Search
  • Follow NativePlanet
Share
» »ಉತ್ತರ ಭಾರತ : ಯಾವ ಸ್ಥಳ? ಏನು ವಿಶೇಷ?

ಉತ್ತರ ಭಾರತ : ಯಾವ ಸ್ಥಳ? ಏನು ವಿಶೇಷ?

By Vijay

ಭಾರತ ಮಾತೆಯ ಕಿರಿಟ ರತ್ನ ಕಾಶ್ಮೀರದಿಂದ ಹಿಡಿದು ಪಾದಗಳ ಭೂಷಣದಂತಿರುವ ಕನ್ಯಾಕುಮಾರಿಯವರೆಗೆ ಸಾಕಷ್ಟು ಪ್ರಖ್ಯಾತ, ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು ತಮ್ಮ ವಿಶಿಷ್ಟ ಹಾಗೂ ವಿಶೇಷವಾದ ಶ್ರೀಮಂತಿಕೆಗಳಿಂದ ಕಂಗೊಳಿಸುತ್ತಿದ್ದು ಪ್ರವಾಸಿಗನಿಗಾಗಿ ಸದಾಕಾಲ ಕಾಯುತ್ತಿವೆ.

ವಿಶೇಷ ಲೇಖನ : ಉತ್ತರ ಭಾರತದ ಬಲು ನೆಚ್ಚಿನ ಸ್ಥಳಗಳು

ಹೌದು, ಹಲವು ವೈವಿಧ್ಯತೆಯಿರುವ ಭಾರತದ ಎಲ್ಲ ಸ್ಥಳಗಳೂ ಸಹ ತಮ್ಮಲ್ಲಿ ಒಂದೊಂದು ವಿಶೇಷತೆಯನ್ನು ಅಡಗಿಸಿಕೊಂಡಿವೆ. ಕೆಲವು ಜಲಪಾತಗಳಿಗೆ ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ಸುಂದರ ಕಡಲ ತೀರಗಳಿಗೆ, ಅದ್ಭುತ ಬೆಟ್ಟ ಪರ್ವತಗಳಿಗೆ, ರೋಮಾಂಚನ ಜೀವನ ಶೈಲಿಗೆ, ವಿಶಿಷ್ಟವಾದ ತಿನಿಸುಗಳಿಗೆ ಹೀಗೆ ಪಟ್ಟಿ ಬೆಳೆಯುತ್ತ ಸಾಗುತ್ತದೆ.

ಪ್ರಸ್ತುತ ಲೇಖನವು ಉತ್ತರ ಭಾರತದ ಕೆಲ ಪ್ರವಾಸಿ ಮಹತ್ವದ ಪ್ರದೇಶಗಳು ಯಾವ ವಿಶೇಷತೆಗಳಿಗೆ ಬಹುವಾಗಿ ಪ್ರಸಿದ್ಧವಾಗಿದೆ ಎಂಬುದರ ಕುರಿತು ಚುಟುಕಾಗಿ ತಿಳಿಸುತ್ತದೆ. ಇದೆ ಸರಣಿಯಲ್ಲಿ ದಕ್ಷಿಣ ಭಾರತದ ಸ್ಥಳಗಳ ಕುರಿತಿರುವ ಲೇಖನವನ್ನು ನಿರೀಕ್ಷಿಸಿ.

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬೇಸಿಗೆ ರಾಜಧಾನಿಯಾಗಿರುವ ಶ್ರೀನಗರವು ಪ್ರವಾಸಿ ಪ್ರಖ್ಯಾತ ಸ್ಥಳವಾಗಿದೆ. ಶ್ರೀನಗರವು ಉದ್ಯಾನ, ಒಣಹಣ್ಣುಗಳು ಹಾಗೂ ದೋಣಿಮನೆಗಳಿಗೆ ಪ್ರಸಿದ್ಧವಾಗಿದ್ದರೂ ಇಲ್ಲಿನ ಪ್ರಮುಖ ಆಕರ್ಷಣೆ ದಾಲ್ ಸರೋವರ. ಶ್ರೀನಗರಕ್ಕೆ ಭೇಟಿ ನೀಡಿದರೆ ದಾಲ್ ಸರೋವರ ನೋಡಲೇಬೇಕು. ಇಲ್ಲಿನ ಸೂರ್ಯಾಸ್ತವಂತೂ ಇನ್ನೂ ಮನಮೋಹಕ.

ಚಿತ್ರಕೃಪೆ: Basharat Alam Shah

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿಯಾದ ಶಿಮ್ಲಾ ಒಂದು ಅದ್ಭುತ ಪ್ರೇಕ್ಷಣೀಯ ಸ್ಥಳವೂ ಹೌದು. ಇಲ್ಲಿ ನೋಡಲು ಸಾಕಷ್ಟು ಅದ್ಭುತ ಸ್ಥಳಗಳಿದ್ದರೂ ದಿ ಮಾಲ್ ಗೆ ಹೋಗಲು ಮರಯಲೇ ಬಾರದು. ಇದೊಂದು ಶಾಪಿಂಗ್ ಸ್ಥಳವಾಗಿದ್ದು ಶಿಮ್ಲಾದ ಪ್ರಮುಖ ಚಟುವಟಿಕೆಯುಕ್ತ ಸ್ಥಳವಾಗಿದೆ.

ಚಿತ್ರಕೃಪೆ: sushmab

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಲೇಹ್: ಜಮ್ಮು-ಕಾಶ್ಮೀರ ರಾಜ್ಯದಲ್ಲಿರುವ ಲೇಹ್ ಪಟ್ಟಣವು ಭಾರತದ ಎರಡನೆಯ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಲೇಹ್ ಜಿಲ್ಲೆಯ ಆಡಳಿತ ಕೇಂದ್ರ ಪಟ್ಟಣವಾಗಿದೆ. ಸಮುದ್ರ ಮಟ್ಟದಿಂದ ಸಾವಿರಗಟ್ಟಲೆ ಮೀ. ಗಳಷ್ಟು ಎತ್ತರದಲ್ಲಿರುವ ಲೇಹ್ ನ ಸೂರ್ಯಾಸ್ತ ಹಾಗೂ ಚಂದ್ರೋದಯದ ನೋಟ ಅದ್ಭುತವಾಗಿ ಸವಿಯಬಹುದು.

ಚಿತ್ರಕೃಪೆ: 100rabpec

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಅಮರನಾಥ: ಜಮ್ಮು-ಕಾಶ್ಮೀರ ರಾಜ್ಯದಲ್ಲಿರುವ ಅಮರನಾಥವು ಪ್ರಖ್ಯಾತ ತೀರ್ಥ ಯಾತ್ರಾ ಕ್ಷೇತ್ರವಾಗಿದೆ. ಪಹಲ್ಗಾಮ್ ಬಳಿಯಿರುವ ಈ ಕ್ಷೇತ್ರವು ಶಿವನ ಗುಹಾ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಪ್ರತಿ ವರ್ಷವೂ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Gktambe

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಡಾಲ್ ಹೌಸಿ: ಹಿಮಾಚಲ ಪ್ರದೇಶ ರಾಜ್ಯ ಪ್ರವಾಸೋದ್ಯಮಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಡಾಲ್ ಹೌಸಿಯು ಐದು ಬೆಟ್ಟಗಳ ಮೇಲೆ ನೆಲೆಸಿರುವ ಅತಿ ಸುಂದರ ಗಿರಿಧಾಮ ಪ್ರದೇಶವಾಗಿದೆ. ಡಾಲ್ ಹೌಸಿಯು ಮುಖ್ಯವಾಗಿ ತನ್ನ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ತಂಗಲು 600 ಕ್ಕೂ ಅಧಿಕ ಹೋಟೆಲುಗಳು ಲಭ್ಯವಿದೆ. ಸುಂದರ ಭೂದೃಶ್ಯಾವಳಿಗಳು ಡಾಲ್ ಹೌಸಿಯ ವಿಶೇಷತೆ.

