Search
  • Follow NativePlanet
Share
» »ಪ್ರತಿಯೊಬ್ಬರೂ ಭೇಟಿ ಕೊಡಲೇಬೇಕಾದ ಭಾರತದ 6 ಅಗ್ರಮಾನ್ಯ ಮೃಗಾಲಯಗಳು

ಪ್ರತಿಯೊಬ್ಬರೂ ಭೇಟಿ ಕೊಡಲೇಬೇಕಾದ ಭಾರತದ 6 ಅಗ್ರಮಾನ್ಯ ಮೃಗಾಲಯಗಳು

ಪ್ರಾಣಿ ಸಂಗ್ರಹಾಲಯಗಳು ಹೆಚ್ಚು ಕಮ್ಮಿ ಎಲ್ಲಾ ವಯೋಮಾನದವರನ್ನೂ ಕೂಡಾ ರೋಮಾಂಚನಗೊಳಿಸುವಂತಹ ಸ್ಥಳವೆನ್ನಬಹುದು ಈಗಷ್ಟೇ ಪ್ರಾಣಿಗಳ ಹೆಸರನ್ನು ಕಲಿತ 5 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ವೃದ್ದರವರೆಗೂ ಪ್ರಾಣಿಗಳನ್ನು ವೀಕ್ಷಿಸಿ ತಮ್ಮ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡ ಬಯಸುತ್ತಾರೆ. ನೈಸರ್ಗಿಕವಾಗಿ ಸಂಪದ್ಬರಿತವಾಗಿರುವ ಭಾರತವು ಸುಂದರವಾದ ಭೂದೃಶ್ಯಗಳು ಮತ್ತು ವನ್ಯಜೀವಿಗಳಿಗಳನ್ನು ಹೊಂದಿದ್ದು ಅವುಗಳಿಗೆ ಆಶ್ರಯ ನೀಡುವಂತಹ ಪ್ರಾಣಿ ಜೀವಿಗಳನ್ನೊಳಗೊಂಡ ಉದ್ಯಾನಗಳನ್ನು ಹೊಂದಿದ್ದು ಇದು ದೇಶದಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ಹರಡಿದೆ.

ಪ್ರಾಣಿ ಸಂಗ್ರಹಾಲಯಗಳು ಸಾಮಾನ್ಯ ಪ್ರಾಣಿಗಳಿಗಿಂತ ಹೆಚ್ಚಿನದನ್ನು ಹೊಂದಿರುತ್ತವೆ. ಅವುಗಳು ಕೆಲವೊಮ್ಮೆ ಸ್ನೇಕ್ ಪಾರ್ಕ್‌ಗಳು, ಪ್ರಾಣಿಗಳ ಅನಾಥಾಶ್ರಮಗಳು, ಪಕ್ಷಿಧಾಮಗಳು ಇತ್ಯಾದಿಗಳೊಂದಿಗೆ ಇರುತ್ತವೆ. ಭಾರತದಲ್ಲಿ 50 ಕ್ಕೂ ಹೆಚ್ಚು ಮೃಗಾಲಯಗಳಿದ್ದರೂ, ಆಯಾ ಸ್ಥಳಗಳಿಗೆ ಭೇಟಿ ನೀಡುವಾಗ ನೀವು ತಪ್ಪಿಸಿಕೊಳ್ಳಬಾರದ ಅತ್ಯುತ್ತಮವಾದ 6 ಪ್ರಾಣಿಸಂಗ್ರಹಾಲಯಗಳು ಇಲ್ಲಿವೆ.

rajivgandhi

ರಾಜೀವ್ ಗಾಂಧಿ ಝವಾಲಾಜಿಕಲ್ ಪಾರ್ಕ್, ಪುಣೆ

ರಾಜೀವ್ ಗಾಂಧಿ ಝವಾಲಾಜಿಕಲ್ ಪಾರ್ಕ್ ಇದನ್ನು ಸಾಮಾನ್ಯವಾಗಿ ರಾಜೀವ್ ಗಾಂಧಿ ಝೂ (ಮೃಗಾಲಯ) ಎಂದೂ ಕರೆಯಲಾಗುತ್ತದೆ. ಇದು ಮಹಾರಾಷ್ಟ್ರದ ಪೂಣೆಯಲ್ಲಿ ನೆಲೆಸಿದೆ. ಪ್ರಸಿದ್ದ ಕತ್ರಾಜ್ ಸ್ನೇಕ್ ಪಾರ್ಕ್ ಕೂಡಾ ಇದರ ಆವರಣದಲ್ಲಿ ಕಾಣಬಹುದಾಗಿದ್ದು, ಈ ಸ್ಥಳದ ಇತರ ಎರಡು ಭಾಗಗಳು ಮೃಗಾಲಯ ಮತ್ತು ಪ್ರಾಣಿಗಳ ಅನಾಥಾಶ್ರಮವನ್ನು ಒಳಗೊಂಡಿದೆ.

