Search
  • Follow NativePlanet
Share
» »ಭಾರತ ದೇಶದಲ್ಲೊಂದು ಖಾದ್ಯಗಳ ಪ್ರವಾಸ ಮಾಡಿ

ಭಾರತ ದೇಶದಲ್ಲೊಂದು ಖಾದ್ಯಗಳ ಪ್ರವಾಸ ಮಾಡಿ

By Vijay

ಯಾವುದೆ ರೀತಿಯ ಪ್ರವಾಸ ತೆಗೆದುಕೊಳ್ಳಿ ಅದರ ಒಂದು ಪ್ರಮುಖ ಭಾಗವಾಗಿದೆ ಊಟ ತಿಂಡಿಗಳು. ಕೆಲವು ವಿಶೇಷ ಖಾದ್ಯಗಳು ಕೆಲ ನಿರ್ದಿಷ್ಟ ಜಾಗಗಳಲ್ಲಿಯೆ ದೊರೆಯುವಂತಹದ್ದಾಗಿದ್ದು ಆ ಖಾದ್ಯಗಳಿಂದಲೆ ಆ ಸ್ಥಳಗಳು ಪ್ರವಾಸಿ ಆಕರ್ಷಣೆಗಳಾಗಿ ಹೆಸರುವಾಸಿಯಾಗಿರುವ ಉದಾಹರಣೆಗಳನ್ನೂ ಕಾಣಬಹುದು.

ಹೀಗೆ ಪ್ರವಾಸವು ಕೇವಲ ಆಕರ್ಷಕ ಸ್ಥಳಗಳ ಪ್ರಕೃತಿ ಸಂಪತ್ತು, ನಯನ ಮನೋಹರ ಸ್ಮಾರಕಗಳು, ಪುಣ್ಯ ಕ್ಷೇತ್ರಗಳ ದೇವರುಗಳ ದರ್ಶನವಲ್ಲದೆ ನಾಲಿಗೆ ಮನಸ್ಸುಗಳನ್ನು ಸಂತೃಪ್ತಗೊಳಿಸುವಂತಹ ವಿಶೇಷ ಖಾದ್ಯಗಳನ್ನೂ ಸಹ ಚಪ್ಪರಿಸಿ ತಿನ್ನುವಂತೆ ಮಾಡುತ್ತವೆ.

ವಿಶೇಷ ಲೇಖನ : ಯಾವ ಸ್ಥಳ? ಏನು ವಿಶೇಷ?

ನಿಜ ಹೇಳಬೇಕೆಂದರೆ ನಮ್ಮಲ್ಲಿ ಅದೆಷ್ಟೋ ಜನ ಕೇವಲ ಕೆಲ ವಿಶೇಷ ತಿಂಡಿ ಖಾದ್ಯಗಳ ಸ್ವಾದವನ್ನು ಅನುಭವಿಸಲೆಂದೆ ಪ್ರವಾಸ ಮಾಡಬಯಸುತ್ತಾರೆ. ಕೆಲವು ಸ್ಥಳಗಳ ಮಹಿಮೆಯೆ ಹಾಗಿರುತ್ತದೆ. ಕೇವಲ ಅದ್ಭುತ ಪರಿಸರ ಮಾತ್ರವಲ್ಲದೆ ಅತ್ಯದ್ಭುತವಾದ ವಿಶೇಷವಾದ ಖಾದ್ಯಗಳಿಗೂ ಸಹ ಹೆಸರುವಾಸಿಯಾಗಿರುತ್ತವೆ.

ಪ್ರಸ್ತುತ ಲೇಖನವು ಭಾರತದ ಯಾವೆಲ್ಲ ಪ್ರವಾಸಿ ರಾಜ್ಯಗಳು ಕೇವಲ ಪ್ರವಾಸಿ ಆಕರ್ಷಣೆಯಾಗಿ ಮಾತ್ರವಲ್ಲದೆ ತನ್ನಲ್ಲಿ ದೊರಕುವ ಯಾವ್ಯಾವ ವಿಶೇಷ ಖಾದ್ಯಗಳಿಗೆ ಚಿರಪರಿಚಿತ ಅಥವಾ ಪ್ರಸಿದ್ಧವಾಗಿದೆ ಎಂಬುದರ ಕುರಿತು ತಿಳಿಸುತ್ತದೆ. ಹಾಗೆ ನೋಡಿದರೆ ಪ್ರತಿಯೊಂದು ರಾಜ್ಯಗಳ ವಿವಿಧ ಭಾಗಗಳಲ್ಲಿ ಹಲವು ನಿರ್ದಿಷ್ಟ ಖಾದ್ಯಗಳಿದ್ದೆ ಇರುತ್ತವೆ. ಆದರೂ ಈ ಲೇಖನದಲ್ಲಿ ಬಹುತೇಕವಾಗಿ ರಾಜ್ಯದ ಒಂದು ಗುರುತನ್ನು ಸೂಚಿಸುವ ನಿರ್ದಿಷ್ಟ ಖಾದ್ಯದ ಕುರಿತು ಮಾತ್ರವೆ ತಿಳಿಸಲಾಗಿದೆ. ಅಂದರೆ ಈ ರಾಜ್ಯಗಳ ಯಾವುದೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಈ ಖಾದ್ಯಗಳು ಬಹುತೇಕವಾಗಿ ದೊರಕೆ ದೊರಕುತ್ತವೆ.

