Search
  • Follow NativePlanet
Share
» »ಗೋವಾದ ಕೆಲ ಸುಂದರ ಬೀಚುಗಳು

ಗೋವಾದ ಕೆಲ ಸುಂದರ ಬೀಚುಗಳು

By Vijay

ಹೊಸ ವರ್ಷದ ಸಂಭ್ರಮಾಚರಣೆ, ಪಾರ್ಟಿಗಳು, ಸಂಗೀತೋತ್ಸವಗಳು, ಉತ್ಸಾಹಭರಿತ ವಾತಾವರಣ, ವೈವಿಧ್ಯಮಯ ಶಾಪಿಂಗ್, ಇವೆಲ್ಲವುಗಳನ್ನು ಎಳೆ ಎಳೆಯಾಗಿ ಅನುಭವಿಸಲು ವಿರಾಮ ಸಮಯ....ಅಬ್ಬಾ ಜೀವನದಲ್ಲಿ ಇದೊಂದು ಸಂತಸಮಯ ಸಮಯ ಅನ್ನಿಸದೆ ಇರಲಾರದು. ಹೌದು ಇಂತಹ ಪ್ರತಿಯೊಂದು ಚಟುವಟಿಕೆಗಳನ್ನು ಭಾರತದ ಜನಪ್ರೀಯ ಪ್ರವಾಸಿ ಸ್ಥಳವಾದ ಗೋವಾದಲ್ಲಿ ಅನುಭವಿಸಬಹುದು.

ವರ್ಷಾಂತ್ಯ ಬಂತೆಂದರೆ ಸಾಕು ಕನ್ನಡ, ಹಿಂದಿ, ತಮಿಳು, ತೆಲುಗು ಹೀಗೆ ವಿವಿಧ ಚಲನಚಿತ್ರೋದ್ಯಮದ ಹೆಸರಾಂತ ಜನರು, ನಟ ನಟಿಯರು ಗೋವಾಗೆ ಪ್ರವಾಸ ಹೊರಡುವುದು ಸಾಮಾನ್ಯ. ಈ ಸಮಯದಲ್ಲಿ ಗೋವಾ ಅಂತೂ ತನ್ನಲ್ಲಿರುವ ಅದ್ಭುತವಾದ ಕಡಲ ತೀರಗಳಿಂದ ಸಾಕಷ್ಟು ಕಂಗೊಳಿಸುತ್ತದೆ ಹಾಗೂ ವಾತಾವರಣದಲ್ಲಿ ಏನೋ ಒಂದು ರೀತಿಯ ಆಯಾಸ್ಕಾಂತೀಯ ಅಲೆಗಳು ರೂಪಗೊಂಡು ಜನರನ್ನು ತಮ್ಮತ್ತ ಆಕರ್ಷಿಸುತ್ತ ತೊಡಗುತ್ತವೆ. ಮೂಲವಾಗಿ ಗೋವಾದ ಸುಂದರ ಕಡಲ ಕಿನಾರೆಗಳಲ್ಲಿ ಜನರು ಆನಂದಮಯವಾದ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.