ರಸೆಲ್ಸ್ ವೈಪರ್, ಇಂಡಿಯನ್ ರಾಕ್ ಪೈಥಾನ್ ಮತ್ತು ಕಿಂಗ್ ಕೋಬ್ರಾ ಮೃಗಾಲಯದಲ್ಲಿ ಕಂಡುಬರುವ ಕೆಲವು ಜಾತಿಯ ಹಾವುಗಳು. ಬಿಳಿ ಹುಲಿಗಳು, ಬಂಗಾಳ ಹುಲಿಗಳು, ಚಿರತೆಗಳು ಮತ್ತು ನವಿಲು ಮತ್ತು ಕೃಷ್ಣಮೃಗಗಳು ಇತ್ಯಾದಿ ಪ್ರಾಣಿ ಪಕ್ಷಿಗಳನ್ನು ಇಲ್ಲಿ ನೀವು ವೀಕ್ಷಿಸಬಹುದು.

arignaranna

ಅರಿಗ್ನಾರ್ ಅಣ್ಣಾ ಝುಲಾಜಿಕಲ್ ಪಾರ್ಕ್ ಚೆನ್ನೈ

ವಂದಲೂರ್ ಝೂ ಎಂದೂ ಕರೆಯಲ್ಪಡುವ ಅರಿಗ್ನಾರ್ ಅಣ್ಣಾ ಝುಲಾಜಿಕಲ್ ಉದ್ಯಾನವನವು ಭಾರತದ ಅತ್ಯಂತ ದೊಡ್ಡ ಪ್ರಾಣಿಸಂಗ್ರಹಾಲಯವಾಗಿದ್ದು, ಇದು ಸುಮಾರು 1,300 ಎಕರೆಗಳಷ್ಟು ಪ್ರದೇಶಗಳಲ್ಲಿ ಹರಡಿಕೊಂಡಿದೆ. ಇದು ತಮಿಳುನಾಡಿನ ವಂಡಲೂರ್ ಎಂಬ ಪ್ರದೇಶದಲ್ಲಿದ್ದು ಇದು ಚೆನ್ನೈನ ಉಪನಗರವಾಗಿದೆ. ಮೃಗಾಲಯವು ಅಸಂಖ್ಯಾತ ಜಾತಿಯ ಸಸ್ತನಿಗಳು, ಮೀನುಗಳು, ಉಭಯಚರಗಳು, ಕೀಟಗಳು ಇತ್ಯಾದಿಗಳಿಗೆ ನೆಲೆಯಾಗಿದೆ.

ಒಣ ಡೆಸಿಡಿಯಸ್ ಮತ್ತು ಒಣ ನಿತ್ಯಹರಿದ್ವರ್ಣ ಪೊದೆಸಸ್ಯ ಸಸ್ಯಗಳೊಂದಿಗೆ, ಉದ್ಯಾನವನವು ಬಬೂನ್‌ಗಳು, ಸಿಂಹ-ಬಾಲದ ಮಕಾಕ್‌ಗಳು, ಬಾರ್ಕಿಂಗ್ ಜಿಂಕೆಗಳು ಮುಂತಾದ ವಿವಿಧ ಪ್ರಾಣಿಗಳಿಗೆ ನೆಲೆಯಾಗಿದೆ. ಮೃಗಾಲಯದ ಇತರ ಆಕರ್ಷಣೆಗಳೆಂದರೆ ಚಿಟ್ಟೆ ಮನೆ, ವಾಕ್-ಥ್ರೂ ಪಂಜರ, ಸರೀಸೃಪ ಮನೆ, ಮೊಸಳೆ ಆವರಣ. ಇತ್ಯಾದಿಗಳನ್ನು ಹೊಂದಿದೆ.

himachal

ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್, ಡಾರ್ಜಿಲಿಂಗ್

ಮುದ್ದಾದ ಕೆಂಪು ಪಾಂಡಾಗಳಿಗೆ ನೆಲೆಯಾಗಿರುವ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ ಅನ್ನು ಡಾರ್ಜಿಲಿಂಗ್ ಮೃಗಾಲಯ ಎಂದೂ ಕರೆಯಲಾಗುತ್ತದೆ. ಈ ಮೃಗಾಲಯವು 7000 ಅಡಿ ಎತ್ತರದಲ್ಲಿ ನೆಲೆಸಿರುವುದರಿಂದ ಭಾರತದ ಅತಿ ಎತ್ತರದಲ್ಲಿರುವ ಮೃಗಾಲಯವೆನಿಸಿದೆ.

