Search
  • Follow NativePlanet
Share
» »ನೀವು ಶ್ರೀಕಾಳಹಸ್ತಿಗೆ ಹೋಗುತ್ತಿದ್ದೀರಾ?

ನೀವು ಶ್ರೀಕಾಳಹಸ್ತಿಗೆ ಹೋಗುತ್ತಿದ್ದೀರಾ?

ದಕ್ಷಿಣ ಕೈಲಾಸ ಎಂದೇ ಖ್ಯಾತಿಯಾಗಿರುವ ಈ ದಿವ್ಯ ಕ್ಷೇತ್ರದಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಇಲ್ಲಿರುವ 2 ದೀಪಗಳಲ್ಲಿ ಒಂದು ಮಾತ್ರ ಎಂದಿಗೂ ಗಾಳಿಗೆ ನಲಿಯುತ್ತಿರುತ್ತದೆ. ಮತ್ತೊಂದು ನಿಶ್ಚಲವಾಗಿ ಕದಲದೇ ಇರುತ್ತದೆ. ಇಲ್ಲಿನ ಮನೋಹರವಾದ ಗೋಪು

By Sowmyabhai

ದಕ್ಷಿಣ ಕೈಲಾಸ ಎಂದೇ ಖ್ಯಾತಿಯಾಗಿರುವ ಈ ದಿವ್ಯ ಕ್ಷೇತ್ರದಲ್ಲಿ ಪ್ರಧಾನವಾದ ಆಕರ್ಷಣೆ ಎಂದರೆ ಇಲ್ಲಿರುವ 2 ದೀಪಗಳಲ್ಲಿ ಒಂದು ಮಾತ್ರ ಎಂದಿಗೂ ಗಾಳಿಗೆ ನಲಿಯುತ್ತಿರುತ್ತದೆ. ಮತ್ತೊಂದು ನಿಶ್ಚಲವಾಗಿ ಕದಲದೇ ಇರುತ್ತದೆ. ಇಲ್ಲಿನ ಮನೋಹರವಾದ ಗೋಪುರಗಳು ಅಂದಿನ ಪ್ರಾಚೀನವಾದ ಭಾರತೀಯ ಶಿಲ್ಪಕಲೆಗೆ. ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಶ್ರೀ ಕಾಳಹಸ್ತಿ ಪಟ್ಟಣದ ಸುತ್ತ ನೋಡಬೇಕಾಗಿರುವ ಅನೇಕ ತಾಣಗಳು ಇವೆ. ಆದರೆ ಅದರಲ್ಲಿ ನೀವು ನೋಡಲೇಬೇಕಾಗಿರುವ ಪ್ರದೇಶಗಳು ಮಾತ್ರ ಕೇಲವೇ ಕೆಲವು ಇವೆ. ಅವುಗಳಲ್ಲಿ ಪ್ರಧಾನವಾದುದು 100 ಸ್ತಂಭಗಳು, 36 ಕ್ಕೂ ಹೆಚ್ಚು ತೀರ್ಥಗಳು ಇನ್ನು ಅನೇಕ.

ಶ್ರೀಕಾಳ ಹಸ್ತಿ ಚಿತ್ತೂರು ಜಿಲ್ಲೆಯಲ್ಲಿನ ಒಂದು ಪ್ರಮುಖವಾದ ಪಟ್ಟಣವಾಗಿದೆ. ಈ ಪಟ್ಟಣವು ತಿರುಪತಿ ನಗರದಿಂದ ಕೇವಲ 54 ಕಿ.ಮೀ ದೂರದಲ್ಲಿದೆ. ದೇಶದಲ್ಲಿ ಅತ್ಯಂತ ಪವಿತ್ರವಾದ ಸ್ಥಳಗಳಲ್ಲಿ ಇದು ಕೂಡ ಒಂದಾಗಿ ಪರಿಗಣಿಸಿದ್ದಾರೆ. ಈ ನಗರವು ಸ್ವರ್ಣಮುಖಿ ನದಿ ತೀರದಲ್ಲಿದೆ. ಶ್ರೀಕಾಳಹಸ್ತಿ ಮೂರು ಪದಗಳಿಂದ ಏರ್ಪಟ್ಟಿದೆ. ದಕ್ಷಿಣ ಭಾರತದಲ್ಲಿಯೇ ಪ್ರಾಚೀನವಾದ ಮತ್ತು ಪಂಚಭೂತಲಿಂಗಗಳಲ್ಲಿ ಒಂದಾದ ವಾಯುಲಿಂಗದ ಪುಣ್ಯಕ್ಷೇತ್ರವಾಗಿ ಪ್ರಖ್ಯಾತಿ ಪಡೆದಿದೆ.

