆರಾನ್ ಮತ್ತು ಪನ್ವೆಲ್ ಬೆಟ್ಟಗಳ ಮಧ್ಯೆ ಇದೆ. ಮುಂಬೈಯಿಂದ ಕೇವಲ50ಕಿ.ಮೀ ದೂರದಲ್ಲಿದೆ. ಸುಮಾರು 2,300 ಫೀಟ್ ಎತ್ತರವಿದ್ದು ಹಲವು ಶತಮಾನ ಹಳೆಯ ಕೋಟೆ ಎನ್ನಲಾಗುತ್ತಿದೆ.

ಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲ

ಅತ್ಯಂತ ಅಪಾಯಕಾರಿ ಕೋಟೆ

ಅತ್ಯಂತ ಅಪಾಯಕಾರಿ ಕೋಟೆ

PC: Dinesh Valke

ಚಾರಣಿಗರು ಬಂಡೆಗಳ ಹಾಗೂ ಹರಿತವಾದ ಮೆಟ್ಟಿಲುಗಳ ಮೇಲೆ ಯಾವುದೇ ಸಪೋರ್ಟ್ ಇಲ್ಲದೆ ಏರಬೇಕು. ಈ ಕೋಟೆ ಏರಲು ದೇಹ, ಮನಸ್ಸು, ಶಕ್ತಿ ಎಲ್ಲವೂ ಸರಿಯಾಗಿರಬೇಕು, ಭಾರತದ ಅತ್ಯಂತ ಅಪಾಯಕಾರಿ ಕೋಟೆ ಇದು ಎನ್ನುವುದು ಇಲ್ಲಿ ಒಮ್ಮೆ ಚಾರಣಮಾಡಿದವರಿಗೆ ತಿಳಿದಿರಬಹುದು.

ಕೋಟೆಯ ಮೇಲಿನಿಂದ ಮುಂಬೈ ಕಾಣಿಸುತ್ತದೆ

ಕೋಟೆಯ ಮೇಲಿನಿಂದ ಮುಂಬೈ ಕಾಣಿಸುತ್ತದೆ

PC:Rohit Gowaika

ಈ ಕೋಟೆಯ ಸೌಂದರ್ಯವೂ ಬಹಳ ಸುಂದರವಾಗಿದೆ. ಹಾಗಾಗಿ ಜನರು ಇಷ್ಟೊಂದು ಕಠಿಣವಾಗಿರುವ ಕೋಟೆಗೆ ಚಾರಣಕ್ಕೆ ಹೋಗಲು ಇಚ್ಛಿಸುತ್ತಾರೆ. ಚಾಂದೇರಿ, ಮಾಥೆರಾನ್, ಕರ್ನಾಲ್ ಮತ್ತು ಇರ್ಷಲ್ ಕಲಾವಂತಿ ಕೋಟೆಯ ಮೇಲಿನಿಂದ ಕಾಣಿಸುತ್ತದೆ, ಹಾಗೆಯೇ ಮುಂಬೈನ ಸ್ವಲ್ಪ ಭಾಗವು ಈ ಕೋಟೆಯ ಮೇಲಿನಿಂದ ಕಾಣಿಸುತ್ತದೆ.

ಕೋಟೆಯ ಇತಿಹಾಸ

ಕೋಟೆಯ ಇತಿಹಾಸ

PC:Dinesh Valke

ಕೆಲವೇ ಕೆಲವು ಮಂದಿಗೆ ಪ್ರಬಲ್‌ಘಡ್ ಕೋಟೆಯ ಬಗ್ಗೆ ತಿಳಿದಿದೆ. ಈ ಕೋಟೆಗೆ ಮುರನ್ಜನ್ ಕೋಟೆಯೆಂದು ಕರೆಯಲಾಗುತ್ತಿತ್ತು. ಕೆಲವರು ಇದನ್ನು ಕಾಳವಂತಿನ್ ಎನ್ನುವ ರಾಣಿಯ ಹೆಸರಿನಿಂದ ಕರೆಯುತ್ತಿದ್ದರು. ನಂತರ, ಕಲಾವಂತಿನ್ ಕೋಟೆ ಎನ್ನುವ ಹೆಸರನ್ನು ಛತ್ರಪತಿ ಶಿವಾಜಿಯ ಆಳ್ವಿಕೆಯಲ್ಲಿ ಕೈಬಿಡಲಾಯಿತು.

ತಲಪುವುದು ಹೇಗೆ?

ತಲಪುವುದು ಹೇಗೆ?

PC: Dinesh Valke

ಚಾರಣಿಗರು ಸಾಮಾನ್ಯವಾಗಿ ತಕ್ಕುರ್‌ವಾಡಿ ಹಳ್ಳಿಯಿಂದ ಪ್ರಾರಂಭಿಸುತ್ತಾರೆ. ಈ ಪ್ರದೇಶಕ್ಕೆ ತಲುಪಲು ಮುಂಬೈನಿಂದ ಪಾನ್‌ವೆಲ್‌ಗೆ ರೈಲು ಹತ್ತಿ ನಂತರ ಅಲ್ಲಿಂದ ಲೋಕಲ್ ಬಸ್ ಹಿಡಿದು ಈ ಕೋಟೆ ಇರುವ ಸ್ಥಳಕ್ಕೆ ತಲುಪಬಹುದು. ಇಲ್ಲಿಗೆ ನೀವು ಟ್ರಾವೆಲ್ ಏಜೆನ್ಸಿಯವರು ಟ್ರಕ್ಕಿಂಗ್ ವ್ಯವಸ್ಥೆಯನ್ನು ಪಡೆಯಬಹುದು. ಇಲ್ಲವಾದಲ್ಲಿ ನೀವಾಗಿಯೇ ಟ್ರಕ್ಕಿಂಗ್‌ಗೆ ಹೋಗಬಹುದು. ಒಂದು ವೇಳೆ ನೀವು ಟ್ರಾವೆಲ್ ಏಜೆನ್ಸಿಯವರ ಏರ್ಪಡಿಸುವ ಟ್ರಕ್ಕಿಂಗ್‌ ವ್ಯವಸ್ಥೆಯನ್ನು ಪಡೆಯುವುದಾದರೆ ನಿಮಗೆ ಟ್ರಕ್ಕಿಂಗ್ ಜೊತೆಗೆ ರಾತ್ರಿ ಕ್ಯಾಂಪ್ ಫೈಯರ್ ಹಾಗು ಉಳಿಯುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದೂ ಬರೀ 1000 ರೂ. ಯಲ್ಲಿ

ಇಲ್ಲಿಗೆ ಹೋಗಲು ಉತ್ತಮ ಸಮಯ

ಇಲ್ಲಿಗೆ ಹೋಗಲು ಉತ್ತಮ ಸಮಯ

PC: Niteshsavane143

ಚಾರಣಕ್ಕೆ ಹೋಗುವುದಾದರೆ ಮಳೆಗಾಲದಲ್ಲಿ ಹೋಗಬಾರದು. ಯಾಕೆಂದರೆ ಮಳೆಗಾಲದಲ್ಲಿ ಬಂಡೆಕಲ್ಲುಗಳೆಲ್ಲಾ ಪಾಚಿ ಹಿಡಿದು ಜಾರುತ್ತಿರುತ್ತವೆ. ನಡೆಯಲು ಆಗೋದಿಲ್ಲ. ಜಾರಿ ಬೀಳುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಅಕ್ಟೋಬರ್‌ನಿಂದ ಮಾರ್ಚ್‌ಗೆ ಟ್ರಕ್ಕಿಂಗ್ ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X