Search
  • Follow NativePlanet
Share
» »ಭಾರತದ ಟಾಪ್ 7 ವನ್ಯಜೀವಿ ಧಾಮಗಳು: ಒಮ್ಮೆ ಭೇಟಿ ಕೊಡಿ

ಭಾರತದ ಟಾಪ್ 7 ವನ್ಯಜೀವಿ ಧಾಮಗಳು: ಒಮ್ಮೆ ಭೇಟಿ ಕೊಡಿ

ಭಾರತದಲ್ಲಿ ಅತ್ಯಂತ ವೈವಿಧ್ಯಮಯ ಭೌಗೋಳಿಕ ವಿಭಾಗಗಳು, ನೈಸರ್ಗಿಕವಾದ ಸಂಪತ್ತು, ವೈವಿಧ್ಯಮಯವಾದ ಪ್ರಾಣಿ ಸಂಕುಲವನ್ನು ಹೊಂದಿರುವ ಸುಂದರ ದೇಶ. ಹಲವಾರು ವನ್ಯಜೀವಿಗಳನ್ನು ನೈರ್ಸಗಿಕ ಪರಿಸರದಲ್ಲಿ ಸಂರಕ್ಷಿಸುವ ಮೂಲಕ ಸಸ್ಯ ಮತ್ತು ಪ್ರಾಣಿಗಳನ್ನು ಭ

ಭಾರತದಲ್ಲಿ ಅತ್ಯಂತ ವೈವಿಧ್ಯಮಯ ಭೌಗೋಳಿಕ ವಿಭಾಗಗಳು, ನೈಸರ್ಗಿಕವಾದ ಸಂಪತ್ತು, ವೈವಿಧ್ಯಮಯವಾದ ಪ್ರಾಣಿ ಸಂಕುಲವನ್ನು ಹೊಂದಿರುವ ಸುಂದರ ದೇಶ. ಹಲವಾರು ವನ್ಯಜೀವಿಗಳನ್ನು ನೈರ್ಸಗಿಕ ಪರಿಸರದಲ್ಲಿ ಸಂರಕ್ಷಿಸುವ ಮೂಲಕ ಸಸ್ಯ ಮತ್ತು ಪ್ರಾಣಿಗಳನ್ನು ಭವಿಷ್ಯದಲ್ಲಿ ಭದ್ರಪಡಿಸುವುದೇ ವನ್ಯಜೀವಿ ಅಭಯಾರಣ್ಯದ ಗುರಿಯಾಗಿದೆ.

ಭಾರತವು ಭವ್ಯವಾದ ಪರ್ವತಗಳು, ಅರಣ್ಯಗಳು, ಸರೋವರಗಳ ಮೂಲಕ ತಮ್ಮ ವಾಸಸ್ಥಾನವಾಗಿ ಮಾಡಿಕೊಂಡಿದ್ದ ಅದೆಷ್ಟೋ ಪ್ರಾಣಿ ಸಂಕುಲಗಳು ಒಂದೆಡೆ ವನ್ಯ ಜೀವಿ ಅಭಯಾರಣ್ಯದಲ್ಲಿ ಕಾಣಬಹುದು. ಈ ಪ್ರಾಣಿ ಸಂಕುಲವನ್ನು ಕಂಡಾಗ ಮನಸ್ಸಿನಲ್ಲಿ ಸಂತೋಷವಾಗುತ್ತದೆ. ಲೇಖನದಲ್ಲಿ ತಿಳಿಸಲಾಗುವ ವನ್ಯಜೀವಿ ಧಾಮಕ್ಕೆ ಒಮ್ಮೆ ಮಕ್ಕಳನ್ನು ಕರೆದುಕೊಂಡು ಹೋಗಿ.

ಈ ಲೇಖನದ ಮೂಲಕ ಭಾರತದ ಟಾಪ್ 7 ವನ್ಯಜೀವಿಗಳ ಬಗ್ಗೆ ಮಾಹಿತಿ ಪಡೆದು ನೀವೂ ಒಮ್ಮೆ ಭೇಟಿ ಕೊಡಿ.