ಚಿತ್ರಕೃಪೆ: prakhar

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಮನಾಲಿ: ಹಿಮದಲ್ಲಿ ಸ್ಕೇಟ್ (ವಿಶೇಷ ಉಪಕರಣದಿಂದ ಜಾರುತ್ತ ಸಾಗುವುದು) ಮಾಡುವ ಆಸೆ ನಿಮಗಿದೆಯೆ? ಹಾಗಾದರೆ ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿರುವ ಮನಾಲಿಗೊಮ್ಮೆ ಭೇಟಿ ನೀಡಿ. ಮನಾಲಿಯು ಸರ್ವ ಋತುವಿನಲ್ಲು ಹಿತಕರವಾದ ಹಾಗೂ ತಂಪಾದ ವಾತಾವರಣ ಹೊಂದಿರುವ ಸುಂದರ ಗಿರಿಧಾಮವಾಗಿದೆ.

ಚಿತ್ರಕೃಪೆ: Woodthought

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಧರ್ಮಶಾಲಾ: ಹಿಮಾಚಲ ಪ್ರದೇಶ ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿರುವ ಧರ್ಮಶಾಲಾ ಒಂದು ಪಟ್ಟಣ ಪ್ರದೇಶವಾಗಿದೆ. ಟಿಬೆಟ್ ಆಡಳಿತ ಕೇಂದ್ರ ಹಾಗೂ ದಲೈ ಲಾಮಾರ ಮನೆಯಿರುವ ಮ್ಯಾಕ್ ಲಿಯೋಡ್ ಗಂಜ್ ಧರ್ಮಶಾಲಾದಲ್ಲಿ ನೋಡಲೇಬೇಕಾದ ಪ್ರಮುಖ ಆಕರ್ಷಣೆ.

ಚಿತ್ರಕೃಪೆ: rajkumar1220

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಅಮೃತಸರ್: ಪಂಜಾಬ್ ರಾಜ್ಯದ ಪ್ರಮುಖ ಹಾಗೂ ಜನಪ್ರೀಯ ನಗರವಾಗಿರುವ ಅಮೃತಸರವು ಪ್ರಮುಖವಾಗಿ ಎರಡು ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಒಂದು ಸ್ವರ್ಣ ಮಂದಿರ ಗುರುದ್ವಾರವಾದರೆ ಇನ್ನೊಂದು ಭಾರತ-ಪಾಕಿಸ್ತಾನವನ್ನು ಪ್ರತ್ಯೇಕಿಸುವ ವಾಘಾ ಗಡಿ. ಚಿತ್ರದಲ್ಲಿರುವುದು ವಾಘಾ ಗಡಿ. ಇನ್ನುಳಿದಂತೆ ಜಲಿಯನ್ ವಾಲಾ ಬಾಗ್ ಕೂಡ ಪ್ರೇಕ್ಷಣೀಯ ಸ್ಥಳವಾಗಿದೆ.

ಚಿತ್ರಕೃಪೆ: Ben Tubby

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಗುರ್ಗಾಂವ್: ಹರ್ಯಾಣ ರಾಜ್ಯದಲ್ಲಿರುವ ಗುರ್ಗಾಂವ್ ನವ ದೆಹಲಿಯಿಂದ ಕೇವಲ 32 ಕಿ.ಮೀ ಗಳಷ್ಟು ದೂರದಲ್ಲಿದೆ. ಗುರು ಗ್ರಾಮ ಎಂದು ಕರೆಯಲ್ಪಡುತ್ತಿದ್ದ ಗುರ್ಗಾಂವ್ ಇಂದು ಆಧುನಿಕ ಜೀವನಶೈಲಿಯ ಜೀವನಕ್ಕೆ ಹೆಸರುವಾಸಿಯಾಗಿದೆ. ಇದರ ವಿಶೇಷತೆ ಎಂದರೆ ಫಾರ್ಚೂನ್ 500 ನ 250 ಕ್ಕೂ ಅಧಿಕ ಕಂಪನಿಗಳ ಶಾಖೆಗಳು ಈ ನಗರದಲ್ಲಿವೆ.

ಚಿತ್ರಕೃಪೆ: Ronit Bhattacharjee

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಚಂಡೀಗಡ್: ಇದರ ವಿಶೇಷತೆ ಅಪಾರ. ಇದು ಭಾರತದ ಮೊದಲ ಯೋಜಿತ ನಗರ, ಹರ್ಯಾಣ ಹಾಗೂ ಪಂಜಾಬ್ ರಾಜ್ಯಗಳ ರಾಜಧಾನಿ ಹಾಗೂ ಕೇಂದ್ರಾಡಳಿತವಿರುವ ಪ್ರದೇಶ. ಇಲ್ಲಿಗೆ ಭೇಟಿ ನೀಡಿದರೆ ಕಲ್ಲಿನ ವಿಶಿಷ್ಟ ಶಿಲ್ಪಗಳ ಉದ್ಯಾನಗ ಹಾಗೂ ಪ್ರಸಿದ್ಧ ಸುಖನಾ ಕೆರೆಗೆ ಭೇಟಿ ನೀಡಲು ಮರೆಯದಿರಿ.

ಚಿತ್ರಕೃಪೆ: Vijendra Trighatia

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ದೆಹಲಿ: ಭಾರತದ "ದಿಲ್" ಆಗಿರುವ ದಿಲ್ಲಿ ಅರ್ಥಾತ್ ದೆಹಲಿಯು ಅದ್ಭುತ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಮಹಾನಗರವಾಗಿದೆ. ಇಲ್ಲಿ ಪುರಾತನದಿಂದ ಹಿಡಿದು ಇತ್ತೀಚಿಗಷ್ಟೆ ನಿರ್ಮಿಸಲಾಗಿರುವ ಹಲವು ಆಕರ್ಷಣೆಗಳಿದ್ದರೂ ಸಹ "ಇಂಡಿಯಾ ಗೇಟ್" ದೆಹಲಿಯ ಗುರುತರವಾದ ಸ್ಥಳವಾಗಿದೆ.

ಚಿತ್ರಕೃಪೆ: Budhesh

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ರುದ್ರಪ್ರಯಾಗ್: ಉತ್ತರಾಖಂಡದ ಒಂದು ಸಣ್ಣ ಪಟ್ಟಣವಾಗಿರುವ ರುದ್ರಪ್ರಯಾಗ ಶಿವನ ನೆಲೆವೀಡು ಎಂದೇ ಪ್ರಸಿದ್ಧವಾಗಿದೆ. ಮಂದಾಕಿನಿ ಹಾಗೂ ಅಲಕನಂದಾ ನದಿಗಳು ಸಮಾಗಮಗೊಳ್ಳುವುದು ಇದೆ ಸ್ಥಳದಲ್ಲಿ. ಹೀಗಾಗಿ ಇದೊಂದು ಸಂಗಮ ಸ್ಥಳವಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Fowler&fowler

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಮಸ್ಸೂರಿ: ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿಯು ಒಂದು ಅದ್ಭುತವಾದ ಗಿರಿಧಾಮ ಪ್ರದೇಶವಾಗಿದೆ. ಪರ್ವತಗಳ ರಾಣಿ ಎಂದು ಕರೆಯಲ್ಪಡುವ ಮಸ್ಸೂರಿಯು ಮೋಹಕ ಮೋಡಗಳ ಮಾದಕ ನೃತ್ಯಗಳಿಗೆ ವಿಶೇಷವಾಗಿದೆ.

ಚಿತ್ರಕೃಪೆ: RajatVash

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ನೈನಿತಾಲ್: ಉತ್ತರಾಖಂಡ ರಾಜ್ಯದಲ್ಲಿರುವ ನೈನಿತಾಲ್ ಸಹ ಒಂದು ಸುಂದರ ಹಾಗೂ ಜನಪ್ರೀಯ ಗಿರಿಧಾಮವಾಗಿದೆ. ನೈನಿತಾಲ್ ಗೆ ಭೇಟಿ ನೀಡಿದರೆ ಇಲ್ಲಿನ ನೈನಿತಾಲ್ ಕೆರೆಯನ್ನು ನೋಡಲು ಮರಯಲೇ ಬಾರದು. ಈ ಕೆರೆಯೆ ಇದರ ವಿಶೇಷ. ನೈನಾ ದೇವಿಯ ದೇಗುಲದ ಪಕ್ಕದಲ್ಲಿರುವ ನೈನಿ ಕೆರೆಯಿಂದಾಗಿಯೆ ಈ ಪ್ರದೇಶಕ್ಕೆ ನೈನಿತಾಲ್ ಎಂಬ ಹೆಸರು ಬಂದಿತು.

