Search
  • Follow NativePlanet
Share
» »ಭಾರತದ ಮೊದಲ 25 ಸ್ವಚ್ಛ ನಗರಗಳು

ಭಾರತದ ಮೊದಲ 25 ಸ್ವಚ್ಛ ನಗರಗಳು

By Vijay

ಭಾರತ ಸರ್ಕಾರದ ನಗರಾಭಿವೃದ್ದಿ ಸಚಿವಾಲಯವು ಪ್ರಕಟಿಸಿದ ಪಟ್ಟಿಯಲ್ಲಿ ಮೊದಲ 25 ಸ್ವಚ್ಛ ನಗರಗಳು ಯಾವುವೆಂಬುದರ ಕುರಿತು ಈ ಲೇಖನ ತೀಲಿಸುತ್ತದೆ. ಹಿಂದಿನ ಲೇಖನಗಳಲ್ಲಿ ಕಲುಶಿತಗೊಳ್ಳುತ್ತಿರುವ ಪ್ರಸಿದ್ಧ ಪ್ರವಾಸಿ ಸ್ಥಳಗಳ ಕುರಿತು ಈಗಾಗಲೆ ಓದಿರುತ್ತೀರಿ. ಅದಕ್ಕೆ ತದ್ವಿರುದ್ದ ಎಂಬಂತೆ ಸ್ವಚ್ಛತೆಯಿಂದ ಕೂಡಿರುವ ಭಾರತದ ಮೊದಲ 25 ನಗರಗಳ ಕುರಿತು ಇಲ್ಲಿ ತಿಳಿಯಿರಿ.

ಸ್ವಚ್ಛ ಎಂದ ಮಾತ್ರಕ್ಕೆ ಈ ನಗರಗಳು ಸಂಪೂರ್ಣ ಸ್ವಚ್ಛಮಯ ಎಂದು ತಿಳಿಯಬೇಕಾಗಿಲ್ಲ. ಆದರೆ ಬೇರೆ ನಗರಗಳಿಗೆ ಹೋಲಿಸಿದಾಗ ಇಲ್ಲಿನ ಪರಿಸರವು ಸಾಕಷ್ಟು ಸ್ವಚ್ಛವಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಇವುಗಳಲ್ಲಿ ಬಹುತೇಕ ನಗರಗಳು ಪ್ರವಾಸಿ ಪ್ರಖ್ಯಾತಿಗಳಿಸಿದ ನಗರಗಳೂ ಸಹ ಆಗಿವೆ.

ವಿಶೇಷ ಲೇಖನ : ಗಲೀಜಾಗುತ್ತಿರುವ ಪ್ರವಾಸಿ ಸ್ಥಳಗಳು

ಸ್ವಚ್ಛ ಪರಿಸರದಲ್ಲಿ ಸಮಯ ಕಳೆಯಲು ಯಾರಿಗೆ ತಾನೆ ಇಷ್ಟವಿಲ್ಲ? ಈ ರಜೆಯ ಸಮಯದಲ್ಲಿ ನಿಮಗೆ ಅವಕಾಶ ದೊರೆತರೆ ಇಲ್ಲಿ ನೀಡಲಾಗಿರುವ, ನಿಮಗೆ ಅನುಕೂಲವಾಗುವ ಅಥವಾ ನೋಡಬೇಕೆನಿಸುರುವ ಯಾವುದಾದರೂ ನಗರಕ್ಕೆ ಪ್ರವಾಸ ಹೊರಡಿ ಹಾಗೂ ಅಲ್ಲಿನ ಸ್ವಚ್ಛತೆಯ ಕುರಿತು ಸ್ವತಃ ಪರಿಶೀಲಿಸಿ ನೋಡಿ. ಇದು ಒಂದು ರೀತಿಯಲ್ಲಿ ಸಂತಸ ನೀಡುವ ಪ್ರಕ್ರಿಯೆಯೂ ಆಗಬಹುದು.

