India
Search
  • Follow NativePlanet
Share
» »ಭಾರತದ ಐದು ಅದ್ಭುತ ಪರ್ವತ ರೈಲು ಪಯಣಗಳು

ಭಾರತದ ಐದು ಅದ್ಭುತ ಪರ್ವತ ರೈಲು ಪಯಣಗಳು

By Vijay

ಮೊದಲೇ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ಇಷ್ಟ, ಅದರಲ್ಲಿಯೂ ವಿಶೇಷವಾಗಿ ಪರ್ವತ ಮಾರ್ಗಗಳಲ್ಲಿ ಪಯಣಿಸುವುದೆಂದರೆ? ಅಬ್ಬಾ...ಉಂಟಾಗುವ ಸಂತಸವನ್ನು ಊಹಿಸಲೂ ಸಾಧ್ಯವಿಲ್ಲ, ಕೇವಲ ಆ ಅನುಭವವನ್ನು ಪಡೆದಾಗ ಮಾತ್ರ ಅದರ ಮಹತ್ವ ತಿಳಿಯುತ್ತದೆ.

ಗೊಐಬಿಬೊ ಕೂಪನ್ : ಎಲ್ಲ ದೇಶೀಯ ಫ್ಲೈಟ್ ಬುಕ್ ಮಾಡಿ 10% ಕಡಿತ ಪಡೆಯಿರಿ

ಇಂತಹ ಪ್ರವಾಸ ಪ್ರಯಾಣವನ್ನು ಆಗಾಗ ಮಾಡುವುದರಿಂದ ಖಂಡಿತವಾಗಿಯೂ ಒತ್ತಡಗಳು ಕಡಿಮೆಯಾಗಿ ಜೀವನದಲ್ಲಿ ಹುರುಪು, ಉತ್ಸಾಹಗಳು ಜೊತೆಯಾಗಿರುತ್ತವೆ. ಮನುಷ್ಯ ಇಂದು ಹೆಚ್ಚು ಹಣ ಸಂಪಾದಿಸುವಲ್ಲಿ ನಿರತನಾಗಿದ್ದು, ಪ್ರಕೃತಿಯ ಸುಂದರತೆ, ಸಹಜ ನೈಸರ್ಗಿಕ ಚಿಕಿತ್ಸೆ ಮುಂತಾದವುಗಳಿಂದ ದೂರ ಉಳಿದಿದ್ದಾನೆ. ಇದರಿಂದಾಗಿಯೋ ಏನೋ ಜೀವನೋತ್ಸಾಹವನ್ನು ವೇಗವಾಗಿ ಕಳೆದುಕೊಳ್ಳುತ್ತಿದ್ದಾನೆ.

ವಿಶೇಷ ಲೇಖನ : ಮಾಥೇರಾನ್ ಎಂಬ ಸುಂದರ ಗಿರಿಧಾಮ

ನೀವು ಕೇಳಿರಬಹುದು ಒಮ್ಮೊಮ್ಮೆ ವೈದ್ಯರೂ ಸಹ ಸ್ಥಳ ಬದಲಾವಣೆಯ ಕುರಿತು ಸಲಹೆ ನೀಡುವುದನ್ನು. ಈ ರೀತಿಯಾಗಿ ಪ್ರಕೃತಿಯ ಒಡಲಲ್ಲಿ ಸಮಯ ಕಳೆದಾಗ ಮನಸ್ಸು ಪ್ರಸನ್ನಗೊಂಡು ಆರೋಗ್ಯದಲ್ಲಿ ಚೇತರಿಕೆ ಉಂಟಾಗಬಹುದೆಂದರೆ ತಪ್ಪಾಗಲಿಕ್ಕಿಲ್ಲ. ಈ ಒಂದು ನಿಟ್ಟಿನಲ್ಲಿ ನೋಡಿದಾಗ ಪರ್ವತ ರೈಲು ಮಾರ್ಗಗಳೂ ಸಹ ಹುರುಪು ನೀಡುವಂತಹ ಅದ್ಭುತ ಪ್ರಯಾಣ ಮಾರ್ಗಗಳಾಗಿವೆ.