ಚಿತ್ರಕೃಪೆ: Aman Arora

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಗಂಗೋತ್ರಿ: ಗಂಗೋತ್ರಿಯು ಪವಿತ್ರ ಗಂಗಾ ನದಿಯ ಉಗಮ ಸ್ಥಳವಾದ ಗೋಮುಖ ಅಥವಾ ಗೌಮುಖಕ್ಕೆ ಹೆಸರುವಾಸಿಯಾಗಿದೆ. ಗಂಗಾದೇವಿಗೆ ಮುಡಿಪಾದ ದೇವಸ್ಥಾನವನ್ನು ಗಂಗೋತ್ರಿಯಲ್ಲಿ ಕಾಣಬಹುದಾಗಿದ್ದು ಗೋಮುಖಕ್ಕೆ ಚಾರಣದ ಮೂಲಕ ಮಾತ್ರವೆ ತಲುಪಬಹುದಾಗಿದೆ. ಗಂಗೋತ್ರಿ ಕುರಿತು ಓದಿ. ಗಂಗಾದೇವಿಯ ದೇವಾಲಯ.

ಚಿತ್ರಕೃಪೆ: Atarax42

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಹರಿದ್ವಾರ: ಉತ್ತರಾಖಂಡ ರಾಜ್ಯದಲ್ಲಿರುವ ಭಾರತದ ಅತಿ ಪುಣ್ಯ ಕ್ಷೇತ್ರಗಳ ಪೈಕಿ ಒಂದಾದ ಹರಿದ್ವಾರವು ದೆಹಲಿಯಿಂದ 212 ಕಿ.ಮೀ ಗಳಷ್ಟು ದೂರವಿದ್ದು ದೆಹಲಿಯಿಂದ ಶತಾಬ್ದಿ ರೈಲಿನ ಸೇವೆ ಹರಿದ್ವಾರಕ್ಕೆ ತೆರಳಲು ಲಭ್ಯವಿದೆ. ದಂತ ಕಥೆಯಾನುಸಾರ ಅಮೃತ ಬಿದ್ದ ನಾಲ್ಕು ಸ್ಥಳಗಳ ಪೈಕಿ ಹರಿದ್ವಾರವೂ ಸಹ ಒಂದು. ಅದು ಬಿದ್ದ ಸ್ಥಳವನ್ನು ಇಂದು ಹರ್ ಕಿ ಪೌರಿ ಎಂದು ಕರೆಯಲಾಗುತ್ತದೆ. ಹೀಗಾಗಿ ಹರಿದ್ವಾರದ ವಿಶೇಷತೆ ಹರ್ ಕಿ ಪೌರಿಯ ಭೇಟಿ.

ಚಿತ್ರಕೃಪೆ: Livefree2013

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ರಿಷಿಕೇಶ್: ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ರಿಷಿಕೇಶವು ಪ್ರಕೃತಿಯ ಸಂಪದ್ಭರಿತ ಮಡಿಲಿನಲ್ಲಿ ನೆಲೆಸಿದ್ದು ಧ್ಯಾನ ಹಾಗೂ ಯೋಗ ಕೇಂದ್ರಗಳಿಗೆ ಜಗತ್ತಿನಲ್ಲಿಯೆ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾದ್ ಲಕ್ಷ್ಮಣ ಝೂಲಾ (ಸೇತುವೆಯು) ಇದರ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Tylersundance

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಆಗ್ರಾ: ಉತ್ತರ ಪ್ರದೇಶ ರಾಜ್ಯದಲ್ಲಿರುವ ಪ್ರಸಿದ್ಧ ಪ್ರವಾಸಿ ಪಟ್ಟಣ ಆಗ್ರಾ. ಆಗ್ರಾದ ಕುರಿತು ವಿಶೇಷತೆಯನ್ನು ಹೇಳಲೇಬೇಕಾಗಿಲ್ಲ. ಹೌದು ಸುಪ್ರಸಿದ್ಧ ತಾಜ್ ಮಹಲ್ ಇದರ ವಿಶೇಷತೆ. ಅಲ್ಲದೆ ಇತರೆ ಐತಿಹಾಸಿಕ ಆಕರ್ಷಣೆಗಳನ್ನೂ ಸಹ ಇಲ್ಲಿ ಕಾಣಬಹುದು. ಮತ್ತೊಂದು ವಿಶೇಷತೆ ಎಂದರೆ ಕುಂಬಳಕಾಯಿಯಿಂದ ತಯಾರಿಸಲಾಗುವ ಒಂದು ವಿಶಿಷ್ಟ ಸಿಹಿ ಖಾದ್ಯವದ ಪೇಟಾ ಆಗ್ರಾದ ಮತ್ತೊಂದು ವಿಶೇಷತೆ. ಆಗ್ರಾಗೆ ಭೇಟಿ ನೀಡಿದರೆ ರುಚಿ ರುಚಿಯಾದ ಬಾಯಲ್ಲಿ ನೀರೂರಿಸುವಂತಹ ಆಗ್ರಾ ಪೇಟಾ ತಿನ್ನಲು ಮರೆಯದಿರಿ.

ಚಿತ್ರಕೃಪೆ: Yann

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ವಾರಣಾಸಿ: ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿದೆ ಈ ಸ್ಥಳ. ಹಿಂದೂ ಸಂಪ್ರದಾಯ ಹಾಗೂ ಇತರೆ ಆಚರಣೆಗಳನ್ನು ಅತಿ ಹತ್ತಿರದಿಂದ ನೋಡಬಯಸುವ ಪ್ರತಿಯೊಬ್ಬನೂ ವಾರಣಾಸಿ ನಗರಕ್ಕೊಮ್ಮೆ ಭೇಟಿ ನೀಡುವುದು ಉಚಿತ. ಏಕೆಂದರೆ ಇದರ ವಿಶೇಷತೆಯೆ ಇಲ್ಲಿ ವಿದ್ಯುಕ್ತವಾಗಿ ಜರುಗುವ ಹಲವಾರು ವಿಶೇಷಗಳು ಹಾಗೂ ಆಚರಣೆಗಳು. ಇಲ್ಲಿರುವ ಘಾಟ್ (ದಂಡೆಗಳು) ಗಳು ಭೇಟಿ ನೀಡ ಬೇಕಾದ ಪ್ರಮುಖ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: Ken Wieland

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಮಥುರಾ: ಧಾರ್ಮಿಕ ಮಹತ್ವವುಳ್ಳ ಮಥುರಾ ಪಟ್ಟಣವು ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಉತ್ತರ ಪ್ರದೇಶ ರಾಜ್ಯದಲ್ಲಿರುವ ಈ ಸ್ಥಳವು ಪ್ರಮುಖವಾಗಿ ಶ್ರೀಕೃಷ್ಣ ಭಗವಂತನ ಜನ್ಮ ಭೂಮಿಯಾಗಿರುವುದರಿಂದ ಪ್ರಖ್ಯಾತಿಗಳಿಸಿದೆ. ಇಲ್ಲಿ ಇತರೆ ಹಲವು ದೇವಸ್ಥಾನಗಳಿದ್ದರೂ ಸಹ ಕೃಷ್ಣನ ದೇವಸ್ಥಾನವು ಇದರ ಪ್ರಮುಖ ಆಕರ್ಷಣೆ ಹಾಗೂ ವಿಶೇಷತೆಯಾಗಿದೆ. ಮತ್ತೊಂದು ವಿಶೇಷವೆಂದರೆ ಮಥುರಾಗೆ ಭೇಟಿ ನೀಡಿದಾಗ ವೃಂದಾವನ ಹಾಗೂ ಗೋವರ್ಧನಗಳಿಗೆ ಭೇಟಿ ನೀಡಲು ಮರೆಯದಿರಿ. ಅಷ್ಟೆ ಅಲ್ಲ...ಮಥುರಾ ಬಾಯಲ್ಲಿ ನೀರೂರಿಸುವ ಮಥುರಾ ಪೇಡಾಗಳಿಗೂ ಹೆಸರುವಾಸಿ. ಕೃಷ್ಣನ ದೇವಸ್ಥಾನ.