ಬಾಂದವ್‍ಗ್ರಾ ನ್ಯಾಷನಲ್ ಪಾರ್ಕ್

ಬಾಂದವ್‍ಗ್ರಾ ನ್ಯಾಷನಲ್ ಪಾರ್ಕ್

ಭಾರತದ ಮಧ್ಯೆ ಪ್ರದೇಶದ ಉಮಾರಿಯಾ ಜಿಲ್ಲೆಯ ಹೃದಯ ಭಾಗದಲ್ಲಿರುವ ಬಾಂದ್ ಘಡ್ ರಾಷ್ಟ್ರೀಯ ಉದ್ಯಾನವು ಪ್ರತಿ ವರ್ಷವೂ ಹಲವಾರು ಪ್ರಕೃತಿ ಪ್ರೇಮಿಗಳು ಮತ್ತು ವನ್ಯಜೀವಿ ಉತ್ಸಾಹಿಗಳು ಭೇಟಿ ನೀಡುತ್ತಾ ಇರುತ್ತಾರೆ. ಈ ನ್ಯಾಷನಲ್ ಪಾರ್ಕ್ ಸುಮಾರು 448 ಚದರ ಕಿ,ಮೀ ಮತ್ತು 105 ಚದರ ಕಿ,ಮೀ ವಿಸ್ತಾರ ಹೊಂದಿದೆ.

ಈ ಸುಂದರವಾದ ಉದ್ಯಾನವು ವಿಂಧ್ಯಾ ಪರ್ವತದ ತಪ್ಪಲಿನಲ್ಲಿ ಇದೆ. ಇಲ್ಲಿ ಬಿಳಿ ಹುಲಿಗಳ ನೈಸರ್ಗಿಕ ಆವಾಸಸ್ಥಾನವಾಗಿದೆ ಎಂದು ಖ್ಯಾತಿ ಪಡೆದಿದೆ. ಇಲ್ಲಿ ಹುಲಿಗಳು, ಚಿರತೆಗಳು, ಜಿಂಕೆಗಳು ಇನ್ನೂ ಹಲವಾರು ರೀತಿಯ ಪ್ರಾಣಿ ಸಂಕುಲವನ್ನು ಕಾಣಬಹುದಾಗಿದೆ. ಈ ನ್ಯಾಷನಲ್ ಪಾರ್ಕ್‍ಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ.

ಬಾಂದವ್‍ಗ್ರಾ ನ್ಯಾಷನಲ್ ಪಾರ್ಕ್‍ಗೆ ವಿಮಾನ ಮಾರ್ಗದ ಮೂಲಕ ತೆರಳಲು ಅತ್ಯಂತ ಸಮೀಪವಾದ ವಿಮಾನ ನಿಲ್ದಾಣವೆಂದರೆ ಜೋಬ್ಲಾಪುರ್ ಇಲ್ಲಿಂದ ಬಾಂದವ್‍ಗ್ರಾ ನ್ಯಾಷನಲ್ ಪಾರ್ಕ್‍ಗೆ ಸುಮಾರು 164 ಕಿ,ಮೀ ದೂರದಲ್ಲಿ ಇದೆ.


PC:Mike Goad

ಕಾರ್ಬೆಟ್ ನ್ಯಾಷನಲ್ ಪಾರ್ಕ್

ಕಾರ್ಬೆಟ್ ನ್ಯಾಷನಲ್ ಪಾರ್ಕ್

ಉತ್ತರಖಂಡದ ಜಿಮ್ ಕಾರ್ನೆಟ್ ರಾಷ್ಟ್ರೀಯ ಉದ್ಯಾನವನವು ಸುಮಾರು 520 ಕಿ,ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಸುಂದರವಾದ ನ್ಯಾಷನಲ್ ಪಾರ್ಕ್‍ನಲ್ಲಿರುವ ವನ್ಯಜೀವಿಗಳನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದಲೇ ಆಲ್ಲದೇ ವಿದೇಶಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಮಾರು 70,000 ಪ್ರವಾಸಿಗರು ಇಲ್ಲಿನ ಪ್ರಾಣಿಗಳನ್ನು ಕಾಣಾಲು ಬರುತ್ತಾರೆ ಎಂದು ಅಂದಾಜು ಮಾಡಲಾಗಿದೆ.

