Search
  • Follow NativePlanet
Share
» »ಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವು

ಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವು

ಬಹುತೇಕರಿಗೆ ವಾರಾಂತ್ಯದ ದಿನಗಳಗಳನ್ನು ಚೆನ್ನಾಗಿ ಎಂಜಾಯ್‌ ಮಾಡಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಸ್ನೇಹಿತರ ಜೊತೆ ಸೇರಿ ಮೊದಲೇ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಸಾಹಸಮಯ ತಾಣಗಳಿಗೆ ಹೋಗೊದು ಬಹಳಷ್ಟು ಜನರ ವೀಕೆಂಡ್ ಪ್ಲ್ಯಾನ್ ಆಗಿರುತ್ತದೆ. ಬೆಂಗಳೂರು ಸುತ್ತಮುತ್ತ ವೀಕೆಂಡ್‌ನ್ನು ಎಂಜಾಯ್‌ ಮಾಡಬೇಕೆಂದಿದ್ದೀರಾ, ನೀವು ಸಾಹಸಮಯ ಚಟುವಟಿಕೆಯನ್ನು ಇಷ್ಟಪಡುವರಾಗಿದ್ದರೆ ಈ ಲೇಖನವು ನಿಮಗೆ ಸೂಕ್ತವಾಗಿದೆ.

ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ

ನದಿಗಳು, ಬೆಟ್ಟಗಳು, ಬಯಲು ಪ್ರದೇಶಗಳು, ಹುಲ್ಲುಗಾವಲುಗಳು, ಕಾಡುಗಳು ಮತ್ತು ಕಣಿವೆಗಳ ರೂಪದಲ್ಲಿ ಪರಿಸರದ ಅನೇಕ ನೈಸರ್ಗಿಕ ಅದ್ಭುತಗಳಿಂದ ತುಂಬಿರುವುದರಿಂದ, ಅದರ ಸೌಂದರ್ಯವು ಅತ್ಯುತ್ತಮವಾಗಿರುತ್ತದೆ, ಅವುಗಳನ್ನು ಅನ್ವೇಷಿಸುವ ಅವಕಾಶವನ್ನು ನೀವು ತಪ್ಪಿಸಿಕೊಳ್ಳಬಾರದು. ಆದ್ದರಿಂದ, ಬೆಂಗಳೂರಿನ ಸುಂದರವಾದ ವಾತಾವರಣದ ನಡುವೆ ಕೆಲವು ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮಜಾನೇ ಬೇರೆ.

ರಾಕ್ ಕ್ಲೈಂಬಿಂಗ್ (ಪರ್ವತಾರೋಹಣ)

ರಾಕ್ ಕ್ಲೈಂಬಿಂಗ್ (ಪರ್ವತಾರೋಹಣ)

ಪರ್ವತಾರೋಹಣವು ಪ್ರತಿ ಸಾಹಸ ಅನ್ವೇಷಕರು ಇಷ್ಟಪಡುವ ಚಟುವಟಿಕೆಗಳಲ್ಲಿ ಒಂದಾಗಿದೆ. ಬೆಟ್ಟಗಳ ಮತ್ತು ಕಲ್ಲಿನ ಭೂಪ್ರದೇಶಗಳ ಭೂಮಿಯಾಗಿರುವ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳು ಪರ್ವತಾರೋಹಣಕ್ಕೆ ಉತ್ತಮ ಅವಕಾಶವನ್ನು ನೀಡುತ್ತವೆ. ಆದ್ದರಿಂದ, ಇದು ರಾಜ್ಯದಾದ್ಯಂತ ನೂರಾರು ಪ್ರವಾಸಿಗರನ್ನು ಮತ್ತು ಪ್ರಯಾಣಿಕರನ್ನು ಆಕರ್ಷಿಸುತ್ತದೆ.