ವಿಶೇಷ ಲೇಖನ : ಭಾರತದ 100 ಸುಂದರ ಕಡಲ ತೀರಗಳು

ಪ್ರಸ್ತುತ ಲೇಖನದ ಮೂಲಕ ಉತ್ತರ ಹಾಗೂ ದಕ್ಷಿಣ ಗೋವಾಗದಲ್ಲಿ ಕಂಡುಬರುವ ಕೆಲ ಸುಂದರ ಹಾಗೂ ಆಕರ್ಷಕ ಕಡಲ ತೀರಗಳು ಯಾವುವು ಎಂಬುದರ ಕುರಿತು ತಿಳಿಯಿರಿ. ನೀವು ಪ್ರತಿ ಸಲ ಗೋವಾಗೆ ಹೋದಾಗ ಕೇವಲ ಒಂದೊ ಎರಡೊ ಕಡಲ ತೀರಗಳಿಗೆ ಭೇಟಿ ನೀಡುತ್ತಿದ್ದರೆ, ಖಂಡಿತವಾಗಿಯೂ ಈ ಲೇಖನವು ನಿಮಗೆ ಇನ್ನೂ ಕೆಲ ಕಡಲ ತೀರಗಳ ಆಯ್ಕೆಗಳನ್ನು ನೀಡುತ್ತದೆ. ಗೋವಾ ಬೆಂಗಳೂರಿನಿಂದ 620 ಕಿ.ಮೀ ಗಳಷ್ಟು ದೂರದಲ್ಲಿದ್ದು ವಿಮಾನ, ರೈಲು ಹಾಗೂ ಬಸ್ಸುಗಳು ಇಲ್ಲಿಗೆ ತೆರಳಲು ಲಭ್ಯವಿದೆ.

ಗೋವಾದಲ್ಲಿರುವ ಹೋಟೆಲುಗಳು

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಗೋವಾದಲ್ಲಿ ಕಂಡುಬರುವ ಕೆಲ ಸುಂದರ ತೀರಗಳನ್ನು ಒಂದೊಂದಾಗಿ ಸ್ಲೈಡುಗಳ ಮೂಲಕ ನೋಡುತ್ತ ತಿಳಿಯಿರಿ. ಗೋವಾ ಚಿಕ್ಕ ಪ್ರದೇಶವಾಗಿರುವುದರಿಂದ ಕಡಲ ತೀರಗಳ ಮಧ್ಯದ ದೂರವು ಅಷ್ಟೊಂದು ಹೆಚ್ಚಿರಲಾರದೆ ಸುಲಭವಾಗಿ ಬಾಡಿಗೆ ಟ್ಯಾಕ್ಸಿಗಳ ಮೂಲಕ ತೆರಳಬಹುದಾಗಿದೆ.

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಕಲಂಗೂಟ್ ಬೀಚ್ : ಗೋವಾದಲ್ಲಿರುವ ಕಲಂಗೂಟ್ ಹೆಸರಿನ ಕಡಲ ತೀರವು ಬಹು ಜನಪ್ರೀಯ ಆಕರ್ಷಣೆಗಳ ಪೈಕಿ ಒಂದಾಗಿದೆ. ಸಾಕಷ್ಟು ಪ್ರವಾಸಿಗರಿಂದ ಈ ಕಡಲ ತೀರವು ತುಂಬಿರುತ್ತದೆ. ಅಲ್ಲದೆ ಆಕರ್ಷಕ ಜಲಕ್ರೀಡೆಗಳನ್ನೂ ಸಹ ಇಲ್ಲಿ ಆಸ್ವಾದಿಸಬಹುದಾಗಿದೆ. ಗೋವಾ ರಾಜಧಾನಿ ಪಣಜಿಯಿಂದ 13 ಕಿ.ಮೀ ದೂರದಲ್ಲಿರುವ ಇದು ಮಾಪುಸಾದಿಂದ ಕೇವಲ ಎಂಟು ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Suddhasatwa Bhaumik

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಡೋನಾ ಪೌಲಾ ಕಡಲ ತೀರ : ಪಣಜಿಯಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರವಿರುವ ಡೊನಾ ಪೌಲಾ ಕಡಲ ತೀರವು ಪ್ರವಾಸಿಗರು ಗೋವಾದಲ್ಲಿ ಭೇಟಿ ನೀಡಬಯಸುವ ಜನಪ್ರೀಯ ಕಡಲ ತೀರವಾಗಿದೆ. ಪಣಜಿಯಿಂದ ಇಲ್ಲಿಗೆ ತೆರಳಲು ಬಸ್ಸುಗಳು, ಟ್ಯಾಕ್ಸಿಗಳು ಸುಲಭವಾಗಿ ದೊರೆಯುತ್ತವೆ. ವಸಾಹತು ಕಾಲದ ಪೊರ್ಚುಗಲ್ ವಾಯ್ಸ್ ರಾಯ್ ರೊಬ್ಬರ ಮಗಳ ಹೆಸರು ಈ ಕಡಲ ತೀರಕ್ಕೆ ಬಂದಿದೆ.