ವಿಶೇಷವೆನೆಂದರೆ ಭಾರತದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದ್ದು, ಸುಮಾರು 488 ಕ್ಕೂ ಹೆಚ್ಚಿನ ಪ್ರಾಣಿ ಮತ್ತು 586 ವನ್ಯಜೀವಿ ಪ್ರಭೇಧಗಳನ್ನು ಇಲ್ಲಿಗೆ ಬರುವ ಪ್ರವಾಸಿಗಳು ಕಣ್ಣುತುಂಬಿಕೊಳ್ಳಬಹುದು. ಇಲ್ಲಿ ರಾಯಲ್ ಬೆಂಗಾಲ್ ಟೈಗರ್, ಕರಡಿ, ಆನೆ, ಚಿರತೆ ಇನ್ನೂ ಹಲವಾರು ಪ್ರಾಣಿ ಪ್ರಭೇಧವನ್ನು ಕಾಣಬಹುದಾಗಿದೆ. ಹಲವಾರು ಪ್ರಾಣಿ ಪ್ರಭೇಧವನ್ನು ಕಾಣಲು ಉತ್ತಮವಾದ ಸಮಯವೆಂದೆ ನವೆಂಬರ್ ತಿಂಗಳಿನಿಂದ ಜೂನ್ ತಿಂಗಳ ಮಧ್ಯೆ ಕಾಲದಲ್ಲಿ ಭೇಟಿ ನೀಡುವುದು ಉತ್ತಮ.

ಕಾರ್ಬೆಟ್ ನ್ಯಾಷನಲ್ ಪಾರ್ಕ್‍ನ ಸಮೀಪವಾದ ವಿಮಾನ ನಿಲ್ದಾಣವೆಂದರೆ ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 295 ಕಿ,ಮೀ ದೂರದಲ್ಲಿದೆ.


PC:bm.iphone

ರಣಥಂಬೋರ್ ನ್ಯಾಷನಲ್ ಪಾರ್ಕ್

ರಣಥಂಬೋರ್ ನ್ಯಾಷನಲ್ ಪಾರ್ಕ್

1955ರಲ್ಲಿ ಕ್ರೀಡಾ ಅಭಯಾರಣ್ಯವಾಗಿ ಸ್ಥಾಪನೆಗೊಂಡಿತು. ರಾಜಸ್ಥಾನದ ರಣಥಂಬೋರ್ ನ್ಯಾಷನಲ್ ಪಾರ್ಕ್ ವನ್ಯಜೀವಿ ಪ್ರಿಯರಿಗೆ ಭೇಟಿ ನೀಡಲು ಅತ್ಯಂತ ಜನಪ್ರಿಯ ಸ್ಥಳವಾಗಿದೆ. ಇಲ್ಲಿ 1972 ರಲ್ಲಿ ಪ್ರಾಜೆಕ್ಟ್ ಟೈಗರ್ ಪ್ರಾರಂಭವಾಯಿತು. ನಂತರ 1980ರಲ್ಲಿ ರಣಥಂಬೋರ್ ಉದ್ಯಾನವನವಾಗಿ ಸ್ಥಾನಮಾನವನ್ನು ಪಡೆಯಿತು. ಇದು ಸುಮಾರು 1.334 ಚದರ ಕಿ,ಮೀ ವಿಸ್ತೀರ್ಣ ಹೊಂದಿದ್ದು, ನೆರೆಹೊರೆಯ ಪಕ್ಷಿಧಾಮಗಳಾದ ಕೈಲಾ ದೇವಿ ಅಭಯಾರಣ್ಯ ಮತ್ತು ಮಾನ್ಸಿಂಗ್ ಅಭಯಾರಣ್ಯ ಕೂಡ ಒಳಗೊಂಡಿದೆ.