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಕರ್ನಾಟಕ : ಭಾರತದ ದಕ್ಷಿಣದಲ್ಲಿರುವ ಕರ್ನಾಟಕವು ಒಂದು ಅದ್ಭುತ ಹಾಗೂ ಸುಂದರ ಪ್ರವಾಸಿ ರಾಜ್ಯವಾಗಿದೆ. ಶಿಲ್ಪಕಲೆಯಿಂದ ಕಡಲ ತೀರಗಳವರೆಗೆ, ಜಲಪಾತಗಳಿಂದ ಗಿರಿಧಾಮಗಳವರೆಗೆ ಸಾಕಷ್ಟು ವಿಶೇಷತೆಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದೆ. ಅದರಂತೆ ಈ ರಾಜ್ಯ ತನ್ನ ಭೌಗೋಳಿಕತೆಗನುಸಾರವಾಗಿ ಕೆಲವು ವಿಶಿಷ್ಟ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಉದಾಹರಣೆಗೆ ಜೋಳದ ರೊಟ್ಟಿ ಊಟವು ಉತ್ತರಕರ್ನಾಟಕದ ವೈಶಿಷ್ಟ್ಯವಾಗಿದ್ದರೆ, ಬೆಂಗಳೂರು, ಹಾಸನ, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದ ಗುರುತರ ಖಾದ್ಯ ಮುದ್ದೆ(ರಾಗಿ) ಊಟ. ಕರ್ನಾಟಕದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Sarvagnya

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ತಮಿಳುನಾಡು : ಚೆಟ್ಟಿನಾಡು ತಮಿಳುನಾಡು ರಾಜ್ಯದ ಪ್ರಖ್ಯಾತ ಖಾದ್ಯ ಶೈಲಿ. ಶಾಖಾಹರ ಹಾಗೂ ಮಾಂಸಾಹಾರಗಳಿಂದ ಸಂಪದ್ಭರಿತವಾದ ಈ ಖಾದ್ಯವು ಬಾಯಲ್ಲಿ ನೀರೂರಿಸದೆ ಇರಲಾರದು. ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿರುವ ಚೆಟ್ಟಿನಾಡು ಎಂಬ ಪ್ರದೇಶದ ಮೂಲವಾಗಿರುವ ಈ ಖಾದ್ಯ ಇಂದು ರಾಜ್ಯದ ಬಹುತೇಕ ಎಲ್ಲ ಸ್ಥಳಗಳಲ್ಲೂ ಸಹ ದೊರೆಯುತ್ತದೆ. ತಮಿಳುನಾಡಿನ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: CCFoodTravel.com

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಕೇರಳ : "ದೇವರ ಸ್ವಂತ ನಾಡು" ಎಂದೆ ಖ್ಯಾತಿ ಪಡೆದಿರುವ ಕೇರಳ ರಾಜ್ಯವು ಸಾಕಷ್ಟು ಪ್ರವಾಸಿ ಆಕರ್ಷಣೆಗಳುಳ್ಳ ಒಂದು ಸುಂದರ ರಾಜ್ಯವಾಗಿದೆ. ಬಹುತೇಕವಾಗಿ ಪಶ್ಚಿಮ ಘಟ್ಟಗಳಲ್ಲಿ ಆವರಿಸಿರುವ ಈ ರಾಜ್ಯವು ಸಮುದ್ರ ಖಾದ್ಯಗಳಿಗೆ ಸಾಕಷ್ಟು ಪ್ರಸಿದ್ಧವಾಗಿದೆ. ಅಲ್ಲದೆ ವೈವಿಧ್ಯಮಯ ಮಾಂಸಾಹಾರ ಮತ್ತು ಶಾಖಾಹಾರ ಖಾದ್ಯಗಳೂ ಇಲ್ಲಿ ಲಭ್ಯ. ಆದರೂ ಸಾಂಪ್ರದಾಯಿಕವಾಗಿ ಹೇಳಬೇಕೆಂದರೆ ಕೇರಳದ ಬಹುತೇಕ ಎಲ್ಲ ಸ್ಥಳಗಳಲ್ಲಿ ದೊರಕುವ ಸದ್ಯಾ ಹಾಗೂ ಪುಟ್ಟು ರಾಜ್ಯದ ವಿಶಿಷ್ಟ ಖಾದ್ಯವಾಗಿದೆ. ಸದ್ಯಾ ಬಾಳೆ ಎಲೆಯಲ್ಲಿ ಬಡಿಸುವ ಸಾಂಪ್ರದಾಯಿಕ ಶೈಲಿಯ ಊಟವಾಗಿದೆ. ಕೇರಳದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Augustus Binu

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಆಂಧ್ರಪ್ರದೇಶ : ಆಂಧ್ರಪ್ರದೇಶದಲ್ಲೂ ಸಹ ದಕ್ಷಿಣದ ಇತರ ರಾಜ್ಯಗಳಂತೆ ಅನ್ನ, ರಸಂ, ಸಾಂಬಾರುಗಳನ್ನೊಳಗೊಂಡ ಊಟವು ಪ್ರಮುಖವಾಗಿದೆ. ಆದಾಗ್ಯೂ ಗುಂಟೂರು ಚಿಕನ್ ತನ್ನದೆ ಆದ ಖ್ಯಾತಿ ಹೊಂದಿದೆ. ಅಲ್ಲದೆ ಆವಕಾಯ್ (ಮಾವು), ಗೊಂಗುರಾ ಸೇರಿದಂತೆ ವಿವಿಧ ಬಗೆಯ ಉಪ್ಪಿನಕಾಯಿ ಹಾಗೂ ಚಟ್ನಿಗಳು ಆಂಧ್ರದಲ್ಲಿ ಪ್ರಸಿದ್ಧವಾಗಿವೆ. ಮೂಂಗ್ ಬೀನ್ ದೋಸೆ ಅಥವಾ ಪೇಸರ ದೋಸೆ ಆಂಧ್ರದ ಒಂದು ವಿಶಿಷ್ಟವಾದ ಖಾದ್ಯವಾಗಿದೆ. ಇದನ್ನು ಉಪಹಾರದ ತಿಂಡಿಯನ್ನಾಗಿ ಸೇವಿಸಲಾಗುತ್ತದೆ. ಆಂಧ್ರದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Ryallabandi

