Search
  • Follow NativePlanet
Share
» »ಹತ್ತು ಮಹಾನಗರಗಳ ಆಯ್ದ ಪ್ರವಾಸಿ ಚಿತ್ರಗಳು

ಹತ್ತು ಮಹಾನಗರಗಳ ಆಯ್ದ ಪ್ರವಾಸಿ ಚಿತ್ರಗಳು

By Vijay

80 ಹಾಗೂ 90 ರ ದಶಕದಲ್ಲಿ ದೆಹಲಿ, ಕೊಲ್ಕತ್ತಾ, ಚೆನ್ನೈ ಹಾಗೂ ಮುಂಬೈ ನಗರಗಳು ದೇಶದ ನಾಲ್ಕು ಮಹಾ ನಗರಗಳು ಎಂಬ ಖ್ಯಾತಿಗೆ ಪಾತ್ರವಾಗಿದ್ದವು. 2000 ರ ಸಮಯದ ನಂತರ ದೇಶದೆಲ್ಲೆಡೆ ಮಾಹಿತಿ ತಂತ್ರಜ್ಞಾನದ ಕ್ರಾಂತಿ ಉಂಟಾಗಿ ಸಾಕಷ್ಟು ಇತರೆ ನಗರಗಳು ಶೀಘ್ರವಾಗಿ ಅಭಿವೃದ್ಧಿಗೊಂಡವು. ಅವುಗಳಲ್ಲಿ ಬೆಂಗಳೂರು, ಹೈದರಾಬಾದ್, ಪುಣೆ, ಅಹ್ಮದಾಬಾದ್, ಜಯಪುರ ಮುಂತಾದವುಗಳು ಪ್ರಮುಖವಾದವುಗಳು.

ಡಾಮೆಸ್ಟಿಕ್ ಫ್ಲೈಟ್‍ಗಳ ಮೇಲೆ 600 ರೂ. ಕಡಿತ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಈ ನಗರಗಳ ಅಭಿವೃದ್ಧಿಯು ಯಾವ ರೀತಿ ವೇಗವಾಗಿ ಆಯಿತೆಂದರೆ ಕೆಲವೆ ಸಮಯದಲ್ಲಿ ಈ ನಗರಗಳು ಕೂಡ "ಮೆಟ್ರೊ" ಅಥವಾ ಮಹಾನಗರಗಳ ಪಟ್ಟಿಗೆ ಸೇರಲ್ಪಟ್ಟವು. ಕೇಂದ್ರ ಜನಗಣತಿ ಆಯೋಗವು ಒಟ್ಟು 46 ಮೆಟ್ರೋಪಾಲಿಟನ್ ನಗರಗಳನ್ನು ಭಾರತದಾದ್ಯಂತ ಗುರುತಿಸಿದ್ದು, ಅವುಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೊದಲ ಹತ್ತು ಪ್ರಮುಖ ಮಹಾನಗರಗಳೆಂದರೆ ಮುಂಬೈ, ದೆಹಲಿ, ಕೊಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ, ಅಹ್ಮದಾಬಾದ್, ಪುಣೆ, ಸೂರತ್ ಹಾಗೂ ಜೈಪುರ.

ವಿಶೇಷ ಲೇಖನ : ಶರ ವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಗಳು

ಮೇಲೆ ನಮೂದಿಸಲಾದ ಆ ಹತ್ತು ಮಹಾ ನಗರಗಳು ದೇಶದ ಪ್ರಮುಖ ಪ್ರವಾಸಿ ತಾಣಗಳೂ ಆಗಿದ್ದು ಕೇವಲ ಭಾರತದ ಇತರೆ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಸಾಕಷ್ಟು ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿಯರು ಈ ಸ್ಥಳಗಳಿಗೆ ಭೇಟಿ ನೀಡಿದ್ದಾಗ ಇಲ್ಲಿನ ಜನಜೀವನದ, ಸಂಸ್ಕೃತಿ-ಸಂಪ್ರದಾಯಗಳನ್ನು ಅನಾವರಣಗೊಳಿಸುವ ವೈವಿಧ್ಯಮಯ ಚಿತ್ರಗಳನ್ನು ಸೆರೆ ಹಿಡಿದಿದ್ದು ಅಂತಹ ಒಂದು ಪ್ರವಾಸಿ ಚಿತ್ರಗಳ ಸಂಕಲನವೇ ಈ ಲೇಖನದ ಸಾರ.

ವಿಶೇಷ ಲೇಖನ : ಪ್ರಮುಖ ನಗರಗಳ ಕಂಗೊಳಿಸುವ ರಾತ್ರಿಗಳು

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಮುಂದಿನ ಸ್ಲೈಡುಗಳಲ್ಲಿ ಮೇಲೆ ಹೇಳಲಾಗಿರುವಂತೆ ಭಾರತದ ಪ್ರಮುಖ ಹತ್ತು ಮಹಾನಗರಗಳ ಕೆಲವು ಆಯ್ದ ಪ್ರವಾಸಿ ಚಿತ್ರಗಳನ್ನು ನೋಡಿ ಆನಂದಿಸಿ ಹಾಗೂ ಅವಕಾಶ ದೊರೆತಾಗ ಈ ನಗರಗಳಿಗೆ ಭೇಟಿ ನೀಡಲು ಮರೆಯದಿರಿ.