25 ನೆಯ ಸ್ಥಾನ:

25 ನೆಯ ಸ್ಥಾನ:

ಹೌದು, ನಗರಾಭಿವೃದ್ಧಿ ಸಚಿವಾಲಯದಿಂದ ಸಿದ್ಧಪಡಿಸಲಾದ ಈ ಪಟ್ಟಿಯಲ್ಲಿ ಸ್ವಚ್ಛತೆಗೆಂದು 25 ನೆಯ ಸ್ಥಾನವು ಭಾರತದ ಸಾಂಸ್ಕೃತಿಕ ರಾಜಧಾನಿ ಎಂತಲೆ ಕರೆಯಲಾಗುವ ಕೊಲ್ಕತ್ತಾದ ಪಾಲಾಗಿದೆ. ಪ್ರವಾಸಿಗರಿಗೆ ಕೊಲ್ಕತ್ತಾ ನಗರ ತೋರಿಸಲು ಸಾಕಷ್ಟು ಸ್ಥಳಗಳನ್ನು ಹೊಂದಿದೆ. ಇಲ್ಲಿನ ಕಲೆ,ಖಾದ್ಯಗಳು, ಸಮಕಾಲೀನ ಜೀವನ ಮತ್ತು ಒಂದು ಪರಿಪೂರ್ಣ ರಾತ್ರಿಯ ಮಿಶ್ರಣ ಪ್ರವಾಸಿಗರಿಗೆ ಕುಶಿ ನೀಡುವುದು ಖಂಡಿತ. ಇದನ್ನು ಓದಿ ಕೊಲ್ಕತ್ತಾ ನಗರ ಜೀವನ.

ಚಿತ್ರಕೃಪೆ: Nikkul

24 ನೆಯ ಸ್ಥಾನ:

24 ನೆಯ ಸ್ಥಾನ:

ಆಂಧ್ರಪ್ರದೇಶ ರಾಜ್ಯದ ವಿಜಯವಾಡಾ ನಗರವು ಈ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಮನಸ್ಸಿಗೆ ಉಲ್ಲಾಸ ನೀಡುವ ಆಂಧ್ರ ಪ್ರದೇಶದ ಪ್ರಮುಖ ನಗರಗಳಲ್ಲೊಂದಾದ ವಿಜಯವಾಡಕ್ಕೆ ಪ್ರವಾಸಕ್ಕಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಇಲ್ಲಿನ ಪ್ರಕೃತಿ ಸೌಂದರ್ಯದ ಒಂದೊಂದು ನೋಟವೂ ವಿಭಿನ್ನವೇ. ಈ ಸೊಬಗನ್ನು ಇಲ್ಲಿಗೆ ಬಂದೇ ಅನುಭವಿಸಬೇಕು. ನಿಮ್ಮ ಮುಂದಿನ ರಜಾ ದಿನಗಳನ್ನು ವಿಜಯವಾಡದಲ್ಲಿ ಕಳೆಯಲು ಇಂದೆ ಭೇಟಿ ನೀಡಿ. ವಿಜಯವಾಡಾ ಕುರಿತು ಓದಿ.

ಚಿತ್ರಕೃಪೆ: vijay chennupati

23 ನೆಯ ಸ್ಥಾನ:

23 ನೆಯ ಸ್ಥಾನ:

ಮಹಾರಾಷ್ಟ್ರ ರಾಜ್ಯದ ಅಚಲಪುರ ಪಟ್ಟಣವು ಈ ಸ್ಥಾನದಲ್ಲಿದೆ. ಅಮರಾವತಿ ಜಿಲ್ಲೆಯ ಎರಡನೆಯ ಅತಿ ದೊಡ್ಡ ಜನನಿಬಿಡ ಪಟ್ಟಣವಾದ ಅಚಲಪುರವು ಪರಾಟ್ವಾಡಾ ಪಟ್ಟಣಕ್ಕೆ ಹೊಂದಿಕೊಂಡಿದ್ದು ಅಚಲಪುರ-ಪರಾಟ್ವಾಡಾ ಎಂಬ ಅವಳಿ ನಗರಗಳಾಗಿವೆ. ಚಿಕ್ಕಲಧಾರಾ ಗಿರಿಧಾಮ, ಮುಕ್ತಗಿರಿ ಬೆಟ್ಟ, ಗವೀಲ್ಗಡ್ ಕೋಟೆ ಅಂತಹ ಜನಪ್ರೀಯ ಪ್ರವಾಸಿ ಆಕರ್ಷಣೆಗಳಿಗೆ ಈ ಪಟ್ಟಣವು ಬಹು ಹತ್ತಿರದಲ್ಲಿದೆ.