ಈ ಅದ್ಭುತವಾದ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯೆಂದರೆ ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ. ಸಮೀಪದ ವಿಮಾನ ನಿಲ್ದಾಣವೆಂದರೆ ಜೈಪುರ್ ಇಲ್ಲಿಂದ ಸುಮಾರು 160 ಕಿ,ಮೀ ದೂರದಲ್ಲಿ ಹಲವಾರು ಪ್ರಾಣಿ ಪ್ರಭೇಧವನ್ನು ಕಾಣಲು ಉತ್ತಮವಾದ ಸಮಯವೆಂದೆ ನವೆಂಬರ್ ತಿಂಗಳಿನಿಂದ ಜುನ್ ತಿಂಗಳ ಮಧ್ಯೆ ಕಾಲದಲ್ಲಿ ಭೇಟಿ ನೀಡುವುದು ಉತ್ತಮ.

ಕಾರ್ಬೆಟ್ ನ್ಯಾಷನಲ್ ಪಾರ್ಕ್‍ನ ಸಮೀಪವಾದ ವಿಮಾನ ನಿಲ್ದಾಣವೆಂದರೆ ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 295 ಕಿ,ಮೀ ದೂರದಲ್ಲಿದೆ


PC:Mathias Appel

ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್

ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್

ಪಶ್ಚಿಮ ಬಂಗಾಳದಲ್ಲಿರುವ ಸುಂದರ್ಬನ್ಸ್ ಅತಿ ದೊಡ್ಡ ಗಿರಿಧಾಮ ಕಾಡು. ಇಲ್ಲಿ ಮ್ಯಾಂಗ್ರೋವ್ ಅರಣ್ಯಗಳಿಂದ ಅವೃತ್ತವಾಗಿದೆ. ಅವುಗಳು 54 ಸಣ್ಣ ದ್ವೀಪಗಳ ಕಿರಿದಾದ ಮೂಲಕ ಗಂಗಾ ಉಪನದಿಗಳನ್ನು ಹೊಂದಿದೆ. ಇಲ್ಲಿನ ಪ್ರವಾಸಿಗಳು ಸುಂದರವಾದ ದೃಶ್ಯವನ್ನು ಕಣ್ಣಾರೆ ಕಂಡು ಆನಂದಿಸಬಹುದು. ಇಲ್ಲಿ 55 ಜಾತಿಯ ಸರೀಸೃಪಗಳು, 250 ಜಾತಿಯ ಪಕ್ಷಿಗಳು ಮತ್ತು 58 ಜಾತಿಯ ಸಸ್ತನಿಗಳನ್ನು ಕಾಣಬಹುದಾಗಿದೆ. ಒಂದು ದೋಣಿಯ ಮೂಲಕ ಉದ್ಯಾನವನವೆಲ್ಲಾ ಕಾಣಬಹುದಾಗಿದೆ. ದೋಣಿಯೇ ಏಕೈಕ ಮಾರ್ಗ ಬದಲಾಗಿ ಜೀಪ್ ಸಫಾರಿಗಳಿಗೆ ಇಲ್ಲಿ ಅನುಮತಿ ಇಲ್ಲ.

ಈ ಸುಂದರವಾದ ಪ್ರಾಣಿ ಪ್ರಪಂಚವನ್ನು ಭೇಟಿ ಮಾಡಲು ಅತ್ಯಂತ ಉತ್ತಮವಾದ ಕಾಲವೆಂದರೆ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ. ಸಮೀಪವಾದ ವಿಮಾನ ನಿಲ್ದಾಣವೆಂದರೆ ಕೋಲ್ಕತ್ತ ಇಂಟರ್ ನ್ಯಾಷನಲ್ ಏರ್ಪೋಟ್. ಇಲ್ಲಿಂದ ಸುಮಾರು 140 ಕಿ,ಮೀ ದೂರದಲ್ಲಿ ಈ ಪಾರ್ಕ್ ಇದೆ.


