Search
  • Follow NativePlanet
Share
» »ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?

ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?

ನಮ್ಮ ಭಾರತ ದೇಶವೆಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಅದರಲ್ಲೂ ವಿದೇಶಿಗರಿಗಂತೂ ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳೆಂದರೆ ಇನ್ನು ಇಷ್ಟ. ಕೇವಲ ಇಲ್ಲಿನ ಪದ್ಧತಿಗಳೇ ಅಲ್ಲದೇ ವಿದೇಶದ ಸೊಬಗಿಗೆ ಸೆಡ್ಡು ಹೊಡೆಯುವಂತಹ ಅನೇಕ ಸುಂದರವಾದ ತಾಣಗಳು ಹಾಗು ಅದ್ಭುತಗಳು ನಮ್ಮ ದೇಶದಲ್ಲಿದೆ. ಅದ್ದರಿಂದಲೇ ವಿದೇಶಿಗರು ತಮ್ಮ ಜೀವನದಲ್ಲಿ ಒಮ್ಮೆಯಾದರು ಭಾರತದ ಅದ್ಭುತಗಳನ್ನು ಕಾಣಬೇಕು ಎಂದು ಬಯಸುತ್ತಾರೆ. ಬೃಹತ್ ಕಟ್ಟಡಗಳು, ನಿಗೂಢತೆಯನ್ನು ಹೊಂದಿರುವ ದೇವಾಲಯಗಳು, ಕಣ್ಮನ ಸೆಳೆಯುವ ಗಿರಿಶಿಖರಗಳು, ಮನೋಹರವಾದ ಜಲಪಾತಗಳು ಆಹಾ..ಒಂದಾ ಎರಡಾ..?

ನಮ್ಮ ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವ ತಾಣದ ಬಗ್ಗೆ ನಿಮಗೇನಾದರು ಊಹೆ ಇದೆಯೇ? ಹಾಗಾದರೆ ಬನ್ನಿ ಆ ತಾಣಗಳ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ತಿಳಿದುಕೊಳ್ಳೊಣ.

1.ತಾಜ್ ಮಹಲ್

1.ತಾಜ್ ಮಹಲ್

ತಾಜ್ ಮಹಲ್ ಪ್ರೀತಿಯ ಪ್ರತೀಕವೆಂಬುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಮೊಘಲ್ ವಾಸ್ತುಶೈಲಿಯ ಈ ಅದ್ಭುತವಾದ ಕಟ್ಟಡವು ಸಂಪೂರ್ಣವಾಗಿ ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಇದು ಭಾರತದ ಅತ್ಯಂತ ಪ್ರಸಿದ್ಧವಾದ ತಾಣ ಎಂದು ಗುರುತಿಸಲ್ಪಟ್ಟಿದೆ. ಇದರ ಭವ್ಯತೆ ಮತ್ತು ಸೌಂದರ್ಯವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.

ಷಹ ಜಹಾನ್ ತನ್ನ ಪತ್ನಿ ನೂರ್ ಜಹಾನ್ ಅವರ ಮೇಲಿನ ಪ್ರೀತಿಗೆ ಪ್ರತೀಕವಾಗಿ ಈ ಭವ್ಯವಾದ ಕಟ್ಟಡವನ್ನು ನಿರ್ಮಾಣ ಮಾಡಿದನು.

"ಗೋಲ್ಡನ್ ಟ್ರಯಾಂಗಲ್" ನಗರಗಳಲ್ಲಿ ಒಂದಾಗಿದ್ದು, ಆಗ್ರಾದ ಬೀದಿಗಳನ್ನು ಅನ್ವೇಷಿಸಲು ನಿಮಗೆ ಅವಕಾಶವಿದೆ. ಈ ಅದ್ಭುತವನ್ನು ಕಾಣಲು ದಿನಕ್ಕೆ ಸಾವಿರಾರು ಮಂದಿ ಜನರು ಭೇಟಿ ನೀಡುತ್ತಿರುತ್ತಾರೆ. ಭಾರತ‌‌ ದೇಶದಲ್ಲಿ ‌ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ‌ ಇದು ಕೂಡ ಒಂದು.

