Search
  • Follow NativePlanet
Share
» »ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?

ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?

ಭಾರತೀಯ ಆಧ್ಯಾತ್ಮಿಕ ಪ್ರವಾಸದಲ್ಲಿ ಶೃಂಗೇರಿಯಲ್ಲಿನ ಶಾರದಾ ಪೀಠ ಹಾಗು ಅಲ್ಲಿರುವ ಶಾರದಾ ಮಾತೆ ದೇವಾಲಯವು ಅತ್ಯಂತ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿನ ಪಶ್ಚಿಮ ದಿಕ್ಕಿನಲ್ಲಿರುವ ಈ ಪುಣ್ಯಕ್ಷೇತ್ರದ ಸಂದರ್ಶನಕ್ಕಾಗಿ ಕೇವಲ ಕರ್ನಾಟಕದ ಮೂಲೆ-ಮೂಲೆಗಳಿಂದಲೇ ಅಲ್ಲದೇ ದೇಶ, ವಿದೇಶಗಳಿಂದಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಆದರೆ ಇಲ್ಲಿಗೆ ಭೇಟಿ ನೀಡುವವರಲ್ಲಿ ಅನೇಕ ಮಂದಿ ಶಾರದಾ ಮಾತೆಯ ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುಗುತ್ತಾರೆ. ಆದರೆ ಈ ಶೃಂಗೇರಿಗೆ ಸಮೀಪದಲ್ಲಿಯೇ ಅನೇಕ ಪ್ರವಾಸಿ ಪ್ರದೇಶಗಳು ಕೂಡ ಇವೆ. ಅವುಗಳಲ್ಲಿ ಕೈಗಾ ಜಲಪಾತವು ಕೂಡ ಒಂದು. ಈ ಲೇಖನದ ಮೂಲಕ ಶೃಂಗೇರಿಯ ಸುತ್ತಮುತ್ತಲಿರುವ ಅನೇಕ ಪ್ರವಾಸಿ ಪ್ರದೇಶಗಳನ್ನು ವಿವರವಾಗಿ ತಿಳಿದುಕೊಳ್ಳಿ.

1.ಕೈಗಾ ಜಲಪಾತ

1.ಕೈಗಾ ಜಲಪಾತ

PC:YOYTUBE

ಶೃಂಗೇರಿಗೆ ಕೇವಲ 10 ಕಿ.ಮೀ ದೂರದಲ್ಲಿರುವ ಸಣ್ಣ ಪಟ್ಟಣವೇ ಕೈಗಾ. ಕೈಗಾ ಹಚ್ಚಹಸಿರಿನ ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಫೋಟುಗ್ರಾಫಿ ಇಷ್ಟ ಪಡುವವರು ಇದೊಂದು ಸ್ವರ್ಗ ಧಾಮ ಎಂದೇ ಹೇಳಬಹುದು. ಇಷ್ಟೇ ಅಲ್ಲದೇ, ಅದ್ಭುತವಾದ ಜಲಪಾತವನ್ನು ಕೂಡ ಹೊಂದಿದೆ. ಟ್ರೆಕ್ಕಿಂಗ್ ಮಾಡಲು ಬಯಸುವವರು ಈ ತಾಣಕ್ಕೆ ತಪ್ಪದೇ ಭೇಟಿ ನೀಡಿ ಬನ್ನಿ.

2.ಶೃಂಗೇರಿ ಮಠ

2.ಶೃಂಗೇರಿ ಮಠ

PC:YOYTUBE

ಶೃಂಗೇರಿ ಮಠವನ್ನು ಆದಿಶಂಕರಾಚಾರ್ಯರು 8 ನೇ ಶತಮಾನದಲ್ಲಿ ಏರ್ಪಾಟು ಮಾಡಿದರು. ಭಾರತ ದೇಶದಲ್ಲಿರುವ ನಾಲ್ಕು ವಿಶಿಷ್ಟವಾದ ಪೀಠಗಳಲ್ಲಿ ಶೃಂಗೇರಿ ಮಠವೇ ಮೊದಲನೆಯದು. ಭಾರತೀಯ ಸಂಪ್ರದಾಯ, ವೇದಗಳು, ಧರ್ಮಗಳು ಪರಿರಕ್ಷಣ ಈ ಪೀಠದ ಮುಖ್ಯವಾದ ಉದ್ದೇಶ. ಈ ಮಠದಲ್ಲಿ ಶಾರದಾ ದೇವಿಯನ್ನು ಪ್ರಧಾನವಾದ ದೈವವಾಗಿ ಆರಾಧಿಸುತ್ತಾರೆ.

