Search
  • Follow NativePlanet
Share
» »ಆಗ್ರಾದಲ್ಲಿ ತಾಜ್‌ಮಹಲ್‌ನ್ನು ಬಿಟ್ರೆ ಬೇರೆ ಯಾವೆಲ್ಲಾ ಪ್ರಮುಖ ತಾಣಗಳಿವೆ

ಆಗ್ರಾದಲ್ಲಿ ತಾಜ್‌ಮಹಲ್‌ನ್ನು ಬಿಟ್ರೆ ಬೇರೆ ಯಾವೆಲ್ಲಾ ಪ್ರಮುಖ ತಾಣಗಳಿವೆ

By Manjula Balaraj

ಆಗ್ರಾದಲ್ಲಿ ಏನಿದೆ ಅಂದ್ರೆ ಹೆಚ್ಚಿನವರಿಗೆ ಗೊತ್ತಿರೋದು ಬರೀ ತಾಜ್‌ಮಹಲ್ ಅಷ್ಟೇ. ಆದರೆ ಆಗ್ರಾದಲ್ಲಿ ಭೇಟಿ ಕೊಡಬಹುದಾದ ಅನೇಕ ಸ್ಥಳಗಳಿವೆ ಇವು ಅತ್ಯಂತ ಆಸಕ್ತಿದಾಯಕವಾದುದು ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವಂತಹುಗಳಾಗಿವೆ. ಸದಾ ಸದ್ದು ಗದ್ದಲಗಳಿಂದ ಕೂಡಿದ ಈ ಪಟ್ಟಣದಲ್ಲಿ ವಿವಿಧ ಸಂಸ್ಕೃತಿ ಮತ್ತು ಧರ್ಮಕ್ಕೆ ಸೇರಿದ ಜನರ ಸಮ್ಮಿಲನವನ್ನು ಕಾಣಬಹುದಾಗಿದೆ.

ಆಗ್ರಾವು ದೇಶದ ಕೆಲವು ಮಂತ್ರಮುಗ್ದ ಗೊಳಿಸುವ ಧಾರ್ಮಿಕ ರಚನೆಗಳ ನೆಲೆಯಾಗಿದೆ. ಇದು ಪೂಜ್ಯನೀಯ ಜಾಮಾ ಮಸೀದಿಯಿಂದ ಕಡಿಮೆ ಪ್ರಸಿದ್ದಿಯಲ್ಲಿರುವ ಭಾಗೇಶ್ವರ್ ನಾಥ ದೇವಾಲಯಗಳವರೆಗೆ, ಈ ನಗರವು ಅನೇಕ ಧಾರ್ಮಿಕ ತಾಣಗಳನ್ನು ಹೊಂದಿದ್ದು ನೀವು ನಿಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

ಜಾಮಾ ಮಸೀದಿ

ಜಾಮಾ ಮಸೀದಿ

Dennis Jarvis

ಇದನ್ನು ಸಾಮಾನ್ಯವಾಗಿ ಶುಕ್ರವಾರದ ಮಸೀದಿ ಎಂದು ಕರೆಯಲಾಗುತ್ತದೆ . ಜಾಮಾ ಮಸೀದಿ ಆಗ್ರಾ ಕೋಟೆಯ ಎದುರುಗಡೆ ಇದೆ ಮತ್ತು ಈ ಸ್ಥಳದಿಂದ ರೈಲ್ವೇ ನಿಲ್ದಾಣವನ್ನು ಕಾಣಬಹುದಾಗಿದೆ. ಇದನ್ನು ಶಹಜಹಾನನ ಮಗಳಾದ ಜಹನರಾ ಬೇಗಂ ಅವರಿಂದ 1648 ರಲ್ಲಿ ನಿರ್ಮಿಸಲಾಯಿತು. ಈ ಕೆಂಪು ಮರಳುಗಲ್ಲು ಮತ್ತು ಬಿಳಿ ಮಾರ್ಬಲ್ ನಿಂದ ನಿರ್ಮಿಸಲಾದ ರಚನೆಯನ್ನು ಪೂರ್ಣಗೊಳಿಸಲು ಸುಮಾರು 5000 ಕೆಲಸಗಾರರು 6 ವರ್ಷಗಳ ಕಾಲ ಶ್ರಮಿಸಿರುವುದಾಗಿ ಹೇಳಲಾಗುತ್ತದೆ.

