• Follow NativePlanet
Share
» »ಚಳಿಗಾಲದಲ್ಲಿ ಭೇಟಿ ನೀಡಬಹುದಾದ ಕೇರಳದ 10 ಪ್ರಮುಖ ಸ್ಥಳಗಳು

ಚಳಿಗಾಲದಲ್ಲಿ ಭೇಟಿ ನೀಡಬಹುದಾದ ಕೇರಳದ 10 ಪ್ರಮುಖ ಸ್ಥಳಗಳು

Posted By: Manjula Balaraj Tantry

ಬೆರಗುಗೊಳಿಸುವ ಭೂಪ್ರದೇಶಗಳು, ಮಂತ್ರಮುಗ್ದರನ್ನಾಗಿಸುವ ಗಿರಿಧಾಮಗಳು, ಪ್ರಶಾಂತವಾದ ಕಡಲತೀರಗಳು ಮತ್ತು ಹಿನ್ನೀರಿನ ಪ್ರದೇಶಗಳು ಇವೆಲ್ಲಾ ಸೇರಿ ಕೇರಳವನ್ನು ದೇವಲೋಕಕ್ಕೆ ಹೋಲಿಸುವಂತೆ ಮಾಡುತ್ತದೆ. ಈ ಉಲ್ಲೇಖನೆ ಇಲ್ಲಿಯ ನೈಸರ್ಗಿಕ ಸೌಂದರ್ಯಕ್ಕೆ ಯೋಗ್ಯವಾಗಿದೆ. ಕೇರಳದಲ್ಲಿ ಅಸಂಖ್ಯಾತ ವಿಹಾರಕ್ಕೆ ಯೋಗ್ಯವಾದ ಸ್ಥಳಗಳ ಆಯ್ಕೆ ಇರುವುದರಿಂದ ಈ ರಾಜ್ಯವು ಹೆಚ್ಚು ಬೇಡಿಕೆಯಲ್ಲಿರುವ ತಾಣಗಳಲ್ಲಿ ಒಂದಾಗಿದೆ.

ಕೇರಳದ ಭೇಟಿಯ ಸಮಯದಲ್ಲಿ ನಿಮಗೆ ಇಲ್ಲಿನ ಅಸಂಖ್ಯಾತ ಭೂದೃಶ್ಯಗಳು ಆಕರ್ಷಿಸುತ್ತದೆ ಅಲ್ಲದೆ ಇಲ್ಲಿಯ ಚಳಿಗಾಲದಲ್ಲಿನ ಆಹ್ಲಾದಕರ ಆರ್ದ್ರ ವಾತಾವರಣವು ವಿಹಾರದ ಅನುಭವವನ್ನು ಇನ್ನೂ ಉತ್ತಮಗೊಳಿಸುತ್ತದೆ.

ಚಳಿಗಾಲದಲ್ಲಿ ನಿಮ್ಮೆಲ್ಲಾ ಕೆಲಸಗಳಿಗೆ ಒಂದು ವಿರಾಮ ಕೊಟ್ಟು ಕೇರಳದ ಅದ್ಬುತವಾದ ಸ್ಥಳಗಳಿಗೆ ಒಂದು ಭೇಟಿಕೊಡಿ. ನಿಮ್ಮ ದೈನಂದಿನ ಜಂಜಾಟಗಳಿಗೆ ಒಂದು ವಿರಾಮ ಕೊಟ್ಟು ಪ್ರಕೃತಿಯ ಮಡಿಲಲ್ಲಿ ಕಳೆದು ಹೋಗಲು ಒಂದು ಉತ್ತಮವಾದ ಮಾರ್ಗ ಇದಾಗಿದೆ.

ಮುನ್ನಾರ್

ಮುನ್ನಾರ್

PC: Unknown

ದಕ್ಷಿಣಭಾರತದ ಒಂದು ಅತ್ಯಂತ ಪ್ರೀತಿದಾಯಕವಾದ ಗಿರಿಧಾಮವಾಗಿದ್ದು ಸೆಪ್ಟಂಬರ್ ನಿಂದ ಮೇ ತಿಂಗಳುಗಳ ಮದ್ಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಮುನ್ನಾರ್ ಗೆ ಚಳಿಗಾಲದಲ್ಲಿ ಹೋಗುವುದೆಂದರೆ ಮಳೆಗಾಲದ ನಂತರದ ಇಲ್ಲಿಯ ಗಿರಿಧಾಮಗಳ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ.