1.ಶ್ರೀಕಾಳಹಸ್ತಿ ದೇವಾಲಯ

1.ಶ್ರೀಕಾಳಹಸ್ತಿ ದೇವಾಲಯ

PC:Kalyan Kumar

ಶ್ರೀಕಾಳಹಸ್ತಿಯಲ್ಲಿರುವ ಪ್ರಧಾನವಾದ ದೇವಾಲಯದಲ್ಲಿ ಒಂದಾಗಿರುವ ಕಾಳಹಸ್ತಿ ದೇವಾಲಯವನ್ನು ತಪ್ಪದೇ ಭೇಟಿ ನೀಡಿ ಬನ್ನಿ. ಈ ದೇವಾಲಯದಲ್ಲಿ ಮಹಾಶಿವನು ಪ್ರಧಾನವಾದ ಆಕರ್ಷಣೆಯಾಗಿದ್ದಾನೆ. ಪುರಾಣದಲ್ಲಿ ಹೆಸರುವಾಸಿಯಾಗಿರುವ ವಿಧದಲ್ಲಿ ಕಣ್ಣಪ್ಪನಿಗೆ ಪರೀಕ್ಷಿಸಿದ ಶಿವನಿಗಾಗಿ ತನ್ನ ಕಣ್ಣನೇ ತೆಗೆದು ನೀಡಿ ಪರಮ ಭಕ್ತನಾದ ಭಕ್ತ ಕಣ್ಣಪ್ಪನು ಇಲ್ಲಿನ ಶಿವನನ್ನೇ ಆರಾಧಿಸುತ್ತಿದ್ದನು.

2.ರಾಹು-ಕೇತು ದೋಷ

2.ರಾಹು-ಕೇತು ದೋಷ

PC:Rahul Pattnaik

ಕೇವಲ ಶಿವಭಕ್ತರೇ ಅಲ್ಲದೇ ಈ ಕಾಳಹಸ್ತಿ ದೇವಾಲಯಕ್ಕೆ ರಾಹು-ಕೇತು ದೋಷದಿಂದ ವಿಮುಕ್ತಿ ಹೊಂದುವ ಸಲುವಾಗಿ ಎಷ್ಟೊ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡಿ ವಿಶೇಷವಾದ ಪೂಜೆಗಳನ್ನು ನಿರ್ವಹಿಸುತ್ತಾರೆ. ತಿರುಪತಿಗೆ ಭೇಟಿ ನೀಡುವವರು ಕಾಳಹಸ್ತಿಯಲ್ಲಿನ ಶ್ರೀ ಕಾಳಹಸ್ತಿ ದೇವಾಲಯಕ್ಕೆ ತಪ್ಪದೇ ಭೇಟಿ ನೀಡುವುದು ಪದ್ಧತಿಯಾಗಿ ಬಂದಿದೆ.

