• Follow NativePlanet
Share
Menu
» »ವಾರಾಂತ್ಯ ಬಂತು.. ಎಲ್ಲಿಗೆ ಹೋಗಬೇಕು?

ವಾರಾಂತ್ಯ ಬಂತು.. ಎಲ್ಲಿಗೆ ಹೋಗಬೇಕು?

Written By:

ಮಕ್ಕಳಿಗೆ ದಸರಾ ರಜೆ ನೀಡಿದ್ದಾರೆ. ಹಾಗಾಂತ ಬೋರ್ ಆಗಿ ಮನೆಗೆ ಕೂರಲು ಕೂಡ ಆಗುವುದಿಲ್ಲ. ಎಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡುತ್ತಿದ್ದೀರಾ? ಯಾವುದೇ ಸ್ಥಳಕ್ಕೆ ಹೋದರು ಕೂಡ ಮತ್ತೇ ಸೋಮವಾರದ ದಿನ ಆಫೀಸ್‍ಗೆ ಹೋಗಲೇಬೇಕು. ಹಾಗಾಗಿ ದೂರ ಪ್ರಯಾಣ ಬೇಡ, ಹತ್ತಿರವೇ ಮಕ್ಕಳೊಂದಿಗೆ ಕಾಲ ಕಳೆಯಬೇಕು ಎಂದು ನಿಮ್ಮ ಯೋಚನೆಯಾಗಿದ್ದರೆ ಒಮ್ಮೆ ಈ ಸಮೀಪದ ಸ್ಥಳಗಳಿಗೆ ಭೇಟಿ ನೀಡಿ.

ಮಹಾಭೋದಿ ಸೊಸೈಟಿ

ಮಹಾಭೋದಿ ಸೊಸೈಟಿ

ಮಹಾಭೋದಿ ಸೊಸೈಟಿ ಸಿಟಿಯಲ್ಲಿನ ಗಾಂಧಿನಗರದಲ್ಲಿದೆ. ನಗರದಲ್ಲಿನ ಒತ್ತಡ ಜೀವನದಲ್ಲಿ ಈ ಪ್ರದೇಶದ ವಾತಾವರಣ ಹೆಚ್ಚು ನೆಮ್ಮದಿಯನ್ನು ಉಂಟು ಮಾಡುತ್ತದೆ. ಹೆಸರಿಗೆ ತಕ್ಕಂತೆ, ಈ ಬೌದ್ಧ ಪ್ರದೇಶವು ದೊಡ್ಡ ಪ್ರವಾಸಿ ತಾಣವಾಗಿಲ್ಲವಾದರೂ ಕೂಡ ವಿಶ್ರಾಂತಿ ನೀಡುವ ಸುಂದರವಾದ ತಾಣ ಇದಾಗಿದೆ.

ಇಲ್ಲಿ ಬುದ್ಧನ ವಿಗ್ರಹ, ಒಂದು ದೊಡ್ಡ ಸಭಾ ಪ್ರಾಂಗಣ, ಒಂದು ಸ್ತೂಪವನ್ನು ಇಲ್ಲಿ ಕಾಣಬಹುದು. ವಿದ್ಯಾರ್ಥಿಗಳಾದ ಬೌದ್ಧ ಸನ್ಯಾಸಿಗಳು, ಭಕ್ತರುಗಳಿಂದ ವಿಭಿನ್ನವಾದ ವಾತಾವರಣ ಇಲ್ಲಿ ಆನಂದಿಸಬಹುದು. ಇದೊಂದು ನೋಡಲೇಬೇಕಾಗಿರುವ ಒಂದು ಪ್ರದೇಶವಾಗಿದೆ.

Shruthi C

ಓಂಕಾರ್ ಹಿಲ್ಸ್

ಓಂಕಾರ್ ಹಿಲ್ಸ್

ಓಂಕಾರ್ ಹಿಲ್ಸ್ ಹಲವಾರು ಮಂದಿಗೆ ತಿಳಿಯದೇ ಇರುವಂತಹ ಪ್ರದೇಶವಾಗಿದೆ. ಓಂಕಾರ ಹಿಲ್ಸ್‍ನಿಂದ ಕೆಳಗೆ ನೋಡಿದರೆ, ಬೆಂಗಳೂರು ನಗರ ಅದ್ಭುತವಾಗಿ ಕಾಣುತ್ತದೆ. ಇಲ್ಲಿ ಒಂದು ಆಲದ ಮರವಿದೆ, ಅಷ್ಟೇ ಅಲ್ಲದೇ ಭಾರತೀಯ ಋಷಿ ಮುನಿಗಳ ವಿಗ್ರಹವನ್ನು ಕೂಡ ಕಾಣಬಹುದಾಗಿದೆ.

