Search
  • Follow NativePlanet
Share
» »ಭಾರತದ ಮೊದಲ 8 ವೇಗದ ರೈಲುಗಳು

ಭಾರತದ ಮೊದಲ 8 ವೇಗದ ರೈಲುಗಳು

By Vijay

ಬಡವರಿಂದ ಹಿಡಿದು ಹಿರಿಯ ಮಧ್ಯಮ ವರ್ಗದ ಜನರೆಲ್ಲರಿಗು ಊರುಗಳಿಗೆ ತೆರಳಲು ನೆಚ್ಚಿನ ಸಂಚಾರಿ ಮಾಧ್ಯಮವೆಂದರೆ ರೈಲು ಪ್ರಯಾಣ. ಅಷ್ಟೆ ಅಲ್ಲ, ರೈಲುಗಳಿಂದ ಬಹು ದೂರದ ಊರುಗಳಿಗೆ ನಿರಾಯಾಸವಾಗಿ ತಲುಪಬಹುದಾಗಿರುವುದು ಅಲ್ಲದೆ ಇದರ ಟಿಕೆಟ್ ವೆಚ್ಚವೂ ಕೂಡ ಕೈಗೆಟುಕುವ ರೀತಿಯಲ್ಲಿರುತ್ತದೆ. ಇದೆ ಕಾರಣದಿಂದಲೊ ಏನೊ ಭಾರತದಲ್ಲಿ ಬಹು ಸಂಖ್ಯೆಯಲ್ಲಿ ಜನರು ಇಂದಿಗೂ ಕೂಡ ರೈಲು ಪ್ರಯಾಣವನ್ನೆ ನೆಚ್ಚಿಕೊಂಡಿದ್ದಾರೆ. ಇನ್ನೂ ರೈಲುಗಳು ಕೂಡ ಅಷ್ಟೆ, ಹಾಕಲಾದ ಹಳಿಗಳ ಮೇಲೆ ಸರಾಗವಾಗಿ ಚಲಿಸುತ್ತ, ರಸ್ತೆಗಳಲ್ಲಿ ಕಂಡುಬರುವಂತೆ ಯಾವ ಟ್ರಾಫಿಕ್ ಸಮಸ್ಯೆಯಿಲ್ಲದೆ ಪ್ರಯಾಣಿಕರನ್ನು ಅವರು ಹೋಗಬೇಕಾದ ಸ್ಥಳಗಳಿಗೆ ನಿರರ್ಗಳವಾಗಿ ತಲುಪಿಸುತ್ತದೆ.

ಬಸ್ಸು ಹಾಗು ರೈಲುಗಳನ್ನು ಅವಲೋಕಿಸಿದಾಗ ಸಾಮಾನ್ಯವಾಗಿ ರೈಲುಗಳು ಗರಿಷ್ಠ ಮಟ್ಟದ ವೇಗವನ್ನು ಹೊಂದಿದ್ದು ಬಹು ಸಮಯದವರೆಗೆ ಆ ವೇಗವನ್ನು ಕಾಪಾಡಿಕೊಳ್ಳುತ್ತದೆ. ಇದನ್ನೆ ಬಸ್ಸು ಹಾಗು ಇತರೆ ವಾಹನಗಳ ವಿಷಯಕ್ಕೆ ಬಂದಾಗ ಹೇಳುವಂತಿಲ್ಲ, ಏಕೆಂದರೆ ರಸ್ತೆಗಳಲ್ಲಿ ಚಲಿಸುವಾಗ ಬೇರೆ ಬೇರೆ ವಾಹನಗಳು ಇರುವುದರಿಂದ ವೇಗವನ್ನು ಆವಾಗಾವಾಗ ಮಿತ ಮಾಡಬೇಕಾಗುತ್ತದೆ. ರೈಲಿನಲ್ಲಿ ವೇಗವಾಗಿ ಚಲಿಸುವುದು ಎಂದರೆ ಒಂದು ರೀತಿಯ ಖುಷಿ ಹಾಗು ರೋಮಾಂಚನ! ನೀವೇನಾದರೂ ಒಮ್ಮೆಯಾದರೂ ಭಾರತದ ಅತಿ ವೇಗದ ರೈಲಿನಲ್ಲಿ ಪ್ರಯಾಣಿಸಬೇಕೆಂಬ ಹಂಬಲ ಇಟ್ಟುಕೊಂಡಿದ್ದಲ್ಲಿ ಈ ಲೇಖನವನ್ನು ಓದಿ ಹಾಗು ನಿಮ್ಮ ಯೋಜನೆಯನ್ನು ಹಾಕಿ.

