Search
  • Follow NativePlanet
Share
» »ವನ್ಯಜೀವಿ ಫೋಟೋಗ್ರಫಿ ಗೆ ಮಹಾರಾಷ್ಟ್ರದಲ್ಲಿರುವ ಈ ಪಕ್ಷಿಧಾಮಗಳೇ ಬೆಸ್ಟ್

ವನ್ಯಜೀವಿ ಫೋಟೋಗ್ರಫಿ ಗೆ ಮಹಾರಾಷ್ಟ್ರದಲ್ಲಿರುವ ಈ ಪಕ್ಷಿಧಾಮಗಳೇ ಬೆಸ್ಟ್

ನೀವು ಒಬ್ಬ ಛಾಯಾಗ್ರಾಹಕರಾಗಿದ್ದು ಫೋಟೋಗ್ರಫಿಯನ್ನು ಪ್ರೀತಿಸುತ್ತಿದ್ದರೆ ಮತ್ತು ಅದ್ಬುತ ದೃಶ್ಯಗಳನ್ನು ಸೆರೆಹಿಡಿಯಲು ಯಾವುದೇ ರಿಸ್ಕ್ ತೆಗೆದುಕೊಳ್ಳಲು ನೀವು ರೆಡಿ ಇದ್ರೆ, ನೀವು ಮಹಾರಾಷ್ಟ್ರದ ಈ ಕೆಳಗಿನ ಪಕ್ಷಿಧಾಮ ಛಾಯಾಗ್ರಹಣ ತಾಣಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಅದ್ಬುತ ಸ್ಥಳಗಳಲ್ಲಿ ನೀವು ನೂರಾರು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ವಿವಿಧ ಜಾತಿಯ ಪಕ್ಷಿಗಳನ್ನು ಗುರುತಿಸಬಹುದು. ಪಕ್ಷಿ ಪ್ರಿಯ ಛಾಯಾಗ್ರಾಹಕರ ಪಾಲಿಗಂತೂ ಈ ತಾಣಗಳು ಸ್ವರ್ಗವೆ ಹೌದು.

1. ಜಯಕ್ವಾಡಿ ಪಕ್ಷಿಧಾಮ

ನಗರ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಜಯಕ್ವಾಡಿ ಪಕ್ಷಿಧಾಮವು ಔರಂಗಾಬಾದ್ ಜಿಲ್ಲೆಯಲ್ಲಿದ್ದು ಗೋದಾವರಿ ನದಿಯಿಂದ ರೂಪುಗೊಂಡ ನಾಥ್ ಸಾಗರ್ ಜಲಾಶಯದಲ್ಲಿ ಸಣ್ಣ ಮತ್ತು ಸುಂದರವಾದ ದ್ವೀಪಗಳನ್ನು ಒಳಗೊಂಡಿದೆ. ಈ ದ್ವೀಪಗಳು ಸುಂದರವಾದ ಮರಗಳು ಮತ್ತು ಹಸಿರು ಸಸ್ಯ ಸಮೃದ್ಧಿಯಿಂದ ಕೂಡಿವೆ, ಆ ಮೂಲಕ ಪಕ್ಷಿಗಳ ವಾಸಕ್ಕೆ ಪರಿಪೂರ್ಣ ವಾತಾವರಣವನ್ನು ಸೃಷ್ಟಿಸುತ್ತವೆ.

ದಾಖಲೆಗಳ ಪ್ರಕಾರ, ಆಳವಿಲ್ಲದ ನೀರಿನಲ್ಲಿರುವ ಈ ಸುಂದರವಾದ ದ್ವೀಪಗಳು 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ, ಇದರಲ್ಲಿ ಸ್ಥಳೀಯ ಮತ್ತು ವಲಸೆ ಹಕ್ಕಿಗಳು ಸೇರಿವೆ. ಇಲ್ಲಿ ಕಂಡುಬರುವ ಪ್ರಮುಖ ಪ್ರಭೇದಗಳೆಂದರೆ ಕ್ರೇನ್‌ಗಳು, ಶೋವ್ಲ್ಲೆರ್ಸ್ , ಗಾಡ್‌ವಿಟ್ಸ್ ಮತ್ತು ಬ್ರಾಹ್ಮಣ ಬಾತುಕೋಳಿಗಳು ಸೇರಿವೆ. ಆದ್ದರಿಂದ, ಈ ಅದ್ಬುತ ಸ್ಥಳಕ್ಕೆ ಹೋಗಿ ಫೋಟೋಗ್ರಫಿ ಮಾಡ್ತಾ ಇದ್ರೆ ಹೇಗೆ? ಒಮ್ಮೆ ನೆನೆಸಿಕೊಳ್ಳಿ.

2. ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶ

ಮಹಾರಾಷ್ಟ್ರದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾದ ತಡೋಬಾ ಅಂಧಾರಿ ಟೈಗರ್ ರಿಸರ್ವ್ ಸುಮಾರು 625 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ ಮತ್ತು ಇದನ್ನು 1995 ರಲ್ಲಿ ಸ್ಥಾಪಿಸಲಾಗಿದೆ. ಇದು ಚಂದ್ರಪುರ ಜಿಲ್ಲೆಯಲ್ಲಿದ್ದು, ಈ ರಾಷ್ಟ್ರೀಯ ಉದ್ಯಾನದ ಪ್ರಮುಖ ಆಕರ್ಷಣೆಯೆಂದರೆ ಅದು ಹುಲಿಗಳು.

