Search
  • Follow NativePlanet
Share
» »ವಿಕೇಂಡ್‌ಗೆ ವಾಟರ್ ಪಾರ್ಕ್ ಗೆ ಹೋಗಬೇಕನಿಸಿದ್ಯಾ...ಇಲ್ಲಿದೆ ಬೆಸ್ಟ್ ವಾಟರ್ ಪಾರ್ಕ್

ವಿಕೇಂಡ್‌ಗೆ ವಾಟರ್ ಪಾರ್ಕ್ ಗೆ ಹೋಗಬೇಕನಿಸಿದ್ಯಾ...ಇಲ್ಲಿದೆ ಬೆಸ್ಟ್ ವಾಟರ್ ಪಾರ್ಕ್

By Manjula Balaraj Tantry

ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್ ಗಳು ಬೇಸಿಗೆಯಲ್ಲಿ ನಿಮ್ಮ ವಾರಾಂತ್ಯದ ರಜಾ ದಿನಗಳನ್ನು ಕಳೆಯಲು ಒಂದು ಉತ್ತಮವಾದ ಮತ್ತು ಸೂಕ್ತವಾದ ಸ್ಥಳವಾಗಿದೆ. ಯಾರೇ ಆಗಲಿ ತಮ್ಮ ಮೈ, ಮನಸ್ಸು ಮತ್ತು ಆತ್ಮವನ್ನು ಈ ಒಂದೇ ರೀತಿಯ ಸಾಲಿನಲ್ಲಿ ಹರಿಯುವ ನೀರಿನಲ್ಲಿ ರೋಮಾಂಚನಗೊಳ್ಳಲು ಮತ್ತು ಉತ್ಸುಕರಾಲು ಮತ್ತು ಪುನಶ್ಚೇತನ ಮಾಡಿಕೊಳ್ಳಲು ಯಾರು ತಾನೇ ಇಷ್ಟ ಪಡುವುದಿಲ್ಲ. ನಿಸ್ಸಂಶಯವಾಗಿ, ನಮ್ಮ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಅಪರಿಮಿತ ವಿನೋದದ ಕಾರಣದಿಂದಾಗಿ ವಾಟರ್ ಪಾರ್ಕ್ ಪ್ರವಾಸವು ಸ್ಮರಣೀಯವಾಗಿ ಉಳಿಯುತ್ತದೆ. ಈ ಕೆಲವು ಕಡೆಯಲ್ಲಿರುವ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಖಂಡಿತವಾಗಿಯೂ ವಯಸ್ಸು, ಆಸೆ ಇವೆಲ್ಲವನ್ನೂ ಮೀರಿ ಕೆಲವರಿಗೆ ಖುಷಿ ಕೊಡುತ್ತದೆ. ಇದು ಏಕೆಂದರೆ ಎಲ್ಲಾರೂ ತಮ್ಮ ತೊಂದರೆಗಳನ್ನು ಬದಿಯಲ್ಲಿಟ್ಟು ಇಂತಹ ಒಂದು ಜಗತ್ತಿನಲ್ಲಿ ತಮ್ಮನ್ನು ತಾವು ಕಳೆದುಕೊಳ್ಳ ಬಯಸುವುದು ಸಹಜ.

ಆದುದರಿಂದ ಹೈದರಾಬಾದಿನಲ್ಲಿರುವ ಈ ತಣ್ಣನೆಯ ವಾಟರ್ ಪಾರ್ಕ್ ಗಳಿಗೆ ಹೋಗುವ ಯೋಜನೆ ಹಾಕಿದರೆ ಹೇಗೆ? ಈ ಎಲ್ಲ ಸ್ಥಳಗಳೂ ನೀವು ಎಂದೂ ಮರೆಯದಂತಹ ನೆನಪನ್ನು ನೀಡುತ್ತವೆ. ಹೈದರಾಬಾದಿನಲ್ಲಿರುವ ಈ ಕೆಳಗಿನ ವಾಟರ್ ಪಾರ್ಕ್ ಗಳಿಗೆ ನೀವು ಖಂಡಿತವಾಗಿಯೂ ಭೇಟಿ ಕೊಡಲೇಬೇಕು.

ಡ್ರೀಮ್ ವ್ಯಾಲಿ

ಡ್ರೀಮ್ ವ್ಯಾಲಿ

ಈ ವಾಟರ್ ಪಾರ್ಕ್ ಹೈದರಾಬಾದಿನ ವಿಕಾರಾಬಾದ್ ರಸ್ತೆಯಲ್ಲಿದೆ. ಡ್ರೀಮ್ ವ್ಯಾಲಿ ವಾಟರ್ ಪಾರ್ಕ್ ಹೆಸರೇ ಸೂಚಿಸುವಂತೆ ಒಂದು ಕನಸು ನನಸಾಗಿಸುವಂತೆಯೇ ಇದೆ. ನೀರಿನ ಸುಂದರವಾದ ಸ್ಲೈಡ್ ಗಳ ಒಂದು ಮಾದರಿ, ಸವಾರಿಗಳು, ಮತ್ತು ಕೊಳಗಳು ಇವೆಲ್ಲ ಸೇರಿ ಈ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಪ್ರತೀಯೊಬ್ಬರೂ ತಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಆನಂದಿಸಬೇಕು ಎಂದು ಬಯಸಿದಲ್ಲಿ ಇಲ್ಲಿಗೆ ಭೇಟಿ ಕೊಡಲೇಬೇಕು ಎನ್ನುವಂತಿದೆ.