ಪ್ರವೇಶ ಶುಲ್ಕ: ಭಾರತೀಯ - ರೂ 40, ವಿದೇಶಿ - ರೂ 1000

ಸಮಯ: 6:30 ರಿಂದ 9:30 ರದವರೆಗೆ ಶುಕ್ರವಾರದಂದು ಮುಚ್ಚಲಾಗಿರುತ್ತದೆ.

2.ಕುತುಬ್ ಮಿನಾರ್

2.ಕುತುಬ್ ಮಿನಾರ್

ಭಾರತೀಯ ಇತಿಹಾಸದಲ್ಲಿ ಅತ್ಯಂತ ಎತ್ತರವಾದ ಕಟ್ಟಡಗಳಲ್ಲಿ ಒಂದಾದ ಕುತುಬ್ ಮಿನಾರ್. ಅದರ ಕೆಂಪು ಮರಳುಗಲ್ಲು ಮತ್ತು ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇರಾನ್ ವಾಸ್ತುಶೈಲಿಯೊಂದಿಗೆ‌ ಕಂಗೊಳಿಸುವ ಈ ಕಟ್ಟಡವು ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.

ಹತ್ತೊಂಬತ್ತನೆಯ ಶತಮಾನದಲ್ಲಿ ಕುತುಬ್ ಉದ್-ದಿನ್-ಐಬಾಕ್ ನಿರ್ಮಿಸಿದ ಈ ಗೋಪುರವು ದೆಹಲಿಯಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಭಾರತದಲ್ಲಿ ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳಲ್ಲಿ ಇದು ಕೂಡ ಒಂದು.

ಪ್ರವೇಶ ಶುಲ್ಕ: ಭಾರತೀಯರಿಗೆ - ರೂ 10 ಮತ್ತು ವಿದೇಶಿಯರು- ರೂ 250

ಸಮಯ: 7 ರಿಂದ 5 ಗಂಟೆಗೆ

3.ಅಮೀರ್ ಕೋಟೆ

3.ಅಮೀರ್ ಕೋಟೆ

PC: TheLastCur8r

ಚೆಲ್ ಕಾ ಟೀಲಾ ಎಂಬ ಬೆಟ್ಟದ ಮೇಲೆ ಅದ್ಭುತವಾದ ಅಮೀರ್ ಕೋಟೆ ಇದೆ. ಅಮೀರ್ ಕೋಟೆಯು ಅದರ ಆಕರ್ಷಣೀಯ ವಾಸ್ತುಶೈಲಿಗೆ, ದಟ್ಟವಾದ ಕೆಂಪು ಮರಳುಗಲ್ಲು ಮತ್ತು ಮಾರ್ಬಲ್ನಲ್ಲಿ ನಿರ್ಮಾಣ ಮಾಡಲಾಗಿದೆ.

ದೈತ್ಯಾಕಾರದ ಕೋಟೆಯು ದಿವಾನ್-ಇ-ಖಯಾಸ್, ದಿವಾನ್-ಇ-ಆಮ್ ಮತ್ತು ಕೋಟಿಯಲ್ಲಿ ಸುರಂಗವು ಕೂಡ ಇದೆ. ಈ ಸುಂದರವಾದ ತಾಣಕ್ಕೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸೂರಜ್ ಪೋಲ್ (ಸೂರ್ಯ ಗೇಟ್) ಹಾಗು ಆನೆಯ ಸವಾರಿ ಕೂಡ ಆನಂದಿಸಬಹುದು.