ಆದಾಗ್ಯೂ, ಇದು ಹಲವಾರು ಜಾತಿಯ ಸಸ್ಯಗಳು, ಪಕ್ಷಿಗಳು ಮತ್ತು ಇತರ ಪ್ರಾಣಿಗಳಿಗೆ ನೆಲೆಯಾಗಿದೆ. ಆದ್ದರಿಂದ, ಇದು ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿ ಛಾಯಾಗ್ರಾಹಕರಲ್ಲಿ ಅಷ್ಟೇ ಜನಪ್ರಿಯವಾಗಿದೆ. ನೀವು ನಾಗ್ಪುರದ ಸುತ್ತಮುತ್ತ ನಿಮ್ಮ ಛಾಯಾಗ್ರಹಣ ಸ್ಥಳವನ್ನು ಹುಡುಕುತ್ತಿದ್ದರೆ ನೀವು ತಡೋಬಾ ಅಂಧಾರಿ ಟೈಗರ್ ರಿಸರ್ವ್ ಗೆ ಭೇಟಿ ನೀಡಲೇಬೇಕು, ಇಲ್ಲಿ ನೀವು ಅಪರೂಪದ ಪಕ್ಷಿಗಳ ಆಕರ್ಷಕ ಸೌಂದರ್ಯವನ್ನು ಸೆರೆಯಿಡಿಯುತ್ತ ಎಂಜಾಯ್ ಮಾಡಬಹುದು.

ಇಲ್ಲಿ ಕಂಡುಬರುವ ಪ್ರಮುಖ ಜಾತಿಯ ಪಕ್ಷಿಗಳು ಭಾರತೀಯ ಪಿಟ್ಟಾ, ಕಿತ್ತಳೆ-ತಲೆಯ ಥ್ರಷ್ ಮತ್ತು ಪ್ಯಾರಡೈಸ್ ಫ್ಲೈ ಕ್ಯಾಚರ್. ನೀವು ಇಲ್ಲಿ ಹಲವಾರು ನವಿಲುಗಳನ್ನು ಸಹ ನೋಡಬಹುದು. ನಿಮ್ಮ ವಾರಾಂತ್ಯದ ಸಮಯವನ್ನು ಕಳೆಯಲು ಇದೊಂದು ಅದ್ಬುತ ಸ್ಥಳವಾಗಿದೆ.

3. ಭಿಗ್ವಾನ್ ಪಕ್ಷಿಧಾಮ

ಪುಣೆ ಮತ್ತು ಸೋಲಾಪುರ ಜಿಲ್ಲೆಗಳ ಗಡಿಯಲ್ಲಿರುವ ಸಣ್ಣ ಕುಗ್ರಾಮದಲ್ಲಿರುವ ಭಿಗ್ವಾನ್ ಪಕ್ಷಿಧಾಮವು ವನ್ಯಜೀವಿ ಛಾಯಾಗ್ರಾಹಕರಿಗೆ ಜನಪ್ರಿಯ ತಾಣವಾಗಿದೆ. ನೀವು ಮಹಾರಾಷ್ಟ್ರದಲ್ಲಿದ್ದರೆ ಮತ್ತು ವನ್ಯಜೀವಿ ಫೋಟೋಗ್ರಫಿ ಇಷ್ಟಪಡುವವರಾಗಿದ್ದರೆ, ಈ ಅದ್ಬುತ ತಾಣಕ್ಕೆ ಹೋಗೋದು ಮಿಸ್ ಮಾಡಿಕೊಳ್ಳಬೇಡಿ, ಇಲ್ಲಿ ನೀವು ನೂರಾರು ವಲಸೆ ಮತ್ತು ಸ್ಥಳೀಯ ಪಕ್ಷಿಗಳನ್ನು ಕಾಣಬಹುದು.

ಈ ಭಿಗ್ವಾನ್ ಪಕ್ಷಿಧಾಮದಲ್ಲಿ ಅತಿ ಹೆಚ್ಚು ಫ್ಲೆಮಿಂಗೊ ಪಕ್ಷಿಗಳನ್ನು ಕಾಣಬಹುದು. ಇಲ್ಲಿರುವ ಇತರ ಪ್ರಭೇದಗಳೆಂದರೆ ಹೆರಾನ್, ಎಗ್ರೆಟ್, ಪೇಂಟೆಡ್ ಕೊಕ್ಕರೆ ಮತ್ತು ಹಲವಾರು ಜಾತಿಯ ರಾಪ್ಟರ್‌ಗಳು ಸೇರಿವೆ. ಇದು ಸುಮಾರು 250 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ ಮತ್ತು ಅತಿ ಹೆಚ್ಚು ವಲಸೆ ಹಕ್ಕಿಗಳಿಗೆ ವಾಸ ಸ್ಥಾನ ವಾಗಿರುವುದರಿಂದ ಇದನ್ನು ಮಿನಿ ಭಾರತ್ಪುರ ಎಂದೂ ಕರೆಯುತ್ತಾರೆ.