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಮುಂಬೈ : ದೇಶದ ಆರ್ಥಿಕ ರಾಜಧಾನಿ, ಅತಿ ದೊಡ್ಡ ವಾಣಿಜ್ಯ ನಗರಿ, ಮಾಯಾ ಲೋಕದ ಸ್ವರ್ಗ, ಚಿತ್ರಗಳ ತವರು ಮುಂತಾದ ಬಿರುದಾವಳಿಗಳನ್ನು ಪಡೆದಿರುವ ಮುಂಬೈ ನಗರ ದಿನ ನಿತ್ಯವೂ ಸಾವಿರಾರು ಜನರು ಸುಂದರವಾದ ಕನಸುಗಳನ್ನು ಹೊತ್ತು ಜೀವನದಲ್ಲಿ ನೆಲೆ ನಿಲ್ಲಬೇಕೆಂದು ಬಯಸಿ ಭೇಟಿ ನೀಡುವ ಒಂದು ಅಮೋಘ ಮಾಯಾ ಲೋಕದ ನಗರವಾಗಿದೆ. ಎಲ್ಲೆಡೆಯು ಕಾಂಕ್ರೀಟ್ ಕಾಡುಗಳಿಂದ ರೂಪಗೊಂಡಿರುವ ಈ ನಗರದಲ್ಲಿ ಅವಕಾಶಗಳಿಗೇನೂ ಕಮ್ಮಿ ಇಲ್ಲ. ಅಂತೆಯೆ ಸಾವಿರಾರು ಜನರು ನಗರಕ್ಕೆ ನಿತ್ಯವೂ ತಮ್ಮ ಜೀವನದ ಕನಸನ್ನು ಕಾಣುತ್ತಾ ಕಾಲಿಡುತ್ತಾರೆ.

ಚಿತ್ರಕೃಪೆ: Sarah Jamerson

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಮುಂಬೈ ಜೀವನ: ಮುಂಬೈನ ಗೇಟ್ ವೆ ಆಫ್ ಇಂಡಿಯಾ ಹಾಗೂ ಅದರ ಹಿಂದೆ ತಲೆ ಎತ್ತಿ ಹೆಮ್ಮೆಯಿಂದ ನಿಂತಿರುವ ಹೋಟೆಲ್ ತಾಜ್.

ಚಿತ್ರಕೃಪೆ: Arian Zwegers

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ರಾತ್ರಿಯಲ್ಲಿ ಬಣ್ಣ ಬಣ್ಣದ ದೀಪಗಳಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಮುಂಬೈ ಮಹಾ ನಗರ. ಮುಂಬೈ ಕುರಿತು ಹೆಚ್ಚಿಗೆ ತಿಳಿಯಿರಿ.

ಚಿತ್ರಕೃಪೆ: Prabu Muthusamy

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ದೆಹಲಿ : ದೇಶದ ರಾಜಧಾನಿಯಲ್ಲಿ ವಸತಿ ಹೂಡುವದೆಂದರೆ ಒಂದು ಅದ್ಭುತ ಅನುಭವ. ಮಾಂತ್ರಿಕ ಜಗತ್ತಿನ ಬೆಂಕಿ ಚಂಡಿನಂತಿರುವ ದೆಹಲಿಗೆ ಪ್ರವಾಸಹೊರಡುವದೆಂದರೆ ಅಳಿಸಲಾರದ ನೆನಪಿನ ಬುತ್ತಿಯನ್ನು ಹೊತ್ತು ತರುವುದು ಖಚಿತ. ದೆಹಲಿ ಭಾರತದ ದೊಡ್ಡನಗರಗಳಲ್ಲೊಂದು ಮಾತ್ರವಲ್ಲದೆ, ಪ್ರಾಚೀನತೆ ಮತ್ತು ಆಧುನಿಕತೆಗಳಿಂದ ಸಮ್ಮಿಳಿತವಾದ ನಗರವಾಗಿದೆ. ಜಗಮಗಿಸುತ್ತಿರುವ ರಾಷ್ಟ್ರಪತಿ ಭವನ.

ಚಿತ್ರಕೃಪೆ: RkRao

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ದೆಹಲಿಯನ್ನು, ಹಿಂದಿ ಭಾಷೆಯಲ್ಲಿ 'ದಿಲ್ಲಿ' ಎಂದು ಸಂಭೋದಿಸುತ್ತಿದ್ದು ಇದು ಅಧಿಕೃತವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಟೆರಿಟರಿ) (NCT) ವಾಗಿದೆ. ಭಾರತದ ರಾಜಧಾನಿಯಾದ ಹೊಸದೆಹಲಿಯೂ ಕೂಡ ಈ NCTಯ ಭಾಗವಾಗಿದೆ. ದೆಹಲಿಯು ಮುಂಬೈ ನಂತರದ ಭಾರತದ ಎರಡನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ದೆಹಲಿಯ ಸುಪ್ರಸಿದ್ಧ ಕುತುಬ್ ಮಿನಾರ್.

