Search
  • Follow NativePlanet
Share
» »ಮಂಡ್ಯದಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು

ಮಂಡ್ಯದಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು

ಕರ್ನಾಟಕದಲ್ಲಿನ ಪ್ರಸಿದ್ಧವಾದ ಜಿಲ್ಲೆಗಳಲ್ಲಿ ನಮ್ಮ ಮಂಡ್ಯ ಕೂಡ ಒಂದಾಗಿದೆ. ಇಲ್ಲಿಯೂ ಕೂಡ ಹಲವಾರು ಪ್ರವಾಸಿ ತಾಣಗಳು ಇದ್ದು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮಂಡ್ಯ ಜಿಲ್ಲೆಯನ್ನು "ಸಕ್ಕರೆ ನಾಡು" (ಸಕ್ಕರೆ ನಾಡು ಮಂಡ್ಯ) ಎಂದ

ಕರ್ನಾಟಕದಲ್ಲಿನ ಪ್ರಸಿದ್ಧವಾದ ಜಿಲ್ಲೆಗಳಲ್ಲಿ ನಮ್ಮ ಮಂಡ್ಯ ಕೂಡ ಒಂದಾಗಿದೆ. ಇಲ್ಲಿಯೂ ಕೂಡ ಹಲವಾರು ಪ್ರವಾಸಿ ತಾಣಗಳು ಇದ್ದು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮಂಡ್ಯ ಜಿಲ್ಲೆಯನ್ನು "ಸಕ್ಕರೆ ನಾಡು" (ಸಕ್ಕರೆ ನಾಡು ಮಂಡ್ಯ) ಎಂದೇ ಕರೆಯುತ್ತೇವೆ. ಇಲ್ಲಿ ಹೆಚ್ಚಾಗಿ ಕಬ್ಬುನ್ನು ಬೆಳೆಯುತ್ತಾರೆ. ಇಲ್ಲಿನ ಜನರಿಗೆ "ಸಕ್ಕರೆ ನಾಡಿನ ಅಕ್ಕರೆ ಜನತೆ" ಎಂದು ಬಣ್ಣಿಸಲಾಗುತ್ತದೆ.

ಮಂಡ್ಯವನ್ನು ಹೆಚ್ಚಾಗಿ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುವ ಪ್ರವಾಸಿಗರು ಆದ್ಯತೆ ನೀಡುತ್ತಾರೆ. ಮಂಡ್ಯದಲ್ಲಿ ಒಟ್ಟು 54 ಪ್ರವಾಸಿ ತಾಣಗಳು ಇವೆ. ಇಲ್ಲಿ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆ ಎಂದರೆ ಅದು ಸೌಮ್ಯಕೇಶ್ವರ ದೇವಾಲಯ, ಬಸಾರಲು ದೇವಾಲಯ, ಗುಂಬಜ್ ಇನ್ನೂ ಹಲವಾರು.

ಪ್ರಸ್ತುತ ಲೇಖನದಲ್ಲಿ ಮಂಡ್ಯದಲ್ಲಿನ ಪ್ರಸಿದ್ಧವಾದ ತಾಣಗಳ ಬಗ್ಗೆ ತಿಳಿಯೋಣ.

ಗುಂಬಜ್ ಕೋಟೆ

ಗುಂಬಜ್ ಕೋಟೆ

ಟಿಪ್ಪುವಿನ ಕೋಟೆ ಎಂದು ಕರೆಯುವ ಗುಂಬಜ್ ಕೋಟೆ ಶ್ರೀ ರಂಗಪಟ್ಟಣದ ತಾಲ್ಲೂಕಿನಲ್ಲಿದೆ. ಈ ಕೋಟೆಯು ಜಾಮಾ ಮಸೀದಿ ಮತ್ತು ರಂಗನಾಥಸ್ವಾಮಿ ದೇವಾಲಯದ ಸಂಕೀರ್ಣದಲ್ಲಿದೆ. ಇಲ್ಲಿ ನೀವು ಮುಖ್ಯವಾಗಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಸಮಾಧಿಗಳನ್ನು ಕಾಣಬಹುದಾಗಿದೆ. ಇದು ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಕೃಷ್ಣ ರಾಜ ಸಾಗರ ಅಣೆಕಟ್ಟು

ಕೃಷ್ಣ ರಾಜ ಸಾಗರ ಅಣೆಕಟ್ಟು

ಶ್ರೀ ರಂಗಪಟ್ಟಣದಿಂದ 12 ಕಿ.ಮೀ ದೂರದಲ್ಲಿ ಕೃಷ್ಣ ರಾಜ ಸಾಗರ ಅಣೆಕಟ್ಟು ಮತ್ತು ಬೃಂದಾವನ್ ಉದ್ಯಾನಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಅಣೆಕಟ್ಟನ್ನು ಕಾವೇರಿ ನದಿಯ ಉದ್ದಕ್ಕೂ ನಿರ್ಮಾಣ ಮಾಡಲಾಗಿದೆ. ಇಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಹಲವಾರು ಬಣ್ಣ ಬಣ್ಣದ ಕಾರಂಜಿಗಳನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ.