PC:Jennifer C.

ಗಿರ್ ನ್ಯಾಷನಲ್ ಪಾರ್ಕ್

ಗಿರ್ ನ್ಯಾಷನಲ್ ಪಾರ್ಕ್

ಅಳಿವಿನಂಚಿನಲ್ಲಿರುವ ಮೈಟಿ ಏಶಿಯಾಟಿಕ್ ಲಯನ್‍ನ ಏಕೈಕ ತಾಣವೆಂದರೆ ಗಿರ್ ನ್ಯಾಷನಲ್ ಪಾರ್ಕ್. ಈ ಪಾರ್ಕ್ ವನ್ಯಜೀವಿ ಧಾಮಗಳಲ್ಲಿ ಗುಜಾರಾತಿನ ಅತ್ಯಂತ ಜನಪ್ರಿಯವಾದ ಆಕರ್ಷಣೆಗಳಲ್ಲಿ ಒಂದಾಗಿದೆ. 1965 ರಲ್ಲಿ ಗಿರ್ ಅರಣ್ಯವು ವನ್ಯಜೀವಿ ಅಭಯಾರಣ್ಯವೆಂದು ಗುರುತಿಸಲ್ಪಟ್ಟಿತು. 1975 ರಲ್ಲಿ ನ್ಯಾಷನಲ್ ಪಾರ್ಕ್ ಎಂದು ಘೋಷಿಸಲಾಯಿತು.

ಸುಮಾರು 1412 ಚದರ ಕಿ,ಮೀ ನಷ್ಟು ವಿಶಾಲವಾಗಿದ್ದು, 38 ಪ್ರಭೇಧಗಳ ಸಸ್ತನಿ, 300 ಅವಿಫುನಾ ಪ್ರಭೇಧಗಳು, 37 ಜಾತಿಯ ಸರೀಸೃಪಗಳು ಮತ್ತು 2000 ಕ್ಕಿಂತಲೂ ಹೆಚ್ಚಿನ ಕೀಟ ಜಾತಿಗಳನ್ನು ಗಿರ್ ನ್ಯಾಷನಲ್ ಪಾರ್ಕ್ ಹೊಂದಿದೆ.

ಈ ಸುಂದರವಾದ ಗಿರ್ ನ್ಯಾಷನಲ್ ಪಾರ್ಕ್‍ಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಜೂನ್ ತಿಂಗಳ ಮಧ್ಯ ಭಾಗದಲ್ಲಿ. ಈ ಪಾರ್ಕ್‍ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಕೀಶೋಡ್ ಏರ್ಪೋಟ್. ಇಲ್ಲಿಂದ ಸುಮಾರು 38 ಕಿ,ಮೀ ದೂರದಲ್ಲಿ ಗಿರ್ ನ್ಯಾಷನಲ್ ಪಾರ್ಕ್ ಇದೆ

PC:thedogg

ಪೆರಿಯಾರ್ ನ್ಯಾಷನಲ್ ಪಾರ್ಕ್

ಪೆರಿಯಾರ್ ನ್ಯಾಷನಲ್ ಪಾರ್ಕ್

ಕೇರಳದ ಪೆರಿಯಾರ್ ನ್ಯಾಷನಲ್ ಪಾರ್ಕ್ ಸಂರಕ್ಷಿತ ವನ್ಯಧಾಮವಾಗಿದೆ. ಪ್ರಶಾಂತ ಪೆರಿಯಾರ್ ಸರೋವರದ ಮಧ್ಯೆದಲ್ಲಿ ಸುಮಾರು 350 ಚದರ ಕಿ,ಮೀ ವ್ಯಾಪ್ತಿಯ ಪ್ರದೇಶವನ್ನು 1982 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು.