ವಿಶೇಷ ಲೇಖನ : ಪಶ್ಚಿಮ ಬಂಗಾಳದ ಏಕೈಕ ಗಿರಿಧಾಮವಿದು

ಪ್ರಸ್ತುತ ಲೇಖನದ ಮೂಲಕ ಭಾರತದ ಅದ್ಭುತ ಐದು ಪರ್ವತ ರೈಲು ಮಾರ್ಗಗಳು ಯಾವುವು ಹಾಗೂ ಅವುಗಳ ಪ್ರಯಾಣ ಮಾರ್ಗಗಳು ಹೇಗೆ ಎಂಬಿತ್ಯಾದಿಗಳ ಕುರಿತು ಮಾಹಿತಿ ತಿಳಿಯಿರಿ. ಸಮಯಾವಕಾಶ ಸಿಕ್ಕಾಗ ಇವುಗಳಲ್ಲಿ ಯಾವುದಾದರೊಂದು ಮಾರ್ಗಗಳಲ್ಲಿ ಪಯಣಿಸಿ ಆನಂದಿಸಿ. ಏಕೆಂದರೆ ಇವು ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸರಿ ಮಾಡಲೇಬೇಕಾದ ಪ್ರವಾಸ ಮಾರ್ಗಗಳಾಗಿವೆ.

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

"ಪುಟಾಣಿ ರೈಲು","ಆಟದ ರೈಲು" ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವ ದಾರ್ಜೀಲಿಂಗ್‌ ಹಿಮಾಲಯನ್‌ ರೈಲುಮಾರ್ಗವು ನ್ಯಾರೋ-ಗೇಜಿನ ರೈಲುಮಾರ್ಗವಾಗಿದ್ದು, ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಸಿಲಿಗುರಿಯಿಂದ ದಾರ್ಜೀಲಿಂಗ್‌ವರೆಗೆ ಸುಮಾರು 88 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುತ್ತದೆ.

ಚಿತ್ರಕೃಪೆ: Matt Paish

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

ಭಾರತೀಯ ರೈಲ್ವೆ ಇಲಾಖೆಯಿಂದ ನಿರ್ವಹಿಸಲ್ಪಡುವ ಈ ರೈಲು ಭಾರತದ ಪ್ರಪ್ರಥಮ ಪರ್ವತ ರೈಲು ಮಾರ್ಗ ಎಂಬ ಖ್ಯಾತಿಗೂ ಸಹ ಪಾತ್ರವಾಗಿದೆ. ಇದರ ಕಾಮಗಾರಿಯು 1881 ರಲ್ಲಿ ಪೂರ್ಣಗೊಂಡಿತಾದರೂ ನಂತರ ಸಮಯದಲ್ಲಿ ಈ ಮಾರ್ಗವು ಹಲವಾರು ಸುಧಾರಣೆಗಳನ್ನು ಕಂಡಿತು.

ಚಿತ್ರಕೃಪೆ: Golf Bravo

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

ಈ ರೈಲು ಮಾರ್ಗದ ಉದ್ದಕ್ಕೂ ಅಲ್ಲಲ್ಲಿನ ಕೆಲ ಆಯಕಟ್ಟಿನ ಅನುಕೂಲಕರ ಸ್ಥಳಗಳಲ್ಲಿ ಬೆಂಡಿನಂತಹ ಸಂಕೇತ ಫಲಕಗಳನ್ನು ಹಾಕಲಾಗಿದ್ದು ಇದೊಂದು ವಿಶಿಷ್ಟ ಆಕರ್ಷಣೆಯಾಗಿದೆ. 'ಅಗೊನಿ ಪಾಯಿಂಟ್‌', 'ಸೆನ್ಸೇಷನ್‌ ಕಾರ್ನರ್‌' ಹೀಗೆ ಹಲವು ನಯನಮನೋಹರವಾದ ಸ್ಥಳಗಳು ಮಧ್ಯದಲ್ಲಿ ದೊರಕುತ್ತವೆ.

ಚಿತ್ರಕೃಪೆ: Matt Paish

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

1. ದಾರ್ಜೀಲಿಂಗ್ ಹಿಮಾಲಯನ್ ರೈಲು ಮಾರ್ಗ:

