Search
  • Follow NativePlanet
Share
» »ಛತ್ತೀಸಗಢದಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು

ಛತ್ತೀಸಗಢದಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು

ಛತ್ತೀಸಗಢದಲ್ಲಿಯ ಕೆಲವು ಪ್ರವಾಸಿ ತಾಣಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲ್ಪಡುತ್ತವೆ. ಛತ್ತೀಸಗಢದ ಖಂಡಿತವಾಗಿಯೂ ಭೇಟಿ ನೀಡಲು ಯೋಗ್ಯವಾದ ಪ್ರಮುಖ 5 ಸ್ಥಳಗಳ ಬಗ್ಗೆ ಓದಿ.

By Manjula Balaraj Tantry

ಛತ್ತೀಸಗಢ, 2000 ರಲ್ಲಿ ಪ್ರತ್ಯೇಕ ರಾಜ್ಯವಾಗಿ ವಿಭಜಿಸಲ್ಪಟ್ಟ ರಾಜ್ಯವಾಗಿದೆ ಮತ್ತು 6 ವಿವಿಧ ರಾಜ್ಯಗಳ ಸರಹದ್ದುಗಳನ್ನೊಳಗೊಂಡಿದೆ. ಇದು ನಮ್ಮ ದೇಶದ ಹೃದಯ ಭಾಗದಲ್ಲಿರುವ ರಾಜ್ಯವಾಗಿದೆ. ಇಲ್ಲಿಯ ಆಕರ್ಷಕ ಪ್ರವಾಸಿ ತಾಣಗಲು ಪ್ರವಾಸವನ್ನು ಸುಂದರಗೊಳಿಸುವಲ್ಲಿ ಸಹಕಾರಿಯಾಗಿದೆ ಅದೂ ಏಕಾಂತ ಪ್ರಿಯರು ಮತ್ತು ಕಡಿಮೆ ಗದ್ದಲಗಳನ್ನು ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದಂತಿದೆ.

ಈ ಮಂತ್ರಮುಗ್ದರನ್ನಾಗಿಸುವ ರಾಜ್ಯದಲ್ಲಿ ಪರಂಪರೆಯ ತಾಣಗಳು, ಸುಂದರವಾದ ಜಲಪಾತಗಳು, ವನ್ಯಧಾಮಗಳು, ಮತ್ತು ನಿಮಗೇನು ಬೇಕೋ ಅದನ್ನು ಒದಗಿಸುವ ಅನುಕೂಲಗಳು ಇಲ್ಲಿದ್ದು, ಪ್ರವಾಸವು ನಿಮಗೆ ತೃಪ್ತಿದಾಯಕವಾಗುವಂತೆ ಮಾಡುತ್ತದೆ. ಛತ್ತೀಸಗಢಕ್ಕೆ ಭೇಟಿ ನೀಡಲು ಜೂನ್ ನಿಂದ ಜನವರಿ ತಿಂಗಳು ಗಳ ಮಧ್ಯದಲ್ಲಿ ಸೂಕ್ತವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿ ಮಳೆಗಾಲ ಮತ್ತು ಚಳಿಗಾಲವಿರುತ್ತದೆ. ಆದುದರಿಂದ ಇಲ್ಲಿಯ ಹವಾಮಾನವು ಈ ಸಮಯದಲ್ಲಿ ತಂಪಾಗಿರುತ್ತದೆ.

ಈ ಕೆಳಗಿನ ಕೆಲವು ಸ್ಥಳಗಳು ನಿಮ್ಮ ರಜಾದಿನಗಳಲ್ಲಿ ಭೇಟಿ ಕೊಡಬಹುದಾದುದಾಗಿದೆ.

ಚಿತ್ರಕೂಟ ಜಲಪಾತ

ಚಿತ್ರಕೂಟ ಜಲಪಾತ

PC: ASIM CHAUDHURI

ಚಿತ್ರಕೂಟ್ ಜಲಪಾತವನ್ನು ಚಿತ್ರಕೋಟೆ ಜಲಪಾತವೆಂದೂ ಕರೆಯಲಾಗುತ್ತದೆ. ಚಿತ್ರಕೋಟೆ ಜಲಪಾತವು ಭಾರತದ ವಿಶಾಲವಾದ ಜಲಪಾತವಾಗಿದೆ. ಆದುದರಿಂದ ಇದನ್ನು ಭಾರತದ ನಯಾಗರ ಜಲಪಾತವೆಂದು ಅಡ್ದ ಹೆಸರನ್ನು ಹೊಂದಿದೆ.