ಚಿತ್ರಕೃಪೆ: Anubarto

22 ನೆಯ ಸ್ಥಾನ:

22 ನೆಯ ಸ್ಥಾನ:

ಕರ್ನಾಟಕ ರಾಜ್ಯದ ಬೀದರ್ ನಗರವು ಈ ಪಟ್ಟಿಯ 22 ನೆಯ ಸ್ಥಾನದಲ್ಲಿದೆ. ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಪ್ರಮುಖ ಸ್ಥಳಗಳ ಪೈಕಿ ಒಂದಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬೀದರ್ ನಗರದಲ್ಲಿ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದೆ. ಬೀದರ್ ಕುರಿತು ಓದಿ.

ಚಿತ್ರಕೃಪೆ: Santosh3397

21 ನೆಯ ಸ್ಥಾನ:

21 ನೆಯ ಸ್ಥಾನ:

ಈ ಪಟ್ಟಿಯಲ್ಲಿರುವ 21 ನೆಯ ಸ್ಥಾನದಲ್ಲಿರುವ ಸ್ಥಳ ಉತ್ತರಾಖಂಡ ರಾಜ್ಯದ ಹರಿದ್ವಾರ. ಹೆಸರೇ ಸೂಚಿಸುವಂತೆ ಹರಿದ್ವಾರ ವಿಷ್ಣು ಹಾಗೂ ಶಿವನ ಪೂಜ್ಯ ಸ್ಥಾನ. ಇಲ್ಲಿನ ಹಲವಾರು ದೇವಾಲಯಗಳು, ಗಮ್ಯತಾಣಗಳು ಪ್ರವಾಸಿಗರನ್ನು, ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತವೆ. ಇಲ್ಲಿನ ದೇವಾಲಯದ ಸೊಬಗು ನಮ್ಮನ್ನು ಪೌರಾಣಿಕ ಯುಗಗಳಿಗೆ ಕೊಂಡೊಯ್ಯುತ್ತವೆ. ಇಲ್ಲಿನ ಪವಿತ್ರ ಪಾಪನಾಶಿನಿ ಗಂಗಾ ನದಿ ಅತ್ಯಂತ ಪ್ರಸಿದ್ಧ.

ಚಿತ್ರಕೃಪೆ: Livefree2013

20 ನೆಯ ಸ್ಥಾನ:

20 ನೆಯ ಸ್ಥಾನ:

ತಮಿಳುನಾಡಿನಲ್ಲಿರುವ ಚೆನ್ನೈ ಮಹಾ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಆಲಂದೂರು ನಗರವು ಈ ಪಟ್ಟಿಯಲ್ಲಿ 20 ನೆಯ ಸ್ಥಾನ ಪಡೆದುಕೊಂಡಿದೆ. ಪ್ರಸಿದ್ಧ ಕತಿಪಾರಾ ಫ್ಲೈಓವರ್ ಅಥವಾ ಮೇಲ್ಸೇತುವೆಯನ್ನು ಈ ನಗರದಲ್ಲಿ ಕಾಣಬಹುದಾಗಿದೆ. ಮೇಲಿನಿಂದ ನೋಡಿದಾಗ ಇದು ಚಿಟ್ಟೆಯ ರೂಪದಂತೆ ಅಮೋಘವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Guru coolguy

19 ನೆಯ ಸ್ಥಾನ:

19 ನೆಯ ಸ್ಥಾನ:

ಗುಜರಾತ್ ರಾಜ್ಯದ ಪ್ರಮುಖ ವಾಣಿಜ್ಯ ನಗರವಾದ ಅಹ್ಮದಾಬಾದ್ ಈ ಸ್ಥಾನ ಪಡೆದುಕೊಂಡಿದೆ. ಅಭಿವೃದ್ಧಿಯ ದೃಷ್ಟಿಯಿಂದ ಏಳನೆ ಮಹಾನಗರವೆಂದು ಗುರುತಿಸಲ್ಪಟ್ಟಿರುವ ಈ ನಗರವು ಭಾರತದಲ್ಲಿ ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ಅಹ್ಮದಾಬಾದ್ ಕುರಿತು ಹೆಚ್ಚು ಓದಿ.