ದೂರದಿ ಪ್ರಶಾಂತವಾಗಿ ಹಾಗೂ ಅಷ್ಟೆ ಗಂಭೀರವಾಗಿ ಕಂಡುಬರುವ ಬೆಳ್ಳನೆ ಹಿಮಾಲಯ ಪರ್ವತದ ಹೊಳಪು ನೋಡುಗರನ್ನು ಬೆಕ್ಕಸು ಬೆರಗಾಗಿಸುತ್ತದೆ. ಎರಡು ಬದಿಗಳಲ್ಲಿ ಪ್ರಪಾತಗಳು, ಬೆಟ್ಟಗಳು ಅದರ ಮೇಲೆ ಚುಕುಬುಕು ಎಂದು ಚಲಿಸುವ ಪುಟಾಣಿ ರೈಲು ಅದರಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರುವ ವೀಕ್ಷಣಾ ತಾಣಗಳು ಇವೆಲ್ಲವೂ ಸೇರಿ ಪ್ರವಾಸಿಗರನ್ನು ರೋಮಾಂಚಿತಗೊಳಿಸುವುದರಲ್ಲಿ ಎರಡು ಮಾತಿಲ್ಲ. ದಾರ್ಜೀಲಿಂಗ್ ರೈಲು ನಿಲ್ದಾಣ. ಡಿ.ಹೆಚ್.ಆರ್ (ದಾರ್ಜೀಲಿಂಗ್ ಹಿಮಾಲಯನ್ ರೈಲ್)ಗೆ ಕಾದಿರುವ ಪ್ರವಾಸಿಗರು.

ಚಿತ್ರಕೃಪೆ: shankar s.

2. ನೀಲ್ಗಿರಿ ಮೌಂಟೆನ್ ರೈಲು:

2. ನೀಲ್ಗಿರಿ ಮೌಂಟೆನ್ ರೈಲು:

ಕೊಯಮತ್ತೂರಿನ ಮೆಟ್ಟುಪಾಳ್ಯಂನಿಂದ ಊಟಿಯವರೆಗೆ ಚುಕು ಬುಕು ಎಂದು ಕೂಗುತ್ತ ಚಲಿಸುವ ನೀಲ್ಗಿರಿ ಪರ್ವತ ರೈಲು ದಕ್ಷಿಣ ಭಾರತದ ಬಲು ಆಕರ್ಷಕ ರೈಲು ಪ್ರವಾಸವಾಗಿದೆ. ಹೊರಡಬೇಕಾದ ರೈಲಿನ ಸಂಖ್ಯೆ 56136. ಬೆಳಿಗ್ಗೆ 7 ಘಂಟೆಗೆ ಮೆಟ್ಟುಪಾಳ್ಯಂನಿಂದ ಹೊರಟು ಈ ರೈಲು ಮಧ್ಯಾಹ್ನ 12 ಘಂಟೆಯ ಸಮಯಕ್ಕೆ ಊಟಿ ತಲುಪುತ್ತದೆ. ವಾರದ ಎಲ್ಲ ದಿನಗಳಲ್ಲೂ ಈ ರೈಲಿನ ಸೇವೆಯನ್ನು ಪ್ರವಾಸಿಗರು ಪಡೆಯಬಹುದಾಗಿದೆ.

ಚಿತ್ರಕೃಪೆ: Naveen K S

2. ನೀಲ್ಗಿರಿ ಮೌಂಟೆನ್ ರೈಲು:

2. ನೀಲ್ಗಿರಿ ಮೌಂಟೆನ್ ರೈಲು:

ಕೋಯಮತ್ತೂರು ಜಿಲ್ಲೆಯ ತಾಲೂಕು ಪಟ್ಟಣವಾಗಿರುವ ಮೆಟ್ಟುಪಾಳ್ಯಂ ಸುಂದರ ನೀಲ್ಗಿರಿ ಬೆಟ್ಟಗಳ ಬುಡದಲ್ಲಿ ನೆಲೆಸಿದೆ. ನಿಜ ಹೇಳಬೇಕೆಂದರೆ ಊಟಿಗೆ ತೆರಳುವ ಸುಪ್ರಸಿದ್ಧ ನೀಲ್ಗಿರಿ ಮೌಂಟೆನ್ ರೈಲಿನ ಪ್ರಾರಂಭಿಕ ಸ್ಥಳವಾಗಿದೆ ಮೆಟ್ಟುಪಾಳ್ಯಂ.

ಚಿತ್ರಕೃಪೆ: David Brossard

2. ನೀಲ್ಗಿರಿ ಮೌಂಟೆನ್ ರೈಲು:

2. ನೀಲ್ಗಿರಿ ಮೌಂಟೆನ್ ರೈಲು:

ಈ ಮಾರ್ಗದಲ್ಲಿ ಸಾಗುವಾಗ ಎತ್ತರದಲ್ಲಿರುವ ಸುಂದರ ಪ್ರಕೃತಿಯ ಸೌಂದರ್ಯವನ್ನು ಅದ್ಭುತವಾಗಿ ಸವಿಯಬಹುದು. ಅಲ್ಲದೆ ರೈಲಿನ ವೇಗವು ಅತಿ ಮಿತವಾಗಿರುವುದರಿಂದ ಪ್ರದೇಶದ ಸೌಂದರ್ಯವನ್ನು ಸಮಾಧಾನದಿಂದ ಆಸ್ವಾದಿಸಬಹುದು.