ಚಿತ್ರಕೃಪೆ: Poco a poco

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಲಖನೌ: ಶ್ರೀಮಂತ ನವಾಬ ಸಂಸ್ಕೃತಿ, ಐತಿಹಾಸಿಕ ರಚನೆಗಳು, ವೈವಿಧ್ಯಮಯ ಸಂಸ್ಕೃತಿ, ಉತ್ತಮ ಆದರಾತಿಥ್ಯ ಹಾಗೂ ಬಾಯಲ್ಲಿ ನೀರೂರಿಸುವಂತಹ ಗಲೋಟಿ ಕಬಾಬ್ ಹಾಗೂ ಬಿರಿಯಾನಿ, ದಶೇರಿ ಮಾವಿನ ಹಣ್ಣು ಇವು ಉತ್ತರ ಪ್ರದೇಶ ರಾಜ್ಯದ ರಾಜಧಾನಿ ನಗರವಾದ ಲಖನೌನ ವಿಶೇಷತೆಗಳು. ಸುಂದರವಾದ ಲಖನೌ ಪಟ್ಟಣಕ್ಕೆ ಭೇಟಿ ನೀಡಿದರೆ ಅಲ್ಲಿನ ಕಬಾಬ್ ಅನ್ನು ತಿನ್ನಲು ಮರೆಯಬಾರದು. ಕಬಾಬ್ ಗಾಗಿಯೆ ಲಖನೌ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಮತ್ತೊಂದು ವಿಶೇಷವೆಂದರೆ ನಗರದಲ್ಲಿದ್ದಾಗ ಅಮೀನಾಬಾದ್ ಮಾರುಕಟ್ಟೆಯಲ್ಲಿ ದೊರೆಯುವ ಕುಲ್ಫಿ ತಿನ್ನಲು ಮರೆಯದಿರಿ. ಚಿತ್ರದಲ್ಲಿರುವುದು ರುಮಾಲಿ ರೋಟಿಯೊಂದಿಗೆ ಗಲೋಟಿ ಕಬಾಬ್.

ಚಿತ್ರಕೃಪೆ: Mcbridejc

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಅಲಹಾಬಾದ್: ಒಮ್ಮೊಮ್ಮೆ ಪ್ರಯಾಗ ಅಥವಾ ಇಲಹಾಬಾದ್ ಎಂತಲೂ ಕರೆಯಲ್ಪಡುವ ಅಲಹಾಬಾದ್ ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಪ್ರವಾಸಿ ಆಕರ್ಷಣೆಯ ಸ್ಥಳ. ಅಲ್ಲದೆ ಮಹಾ ಕುಂಭ ಮೇಳ ಜರುಗುವ ಬಹು ಉನ್ನತ ಸ್ಥಾನವಾಗಿಯೂ ಅಲಹಾಬಾದ್ ಹೆಸರುವಾಸಿಯಾಗಿದೆ. ಅಲಹಾಬಾದ್ ವಿಶೇಷತೆ ಎಂದರೆ ಇಲ್ಲಿರುವ ತ್ರಿವೇಣಿ ಸಂಗಮ. ಮೂರು ಮಹತ್ವದ ಪವಿತ್ರ ನದಿಗಳಾದ ಗಂಗಾ, ಯಮುನಾ ಹಾಗೂ ಸರಸ್ವತಿಗಳು ಸಂಗಮ ಹೊಂದುವ ಸ್ಥಳವೆ ಅಲಹಾಬಾದ್ ನಲ್ಲಿರುವ ತ್ರಿವೇಣಿ ಸಂಗಮ.

ಚಿತ್ರಕೃಪೆ: Partha Sarathi Sahana

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಮೌಂಟ್ ಅಬು: ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಮೌಂಟ್ ಅಬು ರಾಜ್ಯದ ಏಕೈಕ ಗಿರಿಧಾಮ ಪ್ರದೇಶವಾಗಿದೆ. ಸುಡು ಬಿಸಿಲಿನ ಮರಭೂಮಿಗಳ ರಾಜ್ಯದಲ್ಲಿ ತಂಪಾದ ಹಿತಕರವಾದ ವಾತಾವರಣ ಹೊಂದಿರುವುದೆ ಮೌಂಟ್ ಅಬುವಿನ ವಿಶೇಷತೆ. ಇದರ ಹೊರತಾಗಿಯೂ ಈ ಗಿರಿಧಾಮವು ತನ್ನಲ್ಲಿರುವ ನಕ್ಕಿ ಕೆರೆ ಹಾಗೂ ಕಪ್ಪೆಯಾಕಾರದ ದೊಡ್ಡ ಬಂಡೆಗೆ ಬಲು ಹೆಸರುವಾಸಿ.

ಚಿತ್ರಕೃಪೆ: CorrectKnowledge

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಜೈಪುರ: ರಾಜಸ್ಥಾನದ ರಾಜಧಾನಿ ನಗರವಾದ ಜೈಪುರವು ರಾಜ್ಯದ ಅತಿ ದೊಡ್ಡ ನಗರವೂ ಹೌದು. ಭಾರತ ಪ್ರವಾಸೋದ್ಯಮದ ಪ್ರಮುಖ ನಗರವಾಗಿರುವ ಜೈಪುರವು ವಿಶಿಷ್ಟ ಹಾಗೂ ಅನನ್ಯ ಸಂಸ್ಕೃತಿಯಿಂದ ಕೂಡಿರುವ ನಗರವಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜೈಪುರದ ವಿಶೇಷತೆಗಳು ಅಪಾರ. ರಾಜವೈಭವದ ಹೋಟೆಲ್, ಅಂಬರ್ ಕೋಟೆ, ಹವಾ ಮಹಲ್, ಜಲ್ ಮಹಲ್ ಹೀಗೆ ಈ ಗುಲಾಬಿ ನಗರದ (ಪಿಂಕ್ ಸಿಟಿ) ಆಕರ್ಷಣೆಗಳ ಪಟ್ಟಿ ಸಾಗುತ್ತಾ ಹೋಗುತ್ತದೆ. ಆದರೂ ಇದರ ವಿಶೇಷತೆ ಎಂದರೆ ಇಲ್ಲಿನ ಶಾಪಿಂಗ್. ತಮ್ಮದೆ ಆದ ಅನನ್ಯ ಕಲೆಯಿಂದ ಕೂಡಿರುವ ಸ್ಥಳೀಯ ವೈವಿಧ್ಯಮಯ ಕೈಮಗ್ಗದ ವಸ್ತುಗಳು ವಿಶೇಷವಾಗಿ ಜೈಪುರದ ಬೊಂಬೆಗಳು ಈ ಪಟ್ಟಣದ ವಿಶೇಷತೆ. ಕೆತ್ತನೆಗಳು, ಬಾಂಧನಿ, ಜರಿ ಕೆಲಸ, ಎಂಬ್ರಾಯಡರಿ ಕೆಲಸದ ಉಡುಪುಗಳು ಹಾಗೂ ವಸ್ತುಗಳನ್ನು ಇಲ್ಲಿ ಖರೀದಿಸಬಹುದು.

ಚಿತ್ರಕೃಪೆ: Ray Tsang

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಜೈಸಲ್ಮೇರ್: "ಸುವರ್ಣ ನಗರ" ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಜೈಸಲ್ಮೇರ್ ಪಟ್ಟಣವು ರಾಜಸ್ಥಾನ ರಾಜ್ಯದಲ್ಲಿರುವ ವಿಶ್ವ ಪಾರಂಪರಿಕ ತಾಣವಾಗಿದೆ. ಜೈಸಲ್ಮೇರ್ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ ಹಾಗೂ ವಿಶೇಷತೆ. ಬಂಗಾರದಂತೆ ಜಗಮಗಿಸುವುದರಿಂದಲೆ ಈ ನಗರಕ್ಕೆ ಸುವರ್ಣ ನಗರ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Adrian Sulc

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಉದಯಪುರ: ರಾಜಸ್ಥಾನದಲ್ಲಿರುವ ಮತ್ತೊಂದು ಸುಂದರ ನಗರ ಉದಯಪುರ. ಉದಯಪುರವನ್ನು ಕೆರೆಗಳ ನಗರ ಎಂದೂ ಕರೆಯಲಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಮ್‌ಗಳು ಮತ್ತು ವನ್ಯಧಾಮಗಳನ್ನು ಹೊಂದಿದೆ. ಇಷ್ಟಾಗ್ಯೂ ಇದರ ವಿಶೇಷತೆ ಎಂದರೆ ಲೇಕ್ ಪ್ಯಾಲೇಸ್.