ಇಲ್ಲಿಯ ಗಿರಿಧಾಮಗಳ ಸುತ್ತವೂ ಚಹಾದ ತೋಟಗಳಿಂದ ಆವೃತ್ತಗೊಂಡಿದ್ದು ಈ ನೋಟವು ನಿಮ್ಮನ್ನು ಬೆರಗುಗೊಳಿಸಿ ಮೂಕವಿಸ್ಮಿತರನ್ನಾಗಿಸುತ್ತದೆ. ಮಟ್ಟುಪೆಟ್ಟಿ ಅಣೆಕಟ್ಟು, ಪೊಥಮೆಡು ವ್ಯೂ ಪಾಯಿಂಟ್, ಎತ್ತರವಾದ ಧಾಮಗಳು, ಎಕೋ ಪಾಯಿಂಟ್, ಇತ್ಯಾದಿಗಳು ಮುನ್ನಾರ್ ನಲ್ಲಿರುವಾಗ ಭೇಟಿ ಕೊಡಬಹುದಾದ ಸ್ಥಳಗಳು

ತ್ರಿಶೂರ್

ತ್ರಿಶೂರ್

PC: Manojk

ತ್ರಿಶೂರ್ ಕೇರಳದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಕೇಂದ್ರವಾಗಿದೆ. ಅಲ್ಲದೆ ಇಲ್ಲಿ ಅನೇಕ ದೇಗುಲಗಳಿವೆ ಅವುಗಳಲ್ಲಿ ವಡಕ್ಕುಂನಾಥನ್ ದೇವಾಲಯ, ಪರಮೆಕ್ಕವು ದೇವಾಲಯ, ಗುರುವಾಯೂರ್ ದೇವಸ್ಥಾನ ಮತ್ತು ಸಂಗೀತ ನಾಟಕ ಅಕಾಡೆಮಿ, ಕೇರಳ ಸಾಹಿತ್ಯ ಅಕಾಡೆಮಿ, ಇತ್ಯಾದಿ. ಪ್ರಮುಖವಾದುದು. ಈ ಕಾರಣದಿಂದ ಇದನ್ನು ಕೇರಳದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ.

ಈ ವೈಭವೋಪಿತವಾದ ಸಾಂಸ್ಕೃತಿಕ ನಗರವನ್ನು ಅಕ್ಟೋಬರ್ ನಿಂದ್ ಮಾರ್ಚ್ ನ ಅವಧಿಯಲ್ಲಿ ಭೇಟಿ ನೀಡಬಹುದು ಈ ಸಮಯದಲ್ಲಿ ಇಲ್ಲಿನ ಹವಾಮಾನವು ಕೂಡ ಉತ್ತಮವಾಗಿರುತ್ತದೆ. ಆದರೆ ತ್ರಿಶೂರ್ ಪೂರಾಂ ಉತ್ಸವವನ್ನು ನೋಡಲು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನೀವು ತ್ರಿಶೂರ್ ಗೆ ಭೇಟಿ ನೀಡಬೇಕು.

ಕೊಚ್ಚಿ

ಕೊಚ್ಚಿ

PC: Dhruvaraj S

ಕರಾವಳಿ ಪ್ರದೇಶವಾದುದರಿಂದ ಕೊಚ್ಚಿಯನ್ನು ಭೇಟಿ ನೀಡಲು ಉತ್ತಮ ಸಮಯವೆಂದರೆ ಅದು ಚಳಿಗಾಲದಲ್ಲಿ. ವಿರಾಮಕ್ಕೆ ಯೋಗ್ಯವಾದ ಈ ನಗರವು ಒಂದು ಪ್ರಶಾಂತವಾದ ಸ್ಥಳವಾಗಿದೆ., ಇಲ್ಲಿ ಡಚ್, ಬ್ರಿಟಿಷ್, ಮತ್ತು ಪೋರ್ಚುಗೀಸರ ಕಾಲದ ಐತಿಹಾಸಿಕ ಮಹತ್ವಗಳನ್ನು ಒಳಗೊಂಡಿದೆ. ಇವೆಲ್ಲವೂ ಕೂಡ ತಮ್ಮದೇ ಆದ ಐತಿಹಾಸಿಕ ಮಹತ್ವಗಳನ್ನು ಒಳಗೊಂಡಿವೆ. ಇಲ್ಲಿಯ ಚೆರೈ ಬೀಚ್ ಮತ್ತು ಮೆರೈನ್ ಡ್ರೈವ್ ನಲ್ಲಿ ಗಾಳಿಯಲ್ಲಿ ಅಡ್ಡಾಡಿ