3.ಕಣ್ಣಪ್ಪ ದೇವಾಲಯ

3.ಕಣ್ಣಪ್ಪ ದೇವಾಲಯ

PC:go tirupati

ಕಣ್ಣಪ್ಪ ದೇವಾಲಯವು, ಶ್ರೀಕಾಳಹಸ್ತಿಯಲ್ಲಿನ ಒಂದು ಚಿಕ್ಕದಾದ ಬೆಟ್ಟದ ಮೇಲೆ ಇದೆ. ಕಾಳಹಸ್ತಿಯಲ್ಲಿರುವ ಈ ದೇವಾಲಯವು ದೊಡ್ಡ ಶಿವ ಭಕ್ತನಾದ ಭಕ್ತ ಕಣ್ಣಪ್ಪನಿಗೆ ಅಂಕಿತವಾಗಿದೆ. ಬೇಟೆಗಾರನಾದ ಕಣ್ಣಪ್ಪ ಎಲೆಗಳಿಂದ ಹಾಗು ಧೂಳಿನಿಂದ ಕೂಡಿದ್ದ ಶಿವಲಿಂಗವನ್ನು ನೋಡಿ ತದನಂತರ ಅಲ್ಲಿಂದ ತೆಗೆದುಕೊಂಡು ಬಂದು (ನಿಯಮಗಳಿಗೆ ವ್ಯತಿರಿಕ್ತವಾಗಿ) ಪಕ್ಕದಲ್ಲಿಯೇ ಇದ್ದ ಜಲಧಾರೆಯಿಂದ ತನ್ನ ಬಾಯಿಯಿಂದ ನೀರನ್ನು ತೆಗೆದುಕೊಂಡು ಶಿವಲಿಂಗವನ್ನು ಶುಭ್ರ ಮಾಡಿದನು. ಮಾಂಸವನ್ನು ನೈವೇದ್ಯವಾಗಿ ಇಟ್ಟನು.

4.ಭಕ್ತ ಕಣ್ಣಪ್ಪನ ಬಗ್ಗೆ ಒಂದೇ ಮಾತಿನಲ್ಲಿ..

4.ಭಕ್ತ ಕಣ್ಣಪ್ಪನ ಬಗ್ಗೆ ಒಂದೇ ಮಾತಿನಲ್ಲಿ..

PC: go tirupati

ಕಣ್ಣಪ್ಪ ಒಬ್ಬ ಬೇಟೆಗಾರ. ಇತನು ನಿತ್ಯವು ಶಿವನನ್ನು ಆರಾಧಿಸುತ್ತಿದ್ದನು. ಒಂದು ದಿನ ಶಿವನು ಕಣ್ಣಪ್ಪನ ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ ಕಣ್ಣಿನಿಂದ ರಕ್ತವನ್ನು ಸುರಿಸಿದನು. ಇದನ್ನು ಕಂಡ ಕಣ್ಣಪ್ಪ ತನ್ನ ಕಣ್ಣನ್ನು ಕಿತ್ತು ಸ್ವಾಮಿಗೆ ಸರ್ಮಪಿಸಿದನು. ತಕ್ಷಣವೇ ಮತ್ತೊಂದು ಕಣ್ಣಿನಲ್ಲಿ ರಕ್ತ ಬರುವುದನ್ನು ಕಂಡು ಯಾವುದೇ ಸಂದೇಹವಿಲ್ಲದೇ ತನ್ನ ಮತ್ತೊಂದು ಕಣ್ಣನ್ನು ಸ್ವಾಮಿಗೆ ಅರ್ಪಿಸಿದನು. ಇದನ್ನು ಕಂಡ ಮಹಾಶಿವನು ಕಣ್ಣಪ್ಪನಿಗೆ ಮುಕ್ತಿಯನ್ನು ಪ್ರಸಾಧಿಸುತ್ತಾನೆ.

5.ಚರ್ತುಮುಖೇಶ್ವರ ದೇವಾಲಯ

5.ಚರ್ತುಮುಖೇಶ್ವರ ದೇವಾಲಯ

PC:Ramesh-K

ಬ್ರಹ್ಮ ಮತ್ತು ಮಹೇಶ್ವರರಿಗಾಗಿ ನಿರ್ಮಾಣ ಮಾಡಿದ ಚಿಕ್ಕದಾದ ದೇವಾಲಯವೇ ಶ್ರೀಕಾಳಹಸ್ತಿಯಲ್ಲಿನ ಚರ್ತುಮುಖೇಶ್ವರ ದೇವಾಲಯ. ಬ್ರಹ್ಮ, ಶಿವನಿಗೆ ಸಂಬಂಧಿಸಿದ್ದರಿಂದ ಈ ದೇವಾಲಯವನ್ನು ತಪ್ಪದೇ ನೋಡಬೇಕಾಗಿರುವುದೇ. ಈ ದೇವಾಲಯದಲ್ಲಿ ಶಿವಲಿಂಗವು ನಾಲ್ಕು ದಿಕ್ಕನು ಕಾಣುವ ನಾಲ್ಕು ಮುಖವನ್ನು ಹೊಂದಿರುವುದ ವಿಶೇಷ. ಚರ್ತುಮುಖ ಎಂದರೆ 4 ಮುಖವನ್ನು ಹೊಂದಿರುವುದು ಎಂದೇ ಅರ್ಥ. ಈ ದೇವಾಲಯದ ಗೋಡೆಯ ಮೇಲೆ ಶಿವನಿಗೆ ಸಂಬಂಧಿಸಿದ ಪುರಾಣ ಕಥೆಗಳು ಚಿತ್ರಗಳು ಇಲ್ಲಿವೆ.