ಶಿವನ ಸಮುದ್ರ

ಶಿವನ ಸಮುದ್ರ

ಶಿವನ ಸಮುದ್ರ ಜಲಪಾತವು ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಇದು ಮಂಡ್ಯ ಜಿಲ್ಲೆಯ ಮಾಳವಲ್ಲಿ ಎಂಬ ತಾಲ್ಲೂಕಿನಲ್ಲಿದೆ. ಇದು ಅವಳಿ ಜಲಪಾತವನ್ನು ಹೊಂದಿದೆ. ಅವುಗಳೆಂದರೆ ಬರಚುಕ್ಕಿ ಜಲಪಾತ ಮತ್ತು ಗಗನಚುಕ್ಕಿ ಜಲಪಾತ. ಈ ಸ್ಥಳದಲ್ಲಿ ಆನೇಕ ವನ್ಯ ಮೃಗಗಳು ನೆಲೆಸಿರುವ ಸಂರಕ್ಷಿತವಾದ ರಾಷ್ಟ್ರೀಯ ಕಾಡು ಸಹ ಇದೆ.

ಚೆಲುವರಾಯ ಸ್ವಾಮಿ ದೇವಾಲಯ

ಚೆಲುವರಾಯ ಸ್ವಾಮಿ ದೇವಾಲಯ

ಈ ಅದ್ಭುತವಾದ ದೇವಾಲಯವನ್ನು 12 ನೇ ಶತಮಾನದಲ್ಲಿ ಹೊಯ್ಸಳ ದೇವಾಲಯ ಎಂದು ಕರೆಯಲಾಗುತ್ತಿತ್ತು. ಇದು ಮೇಲುಕೋಟೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯದಲ್ಲಿ ವೈರಾಮುಡಿ ಎಂಬ ಉತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಇದು ಮುಖ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ.

ಬಸಾರಲು ದೇವಾಲಯ

ಬಸಾರಲು ದೇವಾಲಯ

ಈ ದೇವಾಲಯವು ಬಸಾರಲು ಎಂಬ ಗ್ರಾಮದಲ್ಲಿದೆ. ಈ ದೇವಾಲಯವು ಮಲ್ಲಿಕಾರ್ಜುನ ಸ್ವಾಮಿಗೆ ಅರ್ಪಿಸಲಾಗಿದೆ. ಹೊಯ್ಸಳ ರಾಜನಾದ 2 ನೇ ನರಸಿಂಹನ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಇದನ್ನು ಹರಿಹರದ ನಾಯಕ 13 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಪ್ರಾಚೀನವಾದ ದೇವಾಲಯ ಇದಾಗಿದೆ.

ಇಲ್ಲಿ ವಿದ್ಯ ದೇವಿ ಸರಸ್ವತಿಯೊಂದಿಗೆ ದುರ್ಗಾ ದೇವಿಯ ವಿಗ್ರಹವಿದೆ. ಇಲ್ಲಿ ಹಲವಾರು ಶಿಲ್ಪಕಲೆಗಳನ್ನು ಕಾಣಬಹುದಾಗಿದೆ.

ಕೊಕ್ಕರೆ ಬೆಳ್ಳೂರು

ಕೊಕ್ಕರೆ ಬೆಳ್ಳೂರು

ಮದ್ದೂರಿನಿಂದ ಸುಮಾರು 12 ಕಿ.ಮೀ ದೂರದಲ್ಲಿ ಕೊಕ್ಕರೆ ಬೆಳ್ಳೂರು ಇದೆ. ಇದು ಪಕ್ಷಿಧಾಮವಾಗಿದೆ. ಈ ಧಾಮವು ಹಲವಾರು ವರ್ಣರಂಜಿತವಾದ ಹಕ್ಕಿಗಳನ್ನು ಹೊಂದಿದೆ. ಅಸ್ರ್ಟೇಲಿಯಾದಿಂದ ಬರುವ ಪೆಲಿಕಾನ್ ಸೇರಿದಂತೆ ಇನ್ನೂ ಹಲವಾರು ಪಕ್ಷಿಗಳನ್ನು ಇಲ್ಲಿ ಕಣ್ಣುತುಂಬಿಕೊಳ್ಳಬಹುದು.

ಕುಂತಿ ಬೆಟ್ಟ

ಕುಂತಿ ಬೆಟ್ಟ

ಕುಂತಿ ಬೆಟ್ಟ ಒಂದು ಸುಂದರವಾದ ಗಿರಿಧಾಮವಾಗಿದೆ. 2 ಗುಡ್ಡಗಳನ್ನು ಇಲ್ಲಿ ಕಾಣಬಹುದಾಗಿದೆ. ಅವುಗಳು ಯಾವುವು ಎಂದರೆ ಒಂದು ಕುಂತಿ ಬೆಟ್ಟ ಮತ್ತು ಇನ್ನೊಂದು ಭೀಮಾ ಬೆಟ್ಟ. ಈ ಗಿರಿಧಾಮವು ಪಾಂಡವಪುರದ ಪಟ್ಟಣಕ್ಕೆ ಸಮೀಪದಲ್ಲಿದೆ. ವನವಾಸದ ಸಮಯದಲ್ಲಿ ಪಾಂಡವರು ಈ ಬೆಟ್ಟದ ಮೇಲೆಯೇ ವಾಸವಿದ್ದರು ಎಂದು ನಂಬಲಾಗಿದೆ.