ಚಿತ್ರಕೃಪೆ: Koshy Koshy

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ದೆಹಲಿಯ ಇತಿಹಾಸದಂತೆಯೇ ಅದರ ಸಂಸ್ಕೃತಿ ಕೂಡ ಬಹಳ ವೈವಿಧ್ಯಮಯವಾಗಿದೆ. ದೀಪಾವಳಿಯಿಂದ ಹಿಡಿದು ಮಹಾವೀರ ಜಯಂತಿ, ಹೋಳಿ, ಲೋಹ್ರಿ, ಕೃಷ್ಣ ಜನ್ಮಾಷ್ಟಮಿ, ಗುರು ನಾನಕ್ ಜಯಂತಿವರೆಗಿನ ಎಲ್ಲಾ ಪ್ರಮುಖ ಹಿಂದು ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ ಆದರೆ, ಇವುಗಳಿಗಿಂತ ಕುತುಬ್ ಉತ್ಸವ, ಬಸಂತ್ ಪಂಚಮಿ, ವಿಶ್ವ ಪುಸ್ತಕ ಮೇಳ ಮತ್ತು ಅಂತಾರಾಷ್ಟ್ರೀಯ ಮಾವಿನ ಹಣ್ಣಿನ ಉತ್ಸವಗಳಂತಹ ಅನನ್ಯ ಹಬ್ಬಗಳು ಕೂಡ ತುಂಬಾ ಹೆಸರುವಾಸಿಯಾಗಿವೆ. ಬಹಾಯಿ ಮಂದಿರ ಅಥವಾ ಲೋಟಸ್ ಟೆಂಪಲ್.

ಚಿತ್ರಕೃಪೆ: Sourav Das

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ವಾಸ್ತವವಾಗಿ ಮೊಘಲ್ ಪಾಕ ಪದ್ಧತಿಗಳು ರೂಪುಗೊಂಡ ಸ್ಥಳವಾಗಿದ್ದರಿಂದ ದೆಹಲಿಗರ ಆಹಾರ ವೈಖರಿಯಲ್ಲಿ ಮೊಘಲ್ ತಿನಿಸುಗಳ ಪ್ರಭಾವವಿರುವುದನ್ನು ಕಾಣಬಹುದು. ಆದರೂ, ಸಾಮಾನ್ಯ ಭಾರತೀಯ ಅಡುಗೆಗಳೂ ಇಲ್ಲಿ ಜನಪ್ರಿಯವಾಗಿವೆ. ಕಡಾಯಿ ಚಿಕನ್, ಬೆಣ್ಣೆ ಚಿಕನ್, ಚಾಟ್ಸ್, ಜಲೇಬಿ, ಕಚೋರಿ ಮತ್ತು ಲಸ್ಸಿಗಳು ದೆಹಲಿಯ ಶಾಸ್ತ್ರೀಯ ಪಾಕಪದ್ಧತಿಗಳಲ್ಲಿ ಕೆಲವು ಹೆಸರಿಸಬಹುದಾದ ತಿಂಡಿ ತಿನಿಸುಗಳು.

ಚಿತ್ರಕೃಪೆ: neverbutterfly

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕೊಲ್ಕತ್ತಾ : ಭಾರತ ಸಾಂಸ್ಕೃತಿಕವಾಗಿ ಪ್ರಬಲ ಮತ್ತು ಸಾಂಪ್ರದಾಯಿಕವಾಗಿ ಬೇರೂರಿದ ದೇಶವಾದರೆ ಅದರ ಹೃದಯ ಭಾಗ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ ಎನ್ನಬಹುದು. ಬ್ರಿಟಿಷರ ಕಾಲದಿಂದಲೂ ಕಲ್ಕತ್ತಾ ಎಂದು ಕರೆಯಲ್ಪತಿಡುತ್ತಿದ್ದ ಈ ಸ್ಥಳ ಭಾರತೀಯ ಸಂಸ್ಕೃತಿಯ ಕೇಂದ್ರ ಸ್ಥಳವಾಗಿದೆ. ಸುಪ್ರಸಿದ್ಧ ವಿಕ್ಟೋರಿಯಾ ಮೆಮೊರಿಯಲ್ ಹಾಲ್.

ಚಿತ್ರಕೃಪೆ: Thomas Scherer

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಮತ್ತೊಂದು ಸಂಗತಿಯೆಂದರೆ ಕೊಲ್ಕತ್ತಾದ ಜನರು ದಶಕಗಳಿಂದ ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸಿಕೊಂಡು ಬಂದ ಹೆಮ್ಮೆ ಹೊತ್ತಿದ್ದಾರೆ. ಇದನ್ನು ನೋಡಲು ದಸರಾಕ್ಕಿಂತ ಮೊದಲು ಆಚರಿಸಲ್ಪಡುವ ದುರ್ಗಾ ಪೂಜೆ, ದೀಪಾವಳಿ ಮತ್ತು ಕಾಳಿ ಪೂಜೆಯ ಸಂದರ್ಭದಲ್ಲಿ ಭೇಟಿ ನೀಡಬೇಕು. ನಗರದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳನ್ನು ಅಲ್ಲದೆ ಬೀದಿಗಳನ್ನು ಸುಂದರವಾಗಿ ಅಲಂಕರಿಸಿರುತ್ತಾರೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಅಲಂಕೃತಗೊಂಡ ಒಂದು ಬೀದಿ.