6.ಸಹಸ್ರಲಿಂಗ ದೇವಾಲಯ

6.ಸಹಸ್ರಲಿಂಗ ದೇವಾಲಯ

PC:pponnada

ಶ್ರೀಕಾಳಹಸ್ತಿಯಲ್ಲಿರುವ ಪ್ರಮುಖವಾದ ದೇವಾಲಯಗಳಲ್ಲಿ ಒಂದಾದ ಸಹಸ್ರ ಲಿಂಗ ದೇವಾಲಯ ಒಂದು ಸುಂದರವಾದ ಅರಣ್ಯದ ಮಧ್ಯದಲ್ಲಿದೆ. ಈ ದೇವಾಲಯವು ಪರಿಸರದಲ್ಲಿರುವುದರಿಂದ ಅನೇಕ ಮಂದಿ ಪ್ರವಾಸಿಗರಿಗೆ ಆಕರ್ಷಿಸುತ್ತದೆ. ಸಹಸ್ರ ಎಂದರೆ ಸಾವಿರ ಎಂಬ ಅರ್ಥವಿದೆ. ಏಕ ಶಿಲೆಯ ಮೇಲೆ 1000 ಲಿಂಗಗಳನ್ನು ಕೆತ್ತನೆ ಮಾಡಿರುವ ಶಿವಲಿಂಗದಿಂದಾಗಿ ಈ ದೇವಾಲಯಕ್ಕೆ ಆ ಹೆಸರು ಬಂದಿದೆ. ಈ ದೇವರಿಗೆ ದರ್ಶಿಸಿಕೊಂಡರೆ ಈ ಜನ್ಮದಲ್ಲಿ ಹಾಗು ಪುನರ್‍ಜನ್ಮದಲ್ಲಿ ಮಾಡಿರುವ ಪಾಪಗಳು ಪರಿಹಾರವಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

7.ದುರ್ಗಾಂಬಿಕಾ ದೇವಾಲಯ

7.ದುರ್ಗಾಂಬಿಕಾ ದೇವಾಲಯ

PC:Shanbhag

ದುರ್ಗಾಂಬಿಕಾ ದೇವಿಗಾಗಿ ಶ್ರೀಕಾಳಹಸ್ತಿಯಲ್ಲಿ ಸಮುದ್ರ ಮಟ್ಟಕ್ಕೆ ಸುಮಾರು 800 ಮೀ ಎತ್ತರದಲ್ಲಿನ ಒಂದು ಬೆಟ್ಟದ ಮೇಲೆ ನಿರ್ಮಾಣ ಮಾಡಲಾದ ದುರ್ಗಾಂಬಿಕಾ ದೇವಿಯ ದೇವಾಲಯವಿದೆ. ಇದೊಂದು ಪುರಾತನವಾದ ದೇವಾಲಯವಾಗಿದೆ. ಇದರ ರಮಣೀಯವಾದ ದೃಶ್ಯಗಳಿಂದಾಗಿ ಸ್ಥಳೀಯರೇ ಅಲ್ಲದೇ ಪ್ರವಾಸಿಗರು ಕೂಡ ಈ ಕ್ಷೇತ್ರವನ್ನು ತಪ್ಪದೇ ಭೇಟಿ ನೀಡುತ್ತಾರೆ. ಬೆಟ್ಟದ ಕೆಳಗಿನ ಭಾಗದಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಬೆಟ್ಟವನ್ನು ಹತ್ತುವುದು ಸುಲಭವಾಗಿದೆ. ನೂರಾರು ಮಂದಿ ಭಕ್ತರು ಈ ದೇವಿಯ ಆಶೀರ್ವಾದ ಪಡೆಯುವ ಸಲುವಾಗಿ ಭೇಟಿ ನೀಡುತ್ತಿರುತ್ತಾರೆ.