ಚಿತ್ರಕೃಪೆ: Koshy Koshy

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಕೋಲ್ವಾ ಕಡಲ ತೀರ : ದಕ್ಷಿಣ ಗೋವಾದಲ್ಲಿರುವ ಈ ಕಡಲ ತೀರವು ಮಾರ್ಗೊದಿಂದ ಎಂಟು ಕಿ.ಮೀ ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಈ ಕಡಲ ತೀರವೂ ಕೂಡ ಸಾಕಷ್ಟು ಜನಪ್ರೀಯವಾಗಿದ್ದು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Sandra Cohen-Rose and Colin Rose

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಬಾಗಾ ಕಡಲ ತೀರ : ಯಾವಾಗಲೂ ಜನ ಹಾಗೂ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುವ ಬಾಗಾ ಕಡಲ ತೀರವು ಗೋವಾದ ಆಕರ್ಷಕ ಸ್ಥಳಗಳ ಪೈಕಿ ಒಂದಾಗಿದೆ. ಉತ್ತರ ಗೋವಾದಲ್ಲಿರುವ ಈ ಕಡಲ ತೀರವು ಪಣಜಿಯಿಮ್ದ 16 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ.

ಚಿತ್ರಕೃಪೆ: Leonora Enking

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಅಗುವಾಡಾ ಕಡಲ ತೀರ : ಅಗೊಂಡಾ ಎಮ್ತಲೂ ಕರೆಯಲ್ಪಡುವ ಈ ಕಡಲ ತೀರವು ದಕ್ಷಿಣ ಗೋವಾದಲ್ಲಿದ್ದು ಐತಿಹಾಸಿಕ ಅಗುವಾಡಾ ಕೋಟೆಯಿಂದಾಗಿ ಹೆಚ್ಚು ಖ್ಯಾತಿ ಪಡೆದಿದೆ. ಈ ಕಡಲ ತೀರವು ಗೋವಾದ ಇತರೆ ಕಡಲ ತೀರಗಳಂತೆ ಸಾಕಷ್ಟು ಜನರನ್ನು ಹೊಂದಿರುವುದಿಲ್ಲ. ಆದ್ದರಿಂದ ಶಾಂತಮಯ ಪರಿಸರ (ಕೇವಲ ಸಮುದ್ರದಲೆಗಳ ನಾದ ಹೊರತುಪಡಿಸಿ) ದಲ್ಲಿ ವಿಶ್ರಾಂತಿ ಪಡೆಯಬಹುದಾದ ಉತ್ತಮ ಬೀಚು ಇದಾಗಿದೆ. ಗೋವಾದ ಕಣಕೊಣ ಬಸ್ಸು ನಿಲ್ದಾಣ ಹಾಗೂ ಪಲೋಲೆಮ್ ಗಳಿಂದ ನಿಯಮಿತ ಸಂಖ್ಯೆಯಲ್ಲಿ ಇಲ್ಲಿಗೆ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Aleksandr Zykov

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಪಲೋಲೆಮ್ ಕಡಲ ತೀರ : ಗೋವಾದ ಅತಿ ಸುಂದರ ಕಡಲ ತೀರಗಳ ಪೈಕಿ ಒಂದಾಗಿದೆ ಪಲೋಲೆಮ್ ಕಡಲ ತೀರ. ಹಾಗಾಗಿ ಇದನ್ನು ಪೆರಡೈಸ್ ಬೀಚ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಗೋವಾದ ಮಡಗಾಂವ್ ಗೆ ಹತ್ತಿರದಲ್ಲಿರುವ ಪಲೋಲೆಮ್ ಗೆ ಸರ್ಕಾರಿ ಬಸ್ಸುಗಳು ಮಡಗಾಂವ್ ನಿಂದ ದೊರೆಯುತ್ತವೆ.