ಶತಾಬ್ದಿ ಎಕ್ಸ್ ಪ್ರೆಸ್ (ನವದೆಹಲಿ - ಭೋಪಾಲ್):

ಶತಾಬ್ದಿ ಎಕ್ಸ್ ಪ್ರೆಸ್ (ನವದೆಹಲಿ - ಭೋಪಾಲ್):

ಇದೊಂದು ಸೂಪರ್ ಫಾಸ್ಟ್ ಪ್ರಯಾಣಿಕ ರೈಲಾಗಿದ್ದು ನವದೆಹಲಿ ಹಾಗು ಮಧ್ಯಪ್ರದೇಶ ರಾಜ್ಯದ ರಾಜಧಾನಿ ಭೋಪಾಲ್ ಮಧ್ಯೆ ಸಂಚರಿಸುತ್ತದೆ. ಇದರ ಸರಾಸರಿ ವೇಗವು 91.85 ಕಿ.ಮೀ ಪ್ರತಿ ಘಂಟೆಯಾಗಿದ್ದು ಗರಿಷ್ಠ ವೇಗವು 150 ಕಿ.ಮೀ ಪ್ರತಿ ಘಂಟೆಯವರೆಗೂ ತಲುಪುತ್ತದೆ.

ರಾಜಧಾನಿ ಎಕ್ಸ್ ಪ್ರೆಸ್:

ರಾಜಧಾನಿ ಎಕ್ಸ್ ಪ್ರೆಸ್:

ಮುಂಬೈ ಹಾಗು ದೆಹಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಸರಾಸರಿ ವೇಗ 91.56 ಕಿ.ಮೀ ಪ್ರತಿ ಘಂಟೆಯಾಗಿದ್ದು ಗರಿಷ್ಠ ವೇಗ 130 ಕಿ.ಮೀ ಪ್ರತಿ ಘಂಟೆಯವರೆಗೂ ತಲುಪುತ್ತದೆ.

ಚಿತ್ರಕೃಪೆ: V Malik

ಡುರೊಂಟೊ ಎಕ್ಸ್ ಪ್ರೆಸ್:

ಡುರೊಂಟೊ ಎಕ್ಸ್ ಪ್ರೆಸ್:

ಸಿಲ್ಡಾಹ್ ಹಾಗು ದೆಹಲಿ ಮಧ್ಯೆ ಸಂಚರಿಸುವ ಡುರೊಂಟೊ ಎಕ್ಸ್ ಪ್ರೆಸ್ ರೈಲಿನ ಸರಾಸರಿ ವೇಗ 91.13 ಕಿ.ಮೀ ಪ್ರತಿ ಘಂಟೆಯಾಗಿದೆ. ಗರಿಷ್ಠ ವೇಗ ನೂರರ ಗಡಿ ದಾಟುತ್ತದೆ. ಡುರೊಂಟೊ ಒಂದು ಭಿನ್ನ ರೀತಿಯ ಪ್ರಯಾಣಿಕ ರೈಲಾಗಿದ್ದು ಮಧ್ಯದಲ್ಲಿ ಯಾವುದೆ ಪ್ರಯಾಣಿಕ ನಿಲುಗಡೆ ಇಲ್ಲದೆ ನಿರ್ಗಮನದ ಸ್ಥಳದಿಂದ ನಿಗದಿತ ಸ್ಥಳಕ್ಕೆ ಸಂಚರಿಸುತ್ತದೆ.

ಚಿತ್ರಕೃಪೆ: Smeet Chowdhury

ಶತಾಬ್ದಿ ಎಕ್ಸ್ ಪ್ರೆಸ್ (ದೆಹಲಿ - ಕಾನ್ಪೂರ್):

ಶತಾಬ್ದಿ ಎಕ್ಸ್ ಪ್ರೆಸ್ (ದೆಹಲಿ - ಕಾನ್ಪೂರ್):

ಕಾನ್ಪೂರ್ ಸೆಂಟ್ರಲ್ ದಿಂದ ಹೊರಡುವ ಈ ರೈಲನ್ನು ಫೆಬ್ರುವರಿ 7, 2010 ರಲ್ಲಿ ಪ್ರಾರಂಭಿಸಲಾಯಿತು. ಈ ರೈಲಿನ ಸರಾಸರಿ ವೇಗ 89 ಕಿ.ಮೀ ಪ್ರತಿ ಘಂಟೆಗೆ.