ಕೋವಲಂ

ಕೋವಲಂ

PC: Purblind

ಕಡಲ ತೀರವನ್ನು ಹೊಂದಿರುವ ನಗರವಾದ ಕೋವಲಂ ಬೀಚ್ ವಿದೇಶಿ ಪ್ರವಾಸಿಗರಿಂದ ಗುರುತಿಸಲ್ಪಟ್ಟ ಮತ್ತು ಪ್ರಾಮುಖ್ಯತೆಯನ್ನು ಹೊಂದಿರುವ ನಗರವಾಗಿದೆ. ಇಲ್ಲಿ ನಯನ ಮನೋಹರವಾದ ಕಡಲತೀರಗಳಾದ ಹವಾ ಬೀಚ್, ಸಮುದ್ರಾ ಬೀಚ್, ಮತ್ತು ಕೋವಲಮ್ ಬೀಚ್ ಗಳಿವೆ. ಇವುಗಳನ್ನು ನೋಡಲು ಮರೆಯಬಾರದು. ಇಲ್ಲಿ ಸ್ನೊರ್ಕ್ಲಿಂಗ್, ಪ್ಯಾರಸೈಲಿಂಗ್, ಸರ್ಫಿಂಗ್, ಮುಂತಾದ ಜಲಕ್ರೀಡೆಗಳನ್ನು ಪ್ರಯತ್ನಿಸುವ ಮೂಲಕ ಅಡಿನಾಲ್ನ್ ಅನುಭವ ಪಡೆಯಬಹುದು. ಇವಲ್ಲದೆ ಬೀಚ್ ಜಿಗಿತದ ಕ್ರೀಡೆಳನ್ನು ಹಾಲ್ಸೋನ್ ಕ್ಯಾಸಲ್ ನಂತಹ ಸುಂದರವಾದ ಸ್ಥಳಗಳನ್ನು ಭೇಟಿ ಮಾಡುವಾಗ ಪ್ರಯತ್ನಿಸಬಹುದು.

ಪೊನ್ಮುಡಿ

ಪೊನ್ಮುಡಿ

PC: Thejas Panarkandy

ಪೊನ್ಮುಡಿ ಸುಂದರವಾದ ಗಿರಿಧಾಮವಾಗಿದ್ದು 3,600 ಅಡಿ ಎತ್ತರದಲ್ಲಿದೆ. ಇದು ಅಕ್ಷರಶಃ ಗೋಲ್ಡನ್ (ಚಿನ್ನದ ಶಿಖರವೆಂದು ಹೆಸರುವಾಸಿಯಾಗಿದೆ. ಪೊನ್ಮುಡಿ ಪಶ್ಚಿಮ ಘಟ್ಟದ ​​ಪರ್ವತ ಶ್ರೇಣಿಗಳ ಒಂದು ಭಾಗವಾಗಿದದ್ದು ಇದು ಅರಬ್ಬೀ ಸಮುದ್ರಕ್ಕೆ ಸಮನಾಗಿದೆ. ಇದು ಅನೇಕ ಟ್ರಕ್ಕಿಂಗ್ ಚಟುವಟಿಕೆಗಳಿಗೆ ಅನುಕೂಲತೆಯನ್ನು ಕಲ್ಪಿಸಿಕೊಡುವುದರಿಂದ ಸಾಹಸಪ್ರಿಯರಿಗೆ ಒಂದು ಅತ್ಯುತ್ತಮವಾದ ಗಿರಿಧಾಮವಾಗಿದೆ. ಇಲ್ಲಿ ವಜವಂತೋಲ್ ಜಲಪಾತಗಳು, ಬೋನಾ ಜಲಪಾತ, ವರಾಯಟ್ಟುಮೋಟಾ ಇತ್ಯಾದಿ ಸುಂದರವಾದ ಜಲಪಾತಗಳೂ ಇವೆ.

