Search
  • Follow NativePlanet
Share
» »ಪ್ರೀತಿಯ ಮತ್ತನ್ನು ನೆತ್ತರಕ್ಕೇರಿಸುವ ಪ್ರಣಯದ ಸ್ಥಳಗಳು

ಪ್ರೀತಿಯ ಮತ್ತನ್ನು ನೆತ್ತರಕ್ಕೇರಿಸುವ ಪ್ರಣಯದ ಸ್ಥಳಗಳು

ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಒಂದು ಜನಪ್ರೀಯ ನಾಣ್ಣುಡಿಯಂತೆ ನೈಜ ಮನುಷ್ಯನು ಯಾವಾಗಲೂ ಪ್ರೀತಿಗಾಗಿ ಪರಿತಪಿಸುತ್ತಿರುತ್ತಾನಂತೆ. ಅದಕ್ಕೆ ಪೂರಕವಾಗಿಯೆ ನಮ್ಮ ದೇಶದ ಅದೆಷ್ಟೊ ಮಹಾನುಭಾವರು, ಸಾಧು ಸಂತರು ಜನರನ್ನು ಕುರಿತು ಪ್ರೀತಿಗಿರುವ ಅಪಾರ ಶಕ್ತಿಯ ಬಗ್ಗೆ ತಿಳಿ ಹೇಳಿದ್ದಾರೆ.

ಇನ್ನೂ ಪ್ರೀತಿಯೆಂಬುದು ಪರಿಶುದ್ಧವಾದ ಭಾವವಾಗಿದ್ದು ಅಣ್ಣ, ತಂಗಿ, ಅಮ್ಮ, ತಂದೆ, ಮಡದಿ ಹೀಗೆ ವಿವಿಧ ರೂಪಗಳಲ್ಲಿ ನಾವದನ್ನು ಅನುಭವಿಸುತ್ತೇವೆ. ಇದರಲ್ಲೂ ವಿಶಿಷ್ಟವಾಗಿ ಕಂಡುಬರುವುದು ಶೃಂಗಾರಮಯ ಪ್ರೀತಿ. ನವ ವಿವಾಹಿತರ ಪಾಲಿಗೆ ಇದೊಂದು ಅಪೂರ್ವ ಭಾವವಾಗಿದ್ದು ಇದರಿಂದ ಜೊತೆಯಾಗಿ ಬದುಕುವ ಬಾಂಧವ್ಯ ವೃದ್ಧಿಯಾಗುತ್ತದೆ.

ವಿಶೇಷ ಲೇಖನ : ಭಾರತದ ಹತ್ತು ರೋಮಾಂಚಕ ಸ್ಥಳಗಳು

ಇನ್ನೂ ಕೆಲ ಸ್ಥಳಗಳ ವಾತಾವರಣ, ಪರಿಸರ, ಪ್ರಕೃತಿ ಸಂಪತ್ತು ಹೇಗಿರುತ್ತದೆಂದರೆ ಆ ಸ್ಥಳಗಳಿಗೆ ಭೇಟಿ ನೀಡಿದಾಕ್ಷಣ ಮನಸ್ಸು ಪ್ರಸನ್ನಗೊಂಡು ಮನದಾಳದಲ್ಲಿ ಅವಿತು ಕುಳಿತಿರುವ ಪ್ರೀತಿ ಭರ ಭರನೆ ಹೊರಬಂದು ಉಕ್ಕಿ ಹರಿಯುವಂತೆ ಮಾಡುತ್ತವೆ.

ವಿಶೇಷವಾಗಿ ಬಾಳ ಸಂಗಾತಿಯೊಡನೆ ಹೆಚ್ಚಾಗಿ ಬೆರೆತು, ಒತ್ತಡಗಳನ್ನು ಮರೆತು, ಒಟ್ಟಾಗಿ ಕಲೆತು ಪ್ರತಿ ಕ್ಷಣಗಳನ್ನು ಹಾಯಾಗಿ ಅನುಭವಿಸುವಂತೆ ಮಾಡುತ್ತವೆ ಆ ಕೆಲ ಸ್ಥಳಗಳ ಕೆಲ ವಿಶೇಷಣಗಳು. ಪ್ರಸ್ತುತ ಲೇಖನವು ಭಾರತದ ಯಾವೆಲ್ಲ ಸ್ಥಳಗಳು ಪ್ರೀತಿಯ ಅನುಬಂಧ ಹೆಚ್ಚಾಗುವಂತೆ ಮಾಡಲು ಪ್ರೇರೆಪಿಸುತ್ತವೆ ಎಂಬುದರ ಕುರಿತು ತಿಳಿಸುತ್ತದೆ.

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ನೈನಿತಾಲ್ : ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ನೈನಿತಾಲ್ ಪಟ್ಟಣವು ಒಂದು ಸುಂದರ ಹಾಗೂ ಅಷ್ಟೆ ರೋಮಾಂಚಕವಾದ ಸ್ಥಳವಾಗಿದೆ. 'ಭಾರತದ ಸರೋವರ ಜಲ್ಲೆ' ನೈನಿತಾಲ್ ನ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಅಲ್ಲಿನ ಸೌಂದರ್ಯವನ್ನು ಬಣ್ಣೀಸುವುದೇ ಅಸಾಧ್ಯ. ಹಲವಾರು ಪುರಾಣ ಕಥೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಪ್ರದೇಶ ಇಲ್ಲಿಗೆ ಬಂದ ಪ್ರವಾಸಿಗರನ್ನು ಮೈಮರೆಯುವಂತೆ ಮಾಡುತ್ತದೆ. ನೈನಾ ದೇವಿಯಿಂದ ತನ್ನ ಹೆಸರನ್ನು ಪಡೆದುಕೊಂಡಿರುವ ನೈನಿತಾಲ್ ಸಾಕಷ್ಟು ಸುಂದರ ಆಕರ್ಷಣೆಗಳನ್ನು ಹೊಂದಿರುವ ಗಿರಿಧಾಮ ಪಟ್ಟಣವಾಗಿದ್ದು ತೆರಳಲು ಉತ್ತಮವಾದ ರಸ್ತೆಗಳು ಹಾಗೂ ರೈಲಿನ ಸಂಪರ್ಕ ಹೊಂದಿದೆ. ಕಥಗೂಡಂ ರೈಲ್ವೆ ನಿಲ್ದಾಣದಿಂದ 35 ಕಿಲೋಮೀಟರ್ ದೂರದಲ್ಲಿದೆ ನೈನಿತಾಲ್. ಇದು ನೈನಿತಾಲ್ ಗೆ ಹತ್ತಿರದ ರೈಲು ಮಾರ್ಗವಾಗಿದೆ. ಈ ರೈಲು ನಿಲ್ದಾಣವು ಲಕ್ನೋ, ಆಗ್ರಾ ಮತ್ತು ಬರೇಲಿ ಮೊದಲಾದ ನಗರಗಳಿಗೆ ಉತ್ತಮವಾದ ಸಂಪರ್ಕ ಹೊಂದಿದೆ. ನೈನಿತಾಲ್ ತಲುಪಲು ಈ ನಿಲ್ದಾಣದಿಂದ ಬಾಡಿಗೆ ಟ್ಯಾಕ್ಸಿಗಳು ಲಭ್ಯವಿದೆ.

ಚಿತ್ರಕೃಪೆ: Sanjoy Ghosh

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಶಿಮ್ಲಾ : ಭಾರತದ ಬಹುತೇಕ ಎಲ್ಲ ಭಾಷೆಯ ಚಲನಚಿತ್ರಗಳು ಈ ಸುಂದರ ಸ್ಥಳದಲ್ಲಿ ಚಿತ್ರೀಕರಣಗೊಂಡಿವೆ. ಈ ಸ್ಥಳದ ವಿಶೇಷವೆ ಹಾಗೆ. ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ ನಗರವಾಗಿರುವ ಶಿಮ್ಲಾವು ಭಾರತೀಯ ಪ್ರವಾಸೋದ್ಯಮದ ಚುಂಬಕ ಶಕ್ತಿ. ಕಾಳಿ ಮಾತೆಯ ಅವತಾರವಾದ ಶ್ಯಮಲಾ ದೇವಿಯಿಂದ ತನ್ನ ಹೆಸರನ್ನು ಪಡೆದುಕೊಂಡಿರುವ ಶಿಮ್ಲಾವು ಭಾರತದ ಮೊದಲ ಹತ್ತು ನೆಚ್ಚಿನ ಪ್ರವಾಸಿ ಸ್ಥಳಗಳ ಪೈಕಿ ಒಂದಾಗಿದೆ. ಹಿತಕರವಾದ ವಾತಾವರಣ, ಅದ್ಭುತ ಪ್ರಕೃತಿ ಸಂಪತ್ತು, ತಾಜಾ ಗಾಳಿ, ಕಲ್ಮಶರಹಿತ ಪರಿಸರ, ಗಿರಿಧಾಮಗಳು, ಸದ್ದು ಗದ್ದಲಗಳಿಲ್ಲದ ಶಾಂತ ಜೀವನ ಎಲ್ಲವೂ ಸೇರಿ ನಿಮ್ಮಲ್ಲಿರುವ ಪ್ರೀತಿಯನ್ನು ಹೊರಬರುವಂತೆ ಮಾಡಲು ಪ್ರೇರೆಪಿಸುತ್ತವೆ. ಡಿಸೆಂಬರ್ ಅಥವಾ ಜನವರಿ ಗಳಲ್ಲಿ ಹಿಮಪಾತವಿದ್ದು ಪ್ರದೇಶವನ್ನು ಒಂದು ಮಾಯಾ ಲೋಕವನ್ನಾಗಿ ಮಾಡಿ ಬಿಡುತ್ತದೆ. ಇಲ್ಲಿ ತಂಗಲು ಸಾಕಷ್ಟು ಹೋಟೆಲ್, ರಿಸಾರ್ಟುಗಳಿದ್ದು ನವದಂಪತಿಗಳು ಸೇರಿದಂತೆ ಎಲ್ಲರೂ ಹಾಯಾಗಿ ತಂಗಬಹುದು. ರಾ.ಹೆ. ಸಂಖ್ಯೆ 22 ಶಿಮ್ಲಾದಲ್ಲಿ ಹಾದು ಹೋಗಿದ್ದು ಇದು ಶಿಮ್ಲಾವನ್ನು ಚಂಡೀಗಡ್, ಕಲ್ಕಾ, ಪಟಿಯಾಲಾ ಹಾಗೂ ದೆಹಲಿಗಳೊಂದಿಗೆ ಸಂಪರ್ಕಿಸುತ್ತದೆ. ಶಿಮ್ಲಾ ದೆಹಲಿಯಿಂದ 380 ಹಾಗೂ ಚಂಡೀಗಡ್ ನಿಂದ 120 ಕಿ.ಮೀ ಗಳಷ್ಟು ದೂರವಿದೆ.

ಚಿತ್ರಕೃಪೆ: Rohit Chhiber

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮನಾಲಿ : ಹಿಮಾಚಲ ಪ್ರದೇಶ ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಹೊಂದಿರುವ ಮನಾಲಿಯು ರಾಜ್ಯದ ರಾಜಧಾನಿ ಶಿಮ್ಲಾದಿಂದ 250 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಕುಲ್ಲು ಜಿಲ್ಲೆಯ ಒಂದು ಭಾಗವಾಗಿದೆ. ಅದ್ಭುತವಾದ ನಿಸರ್ಗ ಸೌಂದರ್ಯ ಈ ತಾಣವನ್ನು ಇಷ್ಟೊಂದು ಜನಪ್ರಿಯವಾಗಿಸಿದೆ. ಹೂವಿನ ತೋಟ, ಹಿಮಾಚ್ಛಾದಿತ ಬೆಟ್ಟಗಳು, ಕೆಂಪು ಹಾಗೂ ಹಸಿರು ಸೇಬು ಹಣ್ಣಿನ ತೋಟಗಳಿಗಾಗಿ ಹೆಚ್ಚು ಪ್ರಸಿದ್ಧಿ ಹೊಂದಿದೆ ಮನಾಲಿ. ಮನಾಲಿಗೆ ಪ್ರವಾಸಕ್ಕೆ ತೆರಳಿದವರು ಇಲ್ಲಿನ ಗ್ರೇಟ್‌ ಹಿಮಾಲಯನ್‌ ನ್ಯಾಷನಲ್‌ ಪಾರ್ಕ್, ಹಡಿಂಬಾ ದೇಗುಲ, ಸೋಲಾಂಗ್‌ ಕಣಿವೆ, ಸುಂದರ ಕೆರೆಗಳಾದ ಬಿಯಸ್‌ ಕುಂಡ ಹಾಗೂ ರೊಹತಂಗ್‌ ಪಾಸ್‌ ವಿಶೇಷ ಗಮನ ಸೆಳೆಯುವಂತಹ ತಾಣಗಳಿಗೆ ಭೇಟಿ ನೀಡಲೇಬೇಕು.