ಚಿತ್ರಕೃಪೆ: Vaibhav San

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಮೀರಾಮಾರ್ ಕಡಲ ತೀರ : ಗೋವಾದ ಪಣಜಿ ಪ್ರದೇಶದಲ್ಲಿರುವ, ಹೆಚ್ಚು ಜನರು ಭೇಟಿ ನೀಡಲ್ಪಡುವ ಕಡಲ ಕಿನಾರೆಗಳ ಪೈಕಿ ಮೀರಾಮಾರ್ ಕಡಲ ತೀರವೂ ಸಹ ಒಂದು. ಮಾಂಡೋವಿ ನದಿ ಅರಬ್ಬಿ ಸಮುದ್ರದಲ್ಲಿ ಸಮಾಗಮಗೊಳ್ಳುವ ಸ್ಥಳದಲ್ಲಿ ರೂಪಗೊಂಡಿರುವ ಈ ಚಿಕ್ಕ ಕಡಲ ತೀರದಲ್ಲಿ ಆವಾಗಾವಾಗ ಉತ್ಸವಗಳನು ಆಯೋಜಿಸಲಾಗುತ್ತಿರುತ್ತದೆ.

ಚಿತ್ರಕೃಪೆ: Praveen

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಅರಂಬೋಲ್ ಕಡಲ ತೀರ : ಮೂಲತಃ ಇದೊಂದು ಬೆಸ್ತರ ಹಳ್ಳಿಯಾಗಿದ್ದು ಗೋವಾದ ಪೆರ್ನೆಮ್ ಪ್ರದೇಶದಲ್ಲಿದೆ. ಇದೊಂದು ಅನನ್ಯ ಪರಿಸರ ಹೊಂದಿರುವ ಕಡಲ ತೀರ ಪ್ರದೇಶವಾಗಿದ್ದು ಹೆಚ್ಚಾಗಿ ವಿದೇಶಿಯರೆ ಭೇಟಿ ನೀಡುತ್ತಾರೆ. ಗೋವಾ ಅಂತಾರ್‍ಆಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಒಂದು ಘಂಟೆ ಪ್ರಯಾಣಾವಧಿಯಷ್ಟು ದೂರದಲ್ಲಿ ಕಡಲ ತಡಿ ಸ್ಥಿತವಿದೆ.

ಚಿತ್ರಕೃಪೆ: Ridinghag

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ವಾಗಾತೋರ್ ಕಡಲ ತೀರ : ಕೆಂಪು ಮಿಶ್ರಿತ ಬೆಟ್ಟಗಳ ಎರಡು ಗುಡ್ಡಗಳಲ್ಲಿ ಈ ಕಡಲ ತೀರವು ವಿಭಾಜನೆಗೊಂಡಿದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಗೋವಾದ ಬಾರ್ಡೇಜ್ ತಾಲುಕಿನಲ್ಲಿ ಈ ಕಡಲ ತೀರವನ್ನು ಕಾಣಬಹುದಾಗಿದ್ದು ತೆರಳಲು ಪಣಜಿಯಿಂದ ಟ್ಯಾಕ್ಸಿಗಳು ದೊರೆಯುತ್ತವೆ.

ಚಿತ್ರಕೃಪೆ: Zerohund

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಬಾಣಾವಲಿ ಕಡಲ ತೀರ : ಆಂಗ್ಲದಲ್ಲಿ ಬೆನೌಲಿಮ್ ಎಂದು ಕರೆಯಲ್ಪಡುವ ಬಾಣಾವಲಿ ಗೋವಾದ ಒಂದು ಗ್ರಾಮವಾಗಿದ್ದು ತನ್ನಲ್ಲಿರುವ ಕಡಲ ತೀರದಿಂದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Klaus Nahr

