Search
  • Follow NativePlanet
Share
» »ಬೆಂಗಳೂರಿನ ಸಮೀಪದಲ್ಲಿರುವ ಟಾಪ್ 5 ಎಲಿಫೆಂಟ್ ಅಭಯಾರಣ್ಯಗಳು

ಬೆಂಗಳೂರಿನ ಸಮೀಪದಲ್ಲಿರುವ ಟಾಪ್ 5 ಎಲಿಫೆಂಟ್ ಅಭಯಾರಣ್ಯಗಳು

ವಾರಾಂತ್ಯ ಬಂದರೆ ಸಾಕು ಮಕ್ಕಳೊಂದಿಗೆ ಅಥವಾ ಸ್ನೇಹಿತರೊಂದಿಗೆ ಯಾವುದಾದರೂ ಸುಂದರವಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ. ಹಾಗಾಗಿ ಯಾವುದಾದರೂ ತಾಣದ ಹುಡುಕಾಟದಲ್ಲಿದ್ದರೆ ಒಮ್ಮೆ ಆನೆಗಳ ಮೀಸಲು ಪ್ರದೇಶಗಳಿಗೆ ಒಮ್ಮೆ ಭೇಟಿ ನೀಡಿ

ವಾರಾಂತ್ಯ ಬಂದರೆ ಸಾಕು ಮಕ್ಕಳೊಂದಿಗೆ ಅಥವಾ ಸ್ನೇಹಿತರೊಂದಿಗೆ ಯಾವುದಾದರೂ ಸುಂದರವಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ. ಹಾಗಾಗಿ ಯಾವುದಾದರೂ ತಾಣದ ಹುಡುಕಾಟದಲ್ಲಿದ್ದರೆ ಒಮ್ಮೆ ಆನೆಗಳ ಮೀಸಲು ಪ್ರದೇಶಗಳಿಗೆ ಒಮ್ಮೆ ಭೇಟಿ ನೀಡಿ ಬನ್ನಿ. ಏಕೆಂದರೆ ಮಕ್ಕಳಿಗೆ ಪಾಠದ ಜೊತೆ ಜೊತೆಗೆ ಆಭಯಾರಣ್ಯದಲ್ಲಿನ ಪ್ರಾಣಿ ಸಂಕುಲವನ್ನು ಪರಿಚಯ ಮಾಡಿಸಿ.

ಆನೆಗಳು ಎಂದರೆ ಕೇವಲ ಮಕ್ಕಳಿಗೆ ಅಲ್ಲದೇ ದೊಡ್ಡವರಿಗೂ ಇಷ್ಟವಾದ ಪ್ರಾಣಿಯಾಗಿದೆ. ಅದರ ಮೇಲೆ ಸವಾರಿ ಮಾಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆನೆಯನ್ನು ನಮ್ಮ ಹಿಂದೂ ಧರ್ಮದ ಪ್ರಕಾರ ಗಣಪತಿಯ ಅಂದರೆ ದೈವದ ಸ್ಥಾನವನ್ನು ನೀಡಿ ಆರಾಧಿಸುತ್ತೇವೆ.

ಈ ಲೇಖನದಲ್ಲಿ ಹೇಳಲಾಗುವ ಆನೆಗಳ ಮೀಸಲು ಪ್ರದೇಶಗಳು ಬೆಂಗಳೂರಿನಿಂದ ಸುಮಾರು 200 ರಿಂದ 400 ಕಿ.ಮೀ ವ್ಯಾಪ್ತಿಯಲ್ಲಿರುವ ಅಭಯಾರಣ್ಯಗಳೇ ಆಗಿವೆ. ಲೇಖನದಲ್ಲಿ ತಿಳಿಸಲಾಗುವ ಅಭಯಾರಣ್ಯಗಳು ಕರ್ನಾಟಕದ ಅತ್ಯದ್ಭುತವಾದುದೇ ಆಗಿದೆ. ಹಾಗಾದರೆ ಒಮ್ಮೆಯಾದರೂ ಆನೆಯ ಮೇಲೆ ಸವಾರಿ ಮಾಡಲು ಈ ಸ್ಥಳಗಳಿಗೆಲ್ಲಾ ಭೇಟಿ ನೀಡಿ ಬನ್ನಿ.