ಕೆಂಪು ಪಾಂಡಾಗಳ ಹೊರತಾಗಿಯೂ ಈ ಮೃಗಾಲಯವು ಅಳಿವಂಚಿನಲ್ಲಿರುವ ಸೈಬೇರಿಯನ್ ಹುಲಿಗಳು, ಪರ್ವತ ಆಡುಗಳು ಇತ್ಯಾದಿಗಳನ್ನು ಒಳಗೊಂಡಿದೆ. ಈ ಮೃಗಾಲಯವು ಪಕ್ಷಿವೀಕ್ಷಕರಿಗೆ ಆನಂದಮಯ ಸ್ಥಳವೆನಿಸಿದೆ ಏಕೆಂದರೆ ಇದು ಗುಲಾಬಿ ರಿಂಗ್ ಪ್ಯಾರಾಕೆಟ್‌ಗಳು ಮತ್ತು ಬೆಟ್ಟದ ಮೈನಾಗಳಂತಹ ವಿವಿಧ ಜಾತಿಗಳ ಪಕ್ಷಿಗಳಿಗೆ ನೆಲೆಯಾಗಿದ್ದು ನೋಡುಗರನ್ನು ಆಕರ್ಷಿಸುತ್ತದೆ. ಮೃಗಾಲಯವು ಬೆಳಿಗ್ಗೆ 8.30 ರಿಂದ ಸಂಜೆ 4.30 ರವರೆಗೆ ತೆರೆದಿರುತ್ತದೆ ಮತ್ತು ಗುರುವಾರ ಮುಚ್ಚಿರುತ್ತದೆ.

mysore

ಮೈಸೂರು ಝೂ( ಮೃಗಾಲಯ)

ಮೈಸೂರು ಮೃಗಾಲಯವನ್ನು ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಎಂದು ಕರೆಯಲಾಗುತ್ತದೆ. ಇದು ಮೈಸೂರಿನ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಮೃಗಾಲಯದಲ್ಲಿ ಜೀಬ್ರಾ, ಜಿರಾಫೆ, ಸಿಂಹಗಳು, ಹುಲಿಗಳು, ಬಿಳಿ ಖಡ್ಗಮೃಗಗಳು, ಭಾರತದ ಆನೆಗಳು ಇತ್ಯಾದಿ ವಿವಿಧ ಜಾತಿಯ ಪ್ರಾಣಿಗಳನ್ನು ನೋಡಬಹುದಾಗಿದೆ.

ಮಕ್ಕಳ ಕಥೆ ಪುಸ್ತಕದಲ್ಲಿ ಬರುವ ಪ್ರಾಣಿಗಳನ್ನು ಇಲ್ಲಿ ನೋಡಬಹುದಾದ್ದರಿಂದ ಮಕ್ಕಳೊಂದಿಗೆ ಭೇಟಿ ನೀಡಲು ಪರಿಪೂರ್ಣವಾಗಿದೆ! ಮನೋಹರವಾದ ಚಾಮುಂಡಿ ಬೆಟ್ಟಗಳ ಮೇಲೆ ಕಂಡುಬರುವ 77 ಎಕರೆ ವಿಸ್ತೀರ್ಣದ ಕಾರಂಜಿ ಸರೋವರವು ಮೃಗಾಲಯದ ಸೌಂದರ್ಯವನ್ನು ಹೆಚ್ಚಿಸಿದೆ.