ಚಿತ್ರಕೃಪೆ: David Brossard

2. ನೀಲ್ಗಿರಿ ಮೌಂಟೆನ್ ರೈಲು:

2. ನೀಲ್ಗಿರಿ ಮೌಂಟೆನ್ ರೈಲು:

ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ವೀಕ್ಷಣಾ ತಾಣಗಳಿದ್ದು ರೈಲಿನ ನಿಲುಗಡೆಯಿದೆ. ಸುರಂಗ ಮಾರ್ಗಗಳು (ಟನಲ್), ಚಹಾ ತೋಟ ಹೀಗೆ ಹಲವು ಸುಂದರ ದೃಶ್ಯಾವಳಿಗಳನ್ನು ಈ ಮಾರ್ಗದಲ್ಲಿ ಕಾಣಬಹುದು.

ಚಿತ್ರಕೃಪೆ: David Brossard

2. ನೀಲ್ಗಿರಿ ಮೌಂಟೆನ್ ರೈಲು:

2. ನೀಲ್ಗಿರಿ ಮೌಂಟೆನ್ ರೈಲು:

ಮೆಟ್ಟುಪಾಳ್ಯಂ ನಂತರ ಕೂ ಕೂ ಎಂದು ಕೂಗುತ್ತ ಈ ಊಗಿ ಬಂಡೆಯ ರೈಲು ಹಿಲ್ ಗ್ರೋವ್ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡುತ್ತದೆ. ಮುಂಜಾನೆಯ ಸಮಯ, ಸೂರ್ಯನ ಎಳೆ ಕಿರಣಗಳು, ತಂಪು ತಂಪಾದ ವಾತಾವರಣ ಇವುಗಳ ಮೇಲೆ ಅದ್ವಿತೀಯ ಪ್ರಕೃತಿ ಸೌಂದರ್ಯ.

ಚಿತ್ರಕೃಪೆ: David Brossard

2. ನೀಲ್ಗಿರಿ ಮೌಂಟೆನ್ ರೈಲು:

2. ನೀಲ್ಗಿರಿ ಮೌಂಟೆನ್ ರೈಲು:

ಹಿಲ್ ಗ್ರೋವ್ ನಿಂದ ಹೊರಡುವ ಈ ರೈಲು ನಂತರದಲ್ಲಿ ಪ್ರವಾಸಿ ಆಕರ್ಷಣೆಯಿರುವ ಕೂಣ್ಣೂರು ಪಟ್ಟಣವನ್ನು ತಲುಪುತ್ತದೆ. ಮಧು ಚಂದ್ರದ ತಾಣವಾಗಿಯೂ ಸಹ ಪ್ರಖ್ಯಾತಿ ಗಳಿಸಿರುವ ಕೂಣ್ಣೂರು ಒಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Omsarkar

2. ನೀಲ್ಗಿರಿ ಮೌಂಟೆನ್ ರೈಲು:

2. ನೀಲ್ಗಿರಿ ಮೌಂಟೆನ್ ರೈಲು:

ಮೆಟ್ಟುಪಾಳ್ಯಂ ನಿಂದ ಪ್ರಾರಂಭವಾದ ಈ ರೈಲಿನ ಪಯಣ ಕೊನೆಯದಾಗಿ ಲವ್ ಡೇಲ್ ನಂತರದಲ್ಲಿ "ಅಬ್ಬಾ ಅಂತೂ ಮುಟ್ಟಿದೆ" ಎನ್ನುವ ರೀತಿಯಲ್ಲಿ ದಕ್ಷಿಣ ಭಾರತದ ಸುಪ್ರಸಿದ್ಧ ಪ್ರವಾಸಿ ತಾಣವಾದ ಊಟಿ ಪಟ್ಟಣವನ್ನು ತಲುಪುತ್ತದೆ.