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಮಹಾರಾಷ್ಟ್ರ : ಕೊಂಕಣಿ ಶೈಲಿಯ ಖಾದ್ಯ, ಸಮುದ್ರ ಖಾದ್ಯ, ಖಾರಯುಕ್ತ ವ್ಯಂಜನಗಳಿಗೆ ಮಹಾರಾಷ್ಟ್ರವು ಪ್ರಸಿದ್ಧವಾಗಿದೆ. ಆದಾಗ್ಯೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ವಡಾ ಪಾವ್, ಉಸಳ್ ಪಾವ್, ಪಾವ್ ಭಾಜಿಯಂತಹ ಬಾಯಲ್ಲಿ ನೀರೂರಿಸುವ ತಿಂಡಿಗಳು ಕೇವಲ ಮಹಾರಾಷ್ಟ್ರವಲ್ಲದೆ ಇಡೀ ದೇಶದಲ್ಲೆ ಪ್ರಸಿದ್ಧವಾಗಿವೆ. ಅದರಲ್ಲೂ ವಿಶೇಷವಾಗಿ ಪಾವ್ ಭಾಜಿ ತಿಂಡಿ ಮಹಾರಾಷ್ಟ್ರದ ಒಂದು ಗುರುತರವಾದ ತಿಂಡಿಯಾಗಿದೆ. ಮಹಾರಾಷ್ಟ್ರದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Rishika Palvankar

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಗೋವಾ : ಸಮುದ್ರ ಜೀವಿಗಳು, ಚಿಕನ್, ಕುರಿ ಹಾಗೂ ಕೊಬ್ಬರಿ ಹಾಲು ಇವು ಗೋವಾದ ಖಾದ್ಯಗಳಲ್ಲಿ ಬಳಸಲ್ಪಡುವ ವಿಶೇಷತೆಗಳು. ಅದರಲ್ಲೂ ವಿಶೇಷವಾಗಿ ವೈವಿಧ್ಯಮಯ ಮೀನಿನ ಖಾದ್ಯಗಳು ಗೋವಾದ ವಿಶೇಷ. ಇವೆಲ್ಲದರ ಜೊತೆ ಬಳಸಲ್ಪಡುವ ಮತ್ತೊಂದು ವಸ್ತುವೆಂದರೆ ಕೋಕಂ. ಆದರೂ ಗೋವಾದ ಒಂದು ಗುರುತರವಾದ ತಿಂಡಿ ಎಂದರೆ ಪ್ರಾವ್ನ್ ಕರ್‍ರಿ. ರಾಜ್ಯಾದ್ಯಂತ ಎಲ್ಲೆಡೆಯೂ ಇದರ ಸ್ವಾದವನ್ನು ಸವಿಯಬಹುದು.

ಚಿತ್ರಕೃಪೆ: Schellack

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಮಧ್ಯ ಪ್ರದೇಶ : ದಾಲ್ ಬಾಫ್ಲಾ ಮಧ್ಯ ಪ್ರದೇಶದ ಒಂದು ಗುರುತರವಾದ ಖಾದ್ಯ. ಬಹುತೇಕ ಎಲ್ಲೆಡೆ ದೊರೆಯುವ ಈ ಶಾಖಾಹಾರಿ ವ್ಯಂಜನವು ಮಧ್ಯ ಪ್ರದೇಶದ ಇಂದೋರ್ ಸೇರಿದಂತೆ ಹಲವು ಸ್ಥಳಗಳ ಜನಪ್ರೀಯ ಖಾದ್ಯವಾಗಿದೆ. ಗೋಧಿ ಹಿಟ್ಟು ಹಾಗೂ ಬೇಳೆಗಳಿಂದ ಮಾಡಲ್ಪಡುವ ಈ ವ್ಯಂಜನವು ವಿಶಿಷ್ಟವಾದ ರೀತಿಯಲ್ಲಿ ತಯಾರಿಸಲ್ಪಡುತ್ತದೆ. ಮಧ್ಯ ಪ್ರದೇಶದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Deeptrivia

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಉತ್ತರ ಪ್ರದೇಶ : ಮುಘಲಾಯಿ ಹಾಗೂ ಅವಧಿ ಶೈಲಿಯ ಖಾದ್ಯಗಳು ಉತ್ತರ ಪ್ರದೇಶ ರಾಜ್ಯದ ಗುರುತರವಾದ ವ್ಯಂಜನಗಳಾಗಿವೆ. ನವಾಬರ ಇತಿಹಾಸವಿರುವ ಈ ರಾಜ್ಯದಲ್ಲಿ ದಮ್ ಬಿರಿಯಾನಿ, ಮಟನ್ ಹಾಗೂ ಕಬಾಬ್ ಗಳು ಬಲು ಜನಪ್ರೀಯ ಪಕ್ವಾನುಗಳಾಗಿವೆ. ಅದರಲ್ಲೂ ಲಖನೌ ಪಟ್ಟಣವಂತೂ ತನ್ನ ಗಲಾವತಿ ಕಬಾಬ್ ಗಳಿಗೆ ಹೆಸರುವಾಸಿಯಾಗಿದೆ. ಕೊಫ್ತಾ ತಬ್ರಿಜಿ ಎನ್ನುವ ಈ ಮಾಂಸಾಹಾರ ಖಾದ್ಯವು ಉತ್ತರ ಪ್ರದೇಶದ ಪ್ರಸಿದ್ಧ ಖಾದ್ಯವಾಗಿದೆ.

ಚಿತ್ರಕೃಪೆ: Fabien Dany

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಒಡಿಶಾ : ಪಖಾಲಾ ಎಂಬ ಖಾದ್ಯವು ಒಡಿಶಾ ರಾಜ್ಯದ ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಂದರ್ಭದಲ್ಲಿ ಹೆಚ್ಚು ತಯಾರಿಸಲ್ಪಡುವ ಸಾಂಪ್ರದಾಯಿಕ ಖಾದ್ಯವಾಗಿದೆ. ಇದು ಅಕ್ಕಿಯನ್ನು ತುಸು ಹೆಚ್ಚು ನೀರಿನಲ್ಲಿ ಬೇಯಿಸಿ ಹುಳಿಬರುವಂತೆ ಶೇಖರಿಸಿಟ್ಟ ಖಾದ್ಯವಾಗಿದೆ. ಇದರ ಜೊತೆ ಮಸಾಲೆ ಸಾಂಬಾರು ಪದಾರ್ಥಗಳು ಹಾಗೂ ಬೇಯಿಸಿದ ತರಕಾರಿಗಳನ್ನು ಸೇವಿಸಲಾಗುತ್ತದೆ. ಇದು ಅತಿಯಾದ ಉಷ್ಣದಿಂದಾಗುವ ಆಘಾತವನ್ನು ತಪ್ಪಿಸುತ್ತದೆನ್ನಲಾಗಿದೆ. ಒಡಿಶಾದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: ଅମରେଶ ଚନ୍ଦ୍ର dasa