ಚಿತ್ರಕೃಪೆ: Monsoon Lover

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕೊಲ್ಕತ್ತಾ ಸ್ಥಳೀಯ ಜನರಿಂದ ಮಾಡಲಾಗುವ ನಾಟಕ ಮತ್ತು ಬೀದಿ ನಾಟಕಗಳು ಜಗತ್ಪ್ರಸಿದ್ಧಿ ಪಡೆದಿವೆ. ಕೊಲ್ಕತ್ತಾದಲ್ಲಿ ಸಂಚಾರಕ್ಕೆಂದು ರಿಕ್ಷಾ, ಟ್ಯಾಕ್ಸಿಗಳ ಜೊತೆ ಕೈಗಾಡಿಗಳು ಇರುವುದು ವಿಶೇಷ. ಇದು ಮೊದಲಿನಿಂದಲೂ ಚಾಲ್ತಿಯಲ್ಲಿದ್ದು ಈಗಲೂ ಸಹ ಕಾಣಬಹುದಾಗಿದೆ. ಕೈಗಾಡಿಯಲ್ಲೆ ಜನರನ್ನು ವೇಗವಾಗಿ ನಡೆಯುತ್ತ ಕರೆದುಕೊಂಡು ಹೋಗುವ ಆ ಚಾಲಕರಿಗೆ ವಿಶೇಷವಾದ ಧನ್ಯವಾದಗಳನ್ನು ಸಮರ್ಪಿಸಲೇಬೇಕು.

ಚಿತ್ರಕೃಪೆ: M M

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಹೈದರಾಬಾದ್ : ದಕ್ಷಿಣಭಾರತದ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವೆಂದು ಖ್ಯಾತಿ ಪಡೆದಿರುವ ನಗರವೆಂದರೆ ಅದು ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್. ಈ ನಗರವನ್ನು 1591ರಲ್ಲಿ ಆಳ್ವಿಕೆ ಮಾಡಿದ ಖುತುಬ್ ಷಾಹಿ ಸಾಮ್ರಾಜ್ಯದ ಪ್ರಸಿದ್ಧ ದೊರೆ ಮಹಮ್ಮದ್ ಖುಲಿ ಖುತುಬು ಷಾ ನಿರ್ಮಿಸಿದನು. ಈ ನಗರವು ಮೂಸಿ ನದಿಯ ದಂಡೆಯಲ್ಲಿ ಸೌಂದರ್ಯದ ಖನಿಯಂತೆ ಕಂಗೊಳಿಸುತ್ತ ನಿಂತಿದೆ.

ಚಿತ್ರಕೃಪೆ: Ryan

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಇಂದು ಹೈದರಬಾದ್ ತನ್ನ ತಂತ್ರಙ್ಞಾನದ ಮಹತ್ವದಿಂದಾಗಿ ವಿಶ್ವ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ದೇಶದೆಲ್ಲೆಡೆಯಿಂದ ಹಲವಾರು ಮಂದಿ ಇಲ್ಲಿನ ಹೈ-ಟೆಕ್ ಕಾರ್ಪೋರೇಟ್ ಕಛೇರಿಗಳಲ್ಲಿ ಕೆಲಸ ಮಾಡುತ್ತ ತಮ್ಮ ಜೀವನ ಸಾಗಿಸುವ ಉದ್ದೇಶದಿಂದ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಟೆಕ್ನೋ ಪಾರ್ಕ್‍ಗಳ ಸ್ಥಾಪನೆಯ ಹೊರತಾಗಿಯು ಹೈದರಬಾದ್ ತನ್ನಲ್ಲಿರುವ ಮಿನಾರ್ ಗಳು , ಬಳೆ ಮಾರುಕಟ್ಟೆಗಳು, "ಖಾವ್ ಗಲ್ಲಿಗಳು" ಮತ್ತು ಕೋಟೆಗಳಿಂದ ಕೂಡಿ ತನ್ನ ಹಳೆಯ ವರ್ಚಸ್ಸನ್ನು ಹಾಗೆಯೆ ಜತನದಿಂದ ಕಾಪಾಡಿಕೊಂಡಿದೆ. ಚಿತ್ರದಲ್ಲಿರುವುದು ಹೈದರಾಬಾದಿನ ಗುರುತರ ಸ್ಮಾರಕ ಚಾರ್ ಮಿನಾರ್.