ಚಿತ್ರಕೃಪೆ: Bluemangoa2z

3. ಮಾಥೇರಾನ್ ಪರ್ವತ ರೈಲು:

3. ಮಾಥೇರಾನ್ ಪರ್ವತ ರೈಲು:

ಮಹಾರಾಷ್ಟ್ರ ರಾಜ್ಯದಲ್ಲಿದೆ ಈ ಸುಂದರ ಪುಟಾಣಿ ರೈಲು ಮಾರ್ಗ. ಪ್ರಸಿದ್ಧ ಮಾಥೇರಾನ್ ಗಿರಿಧಾಮಕ್ಕೆ ತೆರಳಲು ಈ ಪುಟಾಣಿ ರೈಲು ನರೇಲ್ ಎಂಬ ಗ್ರಾಮದಿಂದ ಉಪಲಬ್ಧವಿದೆ. ಮಾಥೇರಾನ್ ರಾಯಗಡ್ ಜಿಲ್ಲೆಯ ಕರ್ಜಾತ್ ತಾಲೂಕಿನಲ್ಲಿರುವ ಸುಂದರ ಗಿರಿಧಾಮವಾಗಿದೆ.

ಚಿತ್ರಕೃಪೆ: Nilesh.shintre

3. ಮಾಥೇರಾನ್ ಪರ್ವತ ರೈಲು:

3. ಮಾಥೇರಾನ್ ಪರ್ವತ ರೈಲು:

ನ್ಯಾರೋವ್ ಗೇಜ್ ಹಳಿಗಳ ಮೇಲೆ ಸಾಗುವ ಈ ರೈಲು ನೇರಲ್ ನಿಂದ ಮಾಥೇರಾನ್ ನ ಒಟ್ಟಾರೆಯ ದೂರವಾದ 12 ಮೈಲಿಯನ್ನು ತಲುಪಲು ಸುಮಾರು ಒಂದು ಘಂಟೆಯಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಪ್ರದೇಶದ ಅತಿ ಉತ್ತಮ ನೋಟಗಳನ್ನು ರೈಲಿನ ಮೂಲಕ ಸಾಗುವಾಗ ವೀಕ್ಷಿಸುತ್ತ ಆನಂದಿಸಬಹುದು.

ಚಿತ್ರಕೃಪೆ: nevil zaveri

3. ಮಾಥೇರಾನ್ ಪರ್ವತ ರೈಲು:

3. ಮಾಥೇರಾನ್ ಪರ್ವತ ರೈಲು:

ಬೆಟ್ಟದ ಮೇಲೆ ಸಾಗುವಾಗ ಪ್ರಪಾತದ ರಮಣೀಯ ನೋಟವನ್ನು ಒದಗಿಸುವ ಈ ರೈಲು ಒಂದು ರೀತಿಯ ಭಯ ಮಿಶ್ರಿತ ರೋಮಾಂಚನವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Arne Hückelheim

3. ಮಾಥೇರಾನ್ ಪರ್ವತ ರೈಲು:

3. ಮಾಥೇರಾನ್ ಪರ್ವತ ರೈಲು:

ರಸ್ತೆಯನ್ನು ಭೇದಿಸಿ ನಿಪುಣ ಚಾರಣಿಗನಂತೆ ಬೆಟ್ಟವೇರುತ್ತಿರುವ ಮಾಥೇರಾನ್ ಪುಟಾಣಿ ರೈಲು.

ಚಿತ್ರಕೃಪೆ: G Karunakar

3. ಮಾಥೇರಾನ್ ಪರ್ವತ ರೈಲು:

3. ಮಾಥೇರಾನ್ ಪರ್ವತ ರೈಲು:

ಪುಟಾಣಿ ರೈಲನ್ನು ಬರಮಾಡಿಕೊಳ್ಳುವ ಮಾಥೇರಾನ್ ಗಿರಿಧಾಮದ ಪುಟಾಣಿ ರೈಲು ನಿಲ್ದಾಣ.

ಚಿತ್ರಕೃಪೆ: Magiceye

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾವನ್ನು ಹರ್ಯಾಣ ರಾಜ್ಯದ ಪಂಚಕುಲಾ ಜಿಲ್ಲೆಯ ಕಲ್ಕಾದೊಂದಿಗೆ ಬೆಸೆಯುವ ಪರ್ವತ ರೈಲು ಮಾರ್ಗ ಇದಾಗಿದೆ.

ಚಿತ್ರಕೃಪೆ: Raghavan V

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ಶಿವಾಲಿಕ್ ಪರ್ವತವಲಯದಲ್ಲಿ ಪ್ರಾರಂಭಿಸಲಾದ ಈ ಯೋಜನೆಯ ಕಾಮಗಾರಿಯ ಹೊಣೆಗಾರಿಕೆಯು ದೆಹಲಿ ಅಂಬಾಲಾ ಕಲ್ಕಾ ರೈಲು ಎಂಬ ಕಂಪನಿಯ ಪಾಲಾಗಿ 1898 ರಲ್ಲಿ ಪ್ರಾರಂಭವಾಯಿತು. ಕೊನೆಗೆ ನವಂಬರ್ 9 1903 ರಂದು ಈ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಯಿತು.