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪಶ್ಚಿಮ ಬಂಗಾಳ : ಮೀನುಗಳಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳು, ವಿವಿಧ ಸಿಹಿ ಮಿಠಾಯಿಗಳು ಇವು ಪಶ್ಚಿಮ ಬಂಗಾಳದ ಖಾದ್ಯದ ಹೆಗ್ಗುರುತುಗಳು. ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಶೈಲಿಯ ಊಟವೆ ರಾಜ್ಯದ ಮುಖ್ಯ ಹೆಗ್ಗುರುತು. ಇದರಲ್ಲಿ ವಿವಿಧ ಸಮುದ್ರ ಜೀವಿಗಳಿಂದ ತಯಾರಿಸಲಾದ ತಿಂಡಿ, ತರಕಾರಿಗಳ ಪಲ್ಯ, ರೋಟಿ, ಅನ್ನ ಹಾಗೂ ರಸಗುಲ್ಲ ಇದ್ದೆ ಇರುತ್ತದೆ. ಪಶ್ಚಿಮ ಬಂಗಾಳದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Nandinissaha

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಬಿಹಾರ : ಬಿಹಾರದಲ್ಲಿ ಹೆಚ್ಚಾಗಿ ಶಾಖಾಹಾರವನ್ನು ಕಾಣಬಹುದು. ಕಾರಣ ಹಿಂದಿನಿಂದಲೂ ಈ ಪ್ರದೇಶದಲ್ಲಿ ಬೌದ್ಧ ಧರ್ಮದ ಸಾಕಷ್ಟು ಪ್ರಭಾವವಿದ್ದು ಅದರ ಫಲವಾಗಿ ಹೆಚ್ಚಾಗಿ ಸಸ್ಯಾಹಾರದ ಖಾದ್ಯಗಳು ಹೆಚ್ಚಾಗಿ ಬಳಸಲ್ಪಡುತ್ತವೆ. ಆದರೆ ಇಲ್ಲಿ ಮಾಂಸಾಹಾರವಿಲ್ಲವೆಂದೇನಿಲ್ಲ. ಬಿಹಾರಿ ಕೆಬಾಬ್, ಮಟನ್ ಮುಂತಾದ ಖಾದ್ಯಗಳೂ ಸಹ ಇಲ್ಲಿ ಬಳಸಲ್ಪಡುತ್ತವೆ. ಇನ್ನುಳಿದಂತೆ ಸಾಕಷ್ಟು ವೈವಿಧ್ಯಮಯ ತಿಂಡಿ ತಿನಿಸುಗಳನ್ನು ರಾಜ್ಯದ ಹಲವು ಭಾಗಗಳಲ್ಲಿ ಕಾಣಬಹುದು. ಲಿಟ್ಟಿ ಬಿಹಾರ ರಾಜ್ಯದ ಒಂದು ಗುರುತರವಾದ ತಿಂಡಿ. ಗೋಧಿ ಹಿಟ್ಟು ಹಾಗೂ ಪುಡಿಯಾದ ಅವರೆ ಬೆಳೆಯ ಮಿಶ್ರಣಗಳ ಗೋಲಾಕಾರದ ಉಂಡೆಗಳಾಗಿದ್ದು ರಂಧ್ರದ ಮುಖಾಂತರ ಇದರಲ್ಲಿ ತುಪ್ಪವನ್ನು ಸೇರಿಸಲಾಗಿರುತ್ತದೆ. ಸಾಂಪ್ರದಾಯಿಕವಾಗಿ ಈ ಉಂಡೆಗಳನ್ನು ಸೆಗಣಿಯ ಕುಳಿನ ಬೆಂಕಿಯಲ್ಲಿ ಎಣ್ಣೆಯಲ್ಲಿ ಕರೆದು ಬದನೆಯ ಭರ್ತ ಅಥವಾ ಮೊಸರಿನ ಜೊತೆ ಸೇವಿಸಲಾಗುತ್ತದೆ. ಬಿಹಾರದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Rahulpandey308

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ರಾಜಸ್ಥಾನ : ಖಾದ್ಯಗಳ ವಿಷಯದಲ್ಲಿ ರಾಜಸ್ಥಾನ ವೈವಿಧ್ಯಮಯ ತಿಂಡಿ ತಿನಿಸುಗಳಿಗೆ ದೇಶದಲ್ಲೆ ಹೆಸರುವಾಸಿಯಾಗಿದೆ. ಅಂತೆಯೆ ದೇಶದಲ್ಲೆಲ್ಲ ಯಾವುದೆ ದೊಡ್ಡ ಹೋಟೆಲ್ ಗಾಳಿಗೆ ಭೇಟಿ ನೀಡಿದಾಗ ರಾಜಸ್ಥಾನಿ ಥಾಲಿ ಎಂಬ ಹೆಸರಿನಿಂದಲೆ ರಾಜಸ್ಥಾನಿ ಶೈಲಿಯ ಊಟ ದೊರೆಯುವುದನ್ನು ಗಮನಿಸಬಹುದು. ಕರಿದ ಖಾರದ ಬುಂದಿ ಕಾಳುಗಳು, ದಾಲ್ ಭಾತಿ, ಕಡಿ, ಘೇವರ್, ಮಿರ್ಚಿ ಬಡಾ, ಪ್ಯಾಜ್ ಕಚೋರಿ, ಬೈಲ್ ಗಟ್ಟೇ, ಲಾಪ್ಸಿ, ದಾಲ್ ಕಚೋರಿ, ಪಂಚಕೂಟ, ಚಾವ್ಡಿ ಹೀಗೆ ವೈವಿಧ್ಯಮಯ ಶಾಖಾಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಖಾದ್ಯಗಳು ಈ ರಾಜ್ಯದೆಲ್ಲೆಡೆ ದೊರೆಯುತ್ತವೆ. ಸಾಂಪ್ರದಾಯಿಕ ರಾಜಸ್ಥಾನಿ ಥಾಲಿಯ ಊಟ. ರಾಜಸ್ಥಾನದ ಪ್ರವಾಸಿ ಸ್ಥಳಗಳು.