ರಾಷ್ಟ್ರೀಯ ಉದ್ಯಾನವು ಪಾಂಡಲಂ ಬೆಟ್ಟಗಳ ಹೃದಯಭಾಗದಲ್ಲಿದೆ. ದಕ್ಷಿಣ ಪಶ್ಚಿಮ ಘಟ್ಟದ ಕಾರ್ಡಮಮ್ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ಸುಂದರವಾದ ಪೆರಿಯಾರ್ ನ್ಯಾಷನಲ್ ಪಾರ್ಕ್‍ಗೆ ಭೇಟಿ ನೀಡಲು ಉತ್ತಮವಾದ ಕಾಲಾವಾಧಿ ಎಂದರೆ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ.

ಪೆರಿಯಾರ್ ನ್ಯಾಷನಲ್ ಪಾರ್ಕ್‍ನ ಸಮೀಪದ ವಿಮಾನ ನಿಲ್ದಾಣವೆಂದರೆ ಮಧುರೈ ವಿಮಾನ ನಿಲ್ದಾಣ. ಇಲ್ಲಿಂದ ಸುಮಾರು 140 ಕಿ,ಮೀ ಅಂತರದಲ್ಲಿದೆ.


PC:bm.iphone

ಕಿಯೊಲಾಡಿಯೊ ನ್ಯಾಷನಲ್ ಪಾರ್ಕ್

ಕಿಯೊಲಾಡಿಯೊ ನ್ಯಾಷನಲ್ ಪಾರ್ಕ್

ರಾಜಸ್ಥಾನದ ಭರತ್ಪುರದ ಕಿಯೋಲಾಡಿಯೊ ನ್ಯಾಷನಲ್ ಪಾರ್ಕ್‍ನ್ನು ಹಿಂದೆ ಭರತ್ಪುರ ಪಕ್ಷಿಧಾಮ ಎಂದೂ ಸಹ ಕರೆಯುತ್ತಿದ್ದರು. ಸುಮಾರು 29 ಕ್ಕೂ ಹೆಚ್ಚು ನಿವಾಸಿಗಳು ಮತ್ತು ವಲಸೆ ಪಕ್ಷಿ ಪ್ರಭೇಧಗಳನ್ನು ಇಲ್ಲಿ ಕಾಣಬಹುದಾಗಿದೆ.

ಕಿಯೊಲಾಡಿಯೊ ನ್ಯಾಷನಲ್ ಪಾರ್ಕ್ ಸುಮಾರು 29 ಚದರ ಕಿ,ಮೀ ವಿಶಾಲವಾಗಿದೆ. 1971 ರಲ್ಲಿ ಭಾರತದಲ್ಲಿನ ಅತಿದೊಡ್ಡ ಬರ್ಡ್ ರಿಸರ್ವ ನ್ಯಾಚನಲ್ ಪಾರ್ಕ್ ಎಂದು ಘೋಷಿಸಲಾಯಿತು. ವಿಶೇಷವೆನೆಂದರೆ ಯುನೆಸ್ಕೊ ವಲ್ರ್ಡ್ ಹೆರಿಟೇಜ್ ಸೈಟ್ ಪಟ್ಟಿಯಲ್ಲಿ 1985 ರಲ್ಲಿ ಸೇರಿಸಲಾಗಿದೆ.

ಕಿಯೊಲಾಡಿಯೊ ನ್ಯಾಷನಲ್ ಪಾರ್ಕ್‍ಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ. ಸಮೀಪದ ವಿಮಾನ ನಿಲ್ದಾಣವೆಂದರೆ ಜೈಪುರ. ಇಲ್ಲಿಂದ ಸುಮಾರು 190 ಕಿ,ಮೀ ದೂರದಲ್ಲಿ ಈ ನ್ಯಾಚನಲ್ ಪಾರ್ಕ್ ಇದೆ.


PC:Mathias Appel

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X