ಚಿತ್ರಕೃಪೆ: AHEMSLTD

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ಈ ಮಾರ್ಗವು ಒಟ್ಟಾರೆ 103 ಸುರಂಗ ಮಾರ್ಗಗಳನ್ನು, 864 ಸೇತುವೆಗಳನ್ನು ಹೊಂದಿದ್ದು ಪ್ರಯಾಣದ ಅದ್ಭುತ ಆನಂದವನ್ನು ನೀಡುತ್ತದೆ. 95.66 ಕಿ.ಮೀ ಗಳಷ್ಟು ಉದ್ದವಿರುವ ಈ ಮಾರ್ಗದ ಆರಂಭಿಕ ಸ್ಥಳವು ಸಮುದ್ರ ಮಟ್ಟದಿಂದ 2152 ಅಡಿಗಳಷ್ಟು ಎತ್ತರದಲ್ಲಿದ್ದರೆ ಇದು ತಲುಪುವ ಕೊನೆಯ ನಿಲ್ದಾಣ ಶಿಮ್ಲಾ ನಗರವು ಸಮುದ್ರ ಮಟ್ಟದಿಂದ ಸುಮಾರು 6811 ಅಡಿಗಳಷ್ಟು ಎತ್ತರದಲ್ಲಿದೆ.

ಚಿತ್ರಕೃಪೆ: AHEMSLTD

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ಈ ಮಾರ್ಗದ ಮತ್ತೊಂದು ವಿಶೇಷವೆಂದರೆ ಸುರಂಗ ಮಾರ್ಗ ಸಂಖ್ಯೆ 33. ಬರೋಗ್ ಎಂಬ ನಿಲ್ದಾಣದ ಹಿಂದೆ ಸಿಗುವ ಈ ಸುರಂಗ ಆತ್ಮಪೀಡಿತ ಎಂದು ಹೇಳಲಾಗುತ್ತದೆ. ಇದಕ್ಕೆ ಹಲವಾರು ರೋಚಕ ಕಥೆಗಳು ಸೇರ್ಪಡೆಗೊಂಡಿವೆ.

ಚಿತ್ರಕೃಪೆ: AHEMSLTD

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ಒಂದು ಕಥೆಯ ಪ್ರಕಾರ, ಈ ಒಂದು ನಿರ್ದಿಷ್ಟ ಸುರಂಗವನ್ನು ತೋಡುವಂತೆ ಬ್ರಿಟೀಷ್ ಇಂಜಿನೀಯರ್ ಬರೋಗ್ ಎಂಬಾತನಿಗೆ ಕಾರ್ಯವಹಿಸಲಾಗಿತ್ತು. ಒಂದೆ ಕಡೆಯಿಂದ ಗುಡ್ಡದಲ್ಲಿ ರಂಧ್ರ ಮಾಡಿ ಸುರಂಗ ತೋಡುವ ಕಾರ್ಯ ಬಹಳ ಸಮಯ ತೆಗೆದುಕೊಳ್ಳುತ್ತದೆಂದು, ಆ ಇಂಜಿನೀಯರ್ ಗುಡ್ಡ ಎರಡು ವಿರುದ್ಧ ದಿಕ್ಕುಗಳಿಂದ ರಂಧ್ರ ತೋಡಲು ಪ್ರಾರಂಭಿಸಿದ.

ಚಿತ್ರಕೃಪೆ: sanoop

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ಹೀಗೆ ಎರಡೂ ಕಡೆಯಿಂದ ರಂಧ್ರ ತೋಡುತ್ತ ಮಧ್ಯದಲ್ಲಿ ಒಂದಕ್ಕೊಂದು ಕರಾರುವಕ್ಕಾಗಿ ಸಂಧಿಸಲು ಹಲವಾರು ಲೆಕ್ಕಗಳನ್ನು ಮಾಡಿ ಕಾರ್ಯ ಆರಂಭಿಸಿದ್ದ. ಆದರೆ ದುರದೃಷ್ಟವಶಾತ್ ಅವನ ಲೆಕ್ಕಗಳು ಸಂಪೂರ್ಣವಾಗಿ ತಪ್ಪಾಗಿ ಸುರಂಗವು ವಿಫಲವಾಯಿತು. ಇದರಿಂದ ಬ್ರಿಟಿಷ್ ಸರ್ಕಾರ ಅತೃಪ್ತಿಗೊಂಡು ಅವನಿಗೆ ಒಂದು ರೂಪಾಯಿ ದಂಡ ವಿಧಿಸಿ ಅವನಿಂದ ಹೊಣೆಗಾರಿಕೆಯನ್ನು ಹಿಂತೆಗೆದುಕೊಂಡಿತು.