ಬೆಟ್ಟದ ಮೇಲಿರುವ ಈ ಎತ್ತರದ ಕೋಟೆಯನ್ನೇರೋದು ಅಷ್ಟೊಂದು ಸುಲಭವೇನಲ್ಲ ಬೆಟ್ಟದ ಮೇಲಿರುವ ಈ ಎತ್ತರದ ಕೋಟೆಯನ್ನೇರೋದು ಅಷ್ಟೊಂದು ಸುಲಭವೇನಲ್ಲ

ಎಲ್ಲಿದೆ ರಾಕ್ ಕ್ಲೈಂಬಿಂಗ್

ಎಲ್ಲಿದೆ ರಾಕ್ ಕ್ಲೈಂಬಿಂಗ್

ಬೆಂಗಳೂರಿನ ಸುತ್ತಲಿನ ಪ್ರಮುಖ ಸ್ಥಳಗಳಲ್ಲಿ ಸಾವನದುರ್ಗ ಬೆಟ್ಟ, ಚಿತ್ರದುರ್ಗ, ಹಂಪಿ ಬಂಡೆಗಳ ರಚನೆಗಳು ಮತ್ತು ಬಾದಾಮಿ ಬೆಟ್ಟಗಳು ಸೇರಿವೆ. ನೀವು ಬೆಂಗಳೂರಿನ ಗಡಿಯಿಂದ ದೂರ ಹೋಗಬೇಕೆಂದು ಬಯಸದಿದ್ದರೆ, ಚಿತ್ರದುರ್ಗ ಮತ್ತು ಸಾವನದುರ್ಗದ ಅವಳಿ ಬೆಟ್ಟಗಳು ಅತ್ಯುತ್ತಮವಾದ ಆಯ್ಕೆಗಳಾಗಿವೆ.

ಟ್ರೆಕ್ಕಿಂಗ್(ಚಾರಣ)

ಟ್ರೆಕ್ಕಿಂಗ್(ಚಾರಣ)

ಜಗತ್ತಿನಲ್ಲಿ ಅತ್ಯಂತ ಆಕರ್ಷಕ ಸಾಹಸ ಚಟುವಟಿಕೆಗಳಲ್ಲಿ ಟ್ರೆಕ್ಕಿಂಗ್ ಒಂದಾಗಿದೆ. ಆದ್ದರಿಂದ ಇದು ವಿಶ್ವದಾದಯಂತ ಜನರು ಇಷ್ಟಪಡುವಂತಹ ಒಂದು ಚಟುವಟಿಕೆಯಾಗಿದೆ. ನೀವು ಪ್ರತಿಯೊಂದು ಪರ್ವತ ಪ್ರದೇಶವನ್ನು ಟ್ರೆಕರ್ಸ್‌ನ ಪಟ್ಟಿಯಲ್ಲಿ ಕಾಣಬಹುದು. ನೀವು ಕೋರ್ಗ್‌ಗೆ ಟ್ರೆಕ್ಕಿಂಗ್ ಹೋಗಬೇಕೆಂದಿದ್ದರೆ ನೀವು ಸರಿಯಾದ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದೀರಿ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಅಸಂಖ್ಯಾತ ಬೆಟ್ಟಗಳು ಮತ್ತು ಕಡಿದಾದ ಭೂಪ್ರದೇಶಗಳ ಉಪಸ್ಥಿತಿಯ ಕಾರಣದಿಂದಾಗಿ ಟ್ರೆಕ್ಕಿಂಗ್ ಮಾಡಲು ಪರಿಪೂರ್ಣ ತಾಣವಾಗಿದೆ.

 ರಾಮನ ಪಾದದ ಗುರುತನ್ನು ಪೂಜಿಸುವ ಇಲ್ಲಿಗೆ ಭಕ್ತರ ದಂಡೇ ಬರುತ್ತದೆ ರಾಮನ ಪಾದದ ಗುರುತನ್ನು ಪೂಜಿಸುವ ಇಲ್ಲಿಗೆ ಭಕ್ತರ ದಂಡೇ ಬರುತ್ತದೆ