ಈ ಕಟ್ಟಡದ ಒಂದು ಅಂಗಳವು ಐದು ಕಮಾನುಗಳಿರುವ ಪ್ರವೇಶದ್ವಾರಗಳೊಂದಿಗೆ ಆವೃತವಾಗಿದ್ದು ಈ ಮಸೀದಿಯು ಎತ್ತರವಾದ ಕಂಬಗಳ ಮೇಲೆ ನಿಂತಿದೆ ಇದನ್ನು ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ತಲುಪಬಹುದಾಗಿದೆ ಅಲ್ಲದೆ ಇದು ಮೂರು ಗಜಗಾತ್ರದ ಮರುಳುಗಲ್ಲಿನಿಂದ ರಚಿಸಲಾದ ಗುಮ್ಮಟಗಳಿಂದ ಅಲಂಕೃತವಾಗಿದೆ.

ಭಾಗೇಶ್ವರ್ ನಾಥ್ ದೇವಾಲಯ

ಭಾಗೇಶ್ವರ್ ನಾಥ್ ದೇವಾಲಯ

ಸಂತ ಜೋನ್ಸ್ ಕಾಲೇಜಿನ ಮತ್ತು ಆಗ್ರಾದ ಹೆಚ್ಚು ಪ್ರಚಲಿತದಲ್ಲಿರುವ ಪ್ರದೇಶವಾದ ಮಾರಾಟ ತೆರಿಗೆ ಕಚೇರಿಯ ಹತ್ತಿರದಲ್ಲಿ ನೆಲೆಸಿರುವ ಭಾಗೇಶ್ವರ್ ನಾಥ ದೇವಾಲಯವು ನಗರದ ಹೆಚ್ಚು ಕಡಿಮೆ ಪ್ರಚಾರಕ್ಕೊಳಗಾಗಿರುವ ಧಾರ್ಮಿಕ ತಾಣವಾಗಿದೆ. ಆದರೆ ಇದು ಶಿವರಾತ್ರಿಯ ಸಮಯದಲ್ಲಿ ಮಾತ್ರ ಇದಕ್ಕೆ ಹೆಚ್ಚಿನ ಜೀವ ಬಂದಂತಿರುತ್ತದೆ.

ಈ ಸಮಯದಲ್ಲಿ ಈ ದೇವಾಲಯವನ್ನು ಹೊಳೆಯುವ ದೀಪಾಲಂಕಾರ ಮಾಡಲಾಗುತ್ತದೆ.ಅಲ್ಲದೆ ಈ ಸಮಯದಲ್ಲಿ ದೇವರಿಗೆ ಪೂಜೆ ಮಾಡುವುದಕ್ಕಾಗಿ ಇಲ್ಲಿ ಭಕ್ತರ ಸಾಲುಗಳನ್ನು ನೋಡಬಹುದಾಗಿದೆ. ಇಲ್ಲಿಯ ಪ್ರಮುಖ ದೇವರು ಶಿವ ಎಂಬುದನ್ನು ಇಲ್ಲಿ ಒತ್ತಿ ಹೇಳುವ ಅವಶ್ಯಕತೆಯೇ ಇಲ್ಲ.