ಚಿತ್ರಕೃಪೆ: Prashant Ram

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಲೇಹ್ : ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಲೇಹ್ ನಗರ ಕಾರಾಕೋರಂ ಮತ್ತು ಹಿಮಾಲಯ ಪರ್ವತಗಳ ಸಾಲಿನ ನಡುವೆ ಇಂಡಸ್ ನದಿಯ ದಂಡೆಯ ಮೇಲಿದೆ. ವರ್ಷಪೂರ್ತಿ ಇಲ್ಲಿನ ಸೌಂದರ್ಯ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ದಂಪತಿಗಳಿಗಂತೂ ಇದು ರೋಮಾಂಚನವನ್ನುಂಟು ಮಾಡುವಂತಹ ಚುಂಬಕ ಶಕ್ತಿಯುಳ್ಳ ಸ್ಥಳವಾಗಿದೆ. ಲೇಹ್ ನಗರದ ತುಂಬೆಲ್ಲ ಪುರಾತನ ಕಾಲದ ಬೌದ್ಧ ಸ್ಮಾರಕಗಳು ಹಾಗೂ ಮಸೀದಿಗಳನ್ನು ಕಾಣಬಹುದಾಗಿದ್ದು ಇತಿಹಾಸಪ್ರಿಯ ಪ್ರವಾಸಿಗರಿಗೆ ಔತಣ ನೀಡುತ್ತದೆ. ಲೇಹ್ ನಿಂದ 700 ಕಿಲೋ ದೂರವಿರುವ ಶ್ರೀನಗರಕ್ಕೆ ಜಮ್ಮು ಕಾಶ್ಮೀರ ಸಾರಿಗೆ ಕಾರ್ಪೋರೇಷನ್ ವತಿಯಿಂದ ನಿರಂತರ ಬಸ್ ಸೌಲಭ್ಯವಿದೆ. ಮನಾಲಿಯಿಂದ ಲೇಹ್ ವರೆಗೆ ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯಿಂದಲೂ ಬಸ್ ಸೌಲಭ್ಯಗಳಿವೆ. ಲೇಹ್ ನಿಂದ ಮನಾಲಿಯವರೆಗೆ ರಸ್ತೆಯ ಮೂಲಕ ಪ್ರಯಾಣಿಸಲು 20 ತಾಸು ಬೇಕಾಗುತ್ತದೆ.

ಚಿತ್ರಕೃಪೆ: James Mollison

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ರಿಶಿಕೇಶ್ : ಧಾರ್ಮಿಕವಾಗಿ ಪ್ರಮುಖವಾಗಿದ್ದರೂ ಸಹ ಇಲ್ಲಿನ ತಾಜಾ ಪರಿಸರ ಹಾಗೂ ಮನಮೋಹಕ ನಿಸರ್ಗ ಸೌಂದರ್ಯ ಎಂತಹ ದಂಪತಿಗಳನ್ನೂ ಒಂದು ಕ್ಷಣ ಮಂತ್ರ ಮುಗ್ಧಗೊಳ್ಳುವಂತೆ ಮಾಡುತ್ತದೆ. ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ರಿಶಿಕೇಶವು ಗಂಗಾ ನದಿಯ ತಟದಲ್ಲಿ ನೆಲೆಸಿದ್ದು ಪ್ರತಿ ವರ್ಷವು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಸ್ಥಳ ಹೆಚ್ಚು ಪ್ರಸಿದ್ದಿ ಪಡೆದಿರುವುದು ಪುರಾತನವಾದ ದೇವಸ್ಥಾನ ಹಾಗೂ ಆಶ್ರಮಗಳಿಂದ. ಹಲವಾರು ಯೋಗ ಮತ್ತು ಧ್ಯಾನ ಕೇಂದ್ರಗಳು ಇಲ್ಲಿದ್ದು ಅನುಭವಿ ಯೋಗ ಗುರುಗಳು ಇಲ್ಲಿ ತರಬೇತಿ ನೀಡುತ್ತಾರೆ. ರಿಷಿಕೇಶ್ ತಲುಪಲು, ವಿಮಾನದ ಮೂಲಕ ಪ್ರಯಾಣಿಸುವವರು 18 ಕಿಲೋ ಮೀಟರ್ ದೂರದ ಡೆಹ್ರಾಡೂನ್ ನ ಜಾಲಿ ಗ್ರ್ಯಾಂಟ್ ವಿಮಾನನಿಲ್ದಾಣದಿಂದ ಪ್ರಯಾಣಿಸಬೇಕು. ರಿಷಿಕೇಶದಲ್ಲಿಯೇ ರೈಲು ನಿಲ್ದಾಣವಿದ್ದು ಇಲ್ಲಿಂದ ದೆಹಲಿ, ಮುಂಬೈ, ಕೊಟದ್ವಾರ್ ಮತ್ತು ಡೆಹ್ರಾಡೂನ್ ಗೆ ಸಂಪರ್ಕ ಕಲ್ಪಿಸುತ್ತದೆ. ದೆಹಲಿ, ಡೆಹ್ರಾಡೂನ್ ಮತ್ತು ಹರಿದ್ವಾರ್ ದಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಗಳಿವೆ.

ಚಿತ್ರಕೃಪೆ: timeflicks

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಗುವಾಹಟಿ : ಗುವಾಹಾಟಿಯು ಅಸ್ಸಾ೦ನ ಒ೦ದು ಅತೀ ದೊಡ್ಡ ನಗರವಾಗಿದ್ದು, ಇದು ದೇಶದ ಈಶಾನ್ಯ ಭಾಗದಲ್ಲಿದೆ. ಬ್ರಹ್ಮಪುತ್ರ ನದಿ ದ೦ಡೆಯ ಮೇಲಿರುವ ಗುವಾಹಾಟಿಯು, ಬರೀ ಅಸ್ಸಾ೦ ರಾಜ್ಯ ಮಾತ್ರವಲ್ಲದೇ, ಪ್ರಾದೇಶಿಕ ನೆಲೆಯಲ್ಲಿಯೂ ಸಹ ವೈವಿಧ್ಯತೆಯ ನೈಜ ಪ್ರತಿಬಿ೦ಬವಾಗಿದ್ದು, ಮ೦ತ್ರಮುಗ್ಧಗೊಳಿಸುವ ನಗರವಾಗಿದೆ. ಸೂಕ್ಷ್ಮಸಂವೇದಿಯಾದ ಪ್ರವಾಸಿಗರಿಗೆ, ಗುವಾಹಾಟಿ ಪ್ರವಾಸೋದ್ಯಮವು ವಿಪುಲವಾದ ಪ್ರವಾಸೀ ತಾಣಗಳನ್ನು ಒದಗಿಸುತ್ತದೆ. ಕಾಮಾಕ್ಯ ದೇವಳದ ಸಂದರ್ಶನವನ್ನು ಮಾಡದೇ ಇದ್ದಲ್ಲಿ, ಗುವಾಹಾಟಿಯ ನಿಮ್ಮ ಪ್ರವಾಸವು ಖಂಡಿತವಾಗಿಯೂ ಕೂಡ ಪರಿಪೂರ್ಣವಾಗುವುದಿಲ್ಲ. ಪ್ರವಾಸಿಗರು ಅತೀ ಉದ್ದವಾದ, ಸರಿಯಾ ಘಾಟ್ (Sariaghat) ಸೇತುವೆಯ ರಮ್ಯ ನೋಟವನ್ನು, ಬ್ರಹ್ಮಪುತ್ರ ನದಿಯ ದಡದ ಮೇಲೆ ನಿಂತು ಸೆರೆಹಿಡಿಯಬಹುದು. ಗುವಾಹಾಟಿಯು ದೇಶದ ಇತರ ಭಾಗಗಳೊಂದಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ಭಾರತದ ಈಶಾನ್ಯ ಭಾಗದ ಅತೀ ದೊಡ್ಡ ರೈಲ್ವೆ ನಿಲ್ದಾಣವನ್ನು ಇದು ಹೊಂದಿದ್ದು, ಲೋಕಪ್ರಿಯ ಗೋಪಿನಾಥ್ ಬೋರ್ಡೊಲೋ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಪ್ರಮುಖ ವಿಮಾನ ನಿಲ್ದಾಣವಾಗಿದೆ. ಹೆದ್ದಾರಿಗಳ ಮೂಲಕವೂ ಸಹ ಗುವಾಹಾಟಿಯು ದೇಶದ ಇತರೆ ಭಾಗಗಳೊಂದಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Kinshuk Kashyap

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಶಿಲ್ಲಾಂಗ್ : ಮೇಘಾಲಯ ರಾಜ್ಯದ ರಾಜಧಾನಿ ನಗರವಾಗಿರುವ ಶಿಲ್ಲಾಂಗ್ ಪೂರ್ವ ಭಾರತದ "ಸ್ಕಾಟ್ ಲ್ಯಾಂಡ್" ಎಂದೆ ಜನಜನಿತವಾಗಿದೆ. ದಟ್ಟವಾದ ಹಸಿರು, ಸುಂದರ ಭೂದೃಶ್ಯಾವಳಿಗಳು, ನಯನ ಮನೋಹರವಾದ ಪ್ರಕೃತಿ ಸಂಪತ್ತು, ಅತ್ಯುನ್ನತ ಪರ್ವತಶ್ರೇಣಿಗಳನ್ನು ಮುತ್ತಿಕೊಂಡಿರುವ ಮೋಡಗಳು, ಕಂಪನ್ನು ಸೂಸುವ ಹೂಗಳು, ಯಾವುದೇ ಗ್ರಂಥದಲ್ಲಿ ಅಲಭ್ಯವಿರಬಹುದಾದ, ಉಲ್ಲೇಖಗೊಂಡಿರದ ತಾಣಗಳು, ಸ್ನೇಹಪರ ಜನರು, ಆತ್ಮೀಯವಾದ ಆತಿಥ್ಯ ನೀಡುವ ವಸತಿಗೃಹಗಳು, ಇವೆಲ್ಲವೂ ಕೂಡ ಶಿಲ್ಲಾಂಗ್ ನ ವೈಶಿಷ್ಟ್ಯಗಳಾಗಿದ್ದು ಸಂಸಾರದ ಬಂಡಿ ಓಡಿಸುತ್ತಿರುವ ಗಂಡು ಹೆಣ್ಣಿನ ನಡುವಿರುವ ಪ್ರೀತಿಯ ಬೆಸುಗೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ತಮ್ಮದೆ ಆದ ಕೊಡುಗೆ ನೀಡುತ್ತವೆ.