ಟಿಪ್ಪು ಅರಮನೆ

ಟಿಪ್ಪು ಅರಮನೆ

ಟಿಪ್ಪುರ ಅರಮನೆಯನ್ನು ಲಾಲ್ ಮಹಲ್ ಎಂದೂ ಸಹ ಕರೆಯುತ್ತಾರೆ. ಈ ಅಮರನೆಯು ಅತ್ಯಂತ ಸುಂದರವಾಗಿದ್ದು ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದು ಶ್ರೀ ರಂಗಪಟ್ಟಣ ದೇವಾಲಯದ ಸಮೀಪದಲ್ಲಿದೆ. ಈ ಅದ್ಭುತವಾದ ಅರಮನೆಯು 2 ಅಂತಸ್ತಿನಿಂದ ಅಲಂಕೃತವಾಗಿದೆ. ಈ ಅರಮನೆಯನ್ನು 1791 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದನು. ಟಿಪ್ಪುವಿನ ಮರಣದ ನಂತರ ಬ್ರಿಟಿಷರು ಈ ಅರಮನೆಯನ್ನು 1867 ರಲ್ಲಿ ವಶಪಡಿಸಿಕೊಂಡರು.

ಮೇಲುಕೋಟೆ ವನ್ಯಜೀವಿ ಧಾಮ

ಮೇಲುಕೋಟೆ ವನ್ಯಜೀವಿ ಧಾಮ

ಮೋಲುಕೋಟೆಯಲ್ಲಿನ ವನ್ಯಜೀವಿ ಧಾಮವು ತೋಳಗಳಿಗೆ ಸುರಕ್ಷಿತವಾದ ಪ್ರದೇಶವಾಗಿದೆ. ಈ ಅಭಯಾರಣ್ಯದಲ್ಲಿ ಮುಡಿಬೆಟ್ಟ ಮತ್ತು ನಾರಾಯಣದುರ್ಗ ಎಂದು 2 ವಿಭಾಗಗಳು ಇವೆ. ಇಲ್ಲಿ ಕಾಡು ಬೆಕ್ಕು, ಭಾರತೀಯ ನರಿ, ಮಚ್ಚೆಯುಳ್ಳ ಜಿಂಕೆ, ಕಪ್ಪು ಚಿರತೆ, ಬಾನೆಟ್ ಮಕಕ್, ಪಂಗೋಲಿನ್ ಮತ್ತು ಕಾಡು ಹಂದಿ ಇನ್ನೂ ಹಲವಾರು ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಕಾವೇರಿ ಮೀನುಗಾರಿಕೆ ಕ್ಯಾಂಪ್

ಕಾವೇರಿ ಮೀನುಗಾರಿಕೆ ಕ್ಯಾಂಪ್

ಈ ಕಾವೇರಿ ಮೀನುಗಾರಿಕೆ ಕ್ಯಾಂಪ್ ಭೀಮೇಶ್ವರಿಯಲ್ಲಿದೆ. ಇದನ್ನು ಭೀಮೇಶ್ವರಿ ಮೀನುಗಾರಿಕೆ ಮತ್ತು ಪ್ರಕೃತಿ ಕ್ಯಾಂಪ್ ಎಂದೂ ಸಹ ಕರೆಯುತ್ತಾರೆ. ಹಾಗಾಗಿ ಇಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಶಿಬಿರಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಆಗಸ್ಟ್ ಮತ್ತು ಫೆಬ್ರವರಿ ತಿಂಗಳುಗಳಲ್ಲಿ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಬೆಂಗಳೂರಿನಿಂದ ಮಂಡ್ಯ ಜಿಲ್ಲೆಗೆ ತಲುಪಲು ಸುಮಾರು 103 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಮಂಡ್ಯಗೆ ಸುಮಾರು 15 ಕ್ಕಿಂತ ಹೆಚ್ಚು ರೈಲುಗಳು ಇವೆ. ರೈಲಿನ ಮೂಲಕ ಸಾಗಿದರೆ ಕೇವಲ 1 ಗಂಟೆ 15 ನಿಮಿಷಕ್ಕೆ ಸುಲಭವಾಗಿ ತಲುಬಹುದಾಗಿದೆ.

ರಸ್ತೆ ಮೂಖಾಂತರ ಕರ್ನಾಟಕ ಸರ್ಕಾರ ಹಲವಾರು ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ವ್ಯವಸ್ಥೆಯನ್ನು ಒದಗಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X