ವಯನಾಡ್

ವಯನಾಡ್

PC: Dhruvaraj S

ಬೆಟ್ಟಗಳ ದಟ್ಟವಾದ ಹಸಿರುಸಿರಿ ಮತ್ತುಅಂತ್ಯವಿಲ್ಲದ ಮಸಾಲೆ ತೋಟಗಳು, ಸುಂದರವಾದ ಜಲಪಾತಗಳು ವಯನಾಡಿನ ಮೋಡಿ ಮಾಡುವ ಜಿಲ್ಲೆಯಲ್ಲಿ ಇವೆಲ್ಲವನ್ನು ಕಾಣಬಹುದು. ಅಲ್ಲದೆ ಎಡಕಲ್ ಗುಹೆಗಳು, ಚೆಂಬ್ರಾ ಶಿಖರಕ್ಕೆ ಚಾರಣ, ಪೂಕೋಟ್ ಸರೋವರ, ಬನಸುರ ಅಣೆಕಟ್ಟು ಮತ್ತು ವಯನಾಡಿಗೆ ಭೇಟಿ ಕೊಡುವ ಸಂದರ್ಭದಲ್ಲಿ ನೋಡಬಹುದಾದ ಸುಂದರವಾದ ಸ್ಥಳಗಳು.

ಕೇರಳ ಪ್ರವಾಸೋದ್ಯಮದ ಇನ್ನೊಂದು ಆಕರ್ಷಕ ಕೇಂದ್ರವೆಂದರೆ ವರ್ಕಲಾ ಬೀಚ್, ಈ ಕಡಲತೀರಗಳು ಬೆಟ್ಟಗಳು, ಕೋಟೆಗಳು ಮೊದಲಾದುವುಗಳಿಂದ ಸುತ್ತುವರಿಯಲ್ಪಟ್ಟಿದ್ದು ಒಂದು ಉತ್ತಮವಾದ ರಜಾ ತಾಣವಾಗಿ ಹೊರಹೊಮ್ಮಿದೆ. ಪ್ರಶಾಂತವಾದ ನೈಸರ್ಗಿಕ ಸೌಂದರ್ಯದ ಹೊರತಾಗಿ ಇಲ್ಲಿಯ ನೈಸರ್ಗಿಕವಾದ ಬುಗ್ಗೆಗಳು, ಮತ್ತು ಮೀನುಗಾರಿಕೆಗೆ ಕೂಡಾ ಹೆಸರುವಾಸಿಯಾಗಿದೆ.

ವರ್ಕುಲಾ

ವರ್ಕುಲಾ

PC: Kerala Tourism

ಸುಂದರವಾದ ವರ್ಕುಲಾ ಬೀಚ್ ಹೊರತು ಪಡಿಸಿ ಇಲ್ಲಿ ಭೇಟಿ ನೀಡಬಹುದಾದ ಸ್ಥಳಗಳೆಂದರೆ ಅಂಜೆಂಗೋ ಕೋಟೆ ಮತ್ತು ಶಿವಗಿರಿ ಮಠ ತ್ರಿವೆಂಡ್ರಮ್ ಬೀಚ್ ಇತ್ಯಾದಿ. ಇಲ್ಲಿಯ ಜಲಕ್ರೀಡೆಗಳನ್ನು ಪ್ರಯತ್ನಿಸಬಹುದು ಅಥವಾ ಸೂರ್ಯಸ್ನಾನವನ್ನು ಕೂಡ ಈ ಹೊಳೆಯುವ ಸಮುದ್ರಗಳಲ್ಲಿ ಮಾಡಬಹುದು.

ಕೋಜಿಕೋಡ್

ಕೋಜಿಕೋಡ್

PC: दीपक

ಕೋಜಿಕೋಡ್ ಇದನ್ನು ಕ್ಯಾಲಿಕಟ್ ಎಂದೂ ಕೂಡ ಕರೆಯಲಾಗುತ್ತದೆ. ಇದು ಪೂರ್ವದ ಮಸಾಲೆಗಳ ವ್ಯಾಪಾರ ಕೇಂದ್ರವಾಗಿತ್ತು ಆದುದರಿಂದ ಇದನ್ನು ಮಸಾಲೆಗಳ ನಗರವೆಂದು ಕರೆಯಲಾಗುತ್ತದೆ. ಕೋಜಿಕೋಡ್ ನ ಕಪ್ಪಾಡ್ ಬೀಚ್ ನಲ್ಲಿ ವಾಸ್ಕೋಡಗಾಮನು ಮೊದಲು ಭಾರತವನ್ನು ಕಂಡು ಹಿಡಿದು ನಂತರ ಇಲ್ಲಿ ವ್ಯಾಪಾರ ಮಾರ್ಗಗಳನ್ನು ಕಂಡು ಹಿಡಿದ ಎಂದು ಹೇಳಲಾಗುತ್ತದೆ. ಇಲ್ಲಿಯ ಹಿನ್ನೀರಿನ ಪ್ರದೇಶಗಳಲ್ಲಿ ಆನಂದಿಸಿ. ತಿಕ್ಕೊಟಿ ಲೈಟ್ ಹೌಸ್, ಕೊಜಿಪ್ಪಾರಾ ಫಾಲ್ಸ್, ಇತ್ಯಾದಿಗಳನ್ನು ಕೊಜಿಕ್ಕೋಡ್ ನಲ್ಲಿ ಭೇಟಿ ನೀಡಿ.