ನೀರಿನ ಇಳಿಜಾರುಗಳಿಂದ ಹಿಡಿದು ಕೊಳದಲ್ಲಿ ಆಡಬಹುದಾದ ಕ್ರೀಡೆಗಳವರೆಗೆ ಮತ್ತು ರೋಮಾಂಚಕ ಸವಾರಿಗಳಿಂದ ಕೆಲವು ಆಸಕ್ತಿದಾಯಕ ಚಟುವಟಿಕೆಗಳ ವರೆಗೆ ಈ ಡ್ರೀಮ್ ವ್ಯಾಲಿ ವಾಟರ್ ಪಾರ್ಕ್ ತನ್ನಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಆನಂದಿಸುವಂತಹ ಎಲ್ಲವನ್ನೂ ಒದಗಿಸುತ್ತದೆ ಮತ್ತು ಇಲ್ಲಿ ಕೊಳಗಳಿಗೆ ಜಾರುವ ಸಂದರ್ಭದಲ್ಲಿ ಮೋಜನ್ನು ಆಸ್ವಾದಿಸುವಂತಹ ಎಲ್ಲವನ್ನೂ ಹೊಂದಿದೆ.

ಸ್ಪ್ಲಾಶ್

ಸ್ಪ್ಲಾಶ್

ಇದು ಹೈದರಾಬಾದಿನ ಗೌತಮ್ ನಗರದಲ್ಲಿದೆ. ಲಿಯೋ ಸ್ಪ್ಸ್ಲಾಶ್ ಸರ್ಫಿಂಗ್ ಸವಾರಿ ಹೊಂದಿರುವ ಭಾರತದ ಮೊದಲ ಅಮ್ಯೂಸ್ ಮೆಂಟ್ ಪಾರ್ಕ್ ಎನಿಸಿದೆ. ಇದು ಆಸಕ್ತಿದಾಯಕವಾದುದಲ್ಲವೆ? ಇಳಿಜಾರಿನ ನೀರಿನಲ್ಲಿ ಇಳಿಯುವುದು ಮಾತ್ರವಲ್ಲದೆ ಈಜುವುದು ಮತ್ತು ಕೆಲವು ಮೋಜಿನ ಕ್ರೀಡೆಗಳನ್ನೂ ಇಲ್ಲಿ ಆಡಬಹುದಾಗಿದೆ. ಅಲ್ಲದೆ ಇಲ್ಲಿ ನೀವು ಅಲೆಗಳ ಜೊತೆಗೆ ಕೆಲವು ಸಮಯ ಸವಾರಿ ಮಾಡಬಹುದು ಮತ್ತು ಪೂರ್ಣವಾಗಿ ಎಲ್ಲಾ ಅನುಭವವನ್ನೂ ಈ ವಾಟರ್ ಪಾರ್ಕ್ ನಲ್ಲಿ ಪಡೆಯಬಹುದು. ಆದುದರಿಂದ ನಿಮ್ಮನ್ನು ನೀವು ಈ ಸುಂದರವಾದ ಸ್ಥಳಗಳಲ್ಲಿ ನಿಮ್ಮ ವಾರಾಂತ್ಯದಲ್ಲಿ ಕಳೆಯುವ ಅನುಭವ ಹೇಗಿರಬಹುದು? ಇದು ಎಲ್ಲಾ ದಿನಗಳಲ್ಲಿಯೂ ತೆರೆದಿರುವುದರಿಂದ ವಾರದಲ್ಲಿ ಯಾವ ದಿನದಲ್ಲಿಯೂ ಭೇಟಿ ಕೊಡಬಹುದಾಗಿದೆ.