.ಪ್ರವೇಶ ಶುಲ್ಕ: ಭಾರತೀಯರು- INR 25 ಮತ್ತು ವಿದೇಶಿಯರು- INR 200

ಸಮಯ: 9:30 ರಿಂದ 4:30 ಕ್ಕೆ

4.ಅಜಂತಾ ಮತ್ತು ಎಲ್ಲೋರಾ

4.ಅಜಂತಾ ಮತ್ತು ಎಲ್ಲೋರಾ

PC: Manu Jha

ಮಹಾರಾಷ್ಟ್ರದ ಅಜಂತಾ ಮತ್ತು ಎಲ್ಲೋರಾ ಆಕರ್ಷಣೀಯ ಗುಹೆಗಳು. ತನ್ನ ಸೌಂದರ್ಯದ ಮೂರ್ತಿಗಳು ಹಾಗು ಅವರ ಅಧಿಕೃತ ಕಲ್ಲು-ಕಲ್ಲಿನ ಶಿಲ್ಪಗಳು ಎಂಥವರನ್ನು ಮಂತ್ರಮುಗ್ದರನ್ನಾಗಿಸದೇ ಬಿಡದು. ಪುರಾತನ ಭಾರತೀಯ ಕಲೆಯಿಂದಾಗಿ ಈ ಸುಂದರ ಗುಹೆಗಳು UNESCO ವಿಶ್ವ ಪರಂಪರೆ ತಾಣವಾಗಿ ಮಾರ್ಪಟ್ಟಿವೆ.

ಈ ಗುಹೆಯಲ್ಲಿರುವ ಹಸ್ತಕೃತಿಗಳು ಬುದ್ಧನ ಹಿಂದಿನ ಜೀವನ ಮತ್ತು ಮರುಹುಟ್ಟನ್ನು ಚಿತ್ರಿಸುತ್ತವೆ. 1819 ರಲ್ಲಿ ಕಂಡುಹಿಡಿದ ಈ ಗುಹೆಗಳು ಪ್ರವಾಸಿಗರಿಗೆ ಭೇಟಿ ನೀಡುವ ಸ್ಥಳಗಳಾಗಿವೆ. ಭಾರತದಲ್ಲಿ ಪ್ರವಾಸಿಗರು ಅತಿ ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ ಇದು ಕೂಡ ಒಂದು.

ಪ್ರವೇಶ ಶುಲ್ಕ: ಇಂಡಿಯನ್ಸ್- ರೂ 30 ಮತ್ತು ವಿದೇಶಿಯರು- ರೂ 500

ಸಮಯ: 8 ರಿಂದ 5 ಗಂಟೆಗೆ

5.ವಿರೂಪಾಕ್ಷ ದೇವಸ್ಥಾನ

5.ವಿರೂಪಾಕ್ಷ ದೇವಸ್ಥಾನ

PC: Jayalakshmi Iyangar

ಕರ್ನಾಟಕದಲ್ಲಿ ನೆಲೆಗೊಂಡಿರುವ ಸುಂದರವಾದ ಹಂಪಿ ನಗರವು ಅನೇಕ ಅದ್ಭುತಗಳ‌‌ ನೆಲೆಯಾಗಿದೆ. ಭವ್ಯವಾದ ದೇವಾಲಯಗಳನ್ನು ಹೊಂದಿದೆ.

ಹಂಪಿ ಪ್ರದೇಶದಲ್ಲಿ ನೆಲೆಗೊಂಡಿರುವ ವಿರೂಪಾಕ್ಷ ದೇವಸ್ಥಾನವು ಅತ್ಯಂತ ವಿಸ್ಮಯಕಾರಿ ತಾಣವಾಗಿದೆ. ಕಲ್ಲುಗಳ ಮೇಲೆ ಕೆತ್ತಿರುವ ಶಿಲ್ಪಗಳು ಈ ಅದ್ಭುತ ದೇವಸ್ಥಾನದ ಪ್ರಮುಖ ಲಕ್ಷಣವಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ಈ ದೇವಾಲಯವನ್ನು ಹಂಪಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ.

ವಿರೂಪಾಕ್ಷ ಅತ್ಯಂತ ಭವ್ಯವಾದ ದೇವಾಲಯಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಭಾರತದಲ್ಲಿನ ಪ್ರವಾಸಿಗರು ಅತಿ ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ ಒಂದಾಗಿದೆ.

ಪ್ರವೇಶ ಶುಲ್ಕ: ಭಾರತೀಯರಿಗೆ - ರೂ 10 ಮತ್ತು ವಿದೇಶಿಯರು- ರೂ 250

ಸಮಯ: 6 ರಿಂದ 6 ಗಂಟೆಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X