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಅಂಜುನಾ ಕಡಲ ತೀರ : ಕ್ಯಾಂಡೋಲಿಮ್ ಬೀಚಗೆ 3 ಕಿ.ಮೀ ಅಂತರದಲ್ಲಿರುವ ಅಂಜುನಾ ಬೀಚನ್ನು ಸರಳವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ. ಈ ಪ್ರದೇಶದಲ್ಲಿ ವ್ಯವಹಾರಿಕ ಮಾದರಿಯ ಜೀವನಶೈಲಿಯನ್ನು ಹುಡುಕುವುದು ಕಷ್ಟವಾಗಿದ್ದು ಮಂದಗತಿಯಲ್ಲಿ ಹಾಗು ಆರಾಮದಾಯಕವಾಗಿ ಸಾಗುತ್ತಿರುವ ಜೀವನದ ಅನುಭವವನ್ನು ಆಸ್ವಾದಿಸಬಹುದು. ಆಧುನಿಕತೆಯ ಹಲವಾರು ಹೊಟೆಲಗಳಿರುವುದರಿಂದ ನಿಮಗೆ ಇಲ್ಲೊಂದು ವಿಭಿನ್ನ ಬಗೆಯ ಉಲ್ಲಾಸಮಯ ಅನುಭವವಾಗುವುದು ಖಚಿತ.

ಚಿತ್ರಕೃಪೆ: Os Rúpias

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಮ್ಯಾಂಡ್ರೇಮ್ ಕಡಲ ತೀರ : ಏಕಾಂತ ಬಯಸುವ ಪ್ರೇಮಿಗಳು ಅಥವಾ ನವ ದಂಪತಿಗಳಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಕೆಲವೆ ಕೆಲವು ಶ್ಯಾಕ್ ಗಳಿದ್ದು ಸಮಯವನ್ನು ಪುಸ್ತಕಗಳನ್ನು ಓದುತ್ತಲೊ ಇಲ್ಲವೆ ಬರೆಯುತ್ತಲೊ ಸುಖವಾಗಿ ಮತ್ತು ಶಾಂತವಾಗಿ ಕಳೆಯಬಹುದು.ಈ ಕಡಲ ತೀರದಲ್ಲಿ 'ಕ್ಯಾಸುವಾರಿನಾ' ಎಂಬ ಹೆಸರಿನ ಸುಂದರವಾದ ಗಿಡಗಳನ್ನು ಕಾಣಬಹುದು ಹಾಗು ವ್ಹೈಟ್ ಬೆಲ್ಲೀಯ್ಡ್ ಫಿಶ್ ಈಗಲ್ (ಒಂದು ಬಗೆಯ ಮೀನು ಹಿಡಿಯುವ ಹದ್ದು) ಗಳನ್ನೂ ಕೂಡ ವಿಕ್ಷೀಸಬಹುದು.

ಚಿತ್ರಕೃಪೆ: Jonathan

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಬೇತುಲ್ ಕಡಲ ತೀರ : ದಕ್ಷಿಣ ಗೋವಾದ ಭಾಗದಲ್ಲಿ ಬರುವ ಬೇತುಲ್ ಬೀಚ್ ಒಂದು ನಿಧಾನ ಗತಿಯ ಶೈಲಿಯನ್ನು ಹೊಂದಿದಂತಹ ಕಡಲ ತೀರವಾಗಿದೆ. ಕೋಲ್ವಾದ ದಕ್ಷಿಣಕ್ಕೆ ಕೆಲವೆ ಹೆಜ್ಜೆಗಳ ಅಂತರದಲ್ಲಿ ಇದನ್ನು ಕಾಣಬಹುದು. ಇಲ್ಲಿ ಲೀಲಾ, ತಾಜ್ ಮತ್ತು ಹಾಲಿಡೆ ಇನ್ ಗಳಂತಹ ಪಂಚತಾರ ಹೋಟೆಲ್ ಗಳನ್ನು ನೋಡಬಹುದು. ಇದು ಕೆಲವು ಬಗೆಯ ಉತ್ತಮ ಸಿ ಫುಡ್ ಗಳಿಗೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: goatourism