ಚಿತ್ರಕೃಪೆ: Harsha Vardhan Durugadda

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ದಾರ್ಜೀಲಿಂಗ್ : ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಂಡುಬರುವ ಮಹಾಭಾರತ ಪರ್ವತ ಶ್ರೇಣಿ ಅಥವಾ ಲೆಸ್ಸರ್ ಹಿಮಾಲಯದಲ್ಲಿ ಸ್ಥಿತವಿರುವ ದಾರ್ಜೀಲಿಂಗ್ ಎಂಬ ಮುದ್ದಾದ ಪುಟಾಣಿ ಪ್ರದೇಶದಲ್ಲಿ ಸುವಾಸನೆಯುಕ್ತ ಬಿಸಿ ಬಿಸಿ ಚಹಾ ಕುಡಿದರೆ...ಸಾಕು ಒಂದೆ ಒಂದು ಕ್ಷಣದಲ್ಲಿ ನಿಮ್ಮ ಮನದ ಎಲ್ಲ ಒತ್ತಡಗಳು ಮಂಗಮಾಯ! ಹಾಗೂ ಪ್ರೀತಿಯ ಅಲೆಗಳಿಂದ ಪರಿಸರ ಗಾನಮಯ! ಹೇಗೆ ಅಂತಿರಾ? ಹೌದು ಇಲ್ಲಿ ಬೆಳೆಯಲಾಗುವ ಚಹಾ ಗಿಡಗಳ ಮಹಿಮೆಯೆ ಹಾಗೆ. ಅಷ್ಟೆ ಅಲ್ಲ ಈ ಗಿರಿಧಾಮದಲ್ಲಿ ಕೂ ಎಂದು ಕೂಗುತ್ತ, ಚುಕು ಬುಕು ಎಂದು ಚಲಿಸುವ ದಾರ್ಜೀಲಿಂಗ್ ಹಿಮಾಲಯನ್ ರೈಲು ಸಹ ಒಂದು ವಿನೂತನವಾದ ಆನಂದಮಯ ಅನುಭವವನ್ನು ಕರುಣಿಸುತ್ತದೆ. ಈ ಗಿರಿಧಾಮವನ್ನು ಸಂಚಾರದ ಪ್ರಮುಖ ಮೂರು ಮಾಧ್ಯಮಗಳಾದ ವಿಮಾನ, ರೈಲು ಹಾಗು ರಸ್ತೆ ಸಾರಿಗೆಯ ಮೂಲಕ ತಲುಪಬಹುದಾಗಿದೆ. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಬಗ್ಡೋಗ್ರಾ, ಇದು ಸುಮಾರು 88 ಕಿ.ಮೀ ದೂರದಲ್ಲಿದೆ. ರೈಲಿನ ಮೂಲಕ ಇಲ್ಲಿಗೆ ತೆರಳಬೇಕಾಗಿದ್ದರೆ ನಿವ್ ಜಲ್ಪೈಗುರಿ ರೈಲು ನಿಲ್ದಾಣಕ್ಕೆ ಬಂದಿಳಿಯಬೇಕು. ಇದು ಸಹ ದಾರ್ಜೀಲಿಂಗ್ ನಿಂದ ಸುಮಾರು 85 ಕಿ.ಮೀಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: Abhishek Kumar

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಖಜ್ಜಿಯಾರ್ : ಭಾರತದ ಮಿನಿ ಸ್ವಿಟ್ಜರ್ ಲ್ಯಾಂಡ್ ಗೆ ಸ್ವಾಗತ. ಹೌದು ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಖಜ್ಜಿಯಾರ್ ಗಿರಿಧಾಮವನ್ನು ಪ್ರೀತಿಯಿಂದ ಹೀಗೆ ಸಂಭೋದಿಸಲಾಗುತ್ತದೆ. ಇಲ್ಲಿನ ಅಪೂರ್ವ ಪ್ರಕೃತಿ ಸಂಪತ್ತು, ಮನಸೆಳೆಯುವ ಭೂದೃಶ್ಯಾವಳಿಗಳು ಯುರೋಪ್ ಖಂಡದ ಗುರುತರ ಪ್ರವಾಸಿ ಆಕರ್ಷಣೆಯಾದ ಸ್ವಿಟ್ಜರ್ ಲ್ಯಾಂಡ್ ರೀತಿಯಲ್ಲೆ ಕಂಡುಬರುವುದು ಇದರ ವಿಶೇಷ. ನೀವು ಹಿಮಾಚಲ ಪ್ರದೇಶದ ಡಾಲ್ ಹೌಸಿ ತಾಣಕ್ಕೆ ಭೇಟಿ ನೀಡಿದಾಗ ಖಜ್ಜಿಯಾರ್ ಗೆ ಭೇಟಿ ನೀಡಲು ಮರೆಯದಿರಿ.

ಚಿತ್ರಕೃಪೆ: balu

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಉದಯಪುರ : ರಾಜಸ್ಥಾನ ರಾಜ್ಯದಲ್ಲಿರುವ ಉದಯಪುರವನ್ನು ಮಾರ್ಮಿಕವಾಗಿ ಸರೋವರಗಳ ನಗರ ಎಂದು ಕರೆಯಲಾಗಿದೆ. ತನ್ನಲ್ಲಿರುವ ಸುಂದರ ಸರೋವರ ಹಾಗೂ ಕೆರೆಯ ಮಧ್ಯದ ಅರಮನೆ ಹಾಗೂ ಇತರೆ ಅದ್ಭುತ ರಾಜಾರಮನೆಗಳು, ರಚನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಕೇವಲ ಭಾರತ ಮಾತ್ರವಲ್ಲದೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ತಾಣ ಇದಾಗಿದ್ದು ಹೃದಯಕ್ಕೆ ಬಹು ಹತ್ತಿರವಾದ ಪ್ರವಾಸಿ ಆಕರ್ಷಣೆಯಾಗಿದೆ. ಉದಯಪುರವು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಹಾಗೂ ಭಾರತದ ಇತರೆ ನಗರಗಳೊಂದಿಗೆ ಉತ್ತಮ ರಸ್ತೆ ಹಾಗೂ ರೈಲು ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Henrik Bennetsen

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮೌಂಟ್ ಅಬು : ರಾಜಸ್ಥಾನ ರಾಜ್ಯದಲ್ಲಿರುವ ಏಕೈಕ ಗಿರಿಧಾಮ ಪ್ರದೇಶವಾಗಿದೆ ಈ ಸುಂದರ ಸ್ಥಳ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ರಾಜಸ್ಥಾನ ರಾಜ್ಯವು ಬಹುತೇಕವಾಗಿ ಮರಭೂಮಿ ಪ್ರದೇಶಗಳಿಂದ ಕೂಡಿರುವ ಭೂಮಿ. ಗಿಡ ಮರಗಳು ಅಪರೂಪವೆಂಬಂತಿರುವ ಈ ಉಷ್ಣಮಯ ರಾಜ್ಯದಲ್ಲಿ ಹಿತಕರವಾದ ವಾತಾವರಣ ಹೊಂದಿದ್ದು, ಗಿರಿ ಶಿಖರಗಳಿಂದ ಶೋಭಾಯಮಾನವಾಗಿದ್ದು, ದಟ್ಟ ಹಸಿರಿನ ಹಾಸಿಗೆಯಿಂದ ಸಿಂಗರಿಸಲ್ಪಟ್ಟ, ನದಿ, ತೊರೆ, ಜಲಪಾತಗಳಿಂದ ಮೈತುಂಬಿಕೊಂಡ ಸ್ಥಳವಿದೆ ಎಂದರೆ ಅಚ್ಚರಿಯಾಗದೆ ಇರಲಾರದು. ಮೌಂಟ್ ಅಬುವನ್ನು ಪ್ರೀತಿಯಿಂದ "ಮರಳುಗಾಡಿನ ಓಯಾಸಿಸ್" ಎಂತಲೂ ಸಹ ಕರೆಯುವದುಂಟು. ರಾಜಸ್ಥಾನದಲ್ಲಿ ಕಂಡುಬರುವ ಸುಂದರವಾದ ಗಿರಿಶಿಖರಗಳಿಂದ ಕಂಗೊಳಿಸುವ ಈ ಸ್ಥಳವು ರಾಜ್ಯದ ಏಕೈಕ ಸುಂದರ ಗಿರಿಧಾಮ ಪ್ರದೇಶ ಎಂಬ ಖ್ಯಾತಿಗೂ ಸಹ ಪಾತ್ರವಾಗಿದೆ. ಪುರಾಣ, ಪುಣ್ಯ ಕಥೆಗಳಲ್ಲೂ ಸಹ ಈ ಸ್ಥಳದ ಕುರಿತು ಉಲ್ಲೇಖಿಸಲಾಗಿದ್ದು, ಇದನ್ನು ಅರ್ಬುದಾರಣ್ಯ ಎಂಬ ಹೆಸರಿನಿಂದ ಕರೆಯಲಾಗಿದೆ.

ಚಿತ್ರಕೃಪೆ: Tetyana Pryymak

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಡಾಲ್ ಹೌಸಿ : ಹಿಮಾಚಲ ಪ್ರದೇಶ ರಾಜ್ಯದ ದೌಲಾಧರ್‌ ಭಾಗದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಡಾಲ್‌ಹೌಸಿ. ಅಲ್ಲದೇ ಈ ಪ್ರದೇಶವು ಅತ್ಯಂತ ಜನಪ್ರಿಯ ಛಂಬಲ್‌ ಅರಣ್ಯ ಪ್ರದೇಶದ ಪ್ರವೇಶದ್ವಾರ ಕೂಡ ಹೌದು. ಡಾಲಹೌಸಿಯ ವಾತಾವರಣ ವರ್ಷದ ಎಲ್ಲಾ ಸಮಯದಲ್ಲೂ ಸಹನೀಯವಾಗಿರುತ್ತದೆ. ಡಾಲ್‌ಹೌಸಿಯು ದೇಶದ ರಾಜಧಾನಿ ದಿಲ್ಲಿಯಿಂದ 563 ಕಿ.ಮೀ. ದೂರದಲ್ಲಿದೆ. ಅಮೃತಸರದಿಂದ 191 ಕಿ.ಮೀ., ಛಂಬ್ರಾದಿಂದ 56 ಕಿ.ಮೀ. ಹಾಗೂ ಚಂಡಿಘಡದಿಂದ 300 ಕಿ.ಮೀ. ದೂರದಲ್ಲಿದೆ. ಡಾಲ್‌ಹೌಸಿಗೆ ಸಮೀಪದ ವಿಮಾನ ನಿಲ್ದಾಣ ಪಠಾನ್‌ಕೋಟ್‌ ಆಗಿದೆ. ಇಲ್ಲಿಂದ 80 ಕಿ.ಮೀ. ದೂರದಲ್ಲಿದೆ.

ಚಿತ್ರಕೃಪೆ: Rachitplah27

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಖಜುರಾಹೊ : ಮಿಥುನ ಶಿಲ್ಪಕಲೆಗಳ ಬೀಡು, ಕಾಮಸೂತ್ರದ ನಾಡು ಎಂದೆ ಹೇಳಬಹುದಾಗಿದೆ ಮಧ್ಯ ಪ್ರದೇಶದ ಖಜುರಾಹೊ ತಾಣವನ್ನು ಇಲ್ಲಿನ ಶೃಂಗಾರ ರಸವನ್ನು ಉಕ್ಕಿಸುವ, ರತಿ ಸಮಾಗಮದ ಶಿಲ್ಪಕಲೆಗಳು ವಿಶ್ವ ವಿಖ್ಯಾತವಾಗಿದೆ. ನವ ದಂಪತಿಗಳೂ ಸಹ ನಾಚಿ ನೀರಾಗುವಂತಹ ಶಿಲ್ಪ ಕಲೆಗಳು, ಅಲ್ಲದೆ ಅದ್ಭುತವಾದ ಕಲೆಯನ್ನು ಅನಾವರಣಗೊಳಿಸುವ ದೇವಾಲಯ ರಚನೆಗಳು ಖಜುರಾಹೊದ ವೈಶಿಷ್ಟ್ಯ. ಖಜುರಾಹೊದ ಶೃಂಗಾರ ಶಿಲ್ಪ ಕಲೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Dennis Jarvis

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ತವಾಂಗ್ : ತವಾಂಗ್, ಅರುಣಾಚಲಪ್ರದೇಶದ ಪಶ್ಚಿಮದಲ್ಲಿರುವ ಈ ಜಿಲ್ಲೆಗೆ ಪ್ರವಾಸಕ್ಕೆ ತೆರಳುವದೇ ಒಂದು ಅವರ್ಣೀಯ ಅನುಭವ. ತವಾಂಗ್ ನದ್ದು ಸುಕೋಮಲ ಪರಿಸರ, ಚಿತ್ರ ಸದೃಶ ಸೌಂದರ್ಯ. ಬೆಳಗಾಗುತ್ತಿದ್ದಂತೆ ಬಾಲರವಿಯ ಚೊಚ್ಚಲ ಕಿರಣಗಳು ಹಿಮಾಚ್ಛಾದಿತ ಶಿಖರಗಳಿಗೆ ಮುತ್ತಿಕ್ಕುತ್ತಿರುವಂತೆ ಪ್ರದೇಶದ ಅದ್ಭುತ ಸೌಂದರ್ಯದ ಕಿಟಕಿಯು ಅನಾವರಣಗೊಳ್ಳುತ್ತದೆ. ಗುಲಾಬಿ ಪುಷ್ಪಗಳು ಕಿರುನಗೆ ಬೀರುತ್ತ ಸ್ವಾಗತಿಸುತ್ತವಂತೆ ತೋರುತ್ತವೆ. ರವಿಯ ಕೊನೆಯ ಕಿರಣದೊಂದಿಗೆ ಆಗಸದ ತಟ್ಟೆ ಅಸಂಖ್ಯ ತಾರೆಗಳಿಂದ ತುಂಬಿ ಪ್ರೀತಿಯು ಅವಿಸ್ಮರಣೀಯವಾಗಿ ಮನದಾಳದಲ್ಲಿ ಉಕ್ಕುವಂತೆ ಮಾಡುತ್ತದೆ.