ಚಿತ್ರಕೃಪೆ: Ashish Gupta

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ಇದರಿಂದ ಸಾಕಷ್ಟು ಅವಮಾನಿತನಾದ ಬರೋಗ್ ಪ್ರದೇಶದಲ್ಲಿ ಎಲ್ಲರ ನಡುವೆ ಹಾಸ್ಯಾಸ್ಪದ ವ್ಯಕ್ತಿಯಾಗಿ ಬಿಟ್ಟ. ನಂತರ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹಾಗೂ ಅವನ ದೇಹವನ್ನು ಅಲ್ಲಿಯೆ ಸಮಾಧಿ ಮಾಡಲಾಯಿತು. ಅವನಿಂದಲೆ ಈ ನಿಲ್ದಾಣಕ್ಕೆ ಬರೋಗ್ ಎಂಬ ಹೆಸರು ಬಂದಿದೆ. ಈಗಲೂ ಸಹ ಅವನ ಆತ್ಮ ಸುರಂಗದಲ್ಲಿದೆ ಎಂದು ಪ್ರದೇಶದಲ್ಲಿ ವಾಸಿಸುವ ಹಲವು ಸ್ಥಳೀಯರ ನಂಬಿಕೆಯಾಗಿದೆ. ಆದರೆ ಈ ಆತ್ಮ ಸ್ನೇಹಜೀವಿಯಾಗಿದೆ ಎಂತಲೂ ನಂಬುತ್ತಾರಂತೆ.

ಚಿತ್ರಕೃಪೆ: Raghavan V

4. ಕಲ್ಕಾ-ಶಿಮ್ಲಾ ಪರ್ವತ ರೈಲು:

4. ಕಲ್ಕಾ-ಶಿಮ್ಲಾ ಪರ್ವತ ರೈಲು:

ನಂತರ ಹ್ಯಾರಿಂಗ್ಟನ್ ಎಂಬ ಇನ್ನೊಬ್ಬ ಮುಖ್ಯ ಇಂಜಿನೀಯರ್ ಬೇರೆಯದೆ ಪ್ರದೇಶದಲ್ಲಿ ಸುರಂಗವನ್ನು ಯಶಸ್ವಿಯಾಗಿ ತೋಡಿ ಮುಗಿಸಿದ. ಇದು ಈಗಲೂ ಈ ಮಾರ್ಗದಲ್ಲಿ ಚಾಲ್ತಿಯಲ್ಲಿದೆ. ಈ ಸುರಂಗ ದಾಟಿದ ನಂತರವೆ ಬರೋಗ್ ನಿಲ್ದಾಣವಿದೆ. ಈ ಸುರಂಗವು ಮಾರ್ಗದ ಎಲ್ಲ ಸುರಂಗಳಿಗಿಂತ ಉದ್ದವಾಗಿದೆ. ಇದರ ಉದ್ದ ಹೆಚ್ಚು ಕಮ್ಮಿ 1.5 ಕಿ.ಮೀ.

ಚಿತ್ರಕೃಪೆ: Abdul Razzak

5. ಕಂಗ್ರಾ ಕಣಿವೆ ರೈಲು:

5. ಕಂಗ್ರಾ ಕಣಿವೆ ರೈಲು:

ಹಿಮಾಲಯದ ಎತ್ತರ ಪ್ರದೇಶಗಳಲ್ಲಿ ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯವನ್ನು ಬೆಸೆಯುವ ಪುಟಾಣಿ ಪರ್ವತ ರೈಲು ಮಾರ್ಗವಾಗಿದೆ ಇದು. ಪಂಜಾಬಿನ ಪಠಾನಕೋಟ್ ಅನ್ನು ಹಿಮಾಚಲ ಪ್ರದೇಶದ ಜೋಗಿಂದರ್ ನಗರ್ ದೊಂದಿಗೆ ಬೆಸೆಯುತ್ತದೆ.