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಬೋಗ್ಮಾಲೊ ಕಡಲ ತೀರ : ಗೋವಾದ ಕರಾವಳಿ ತೀರದ ಮಧ್ಯದಲ್ಲಿರುವ ಬೊಗ್ಮಾಲೊ ಕಡಲ ತೀರವು ವಾಸ್ಕೊ ಡಾ ಗಾಮಾ ನಗರಕ್ಕೆ ಹತ್ತಿರವಾಗಿದೆ. ಆಧುನಿಕತೆಯ ಜನಜೀವನವನ್ನು ಇಲ್ಲಿ ನೋಡಬಹುದಾಗಿದ್ದು, ಹಲವಾರು ಮನರಂಜನಾ ಚಟುವಟಿಕೆಗಳು ಮತ್ತು ಜಲಕ್ರೀಡೆಗಳು ಸರ್ವೆ ಸಾಮಾನ್ಯವಾಗಿದೆ.ಈ ಕಡಲ ತೀರದ ವಿಶೇಷತೆಯೆಂದರೆ, ಇದು ವಾಸ್ಕೊ ನಗರ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದು.

ಚಿತ್ರಕೃಪೆ: Dinesh Bareja

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಕ್ಯಾಂಡೋಲಿಮ್ ಕಡಲ ತೀರ : ಮನರಂಜನೆಯ ಸ್ಥಳಗಳಿಗೆ ಹತ್ತಿರವಿದ್ದರೂ ಕೂಡ ಶಾಂತತೆಯ ಛಾಪು ಕಂಡುಬರುವ ಕ್ಯಾಂಡೋಲಿಮ್ ಬೀಚ್ ಕಲಂಗುಟ ಮತ್ತು ಬಾಗಾ ಬೀಚಗಳಿಗಿಂತಲೂ ಅನನ್ಯವಾಗಿದೆ.ಈ ಬೀಚಿಗೆ ಒಂದು ಪರಿಪಕ್ವವಾದ ಕೇಂದ್ರವಿಲ್ಲವಿರುವುದು ಗಮನಿಸಬೇಕಾದ ಸಂಗತಿ. ಇಲ್ಲಿ ಕೆಲವೆ ಕೆಲವು ಶ್ಯಾಕಗಳು ಮತ್ತು ಉಪಹಾರಗೃಹಗಳಿವೆ. ಇದರ ಸರಳವಾದ ಆಕಾರ, ಗಾತ್ರ ಮತ್ತು ಸ್ವಚ್ಛತೆಯಿಂದ ಅದ್ಭುತ ಹಾಗು ವಿಶೀಷ್ಟವಾದ ಅನುಭವವನ್ನು ನೀಡುತ್ತದೆ. ಕ್ಯಾಂಡೋಲಿಮ್ ಕಡಲ ತೀರದಲ್ಲಿ ಕೆಲ ವರ್ಷಗಳಿಂದ ನಿಂತ 'ರಿವರ್ ಪ್ರಿನ್ಸೆಸ್ಸ್' ಹಡಗನ್ನು ಕಾಣಬಹುದು.

ಚಿತ್ರಕೃಪೆ: Leonora Enking

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಮೊರ್ಜಿಮ್ ಕಡಲ ತೀರ : ಗೋವಾ ಕರಾವಳಿ ತೀರದ ಉತ್ತರ ಭಾಗದಲ್ಲಿ ನೆಲೆಸಿರುವ ಸುಂದರವಾದ ಇನ್ನೊಂದು ಕಡಲ ತೀರವೆಂದರೆ ಮೊರ್ಜಿಮ್. ಸಿಸ್ಸಂಶಯವಾಗಿ ಅರೇಬಿಯನ್ ಸಮುದ್ರದ ಅತಿ ಸುಂದರ ನೋಟ ಇಲ್ಲಿಂದ ಗೋಚರಿಸುತ್ತದೆ. ಇದು ಚರ್ಪೋರಾ ನದಿಗೆ ಹತ್ತಿರವಾಗಿಯೂ ಇರುವುದರಿಂದ ಸಾಕಷ್ಟು ಎಳೆನೀರು ಹಾಗು ಸಿಫುಡ್ ಗಳು ಇಲ್ಲಿ ದೊರೆಯುತ್ತವೆ.