ಟ್ರಕ್ಕಿಂಗ್‌ಗೆ ಬೆಸ್ಟ್‌ ತಾಣ

ಟ್ರಕ್ಕಿಂಗ್‌ಗೆ ಬೆಸ್ಟ್‌ ತಾಣ

ಮಾನ್ಸೂನ್ ಋತುವಿನಲ್ಲಿ, ಈ ಹಾದಿಗಳು ಸೊಂಪಾದ ಸಸ್ಯವರ್ಗದಿಂದ ಸುತ್ತುವರೆದಿರುತ್ತವೆ. ಇವುಗಳು ಅವುಗಳನ್ನು ಮೆಟ್ಟಿಲುಗಳಂತೆ ಸ್ವರ್ಗಕ್ಕೆ ಕಾಣುವಂತೆ ಮಾಡುತ್ತದೆ. ಬೆಂಗಳೂರಿನ ಸುತ್ತಲಿನ ಪ್ರಮುಖ ಸ್ಥಳಗಳಲ್ಲಿ ರಾಮನಗರ, ಮಾಕಿದುರ್ಗ, ಅಂಥಾರ್ಗಂಜ್, ನಂದಿ ಬೆಟ್ಟ, ಬಿ ಆರ್ ಬೆಟ್ಟ ಮತ್ತು ಸ್ಕಂದಗಿರಿ ಇವೆಲ್ಲಾ ಟ್ರಕ್ಕಿಂಗ್‌ಗೆ ಪ್ರಸಿದ್ಧವಾದ ತಾಣಗಳಾಗಿವೆ. ಸುಂದರವಾದ ವನ್ಯಜೀವಿ ಮತ್ತು ವರ್ಣರಂಜಿತ ಹಕ್ಕಿಗಳನ್ನು ಇಲ್ಲಿ ಕಾಣಬಹುದು.

ಸ್ನೊರ್ಕೆಲಿಂಗ್

ಸ್ನೊರ್ಕೆಲಿಂಗ್

ನೀರಿನೊಳಗೆ ಅನ್ವೇಷಣೇ ಮಾಡಬಯಸುವವರಿಗೆ ಸ್ನೊರ್ಕಲಿಂಗ್ ಉತ್ತಮವಾದ ಸಾಹಸ ಚಟುವಟಿಕೆಯಾಗಿದೆ. ಇಲ್ಲಿ ಸ್ನೊರ್ಕಲಿಂಗ್ ಬೆಂಗಳೂರಿನ ಜನಪ್ರಿಯ ಸಾಹಸ ಚಟುವಟಿಕೆ ಅಲ್ಲವಾದರೂ, ಹತ್ತಿರದ ಸ್ಥಳಗಳು, ನದಿಗಳು ಮತ್ತು ಇತರ ಹೊಳೆಗಳಲ್ಲಿನ ನೀರೊಳಗಿನ ಅದ್ಭುತಗಳ ಅನ್ವೇಷಣೆಗಳಿಗೆ ಪ್ರವಾಸಿಗರಿಗೆ ಅವಕಾಶ ನೀಡುವ ಹಲವಾರು ಸ್ಥಳಗಳು ಮತ್ತು ಪ್ರಕೃತಿ ಶಿಬಿರಗಳು ಇನ್ನೂ ಇವೆ.

ಬೆಂಗಳೂರಲ್ಲಿ ಎಲ್ಲಿದೆ?

ಬೆಂಗಳೂರಲ್ಲಿ ಎಲ್ಲಿದೆ?

ನೀವು ಒಮ್ಮೆಯೂ ಸ್ನೋರ್ಕಿಂಗ್‌ನ ಅನುಭವ ಪಡೆದಿಲ್ಲವೆಂದಾದಲ್ಲಿ ನೀವು ಒಮ್ಮೆಯಾದರೂ ಇದನ್ನು ಟ್ರೈ ಮಾಡಲೇ ಬೇಕು. ಬೆಂಗಳೂರಿನ ಪ್ರಮುಖ ಸ್ಥಳಗಳಾದ ಬನ್ನೇರುಘಟ್ಟ ನೇಚರ್ ಪಾರ್ಕ್ ಮತ್ತು ಭೀಮೇಶ್ವರಿ ಪ್ರಕೃತಿ ಶಿಬಿರದಲ್ಲಿ ನೀವು ಸ್ನೋರ್ಕಲಿಂಗ್‌ನ ಅನುಭವವನ್ನು ಪಡೆಯಬಹುದು.