ಚಿತ್ರಕೃಪೆ: ArishG

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ರಣಥಂಬೋರ್: ರಣಥಂಬೋರ್ ರಾಜಸ್ಥಾನದ ಒಂದು ನಯನ ಮನೋಹರವಾದ ಪ್ರವಾಸಿ ತಾಣವಾಗಿದ್ದು, ಇದು ಸವಾಯಿ ಮಾಧೋಪುರದಿಂದ 12 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಈ ಸ್ಥಳದ ಹೆಸರು ಇಲ್ಲಿರುವ "ರಣ್" ಮತ್ತು " ಥಾಂಬೋರ್" ಎಂಬ ಎರಡು ಬೆಟ್ಟಗಳ ಹೆಸರಿನಿಂದ ಬಂದುದಾಗಿದೆ. ಇದರ ವಿಶೇಷತೆ ಎಂದರೆ ಇದು ವಿಶ್ವ ವಿಖ್ಯಾತ ಹುಲಿ ಸಂರಕ್ಷಣಾ ಕೇಂದ್ರವಾಗಿದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವು ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.

ಚಿತ್ರಕೃಪೆ: Dibyendu Ash

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಪುಷ್ಕರ್: ಹಿಂದೂ ಧರ್ಮದವರು ನಡೆದುಕೊಳ್ಳುವ ಐದು ಪವಿತ್ರ ನಗರಗಳ ಪೈಕಿ ಒಂದಾಗಿರುವ ಪುಷ್ಕರ್, ರಾಜಸ್ಥಾನ ರಾಜ್ಯದ ಅಜ್ಮೇರ್ ಜಿಲ್ಲೆಯಲ್ಲಿದೆ. ದಂತಕಥೆಯ ಪ್ರಕಾರ, ಸ್ವತಃ ಬ್ರಹ್ಮ ದೇವರಿಂದಲೆ ಈ ಪಟ್ಟಣ ನಿರ್ಮಾಣವಾದುದು ಎನ್ನಲಾಗಿದೆ. ಪುಷ್ಕರ್ ಪಟ್ಟಣವು ಪುಷ್ಕರ್ ಕೆರೆಯ ತಟದಲ್ಲಿ ನೆಲೆಸಿದ್ದು ಈ ಕೆರೆಯ ನೀರು ಮಾನಸ ಸರೋವರದ ನೀರಿನಷ್ಟೆ ಪವಿತ್ರವಾದುದು ಎಂದು ನಂಬಲಾಗಿದೆ. ಆದ್ದರಿಂದಲೆ ಎಷ್ಟೊ ಜನ ಈ ಕ್ಷೇತ್ರವನ್ನು ತೀರ್ಥ ರಾಜ ಅಂದರೆ ತೀರ್ಥ ಕ್ಷೇತ್ರಗಳ ರಾಜನೆಂದೂ ಸಹ ಸಂಭೋದಿಸುತ್ತಾರೆ. ಪ್ರತಿ ವರ್ಷವು ಇಲ್ಲಿನ ಪುಷ್ಕರ್ ಕೆರೆಯ ಪ್ರದೇಶದಲ್ಲಿ ಆಯೋಜನೆಗೊಳ್ಳುವ ಪುಷ್ಕರ್ ಮೇಳವು ಪ್ರವಾಸಿ ವಿಶೇಷವಾಗಿದೆ.

ಚಿತ್ರಕೃಪೆ: Manuel Menal

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಪಾಟ್ನಾ: ಬಿಹಾರ್ ರಾಜ್ಯದ ರಾಜಧಾನಿಯಾಗಿರುವ ಪಾಟ್ನಾ ಸಾಕಷ್ಟು ಐತಿಹಾಸಿಕ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಆದರೂ ವಿಶೇಷವಾಗಿ ಭೇಟಿ ನೀಡಬೇಕಾದ ಆಕರ್ಷಣೆಯೆಂದರೆ ಇಲ್ಲಿನ ಗಾಂಧಿ ಮೈದಾನದಲ್ಲಿರುವ ಗೋಲ್ ಘರ್ (ದುಂಡಾದ ಮನೆ). ಹಿಂದೆ 1770 ರ ಸಮಯದಲ್ಲಿ ಬಂಗಾಳ ಹಾಗೂ ಬಿಹಾರ ಪ್ರದೇಶಗಳಲ್ಲಿ ಬರಗಾಲ ಅಪ್ಪಳಿಸಿದಾಗ ಲಕ್ಷಾಂತರ ಜನರು ಅನ್ನ ನೀರುಗಳಿಲ್ಲದೆ ಪ್ರಾಣ ತೆತ್ತಿದ್ದರು. ಈ ಸಮಯದಲ್ಲಿ ಬ್ರಿಟೀಷ್ ಅಧಿಕಾರಿಗಳು ತಮ್ಮ ಸೈನಿಕರಿಗೋಸ್ಕರ ಎಂದು ಈ ಧಾನ್ಯ ಸಂಗ್ರಹಿಸಿಡಲಾಗುವ ರಚನೆಯನ್ನು ಮಾಡಿದ್ದರು. ಇಂದು ಧಾನ್ಯ ಶೇಖರಿಸುತ್ತಿಲ್ಲವಾದರೂ ಜನರು ಇದರ ಮೇಲೆ ತೆರಳಿ ಪಾಟ್ನಾ ಹಾಗೂ ಗಂಗಾ ನದಿಯ ವಿಹಂಗಮ ನೋಟವನ್ನು ಸವಿಯಬಯಸುತ್ತಾರೆ.

ಚಿತ್ರಕೃಪೆ: Manoj nav

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಬೋಧಗಯಾ: ಬಿಹಾರ್ ರಾಜ್ಯದ ಗಯಾ ಜಿಲ್ಲೆಯಲ್ಲಿರುವ ಬೋಧಗಯಾ ಅಥವಾ ಮಹಾಬೋಧಿ ದೇವಾಲಯ ಸಂಕೀರ್ಣವು ಬೌದ್ಧರ ಪವಿತ್ರ ಹಾಗೂ ಮಹತ್ವದ ತೀರ್ಥ ಯಾತ್ರಾ ಕೇಂದ್ರವಾಗಿದೆ. ಗೌತಮ ಬುದ್ಧನು ವೃಕ್ಷವೊಂದರ ಕೆಳಗೆ ಕುಳಿತಾಗ ಜ್ಞಾನೋದಯವಾಯಿತೆನ್ನಲಾದ ಬೋಧಿ ವೃಕ್ಷ ಹಾಗೂ ಮಹಾಬೋಧಿ ದೇವಾಲಯ ಇದರ ವಿಶೇಷತೆ. ಈ ದೇವಾಲಯ ಸಂಕೀರ್ಣದಲ್ಲಿ ಥಾಯ್ ವಾಸ್ತುಶಿಲ್ಪದ ಬುದ್ಧನ ದೇವಾಲಯ ಹಾಗೂ ವಿಯಟ್ನಾಮೀಸ್ ವಾಸ್ತುಶೈಲಿಯ ಬೌದ್ಧ ದೇವಾಲಯಗಳನ್ನೂ ಸಹ ಕಾಣಬಹುದು. ಸಾಕಷ್ಟು ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Ken Wieland

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಕೊಲ್ಕತ್ತಾ: ಮೂಲೆ ಮೂಲೆಗಳಲ್ಲು ದೊರೆಯುವ ವೈವಿಧ್ಯಮಯ ಸಿಹಿ ಸಿಹಿ ಖಾದ್ಯಗಳು, ಜೀವಕಳೆ ತುಂಬಿರುವ ಜನಜೀವನ, ಅಪಾರ ಜನದಟ್ಟನೆ, ಹೌರಾ ಸೇತುವೆ, ವಿಕ್ಟೋರಿಯಾ ಸ್ಮಾರಕ ಭವನ ಮುಂತಾದವುಗಳು ಕೊಲ್ಕತ್ತಾ ನಗರವನ್ನು ವ್ಯಾಖ್ಯಾನಿಸುತ್ತವೆ. ಇಲ್ಲಿ ನೋಡಲು ಅಪಾರವಾದ ಪ್ರವಾಸಿ ಆಕರ್ಷಣೆಗಳಿವೆ. ಆದರೂ ನೀವು ಮೀನುಪ್ರಿಯರಾಗಿದ್ದರೆ ಇಲ್ಲಿಗೆ ಭೇಟಿ ನೀಡಿದಾಗ ಹಿಲ್ಸಾ ಮೀನಿನ ಖಾದ್ಯವನ್ನು ತಿನ್ನಲು ಮಾತ್ರ ಮರೆಯಬೇಡಿ. ಇದು ಕೊಲ್ಕತ್ತಾದ ಅತ್ಯಂತ ರುಚಿಕರವಾದ ಮೀನಾಗಿದೆ. ಹಿಲ್ಸಾ ಮೀನಿನಿಂದ ತಯಾರಿಸಲಾದ ಖಾದ್ಯ.