ಚಿತ್ರಕೃಪೆ: Giridhar Appaji Nag Y

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಔಲಿ : ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯದಲ್ಲಿರುವ ಔಲಿ ಗಿರಿಧಾಮವು ಪ್ರಖ್ಯಾತ ಧಾರ್ಮಿಕ ಕೇಂದ್ರ ಬದರಿನಾಥಕ್ಕೆ ಹೋಗುವ ಮಾರ್ಗದಲ್ಲಿ ನೆಲೆಸಿದೆ. ಹಿಮಜಾರು ಬಂಡಿ ಆಟಗಳಿಗೆ (ಸ್ಕೀಯಿಂಗ್) ಜನಪ್ರಿಯವಾಗಿರುವ ಔಲಿ ನವದಂಪತಿಗಳು ತನ್ಮಯವಾಗಿ ವಿನೋದ ಕ್ರೀಡೆಗಳನ್ನು ಸವಿಯುವಂತೆ ಪ್ರೇರೆಪಿಸುತ್ತದೆ. ಔಲಿ ಗಿರಿಧಾಮ ಪ್ರದೇಶವು ತನ್ನ ಸುತ್ತಲೂ ಓಕ್ ಮರಗಳ ಕಾಡಿನಿಂದ ಕೂಡಿದೆ. ಅಷ್ಟೆ ಅಲ್ಲ ಪ್ರದೇಶವು ಹತ್ತಿರದಲ್ಲೆ ಗೋಚರಿಸುವ ಹಿಮಾಲಯದ ಅದ್ಭುತ, ರೋಮಾಂಚನಗೊಳಿಸುವಂತಹ ದೃಶ್ಯಾವಳಿಗಳನ್ನು ಕರುಣಿಸುತ್ತದೆ. ಔಲಿಯು ತನ್ನಲ್ಲಿರುವ ಕೇಬಲ್ ಕಾರ್ ಗೂ ಸಹ ಪ್ರಖ್ಯಾತಿ ಗಳಿಸಿದೆ. ನಾಲ್ಕು ಕಿ.ಮೀ ಉದ್ದವಿರುವ ಈ ಕೇಬಲ್ ಕಾರ್ ಏಷಿಯಾ ಖಂಡದಲ್ಲೆ ಉದ್ದವಾಗಿದೆ. ಇದರಲ್ಲಿ ಕುಳಿತು ಸಾಗುವಾಗ ರೋಮಾಂಚನ ಉಂಟಾಗುವುದು ಖಂಡಿತ ಹಾಗೂ ಜೊತೆ ಜೊತೆಗೆ ಪ್ರದೇಶದ ಅವಿಸ್ಮರಣೀಯ ಸೌಂದರ್ಯವನ್ನೂ ಸಹ ಆಸ್ವಾದಿಸಬಹುದು. ಇದಕ್ಕೆ ಗೊಂಡೋಲಾ ಸವಾರಿ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Michael Scalet

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಗುಲ್ಮಾರ್ಗ್ : "ಹೂವುಗಳ ಹಾದಿ" ಎಂಬರ್ಥ ಕೊಡುವ ಗುಲ್ಮಾರ್ಗ್ ಪಟ್ಟಣವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಸುತ್ತ ಮುತ್ತಲಿನ ಪರಿಸರದ ಪ್ರತಿಯೊಂದು ಭಾಗಗಳು, ವಸ್ತುಗಳು, ಗಿಡ ಮರಗಳು, ಭೂಮಿ, ಮಣ್ಣು ಇತ್ಯಾದಿ ಹಿಮದಿಂದ ಆವರಿಸಿರುವುದನ್ನು ನೋಡ ಬೇಕೆಂದು ಯುವ ಹೃದಯಗಳ ಮನ ಬಯಸಿದರೆ ನೇರವಾಗಿ ಗುಲ್ಮಾರ್ಗ್ ಗೆ ಭೇಟಿ ನೀಡಬಹುದು. ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಗುಲ್ಮಾರ್ಗ್ ಅನ್ನು ಸುಲಭವಗಿ ತಲುಪಬಹುದಾಗಿದ್ದು ಬಸ್ಸು ಅಥವ ಕಾರಿನಲ್ಲಿ ಪ್ರಯಾಣಿಸಿದಾಗ ಕೇವಲ ಎರಡು ಘಂಟೆಗಳಷ್ಟು ಪ್ರಯಾಣಾವಧಿಯನ್ನು ತೆಗೆದುಕೊಳ್ಳುತ್ತದೆ.

ಚಿತ್ರಕೃಪೆ: Colin Tsoi

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಶ್ರೀನಗರ : ಭೂಮಿಯ ಮೇಲಿನ ಸ್ವರ್ಗ ಮತ್ತು ಪೂರ್ವದ ವೆನೀಸ್ ಎಂದು ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಶ್ರೀನಗರವು ಸುಂದರವಾದ ಕಾಶ್ಮೀರ ಕಣಿವೆಯಲ್ಲಿದೆ. ಝೀಲಮ್ ನದಿಯ ದಡದಲ್ಲಿ ಇರುವ ಈ ನಗರ ಅಲ್ಲಿನ ಸುಂದರವಾದ ಸರೋವರಗಳು, ಹೌಸ್ ಬೋಟ್ ಗಳು ಮತ್ತು ಹಲವಾರು ಮೊಘಲ್ ಉದ್ಯಾನವನಗಳಿಗೆ ಪ್ರಸಿದ್ಧವಾಗಿದೆ. ಇದೊಂದು ಪ್ರವಾಸಿ ವಿಶೇಷ ಸ್ಥಳವಾಗಿದ್ದು ಯುವ ಜೋಡಿಗಳೆ ಇರಲಿ ಅಥವಾ ಮಧ್ಯ ವಯಸ್ಕರೆ ಇರಲಿ ನಿರಂತರವಾಗಿ ಪ್ರೀತಿಯು ಚಿಗುರೊಡೆಯುವಂತೆ ಮಾಡುತ್ತದೆ ಇಲ್ಲಿನ ಸುಂದರ ಪರಿಸರ.

ಚಿತ್ರಕೃಪೆ: Colin Tsoi

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ವಿಲ್ಸನ್ ಹಿಲ್ : ಗುಜರಾತ್ ರಾಜ್ಯದ ಸೂರತ್ ಪಟ್ಟಣಕ್ಕೆ ಹತ್ತಿರದಲ್ಲಿರುವ ವಿಲ್ಸನ್ ಹಿಲ್ಸ್ ಅಥವಾ ವಿಲ್ಸನ್ ಬೆಟ್ಟಗಳು ಒಂದು ನಯನ ಮನೋಹರವಾದ ಗಿರಿಧಾಮ ಪ್ರದೇಶವಾಗಿದೆ. ಪಂಗಾರ್ಬರಿ ವನ್ಯಜೀವಿಧಾಮದ ಬಳಿಯ ದಟ್ಟವಾದ ಅರಣ್ಯ ಪ್ರದೇಶದ ವಲಯದಲ್ಲಿ ಈ ಸುಂದರ ಗಿರಿಧಾಮವು ಸ್ಥಿತವಿದೆ. ಸಮುದ್ರದ ಅಣುಕು ನೋಟವನ್ನು ಕಾಣಬಹುದಾದ ಪ್ರಪಂಚದ ಕೆಲವೆ ಕೆಲವು ಗಿರಿಧಾಮಗಳ ಪೈಕಿ ಈ ಗಿರಿಧಾಮವೂ ಸಹ ಒಂದಾಗಿರುವುದು ಗುಜರಾತಿನ ವಿಶೇಷ. ಸೂರತ್ ನಿಂದ 130 ಕಿ.ಮೀ ಹಾಗೂ ಧರಂಪುರ್ ನಿಂದ 29 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಗಿರಿಧಾಮವು ಉತ್ತಮ ರಸ್ತೆಯ ಸಂಪರ್ಕವನ್ನು ಹೊಂದಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Asim Patel

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ನಾಶಿಕ್ : ಮಹಾರಾಷ್ಟ್ರ ರಾಜ್ಯದಲ್ಲಿರುವ ನಾಶಿಕ್ ಪಟ್ಟಣವು ಭಾರತದ ದ್ರಾಕ್ಷಿಯ ರಾಜಧಾನಿ ಎಂತಲೆ ಪ್ರಸಿದ್ಧವಾಗಿದೆ. ಕಾರಣ ಇಲ್ಲಿ ಬೆಳೆಯಲಾಗುವ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಬೆಳೆ. ಜಗತ್ಪ್ರಸಿದ್ಧ ಕುಂಭ ಮೇಳದ ಸ್ಥಳವಾಗಿ, ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ತ್ರ್ಯಂಬಕೇಶ್ವರದ ನೆಲೆಯಾಗಿ ನಾಶಿಕ್ ಪಟ್ಟಣವು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Marco Zanferrari

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕಾಸ್ ಪ್ರಸ್ಥ ಭೂಮಿ, ಸತಾರಾ : ಮಹಾರಾಷ್ಟ್ರದ ಸತಾರಾ ಪಟ್ಟಣದಿಂದ 20 ಕಿ.ಮೀ ದೂರದಲ್ಲಿರುವ ಕಾಸ್ ಭೂಮಿಯು ಒಂದು ಸುಂದರ ಹೂವುಗಳ ಕಣಿವೆ ಪ್ರದೇಶವಾಗಿದೆ. ಇಲ್ಲಿ ಹಾಸಿಗೆಯಂತೆ ಎಲ್ಲೆಡೆ ಚಾಚಿರುವ ವಿವಿಧ ಬಣ್ಣಗಳ, ಚಿತ್ತಾರಗಳ ಹೂವುಗಳು ನೋಡುಗರ ಹೃದಯವನ್ನು ಕದಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಮಳೆಗಾಲ ಹಾಗೂ ನಂತರದ ಸಮಯ ಈ ಹೂವಿನ ಕಣಿವೆಗೆ ಭೇಟಿ ನೀಡಲು ಆದರ್ಶಮಯ.

ಚಿತ್ರಕೃಪೆ: Travelling Slacker

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಲೋನಾವಲಾ : ಪುಣೆ ನಗರದಿಂದ ಕೇವಲ 64 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಸುಂದರ ಗಿರಿಧಾಮ ಭೇಟಿ ನೀಡುವವರಿಗೆ ಅನೇಕ ಆಯ್ಕೆಗಳನ್ನು ಒದಗಿಸುತ್ತದೆ. ಪ್ರಪ್ರಥಮವಾಗಿ ಈ ಘಟ್ಟ ಪ್ರದೇಶಗಳಲ್ಲಿ ವಾಹನಗಳ ಮೂಲಕ ಸಾಗುವಾಗಲೆ ಮೈಮನಗಳಲ್ಲಿ ರೋಮಾಂಚನದ ವಿದ್ಯುತ್ ಸಂಚಾರವಾಗುತ್ತದೆ. ನವ ದಂಪತಿಗಳು ಇಲ್ಲವೆ ಕುಟುಂಬ ಸಮೇತ ಬರುವವರು ಬೇಕಾದರೆ ಇಲ್ಲಿನ ರಿಸಾರ್ಟ್ ಗಳಲ್ಲಿ ತಂಗಬಹುದಾದರೆ ಯುವಜನಾಂಗವು ಜನಪ್ರಿಯವಾದ ಚಾರಣದಲ್ಲಿ ತಮ್ಮನ್ನು ತಾವು ಪಳಗಿಸಿಕೊಳ್ಳಬಹುದು.