ಇದು 95 ಅಡಿ ಎತ್ತರದಿಂದ ಅದ್ಭುತವಾಗಿ ಕೆಳಗೆ ಬೀಳುತ್ತದೆ. ಮತ್ತು ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಹೆಚ್ಚು ರಭಸದಿಂದ ಬೀಳುವುದರಿಂದ ಅತ್ಯದ್ಭುತವಾಗಿ ಕಾಣುತ್ತದೆ. ಈ ಜಲಪಾತವು ಛತ್ತೀಸಗಢದ ರಾಜಧಾನಿ ರಾಯಪುರದಿಂದ 276 ಕಿ.ಮೀ ದೂರದಲ್ಲಿದೆ.

ಭೋರಾಮ್ಡಿಯೋ ದೇವಾಲಯ

ಭೋರಾಮ್ಡಿಯೋ ದೇವಾಲಯ

PC: Pankaj Oudhia

ಶಿವನಿಗೆ ಅರ್ಪಿತವಾದ ಭೋರಾಮ್ಡಿಯೋ ದೇವಾಲಯವು ಛತ್ತೀಸಗಢದ ಒಂದು ಪ್ರಮುಖ ಯಾತ್ರೀ ಸ್ಥಳವಾಗಿದೆ. ಈ ಸಂಕೀರ್ಣದಲ್ಲಿ ನಾಲ್ಕು ದೇವಾಲಯಗಳಿವೆ. ಅವುಗಳಲ್ಲಿ ಮುಖ್ಯ ದೇವಾಲಯವನ್ನು ಕಲ್ಲುಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ.

ಈ ದೇವಸ್ಥಾನಗಳ ವಾಸ್ತುಶೈಲಿಯ ಶೈಲಿ ಮತ್ತು ಶೃಂಗಾರ ರಸವುಳ್ಳ ಶಿಲ್ಪಗಳು, ಖಜುರಾಹೊ ದೇವಸ್ಥಾನ ಮತ್ತು ಕೊನಾರ್ಕ್ ನ ಸೂರ್ಯ ದೇವಸ್ಥಾನವನ್ನು ಹೋಲುತ್ತವೆ. ಈ ದೇವಸ್ಥಾನವು ರಾಯ್ ಪುರದಿಂದ 132 ಕಿ.ಮೀ ದೂರದಲ್ಲಿದೆ.

ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ

ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ

PC: bjoern

ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿಕೊಡಿ. ಇದೊಂದು ಅತೀ ಸುಂದರವಾದ ಉದ್ಯಾನವನವಾಗಿದ್ದು ದಟ್ಟವಾದ ಕಾಡುಗಳನ್ನು ಹೊಂದಿದೆ. ಆದುದರಿಂದ ಸಮೃದ್ದವಾದ ಜೀವ ವೈವಿಧ್ಯಗಳನ್ನು ಹೊಂದಿದ್ದು ಪ್ರಕೃತಿ ಪ್ರೇಮಿಗಳಿಗೆ ಸೂಕ್ತವಾದ ಸ್ಥಳವಾಗಿದೆ. ಹುಲಿ, ಚಿಟಲ್, ಚಿರತೆ, ಪಟ್ಟೆಯುಳ್ಳ ಕತ್ತೆಕಿರುಬ, ಜಾಕಲ್, ಇತ್ಯಾದಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಇದಲ್ಲದೆ ಈ ಉದ್ಯಾನವನದ ಸುತ್ತ ಮುತ್ತ ನೀವು ಭೇಟಿ ನೀಡಬಹುದಾದ ಕೆಲವು ಸುಂದರ ಸ್ಥಳಗಳಿವೆ. ಅವುಗಳಲ್ಲಿ ತಿರತ್ಗಡ್ ಜಲಪಾತ, ಕಂಗರ್ ಧಾರ, ದಂಡಕ್ ಗುಹೆಗಳು ಪ್ರಮುಖವಾದವುಗಳು. ಈ ರಾಷ್ಟ್ರೀಯ ಉದ್ಯಾನವನವು ರಾಯ್ ಪುರದಿಂದ ಸುಮಾರು 306 ಕಿ.ಮೀ ದೂರದಲ್ಲಿದೆ.