ಇಲ್ಲಿ ಒಂದು ದೊಡ್ಡದಾದ ಗಡಿಯಾರವಿದೆ. ಪ್ರತಿ ಗಂಟೆಯನ್ನು ತಿಳಿಸುತ್ತಿರುತ್ತದೆ. ನವೀನವಾಗಿ ಇಲ್ಲಿ ದ್ವಾದಶ ಜ್ಯೋತ್ಯೀರ್ ಲಿಂಗ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಮಹಾಶಿವರಾತ್ರಿಯ ಹಬ್ಬದ ಸಮಯದಲ್ಲಿ ಭಕ್ತರಿಗೆ ಅತಿ ಹೆಚ್ಚಾಗಿ ಆಕರ್ಷಿಸುತ್ತದೆ.

wikimapia.org

ಬಿಗ್ ಬನಯಾನ್ ಟ್ರಿ

ಬಿಗ್ ಬನಯಾನ್ ಟ್ರಿ

ಕನ್ನಡದಲ್ಲಿ ಈ ಮರವನ್ನು "ದೊಡ್ಡ ಆಲದ ಮರ" ವೆಂದು ಕರೆಯುತ್ತಾರೆ. ಈ ಮರವು ರಾಮೋಹಳ್ಳಿ ಎಂದರೆ ಬೆಂಗಳೂರಿನಿಂದ ಸುಮಾರು 28 ಕಿ.ಮೀ ದೂರದಲ್ಲಿದೆ. ಈ ದೊಡ್ಡದಾದ ಆಲದ ಮರ ಸುಮಾರು 400 ವರ್ಷಗಳಷ್ಟು ಪುರಾತನವಾದುದು. ಈ ಆಲದ ಮರವು 3 ಎಕರೆಗಳಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಈ ಮರದ ಬಳಿ ತಂಪಾದ ಗಾಳಿಯನ್ನು ಸವಿದು ಕಾಲ ಕಳೆಯಬಹುದು.


Wiki Commons

ನೃತ್ಯ ಗ್ರಾಮ

ನೃತ್ಯ ಗ್ರಾಮ

ಈ ನೃತ್ಯ ಗ್ರಾಮವನ್ನು ಪ್ರತಿಮಾ ಗೌರಿಯವರು ಸ್ಥಾಪನೆ ಮಾಡಿರುವುದು. ಮೊದಲನೇ ಗುರುಕುಲ ವಿದ್ಯಾಲಯ ಆಗಿದೆ. ಇಲ್ಲಿ ಸಂಪ್ರಾದಾಯಿಕವಾದ ನೃತ್ಯಗಳು ಹೇಳಿಕೊಡಲಾಗುತ್ತದೆ. ಇಲ್ಲಿನ ವಿಶೇಷವೆನೆಂದರೆ ಗುರುಗಳು, ಶಿಷ್ಯರು ಇಲ್ಲಿ ಅವರೇ ಬೆಳೆದ ಆಹಾರವನ್ನು ತಯಾರು ಮಾಡಿಕೊಳ್ಳುತ್ತಾರೆ. ಈ ಗ್ರಾಮವು ಸೋಮವಾರದಿಂದ ಶನಿವಾರದವರೆಗೆ ಸಾಮಾನ್ಯರ ಪ್ರವೇಶಕ್ಕೆ ಅವಕಾಶವಿರುತ್ತದೆ.

Wiki Commons

ಲಾಲ್ ಭಾಗ್

ಲಾಲ್ ಭಾಗ್

ಲಾಲ್ ಭಾಗ್ ಕೂಡ ಬೆಂಗಳೂರಿನ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಇದನ್ನು 240 ಎಕರೆಗಳಷ್ಟು ವಿಸ್ತಾರ್ಣವಾಗಿ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಹಲವಾರು ಜಾತಿಯ ವೃಕ್ಷಗಳನ್ನು, ಹೂವುಗಳನ್ನು ಕಾಣಬಹುದು. ಇಲ್ಲಿ ಒಂದು ನದಿಯು ಕೂಡ ಇದೆ. ಪ್ರತಿ ವರ್ಷಕ್ಕೆ 2 ಅಥವಾ 3 ಬಾರಿ ಹೂವಿನ ಶೋ ಮಾಡಲಾಗುತ್ತದೆ.

ಆ ಸಮಯದಲ್ಲಿ ಹಲವಾರು ಪ್ರವಾಸಿಗರಿಂದ ಲಾಲ್ ಭಾಗ್ ತುಂಬಿ ತುಳುಕುತ್ತಾ ಇರುತ್ತಾರೆ. ಸಿಟಿ ಪ್ರದೇಶದಿಂದ ಸ್ವಲ್ಪ ನೆಮ್ಮದಿ ಪಡೆಯಲು ಈ ಅದ್ಭುತವಾದ ಸ್ಥಳಕ್ಕೆ ಒಮ್ಮೆ ಭೇಟಿ ನೀಡಬಹುದು. ಪ್ರತಿದಿನ ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶದ ಅನುಮತಿಯನ್ನು ನೀಡಲಾಗುತ್ತದೆ.

Wiki Commons

ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್ ಹಚ್ಚ ಹಸಿರಿನ ಪ್ರದೇಶವಾಗಿದೆ. ಸುಮಾರು 300 ಎಕರೆಗಳಷ್ಟು ವಿಸ್ತಾರವಾಗಿರುವ ಈ ಪಾರ್ಕ್ ಬೆಂಗಳೂರಿನ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಸ್ಥಳವಾಗಿದೆ. ಇಲ್ಲಿ ಹಲವಾರು ಮಂದಿ ಪ್ರಕೃತಿ ಪ್ರಿಯರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸರ್ಕಾರಿಯ ಲೈಬ್ರರಿ, ಮ್ಯೂಸಿಯಂ, ಮಕ್ಕಳಿಗೆ ಒಂದು ಟಾಯ್ ಟ್ರೈನ್ ಕೂಡ ಇಲ್ಲಿ ಇವೆ. ಬೆಳಗಿನ ಜಾವ ಹಾಗು ಸಂಜೆಯ ಸಮಯದಲ್ಲಿ ಹಲವಾರು ಮಂದಿ ಜಾಗಿಂಗ್ ಮಾಡಲು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.


Wiki Commons

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