ಚಿತ್ರಕೃಪೆ: Raveesh

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಗುಜರಾತ್ : ರಾಜಸ್ಥಾನದಂತೆ ಗುಜರಾತ್ ರಾಜ್ಯದಲ್ಲೂ ಸಹ ಅನನ್ಯವಾದ ಬಗೆ ಬಗೆಯ ತಿಮ್ಡಿ ತಿನಿಸುಗಳನ್ನು ಕಾಣಬಹುದು. ಗುಜರಾತಿ ಥಾಲಿ ಜನಪ್ರೀಯವಾದ ಗುಜರಾತ್ ಶೈಲಿಯ ಊಟವಾಗಿದ್ದು ರಾಜ್ಯದೆಲ್ಲೆಡೆ ದೊರೆಯುತ್ತದೆ. ಇನ್ನೂ ಮಾರ್ವಾಡಿ ಸಮುದಾಯ, ಹೆಚ್ಚಾಗಿರುವ ಜೈನ ಸಮುದಾಯ ಇರುವುದರಿಂದ ಶಾಖಾಹಾರದ ಖಾದ್ಯಗಳು ಜಾಸ್ತಿ. ಆದಾಗ್ಯೂ ಕರಾವಳಿ ತೀರಗಳಲ್ಲಿ ನೆಲೆಸಿರುವವರು ಹಾಗೂ ಇತರೆ ಅನೇಕ ಜನರು ಮೀನು ಮಾಂಸಗಳ ಖಾದ್ಯಗಳನ್ನೂ ಸಹ ಸವಿಯುತ್ತಾರೆ. ಫರ್ಸಾನ್, ಥೆಪ್ಲಾ, ಪಾಪಡ್, ಢೋಕ್ಲಾ, ರೊಟ್ಲೊ ಮುಂತಾದ ತಿಂಡಿಗಳೂ ಸಹ ರಾಜ್ಯದೆಲ್ಲೆಡೆ ದೊರೆಯುತ್ತವೆ. ಮೋದಿಯ ಮೋಡಿ ಮಾಡುವ ಗುಜರಾತ್.

ಚಿತ್ರಕೃಪೆ: mihirs2007

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪಂಜಾಬ್ : ಪಂಜಾಬ್ ರಾಜ್ಯದಲ್ಲಿ ತಯಾರಿಸಲಾಗುವ ಖಾದ್ಯವು ಹೆಚ್ಚಾಗಿ ಮುಘಲ್ ಪ್ರಭಾವವನ್ನು ಒಳಗೊಂಡಿದೆ. ಕಾರಣ ಮುಘಲರು ಭಾರತಕ್ಕೆ ಪ್ರವೇಶಿಸಿದಾಗ ಪಂಜಾಬ್ ಪ್ರವೇಶ ಸ್ಥಳವಾಗಿದ್ದುದರಿಂದ ಇಲ್ಲಿನ ಖಾದ್ಯಗಳಲ್ಲಿ ಮುಘಲ್ ಪ್ರಭಾವ ಹೆಚ್ಚಾಗಿರುವುದನ್ನು ಕಾಣಬಹುದು. ಪಂಜಾಬಿ ಜನರು ಹೆಚ್ಚಾಗಿ ಈರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ, ತುಪ್ಪ, ಕೆನೆಗಳನ್ನು ಬಳಸುತ್ತಾರೆ. ಅಲ್ಲದೆ ಪರೋಠಾ, ತಂದೂರಿ ಚಿಕನ್ ಗಳು ಹೆಚ್ಚಾಗಿ ತಿನ್ನಲ್ಪಡುತ್ತವೆ. ಆದಾಗ್ಯೂ ಪಂಜಾಬಿನ ಗುರುತರವಾದ ಖಾದ್ಯವೆಂದರೆ ಮಕ್ಕೆ ದಿ ರೋಟಿ ಹಾಗೂ ಅದರ ಜೊತೆ ಸರ್ಸೋ ದಾ ಸಾಗ್. ಪಂಜಾಬ್ ಕುರಿತು ತಿಳಿಯಿರಿ.

ಚಿತ್ರಕೃಪೆ: Officialksv

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಜಮ್ಮು ಮತ್ತು ಕಾಶ್ಮೀರ : ವಾಜವಾನ್ ಕಾಶ್ಮೀರದ ಒಂದು ಅದ್ಭುತ ಖಾದ್ಯ. ಇದನ್ನು ತಯಾರಿಸುವುದು ಸಹ ಒಂದು ಕಲೆಯಾಗಿದ್ದು ಬಹುತೇಕ ಕಾಶ್ಮೀರಿಗರಿಗೆ ಇದೊಂದು ಪ್ರತಿಷ್ಠೆಯ ಸವಾಲಾಗಿದೆ. ಸಾಮಾನ್ಯವಾಗಿ ಇದನ್ನು ಮದುವೆಯಂತಹ ದೊಡ್ಡ ಸಮಾರಂಭಗಳಲ್ಲಿ ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಗೆಂದು ತಯಾರಿಸುತ್ತಾರೆ. ಕಾಶ್ಮೀರಿ ಪಂಡಿತರು ಸಾಮಾನ್ಯವಾಗಿ ಬ್ರಾಹ್ಮಣರಾಗಿದ್ದು ಇನ್ನುಳಿದ ದೇಶದಲ್ಲಿ ಕಂಡು ಬರುವಂತೆ ಇವರು ಶಾಖಾಹಾರಿಗಳಾಗಿರದೆ ಮಾಂಸ ಭಕ್ಷಣೆಯನ್ನೂ ಸಹ ಮಾಡುತ್ತಾರೆ. ಆದರೆ ಆಕಳು ಮಾಂಸ ಮಾತ್ರ ನಿಶಿದ್ಧ. ಆದ್ದರಿಂದ ವಾಜವಾನ್ ಖಾದ್ಯದಲ್ಲಿ ಆಕಳು ಮಾಂಸದ ಬಳಕೆಯಿರುವುದಿಲ್ಲ. ಇದರಂತೆ ರೋಗನ್ ಜೋಶ್ ಎಂಬ ಕುರಿ ಮರಿಯಿಂದ ತಯಾರಿಸಲಾಗುವ ಖಾದ್ಯವು ಕಾಶ್ಮೀರದ ಗುರುತರವಾದ ಖಾದ್ಯವಾಗಿದೆ.