ಕಬಿನಿ ನಾಗರಹೊಳೆ

ಕಬಿನಿ ನಾಗರಹೊಳೆ

ಈ ಸುಂದರವಾದ ಅಭಯಾರಣ್ಯಕ್ಕೆ ಬೆಂಗಳೂರಿನಿಂದ ಕಬಿನಿ ನಾಗರಹೊಳೆಗೆ 240 ಕಿ.ಮೀ ದೂರದಲ್ಲಿದೆ. ಈ ಅದ್ಭುತವಾದ ಅಭಯಾರಣ್ಯವು ಕೇವಲ ಎಲಿಫೆಂಟ್ ಮೀಸಲು ಅಲ್ಲ ಬದಲಾಗಿ, ಟೈಗರ್ ರಿಸರ್ವ ಕೂಡ ಆಗಿದೆ. ಇದು ಕರ್ನಾಟಕದ ಅತ್ಯುತ್ತಮವಾದ ವನ್ಯಜೀವಿ ತಾಣವೇ ಆಗಿರದೇ ಶ್ರೀಮಂತ ಅಭಯಾರಣ್ಯ ಕೂಡ ಆಗಿದೆ. ಈ ವನ್ಯಜೀವಿ ಧಾಮವನ್ನು 1955 ರಲ್ಲಿ ಸ್ಥಾಪಿಸಲಾಯಿತು. ದಟ್ಟವಾದ ಹಸಿರು ವರ್ಣದಿಂದ ಕಂಗೊಳಿಸುತ್ತಿರುವ ಬೆಟ್ಟ, ಗುಡ್ಡ, ಕಣಿವೆಗಳಿಂದ ಅಮೂಲ್ಯವಾದ ವೃಕ್ಷಗಳಿಂದ ಇಲ್ಲಿ ಹಲವಾರು ಜಾತಿಯ ಪ್ರಾಣಿ, ಪಕ್ಷಿಗಳಿಂದ ಈ ಅಭಯಾರಣ್ಯವು ಶ್ರೀಮಂತವಾಗಿದೆ.


PC:Yathin S Krishnappa

ಬಂಡೀಪುರ ನ್ಯಾಷನಲ್ ಪಾರ್ಕ್

ಬಂಡೀಪುರ ನ್ಯಾಷನಲ್ ಪಾರ್ಕ್

ಕರ್ನಾಟಕದ ಅದ್ಭುತವಾದ ಅಭಯಾರಣ್ಯಗಳಲ್ಲಿ ಈ ಬಂಡೀಪುರ ನ್ಯಾಷನಲ್ ಪಾರ್ಕ್ ಕೂಡ ಒಂದು. ಇದು ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 230 ಕಿ.ಮೀ ದೂರದಲ್ಲಿದೆ. ಬಂಡೀಪುರವು ಟೈಗರ್ ರಿಸರ್ವ್ ಜೊತೆ ಜೊತೆಗೆ ಎಲಿಫೆಂಟ್ ಮೀಸಲು ಪ್ರದೇಶ ಕೂಡ ಆಗಿದೆ. ಇಲ್ಲಿ ಕೇವಲ ಆನೆ, ಹುಲಿಗಳೇ ಅಲ್ಲದೇ ಆನೇಕ ಪ್ರಾಣಿ ಪಕ್ಷಿಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ನಿಮಗೆ ಗೊತ್ತ ಇದು ಒಂದು ಕಾಲದಲ್ಲಿ ಮೈ

ವಿಶೇಷವಾಗಿ ಬಂಡೀಪುರವು ತನ್ನ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. ಈ ಉದ್ಯಾನವನವು ಸುಮಾರು 874 ಚದರ ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿದೆ. ಬಂಡೀಪುರವು ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆ ತಾಲೂಕಿನಲ್ಲಿದೆ. ಇದು ಮೈಸೂರು ನಗರದಿಂದ ಸುಮಾರು ಕೇವಲ 80 ಕಿ.ಮೀ ದೂರದಲ್ಲಿದೆ.