ಚಿತ್ರಕೃಪೆ: pranav

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ತಂತ್ರಜ್ಞಾನದ ಬೃಹತ್ ಬೆಳವಣಿಗೆಯ ಜೊತೆಗು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ವಿಚಾರದಲ್ಲಿ ಬಹುಶಃ ಹೈದರಾಬಾದ್ ಮಾತ್ರವೆ ದೇಶದ ಏಕ ಮಾತ್ರ ನಗರವಾಗಿದೆ. ಭೌಗೋಳಿಕವಾಗಿ ಹೈದರಾಬಾದ್ ಅತ್ಯಂತ ಕೌತುಕದ ಸ್ಥಳದಲ್ಲಿ ನೆಲೆಗೊಂಡಿದೆ. ಈ ಊರು ಉತ್ತರಭಾರತ ಮತ್ತು ದಕ್ಷಿಣ ಭಾರತಗಳು ಕೂಡುವ ಸ್ಥಳದಲ್ಲಿ ತಲೆ ಎತ್ತಿದೆ.ಹಾಗಾಗಿ ಹೈದರಾಬಾದ್ ಎರಡು ಬಗೆಯ ಮಿಶ್ರ ಸಂಸ್ಕೃತಿಗಳನ್ನು ಕಾಣಬಹುದು. ಈ ಸಮ್ಮಿಲನವು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಹಿಂದಿನ ಕಾಲದಲ್ಲಿ ಹೈದರಾಬಾದ್ ಕಲೆ, ಸಾಹಿತ್ಯ ಮತ್ತು ಸಂಗೀತಕ್ಕೆ ರಾಜಧಾನಿಯೆನಿಸಿತ್ತು. ಹೈದರಾಬಾದ್ ಉಚ್ಛ ನ್ಯಾಯಾಲಯ.

ಚಿತ್ರಕೃಪೆ: nep000

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಬೆಂಗಳೂರು : ಇಂದು ಬೆಂಗಳೂರು ಹಲವು ವಿಭಿನ್ನ ಸಂಸ್ಕೃತಿಗಳ ಬೀಡಾಗಿದೆ. ಕನ್ನಡ ಅಧಿಕೃತ ಹಾಗೂ ಬಹುವಾಗಿ ಬಳಸಲ್ಪಡುವ ಭಾಷೆಯಾದರೂ ಇತರೆ ಹಲವಾರು ಭಾಷೆಗಳಿಗೂ ಇಲ್ಲಿ ಏನೂ ಕಮ್ಮಿ ಇಲ್ಲ. ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿ ವಿಶ್ವ ಭೂಪಟದಲ್ಲಿ ಕರ್ನಾಟಕದ ತೂಕವನ್ನು ಹೆಚ್ಚಿಸಿರುವ ಬೆಂಗಳೂರು ನಗರದಲ್ಲಿ ಒಂದೊಮ್ಮೆ ಸುತ್ತಾಡಿದಾಗ ಒಂದು ಪರಿಪೂರ್ಣತೆಯ ಆಭಾಸವು ಸೂಕ್ಷ್ಮ ದೃಷ್ಟಿಯುಳ್ಳ ಪ್ರವಾಸಿಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಚಿತ್ರಕೃಪೆ: Akash Bhattacharya

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಒಂದೊಮ್ಮೆ ಬೆಂಗಳೂರನ್ನು ಸಂಪೂರ್ಣವಾಗಿ ಅನ್ವೇಷಿಸಿದಾಗ ಸಾಕಷ್ಟು ಕಥೆಗಳನ್ನು ಹೇಳುವ ಹಲವಾರು ಸೂಕ್ಷ್ಮ ಚಿತ್ರಣಗಳನ್ನು ಈ ನಗರದ ನಿತ್ಯ ಜನಜೀವನದಲ್ಲಿ ಕಾಣಬಹುದು. ಮೊದಲಿಗೆ ಭಾರತದ ಉದ್ಯಾನನಗರಿ ಎಂದು ಕರೆಯಲ್ಪಡುತ್ತಿದ್ದ, ಈ ನಗರವು ಇಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯಿಂದಾಗಿ ಭಾರತದ ಸಿಲಿಕಾನ್ ಕಣಿವೆ ಎಂದೂ ಗುರುತಿಸಲ್ಪಟ್ಟಿದೆ. ಒಂದು ಬೆಂಗಳೂರಿನ ಹಲವು ಮುಖಗಳು.

ಚಿತ್ರಕೃಪೆ: Aarem

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ನಗರದ ಒಳ ಹಾಗು ಹೊರಭಾಗಗಳು ಒಂದಕ್ಕೊಂದು ಒಳ್ಳೆಯ ಸಂಪರ್ಕ ಹೊಂದಿರುವ ಕಾರಣ ನಗರದ ಒಳಗೆ ಮತ್ತು ಹೊರಗೆ ಒಡಾಡುವುದು ತುಂಬಾ ಸರಳವಾಗಿದೆ. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ(ಸದ್ಯದಲ್ಲೇ ಆರಂಭವಾಗಲಿವೆ) ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರಾ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ಭೂ ಮಾರ್ಗ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ. ಬೆಂಗಳೂರು ಕುರಿತು

ಚಿತ್ರಕೃಪೆ: Manojk

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಚೆನ್ನೈ: ಮೊದಲಿಗೆ ಮದ್ರಾಸ್ ಎಂಬ ನಾಮಾಂಕಿತದಿಂದ ಸಂಭೋದಿಸಲ್ಪಡುತ್ತಿದ್ದ ಇಂದಿನ ಚೆನ್ನೈ ಭಾರತದ ದಕ್ಷಿಣ ಭಾಗದ ರಾಜ್ಯವಾದ ತಮಿಳುನಾಡಿನ ರಾಜಧಾನಿ. ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ಚೆನ್ನೈ ಕಾಸ್ಮೋಪಾಲಿಟನ್ ಮಾತ್ರವಲ್ಲದೆ ಮೆಟ್ರೊಪಾಲಿಟನ್ ನಗರ ಕೂಡ ಹೌದು. ದೀಪಾವಳಿಯ ಸಂದರ್ಭದಲ್ಲಿ ಚೆನ್ನೈ.