ಮೋತಿ ಮಸ್ಜಿದ್

ಮೋತಿ ಮಸ್ಜಿದ್

ಅಚ್ಚ ಬಿಳಿ ಮಾರ್ಬಲ್ ನಿಂದ ನಿರ್ಮಿಸಲಾಗಿರುವ ಮೋತಿ ಮಸೀದಿಯು ಮುತ್ತಿನಿಂದ ಮಾಡಿದಂತೆ ಕಾಣುವುದಕ್ಕಾಗಿ ಈ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು 1648 ಮತ್ತು 1654 ರ ನಡುವೆ ಚಕ್ರವರ್ತಿ ಷಹ ಜಹಾನ್ ತನ್ನ ನ್ಯಾಯಾಲಯದ ರಾಯಲ್ ಸದಸ್ಯರಿಗಾಗಿ ನಿರ್ಮಿಸಿದರು,ಅದರ ನಿರ್ಮಾಣವು ಮೊಘಲ್ ಯುಗದ ಶ್ರೀಮಂತ ಕಲೆಗಾರಿಕೆಗೆ ಸಾಕ್ಷಿಯಾಗಿದೆ.

ಈ ಮಸೀದಿಯು 12 ಕಮಾನುಗಳನ್ನು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಮತ್ತು ಅಲಂಕೃತವಾದ ಪ್ರಾರ್ಥನಾ ಕೋಣೆ, ಏಳು ಕೊಲ್ಲಿಗಳು ಮತ್ತು ಮೂರು ಚುಕ್ಕಾಣಿಗಳಿರುವ ಉಬ್ಬಾದ ಗುಮ್ಮಟಗಳನ್ನು ಒಳಗೊಂಡಿದೆ.

ಸೋಯಾಮಿ ಭಾಗ್ ಸಮಾಧ್

ಸೋಯಾಮಿ ಭಾಗ್ ಸಮಾಧ್

ತಾಜ್ ಮಹಲ್ ನಂತೆಯೇ ಇದು ಇದರ ಸೌಂದರ್ಯತೆ ಮತ್ತು ಸಂಕೀರ್ಣ ಜಾಲರಿ ಮತ್ತು ಕಲ್ಲಿನ ಕುಸುರಿಗಾಗಿ ಮೆಚ್ಚುಗೆಯನ್ನು ಪಡೆದಿದೆ. ಸೊಯಾಮಿ ಬಾಗ್ ಸಮಾಧ್ ದಯಾಲ್ ಭಾಗ್ ನಗರದ ಹೊರವಲಯದಲ್ಲಿದೆ.

ಗುರುಕಾ ತಾಲ್

ಗುರುಕಾ ತಾಲ್

ಈ ಗುರುದ್ವಾರವು ನಗರದ ಸಿಖ್ ಜನಾಂಗದವರ ಅತ್ಯಂತ ಪೂಜ್ಯನೀಯವಾದ ಸ್ಥಳವಾಗಿದೆ. ಈ ಸ್ಥಳವು ಸುಂದರ ವಾಸ್ತುಶಿಲ್ಪಶೈಲಿಗಾಗಿ ಹೆಸರುವಾಸಿಯಾಗಿದೆ ಗುರು ತೇಜ್ ಬಹದ್ದೂರ್ (ಸಿಖ್ಖರ 9 ನೆಯ ಗುರು) ಮೊಘಲ್ ದೊರೆ ಔರಂಗಜೇಬನಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ ಸ್ಥಳದಲ್ಲಿ ಗುರು ಕಾ ತಾಲ್ ಅನ್ನು ಕಟ್ಟಲಾಗಿದೆ.

ಈ ಗುರುದ್ವಾರವು ಸಿಖ್‌ರಿಗೆ ಐತಿಹಾಸಿಕ ಮಹತ್ವವುಳ್ಳದ್ದೂ ಆಗಿದೆ. ಮತ್ತು ಪ್ರತೀವರ್ಷ ನೂರಾರು ಭಕ್ತರು ಇಲ್ಲಿ ಗುರು ತೇಜ್ ಬಹದೂರರಿಗೆ ಗೌರವ ಅರ್ಪಿಸುವ ಸಲುವಾಗಿ ಭೇಟಿ ಕೊಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X