ಚಿತ್ರಕೃಪೆ: Titodutta

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ದಾರ್ಜೀಲಿಂಗ್: ಪಶ್ಚಿಮ ಬಂಗಾಳದ ಏಕೈಕ ಗಿರಿಧಾಮ ಪ್ರದೇಶವಾದ ದಾರ್ಜೀಲಿಂಗ್ ತನ್ನ ಚಹಾ ತೋಟಗಳಿಗೆ ಬಲು ಹೆಸರುವಾಸಿಯಾಗಿದೆ. ಆದರೂ ಈ ಗಿರಿಧಾಮಕ್ಕೆ ಭೇಟಿ ನೀಡಿದಾಗ ಇದರ ವಿಶೇಷತೆ ಎಂದೆ ಹೇಳಬಹುದಾದ ದಾರ್ಜೀಲಿಂಗ್ ಹಿಮಾಲಯ ಎಕ್ಸ್ ಪ್ರೆಸ್ ರೈಲಿನ ಪ್ರಯಾಣ ಮಾಡದೆ ಇರಲು ಸಾಧ್ಯವಿಲ್ಲ. ಇದೊಂದು ಸುಂದರ ಪುಟಾಣಿ ರೈಲು (ಟಾಯ್ ಟ್ರೈನ್) ಆಗಿದ್ದು ನಿವ್ ಜಲ್ಪೈಗುರಿಯಿಂದ ದಾರ್ಜೀಲಿಂಗ್ ವರೆಗೆ 78 ಕಿ.ಮೀ ಗಳಷ್ಟು ದೂರ ಕ್ರಮಿಸುತ್ತದೆ.

ಚಿತ್ರಕೃಪೆ: AHEMSLTD

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಇಟಾನಗರ: ಅರುಣಾಚಲ ಪ್ರದೇಶದ ರಾಜಧಾನಿ ನಗರವಾಗಿರುವ ಇಟಾನಗರವು ಪ್ರಕೃತಿ ಸೌಂದರ್ಯದಿಂದ ತುಂಬಿದ ನಾಡು. ಗೌಹಾಟಿಯಿಂದ ಇಟಾನಗರಕ್ಕೆ ತಲುಪಲು ಬಸ್ಸುಗಳು ದೊರೆಯುತ್ತವೆ. ಗಂಗಾಕೆರೆಯು ಇಟಾನಗರದ ವಿಶೇಷತೆಯಾಗಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಇಂಬು ನೀಡಿದೆ. ದೋಣಿ ವಿಹಾರವೂ ಸಹ ಈ ಕೆಲ್ರೆಯಲ್ಲಿ ಲಭ್ಯ. ಗಂಗಾಕೆರೆಯನ್ನು ಸ್ಥಳೀಯವಾಗಿ ಗ್ಯಾಕರ್ ಸಿನ್ಯಿ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Krish9

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ತವಾಂಗ್: ಅರುಣಾಚಲ ಪ್ರದೇಶದ ವಾಯವ್ಯ ಭಾಗದಲ್ಲಿರುವ 3000 ಮೀ ಗೂ ಅಧಿಕ ಎತ್ತರದಲ್ಲಿ ನೆಲೆಸಿರುವ ತವಾಂಗ್ ಬೌದ್ಧ ಚಟುವಟಿಕೆಯ ಸುಂದರ ಪ್ರದೇಶವಾಗಿದೆ. ಇಲ್ಲಿರುವ ತವಾಂಗ್ ಬೌದ್ಧ ಮಠ ಇದರ ವಿಶೇಷತೆಯಾಗಿದೆ. ಮಠದಲ್ಲಿರುವ ಸಕ್ಯಮುನಿ ಬುದ್ಧನ ಎಂಟು ಮೀ ಎತ್ತರದ ಮೂರ್ತಿ.

ಚಿತ್ರಕೃಪೆ: Doniv79

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಗುವಾಹಟಿ: ಅಸ್ಸಾಂ ರಾಜ್ಯದ ಅತಿ ದೊಡ್ಡ ನಗರವಾದ ಗೌಹಾಟಿಯು ಭಾರತದಲ್ಲಿ ಶೀಘ್ರವಾಗಿ ಬೆಳೆಯುತ್ತಿರುವ ನಗರಗಳ ಪೈಕಿಯೂ ಸಹ ಒಂದಾಗಿದೆ. ಈ ನಗರದಲ್ಲಿ ನೋಡಲು ಪ್ರವಾಸಿ ಆಕರ್ಷಣೆಗಳು ಸಾಕಷ್ಟಿದ್ದು ಇದರ ವಿಶೇಷತೆ ಎಂದರೆ ಸ್ಥಳೀಯವಾಗಿ ದೋಣಿಗಳಲ್ಲಿ ಹಾಯಾಗಿ ಪ್ರಯಾಣಿಸುವುದು. ರಾಜ್ಯಾಡಳಿತದಿಂದ ನಡೆಸಲ್ಪಡುವ ಜಲಮಾರ್ಗ ಸಂಚಾರಗಳು ಪ್ರಯಾಣಿಕ್ರಿಗಾಗಿ ಹಾಗೂ ಪ್ರವಾಸೋದ್ಯಮಕ್ಕಾಗಿ ಉಪಯೋಗಿಸಲ್ಪಡುತ್ತವೆ.

ಚಿತ್ರಕೃಪೆ: Nborkakoty

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಕಾಜೀರಂಗಾ: ಅಸ್ಸಾಂನ ಗೋಲಾಘಾಟ್ ಹಾಗೂ ನಗಾಂವ್ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಕಾಜೀರಂಗಾ ರಾಷ್ಟ್ರೀಯ ಉದ್ಯಾನವು ಒಂದು ವಿಶೇಷವಾದ ಪ್ರವಾಸಿ ಆಕರ್ಷಣೆಯಾಗಿದೆ. ಏಕೆಂದರೆ ಇದು ಭಾರತೀಯ ಘೇಂಡಾಮೃಗಗಳ ಅತಿ ಮಹತ್ವದ ಆಶ್ರಯ ತಾಣವಾಗಿದೆ.

ಚಿತ್ರಕೃಪೆ: Diganta Talukdar

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಇಂಫಾಲ್: ಈಶಾನ್ಯ ಭಾರತದ ರಾಜ್ಯವಾದ ಮಣಿಪುರದ ರಾಜಧಾನಿ ಪಟ್ಟಣವೆ ಇಂಫಾಲ್. ಇಂಫಾಲ್ ತನ್ನಲ್ಲಿರುವ ಕಂಗ್ಲಾ ಕೋಟೆಗೆ ಬಲು ಪ್ರಖ್ಯಾತವಾಗಿದೆ. ಈ ಕೋಟೆಯಲ್ಲಿ ಹಲವಾರು ದೇವಾಲಯಗಳು, ಉದ್ಯಾನಗಳು ಹಾಗೂ ಇತರೆ ರಚನೆಗಳಿವೆ. ಧಾರ್ಮಿಕವಾಗಿಯೂ ಮಹತ್ವ ಪಡೆದಿರುವ ಈ ಕೋಟೆಯ ಮೂರು ಭಾಗಗಳಲ್ಲಿ ಕೆರೆಯಿಂದ ಆವೃತವಾಗಿದೆ.