ಚಿತ್ರಕೃಪೆ: Vinoth Chandar

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ವಾಣೀಜ್ಯ, ಆರ್ಥಿಕ ಸಂಸ್ಕೃತಿ ಹಾಗು ಶೈಕ್ಷಣಿಕ ದೃಷ್ಟಿಯಿಂದ ಚೆನ್ನೈ ದಕ್ಷಿಣ ಭಾರತ ಮಾತ್ರವಲ್ಲದೆ ಭಾರತದ ಪ್ರಮುಖ ಶಹರುಗಳಲ್ಲೊಂದಾಗಿದೆ. ಅಷ್ಟೆ ಅಲ್ಲ, ಚೆನ್ನೈ ದಕ್ಷಿಣ ಭಾರತದ ಸಾಂಸ್ಕೃತಿಕ ರಾಜಧಾನಿ ಎಂದೂ ಜನಪ್ರಿಯವಾಗಿದೆ.

ಚಿತ್ರಕೃಪೆ: Vinoth Chandar

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಮನರಂಜನೆ ಏನೇ ಇರಲಿ, ಎಲ್ಲವನ್ನೂ ಈ ನಗರದಲ್ಲಿ ಆಸ್ವಾದಿಸಬಹುದಾಗಿದೆ. ಏಕೆಂದರೆ ಬಹು ಪುರಾತನದಿಂದಲೂ ಈ ನಗರ ಕಲೆಯ ವೈವಿಧ್ಯಮಯ ರೂಪಗಳನ್ನು ಸದಾ ಪೋಷಿಸುತ್ತಾ ಬಂದಿದೆ. ಅದ್ಭುತವಾಗಿ ಕಂಗೊಳಿಸುವ ಮರೀನಾ ಕಡಲ ತೀರದ ಸೂರ್ಯೋದಯ. ಚೆನ್ನೈ ಕುರಿತು ಹೆಚ್ಚಿನ ವಿವರಗಳು

ಚಿತ್ರಕೃಪೆ: Thangaraj Kumaravel

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಅಹ್ಮದಾಬಾದ್ : ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಒಂದೆಡೆ ನಾವು ಭಾರತದ ಉದ್ಯಮಶೀಲತೆಯನ್ನು ಬೆಳಗಿದ ಗುಜರಾತಿಗಳನ್ನು ನೋಡಿದರೆ ಮತ್ತೊಂದೆಡೆ ಸತ್ಯಾಗ್ರಹ ಹಾಗು ಅಹಿಂಸೆ ಎಂಬ ಆಯುಧಗಳನ್ನು ಜಗತ್ತಿಗೆ ಪರಿಚಯಿಸಿದ ಗಾಂಧೀಜಿಯವರ ತತ್ವಗಳನ್ನು ನಾವು ಕಾಣಬಹುದು.

ಚಿತ್ರಕೃಪೆ: Helfmann

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಅಭಿವೃದ್ಧಿಯ ದೃಷ್ಟಿಯಿಂದ ಏಳನೆ ಮಹಾನಗರವೆಂದು ಗುರುತಿಸಲ್ಪಟ್ಟಿರುವ ಈ ನಗರವು ಭಾರತದಲ್ಲಿ ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ದೇಶವಾಗಿ ಗುರುತಿಸಿಕೊಂಡಿದೆ. ಅಹಮದಾಬಾದ್‍ ಗುಜರಾತಿನ ವಾಣಿಜ್ಯ ರಾಜಧಾನಿ. ಇದು ಗಾಂಧಿನಗರದಿಂದ 32 ಕಿ.ಮೀ ದೂರದಲ್ಲಿ ಸಾಬರಮತಿ ನದಿಯ ದಂಡೆಯಲ್ಲಿ ನೆಲೆಗೊಂಡಿದೆ.