ತಿರುವನಂತಪುರಂ

ತಿರುವನಂತಪುರಂ

PC: Augustus Binu

ತಿರುವನಂತಪುರಂ ಇದು ಕೇರಳದ ರಾಜಧಾನಿಯಾಗಿದೆ. ಇದು ಸಾಮಾನ್ಯವಾಗಿ ತ್ರಿವೆಂಡ್ರಮ್ ಎಂದು ಕರೆಯಲ್ಪಡುತ್ತದೆ. ಇಲ್ಲಿ ಅನೇಕ ರಾಜರು ಆಳಿದುದರ ಇತಿಹಾಸವಿದ್ದು ಸಮೃದ್ದವಾದುದಾಗಿದೆ. ಈ ನಗರವು ಅನೇಕ ಸುಂದರವಾದ ಬೆಟ್ಟಗಳು, ಬೀಚ್ ಗಳಿಗೆ ನೆಲೆಯಾಗಿರುವುದರಿಂದ ಇದನ್ನು ಭಾರತದ ನಿತ್ಯ ಹರಿದ್ವರ್ಣ ನಗರ(ಗ್ರೀನ್ ಸಿಟಿ) ಎಂದು ಮಹಾತ್ಮಾ ಗಾಂಧಿಯವರಿಂದ ಕರೆಯಲ್ಪಟ್ಟಿದೆ.

ತಿರುವನಂತಪುರಂನಲ್ಲಿ ನೀವು ಭೇಟಿ ನೀಡಬೇಕಾದ ಕೆಲವು ಸ್ಥಳಗಳಲ್ಲಿ ಕನಕಕುನ್ ಪ್ಯಾಲೇಸ್, ನೆಯ್ಯರ್ ಡ್ಯಾಮ್ ಮತ್ತು ಅಭಯಾರಣ್ಯ, ನೇಪಿಯರ್ ಮ್ಯೂಸಿಯಂ ಗಳು ಸೇರಿವೆ.

ವಾಗಮೋನ್

ವಾಗಮೋನ್

PC: Ashwin Iyer

ವಾಗಮೋನ್ ಒಂದು ಅಫ್ಭೀಟ್ ಗಿರಿಧಾಮವಾಗಿದ್ದು ಇದು ಸುಂದರವಾದ ಹಸಿರು ಹುಲ್ಲುಗಾವಲಿನಿಂದ ಆವೃತ್ತವಾಗಿದೆ. ಮತ್ತು ಇದು ಸಮುದ್ರಮಟ್ಟದಿಂದ 3600 ಅಡಿ ಎತ್ತರದಲ್ಲಿದೆ.ಪಶ್ಚಿಮ ಘಟ್ಟಗಳ ಅಂಚುಗಳಲ್ಲಿ ರುವ ಇದು ಅನೇಕ ಸಾಹಸಮಯ ಕ್ರೀಡೆಗಳಿಗೆ ಉತ್ತೇಜನ ನೀಡುತ್ತದೆ. ವೇಗಾಮನ್ ಪರ್ವತಾರೋಹಣ, ರಾಕ್ ಕ್ಲೈಂಬಿಂಗ್ ಅಥವಾ ಪ್ಯಾರಾಸೈಲಿಂಗ್ ಮುಂತಾದ ಸಾಹಸ ಚಟುವಟಿಕೆಗಳನ್ನು ಪ್ರಯತ್ನಿಸಲು ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ.

ಇಲ್ಲಿಯ ಕುರುಸುಮಾಲಾ ಆಶ್ರಮ, ಉಲಿಪೂನಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ಕೊಡಿ ಮತ್ತುಅಥವಾ ಸುಂದರವಾದ ಹುಲ್ಲುಗಾವಲುಗಳು ಮತ್ತು ವಗಮೋನ್ ನ ಪ್ರಶಾಂತವಾದ ಪ್ರಕೃತಿಯ ಅನುಭವನ್ನು ಪಡೆಯಿರಿ.

Read more about: travel

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more