ಕೋಟುಮ್ಸರ್ ಗುಹೆ:

ಕೋಟುಮ್ಸರ್ ಗುಹೆ:

PC: Theasg sap

ಕೋಟುಮ್ಸರ್ ಗುಹೆಯು ಛತ್ತೀಸಗಢದ ಒಂದು ಪ್ರಮುಖ ಪ್ರವಾಸೀ ಆಕರ್ಷಣೆಯಾಗಿದ್ದು ಈ ಗುಹೆಗೆ ಹತ್ತಿರವಿರುವ ಕೋಟುಮ್ಸರ್ ಎಂಬ ಹಳ್ಳಿಯ ಹೆಸರನ್ನೇ ಇಡಲಾಗಿದೆ. ಇದು ಜಗದಾಲ್ಪುರದಿಂದ 29 ಕಿ.ಮೀ ದೂರದಲ್ಲಿದೆ.

ಬೆಟ್ಟದ ಮೇಲಿನ ಲಂಬವಾದ ಬಿರುಕುಗಳಿಂದ ಗುಹೆಯ ರಚನೆಯಾಗಿದ್ದು ಇದು ಗುಹೆಯ ಪ್ರವೇಶ ದ್ವಾರವೂ ಆಗಿರುತ್ತದೆ.ಸುರಂಗವು ಸುಮಾರು 200 ಮೀ. ನಷ್ಟು ಇದ್ದು ಕೆಲವು ಹಾದಿಗಳನ್ನೊಳಗೊಂಡಿದೆ. ಕೋಟುಮ್ಸರ್ ಗುಹೆಯು ಧಾರ್ಮಿಕ ಮಹತ್ವವನ್ನು ಹೊಂದಿರುವ ಸ್ಥಳವೆಂದು ನಂಬಲಾಗಿದ್ದು ಕೆಲವು ಯಾತ್ರಿಗಳು ಇಲ್ಲಿ ಧೂಪ ದ್ರವ್ಯಗಳು ಮತ್ತು ಕರ್ಪೂರವನ್ನು ಬೆಳಗುತ್ತಾರೆ.

ಸಿರ್ಪುರ್ ಸ್ಮಾರಕಗಳ ಗುಂಪು

ಸಿರ್ಪುರ್ ಸ್ಮಾರಕಗಳ ಗುಂಪು

PC: Mohnish1208

ಸಿರ್ಪುರ್ ಸ್ಮಾರಕಗಳ ಗುಂಪು ಛತ್ತೀಸಗಢದ ಮಹಾಸಮುಂದ್ ಜಿಲ್ಲೆಯಲ್ಲಿದೆ. ಈ ಜಾಗವು ಪುರಾತತ್ವ ಶಾಸ್ತ್ರದ ಮೌಲ್ಯಗಳನ್ನು ಹೊಂದಿದೆ. ಈ ಜಾಗದಲ್ಲಿ ಹಿಂದು, ಜೈನ ಮತ್ತು ಬೌದ್ದರ ಸ್ಮಾರಕಗಳನ್ನು ಹೊಂದಿದೆ. ಇವುಗಳು 5ರಿಂದ 12ನೇ ಶತಮಾನಗಳ ಮಧ್ಯದ ಅವಧಿಯಲ್ಲಿ ನಿರ್ಮಿಸಲ್ಪಟ್ಟದ್ದಾಗಿವೆ. ಈ ಸ್ಮಾರಕಗಳು ಮಹಾನದಿಯ ತೀರದಲ್ಲಿ ನೆಲೆಸಿವೆ.

ಇತ್ತೀಚಿನ ಉತ್ಖನನದ ಪ್ರಕಾರ, ಇಲ್ಲಿ 12 ಬುದ್ಧ ವಿಹಾರಗಳು, ಅಸಂಖ್ಯಾತ ದೇವಾಲಯಗಳು, 1 ಜೈನ ವಿಹಾರ ಮತ್ತು ಭೂಗತ ಗ್ರಾನ್ರಿ ಮಾರುಕಟ್ಟೆ ಕಂಡುಬಂದಿದೆ. ಇತಿಹಾಸ ಪ್ರಿಯರಿಗೆ ಈ ಸ್ಥಳವು ಹೆಚ್ಚು ಸಂತೋಷವನ್ನು ಕೊಡುತ್ತದೆ. ಇದು ರಾಯ್ಪುರದಿಂದ 83ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X