ಚಿತ್ರಕೃಪೆ: Hardik jadeja

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಅಹಮದಾಬಾದ್ ಎಂಬುದು ಐತಿಹಾಸಿಕ ಸ್ಮಾರಗಳಿಂದ, ಬೃಹತ್ ಮಾಲ್‍ಗಳಿಂದ, ಸಿನಿಮಾ ಹಾಲ್‍ಗಳಿಂದ, ಮನಮೋಹಕವಾದ ಜೈನ ದೇವಾಲಯಗಳಿಂದ, ಸಿಡಿ ಸಯ್ಯಿದ್ ಮಸೀದಿ, ಸ್ವಾಮಿ ನಾರಾಯಣ ದೇವಾಲಯ, ಜಾಮ ಮಸೀದಿ, ಮಹುದಿ ಜೈನ ದೇವಾಲಯ, ಅಕ್ಷರಧಾಮ್, ನಗರದ ಗೋಡೆಗಳು ಹಾಗು ದ್ವಾರಗಳು, ಬಾದ್‍ಷಾ ನೊ ಹಜಿರೊ, ಝುಲ್ಟ ಮಿನಾರ, ಸರ್ಕೇಜ್ ರೋಝಾ, ದಾದ ಹರಿರ್ ವಾವ್, ಅಡಲಜ್ ಮೆಟ್ಟಿಲು ಬಾವಿ. ವಸ್ತು ಸಂಗ್ರಹಾಲಯಗಳು, ಪ್ರಾಕೃತಿಕ ಪ್ರವಾಸಿ ತಾಣಗಳಾದ ಇಂಡೋರ ಪ್ರಾಕೃತಿಕ ಉದ್ಯಾನವನ ಮತ್ತು ಕಂಕರಿಯ ಕೆರೆಗಳು ಸಹ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಚಿತ್ರ್ದಲ್ಲಿರುವುದು ಅಹ್ಮದಾಬಾದ್ ನ ಸಾಬರಮತಿ ವಿದ್ಯುತ್ ಉತ್ಪಾದನಾ ಕೇಂದ್ರ.

ಚಿತ್ರಕೃಪೆ: Koshy Koshy

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಪುಣೆ : ಪಶ್ಚಿಮ ಘಟ್ಟದಲ್ಲಿನ ವೈಭವಯುತ ನಗರ ಪುಣೆಯು ಮಹಾರಾಷ್ಟ್ರ ರಾಜ್ಯದಲ್ಲಿದೆ. ಪುಣೆ ಹೆಸರಿನ ಮೂಲ ಪುಣ್ಯನಗರ ಎಂದಾಗಿದೆ. ರಾಷ್ಟ್ರಕೂಟರು ಈ ನಗರವನ್ನು ಪುಣ್ಯ-ವಿಷಯ ಅಥವಾ ಪೂಣಕ್‌-ವಿಷಯ ಎಂದು ಕರೆದಿದ್ದರು. ಮೂಲದಲ್ಲಿ ಪುಣೆವಾಡಿಯಾಗಿದ್ದ ಈಗಿನ ಪುಣೆಯು ಹಿಂದೊಮ್ಮೆ ಮರಾಠಾ ರಾಜನಾಗಿದ್ದ ಛತ್ರಪತಿ ಶಿವಾಜಿ ಮಹಾರಾಜನ ಮನೆಯಾಗಿತ್ತು. ನಂತರದಲ್ಲಿ ಪುಣೆಯು ಪೇಷ್ವೆಯರ ಆಡಳಿತಕ್ಕೆ ಒಳಪಟ್ಟಿತು. ಪುಣೆಯಲ್ಲಿರುವ ಶನಿವಾರವಾಡಾ ಕೋಟೆ. ಪುಣೆಯ ಧಾರ್ಮಿಕ ಆಕರ್ಷಣೆಗಳು

ಚಿತ್ರಕೃಪೆ: Ramakrishna Reddy y

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ವಾಸ್ತುಶಿಲ್ಪ ಪ್ರಿಯರು ಪುಣೆಯಲ್ಲಿನ ಆಗಾ ಖಾನ್‌ ಅರಮನೆ, ಶಿಂಧೆಯ ಛತ್ರಿ ಮತ್ತು ಸಿನ್ಹಗಢದ ಪುರಾತನ ಕೋಟೆಯನ್ನು ನೋಡಬಹುದು. ಶನಿವಾರ್ ವಾಡಾ ಕೂಡಾ ಇನ್ನೊಂದು ಪ್ರಮುಖ ಐತಿಹಾಸಿಕ ಪ್ರದೇಶವಾಗಿದೆ. ಆದರೆ ದುರಾದೃಷ್ಟವಶಾತ್ ಈ ಪ್ರದೇಶ ಈಗ ಅವಸಾನಗೊಂಡಿದೆ. ಒಶೋ ಕಮ್ಯೂನ್ ಇಂಟರ್ನ್ಯಾಷನಲ್‌ ಪುಣೆಯಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ಧ್ಯಾನವನ್ನು ಹೇಳಿಕೊಡಲಾಗುತ್ತದೆ. ಇದನ್ನು ಓಶೊ ರಜನೀಶರು ಸ್ಥಾಪನೆ ಮಾಡಿದ್ದರು.