PC:Yathin S Krishnappa

ಭದ್ರಾ ಟೈಗರ್ ರಿಸರ್ವ್

ಭದ್ರಾ ಟೈಗರ್ ರಿಸರ್ವ್

ಈ ಅಭಯಾರಣ್ಯಕ್ಕೆ ಬೆಂಗಳೂರಿನಿಂದ 283 ಕಿ.ಮೀ ದೂರದಲ್ಲಿದೆ. ಭದ್ರಾ ವನ್ಯಜೀವಿಧಾಮವು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪಶ್ಚಿಮ ಘಟ್ಟಗಳ ಮಧ್ಯದಲ್ಲಿದೆ. ಭದ್ರಾ ವನ್ಯಜೀವಿಧಾಮಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹುಲಿಗಳು ಇರುವುದನ್ನು ಕಾಣಬಹುದು. 1998 ರಲ್ಲಿ ಭಾರತದ 25 ನಲ್ಲಿ "ಪ್ರಾಜೆಕ್ಟ್ ಟೈಗರ್" ಎಂದು ಘೋಷಿಸಲಾಯಿತು. ಈ ಅಭಯಾರಣ್ಯವು ಸಮೃದ್ಧ ಹಸಿರು ಸಸ್ಯ ಮತ್ತು ಎತ್ತರದ ಪರ್ವತ ಶ್ರೇಣಿಗಳು ಸುಂದರವಾದ ಮತ್ತು ಅದ್ಭುತವಾದ ದೃಶ್ಯವನ್ನು ಪ್ರವಾಸಿಗರಿಗೆ ನೀಡುತ್ತದೆ. ಇಲ್ಲಿ ಆನೇಕ ಪ್ರಾಣಿ ಸಂಕುಲಗಳನ್ನು ಈ ಅಭಯಾರಣ್ಯದಲ್ಲಿ ಕಾಣಬಹುದಾಗಿದೆ.

PC:Yathin S Krishnappa

ಬಿ.ಆರ್.ಟಿ ವನ್ಯಜೀವಿ ಅಭಯಾರಣ್ಯ

ಬಿ.ಆರ್.ಟಿ ವನ್ಯಜೀವಿ ಅಭಯಾರಣ್ಯ

ಈ ಅಭಯಾರಣ್ಯವು ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 190 ಕಿ.ಮೀ ದೂರದಲ್ಲಿದೆ. ಇದು ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಈರೋಡದ ಜಿಲ್ಲೆಯ ಗಡಿಯ ದಕ್ಷಿಣದಲ್ಲಿ ಈ ಬಿ.ಆರ್.ಟಿ ವನ್ಯಜೀವಿ ಅಭಯಾರಣ್ಯವಿದೆ. ಇದು ಬಿಳಿಗಿರಿ ರಂಗನಾಥ ದೇವಾಲಯವು ಕೂಡ ಇಲ್ಲಿದೆ. ಇದನ್ನು 1972 ರಲ್ಲಿ ವನ್ಯಜೀವಿ ಸಂರಕ್ಷಿತ ಮೀಸಲು ಪ್ರದೇಶವಾಗಿದೆ. ಇದು ಪಶ್ವಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ಸಂಗಮದಲ್ಲಿದೆ. ಈ ಅಭಯಾರಣ್ಯವು ಪರ್ವತ ಶ್ರೇಣಿಗಳೆರಡಕ್ಕೂ ಅನನ್ಯವಾಗಿದೆ ಎಂದೇ ಹೇಳಬಹುದು. ಹಾಗೆಯೇ 2011 ರಲ್ಲಿ ಹುಲಿ ರಿಸರ್ವ್ ಎಂದು ಕೂಡ ಘೋಷಿಸಲಾಯಿತು.

PC:Yathin sk

ಮುದುಮಲೈ ರಾಷ್ಟ್ರೀಯ ಉದ್ಯಾನವನ

ಮುದುಮಲೈ ರಾಷ್ಟ್ರೀಯ ಉದ್ಯಾನವನ

ಈ ಉದ್ಯಾನವನವು ಬೆಂಗಳೂರು ದಕ್ಷಿಣಕ್ಕೆ ಸುಮಾರು 240 ಕಿ,ಮೀ ದೂರದಲ್ಲಿದೆ. ಮುದುಮಲೈ ವನ್ಯಜೀವಿ ಧಾಮ ಮತ್ತು ರಾಷ್ಟ್ರೀಯ ಉದ್ಯಾನವನವು ತಮಿಳುನಾಡು, ಕೇರಳ ಮತ್ತು ಕರ್ನಾಟಕದ ತ್ರಿ-ಜಂಕ್ಷನ್‍ನಲ್ಲಿದೆ. ಇದು ಉತ್ತರದಲ್ಲಿ ಬಂಡೀಪುರ ಹುಲಿ ರಿಸರ್ವ್ ಮತ್ತು ಪಶ್ಚಿಮದಲ್ಲಿ ವಿನಾಡ್ ವನ್ಯಜೀವಿ ಅಭಯಾರಣ್ಯ (ಕೇರಳ) ಪ್ರದೇಶವು ವೈವಿದ್ಯಮಯವಾದ ಪ್ರಾಣಿ ಸಂಕುಲವನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಆನೆ ಸವಾರಿ ಮಾಡಲು ಇಷ್ಟ ಪಡುತ್ತಾರೆ.


PC:Yathin S Krishnappa

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X