ಚಿತ್ರಕೃಪೆ: Oniongas

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಉತ್ತರಾಖಂಡ : ಉತ್ತರಾಖಂಡ ರಾಜ್ಯವು ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವುದರಿಂದ ಹಾಗೂ ಹಿಮಾಲಯ ಪರ್ವತಗಳಿಗೆ ಹತ್ತಿರದಲ್ಲಿರುವುದರಿಂದ ಇಲ್ಲಿ ತಂಪಾದ ವ್ಯತಿರಿಕ್ತವಾದ ವಾತಾವರಣವಿರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ದೇಹಕ್ಕೆ ಸಮತೋಲನವಾದ ಉಷ್ಣ ನೀಡಿ, ಹೆಚ್ಚಿನ ಶಕ್ತಿಯನ್ನು ನೀಡುವ ಆಹಾರವನ್ನು ಸೇವಿಸುವುದು ಅವಶ್ಯಕ. ಆದ್ದರಿಂದ ಉತ್ತರಾಖಂಡದಲ್ಲಿ ದೊರಕುವ ಆಹಾರವು ದೇಹದ ಆರೋಗ್ಯಕ್ಕೆ ಅತಿ ಹಿತಕರವಾದ ಆಹಾರ ಎಂದು ನಂಬಲಾಗಿದೆ. ಹೆಚ್ಚಿನ ಪ್ರಮಾಣದ ಶಕ್ತಿ ನೀಡುವ ಬೇಳೆ ಕಾಳುಗಳು, ಹಸಿರು ಪೋಷಕಾಂಶಯುಕ್ತ ತರಕಾರಿಗಳನ್ನು ಹೆಚ್ಚಾಗಿ ಇಲ್ಲಿ ಬಳಸಲಾಗುತ್ತದೆ. ಅಲ್ಲದೆ ಲವಂಗ, ದಾಲ್ಚಿನಿಗಳ ಜೊತೆ ಜೊತೆಯಾಗಿ ಇಲ್ಲಿ ದೊರಕುವ ಸ್ಥಳೀಯ ಹಾಗೂ ಉತ್ತಮ ಗುಣವುಳ್ಳ ಇತರೆ ಸಾಂಬಾರು ಪದಾರ್ಥಗಳನ್ನೂ ಸಹ ಇಲ್ಲಿನ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಸಾಗ್ ಪನೀರ್ ಇದೊಂದು ಉತ್ತರಾಖಂಡದ ಜನಪ್ರೀಯ ಖಾದ್ಯವಾಗಿದ್ದು ಇದನ್ನು ಪನೀರ್, ಪಾಲಕ ಹಾಗೂ ಮೆಂತೆ ಸೊಪ್ಪುಗಳಿಂದ ತಯಾರಿಸಲಾಗುತ್ತದೆ. ಉತ್ತರಾಖಂಡದ ಅದ್ಭುತ ಪ್ರವಾಸ.

ಚಿತ್ರಕೃಪೆ: Quadell

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಹಿಮಾಚಲ ಪ್ರದೇಶ : ಹಿಮಾಚಲದಲ್ಲಿ ಹೆಚ್ಚಾಗಿ ಉತ್ತರ ಭಾರತದ ಇತರೆ ರಾಜ್ಯಗಳಲ್ಲಿ ಕಂಡುಬರುವಂತೆಯೆ ಆಹಾರ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೂ ಈ ರಾಜ್ಯದಲ್ಲಿ ಮಾಂಸ ಹಾಗೂ ಬ್ರೆಡ್ಡುಗಳ ಬಳಕೆ ಅಧಿಕ. ಈ ರಾಜ್ಯದ ಕೆಲವು ವಿಶೇಷತೆಗಳೆಂದರೆ ಪಚೋಲೆ, ಮನೀ, ಮದಿರಾ, ಪಟೀರ್, ಚೌಕ್, ಭಾಗ್ಜೇರಿ ಹಾಗೂ ಎಳ್ಳಿನ ಚಟ್ನಿ. ಹಿಮಾಚಲದಲ್ಲಿರುವ ಅದ್ಭುತ ಸರೋವರಗಳು.

ಚಿತ್ರಕೃಪೆ: Garconlevis

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ತ್ರಿಪುರಾ : ತ್ರಿಪುರಾದಲ್ಲಿ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ನೋಡಬಹುದು. ಇಲ್ಲಿಯೂ ಮಾಂಸಾಹಾರವಿದ್ದು ಆಮೆ, ಕಪ್ಪೆಗಳನ್ನೂ ಸಹ ಆಹಾರಗಳಲ್ಲಿ ಬಳಸಲಾಗುತ್ತದೆ. ಸಾಕಷ್ಟು ಬಗೆಯ ವಿವಿಧ ಹೆಸರುಗಳ ಖಾದ್ಯಗಳು ಇಲ್ಲಿ ಲಭ್ಯ. ಅವುಗಳಲ್ಲಿ ಒಂದೆಂದರೆ ಭಂಗುಯ್. ಇದೊಂದು ಗಿಡವಾಗಿದ್ದು ಇದರ ಎಲೆಗಳಲ್ಲಿ ವಿಶಿಷ್ಟ ರೀತಿಯ ಅಕ್ಕಿಯನ್ನು ಬೇಯಿಸಿ ಅದನ್ನು ಮೀನು ಫ್ರೈಯೊಂದಿಗೆ ಸವಿಯಲಾಗುತ್ತದೆ. ಇದು ತ್ರಿಪುರಾದ ಸಾಂಪ್ರದಾಯಿಕ ಆಹಾರ ಖಾದ್ಯ.