ಚಿತ್ರಕೃಪೆ: Trip & Travel Blog

18 ನೆಯ ಸ್ಥಾನ:

18 ನೆಯ ಸ್ಥಾನ:

ಸ್ವಚ್ಛ ನಗರಗಳ ಪೈಕಿಯ ಈ ಸ್ಥಾನವು ಮೇಘಾಲಯ ರಾಜ್ಯದ ಶಿಲ್ಲಾಂಗ್ ನಗರದ ಪಾಲಾಗಿದೆ. ಪೂರ್ವಭಾರತದ ಸ್ಕಾಟ್ಲೆಂಡ್ ಎಂದೇ ಜನಜನಿತವಾಗಿರುವ ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದು ಎಂಬುದಂತೂ ನಿಸ್ಸಂದೇಹ. ಸುತ್ತಮುತ್ತಲೂ ಹಚ್ಚ ಹಸುರಿನ ಪ್ರಕೃತಿ ಸೌಂದರ್ಯ ಒಂದೆಡೆಯಾದರೆ, ಮತ್ತೊಂದೆಡೆ ಪಟ್ಟಣದ ಹೃದಯ ಭಾಗದಲ್ಲಿ ಗಿಜಿಗುಟ್ಟುವ ನಗರ ಜೀವನ. ಇವೆರಡರ ಸಂಗಮವು, ಶಿಲ್ಲಾಂಗ್ ನ ಪ್ರವಾಸೋದ್ಯಮವನ್ನು ರೋಚಕಗೊಳಿಸಿದೆ. ಶಿಲ್ಲಾಂಗ್ ಕುರಿತು ತಿಳಿಯಿರಿ.

ಚಿತ್ರಕೃಪೆ: ChanduBandi

17 ನೆಯ ಸ್ಥಾನ:

17 ನೆಯ ಸ್ಥಾನ:

ನೊಯ್ಡಾ ಈ ಪಟ್ಟಿಯಲ್ಲಿ 17 ನೆಯ ಸ್ಥಾನದಲ್ಲಿರುವ ನಗರ. ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ನೊಯ್ಡಾ ನೆಲೆನಿಂತಿದೆ. ಇದರ ಆಡಳಿತ ಮಂಡಳಿ ಸಮೀಪದ ಗ್ರೇಟರ್ ನೊಯ್ಡಾ ನಗರದಲ್ಲಿದೆ. ಗುರ್ಗಾಂವ್ ನೊಂದಿಗೆ ನೊಯ್ಡಾ ಕೂಡ ಭಾರತದ ಐಟಿ ಕ್ಷೇತ್ರದ ಪ್ರಮುಖ ಕೇಂದ್ರ ಹಾಗೂ ಇಂದು ಹೆಚ್ಚಿನ ಅಂತಾರಾಷ್ಟ್ರೀಯ ಕಂಪನಿಗಳ ಕಚೇರಿಗಳು ಇಲ್ಲಿವೆ. ನೊಯ್ಡಾ ಕುರಿತು ವಿವರ.

ಚಿತ್ರಕೃಪೆ: Jaskirat Singh Bawa

16 ನೆಯ ಸ್ಥಾನ:

16 ನೆಯ ಸ್ಥಾನ:

ಸಾಲ್ಟ್ ಲೇಕ್ ಸಿಟಿ ಎಂದು ಕರೆಯಲ್ಪಡುವ ಬಿದಾನನಗರ ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಒಂದು ಯೋಜಿತ ನಗರವಾಗಿದೆ. ಕೊಲ್ಕತ್ತಾದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆಯನ್ನು ಪರಿಣಾಮಾತ್ಮಕವಾಗಿ ನಿಯಂತ್ರಿಸಲು 1958-65 ರ ಮಧ್ಯದಲ್ಲಿ ಈ ನಗರದ ನಿರ್ಮಾಣವಾಯಿತು. ಇಂದು ಇದೊಂದು ಪ್ರಮುಖ ಬೆಳೆಯುತ್ತಿರುವ ವಾಣಿಜ್ಯ ಹಾಗೂ ಔದ್ಯೋಗಿಕ ನಗರವಾಗಿದ್ದು ಮಾಹಿತಿ ತಂತ್ರಜ್ಞಾನ ವಲಯದ ಪ್ರತಿಷ್ಠಿತ ಕೇಂದ್ರವಾಗಿದೆ.

