Search
  • Follow NativePlanet
Share
» »ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !

ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !

ತಿರುಪತಿ ವೆಂಕಟೇಶ್ವರದ ಸನ್ನಿಧಾನಕ್ಕೆ ನೀವು ಹೋಗಿದ್ದೀರೆಂದರೆ ಅಲ್ಲಿರುವ ನೈಸರ್ಗಿಕ ಶಿಲಾ ತೋರಣವನ್ನು ನಿವು ನೋಡಿರುವಿರಿ. ಅನೇಕ ವರ್ಷದ ಹಿಂದೆ ಅಲ್ಲಿಗೆ ಭಕ್ತರ ಭೇಟಿಗೆ ಅವಕಾಶವಿತ್ತು. ಆದರೆ ಈಗ ಪ್ರವೇಶ ನಿಷೇಧಿಸಲಾಗಿದೆ. ತಿರುಪತಿಯಲ್ಲಿ ಅನೇಕ ವೈಶಿಷ್ಟಗಳಿವೆ. ಪವಾಡಗಳು ನಡೆಯುತ್ತವೆ ಎನ್ನಲಾಗುತ್ತದೆ. ಇಲ್ಲಿನ ಮಹಿಮೆಯಿಂದಲೇ ಲಕ್ಷಾಂತರ ಜನರು ಪ್ರತಿನಿತ್ಯ ಇಲ್ಲಿಗೆ ಆಗಮಿಸುತ್ತಾರೆ.

ತಿರುಪತಿಯಲ್ಲಿ ವಿಸ್ಮಯಕಾರಿ ರಹಸ್ಯಗಳು ಅಡಗಿವೆ. ವೆಂಕಟೇಶ್ವರ ರೂಪದಲ್ಲಿ ನೆಲೆ ನಿಂತಿರುವ ಕ್ಷೇತ್ರವಿದು. ತಿರುಪತಿಗೆ ಭೇಟಿ ನೀಡಿದರೆ ಪಾಪ ಪರಿಹಾರವಾಗುತ್ತದೆ ಎನ್ನುವುದು ಜನರ ನಂಬಿಕೆ. ಹಾಗಾಗಿ ಇಲ್ಲಿಗೆ ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನಿಡುತ್ತಾರೆ.

ತಿರುಪತಿಗೂ ಅನ್ಯಗ್ರಹಕ್ಕೂ ನಂಟಿದೆಯಾ

ತಿರುಪತಿಗೂ ಅನ್ಯಗ್ರಹಕ್ಕೂ ನಂಟಿದೆಯಾ

PC: Nikhilb239
ಇಲ್ಲಿನ ವಿಶೇಷ ಅಂಶಗಳಲ್ಲಿ ಇಲ್ಲಿನ ಶಿಲಾ ತೋರಣವೂ ಒಂದು . ಇಲ್ಲಿನ ವೆಂಕಟೇಶ್ವರನ ಪಾದದ ಸ್ಥಳ ಎನ್ನಲಾಗುತ್ತದೆ.ಇಲ್ಲಿ ನಡೆಯುವ ವಿಷ್ಮಯಗಳು ಅನೇಕ ಕುತೂಹಲಗಳನ್ನು ಮೂಡಿಸುತ್ತಿದೆ.

ಶಿಲಾ ತೋರಣ

ಶಿಲಾ ತೋರಣ

PC:Tatiraju.rishabh

ಮಹಾವಿಷ್ಣು ವೈಕುಂಠದಿಂದ ಭೂಲೋಕಕ್ಕೆ ಬಂದಿದ್ದು ಈ ಶಿಲಾ ತೋರಣದಿಂದ ಎನ್ನಲಾಗುತ್ತದೆ. 20 ವರ್ಷ ಮೊದಲು ಅಲ್ಲಿಗೆ ಭಕ್ತರಿಗೆ ಪ್ರವೇಶವಿತ್ತು. 26 ಅಡಿ ಅಗಲ 10ಅಡಿ ಎತ್ತರ ಈ ಶಿಲಾ ತೋರಣ ಏಷ್ಯಾದಲ್ಲಿ ಇನ್ನೆಲ್ಲೂ ಇಲ್ಲಾ. ಇದು ನಿರ್ಮಾಣಗೊಂಡು 20 ಲಕ್ಷ ವರ್ಷಗಳೇ ಆಗಿರಬಹುದು ಎನ್ನಲಾಗುತ್ತದೆ. ನೈಸರ್ಗಿಕವಾಗಿ ನಿರ್ಮಾಣವಾಗಿರುವುದು ಎನ್ನುತ್ತಾರೆ ಭೂ ವಿಜ್ಞಾನ ತಜ್ಞರು.

ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದುನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

ಸ್ಟಾರ್‌ಗೆಟ್‌

ಸ್ಟಾರ್‌ಗೆಟ್‌

PC: Raji.srinivas

ಸ್ಟಾರ್‌ಗೆಟ್‌ ಎನ್ನುವುದು ಬಾಹ್ಯಾಕಾಶದ ವಾರ್ಮ್ ಹೋಲ್ ಎಂಟ್ರನ್ಸ್‌ ಎನ್ನಲಾಗುತ್ತದೆ. ಅಂದರೆ ವೈಕುಂಠದಿಂದ ವಿಷ್ಣುವು ಈ ಶಿಲಾ ತೋರಣದ ಮೂಲಕ ಭೂಮಿಗೆ ಇಳಿದು ಬಂದಿದ್ದು ಎನ್ನಲಾಗುತ್ತದೆ.

 ವೈಕುಂಠ ಗುಹೆ

ವೈಕುಂಠ ಗುಹೆ


ವೈಕುಂಠ ಗುಹೆ ಶಿಲಾ ತೋರಣದ ಸಮೀಪ ಒಂದು ಗುಹೆ ಇದ್ದು ಅಲ್ಲಿ ವೆಂಕಟೇಶ್ವರ ಸ್ವಾಮಿ ನೆಲೆನಿಂತ ಕಾರಣ ಅದನ್ನು ವೈಕುಂಠ ಗುಹೆ ಎನ್ನಲಾಗುತ್ತದೆ.

ವಿಸ್ಮಯಕಾರಿ ಶಕ್ತಿ ಇದೆ

ವಿಸ್ಮಯಕಾರಿ ಶಕ್ತಿ ಇದೆ

ಮಹಾವಿಷ್ಣುವಿನ ಪಾದವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಈ ಕಲ್ಲಿನ ಕೆಳಗೂ ವಿಸ್ಮಯಕಾರಿ ಶಕ್ತಿ ಇದೆ ಎನ್ನಲಾಗುತ್ತದೆ. ಪಾದದ ಸುತ್ತಲೂ ಟ್ರಾನ್ಸ್‌ಪರೆಂಟ್ ಬಾಕ್ಸ್ ಹಾಕಲಾಗಿದೆ. ಅದರೊಳಗೆ ಹಬೆ ಉಂಟಾಗುತ್ತದೆ. ವಿಷ್ಣುವಿನ ಪಾದವಿರುವ ಸ್ಥಳದ ಬಳಿಗೆ ಯಾರನ್ನೂ ಹೋಗಲು ಬಿಡುವುದಿಲ್ಲ.

ಈ ಬೀಚ್‌ನಲ್ಲೆಲ್ಲಾ ಬಿಕಿನಿ ಹಾಕೊಂಡು ಓಡಾಡಬಹುದುಈ ಬೀಚ್‌ನಲ್ಲೆಲ್ಲಾ ಬಿಕಿನಿ ಹಾಕೊಂಡು ಓಡಾಡಬಹುದು

ಶಿಲಾ ತೋರಣದ ಸುರಕ್ಷತೆ

ಶಿಲಾ ತೋರಣದ ಸುರಕ್ಷತೆ

PC:Mydhili

ದೇವಲೋಕದಲ್ಲಿರುವ ದೇವರುಗಳು ಭೂ ಲೋಕಕ್ಕೆ ಬರಲು ಬಳಸಿದ ದಾರಿ ಇದಿರಬಹುದು ಎನ್ನಲಾಗುತ್ತದೆ. ಆದರೆ ಈಗ ಆ ಶಿಲಾ ತೋರಣದ ಬಳಿಗೆ ಯಾರನ್ನೂ ಹೋಗಲು ಬಿಡುವುದಿಲ್ಲ. ಸುರಕ್ಷತೆಯ ದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತದೆ ಆಡಳಿತ ಮಂಡಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X