3.ಹೊರನಾಡು

3.ಹೊರನಾಡು

PC:YOYTUBE

ಶೃಂಗೇರಿಯಿಂದ ಕೇವಲ 42 ಕಿ.ಮೀ ದೂರದಲ್ಲಿ ಈ ಹೊರನಾಡು ಇದೆ. ಹಚ್ಚಹಸಿರಿನ ಅರಣ್ಯದ ಮಧ್ಯದಲ್ಲಿರುವ ಈ ಹೊರನಾಡುವಿನಲ್ಲಿ ಅನ್ನಪೂರ್ಣೆಶ್ವರಿ ನೆಲೆಸಿದ್ದಾಳೆ. ಇಲ್ಲಿ ಕಾಫಿ ಹಾಗು ಟೀ ತೋಟಗಳು ಹೆಚ್ಚಾಗಿವೆ. ಈ ಕ್ಷೇತ್ರದಲ್ಲಿನ ಅನ್ನಪೂರ್ಣೆಶ್ವರಿಯನ್ನು ದರ್ಶಿಸಿಕೊಂಡರೆ ಸರ್ವ ದಾರಿದ್ರ್ಯ ನಾಶವಾಗುತ್ತದೆ ಎಂದು ಭಕ್ತರ ಪ್ರಬಲವಾದ ವಿಶ್ವಾಸ.

4.ಶಾರದಾಮಾತೆಯ ದೇವಾಲಯ

4.ಶಾರದಾಮಾತೆಯ ದೇವಾಲಯ

PC:YOYTUBE

ಈ ಶಾರದಾಮಾತೆಯ ದೇವಾಲಯದ ನಿರ್ಮಾಣವನ್ನು ಆದಿಶಂಕರಾಚಾರ್ಯರ ನೇತೃತ್ವದಲ್ಲಿ ಪ್ರಾರಂಭವಾಯಿತು ಎಂದು ಹೇಳುತ್ತಾರೆ. ದಕ್ಷಿಣ ಭಾರತ ವಾಸ್ತು ಶೈಲಿಯಲ್ಲಿ ಈ ದೇವಾಲಯವು ಕಂಗೊಳಿಸುತ್ತಿದೆ. ಈ ದೇವಾಲಯದಲ್ಲಿನ ಕಲ್ಲಿನ ಸ್ತಂಭಗಳ ಮೇಲೆ ಅನೇಕ ಸುಂದರವಾದ ಶಿಲ್ಪಗಳು ನಮ್ಮ ಭಾರತೀಯ ಶಿಲ್ಪಕಲೆಯ ವೈಭವಕ್ಕೆ ಸಾಕ್ಷ್ಯಿ ಎಂದೇ ಹೇಳಬಹುದು.

5.ವಿದ್ಯಾಶಂಕರ ದೇವಾಲಯ

5.ವಿದ್ಯಾಶಂಕರ ದೇವಾಲಯ

PC:YOYTUBE

ವಿದ್ಯಾಂಶಂಕರ ದೇವಾಲಯವು ಕೂಡ ಶೃಂಗೇರಿಯಲ್ಲಿನ ಪ್ರಸಿದ್ಧವಾದ ಪ್ರವಾಸಿ ತಾಣ. ಪೀಠಾಧಿಪತಿ ವಿದ್ಯಾಶಂಕರ ಸ್ಮರರ್ಣಾರ್ಥವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಿದರು. ವಿಜಯ ನಗರ ರಾಜರು ನಿರ್ಮಾಣ ಮಾಡಿದ ಈ ದೇವಾಲಯ ಕೂಡ ಅಪೂರ್ವವಾದ ಶಿಲ್ಪಕಲಾ ಸಂಪತ್ತನ್ನು ಹೊಂದಿದೆ. ಆಂಜನೇಯ ಸ್ವಾಮಿ ದೇವಾಲಯ, ಆದಿಶಂಕರ ದೇವಾಲಯ ಇಲ್ಲಿ ಮುಖ್ಯವಾದ ದೇವಾಲಯಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X