Topmost Bird Photography Destinations In Maharashtra

4. ತನ್ಸಾ ವನ್ಯಜೀವಿ ಅಭಯಾರಣ್ಯ

ಪಕ್ಷಿ ವೀಕ್ಷಕರು ಮತ್ತು ವನ್ಯಜೀವಿ ಛಾಯಾಚಿತ್ರಗ್ರಾಹಕರಿಗೆ ಮತ್ತೊಂದು ಸುಂದರವಾದ ತಾಣವಾದ ತನ್ಸಾ ವನ್ಯಜೀವಿ ಅಭಯಾರಣ್ಯವು ಮುಂಬೈ ಗಡಿ ಭಾಗದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ತನ್ಸಾ ಸರೋವರದಿಂದ ಸುತ್ತುವರಿಯಲ್ಪಟ್ಟ ಈ ಸುಂದರವಾದ ಅಭಯಾರಣ್ಯವು ಹಾರ್ನ್‌ಬಿಲ್, ಮರಕುಟಿಗ, ಕ್ರೆಸ್ಟೆಡ್ ಸರ್ಪ ಹದ್ದು, ಎಗ್ರೆಟ್ ಮತ್ತು ಬುಲ್ ಬುಲ್ ನಂತಹ ಹಲವಾರು ಸುಂದರ ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ.

ಪಕ್ಷಿಗಳ ಹೊರತಾಗಿ, ನೀವು ಹಲವಾರು ಜಾತಿಯ ಪ್ರಾಣಿಗಳು ಮತ್ತು ಚಿಟ್ಟೆಗಳನ್ನು ಸಹ ಇಲ್ಲಿ ಕಾಣಬಹುದು. ಮುಂಬೈ ಸುತ್ತಮುತ್ತಲಿನ ಛಾಯಾಗ್ರಾಹಕರಿಗೆ ಇದು ಸೂಕ್ತ ಸ್ಥಳವಾಗಿದೆ. ಇಲ್ಲಿರುವ ಸರೋವರ, ಕಾಡು, ಸೊಂಪಾದ ಸಸ್ಯವರ್ಗ ಮತ್ತು ವೈವಿಧ್ಯಮಯ ವನ್ಯಜೀವಿಗಳ ಅದ್ಭುತ ಮಿಶ್ರಣವನ್ನು ನೀವು ಬೇರೆ ಎಲ್ಲಿಯೂ ಸಹ ಕಾಣಲು ಸಾಧ್ಯವಿಲ್ಲ.

5. ನಂದೂರ್ ಮಾಧಮೇಶ್ವರ ಪಕ್ಷಿಧಾಮ

ಹೆರಾನ್, ಎಗ್ರೆಟ್ಸ್ ಮತ್ತು ಫ್ಲೆಮಿಂಗೊಗಳ ಜನಸಂಖ್ಯೆಗೆ ಹೆಸರುವಾಸಿಯಾದ ನಂದೂರ್ ಮಾಧಮೇಶ್ವರ ಪಕ್ಷಿಧಾಮವು ಮಹಾರಾಷ್ಟ್ರದ ಅತಿ ಕಡಿಮೆ ಜನ ತೆರಳುವ ಛಾಯಾಗ್ರಹಣ ತಾಣಗಳಲ್ಲಿ ಒಂದಾಗಿದೆ. ಆದ್ದರಿಂದ, ಇಲ್ಲಿ ನೀವು ಪ್ರವಾಸಿಗರ ಜನಸಂದಣಿಯಿಂದ ಯಾವುದೇ ತೊಂದರೆಯಾಗದಂತೆ ನೀವು ವನ್ಯಜೀವಿಗಳ ಸೌಂದರ್ಯವನ್ನು ಸವಿಯಬಹುದು.

ಇದು ನಗರ ಕೇಂದ್ರದಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ನಾಸಿಕ್ ಜಿಲ್ಲೆಯಲ್ಲಿದೆ ಮತ್ತು ಇದು ಮಹಾರಾಷ್ಟ್ರದ ಸಮೃದ್ಧಿಯ ಪ್ರದೇಶಗಳಲ್ಲಿ ಒಂದಾಗಿದೆ. ಮೇಲೆ ತಿಳಿಸಿದ ಜಾತಿಯ ಪಕ್ಷಿಗಳ ಹೊರತಾಗಿ, ನೀವು ಆಸ್ಪ್ರೆ, ಐಬಿಸ್, ಪಿಂಟೈಲ್ ಮತ್ತು ಹ್ಯಾರಿಯರ್ ಮುಂತಾದ ಜಾತಿಗಳನ್ನು ಸಹ ಗುರುತಿಸಬಹುದು. ಹಾಗಾದರೆ, ಈ ವಾರಾಂತ್ಯದಲ್ಲಿ ನಂದೂರ್ ಮಾಧಮೇಶ್ವರ ಪಕ್ಷಿಧಾಮಕ್ಕೆ ಪ್ರವಾಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X