ವಂಡರ್ ಲಾ

ವಂಡರ್ ಲಾ

ನೀವು ಎಂದಾದರೂ ಬೇಸಿಗೆಗೆ ಬಿಸಿಗೆ ಬಾಯ್ ಹೇಳಿರುವಿರ? ಇಲ್ಲವಾದಲ್ಲಿ ಈ ಸ್ಥಳವು ನಿಮ್ಮನ್ನು ಬೇಸಿಗೆಯ ಬೇಗೆಯಿಂದ ಮುಕ್ತಿ ಕೊಡುತ್ತದೆ. ನಾವು ಬೇಸಿಗೆ ಇಲ್ಲದೆ ವಾಟರ್ ಪಾರ್ಕ್ ಗಳ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಇಲ್ಲಿಯ ತಣ್ಣನೆಯ ಇಳಿಜಾರಿನಲ್ಲಿ ಮತ್ತು ಸಾಹಸಮಯ ಸವಾರಿಗಳ ಹಿತಕರವಾದ ಅನುಭವವನ್ನು ನಾವು ಅನುಭವಿಸಬೇಕೆಂದಾದರೆ ಅದು ತಾಪಮಾನ ಜಾಸ್ತಿಯಾಗಿರುವ ಬೇಸಿಗೆಯ ಸಮಯದಲ್ಲಿ ಮಾತ್ರ ಸಾಧ್ಯ . ವಂಡರ್ ಲಾ ವು ಹೈದರಾಬಾದಿನ ನೆಹರು ರಿಂಗ್ ರೋಡ್ ನ ಹೊರವಲಯದಲ್ಲಿದ್ದು, ನಿಮ್ಮ ವಾರಾಂತ್ಯವನ್ನು ಕೊಳಗಳು, ಸವಾರಿಗಳು ಮತ್ತು ಇಳಿಜಾರುಗಳ ಮಧ್ಯೆ ಕಳೆಯಲು ಒಂದು ಸೂಕ್ತವಾದ ಸ್ಥಳವೆನಿಸಿದೆ.

ಭಾರತದಲ್ಲಿಯ ಒಂದು ಅತ್ಯುತ್ತಮವಾದ ವಾಟರ್ ಪಾರ್ಕ್ ಎನಿಸಿರುವ ಇದು ಬೇಸಿಗೆಯನ್ನು ತಪ್ಪಿಸಿಕೊಳ್ಳಲು ಒಂದು ಸೂಕ್ತವಾದ ತಾಣವಾಗಿದೆ. ನೀವು ಕೆಲವು ಸಾಮಾನ್ಯವಾದ ವಾಟರ್ ಪಾರ್ಕ್ ಗಳಿಗಿಂತ ವಿಭಿನ್ನವಾದ ಅನುಭವವನ್ನು ಇಲ್ಲಿ ಪಡೆಯಬಹುದಾಗಿದೆ. ಕೆಲವು ಅಸಾಧಾರಣವಾದ ಇಳಿಜಾರುಗಳು ಮತ್ತು ಮೋಜಿನ ಚಟುವಟಿಕೆಗಳು ಈ ಸ್ಥಳವನ್ನು ವಿಶ್ರಾಂತಿ ಪಡೆಯಲು ಇನ್ನೂ ಅದ್ಭುತವಾಗಿಸಿದೆ.

ವೈಲ್ಡ್ ವಾಟರ್ಸ್

ವೈಲ್ಡ್ ವಾಟರ್ಸ್

ಹೈದರಾಬಾದಿನಲ್ಲಿರುವ ವೈಲ್ಡ್ ವಾಟರ್ಸ್ ಒಂದು ಹೊಸತಾಗಿ ಪ್ರಾರಂಭವಾದ ವಾಟರ್ ಪಾರ್ಕ್ ಆಗಿದೆ. ಮತ್ತು ಇದು ಕಡಿಮೆ ಅವಧಿಯಲ್ಲೇ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಇದರಲ್ಲಿ 50ಕ್ಕೂ ಹೆಚ್ಚಿನ ನೀರಿನ ಇಳಿಜಾರುಗಳನ್ನು ಹೊಂದಿರುವುದು ಮತ್ತು ಅತೀ ಸುಂದರವಾಗಿ ವ್ಯವಸ್ಥಿತವಾದ ಸೆಟ್ಟಿಂಗ್ ಇವೆಲ್ಲವೂ ಜನಪ್ರಿಯತೆಗೆ ಕಾರಣವಾಗಿದೆ. ವೈಲ್ಡ್ ವಾಟರ್ಸ್ ತನ್ನ ಸಂದರ್ಶಕರಿಗೆ ಪುನಶ್ಚೇತನಗೊಳಿಸುವ ಎಲ್ಲಾ ಅಂಶಗಳನ್ನೂ ತನ್ನಲ್ಲಿ ಹೊಂದಿದೆ.ಇದು ವಾರದಲ್ಲಿ ಎಲ್ಲಾ ದಿನಗಳಲ್ಲೂ ತೆರೆದಿರುವುದರಿಂದ ಪ್ರತೀ ತಿಂಗಳು ಸಾವಿರಾರು ಸ್ಥಳೀಯರನ್ನು ತನ್ನತ್ತ ಸೆಳೆಯುತ್ತದೆ. ನೀವು ಕೆಲವು ಹಳೇ ನೀರಿನ ಇಳಿಜಾರುಗಳಲ್ಲಿ ಮತ್ತು ಅದೇ ಹಳೇಯ ಚಟುವಟಿಕೆಗಳಿಂದ ಬೇಸತ್ತಿದ್ದರೆ, ವೈಲ್ಡ್ ವಾಟರ್ಸ್ ನಿಮ್ಮ ವಾರಾಂತ್ಯವನ್ನು ಅತ್ಯಂತ ಸುಂದರವಾಗಿ ಮತ್ತು ವಿಭಿನ್ನವಾಗಿ ಕಳೆಯಬಹುದಾದಂತಹ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X