ಚಿತ್ರಕೃಪೆ: PP Yoonus

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಅಗರ್ತಲಾ: ಈಶಾನ್ಯ ಭಾರತದ ರಾಜ್ಯವಾದ ತ್ರಿಪುರಾದ ರಾಜಧಾನಿ ನಗರವಾಗಿರುವ ಅಗರ್ತಲಾ ಗೌಹಾಟಿಯ ನಂತರ ಈಶಾನ್ಯ ಭಾರತದ ಎರಡನೆಯ ದೊಡ್ಡ ಪಟ್ಟಣವಾಗಿದೆ. ಅಗರ್ತಲಾದಾ ವಿಶೇಷವೆಂದರೆ ಇಲ್ಲಿರುವ ಉಜ್ಜಯಂತಾ ಅರಮನೆ. ಹಿಂದೆ ರಾಜಾರಮನೆಯಾಗಿದ್ದ ಇದು ನಂತರ 2011 ರವರೆಗೆ ರಾಜ್ಯ ವಿಧಾನ ಸಭೆಯಾಗಿ ಕಾರ್ಯ ನಿರ್ವಹಿಸಿತ್ತು. ಪ್ರಸ್ತುತ ಇದೊಂದು ಸಂಗ್ರಹಾಲಯವಾಗಿ ಪ್ರವಾಸಿಗರು ಭೇಟಿ ನೀಡಬಹುದಾದ ನೆಚ್ಚಿನ ಸ್ಥಳವಾಗಿದೆ. ಕೆರೆಯೊಂದರ ತಟದಲ್ಲಿ ನೆಲೆಸಿರುವ ಈ ಭವ್ಯ ಅರಮನೆಯ ಪ್ರಾಂಗಣದಲ್ಲಿ ಹಲವು ಹಿಂದೂ ದೇವಾಲಯಗಳಿರುವುದು ವಿಶೇಷ.

ಚಿತ್ರಕೃಪೆ: PP Yoonus

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಶಿಲ್ಲಾಂಗ್: ಮೇಘಾಲಯ ರಾಜ್ಯದಲ್ಲಿರುವ ಶಿಲ್ಲಾಂಗ್ ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ. ಶಿಲ್ಲಾಂಗ್ ನ ವಾತಾವರಣ ಹಾಗೂ ಭೂದೃಶ್ಯಾವಳಿಗಳು ಯುರೋಪಿನ ಸ್ಕಾಟ್‍ಲ್ಯಾಂಡ್ ಗೆ ಹೋಲುವುದರಿಂದ ಇದನ್ನು "ಪೂರ್ವದ ಸ್ಕಾಟ್‍ಲ್ಯಾಂಡ್" ಎಂದೆ ಸಂಭೋದಿಸಲಾಗುತ್ತದೆ. ಇದೆ ಇದರ ವಿಶೇಷತೆ ಎಂದು ಹೇಳಬಹುದು. ಅಲ್ಲದೆ ಇಲ್ಲಿರುವ ಶಿಲ್ಲಾಂಗ್ ಪೀಕ್ ಗೆ ಭೇಟಿ ನೀಡಿದಾಗ ಮಾಡಿರುವ ಹೋಲಿಕೆಯು ಸಾರ್ಥಕವಾದಂತೆ ಅನಿಸುತ್ತದೆ.

ಚಿತ್ರಕೃಪೆ: AmyNorth

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಚೀರಾಪುಂಜಿ: ಪ್ರಪಂಚದಲ್ಲಿ ಅತಿ ಹೆಚ್ಚು ಮಳೆ ಬೀಳುವ/ಬಿದ್ದಿರುವ (ಪ್ರಸ್ತುತ ಇದರ ಬಳಿಯಿರುವ ಮಾವ್ಸಿನ್ರಾಮ್ ಈ ಖ್ಯಾತಿಗೆ ಪಾತ್ರವಾಗಿದೆ) ಪ್ರದೇಶ ಎಂಬ ಹೆಗ್ಗಳಿಕೆ ಹಾಗೂ ವಿಶೇಷತೆಯನ್ನು ಹೊಂದಿರುವ ಚಿರಾಪುಂಜಿ ಮೇಘಾಲಯ ರಾಜ್ಯದಲ್ಲಿದೆ. ಇಲ್ಲಿರುವ ಜೀವ ವೈವಿಧ್ಯತೆ ಹಾಗೂ ಸದಾ ಹಸಿರಾದ ತೇವಾಂಶದಿಂದ ಕೂಡಿರುವ ಕಾಡುಗಳು ಅದರಲ್ಲೂ ವಿಶೇಷವಾಗಿ ನೈಸರ್ಗಿಕವಾಗಿ ರೂಪಗೊಂಡಿರುವ ಸೇತುವೆಗಳು ಚಿರಾಪುಂಜಿಯ ವಿಶೇಷತೆ.

ಚಿತ್ರಕೃಪೆ: 2il org

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಭುವನೇಶ್ವರ: ಭುವನೇಶ್ವರ ಒಡಿಶಾ ರಾಜ್ಯದ ರಾಜಧಾನಿ ನಗರವಾಗಿದ್ದು ಸಾಕಷ್ಟು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಧೌಲಿ ಶಾಂತಿ ಸ್ತೂಪವಿರಬಹುದು ಇಲ್ಲವೆ ಉದಯಗಿರಿ-ಖಂಡಗಿರಿ ಗುಹೆಗಳಿರಬಹುದು ಎಲ್ಲವೂ ಭೇಟಿ ನೀಡಲು ಯೋಗ್ಯವಾದ ಸ್ಥಳಗಳೆ ಆಗಿವೆ. ಅಲ್ಲದೆ ಭುವನೇಶ್ವರದಲ್ಲಿ ದೊರಕುವ ಛೆನಾ ಗಾಜಾ ಎಂಬ ಸಿಹಿ ಖಾದ್ಯವು ಸವಿಯಲು ಅತ್ಯದ್ಭುತವಾಗಿದೆ. ಇದು ಹೆಚ್ಚುಕಮ್ಮಿ ರಸಗುಲ್ಲಾದಂತೆಯೆ ಇದ್ದರೂ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಇದು ಭುವನೇಶ್ವರದ ಸುಪ್ರಸಿದ್ಧ ಖಾದ್ಯ. ಇನ್ನೂ ಭುವನೇಶ್ವರದ ವಿಶೇಷತೆ ಎಂದರೆ ಇಲ್ಲಿರುವ ಲಿಂಗರಾಜ ದೇವಸ್ಥಾನ. ಇದು ಹರಿಹರ ದೇವನಿಗೆಮುಡಿಪಾದ, ಸುಂದರ ವಾಸ್ತುಶಿಲ್ಪದ ಅದ್ಭುತ ದೇವಾಲಯವಾಗಿದೆ.

ಚಿತ್ರಕೃಪೆ: Subhashish Panigrahi

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಪುರಿ: ಎಲ್ಲರಿಗೂ ತಿಳಿದಿರುವ ಹಾಗೆ ಒಡಿಶಾ ರಾಜ್ಯದ ಪುರಿಯು ತನ್ನಲ್ಲಿರುವ ಜಗನ್ನಾಥ ದೇವಲಯದಿಂದಾಗಿ ದೇಶದಲ್ಲೆ ಬಲು ಖ್ಯಾತಿಗಳಿಸಿದೆ. ಇದು ಪರಮ ಪವಿತ್ರ ನಾಲ್ಕು ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದ್ದು ಹಿಂದೂ ನಂಬಿಕೆಯಂತೆ ಇದಕ್ಕೆ ಭೇಟಿ ನೀಡದೆ ಮಾಡುವ ತೀರ್ಥ ಯಾತ್ರೆ ಸಂಪೂರ್ಣ ಎಂದು ಪರಿಗಣಿಸಲ್ಪಡುವುದಿಲ್ಲ.

ಚಿತ್ರಕೃಪೆ: I, G-u-t

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಕೋನಾರ್ಕ್: ಒಡಿಶಾದ ಪುರಿಯಿಂದ ಕೇವಲ 35 ಕಿ.ಮೀ ಗಳಷ್ಟು ದೂರದಲ್ಲಿರುವ ಕೋನಾರ್ಕ್ ಸ್ಥಳವು ದೇಶದಲ್ಲೆ ಸೂರ್ಯನ ಅಪರೂಪದ ಹಾಗೂ ಅತ್ಯದ್ಭುತ ದೇವಾಲಯಕ್ಕೆ ಹೆಸರುಗಳಿಸಿದೆ. ಮಾರುಹೋಗುವಂತೆ ಮಾಡುವ ಕೋನಾರ್ಕ್ ಸೂರ್ಯ.