ಚಿತ್ರಕೃಪೆ: Golu7276

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಪರಿಸರ ಪ್ರಿಯರು ಪುಣೆ ನಗರದಲ್ಲಿರುವ ಎಂಪ್ರೆಸ್‌ ಬೊಟಾನಿಕಲ್‌ ಗಾರ್ಡನ್‌ಗೆ ಮನಸೋಲುತ್ತಾರೆ. ಸರಸ್ ಬಾಗ್‌ ಮತ್ತು ಬಂಡ್‌ ಗಾರ್ಡನ್‌ಗಳು ನಿಮ್ಮ ಕುಟುಂಬದ ಜೊತೆಗೆ ಒಂದು ಸಂಜೆಯನ್ನು ಕಳೆಯಲು ಮತ್ತು ಗಾಳಿ ಸೇವನೆಗೆ ಅತ್ಯುತ್ತಮ ಸ್ಥಳ.ಪುಣೆಯಲ್ಲಿದ್ದಾಗ ಅಲ್ಲಿನ ರುಚಿಯನ್ನು ಸವಿಯದೇ ಇರಬೇಡಿ. ಪೂರಣ್‌ ಪೊಳಿ, ಪಿತ್ಲಾ, ಚಾಟ್‌, ಪಾವ್‌ ಭಾಜಿ ಮತ್ತು ಮಿಸಳ್‌ ಪಾವ್‌ ಇಲ್ಲಿ ಜನಪ್ರಿಯ. ಬಹುಶಹ ಇದರಲ್ಲಿಯ ಕೊನೆಯ ತಿಂಡಿಯು ನಿಮ್ಮ ನಾಲಿಗೆಗೆ ತುಸು ಖಾರವಾಗಬಹುದಾದರೂ ಅದರ ರುಚಿಗೆ ಮನಸೋತು ಬೆರಳುಗಳನ್ನು ಚಪ್ಪರಿಸದೆ ಇರಲಾರಿರಿ. ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ.

ಚಿತ್ರಕೃಪೆ: Mayur239

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಸೂರತ್ : ಗುಜರಾತಿನ ನೈಋತ್ಯ ಭಾಗದಲ್ಲಿರುವ ಸೂರತ್ ಇಂದು ಕೈಮಗ್ಗ ಮತ್ತು ವಜ್ರಗಳಿಗಾಗಿ ಪ್ರಸಿದ್ಧವಾಗಿದೆ. ಇದರ ಹೊರತಾಗಿ ಈ ನಗರವು ವೈಭವಯುತವಾದ ಐತಿಹಾಸಿಕ ನಗರವಾಗಿ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ. ಸೂರತ್ ಪಟ್ಟಣದಲ್ಲಿರುವ ಸ್ವಾಮಿ ನಾರಾಯಣ ದೇವಸ್ಥಾನ.

ಚಿತ್ರಕೃಪೆ: Kailash Giri

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಪ್ರಪಂಚದಾದ್ಯಂತ ಸೂರತ್ ನಗರವು ವಜ್ರ ಮತ್ತು ಬಟ್ಟೆ ವ್ಯಾಪಾರಕ್ಕಾಗಿ ಹೆಸರುವಾಸಿಯಾಗಿದೆ. ಪ್ರಪಂಚದ ಮಾರುಕಟ್ಟೆಯಲ್ಲಿನ 92% ದಷ್ಟು ವಜ್ರಗಳನ್ನು ಇಲ್ಲಿಯೇ ಕತ್ತರಿಸಿ ಪಾಲಿಷ್ ಮಾಡಲಾಗುವುದು. ಅಲ್ಲದೆ ಇದನ್ನು "ಭಾರತದ ಕಸೂತಿಯ ರಾಜಧಾನಿ" ಎಂದು ಕರೆಯಲಾಗಿದೆ. ಏಕೆಂದರೆ ಇಲ್ಲಿಯೇ ಅತ್ಯಂತ ಹೆಚ್ಚು ಕಸೂತಿಯ ಯಂತ್ರಗಳಿರುವುದು.

ಚಿತ್ರಕೃಪೆ: Tarunyadav1989

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಜೈಪುರ : ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು. ಚಿತ್ರದಲ್ಲಿರುವುದು ಹವಾ ಮಹಲ್. ಜೈಪುರದ ಪ್ರವಾಸಿ ಆಕರ್ಷಣೆಗಳು

ಚಿತ್ರಕೃಪೆ: enjosmith

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ, ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು. ಚಿತ್ರದಲ್ಲಿರುವುದು ಜಲ್ ಮಹಲ್

ಚಿತ್ರಕೃಪೆ: Ray Tsang

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಕ್ಯಾಮೆರಾ ಕಣ್ಣುಗಳಲ್ಲಿ ಹತ್ತು ಮಹಾನಗರಗಳು:

ಅರಮನೆಗಳು ಮತ್ತು ಕೋಟೆಗಳ ಹೊರತಾಗಿ ಜೈಪುರದಲ್ಲಿನ ಹಬ್ಬಗಳು ಮತ್ತು ಮೇಳಗಳೂ ತುಂಬಾ ಜನಪ್ರಿಯವಾಗಿದೆ. ಇಲ್ಲಿನ ಮೇಳಗಳಲ್ಲಿ ಒಂದೆಂದರೆ ಜೈಪುರ ವಿಂಟೇಜ್ ಕಾರ್ ರ್ಯಾಲಿ. ಇದನ್ನು ಜನವರಿಯಲ್ಲಿ ನಡೆಸಲಾಗುತ್ತದೆ. ಇತ್ತೀಚೆಗೆ ಈ ಮೇಳವು ತುಂಬಾ ಜನಪ್ರಿಯವಾಗುತ್ತಿದೆ. ಕಾರು ಪ್ರಿಯರು ಮರ್ಸಿಡಿಸ್‌, ಆಸ್ಟಿನ್‌ ಮತ್ತು ಫಿಯೆಟ್‌ನ ವಿವಿಧ ಮಾದರಿಯ ಕಾರುಗಳನ್ನು ನೋಡಬಹುದು. ಜಂತರ್ ಮಂತರ್ ತಾರಾಲಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X