ಚಿತ್ರಕೃಪೆ: Vishalkh

ರಾಜಧಾನಿ ಎಕ್ಸ್ ಪ್ರೆಸ್:

ರಾಜಧಾನಿ ಎಕ್ಸ್ ಪ್ರೆಸ್:

ನವದೆಹಲಿ ಮತ್ತು ಹೌರಾ ಮಧ್ಯದಲ್ಲಿ ಸಂಚರಿಸುವ ರಾಜಧಾನಿ ಗಾಡಿಯು ಉನ್ನತ ವೇಗವನ್ನು ಹೊಂದಿದ್ದು ಸರಾಸರಿ 88.21 ಕಿ.ಮೀ ಪ್ರತಿ ಘಂಟೆಗೆ ಚಲಿಸುತ್ತದೆ.

ಚಿತ್ರಕೃಪೆ: Pratik12951

ಡುರೊಂಟೊ (ನವದೆಹಲಿ - ಅಲಹಾಬಾದ್):

ಡುರೊಂಟೊ (ನವದೆಹಲಿ - ಅಲಹಾಬಾದ್):

ದೆಹಲಿಯಿಂದ ಅಲಹಾಬಾದ್ ಗೆ ಹೊರಡುವ ಈ ಡುರೊಂಟೊ ಎಕ್ಸ್ ಪ್ರೆಸ್ ಗಾಡಿಯು ಘಂಟೆಗೆ 86.85 ಕಿ.ಮೀ ಸರಾಸರಿ ವೇಗದಲ್ಲಿ ಚಲಿಸುತ್ತದೆ.

ಚಿತ್ರಕೃಪೆ: Superfast1111

ಗರೀಬ್ ರಥ್:

ಗರೀಬ್ ರಥ್:

ಹಜರತ್ ನಿಜಾಮುದ್ದಿನ್ ಹಾಗು ಮುಂಬೈನ ಬಾಂದ್ರಾದ ಮಧ್ಯೆ ಸಂಚರಿಸುವ ಈ ಗರೀಬ್ ರಥ್ ರೈಲು ಗಾಡಿಯು ಘಂಟೆಗೆ 85.91 ಕಿ.ಮೀ ಸರಾಸರಿ ವೇಗದಲ್ಲಿ ಚಲಿಸುತ್ತದೆ. ಭಾರತೀಯ ರೈಲ್ವೆ ಇಲಾಖೆಯಿಂದ 2005 ರಲ್ಲಿ ಪ್ರಾರಂಭಿಸಲಾದ ಈ ವಿಶೀಷ್ಟ ರೈಲು ಗಾಡಿಯು ಬಡವರಿಗೆ ಕಡಿಮೆ ವೆಚ್ಚದಲ್ಲಿ ಹವಾನಿಯಂತ್ರಿತ ಅನುಭವ ದೊರಕಿಸುವ ಉದ್ದೇಶದಿಂದ ರೂಪಿಸಲಾಗಿದೆ.

ಚಿತ್ರಕೃಪೆ: Akshay Gupta

ಸ್ವರ್ಣ ಶತಾಬ್ದಿ:

ಸ್ವರ್ಣ ಶತಾಬ್ದಿ:

ದೆಹಲಿ ಹಾಗು ಲಖನೌ ನಗರಗಳ ಮಧ್ಯೆ ಸಂಚರಿಸುವ ಸ್ವರ್ಣ ಶತಾಬ್ದಿ ರೈಲು ಗಾಡಿಯು ಘಂಟೆಗೆ 83 ಕಿ.ಮೀ ಸರಾಸರಿ ವೇಗದಲ್ಲಿ ಚಲಿಸುತ್ತದೆ ಹಾಗು ತಲುಪುವ ಗರಿಷ್ಠ ವೇಗ 145 ಕಿ.ಮೀ ಪ್ರತಿ ಘಂಟೆಗೆ.

ಚಿತ್ರಕೃಪೆ: Abhinav

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X