ಚಿತ್ರಕೃಪೆ: naishh

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಅಂಬೋಲಿ : ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಎಲೆ ಮರೆಯ ಕಾಯಿಯಂತಿದ್ದು, ಅಪರಿಮಿತ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಅಂಬೋಲಿ ಎಂಬ ಮಾಯಾ ಪ್ರದೇಶ ಒಂದೆ ಸಲದ ಭೇಟಿಯಲ್ಲೆ ಮರಳಾಗುವಂತೆ ಮಾಡುತ್ತದೆ. ಕರ್ನಾಟಕದ ಬೆಳಗಾವಿಯಿಂದ ಕೇವಲ 65 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಸುಂದರ ಗಿರಿಧಾಮವು ಬೆಳಗಾವಿಯಿಂದ ಸಾವಂತವಾಡಿಯೆಡೆ ಹೋಗುವಾಗ ದೊರೆಯುತ್ತದೆ. ಇದೊಂದು "ಹಿಲ್ ಸ್ಟೇಷನ್" ಆಗಿರುವುದರಿಂದ ಬೇಸಿಗೆಯಲ್ಲಷ್ಟೆ ಭೇಟಿ ನೀಡಬೇಕೆಂದಿಲ್ಲ. ಮಳೆಗಾಲ ಹಾಗೂ ಚಳಿಗಾಲದ ಸಮಯದಲ್ಲೂ ತುಂಬ ಆಕರ್ಷಕವಾಗಿರುತ್ತದೆ ಈ ಅಂಬೋಲಿ. ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ, ಕಪ್ಪೆಗಳು ಯಾವ ರೀತಿ ಮಳೆಗಾಲದ ಸಮಯದಿ ಬಿಲಗಳಿಂದ ಹೊರಬರುತ್ತವೆಯೊ ಅದೇ ರೀತಿ ಈ ಪ್ರದೇಶದಲ್ಲಿಯೂ ಸಹ ಅಲ್ಲಲ್ಲಿ ಕೃತಕ ಜಲಪಾತಗಳು ರೂಪಗೊಂಡು ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಚಿತ್ರಕೃಪೆ: Ishan Manjrekar

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಗೋವಾ : ಇಂದಿನ ಪಿಳಿಗೆಯ ಯುವ ಜೋಡಿಗಳಿಗೆ, ಪ್ರೇಮಿಗಳಿಗೆ, ನವ ದಂಪತಿಗಳಿಗೆ ಉತ್ಸಾಹವನ್ನು ಹೆಚ್ಚಿಸುವ, ಸುಂದರ ಹಾಗೂ ಸದಾ ಉಲುವಿನಿಂದ ಕೂಡಿರುವ ಗೋವಾ ನಗರವೆಂದರೆ ಎಲ್ಲಿಲ್ಲದ ಉತ್ಸಾಹ, ಹುಮ್ಮಸ್ಸು. ಗೋವಾದ ಮೋಡಿಯೆ ಹಾಗೆ. ಪ್ರಸ್ತುತ ಬದುಕಿನ ಶೈಲಿಯ ಉತ್ತುಂಗತೆಯನ್ನು, ರಭಸದ ಹಾಗೂ ಅಷ್ಟೆ ಲವಲವಿಕೆಯಿಂದ ಕೂಡಿದ ಮಾದಕತೆಯ ಬದುಕಿನ ರಾಯಭಾರಿಯಾಗಿ ಗೋವಾ ತನ್ನಲ್ಲಿರುವ ಅದ್ಭುತ ಕಡಲ ತೀರಗಳು, ಸಮುದ್ರ ಖಾದ್ಯಗಳು, ಸಂಗೀತ, ನೃತ್ಯೋತ್ಸವಗಳಿಂದ ಎಲ್ಲರನ್ನೂ ಸೆಳೆಯುತ್ತದೆ. ಗೋವಾ ಪರಿಚಯ.

ಚಿತ್ರಕೃಪೆ: Ian D. Keating

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಅರಕು ಕಣಿವೆ : ಅರಕು ಕಣಿವೆ, ಆಂಧ್ರಪ್ರದೇಶದ ವೈಜಾಗ್(ವಿಶಾಖಪಟ್ಟಣ) ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಮನಮೋಹಕ ಗಿರಿಧಾಮವಾಗಿದೆ. ನಮ್ಮಲ್ಲಿ ಪಶ್ಚಿಮ ಘಟ್ಟ ಹೇಗೊ ಅದೆ ರೀತಿಯಲ್ಲಿ ಆಂಧ್ರದ ಪೂರ್ವ ಘಟ್ಟಗಳ ಆಕರ್ಷಕ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅರಕು ಕಣಿವೆ ವಿವಿಧ ಬುಡಕಟ್ಟು ಜನಾಂಗಗಳ ಆಶ್ರಯ ತಾಣವಾಗಿದೆ. ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳ ಪೈಕಿ ಅತಿ ಕಡಿಮೆ ಪ್ರಮಾಣದಲ್ಲಿ ಕಲುಷಿತಗೊಂಡ ಹಾಗೂ ಅಲ್ಪ ವಾಣಿಜ್ಯೀಕರಣಗೊಂಡ ಪ್ರವಾಸಿ ಸ್ಥಳ ಎಂಬ ಹೆಗ್ಗಳಿಕೆಯನ್ನು ಗಳಿಸಿರುವ ಅರಕು ಕಣಿವೆ ತನ್ನಲ್ಲಿರುವ ಬೊರ್‍ರಾ ಎಂಬ ಗುಹೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: roadconnoisseur

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕಾರವಾರ : ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾಗಿರುವ ಕಾರವಾರ ಪಟ್ಟಣವು ತನ್ನಲ್ಲಿರುವ ಪ್ರಶಾಂತ ಹಾಗೂ ಸುಂದರ ಕಡಲ ತೀರಗಳಿಂದ ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿ ಹೆಸರುವಾಸಿಯಾಗಿದೆ. ಒಂದೆಡೆ ಕಾಳಿ ನದಿ ಹಾಗೂ ಇನ್ನೊಂದೆಡೆ ಅರಬ್ಬಿ ಸಮುದ್ರ ಹೊಂದಿರುವ ಈ ಸುಂದರ ಪಟ್ಟಣವು ಸಾಕಷ್ಟು ಆಯ್ಕೆಗಳನ್ನು ಪ್ರವಾಸಿಗರಿಗೆ ಕರುಣಿಸುತ್ತದೆ. ಕಡಲ ತೀರಗಳಲ್ಲಿ ಜಲಕ್ರೀಡೆಗಳಿಂದ ಹಿಡಿದು ಕಾಳಿ ನದಿಯಲ್ಲಿ ವಿರಾಮ ಸಮಯವನ್ನು ಹಾಯಾಗಿ ದೋಣಿಗಳಲ್ಲಿ ಕಳೆಯುವಂತಹ ಅವಕಾಶಗಳನ್ನು ಒದಗಿಸುತ್ತದೆ.

ಚಿತ್ರಕೃಪೆ: Sankara Subramanian

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಚಿಕ್ಕಮಗಳೂರು : ಕರ್ನಾಟಕದಲ್ಲಿ ಕಂಡುಬರುವ ಅತಿ ಸುಮಧುರ ಪ್ರೇಕ್ಷಣೀಯ ಸ್ಥಳಗಳನ್ನು ಹೆಸರಿಸುವುದಾದರೆ ಅವುಗಳಲ್ಲಿ ಚಿಕ್ಕಮಗಳೂರು ಸಹ ಒಂದು. ಹಲವು ಮನಮೋಹಕವಾದ ಗಿರಿಧಾಮಗಳನ್ನು ಹೊಂದಿರುವ ಈ ತಾಣವನ್ನು ಬಹುಶಃ ಕರ್ನಾಟಕದ ಗಿರಿಧಾಮಗಳ ರಾಣಿ ಎಂದರೂ ತಪ್ಪಾಗಲಾರದು. ಎಲ್ಲೆಲ್ಲೂ ಕಾಫಿಯ ಸುಮಧುರ ಸುವಾಸನೆಯನ್ನು ಪಸರಿಸಿಕೊಂಡಿರುವ ಕರ್ನಾಟಕದ ಕಾಫಿ ನಗರವಿದು. ಬೆಂಗಳೂರಿನಿಂದ ವಾಯವ್ಯ ದಿಕ್ಕಿಗೆ ಸುಮಾರು 250 ಕಿ.ಮೀ ದೂರದಲ್ಲಿರುವ ಚಿಕ್ಕಮಗಳೂರನ್ನು ನೆಲಮಂಗಲ, ಕುಣಿಗಲ್, ಹಾಸನ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿ ವಿಹರಿಸಲು, ಟ್ರೆಕ್ ಮಾಡಲು ಸಾಕಷ್ಟು ಆಕರ್ಷಣೆ ಹಾಗೂ ಚಾರಣಮಾರ್ಗಗಳಿವೆ.

ಚಿತ್ರಕೃಪೆ: Pradeep Kumbhashi

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕೊಡಗು : ಕರ್ನಾಟಕದಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣಗಳನ್ನು ಹೆಸರಿಸುವುದಾದರೆ ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕೂರ್ಗ್ ಎಂತಲೂ ಕರೆಯಲ್ಪಡುವ ಕೊಡಗು ಜಿಲ್ಲೆ. ಬೆಂಗಳೂರಿನ ನೈರುತ್ಯ ದಿಕ್ಕಿಗೆ ಸುಮಾರು 240 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಸ್ಥಳವನ್ನು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸುಲಭವಾಗಿ ತಲುಪಬಹುದು. ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯಲ್ಲಿ ನೋಡಿ ಆನಂದಿಸಲು ಹಲವು ಸುಂದರ ತಾಣಗಳಿರುವುದು ಅಲ್ಲದೆ ರೋಮಾಂಚನ ಹೊಂದುವಂತಹ ಹಲವು ಚಟುವಟಿಕೆಗಳನ್ನು ಒದಗಿಸುವ ರಿಸಾರ್ಟುಗಳು ಹೇರಳವಾಗಿ ಇಲ್ಲಿ ಕಂಡುಬರುತ್ತವೆ. ಕೊಡಗಿನಲ್ಲಿರುವ ಅಬ್ಬಿ ಜಲಪಾತದ ಮನಮೋಹಕ ನೋಟ.

ಚಿತ್ರಕೃಪೆ: Sooraj Shajahan

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮೈಸೂರು : ಎಷ್ಟು ಭೇಟಿ ನೀಡಿದರೂ ಮತ್ತೆ ಮತ್ತೆ ಭೇಟಿ ನೀಡಬೇಕೆನ್ನಿಸುವಂತೆ ಮಾಡುತ್ತವೆ ಕೆಲ ಸ್ಥಳಗಳು. ಅಂತಹ ಸ್ಥಳಗಳ ಪೈಕಿ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರು ನಗರವೂ ಸಹ ಒಂದು. ಪ್ರವಾಸಿಗರ ದೃಷ್ಟಿಯಿಂದ ಮೈಸೂರು ಒಂದು ವಿಶೇಷವಾದ ಪಟ್ಟಣವೆಂದೆ ಹೇಳಬಹುದು. ಏಕೆಂದರೆ ಈ ನಗರವೇ ಪ್ರಪ್ರಥಮವಾಗಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿಗೆ ತವರಾಗಿದೆ, ಅದಾಗ್ಯೂ ಈ ನಗರವು ತನ್ನೆಲ್ಲ ದಿಕ್ಕುಗಳಲ್ಲಿ ಇತರೆ ಅನೇಕ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳಿಗೂ ಸಹ ಬಹು ಹತ್ತಿರದಲ್ಲಿ ನೆಲೆಸಿದೆ. ಆದ್ದರಿಂದ ಈ ಸ್ಥಳವು ಸುತ್ತಲೂ ಭೇಟಿ ನೀಡಬಹುದಾದ ಅನೇಕ ಆಕರ್ಷಣೆಗಳಿಗೆ "ಬೇಸ್" ಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತದೆ. ಕಣ್ಮನ ಸೆಳೆಯುವ ಸುಂದರ ಮೈಸೂರು ಅರಮನೆ.

ಚಿತ್ರಕೃಪೆ: Bikash Das

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಆಗುಂಬೆ : ದಕ್ಷಿಣ ಭಾರತದ ಚೀರಾಪುಂಜಿ ಎಂದು ಕರೆಯಲ್ಪಡುವ ಆಗುಂಬೆಯು ಒಂದು ಅದ್ಭುತವಾದ ಮಳೆಗಾಡಿನ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟಗಳ ಅನನ್ಯ ಸೌಂದರ್ಯ ಹಾಗೂ ಗಿರಿ ಕಂದಕಗಳಿಂದ ಕೂಡಿದ್ದು ಜನಪ್ರೀಯ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿನ ಮಳೆಯು ಎಷ್ಟು ಚೆಂದವೊ ಬೇಸಿಗೆಯಲ್ಲಿ ಇಲ್ಲಿನ ಸೂರ್ಯಾಸ್ತವೂ ಸಹ ಅಷ್ಟೆ ಮನಮೋಹಕ. ಅಲ್ಲದೆ ಚಾರಣಕ್ಕೂ ಸಹ ಈ ದಟ್ಟ ಕಾಡಿನ ಪುಟ್ಟ ಪಟ್ಟಣ ತಕ್ಕುದಾದ ಸ್ಥಳವಾಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆಯು ಒಂದು ಜನಪ್ರೀಯವಾದ ರೋಮಾಂಚಕ ಸ್ಥಳವಾಗಿದೆ.