ಚಿತ್ರಕೃಪೆ: Mannamajumder

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ತೆಲಂಗಾಣ : ನೂತನವಾಗಿ ರಚಿತವಾಗಿರುವ ಈ ರಾಜ್ಯದಲ್ಲಿ ಹೆಚ್ಚು ಕಮ್ಮಿ ಆಂಧ್ರದ ಶೈಲಿಯ ಆಹಾರ ಪದಾರ್ಥಗಳನ್ನೇ ಕಾಣಬಹುದು. ಆದರೂ ರಾಜ್ಯದ ರಾಜಧಾನಿ ನಗರ ಹೈದರಾಬಾದ್ ಸೇರಿದಂತೆ ರಾಜ್ಯದ ತುಂಬೆಲ್ಲ ಕಡೆ ದೊರೆಯುವ ಹೈದರಾಬಾದಿ ಬಿರಿಯಾನಿ ಗುರುತರವಾದ ಖಾದ್ಯವಾಗಿದೆ. ನೂತನ ತೆಲಂಗಾಣದ ಪ್ರವಾಸಿ ಆಕರ್ಷಣೆಗಳು.

ಚಿತ್ರಕೃಪೆ: Trishahitk2012

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಮಣೀಪುರ : ಮಣೀಪುರದ ಆಹಾರಾ ಖಾದ್ಯವು ಸರಳ, ಶುದ್ಧ, ಜೈವಿಕ ಹಾಗೂ ಆರೋಗ್ಯಕ್ಕೆ ಹಿತ ನೀಡುವಂತಿರುತ್ತವೆ. ಮಾಂಸಾಹಾರ ಖಾದ್ಯಗಳು ಸರ್ವೆ ಸಾಮಾನ್ಯ. ಎರೊಂಬಾ ಎಂಬ ದ್ರವ್ಯ ರೂಪದ ಖಾದ್ಯವು ಹೆಸರುವಾಸಿಯಾಗಿದೆ. ಇದನ್ನು ಉಮೊರೊಕ್ (ಹಸಿ ಮೆಣಸಿನ ಕಾಯಿಗಳಲ್ಲಿ ರಾಜ ಹಾಗೂ ಅತ್ಯಂತ ಖಾರ) ಮತ್ತು ಇತರೆ ತರಕಾರಿಗಳನ್ನು ಶೇಖರಿಸಿಟ್ಟ ಮೀನಿನೊಂದಿಗೆ ನೀರಿನಲ್ಲಿ ಬೇಯಿಸಿ ಅನ್ನದ ಜೊತೆ ಸೇವಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಸೂಪ್ ತರಹ ಇರುತ್ತದೆ.

ಚಿತ್ರಕೃಪೆ: Punshiba18

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಮಣೀಪುರದ ಮತ್ತೊಂದು ಜನಪ್ರೀಯ ಸಿಹಿ ಖಾದ್ಯವೆಂದರೆ ಚಹಾವೊ ಖೀರ್ ಅಥವಾ ಪಾಯಸ. ಇದನ್ನು ನಿಮಗಚ್ಚರಿ ಮೂಡಿಸುವ ಕಪ್ಪು ಬಣ್ಣದ ಒಂದು ವಿಶಿಷ್ಟ ರೀತಿಯ ಅಕ್ಕಿಯಿಂದ ತಯಾರಿಸಲಾಗುತ್ತದೆ.

ಚಿತ್ರಕೃಪೆ: BengaliHindu

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಜಾರ್ಖಂಡ್ : ಜಾರ್ಖಂಡ್ ರಾಜ್ಯಕ್ಕೆನಾದರೂ ಭೇಟಿ ನೀಡಿದರೆ ಸಲಾನ್ ಎಂಬ ಮಾಂಸ ಖಾದ್ಯವನ್ನು ತಿನ್ನಲು ಮರೆಯದಿರಿ. ಇದನ್ನು ಬೇಯಿಸಿದ ಪೂರ್ಣ ರೂಪದ ಆಲುಗಡ್ಡೆ ಮಸಾಲೆ ಹಾಗೂ ಕುರಿಮರಿಯ ಮಾಂಸದಿಂದ ತಯಾರಿಸಲಾಗುತ್ತದೆ. ಹಾಗೆ ನೋಡಿದರೆ ಬಿಹಾರದಲ್ಲಿ ಕಂಡುಬರುವಂತೆಯೆ ಇಲ್ಲಿಯೂ ಸಹ ಖಾದ್ಯಗಳು ತಯಾರಿಸಲ್ಪಡುತ್ತವೆ. ಇನ್ನು ಹಿಟ್ಟು, ಬೆಲ್ಲ ಹಾಗೂ ತುಪ್ಪದಿಂದ ತಯಾರಿಸಲಾಗುವ ತಿಲ್ಕುಟ್ ಸಹ ಒಂದು ಜನಪ್ರೀಯವಾದ ಸಿಹಿ ಖಾದ್ಯವಾಗಿದೆ.

ಚಿತ್ರಕೃಪೆ: Kalaiselvi Murugesan

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಹರ್ಯಾಣ : ಪಂಜಾಬಿನ ಆಹಾರ ಪದ್ಧತಿಯನ್ನೆ ಹೆಚ್ಚಾಗಿ ಹೊಂದಿರುವ ಹರ್ಯಾಣದಲ್ಲಿಯೂ ಸಹ ಪಂಜಾಬ್ ರೀತಿಯ ಖಾದ್ಯಗಳೆ ಜನಪ್ರೀಯವಾಗಿವೆ. ಆದರೂ ಹರ್ಯಾಣದ ಸಂಕೇತವಾಗಿ ಇಲ್ಲಿ ತಯಾರಿಸಲಾಗುವ ಲಸ್ಸಿಯನ್ನು ತಪ್ಪಿಸಿಕೊಳ್ಳುವಂತೆಯೆ ಇಲ್ಲ. ಪಂಜಾಬ್ ನಲ್ಲಿಯೂ ಸಹ ಲಸ್ಸಿ ಪ್ರಮುಖ ಪಾನೀಯ. ಲಸ್ಸಿಯೊಡನೆ ಹರ್ಯಾಣದ ತುಂಬೆಲ್ಲ ನಿಂಬೆಯ ಶರಬತ್ತು, ಪಕೋಡಾ, ಬೇಸನ್ ಮಸಾಲಾ, ರೋಟಿ, ಸಬ್ಜಿಗಳು ಸಾಮಾನ್ಯ.