ಚಿತ್ರಕೃಪೆ: Os Rúpias

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ಉಟೊರ್ಡಾ ಕಡಲ ತೀರ : ನೀವೇನಾದರೂ ಪ್ರಕೃತಿ ಪ್ರಿಯರಾಗಿದ್ದರೆ, ಕಿರಿಕಿರಿಯಿಲ್ಲದ ಸೂರ್ಯಸ್ನಾನ ಮಾಡುತ್ತ ಬಿಸಿಬಿಸಿಯಾದ ಸಿಫುಡ್ ತಿನ್ನಬಯಿಸಬೇಕೆಂದಿದ್ದರೆ, ಹಾಗಾದರೆ ಬನ್ನಿ..ಉಟೋರ್ಡಾ ಬೀಚ್ ಗೆ. ಈ ಕಡಲ ತೀರದಲ್ಲಿರುವ ಶ್ಯಾಕ್ ಗಳು ಕೇವಲ ಅವಶ್ಯಕತೆಗನುಗುಣವಾದ ಸೇವೆಗಳನ್ನು ಒದಗಿಸುತ್ತವೆ ಮತ್ತು ಅನಾವಶ್ಯಕವಾದ ವ್ಯಾಪಾರಿಗಳಿಂದ ಈ ಕಡಲ ತೀರವು ಮುಕ್ತವಾಗಿದೆ.

ಚಿತ್ರಕೃಪೆ: Extempore

ಸುಂದರ ಗೋವಾ ತೀರಗಳು:

ಸುಂದರ ಗೋವಾ ತೀರಗಳು:

ವರ್ಕಾ ಕಡಲ ತೀರ : ದಕ್ಷಿಣ ಗೋವಾದಲ್ಲಿ ಕಂಡು ಬರುವ ಕೋಲ್ವಾ ಕಡಲ ತೀರದ ಹಾಗೆ ದೊಡ್ಡ ಪ್ರಮಾಣದಲ್ಲಿ ಇರದೆ ಹೋದರೂ ವರ್ಕಾ ಬೀಚ್ ಉತ್ತಮವಾದ ಅನುಭವವನ್ನು ಒದಗಿಸುವುದರಲ್ಲಿ ಕಮ್ಮಿ ಏನೂ ಇಲ್ಲ. ಶ್ವೇತ ವರ್ಣದ ಮರಳು ಮತ್ತು ಪಾಮ್ ಗಿಡಗಳನ್ನು ಹೊತ್ತ ಈ ಕಡಲ ತೀರವು ಮಧ್ಯಾಹ್ನದ ಹೊತ್ತನ್ನು ಆರಾಮದಾಯಕವಾಗಿ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಇಷ್ಟೆ ಅಲ್ಲ ಈ ಕಡಲ ತೀರದಲ್ಲಿ ಕೈಗೆಟುಕುವ ಬೆಲೆಯಲ್ಲಿ ವಿವಿಧ ಬಗೆಯ ಪಾನೀಯಗಳು, ಸಾಂಪ್ರದಾಯಿಕ ಶೈಲಿಯ ಗೋವಾದ ತಿಂಡಿ ತಿನಿಸುಗಳು ಕೂಡ ದೊರೆಯುತ್ತವೆ. ವರ್ಕಾ ಗ್ರಾಮದಲ್ಲಿರುವ ಜಲೋರ್ ಕಡಲ ತೀರ.

ಚಿತ್ರಕೃಪೆ: Klaus Nahr

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X