ಚಿತ್ರಕೃಪೆ: Biswarup Ganguly

15 ನೆಯ ಸ್ಥಾನ:

15 ನೆಯ ಸ್ಥಾನ:

ಕರ್ನಾಟಕ ರಾಜ್ಯದ ಮಂಡ್ಯ ಪಟ್ಟಣವು ಈ ಪಟ್ಟಿಯಲ್ಲಿ 15 ನೆಯ ಸ್ಥಾನ ಪಡೆದಿದೆ. ದಂತ ಕಥೆಯೊಂದರ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಮಾಂಡವ್ಯ ಎಂಬ ಋಷಿಯು ವಾಸಿಸುತ್ತಿದ್ದರಿಂದ ಇದಕ್ಕೆ ಮಂಡ್ಯ ಎಂಬ ಹೆಸರು ಬಂತು. ರವಾಸೋದ್ಯಮದ ದೃಷ್ಟಿಯಿಂದ ಮಂಡ್ಯ ಜಿಲ್ಲೆಯು ಸಾಕಷ್ಟು ಆಕರ್ಷಕವಾದ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಮಂಡ್ಯದ ಸುಂದರ ಆಕರ್ಷಣೆಗಳು.

ಚಿತ್ರಕೃಪೆ: Pradeep Kumbhashi

14 ನೆಯ ಸ್ಥಾನ:

14 ನೆಯ ಸ್ಥಾನ:

ಈ ಸ್ಥಾನವನ್ನು ಒಡಿಶಾ ರಾಜ್ಯದ ರೌರ್ಕೆಲಾ ಎಂಬ ನಗರವು ಪಡೆದುಕೊಂಡಿದೆ. ಸುತ್ತಲು ಬೆಟ್ಟ ಗುಡ್ಡಗಳಿಂದ ಮತ್ತು ನದಿಗಳಿಂದ ಕೂಡಿರುವ ಅತ್ಯಂತ ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯದ ನಡುವೆ ಕಂಗೊಳಿಸುವ ನಗರ ಇದಾಗಿದೆ. ರೌರ್ಕೆಲಾ ಕುರಿತು ಮಾಹಿತಿ. ಇಂದಿರಾಗಾಂಧಿ ಉದ್ಯಾನದ ಬಳಿಯಿರುವ ಸುರಕ್ಷಾ ಪಥ.

ಚಿತ್ರಕೃಪೆ: Akilola

13 ನೆಯ ಸ್ಥಾನ:

13 ನೆಯ ಸ್ಥಾನ:

ಮೊದಲಿಗೆ ಮದ್ರಾಸ್ ಎಂಬ ನಾಮಾಂಕಿತದಿಂದ ಸಂಭೋದಿಸಲ್ಪಡುತ್ತಿದ್ದ ಇಂದಿನ ಚೆನ್ನೈ ಭಾರತದ ದಕ್ಷಿಣ ಭಾಗದ ರಾಜ್ಯವಾದ ತಮಿಳುನಾಡಿನ ರಾಜಧಾನಿ. ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ಚೆನ್ನೈ ಕಾಸ್ಮೋಪಾಲಿಟನ್ ಮಾತ್ರವಲ್ಲದೆ ಮೆಟ್ರೊಪಾಲಿಟನ್ ನಗರ ಕೂಡ ಹೌದು. ಸ್ವಚ್ಛ ನಗರಗಳ ಪೈಕಿ 13 ನೆಯ ಸ್ಥಾನದಲ್ಲಿದೆ ಈ ಚೆನ್ನೈ ನಗರ.