ಚಿತ್ರಕೃಪೆ: Harsha K R

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮರವಂತೆ : ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳಿಯಿರುವ ಮರವಂತೆ ಎಂಬ ಹಳ್ಳಿಯು ತನ್ನ ಅತಿ ಮಧುರವಾದ ಹಾಗೂ ಅಷ್ಟೆ ಸುಂದರವಾದ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ. ಈ ಕಡಲ ತೀರ ಎಷ್ಟೊಂದು ಸುಂದರವಾಗಿದೆ ಎಂದರೆ ಔಟ್ ಲುಕ್ ಎಂಬ ಪ್ರವಾಸಿ ನಿಯತಕಾಲಿಕೆಯು ಇದನ್ನು ಕರ್ನಾಟಕದಲ್ಲಿರುವ ಅತಿ ಸುಂದರ ಕಡಲ ತೀರಗಳ ಪಟ್ಟಿಯಲ್ಲಿ ಒಂದೆಂದು ಹೆಸರಿಸಿದೆ. ಉಡುಪಿಯಿಂದ ಸುಮಾರು 55 ಕಿ.ಮೀ ಗಳಷ್ಟು ದೂರವಿರುವ ಈ ಕರಾವಳಿ ಹಳ್ಳಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರ ಮೂಲಕ ತಲುಪಬಹುದಾಗಿದೆ. ವಿಶೇಷವೆಂದರೆ ಈ ಹೆದ್ದಾರಿಯ ಒಂದು ಬದಿ ಸಮುದ್ರವಿದ್ದರೆ ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿ ಹರಿದಿದೆ. ಈ ರೀತಿಯ ದೃಶ್ಯವು ತನ್ನಲ್ಲೆ ತಾನೆ ವಿಶಿಷ್ಟವಾಗಿದ್ದು ಕಾಣ ಸಿಗುವುದು ಬಹು ಅಪರೂಪ ಎಂತಲೆ ಹೇಳಬಹುದು.

ಚಿತ್ರಕೃಪೆ: Riju K

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ದಾಂಡೇಲಿ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿಯು ಒಂದು ಅದ್ಭುತವಾದ ರಮಣೀಯ ಪ್ರದೇಶವಾಗಿದ್ದು ಹಿಂದೆ ಇದು ಬೃಹತ್ ದಂಡಕಾರಣ್ಯವಿದ್ದ ಪ್ರದೇಶವಾಗಿತ್ತೆಂದು ಹೇಳಲಾಗಿದೆ. ಈ ಕಾಡಿನ ನಾಡು ಕೇವಲ ಪ್ರಕೃತಿಯ ರಮ್ಯ ನೋಟವನ್ನು ಕರುಣಿಸುವುದಲ್ಲದೆ ನಿಮ್ಮೊಳಗೆ ಅವಿತು ಕುಳಿತಿರುವ ಸಾಹಸ ಹಾಗೂ ಪ್ರೀತಿಯ ಮನೋಭಾವನೆಗಳನ್ನು ಒರೆಗೆ ಹಚ್ಚಲೂ ಕೂಡ ನೆರವಾಗುತ್ತದೆ. ಹಲವಾರು ಕ್ಯಾಂಪುಗಳು, ರಿಸಾರ್ಟುಗಳು ದಾಂಡೇಲಿಯಲ್ಲಿದ್ದು, ನಿಮ್ಮ ಮನ ತಣಿಯುವಷ್ಟು ಸಾಕಷ್ಟು ಆಯ್ಕೆಗಳನ್ನು ಇವು ಒದಗಿಸುತ್ತವೆ. ಜಂಗಲ್ ಸಫಾರಿ ಇರಬಹುದು, ಚಾರಣವಿರಬಹುದು ಇಲ್ಲವೆ ರಿವರ್ ರಾಫ್ಟಿಂಗ್ ನಂತಹ ಚಟುವಟಿಕೆಗಳಿರಬಹುದು, ಎಲ್ಲವೂ ಇಲ್ಲಿ ಲಭ್ಯ. ಇಲ್ಲಿರುವ ಮತ್ತೊಂದು ವಿಶೇಷ ದಾಂಡೇಲಿ ಅಭಯಾರಣ್ಯ. ಇದು ಕರ್ನಾಟಕದ ಎರಡನೇಯ ದೊಡ್ಡ ಅಭಯಾರಣ್ಯವಾಗಿದೆ.

ಚಿತ್ರಕೃಪೆ: Balamurugan Natarajan

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ವಯನಾಡ್ : ಇದು ದಕ್ಷಿಣ ಭಾರತದಲ್ಲೆ ಜನಪ್ರಿಯ ವನ್ಯಜೀವಿ ಧಾಮವಾಗಿದ್ದು, ಕೇರಳದ ಎರಡನೆ ಪ್ರಮುಖ ವನ್ಯಜೀವಿ ಧಾಮವಾಗಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿನ ಜೀವ ಸಂಕುಲವನ್ನು ವೀಕ್ಷಿಸಲು ಆಗಮಿಸುತ್ತಿರುತ್ತಾರೆ. ಬಹುತೇಕ ಪ್ರವಾಸಿಗರು ಇಲ್ಲಿಯ ಮೈಸಿರಿಗೆ ಮನಸೋತು, ಮನದಾನಂದವನ್ನು ಹೊಂದಲು ಬರುತ್ತಾರೆ. ಈ ಧಾಮವು ಅಹ್ಲಾದಕರ ವಾತಾವರಣವನ್ನು ಹೊಂದಿದ್ದು ಉತಮವಾದ ಜಾಗದಲ್ಲಿ ಸ್ಥಿತವಾಗಿದೆ. ತೇಗದ ಮರಗಳು ಸ್ವಚ್ಛಂದವಾಗಿ ಬೆಳೆದಿರುವುದನ್ನು ಇಲ್ಲಿ ಕಾಣಬಹುದು. ನೀವೆನಾದರು ನಿಮ್ಮ ಸಂಗಾತಿಯೊಡನೆ ಪ್ರವಾಸ ಮಾಡುತ್ತಿದ್ದರೆ ಖಂಡಿತವಾಗಿಯೂ ಒಮ್ಮೆ ವಯನಾಡ್ ಗೆ ಭೇಟಿ ನೀಡಲೇಬೇಕು.

ಚಿತ್ರಕೃಪೆ: Sarath Kuchi

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ವಗಮೋನ್ : ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಗಡಿಯಲ್ಲಿರುವ ವಗಮೋನ್ , ಒಂದು ಗುಡ್ಡ ಪ್ರದೇಶ. ಒಂದು ಗಿರಿಧಾಮ ಪ್ರದೇಶವಾಗಿರುವ ವಗಮೋನ್, ಕೇರಳ ರಾಜ್ಯದಲ್ಲಿ ಎಲೆ ಮರೆಯ ಕಾಯಿಯಂತಿರುವ ಒಂದು ಸುಂದರ ಪ್ರದೇಶ. ನವದಂಪತಿಗಳಿಗೆ ಕಾಲಕಳೆಯಲು ಸುಂದರವಾದ ತಾಣವಿದು. ವಿಶಾಲವಾಗಿ ಹರಡಿರುವ ಹಸಿರು, ನೀಲಿ ನೀಲಿ ಪರ್ವತಗಳು, ಸುಂದರ ನದಿಗಳು, ನೀರಝರಿಗಳು, ಆಹ್ಲಾದಕರವಾದ ವಾತಾವರಣ ಮತ್ತು ದಟ್ಟವಾದ ಅರಣ್ಯವಿರುವದರಿಂದ ವಗಮೋನ್‌ ಎಂಥವರ ಮನಸ್ಸನ್ನೂ ಸೆಳೆಯುತ್ತದೆ.

ಚಿತ್ರಕೃಪೆ: Madhu Kannan

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮುನ್ನಾರ್ : ಉತ್ತರ ಭಾರತವೆ ಇರಲಿ, ದಕ್ಷಿಣ ಭಾರತವೆ ಇರಲಿ ನವ ವಿವಾಹಿತ ದಂಪತಿಗಳಿಗೆ ಕೇಳಿ, ನಿಮ್ಮ ಹನಿಮೂನ್ ಎಲ್ಲಿ ಎಂದು.... ಥಟ್ಟನೆ ಮುನ್ನಾರ್ ಎಂದು ಹೇಳೆ ಬಿಡುತ್ತಾರೆ. ಹೌದು ಈ ಸ್ಥಳದ ಮಹಿಮೆಯೆ ಹಾಗೆ. ಪಶ್ಚಿಮ ಘಟ್ಟಗಳ ಮಾಯಾ ಪ್ರಪಂಚದಲ್ಲಿ ಸುಂದರ ಕನ್ಯೆಯಂತೆ ಅವಿತು ಕುಳಿತಿದೆ ಮುನ್ನಾರ್. ಮುನ್ನಾರ್ ಮೂಲತಃ ಕೇರಳ ರಾಜ್ಯದ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1600 ಮೀ. ಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಕಣ್ಣನ್ ದೇವನ್ ಬೆಟ್ಟಗಳ ಹಳ್ಳಿಯಲ್ಲಿರುವ ಮುನ್ನಾರ್ ಪದದ ಮೂಲ ಅರ್ಥ "ಮೂರು ನದಿಗಳು" ಎಂದಾಗುತ್ತದೆ.

ಚಿತ್ರಕೃಪೆ: Nishanth Jois

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮಾಸಿನಗುಡಿ : ಮುದುಮಲೈ ರಾಷ್ಟ್ರೀಯ ಉದ್ಯಾನದ ಒಂದು ಭಾಗವಾಗಿರುವ ಮಾಸಿನಗುಡಿಯು ಯುವ ಹೃದಯಗಳು ಹಾಗೂ ಯುವ ಜನಾಂಗದವರು ಭೇಟಿ ನೀಡಲು ಒಂದು ಅದ್ಭುತ ಸ್ಥಳವಾಗಿದೆ. ಇದು ಒಂದು ರಕ್ಷಿತ ಅರಣ್ಯ ಪ್ರದೇಶದ ಭಾಗವಾಗಿರುವುದರಿಂದ ಇಲ್ಲಿನ ಕಾಡಿನ ಪರಿಸರದಲ್ಲಿ ಪ್ರವೇಶಿಸುವಂತಿಲ್ಲ. ಆದರೆ ಇಲ್ಲಿರುವ ರಿಸಾರ್ಟುಗಳಲ್ಲಿ ತಂಗಿ ಮನಸೊ ಇಚ್ಛೆಯಿಂದ ಹಲವು ಸಾಹಸಮಯ ಜಲಕ್ರೀಡೆ ಹಾಗೂ ಇತರೆ ಚಟುವಟಿಕೆಗಳನ್ನು ಆಸ್ವಾದಿಸಬಹುದು. ಅಲ್ಲದೆ ಆಯೋಜಿಸಲಾಗುವ ಸಫಾರಿಗಳ ಮೂಲಕ ಕಾಡಿನ ಅದ್ಭುತ ಸೌಂದರ್ಯವನ್ನು ಸವಿಯಬಹುದು. ಇದೊಂದು ಹುಲಿ ಮೀಸಲು ಪ್ರದೇಶವಾಗಿದ್ದು ತಮಿಳು ನಾಡಿನ ನೀಲ್ಗಿರಿ ಜಿಲ್ಲೆಯಲ್ಲಿದೆ ಹಾಗೂ ಕರ್ನಾಟಕ ಮತ್ತು ಕೇರಳದ ಗಡಿಗಳಿಗೆ ಬಹು ಹತ್ತಿರದಲ್ಲಿದೆ.