ಕಯಾಕಿಂಗ್

ಕಯಾಕಿಂಗ್

ನೀವು ಬೆಂಗಳೂರಿನ ಸುತ್ತಮುತ್ತಲಿನ ವಾರಾಂತ್ಯವನ್ನು ಕಳೆಯಲು ಉತ್ತಮ ಸಾಹಸಮಯ ಚಟುವಟಿಯನ್ನು ಯೋಚಿಸುತ್ತಿದ್ದೀರಾದ ಕ್ಯಾನೋಯಿಂಗ್ ಮತ್ತು ಕಯಾಕಿಂಗ್ ನಿಮಗೆ ಪರಿಪೂರ್ಣವಾದ ಚಟುವಟಿಕೆಗಳಾಗಿವೆ.
ಬೆಂಗಳೂರು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಾದಶರಾವತಿ ನದಿ, ದಂಡೇಲಿ ವೈಟ್ ವಾಟರ್ಸ್, ಭೀಮೇಶ್ವರಿ, ಬರಾಪೋಲೆ, ಕಬಿನಿ ಮತ್ತು ಚಿಕ್ಕಮಗಳೂರಿನಲ್ಲಿ ಕ್ಯಾನೋಯಿಂಗ್ ಮತ್ತು ಕಯಾಕಿಂಗ್ ಅನುಭವಗಳನ್ನು ಪಡೆಯಬಹುದು.

ಪ್ಯಾರಾಗ್ಲೈಡಿಂಗ್

ಪ್ಯಾರಾಗ್ಲೈಡಿಂಗ್

ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಪರಿಚಯಿಸಲಾದ ಸಾಹಸ ಚಟುವಟಿಕೆಗಳಲ್ಲಿ ಪ್ಯಾರಾಗ್ಲೈಡಿಂಗ್ ಒಂದಾಗಿದೆ. ನೀವು ಬೆಂಗಳೂರಿನ ಸುತ್ತಲೂ ಅನೇಕ ಸ್ಥಳಗಳನ್ನು ಕಾಣುವುದಿಲ್ಲ, ಈ ಸುಂದರ ಅನುಭವವನ್ನು ನೀವು ಪಡೆಯಬಹುದು. ಆದಾಗ್ಯೂ, ನೀವು ಬೆಂಗಳೂರಿನಿಂದ ದೂರ ಹೋಗದೆ ಪ್ಯಾರಾಗ್ಲೈಡಿಂಗ್‌ನ್ನು ಆನಂದಿಸಲು ಬಯಸಿದರೆ, ಬೆಂಗಳೂರಿನಲ್ಲಿರುವ ನಂದಿ ಬೆಟ್ಟ ನೀವು ಪ್ಯಾರಾಗ್ಲೈಡಿಂಗ್ ವೈಭವವನ್ನು ಆಸ್ವಾದಿಸಬಹುದು. ನಂದಿ ಬೆಟ್ಟದ ಹೊರತಾಗಿ, ನೀವು ಪ್ಯಾರಗ್ಲೈಡಿಂಗ್ ಅನುಭವಗಳಿಗಾಗಿ ಕೂರ್ಗ್‌ ಬೆಟ್ಟಗಳಿಗೂ ಹೋಗಬಹುದು.

ಕೇವಿಂಗ್

ಕೇವಿಂಗ್

ಗುಹೆಯೊಳಗೆ ಹೋಗುವುದು ಕೂಡಾ ಒಂದು ರೀತಿಯ ಸಾಹಸಮಯ ಚಟುವಟಿಕೆಯಾಗಿದೆ. ಬೆಂಗಳೂರಿನ ಸುತ್ತ ಹಲವಾರು ಸುಂದರವಾದ ಗುಹೆಗಳ ಉಪಸ್ಥಿತಿಯಿಂದಾಗಿ, ಕೇವಿಂಗ್ ಕಾಲಕಾಲಕ್ಕೆ ಹೆಚ್ಚು ಇಷ್ಟವಾಗುವ ಸಾಹಸ ಚಟುವಟಿಕೆಗಳಲ್ಲಿ ಒಂದಾಗಿದೆ. ಅಂಥರ್ಗಂಜ್ ಗುಹೆಗಳು ಮತ್ತು ಬೇಲಂ ಗುಹೆಗಳಲ್ಲಿ ಈ ಅದ್ಭುತ ಅನುಭವವನ್ನು ನೀವು ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X