ಚಿತ್ರಕೃಪೆ: Simply CVR

12 ನೆಯ ಸ್ಥಾನ:

12 ನೆಯ ಸ್ಥಾನ:

ದೇಶದ ಆಧುನಿಕ ನಗರ, ಭಾರತದ ಸಿಲಿಕಾನ್ ವ್ಯಾಲಿ, ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂಬಿತ್ಯಾದಿ ಬಿರುದಾವಳಿಗಳಿಗೆ ಪಾತ್ರವಾಗಿರುವ ಹಾಗೂ ಕರ್ನಾಟಕದ ರಾಜಧಾನಿ ನಗರವಾಗಿರುವ ಬೆಂಗಳೂರು ನಗರವು ಈ ಪಟ್ಟಿಯಲ್ಲಿ 12 ನೆಯ ಸ್ಥಾನಗಳಿಸಿದೆ. ಬೆಂಗಳೂರಿನ ಕುರಿತು ಪ್ರವಾಸ ಮಾರ್ಗದರ್ಶಿ ಪುಟ.

ಚಿತ್ರಕೃಪೆ: Vinu Thomas

11 ನೆಯ ಸ್ಥಾನ:

11 ನೆಯ ಸ್ಥಾನ:

ಮುಂಬೈ ಮಹಾನಗರದ ಯೋಜಿತ ನಗರ ಪ್ರದೇಶವಾದ ನಾವಿ ಮುಂಬೈ 11 ನೆಯ ಸ್ಥಾನ ಪಡೆದು ಕೊಂಡಿದೆ. ಮುಂಬೈನ ಪಶ್ಚಿಮ ಬಂದರು ಪ್ರದೇಶದಲ್ಲಿ ತಲೆ ಎತ್ತಿರುವ ಈ ನಗರವು ಜಗತ್ತಿನ ದೊಡ್ಡ ಯೋಜಿತ ನಗರಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Anurupa Chowdhury

10 ನೆಯ ಸ್ಥಾನ:

10 ನೆಯ ಸ್ಥಾನ:

ಕಾನಪುರವು ಈ ಪಟ್ಟಿಯಲ್ಲಿ ಹತ್ತನೆಯ ಸ್ಥಾನಕ್ಕೆ ವಿರಾಜಮಾನವಾಗಿದೆ. ಉತ್ತರಪ್ರದೇಶ ರಾಜ್ಯದ ದೊಡ್ಡ ಪಟ್ಟಣವಾದ ಕಾನ್ಪುರ ಗಂಗಾ ನದಿಯ ತಟದಲ್ಲಿ ತಲೆ ಎತ್ತಿ ನಿಂತಿದೆ. ಪುರಾಣ ಕಥೆಯ ಪ್ರಕಾರ ಮಹಾಭಾರತದ ಕಾಲದಲ್ಲಿ ದುರ್ಯೋಧನನು ಈ ಭೂಭಾಗವನ್ನು ತನ್ನ ಆಪ್ತ ಗೆಳೆಯನಾದ ಕರ್ಣನಿಗೆ, ಅರ್ಜುನನ ಎದಿರು ಆತ ತೋರಿದ ಧೈರ್ಯಕ್ಕೆ ಪ್ರತಿಯಾಗಿ ಈ ನಗರವನ್ನು ಉಡುಗೊರೆಯಾಗಿ ಕೊಟ್ಟಿದ್ದ ಎಂದು ಪ್ರತೀತಿ. ಕಾನಪುರದ ಕುರಿತು ತಿಳಿಯಿರಿ.