8.ಪ್ರಸನ್ನ ವರದರಾಜು ಸ್ವಾಮಿ ದೇವಾಲಯ

8.ಪ್ರಸನ್ನ ವರದರಾಜು ಸ್ವಾಮಿ ದೇವಾಲಯ

PC:temples india

ಶ್ರೀಕಾಳಹಸ್ತಿಯಲ್ಲಿನ ಪ್ರಸನ್ನ ವರದರಾಜ ಸ್ವಾಮಿ ದೇವಾಲಯವು ದಕ್ಷಿಣ ಭಾರತದಲ್ಲಿನ ಪ್ರಮುಖವಾದ ದೇವಾಲಯಗಳಲ್ಲಿ ಒಂದು ಎಂದು ಭಾವಿಸುತ್ತಾರೆ. ಇದು ಕಾಳಹಸ್ತಿ ದೇವಾಲಯಕ್ಕೆ ಸಮೀಪದಲ್ಲಿಯೇ ಇದೆ. ಈ ದೈವದ ಆಶೀರ್ವಾದಕ್ಕಾಗಿ ಪ್ರತಿ ವರ್ಷ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

9.ಶ್ರೀ ಚಕ್ರೇಶ್ವರ ಸ್ವಾಮಿ ದೇವಾಲಯ

9.ಶ್ರೀ ಚಕ್ರೇಶ್ವರ ಸ್ವಾಮಿ ದೇವಾಲಯ

PC:NsChandru

ಶ್ರೀಕಾಳಹಸ್ತಿಯಲ್ಲಿನ ಶ್ರೀ ಚಕ್ರೇಶ್ವರ ಸ್ವಾಮಿ ದೇವಾಲಯವು ಪ್ರತಿಷ್ಟಾಪಿಸಿದ ಅತಿ ದೊಡ್ಡದಾದ ಶಿವಲಿಂಗವಿರುವ ದೇವಾಲಯವಾಗಿ ಪ್ರಖ್ಯಾತಿ ಹೊಂದಿದೆ. ಈ ದೇವಾಲಯವು 1200-1500ರ ಕಾಲದ್ದು ಎಂದು ನಂಬಲಾಗಿದೆ. ಪರಿಸರದಲ್ಲಿರುವ ದೇವಾಲಯಕ್ಕೆ ಹೋಲಿಸಿದರೆ ಈ ದೇವಾಲಯವು ಚಿಕ್ಕದಾಗಿದೆ. ಆದರೂ ಕೂಡ ಎಷ್ಟೊ ಮಂದಿ ಭಕ್ತರು ಈ ಚಕ್ರೇಶ್ವರ ಸ್ವಾಮಿ ಲಿಂಗವನ್ನು ಪೂಜಿಸುವ ಸಲುವಾಗಿ ಭೇಟಿ ನೀಡುತ್ತಾರೆ. ವಿಶೇಷೆನೆಂದರೆ ಈ ಚಿಕ್ಕದಾದ ದೇವಾಲಯದಲ್ಲಿಯೇ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡದಾದ ಶಿವಲಿಂಗವಿರುವುದು.

10.ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ

10.ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ

PC:రవిచంద్ర

ಸುಬ್ರಹ್ಮಣ್ಯಸ್ವಾಮಿಗಾಗಿ ನಿರ್ಮಾಣ ಮಾಡಿದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಶ್ರೀಕಾಳಹಸ್ತಿಯಲ್ಲಿದೆ. ಪ್ರತಿ ವರ್ಷ ಎಷ್ಟೋ ವೈಭವವಾಗಿ ನಡೆಯುವ ಕೃತಿಕ ಉತ್ಸವಕ್ಕೆ ಈ ದೇವಾಲಯವು ಪ್ರಸಿದ್ಧಿಯನ್ನು ಹೊಂದಿತು. ಅನೇಕ ದಿನಗಳು ನಡೆಯುವ ಈ ಉತ್ಸವದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳು ಕೂಡ ನಡೆಯುತ್ತಿರುತ್ತವೆ. ಉತ್ಸವಗಳ ಕೊನೆಯ ದಿನ ದೇವಾಲಯದಲ್ಲಿನ ದೀಪಗಳು, ಪುಷ್ಪಗಳಿಂದ ಅಲಂಕಾರ ಮಾಡಿ ಸುಬ್ರಹ್ಮಣ್ಯ ಸ್ವಾಮಿಯಾದ ದೇವತೆಯ ವಿಗ್ರಹವನ್ನು ರಥದ ಮೇಲೆ ಇರಿಸಿ ಉತ್ಸವ ಮಾಡುತ್ತಾರೆ.