ಚಿತ್ರಕೃಪೆ: AnnaKika

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮರಾರಿ : ಕೇರಳದ ಅಲೆಪ್ಪಿ ಅಥವಾ ಅಲಪುಳಾ ಜಿಲ್ಲೆಯಲ್ಲಿರುವ ಮರಾರಿಕುಲಂ ಒಂದು ಸುಂದರ ಕರವಾಳಿ ಹಳ್ಳಿಯಾಗಿದೆ. ಇಲ್ಲಿರುವ ಕಡಲ ತೀರ ಬಲು ನಯನ ಮನೋಹರವಾಗಿದ್ದು ಮರಾರಿ ಕಡಲ ತೀರ ಎಂಬ ಹೆಸರಿನಿಂದಲೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Mahendra M

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕೊಲುಕ್ಕುಮಲೈ : ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ಮುನ್ನಾರ್ ನಿಂದ ಕೇವಲ ಅರ್ಧ ಘಂಟೆ ಪ್ರಯಾಣಾವಧಿಯಷ್ಟು ದೂರ ಚಲಿಸಿದರೆ ಸಾಕು ನೀವೊಂದು ಅದ್ಭುತ, ರೋಮಾಂಚನಗೊಳಿಸುವ ಸ್ಥಳಕ್ಕೆ ಬಂದಿರುತ್ತಿರಿ. ಮೂಲವಾಗಿ ಇದೊಂದು ಚಹಾ ಬೆಳೆಯುವ ತೋಟ. ಇದರ ವಿಶೇಷತೆ ಎಂದರೆ ಜಗತ್ತಿನ ಅತಿ ಎತ್ತರ ಪ್ರದೇಶದಲ್ಲಿ ಚಹಾ ಬೆಳೆಯಲಾಗುವ ತೋಟ ಹೊಂದಿರುವ ಎಸ್ಟೇಟ್ ಇದು. ಕೊಲುಕ್ಕುಮಲೈ ಎಂಬ ಹೆಸರಿನ ಈ ಸ್ಥಳವು ಚಹಾ ಕಾರ್ಖಾನೆಗೆ ಬಹಳ ಜನಪ್ರಿಯವಾಗಿದ್ದು ಇದರ ಇತಿಹಾಸ, ಹಿನ್ನಿಲೆ ಕುರಿತು ತಿಳಿಯ ಬಯಸಿದ್ದಲ್ಲಿ ಮಾರ್ಗದರ್ಶಕರೂ ಸಹ ಇಲ್ಲಿ ದೊರೆಯುತ್ತಾರೆ.

ಚಿತ್ರಕೃಪೆ: Earth-Bound Misfit, I

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕುಮರಕಮ್ : ಕೇರಳದಲ್ಲಿರುವ ಕುಮರಕಮ್ ಒಂದು ಸುಂದರ ಜಲಮಯ ಪ್ರವಾಸಿ ಕೇಂದ್ರವಾಗಿದೆ. ಕುಮರಕಮ್ ತಾಣವು ಕೇರಳದ ತಾಜಾ ನೀರಿನ ಅತಿ ದೊಡ್ಡ ಸರೋವರವಾದ ವೆಂಬನಾಡ್ ಕೆರೆಯ ಹಿನ್ನಿಲೆಯಲ್ಲಿ ನೆಲೆಸಿರುವುದರಿಂದ ಹಿನ್ನೀರಿನ ಪ್ರವಾಸೋದ್ಯಮಕ್ಕೆ ಅತ್ಯಂತ ಹೆಸರುವಾಸಿಯಾಗಿದೆ. ಕೇವಲ ಭಾರತೀಯರು ಮಾತ್ರವಲ್ಲ, ವಿದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ತಾಣವನ್ನು ಅರಸುತ್ತಾ ಇಲ್ಲಿಗೆ ಬರುತ್ತಾರೆ. ಕುಮರಕಮ್ ತಲುಪಲು ಕೊಟ್ಟಾಯಂ ಹತ್ತಿರವಿರುವ ಪ್ರಮುಖ ಪಟ್ಟಣವಾಗಿದೆ. ಕೊಟ್ಟಾಯಂಗೆ ತೆರಳಲು ಕೇರಳದ ಇತರೆ ನಗರಗಳಿಂದ ರೈಲು ಹಾಗೂ ಬಸ್ಸುಗಳು ಲಭ್ಯವಿದೆ. 80 ಕಿ.ಮೀ ದೂರವಿರುವ ಕೊಚ್ಚಿ ಕುಮರಕಮ್ ತಲುಪಲು ವಿಮಾನ ನಿಲ್ದಾಣ ಹಾಗೂ ಭಾರತದ ಪ್ರಮುಖ ಪ್ರದೇಶಗಳೊಂದಿಗೆ ಬೆಸೆಯುವ ರೈಲು ನಿಲ್ದಾಣವಿರುವ ಪ್ರಮುಖ ನಗರವಾಗಿದೆ.

ಚಿತ್ರಕೃಪೆ: Upendra Kanda

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಅಲೆಪ್ಪಿ : ಅದ್ಭುತ ಪ್ರಕೃತಿ ಸೌಂದರ್ಯದ ತವರಾಗಿರುವ ಕೇರಳದ ಅಲೆಪ್ಪಿ ಅಥವಾ ಮಲಯಾಳಂನಲ್ಲಿ ಕರೆಯಲಾಗುವ ಅಲಪುಳಾ "ಪೂರ್ವದ ವೆನಿಸ್" ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ನೀವೇನಾದರೂ ವನಿಸ್ ಪಟ್ಟಣಕ್ಕೆ ಭೇಟಿ ನೀಡಿದ್ದರೆ, ಈ ಪಟ್ಟಣಕ್ಕೆ ಸಂದ ಬಿರುದು ನಿಜಕ್ಕೂ ಅರ್ಥಪೂರ್ಣವಾದುದು ಎಂತಲೇ ಹೇಳುತ್ತೀರಿ. ನಿಮ್ಮೊಳಗೆ ಮಧುರವಾದ ಭಾವನೆಗಳನ್ನು ಈ ಪ್ರದೇಶ ಉದ್ದೀಪಿಸುತ್ತದೆ. ಕಲ್ಪನೆಗಳೆಲ್ಲವೂ ಸಾಕಾರಗೊಂಡಷ್ಟು ದಿಗ್ಭ್ರಮೆಗೊಳಿಸುವ ಶಕ್ತಿ ಇಲ್ಲಿಯ ಭೌಗೋಳಿಕ ರಚನೆಗೆ ಇದೆ.

ಚಿತ್ರಕೃಪೆ: Travelling Slacker

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕುಣ್ಣೂರು : ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯ ಊಟಿಯ ಬಳಿ ಸ್ಥಿತವಿರುವ ಕುಣ್ಣೂರು ಎಂಬ ನೀಲ್ಗಿರಿ ಜಿಲ್ಲೆಯ ಎರಡನೆಯ ದೊಡ್ಡ ಗಿರಿಧಾಮವಾಗಿದೆ. ವಿಸ್ಮಯಭರಿತ ಈ ಗಿರಿಧಾಮ, ವಿಶ್ವ ಪ್ರಸಿದ್ಧ ಉದಕಮಂಡಲ (ಊಟಿ) ಹಿಲ್ ಸ್ಟೇಶನ್ ಗೆ ಸಮೀಪದಲ್ಲಿದೆ. ಈ ಸುಂದರ ಗಿರಿಧಾಮವು ಸದಾ ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿ ನಿಂತಿರುವಂತೆ ಗೋಚರಿಸುತ್ತದೆ. ಒಮ್ಮೊಮ್ಮೆ ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದಾಗ ಆ ಸಂದರ್ಭದಲ್ಲಿ ಆಗುವ ಏಷ್ಟೆ ಸದ್ದು ಗದ್ದಲದ ನಡುವೆಯೂ, ಈ ಸ್ಥಳವು ಪ್ರಶಾಂತವಾದ ಹಾಗು ನಿರಾತಂಕವಾದ ವಾತಾವರಣವನ್ನು ಕರುಣಿಸುತ್ತದೆ. ಆದ್ದರಿಂದ ಈ ಸ್ಥಳವನ್ನು ಎಂದೂ ಮಲಗದ ಕಣಿವೆ ಎಂದೂ ಸಹ ವರ್ಣಿಸಿದ್ದಾರೆ.

ಚಿತ್ರಕೃಪೆ: Thangaraj Kumaravel

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಊಟಿ : ಊಟಿ ಗಿರಿಧಾಮದ ಹೆಸರನ್ನು ಕೇಳದವರು ಪ್ರಾಯಶಃ ಯಾರು ಇರಲಿಕ್ಕಿಲ್ಲ. ದಕ್ಷಿಣ ಭಾರತದ ಅಷ್ಟೊಂದು ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ ಊಟಿ. ಅಧಿಕೃತವಾಗಿ ಉದಕಮಂಡಲಂ ಎಂದು ಕರೆಯಲ್ಪಡುವ ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿ. ಶಾಂತ ಪರಿಸರ, ಹಿತಕರವಾದ ವಾತಾವರಣ, ಪರಿಶುದ್ಧವಾದ ಗಾಳಿ, ತಾಜಾ ತನದ ಅನುಭವ ಎಲ್ಲವೂ ಇರುವ ಈ ಗಿರಿಧಾಮ ತಾಣವು ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಅದರಲ್ಲೂ ವಿಶೇಷವಾಗಿ ನವವಿವಾಹಿತರನ್ನು ಮಧುಚಂದ್ರಕ್ಕೆಂದು ತನ್ನತ್ತ ಸೆಳೆಯುತ್ತದೆ.

ಚಿತ್ರಕೃಪೆ: Ramkumar

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕೊಡೈಕೆನಲ್ : ಸಾಮಾನ್ಯವಾಗಿ ಗಿರಿಧಾಮ ಎಂದಾಕ್ಷಣ ಬೇಸಿಗೆಯಲ್ಲಿ ಭೇಟಿ ನೀಡಲು ಆದರ್ಶಪ್ರಾಯವಾಗಿರುತ್ತವೆ ಎಂದು ನಮಗೆ ತಿಲಿದಿರುವ ವಿಚಾರ. ಆದರೆ ಕೆಲ ಗಿರಿಧಾಮಗಳು ಚಳಿಗಾಲ ಹಾಗೂ ಮಳೆಗಾಲದಲ್ಲೂ ಆಕರ್ಷಕವಾಗಿ ಕಾಣುತ್ತವೆ. ಕೊಡೈಕೆನಾಲ್ ಕೂಡ ಒಂದು ವಿಶಿಷ್ಟವಾದ ಗಿರಿಧಾಮವಾಗಿದೆ. ಬೇಸಿಗೆ ಹಾಗೂ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ ಎಂದಿದ್ದರೂ ಮಳೆಗಾಲದ ಆಕರ್ಷಣೆಯೂ ಕೂಡ ಏನೂ ಕಮ್ಮಿ ಇಲ್ಲ. ಇನ್ನೇನೂ ಟ್ರೆಕ್ ನಂತಹ ಚಟುವಟಿಕೆ ಮಳೆಗಾಲದ ಸಂದರ್ಭದಲ್ಲಿ ತುಸು ಕಷ್ಟವಾದರೂ ಚಿಮು ಚಿಮು ಮಳೆಯ ನಡುವೆ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣ ಸದಾ ನಿಮ್ಮನ್ನು ಸ್ವಾಗತಿಸುತ್ತದೆ.

ಚಿತ್ರಕೃಪೆ: wishvam

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ವಿಶಾಖಾಪಟ್ಟಣಂ : ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು, ಭಾರತದ ಪೂರ್ವ ಕರಾವಳಿ ತೀರದಗುಂಟ ನೆಲೆಸಿರುವ ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳ ನಂತರದಲ್ಲಿ ಅತಿ ದೊಡ್ಡ ಪಟ್ಟಣವೂ ಸಹ ಆಗಿದೆ. ವೈಶಾಕ ದೇವತೆಯ ಗೌರವಾರ್ಥಕವಾಗಿ ಈ ಪಟ್ಟಣಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಮೂಲತಃ ವೈಜಾಗ್ ಒಂದು ಸುಂದರಮಯ ಕಡಲ ತೀರಗಳುಳ್ಳ ಬಂದರು ಪಟ್ಟಣವಾಗಿದೆ. ವೈಜಾಗ್ ನಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದ, ಚುಂಬಕದಂತೆ ಸೆಳೆಯುವ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Raj

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಧರ್ಮಶಾಲಾ : ಹಿಮಾಲಯ ಪರ್ವತಗಳ ಕೆಳ ಸ್ತರದಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶ ರಾಜ್ಯವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ ಹೊಂದಿದ್ದು, ಪ್ರವಾಸಿ ದೃಷ್ಟಿಯಿಂದ ಬಲು ಖ್ಯಾತಿ ಪಡೆದ ರಾಜ್ಯವಾಗಿದೆ. ಈ ರಾಜ್ಯದಲಿರುವ ಧರ್ಮಶಾಲೆಯು ಪ್ರವಾಸಿ ಕೇಂದ್ರವಾಗಿದ್ದು ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿದೆ. ಧರ್ಮಶಾಲೆಯ ಕುರಿತು ಆಸಕ್ತಿಕರ ವಿಷಯವೆಂದರೆ ಗಡಿಪಾರಾಗಿರುವ ಟಿಬೆಟ್ ಸರ್ಕಾರದ ಆಡಳಿತವು ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿಂದಲೆ ಎನ್ನುವುದು. ಅಲ್ಲದೆ ಇಲ್ಲಿನ ಮ್ಯಾಕ್ ಲಿಯೋಡ್ ಗಂಜ್ ನಲ್ಲಿ ಬೌದ್ಧ ಧರ್ಮ ಗುರುಗಳಾದ ದಲೈ ಲಾಮಾ ಅವರ ನಿವಾಸವಿರುವುದನ್ನು ಕಾಣಬಹುದಾಗಿದೆ. ಆದ್ದರಿಂದ ಈ ಸ್ಥಳವನ್ನು "ಲಾಮಾಗಳ ಭೂಮಿ" ಎಂದೂ ಸಂಭೋದಿಸಲಾಗುತ್ತದೆ.