ಅಮಿರ್ಥಿ ಝೂಲಾಜಿಕಲ್ ಪಾರ್ಕ್, ವೆಲ್ಲೂರ್

ಅಮಿರ್ಥಿ ನದಿಯ ಬಳಿಯಲ್ಲಿ ಈ ಮೃಗಾಲಯವು ಇರುವುದರಿಂದ ಅದೇ ಹೆಸರನ್ನು ಈ ಮೃಗಾಲಯಕ್ಕೂ ಇಡಲಾಗಿದೆ. ಇಲ್ಲಿ ವನ್ಯ ಜೀವಿಗಳ ಹೊರತಾಗಿಯೂ ಈ ಉದ್ಯಾನವನವು ಸುಂದರವಾದ ಸ್ಥಳವಾಗಿದ್ದು ಇದ್ಉ ಜಲಪಾತಗಳು ಮತ್ತು ದಟ್ಟವಾದ ಹಸಿರು ಪ್ರದೇಶಗಳನ್ನೊಳಗೊಂಡಿದೆ. ವನ್ಯಜೀವಿ ವಿಕ್ಷಣೆಯ ಜೊತೆಗೆ ಪ್ರಕೃತಿಯಲ್ಲಿ ವಿಶ್ರಾಂತಿ ಪಡೆಯಲು ಬಯಸುವವರಿಗಾಗಿ ಈ ಸ್ಥಳವು ಅತ್ಯಂತ ಸೂಕ್ತವಾದುದಾಗಿದೆ. ಪ್ರವಾಸಿಗರು ಸುಂದರವಾದ ಜಲಪಾತಗಳ ಬಳಿ ಸ್ವಲ್ಪ ಸಮಯವನ್ನು ಕಳೆಯುತ್ತಾರೆ, ಇದು ಮಾನ್ಸೂನ್ ಸಮಯದಲ್ಲಿ ಅತ್ಯುತ್ತಮವಾಗಿರುತ್ತದೆ.

ಮೃಗಾಲಯದ ಕೆಲವು ವನ್ಯಜೀವಿಗಳ ನೆಲೆಯಾಗಿದೆ. ಮುಂಗುಸಿಗಳು, ಮೊಸಳೆಗಳು, ನರಿಗಳು ಮತ್ತು ಮುಳ್ಳುಹಂದಿಗಳು, ಜೊತೆಗೆ ಲವ್ ಬರ್ಡ್ಸ್, ಕೆಂಪು ತಲೆ ಗಿಳಿಗಳು, ಬಾತುಕೋಳಿಗಳು ಮುಂತಾದ ವಿಶಿಷ್ಟ ಪಕ್ಷಿಗಳನ್ನೂ ಇಲ್ಲಿ ಕಾಣಬಹುದಾಗಿದೆ.

nehru

ನೆಹರು ಝೂಲಾಜಿಕಲ್ ಪಾರ್ಕ್, ಹೈದರಾಬಾದ್

ಹೈದರಾಬಾದ್ ಮೃಗಾಲಯ ಎಂದೂ ಕರೆಯಲ್ಪಡುವ ನೆಹರು ಝೂಲಾಜಿಕಲ್ ಪಾರ್ಕ್ ತೆಲಂಗಾಣದ ಹೈದರಾಬಾದ್‌ನಲ್ಲಿದೆ. ಈ ಮೃಗಾಲಯದ ವಿಶೇಷತೆಯೆಂದರೆ ಇಲ್ಲಿ ನಿಶಾಚರ ಮನೆಯನ್ನು ಹೊಂದಿರುವುದು. ಇವು ರಾತ್ರಿಯಲ್ಲಿ ಓಡಾಡುವ ಪಕ್ಷಿಗಳ ನೆಲೆಯಾಗಿದೆ ಅಲ್ಲಿ ಹಗಲು ರಾತ್ರಿಗಳು ವ್ಯತಿರಿಕ್ತವಾಗಿರುತ್ತವೆ ಆದ್ದರಿಂದ ಪ್ರವಾಸಿಗರು ಬಂದಾಗ ಪಕ್ಷಿಗಳು ಸಕ್ರಿಯವಾಗಿರುತ್ತವೆ.

ರಾತ್ರಿಯ ಪಕ್ಷಿಗಳಾದ ಹಣ್ಣಿನ ಬಾವಲಿಗಳು, ಮಚ್ಚೆಯುಳ್ಳ ಮರದ ಗೂಬೆಗಳು, ದೊಡ್ಡ ಕೊಂಬಿನ ಗೂಬೆಗಳು, ಕೊಟ್ಟಿಗೆಯ ಗೂಬೆಗಳನ್ನು ಈ ಮನೆಯಲ್ಲಿ ವೀಕ್ಷಿಸಬಹುದು. ಈ ಉದ್ಯಾನವನದಲ್ಲಿ ಕಂಡುಬರುವ ಪ್ರಾಣಿಗಳಲ್ಲಿ ಏಷ್ಯಾದ ಸಿಂಹ, ಬಂಗಾಳ ಹುಲಿ, ಹುಲ್ಲೆ ಇತ್ಯಾದಿಗಳು ಸೇರಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X