11.ಗುಡಿಮಲ್ಲಂ ಶ್ರೀಕಾಳಹಸ್ತಿ

11.ಗುಡಿಮಲ್ಲಂ ಶ್ರೀಕಾಳಹಸ್ತಿ

PC: Elvey

ಸುಮಾರು 54 ಕಿ.ಮೀ ದೂರದಲ್ಲಿರುವ ಗುಡಿಮಲ್ಲಂನಲ್ಲಿ ಶಾತವಾಹನರ ಕಾಲದಲ್ಲಿ ನಿರ್ಮಾಣ ಮಾಡಿದ ಪುರಾತನವಾದ ಶಿವಾಲಯವಿದೆ. ಇಲ್ಲಿರುವ ಶಿವಲಿಂಗಕ್ಕೆ ಎಷ್ಟೋ ವಿಶೇಷತೆ ಇದೆ. ಅದೆನೆಂದರೆ ಇಲ್ಲಿರುವ ಶಿವಲಿಂಗವು ಶಿವಲಿಂಗದ ರೂಪದಲ್ಲಿ ಅಲ್ಲದೇ ಮಾನವನ ರೂಪದಲ್ಲಿ ಅಂದರೆ ಭೇಟಿಗಾರನ ರೂಪದಲ್ಲಿರುವುದು ವಿಶೇಷ. ಪುರುಷಾಂಗವನ್ನು ಹೋಲುವಂತಹ ಈ ಲಿಂಗವು ಪ್ರಪಂಚದಲ್ಲಿನ ಅತಿ ಪುರಾತನವಾದ ಶಿವಲಿಂಗವಾಗಿ ಖ್ಯಾತಿ ಪಡೆದಿದೆ.

12.ಸಾವಿರ ಲಿಂಗಗಳ ಜಲಪಾತ

12.ಸಾವಿರ ಲಿಂಗಗಳ ಜಲಪಾತ

PC:go tirupati

ವೆಯಿಲಿಂಗಾಲ ಕೋನ ಜಲಪಾತವು ಕಾಳಹಸ್ತಿ ಸರಿಹದ್ದುವಿನಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಇಲ್ಲಿನ ರಮಣೀಯವಾದ ಪ್ರಕೃತಿ ದೃಶ್ಯಗಳಿಂದಾಗಿ ಈ ಪ್ರದೇಶವು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಈ ಜಲಪಾತದಲ್ಲಿ ಸ್ನಾನ ಮಾಡದೇ ಹೋಗುವುದು ಸಾಧ್ಯವಾಗದ ಮಾತು. ದೊಡ್ಡವರು, ಚಿಕ್ಕವರು ಎಂಬ ಯಾವುದೇ ಭೇದವಿಲ್ಲದೇ ಇಲ್ಲಿ ಸ್ನಾನವನ್ನು ಮಾಡುತ್ತಾರೆ. ಸುತ್ತಲೂ ಶಿವಲಿಂಗವನ್ನು ಹೋಲಿಕೆಯಾಗುವ ಕಲ್ಲುಗಳು ಇರುವುದರಿಂದ ಆ ಹೆಸರು ಬಂದಿದೆ ಎಂದು ಭಾವಿಸುತ್ತಾರೆ. ಇಲ್ಲಿನ ನೀರಿನಲ್ಲಿ ಔಷಧ ಗುಣಗಳು ಹೊಂದಿದೆ ಎಂದು ನಂಬಿಕೆ ಹೊಂದಿರುವುದರಿಂದ ಅನೇಕ ಮಂದಿ ಭಕ್ತರು ಪ್ರತಿ ವರ್ಷ ಇಲ್ಲಿ ಸ್ನಾನಗಳು ಆಚರಿಸುತ್ತಾರೆ.