ಚಿತ್ರಕೃಪೆ: Aleksandr Zykov

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಮಸ್ಸೂರಿ : ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿಯು ಪ್ರವಾಸಿ ಆಕರ್ಷಣೆಯುಳ್ಳ ಅದ್ಭುತ ಗಿರಿಧಾಮವಾಗಿದೆ. ಈ ಸ್ಥಳವು ಶಿವಾಲಿಕ್ ಕಣಿವೆ ಮತ್ತು ಡೂನ್ ಕಣಿವೆಗಳ ಅದ್ಭುತವಾದ ದೃಶ್ಯಾವಳಿಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿದೆ. ಕೆಲ ಜನರು ಈ ಸ್ಥಳವನ್ನು ಮನ್ಸೂರಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ. ಈ ಸುಂದರವಾದ ಗಿರಿಧಾಮವು ತನ್ನಲ್ಲಿರುವ ಹಳೆಯ ಕಾಲದ ದೇವಸ್ಥಾನಗಳು, ಬೆಟ್ಟಗಳು, ಜಲಪಾತಗಳು, ಕಣಿವೆಗಳು, ಅರಣ್ಯಧಾಮ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Paul Hamilton

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ವರ್ಕಲಾ : ಕೇರಳ ರಾಜ್ಯದ ವರ್ಕಲಾಕ್ಕೊಮ್ಮೆ ನೀವು ಭೇಟಿಯಿತ್ತರೆ ನಿಮ್ಮ ಮನಸ್ಸಿನಲ್ಲಿ ಇಲ್ಲಿನ ಸೊಬಗು ಶಾಶ್ವತವಾಗಿ ಅಚ್ಚಳಿಯದಂತೆ ಹಾಗೆಯೇ ಉಳಿಯುವುದರಲ್ಲಿ ಎರಡು ಮಾತಿಲ್ಲ. ವರ್ಕಲಾ ಕರಾವಳಿ ತೀರದಲ್ಲಿರುವ ಒಂದು ಸುಂದರವಾದ ಪಟ್ಟಣ. ಇದು ಕೇರಳ ರಾಜ್ಯದಲ್ಲಿರುವ ತಿರುವಂನಂತಪುರಂ ಜಿಲ್ಲೆಯಲ್ಲಿದೆ. ಈ ಪಟ್ಟಣವು ಕೇರಳದ ದಕ್ಷಿಣ ಭಾಗದಲ್ಲಿದೆ. ವರ್ಕಲಾ ಸಾಗರಕ್ಕೆ ಅತ್ಯಂತ ಹತ್ತಿರದಲ್ಲಿರುವ ಪರ್ವತ ಪ್ರದೇಶವಾಗಿದ್ದು ಕೇರಳದಲ್ಲಿರುವ ಏಕೈಕ ಪರ್ವತ ವಲಯವಾಗಿದೆ. ಇಲ್ಲಿನ ಅಪೂರ್ವತೆಯೆಂದರೆ ವರ್ಕಲಾ ಬೆಟ್ಟಗಳು ಅರೇಬಿಯನ್ ಸಮುದ್ರ ಪ್ರಪಾತದೊಂದಿಗೆ ವಿಲೀನವಾದಂತೆ ತೋರುತ್ತದೆ. ಇಲ್ಲಿ ಸಾಕಷ್ಟು ರಿಸಾರ್ಟು, ಹೋಟೆಲುಗಳಿದ್ದು ನಿಮ್ಮ ಬಾಳ ಸಂಗಾತಿಯೊಡನೆ ಸುಮಧುರವಾದ ಸಮಯವನ್ನು ಇಲ್ಲಿ ಕಳೆಯಬಹುದಾಗಿದೆ. ತಿರುವನಂತಪುರಂನಿಂದ ಇಲ್ಲಿಗೆ ಸುಲಭವಾಗಿ ತೆರಳಬಹುದು.

ಚಿತ್ರಕೃಪೆ: Thejas Panarkandy

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಕೋವಲಂ : ಕೇರಳ ರಾಜ್ಯಕ್ಕೆ ಎಲ್ಲದಕ್ಕಿಂತ ಹೆಚ್ಚಾಗಿ ಪ್ರವಾಸಿಗರು ಬರುವುದೇ ಇಲ್ಲಿನ ಕಡಲ ತೀರಗಳನ್ನು ನೋಡಲು. ಕುಟುಂಬ ಸಮೇತರಾಗಿ ಹೋದರೆ ಕೌಟುಂಬಿಕ ಸಂತೋಷವನ್ನು, ಹೊಸದಾಗಿ ಮದುವೆಯಾದ ದಂಪತಿಗಳಿಗೆ ಬೆಚ್ಚನೆಯ ಅನುಭವವನ್ನು, ಸ್ನೇಹಿತರಿಗೆ ಮಸ್ತಿ ಮೋಜು ಮಾಡಲು ಅನುಕೂಲಕ ವಾತಾವರಣವನ್ನು ಹೊಂದಿರುವುದು ಕೊವಲಂ ಕಡಲ ತೀರಗಳು ಮಾತ್ರ! ಎಂದರೆ ತಪ್ಪಾಗಲಾರದು. ಎಲ್ಲರಿಗೂ ಚಿರಪರಿಚಿತವಿರುವ ಪ್ರಸಿದ್ಧ ಕೋಲವಂ ತೀರ, ಕೇರಳದ ರಾಜಧಾನಿಯಾದ ತಿರುವುನಂತಪುರಂ ಬಳಿ ಇದೆ. ದೇಶದ ಯಾವುದೇ ಭಾಗದಿಂದ ತಿರುವನಂತಪುರಂ ಗೆ ತಲುಪುದು ಸುಲಭ.

ಚಿತ್ರಕೃಪೆ: Jo Kent

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪಾಂಡಿಚೆರಿ : ಭಾರತ ದೇಶದ ಎಲ್ಲ ಏಳು ಕೇಂದ್ರಾಡಳಿತ ಪ್ರದೇಶಗಳು ತಮ್ಮದೆ ಆದ ವೈಶಿಷ್ಟ್ಯ ಹೊಂದಿವೆ. ಪ್ರತಿ ಸ್ಥಳಗಳೂ ಕೂಡ ಪ್ರವಾಸಿ ಆಕರ್ಷಣೆಯ ಕೇಂದ್ರಗಳಾಗಿವೆ. ಅವುಗಳಲ್ಲೊಂದಾದ ಪಾಂಡಿಚೆರಿ ಅಥವಾ ಪುದುಚೆರಿಯು ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿ ಆಕರ್ಷಿಸುತ್ತದೆ. ಇಲ್ಲಿ ಇನ್ನೂ ಜೀವಂತ ಇರುವ ಫ್ರೆಂಚ್ ಕಾಲೋನಿ, ಅರಬಿಂದೊ ಆಶ್ರಮ, ಮಣಕುಳ ವಿನಾಕನ ದೇವಸ್ಥಾನ ಹಿರಿಯ ಪ್ರವಾಸಿಗರನ್ನು ಆಕರ್ಷಿಸಿದರೆ, ಇನ್ನೊಂದೆಡೆ ಯುವಪಿಳಿಗೆಯನ್ನು ಹುರುದುಂಬಿಸುವ ಹೊಸ ಹೊಸ ರೀತಿಯ ಪಶ್ಚಾತ್ಯದ ಪ್ರಭಾವವಿರುವ ಕಾಫಿ ಕೇಂದ್ರಗಳು, ಮದ್ಯ ಕೇಂದ್ರಗಳು, ಉದ್ಯಾನ, ಶಾಪಿಂಗ್ ಮಳಿಗೆಗಳು, ಬೀಚುಗಳು ಪಾಂಡಿಚೆರಿಯ ಮತ್ತನ್ನು ಮತ್ತಷ್ಟು ಮಹೋನ್ನತಗೊಳಿಸುತ್ತದೆ.

ಚಿತ್ರಕೃಪೆ: Praveen

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಹ್ಯಾವ್ಲಾಕ್ ದ್ವೀಪ : ಬ್ರಿಟೀಷ್ ವಸಾಹತು ಕಾಲದಲ್ಲಿ ಜನರಲ್ ಆಗಿದ್ದ ಹೆನ್ರಿ ಹಾವ್ ಲಾಕ್ ಹೆಸರನ್ನು ಈ ದ್ವೀಪಕ್ಕಿಡಲಾಗಿದೆ. ಇದು ಅಂಡಮಾನಿನ ಅತ್ಯಂತ ಆಕರ್ಷಣೀಯ ತಾಣವಾಗಿದ್ದು ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಐದು ಊರುಗಳಾದ ಗೋವಿಂದ ನಗರ, ರಾಧಾ ನಗರ, ಬಿಜೋಯ್ ನಗರ, ಶ್ಯಾಮ್ ನಗರ, ಕೃಷ್ಣ ನಗರ ತಮ್ಮದೆ ಊರಿನ ಹೆಸರಿನ ಕಡಲ ತಡಿಗಳನ್ನು ಹೊಂದಿವೆ. ರಾಧಾನಗರ ಕಡಲ ಕಿನಾರೆ ಇವುಗಳಲ್ಲಿ ಅತ್ಯಂತ ಉತ್ತಮವಾದ ಕಡಲ ಕಿನಾರೆಯಾಗಿದ್ದು ಇದಕ್ಕೆ ಟೈಮ್ ಮ್ಯಾಗಜೀನ್ 2004 ರಲ್ಲಿಯೇ ಏಷ್ಯಾದ ಅತ್ಯಂತ ಆಕರ್ಷಣೀಯ ಕಡಲ ಕಿನಾರೆ ಎಂಬ ಬಿರುದು ಕೊಟ್ಟಿದೆ.

ಚಿತ್ರಕೃಪೆ: Sankara Subramanian

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಪ್ರಣಯದಾನಂದವನ್ನು ವೃದ್ಧಿಸುವ ಸ್ಥಳಗಳು:

ಲಕ್ಷದ್ವೀಪ : ಹೆಸರೆ ಸೂಚಿಸುವಂತೆ ಅರಬ್ಬಿ ಸಮುದ್ರದಲ್ಲಿ ರೂಪಗೊಂಡ ಹಲವು ಚಿಕ್ಕ ಪುಟ್ಟ ನಡುಗಡ್ಡೆಗಳ ಗುಚ್ಛವಾಗಿದೆ ಲಕ್ಷದ್ವೀಪ. ಭಾರತದ ಏಳು ಕೇಂದ್ರಾಡಳಿತದ ಪ್ರದೇಶಗಳ ಪೈಕಿ ಭೌತಿಕವಾಗಿ ಚಿಕ್ಕದಾದ ಪ್ರದೇಶ ಇದಾಗಿದೆ. ಭಾರತದ ನೈರುತ್ಯ ಕರಾವಳಿ ತೀರದಿಂದ ಸುಮಾರು 200 ಕಿ.ಮೀ ದೂರದಿಂದ ಆರಂಭವಾಗಿ 440 ಕಿ.ಮೀ ಗಳಷ್ಟು ದೂರದವರೆಗೆ ಲಕ್ಷದ್ವೀಪದ ದ್ವೀಪಗಳು ನೆಲೆಸಿವೆ. ಎಲ್ಲೆಡೆ ನೋಡಿದರೂ ಅರಬ್ಬಿ ಸಮುದ್ರದ ಅದ್ಭುತ ನೋಟಗಳು, ಪಾಮ್ ಗಿಡಗಳು, ವೈವಿಧ್ಯಮಯ ಸಮುದ್ರ ಜೀವನದ ಅನುಭವ ಹಾಗೂ ರುಚಿಕರವಾದ ಸಮುದ್ರ ಖಾದ್ಯಗಳು, ತಂಗಲು ಉತ್ತಮ ರಿಸಾರ್ಟುಗಳು, ಇವು ಲಕ್ಷದ್ವೀಪದ ಗುರುತು.

ಚಿತ್ರಕೃಪೆ: Sankara Subramanian

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X