ಚಿತ್ರಕೃಪೆ: ptwo

9 ನೆಯ ಸ್ಥಾನ:

9 ನೆಯ ಸ್ಥಾನ:

ಈ ಸ್ಥಾನದಲ್ಲಿದೆ ಗುಜರಾತ್ ರಾಜ್ಯದ ರಾಜಕೋಟ್ ನಗರ. ರಾಜಕೋಟ್ ಸೌರಾಷ್ಟ್ರ ರಾಜ್ಯದ ಮಾಜಿ ರಾಜಧಾನಿಯಾಗಿ ಭಾರೀ ಪ್ರಸಿದ್ಧಿ ಪಡೆದುಕೊಂಡಿತ್ತು. ಈಗ ಅದು ರಾಜಧಾನಿಯಲ್ಲದಿದ್ದರೂ ವೈಭವದ ಗತಕಾಲ ಮತ್ತು ಬ್ರಿಟಿಷರ ಕಾಲದಿಂದ ಇತಿಹಾಸದಲ್ಲಿ ತನ್ನ ಹೆಸರನ್ನು ಉಳಿಕೊಂಡಿರುವ ಮತ್ತು ರಾಜ್ ಕೋಟ್ ಜನರ ಆತಿಥ್ಯದಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: Apoorvjani

8 ನೆಯ ಸ್ಥಾನ:

8 ನೆಯ ಸ್ಥಾನ:

ಕರ್ನಾಟಕ ರಾಜ್ಯದ ಮಂಗಳೂರು ನಗರವು ಈ ಪಟ್ಟಿಯಲ್ಲಿ ಈ ಸ್ಥಾನಮಾನವನ್ನು ಪಡೆದುಕೊಂಡಿದೆ. ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್‌ ಸಮುದ್ರ ಎರಡು ಪ್ರಕೃತಿದತ್ತ ಸೌಂದರ್ಯವನ್ನು ಮೈವೆತ್ತಿ ನಿಂತಿದೆ. ಇವೆರಡೂ ಈ ನಗರಿಗೆ ಭೂಷಣಪ್ರಾಯವಾಗಿ ಲಭಿಸಿವೆ. ಮಂಗಳೂರಿನ ಬಂಗಾರದಂತಹ ಆಕರ್ಷಣೆಗಳು.

ಚಿತ್ರಕೃಪೆ: Premkudva

7 ನೆಯ ಸ್ಥಾನ:

7 ನೆಯ ಸ್ಥಾನ:

ಜಮಷೇಡಪುರ್, ಏಳನೆಯ ಸ್ಥಾನದಲ್ಲಿದೆ. ಭಾರತದ ಕೈಗಾರಿಕಾ ನಗರ ಎಂದೇ ಪ್ರಸಿದ್ಧವಾಗಿದ್ದು, ಈ ನಗರವನ್ನು ದಿವಂಗತ ಜಮಷೇಡಜಿ ನುಸ್ಸರವಾನಜಿ ಟಾಟಾ ಅವರು ಸ್ಥಾಪಿಸಿದರು. ಈ ನಗರವು ಜಾರ್ಖಂಡ್ ರಾಜ್ಯದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಈ ನಗರವು ಸ್ಟೀಲ್ ಸಿಟಿ ಅಥವಾ ಟಾಟಾ ನಗರ ಎಂದೇ ಜನಪ್ರಿಯತೆಯನ್ನು ಪಡೆದಿದೆ.

ಚಿತ್ರಕೃಪೆ: Shahbaz26

6 ನೆಯ ಸ್ಥಾನ:

6 ನೆಯ ಸ್ಥಾನ:

ತಮಿಳುನಾಡಿನ ತಿರುಚಿರಾಪಳ್ಳಿ ನಗರವು ಆರನೆಯ ಸ್ಥಾನಗಳಿಸಿದೆ. ತಿರುಚ್ಚಿ ಎಂತಲೂ ಕರೆಯಲ್ಪಡುವ ಇದು ದಕ್ಷಿಣ ಭಾರತೀಯ ರಾಜ್ಯವಾದ ತಮಿಳುನಾಡಿನಲ್ಲಿ ಕಂಡು ಬರುವ ಒಂದು ಪ್ರಮುಖ ಕೈಗಾರಿಕಾ ಮತ್ತು ಶೈಕ್ಷಣಿಕ ನಗರವಾಗಿದೆ.

ಚಿತ್ರಕೃಪೆ: Tojo667

5 ನೆಯ ಸ್ಥಾನ:

5 ನೆಯ ಸ್ಥಾನ:

ದೆಹಲಿ ಕ್ಯಾಂಟೋನ್ಮೆಂಟ್ ಪ್ರದೇಶವು ಈ ಪಟ್ಟಿಯಲ್ಲಿ ಐದನೆಯ ಸ್ಥಾನದಲ್ಲಿದೆ.