13.ಶ್ರೀಕಾಳಹಸ್ತಿಗೆ ಹೇಗೆ ಸೇರಿಕೊಳ್ಳಬೇಕು?

13.ಶ್ರೀಕಾಳಹಸ್ತಿಗೆ ಹೇಗೆ ಸೇರಿಕೊಳ್ಳಬೇಕು?

PC:satish.skht

ವಾಯು ಮಾರ್ಗದ ಮೂಲಕ ಶ್ರೀಕಾಳಹಸ್ತಿಯಿಂದ 26 ಕಿ.ಮೀ ದೂರದಲ್ಲಿರುವ ತಿರುಪತಿಯಲ್ಲಿನ ರೇಣಿಗುಂಟ ಇಲ್ಲಿನ ಸಮೀಪದ ವಿಮಾನ ನಿಲ್ದಾಣವಾಗಿದೆ. ಹೈದ್ರಾಬಾದ್, ಚೆನ್ನೈ, ಬೆಂಗಳೂರು, ಮಧುರೈ ವಿಮಾನ ನಿಲ್ದಾಣಗಳಿಂದ ತಿರುಪತಿಗೆ ನಿತ್ಯವು ವಿಮಾನಗಳು ಸಂಪರ್ಕ ಸಾಧಿಸುತ್ತಿರುತ್ತವೆ. ಅಲ್ಲಿಂದ ಖಾಸಗಿ ಅಥವಾ ಟ್ಯಾಕ್ಸಿ ಬಸ್ಸಿನ ಮೂಲಕ ಶ್ರೀ ಕಾಳಹಸ್ತಿ ಸೇರಿಕೊಳ್ಳಬಹುದು.

ರೈಲ್ವೆ ಮಾರ್ಗದ ಮೂಲಕ
ಪ್ರಧಾನವಾದ ರೈಲುಗಳೆಲ್ಲಾ ಶ್ರೀಕಾಳಹಸ್ತಿಯಲ್ಲಿಯೇ ತಿರುಗುತ್ತಿರುತ್ತವೆ. ಈ ಪಟ್ಟಣದಿಂದ ಅನೇಕ ರೈಲ್ವೆ ಮೂಲಕ ದಕ್ಷಿಣಾದಿಯಲ್ಲಿ ಅನೇಕ ನಗರಗಳಿಗೆ ಸಂಪರ್ಕ ಸಾಧಿಸುತ್ತದೆ. ಇತರ ನಿಲ್ದಾಣದಿಂದ ಕೂಡ ರೈಲುಗಳು ಬದಲಿಸಿದೆ ನೇರವಾಗಿ ಶ್ರೀಕಾಳಹಸ್ತಿಗೆ ಸೇರಿಕೊಳ್ಳಬಹುದು. ಇದಕ್ಕೆ ಸಮೀಪದಲ್ಲಿ ಗುಡೂರು ರೈಲ್ವೆ ಜಂಕ್ಷನ್ ಇದೆ.

ರಸ್ತೆ ಮಾರ್ಗದ ಮೂಲಕ
ರಾಜ್ಯದಲ್ಲಿನ ಪ್ರಧಾನವಾದ ನಗರಗಳಿಂದ ಶ್ರೀಕಾಳಹಸ್ತಿಗೆ ಅನೇಕ ಖಾಸಗಿ ಹಾಗಿ ಸರ್ಕಾರಿ ಬಸ್ಸುಗಳು ಸಂಪರ್ಕ ಸಾಧಿಸುತ್ತವೆ. ಶ್ರೀಕಾಳಹಸ್ತಿಯಿಂದ ತಿರುಪತಿ, ಬೆಂಗಳೂರು, ಚೆನ್ನೈ, ಹೈದ್ರಾಬಾದ್, ವಿಜಯವಾಡ, ನೆಲ್ಲೂರಿನಂತಹ ನಗರಗಳಿಗೆ ನಿತ್ಯವು ಬಸ್ಸುಗಳು ಸಂಪರ್ಕ ಸಾಧಿಸುತ್ತವೆ. ತಿರುಪತಿಯಿಂದ ಪ್ರತಿ 5 ನಿಮಿಷಕ್ಕೆ ಒಂದು ಬಸ್ಸು ತಿರುಗುತ್ತಾ ಇರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X