ಚಿತ್ರಕೃಪೆ: Nitin

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಛತ್ತೀಸಗಡ್ : ಈ ರಾಜ್ಯದಲ್ಲಿ ಅಕ್ಕ ಪಕ್ಕದ ಇತರೆ ರಾಜ್ಯಗಳಲ್ಲಿ ಕಂಡುಬರುವಂತೆ ಅನ್ನ, ಜೋಳ, ರೋಟಿ ಮುಂತಾದ ಖಾದ್ಯಗಳನ್ನೆ ತಯಾರಿಸಲಾಗುತ್ತದೆ. ಆದರೂ ಇಲ್ಲಿ ವೈವಿಧ್ಯಮಯ ಬೇಳೆ ಕಾಳುಗಳನ್ನು ಆಹಾರದಲ್ಲಿ ಯಥೇಚ್ಚವಾಗಿ ಬಳಲಸಲಾಗುತ್ತದೆ. ಇಲ್ಲಿ ಸ್ಥಳೀಯವಾಗಿ ದೊರಕುವ ಮಹುವಾ ಎಂಬ ಹೂವುಗಳಿಂದ ಮದ್ಯ ರೀತಿಯ ಪಾನೀಯವನ್ನು ತಯಾರಿಸಲಾಗುತ್ತದೆ. ಇದು ಇಡೀ ರಾಜ್ಯದಲ್ಲೆ ಹೆಚ್ಚು ಜನಪ್ರೀಯವಾದ ಪಾನೀಯ. ಅಲ್ಲದೆ ಛತ್ತೀಸಗಡ್ ರಾಜ್ಯದ ಬುಡಕಟ್ಟು ಜನಾಂಗದವರು ತಮ್ಮ ಆಹಾರ ಪದಾರ್ಥಗಳಲ್ಲಿ ಹಂದಿ, ಅಳಿಲು, ಅಣಬೆ, ಇಲಿ ಮುಂತಾದವುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಒಣಗಿದ ಮಹುವಾ ಹೂವುಗಳು.

ಚಿತ್ರಕೃಪೆ: Pankaj Oudhia

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಅಸ್ಸಾಂ : ಅನ್ನ, ಮೀನು, ಮಾಂಸ, ಎಲೆಗಳುಳ್ಳ ತರಕಾರಿ ಇವು ಆಸ್ಸಾಮಿನ ಆಹಾರ ಪದ್ಧತಿಯ ಪ್ರಮುಖ ಭಾಗಗಳು. ಅಸ್ಸಾಮಿ ಥಾಲಿ ಜನಪ್ರೀಯವಾದ ಸಾಂಪ್ರದಾಯಿಕ ಶೈಲಿಯ ಊಟವಾಗಿದೆ.

ಚಿತ್ರಕೃಪೆ: Soyuz Sharma

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಅರುಣಾಚಲ ಪ್ರದೇಶ : ಅರುಣಾಚಲದಲ್ಲೂ ಸಹ ಅಕ್ಕಿಯನ್ನು ಹೇರಳವಾಗಿ ಬಳಸಲಾಗುತ್ತದೆ. ಥುಕ್ಪಾ ಎಂಬುದು ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಲಾಗುವ ನೂಡಲ್ಸ್ ರೀತಿಯ ಖಾದ್ಯವಾಗಿದ್ದು ರಾಜ್ಯದಲ್ಲೆ ಜನಪ್ರೀಯವಾಗಿದೆ. ಅಲ್ಲದೆ ಅಕ್ಕಿಯಿಂದ ತಯಾರಿಸಲಾಗುವ ವೈವಿಧ್ಯಮಯ ರೀತಿಯ ಮದ್ಯವು ಈ ರಾಜ್ಯದ ಹೆಗ್ಗುರುತು.

ಚಿತ್ರಕೃಪೆ: Sharada Prasad CS

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಮೇಘಾಲಯ : ಮೇಘಾಲಯದಲ್ಲಿ ಹೆಚ್ಚಾಗಿ ಮಾಂಸಾಹಾರ ಬಳಕೆಯಲ್ಲಿದೆ. ಆಡು, ಕುರಿ, ಆಕಳು, ಬಾತು, ಹಂದಿ ಮುಂತಾದ ಪ್ರಾಣಿಗಳನ್ನು ಬೆಳೆಸಿ ಅದರ ಮಾಂಸವನ್ನು ಇಷ್ಟ ಪಡುತ್ತಾರೆ. ಅಲ್ಲದೆ ಬಾಂಬೂ ಶೂಟ್ ಗಳ ಉಪ್ಪಿನಕಾಯಿ ಹೆಚ್ಚು ಜನಪ್ರೀಯವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Isageum

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ಪ್ರವಾಸಿ ರಾಜ್ಯಗಳ ವಿಶೇಷ ಖಾದ್ಯಗಳು:

ನಾಗಾಲ್ಯಾಂಡ್ : ನಾಗಾ ಜನರು ತಮ್ಮ ಪ್ರತಿ ಆಹಾರದಲ್ಲೂ ಮಾಂಸಾಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅದರಲ್ಲೂ ವಿಶೇಷವಾಗಿ ಶೇಖರಿಸಿಟ್ಟ ಒಣ ಮೀನುಗಳು, ಹಂದಿ ಮಾಂಸ, ಗೋಮಾಂಸ, ಕೋಳಿ, ಮಟನ್ ಮುಂತಾದವುಗಳು ಸಾಮಾನ್ಯವಾಗಿ ಬಳಸಲ್ಪಡುತ್ತವೆ.

ಚಿತ್ರಕೃಪೆ: Wyrnilla

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X