ಚಿತ್ರಕೃಪೆ: Jay.Here

4 ನೆಯ ಸ್ಥಾನ:

4 ನೆಯ ಸ್ಥಾನ:

ಈ ಸ್ಥಾನದಲ್ಲಿದೆ ನವ ದೆಹಲಿ ನಗರಪಾಲಿಕೆ ಪರಿಷತ್. ಇದನ್ನು ನಿಚ್ ಡೆಲ್ಲಿ ಮುನಿಸಿಪಲ್ ಕೌನ್ಸಿಲ್ ಅಂದರೆ ಎನ್ ಡಿ ಎಂ ಸಿ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ.

ಚಿತ್ರಕೃಪೆ: CT Snow

3 ನೆಯ ಸ್ಥಾನ:

3 ನೆಯ ಸ್ಥಾನ:

ಗುಜರಾತ್ ರಾಜ್ಯದ ಸೂರತ್ ಈ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದೆ. ಗುಜರಾತಿನ ನೈಋತ್ಯ ಭಾಗದಲ್ಲಿರುವ ಸೂರತ್ ಇಂದು ಕೈಮಗ್ಗ ಮತ್ತು ವಜ್ರಗಳಿಗಾಗಿ ಪ್ರಸಿದ್ಧವಾಗಿದೆ. ಇದರ ಹೊರತಾಗಿ ಈ ನಗರವು ವೈಭವಯುತವಾದ ಐತಿಹಾಸಿಕ ನಗರವಾಗಿ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ. ಸೂರತ್ ಕುರಿತು ಮಾಹಿತಿ.

ಚಿತ್ರಕೃಪೆ: Hemant meena

2 ನೆಯ ಸ್ಥಾನ:

2 ನೆಯ ಸ್ಥಾನ:

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಕರೆಯಲ್ಪಡುವ ನಮ್ಮ ಹೆಮ್ಮೆಯ ಮೈಸೂರು ನಗರವು ಈ ಪಟ್ಟಿಯಲ್ಲಿ ಎರಡನೆಯ ಸ್ಥಾನ ಪಡೆದುಕೊಂಡಿದೆ. ಉತ್ತಮವಾಗಿ ಸಂರಕ್ಷಿಸಲ್ಪಟ್ಟಿರುವ ಐತಿಹಾಸಿಕ ರಚನೆಗಳು, ಸ್ಮಾರಕಗಳು ಉತ್ತಮವಾಹಿ ನಿರ್ವಹಿಸಲ್ಪಡುತ್ತಿರುವ ನಗರ ವಾತಾವರಣದಿಂದ ಇದು ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದಿದ್ದು ಪ್ರಮುಖ ಪ್ರವಾಸಿ ಕೇಂದ್ರವಾಗಿಯೂ ಸಹ ಗಮನ ಸೆಳೆಯುತ್ತದೆ.
ಮೈಸೂರು ಹಾಗೂ ಸುತ್ತಮುತ್ತಲು.

ಚಿತ್ರಕೃಪೆ: romana klee

1 ನೆಯ ಸ್ಥಾನ:

1 ನೆಯ ಸ್ಥಾನ:

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿ ಬೀಗುತ್ತಿರುವ ನಗರ ಚಂಡೀಗಡ್. ಭಾರತದ ಮೊದಲ ಯೋಜಿತ ನಗರ ಎಂಬ ಕೀರ್ತಿಗೆ ಪಾತ್ರವಾಗಿರುವ ಈ ನಗರವು ಪಂಜಾಬ್ ಹಾಗೂ ಹರ್ಯಾಣ ಎರಡೂ ರಾಜ್ಯಗಳಿಗೂ ಸಹ ರಾಜಧಾನಿ ನಗರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ನಗರದ ಕುರಿತು ಹೆಚ್ಚಿನ ವಿವರ ಪಡೆಯಿರಿ. ಚಂಡೀಗಡ್ ಗುಲಾಬಿ ಉದ್ಯಾನ.

ಚಿತ್ರಕೃಪೆ: Richard Weil

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X