ಚಿತ್ರಕೃಪೆ: Achilli Family | Journeys

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಗ್ವಾಲಿಯರ್: ಗ್ವಾಲಿಯರ್, ಮಧ್ಯ ಪ್ರದೇಶದ ನಾಲ್ಕನೇಯ ಅತಿ ದೊಡ್ಡ ನಗರವಾಗಿದ್ದು, ರಾಜ್ಯದ ಪ್ರವಾಸಿ ರಾಜಧಾನಿ ಎಂದೇ ಜನಮನ್ನಣೆ ಗಳಿಸಿದೆ. ಗ್ವಾಲಿಯರ್ ಮುಖ್ಯವಾಗಿ ತನ್ನಲ್ಲಿರುವ ಅದ್ಭುತವಾದ ಕೋಟೆಯಿಂದ ಪ್ರಖ್ಯಾತಿ ಪಡೆದಿದ್ದು ಜನಪ್ರೀಯ ಪ್ರವಾಸಿ ಕೇಂದ್ರವಾಗಿದೆ. ಭಾರತದಲ್ಲಿ ಹಿಂದೂ ನಿರ್ಮಿತ ಕೋಟೆಗಳ ಪಟ್ಟಿಯಲ್ಲಿ ಗ್ವಾಲಿಯರ್ ಕೋಟೆಗೆ ವಿಶೇಷ ಸ್ಥಾನಮಾನವನ್ನೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದೂ ಕೋಟೆಗಳ ಕಂಠಿಹಾರದಲ್ಲಿ ಈ ಕೋಟೆಯು ಒಂದು ಮುತ್ತಿದ್ದಂತೆ ಎಂದು ವರ್ಣಿಸಲಾಗಿದೆ.

ಚಿತ್ರಕೃಪೆ: Noeljoe85

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಖಜುರಾಹೊ: ಮಧ್ಯ ಪ್ರದೇಶದ ಬುಂದೇಲ್‍ಖಂಡ್ ವಲಯದಲ್ಲಿರುವ ವಿಂದ್ಯಾ ಪರ್ವತಗಳ ಹಿನ್ನಲೆಯಲ್ಲಿ, ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವುವಂತೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯೇ ಖಜುರಾಹೊ. ಖಜುರಾಹೊದಲ್ಲಿ ಪ್ರವಾಸೋದ್ಯಮವು ಇಲ್ಲಿರುವ ಅನುಪಮವಾದ ದೇವಾಲಯಗಳಿಂದಾಗಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಅದರಲ್ಲೂ ವಿಶೇಷವಾಗಿ ಈ ದೇವಾಲಯಗಳು ತಮ್ಮಲ್ಲಿರುವ ಪ್ರತ್ಯೇಕವಾದ, ಪುರುಷ-ಸ್ತ್ರಿ ಸಮಾಗಮದ, ರತಿ ಕ್ರೀಡೆಯ ಮಿಥುನ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊದ ಶೃಂಗಾರ ರಸ ಚಿಮ್ಮಿಸುವ ಚಿತ್ರಗಳು.

ಚಿತ್ರಕೃಪೆ: commons.wikimedia.org

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಭೋಪಾಲ್: ಮಧ್ಯ ಪ್ರದೇಶದ ರಾಜಧಾನಿ ನಗರವಾದ ಭೋಪಾಲಿನಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದು. ಅಪ್ಪರ್ ಲೇಕ್, ಲೋವರ್ ಲೇಕ್, ಛೋಟಾ ತಾಲಾಬ್ ಹೀಗೆ ಕೆರೆಗಳು ಇಲ್ಲಿ ಸ್ಥಿತವಿರುವುದರಿಂದ ಇದನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತದೆ. ಆದರೂ ಭೋಪಾಲ ನಗರ ಕುರಿತು ವಿಶೇಷ ಹೇಳಬೇಕೆಂದರೆ ನಗರದಿಂದ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿರುವ ಭೀಮ್ ಬೆಟ್ಕಾ ಗುಹೆಗಳು. ಇದು ಪ್ರಾಚೀನ ಮಾನವ ಅಂದರೆ ಶಿಲಾಯುಗದಲ್ಲಿ ಜೀವಿಸುತ್ತಿದ್ದ ಮಾನವನು ಬಿಡಿಸಿದ ಚಿತ್ರಕಲೆಗಳಿಗೆ ಹೆಸರುವಾಸಿ. ಅಲ್ಲದೆ ಈ ಗುಹೆಗಳು ಸುಮಾರು ಮೂರು ಲಕ್ಷ ವರ್ಷಗಳಷ್ಟು ಪುರಾತನವಾದವುಗಳು.

ಚಿತ್ರಕೃಪೆ: Ekabhishek

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಇಂದೋರ್: ಮಧ್ಯ ಪ್ರದೇಶ ರಾಜ್ಯದ ಬೆಳೆಯುತ್ತಿರುವ ಪ್ರಮುಖ ಪಟ್ಟಣವೆಂದರೆ ಇಂದೋರ್. ಇದರ ವಿಶೇಷತೆ ಎಂದರೆ ಇದನ್ನು ಭಾರತದ "ಬಿದಿ ಬದಿಯ ತಿಂಡಿಗಳ ರಾಜಧಾನಿ" ಎಂದು ಕರೆಯಲಾಗುತ್ತದೆ. ಅಂದರೆ ಸ್ಟ್ರೀಟ್ ಫುಡ್ಸ್ ಗಳಿಗೆ ಇದು ದೊಡ್ಡ ಸಾಮ್ರಾಟ.

ಚಿತ್ರಕೃಪೆ: John Hoey

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಅಹ್ಮದಾಬಾದ್: ಗುಜರಾತ್ ರಾಜ್ಯದ ಮಾಜಿ ರಾಜಧಾನಿ ಹಾಗೂ ಅತಿ ದೊಡ್ಡ ನಗರ ಅಹ್ಮದಾಬಾದ್. ಸಾಬರಮತಿ ನದಿ ಹಾಗೂ ಸಾಬರಮತಿ ಆಶ್ರಮ ಅಹ್ಮದಾಬಾದ್ ವಿಶೇಷತೆ ಎಂದು ಹೇಳಬಹುದು. ಸಾಬರಮತಿ ನದಿಯು ಪೂರ್ವ ಹಾಗೂ ಪಶ್ಚಿಮ ಅಹ್ಮದಾಬಾದ್ ಅನ್ನು ಪ್ರತ್ಯೇಕಿಸುತ್ತದೆ ಹಾಗೂ ಇವುಗಳನ್ನು ಒಂದಕ್ಕೊಂದು ಬೆಸೆಯಲು ಈ ನದಿಯ ಮೇಲೆ ಬರೋಬ್ಬರಿ ಒಂಬತ್ತು ಸೇತುವೆಗಳನ್ನು ನಿರ್ಮಿಸಲಾಗಿದೆ. ಗುಜರಾತ್ ನವರೆ ಆದ ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಆಶ್ರಮದಲ್ಲಿ ಕೆಲ ಕಾಲ ವಾಸಿಸಿದ್ದರು. ಸಾಬರಮತಿ ಆಶ್ರಮದ ಆವರಣದಲ್ಲಿರುವ ಸ್ಮಾರಕ ಸಂಗ್ರಹಾಲಯ.

ಚಿತ್ರಕೃಪೆ: Sanyam Bahga

ಯಾವ ಸ್ಥಳ? ಏನು ವಿಶೇಷ?

ಯಾವ ಸ್ಥಳ? ಏನು ವಿಶೇಷ?

ಸೂರತ್: ಗುಜರಾತ್ ರಾಜ್ಯದಲ್ಲಿ ಅಹ್ಮದಾಬಾದ್ ನಂತರದ ಎರಡನೆಯ ದೊಡ್ಡ ನಗರವಾದ ಸೂರತ್ ವಜ್ರದ ನಗರಿ ಎಂದೆ ಕರೆಯಲ್ಪಡುತ್ತದೆ. ಹೌದು ಇದರ ವಿಶೇಷತೆಗಳು ವಜ್ರ ಕೂರೆಯುವ ಕೈಗಾರಿಕೆಗಳು ಹಾಗೂ ಜವಳಿ ಉದ್ಯಮ ದರಲ್ಲೂ ವಿಶೇಷವಾಗಿ ಸೂರತ್ ಸೀರೆಗಳು ದೇಶದಾದ್ಯಂತ ಜನಪ್ರೀಯ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Citizenmart

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X