ಚಿತ್ರಕೃಪೆ: ChanduBandi

5. ಕಂಗ್ರಾ ಕಣಿವೆ ರೈಲು:

5. ಕಂಗ್ರಾ ಕಣಿವೆ ರೈಲು:

ನಾರ್ಥರ್ನ್ ರೈಲ್ವೆಯ ಫಿರೋಜಪುರ್ ವಿಭಾಗದಲ್ಲಿ ಬರುವ ಕಂಗ್ರಾ ಕಣಿವೆ ರೈಲು ಹಿಮಾಚಲ ಪ್ರದೇಶದಲ್ಲಿ ಚಲಿಸುವ ಎರಡು ಪರ್ವತ ರೈಲುಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: GKarunakar

5. ಕಂಗ್ರಾ ಕಣಿವೆ ರೈಲು:

5. ಕಂಗ್ರಾ ಕಣಿವೆ ರೈಲು:

ಈ ರೈಲು ಮಾರ್ಗದ ಒಟ್ಟಾರೆ ಉದ್ದವು 164 ಕಿ.ಮೀ ಗಳಿದ್ದು ನ್ಯಾರೋ ಗೇಜ್ ರೈಲು ಕಂಬಿಗಳನ್ನು ಹೊಂದಿದೆ. ಇನ್ನೊಂದು ವಿಷಯವೆಂದರೆ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆಯಲು ಕಾಯುತ್ತಿದೆ.

ಚಿತ್ರಕೃಪೆ: ChanduBandi

5. ಕಂಗ್ರಾ ಕಣಿವೆ ರೈಲು:

5. ಕಂಗ್ರಾ ಕಣಿವೆ ರೈಲು:

ಈ ಮಾರ್ಗದಲ್ಲಿ ಬರುವ ಅಹಜು ಅತಿ ಎತ್ತರದ ತಾಣವಾಗಿದ್ದು ಸಮುದ್ರ ಮಟ್ಟದಿಂದ 4,230 ಅಡಿಗಳಷ್ಟು ಎತ್ತರದಲ್ಲಿದೆ. ಸುತ್ತಮುತ್ತಲಿನ ನಿಸರ್ಗವು ದಟ್ಟ ಹಸಿರಿನಿಂದಾವರಿಸಿದೆ.

ಚಿತ್ರಕೃಪೆ: ChanduBandi

5. ಕಂಗ್ರಾ ಕಣಿವೆ ರೈಲು:

5. ಕಂಗ್ರಾ ಕಣಿವೆ ರೈಲು:

ಈ ಮಾರ್ಗದಲ್ಲಿ ಬೈಜನಾಥ ಎಂಬ ನಿಲ್ದಾಣವಿದ್ದು ಅದರ ನಂತರ ಹಸಿರಿನ ದಟ್ಟ ಹಾಸಿಗೆಯ ನಡುವೆ, ಜುಳು ಜುಳು ಹರಿಯುವ ನೀರಿನ ಝರಿಗಳ ನಡುವೆ ರೈಲು ಸಾಗುತ್ತ ಅದ್ಭುತ ಅನುಭವವನ್ನು ನೀಡುತ್ತದೆ.

ಚಿತ್ರಕೃಪೆ: ChanduBandi

5. ಕಂಗ್ರಾ ಕಣಿವೆ ರೈಲು:

5. ಕಂಗ್ರಾ ಕಣಿವೆ ರೈಲು:

ಒಟ್ಟಾರೆಯಾಗಿ ಈ ಸುಂದರ ಹಾಗೂ ಅದ್ಭುತ ಪ್ರಯಾಣವು ಜೀವನದಲ್ಲಿ ಎಂದಿಗೂ ಮರೆಯಲಾರದ ವಿಶಿಷ್ಟ ಅನುಭೂತಿಯನ್ನು ಮನದಲ್ಲಿ ಕಟ್ಟಿಡುತ್ತದೆ.

ಚಿತ್ರಕೃಪೆ: ChanduBandi

5. ಕಂಗ್ರಾ ಕಣಿವೆ ರೈಲು:

5. ಕಂಗ್ರಾ ಕಣಿವೆ ರೈಲು:

ಇನ್ನೇಕೆ ತಡ? ನೀವು ಒಮ್ಮೆಯಾದರೂ ಈ ಸುಂದರ ಮಾರ್ಗಗಳಲ್ಲಿ ನಿಮಗಿಷ್ಟವಾದ ಯಾವುದಾದರೊಂದು ಮಾರ್ಗದಲ್ಲಿ ಪಯಣಿಸಿ ಆನಂದಿಸಿ.

ಚಿತ್ರಕೃಪೆ: ChanduBandi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X