Search
  • Follow NativePlanet
Share
» » ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಂತರ ಇಲ್ಲಿನ ಪದ್ಮಾವತಿ ದರ್ಶನ ಮಾಡ್ಲೇಬೇಕು

ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಂತರ ಇಲ್ಲಿನ ಪದ್ಮಾವತಿ ದರ್ಶನ ಮಾಡ್ಲೇಬೇಕು

ಈ ದೊಡ್ಡ ದೇವಾಲಯವನ್ನು 'ಅಲಮೆಲುಮಾಂಗಪುರಂ' ಎಂದು ಕೂಡ ಕರೆಯಲಾಗುತ್ತದೆ. ತಿರುಚುನೂರ್ ದೇವಾಲಯವನ್ನು ಭೇಟಿ ನೀಡದೆ ತಿರುಪತಿ ಯಾತ್ರೆ ಸಂಪೂರ್ಣವಾಗೋದಿಲ್ಲ.

ತಿರುಚುನೂರ್ ಹಿಂದೂಗಳ ಪ್ರಸಿದ್ಧ ಯಾತ್ರಾ ಕೇಂದ್ರವಾದ ತಿರುಪತಿ ಸಮೀಪವಿರುವ ಒಂದು ಸಣ್ಣ ಪಟ್ಟಣ. ಈ ಸಣ್ಣ ಪಟ್ಟಣದಲ್ಲಿ ಪದ್ಮಾವತಿಗೆ ಅರ್ಪಿತವಾದ ಸುಂದರವಾದ ದೇವಾಲಯವಿದೆ. ಪದ್ಮಾವತಿ ದೇವಸ್ಥಾನವು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಇದು ಒಂದು ಪ್ರಮುಖ ಯಾತ್ರಾ ಕೇಂದ್ರವೂ ಆಗಿದೆ.

ಅಲಮೆಲುಮಾಂಗಪುರಂ

ಅಲಮೆಲುಮಾಂಗಪುರಂ

PC:Malyadri
ಪದ್ಮಾವತಿ ದೇವಿಯು ಪವಿತ್ರ ದೇವತೆ ಎಂದು ನಂಬಲಾಗಿದೆ. ತಪ್ಪಿಗೆ ಪಶ್ಚಾತ್ತಾಪಪಟ್ಟರೆ ಭಕ್ತರನ್ನು ಸುಲಭವಾಗಿ ಕ್ಷಮಿಸುತ್ತಾಳೆ. ಆಶೀರ್ವಾದವನ್ನು ನೀಡುತ್ತಾಳೆ. ಈ ದೊಡ್ಡ ದೇವಾಲಯವನ್ನು 'ಅಲಮೆಲುಮಾಂಗಪುರಂ' ಎಂದು ಕೂಡ ಕರೆಯಲಾಗುತ್ತದೆ. ತಿರುಚುನೂರ್ ದೇವಾಲಯವನ್ನು ಭೇಟಿ ನೀಡದೆ ತಿರುಪತಿ ಯಾತ್ರೆ ಸಂಪೂರ್ಣವಾಗೋದಿಲ್ಲ. ಫಲ ಸಿಗೋದಿಲ್ಲ ಎಂದು ಹೇಳುತ್ತಾರೆ.

ವಿಜಯನಗರ ಶೈಲಿಯಲ್ಲಿದೆ

ವಿಜಯನಗರ ಶೈಲಿಯಲ್ಲಿದೆ

PC:Malyadri
ಈ ದೇವಸ್ಥಾನವನ್ನು ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಸ್ವರ್ಣಮುಖಿ ಪುಷ್ಕರಿಣಿ ದಕ್ಷಿಣದ ತೀರದಲ್ಲಿರುವ ಬಿಳಿ ಮತ್ತು ಚಿನ್ನದ ಬಣ್ಣದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಗೋಪುರ, ಮಂಟಪ ಮತ್ತು ಗರ್ಭಗುಡಿಗಳ ಜೊತೆ ಆಕರ್ಷಕವಾದ ರಚನೆಯಾಗಿದೆ.

ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಇತಿಹಾಸ ತಿಳಿಸುತ್ತದೆ ಇಲ್ಲಿನ ಶಾಸನ

ಇತಿಹಾಸ ತಿಳಿಸುತ್ತದೆ ಇಲ್ಲಿನ ಶಾಸನ

PC: Malyadri
ಪದ್ಮಾವತಿ ದೇವಾಲಯದಲ್ಲಿರುವ ಶಾಸನವು ನಿಮಗೆ ತಿರುಚನೂರಿನ ಇತಿಹಾಸದ ಬಗ್ಗೆ ವಿವರವಾಗಿ ಹೇಳುತ್ತದೆ. ಮೂಲತಃ ವೆಂಕಟೇಶ್ವರನಿಗೆ ಮೀಸಲಾಗಿರುವ ತಿರುಚನೂರಿನಲ್ಲಿ ಒಂದು ದೇವಾಲಯವಿದೆ. ಸ್ಥಳಾವಕಾಶದ ಕೊರತೆ ಕಾರಣ ಪುರೋಹಿತರು ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಆದ್ದರಿಂದ ಅವರು ಬೇರೆಡೆ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಿದರು ಮತ್ತು ಕೇವಲ ಎರಡು ಪ್ರಮುಖ ಸಮಾರಂಭಗಳನ್ನು ಇಲ್ಲಿ ನಡೆಸಲಾಗುತ್ತಿತ್ತು. ಕ್ರಮೇಣ ಅದೂವೂ ಕಷ್ಟವಾಯಿತು ಮತ್ತು ಆರಾಧನೆಯ ಸ್ಥಳವನ್ನು ಸ್ಥಳಾಂತರಿಸಲಾಯಿತು. ಅಂತಿಮವಾಗಿ ಸ್ಥಳವು ಅದರ ಎಲ್ಲಾ ಮಹತ್ವವನ್ನು ಕಳೆದುಕೊಂಡಿತು.

ಬೆಂಗಳೂರಿನಲ್ಲಿರುವ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಪಡೆದಿದ್ದೀರಾ?ಬೆಂಗಳೂರಿನಲ್ಲಿರುವ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಪಡೆದಿದ್ದೀರಾ?

ಶ್ರೀ ಕೃಷ್ಣ ಬಲರಾಮ ದೇವಸ್ಥಾನ

ಶ್ರೀ ಕೃಷ್ಣ ಬಲರಾಮ ದೇವಸ್ಥಾನ

PC:Malyadri
12 ನೇ ಶತಮಾನದಲ್ಲಿ, ಯಾದವ ರಾಜರು ಇಲ್ಲಿ ಶ್ರೀ ಕೃಷ್ಣ ಬಲರಾಮ ದೇವಸ್ಥಾನವನ್ನು ನಿರ್ಮಿಸಿದಾಗ ಈ ಪ್ರದೇಶದ ಮಹತ್ವವನ್ನು ಭಾಗಶಃ ಪರಿಷ್ಕರಿಸಲಾಯಿತು. ನಂತರ ಸುಮಾರು 16 ಮತ್ತು 17 ನೇ ಶತಮಾನದಲ್ಲಿ, ಎರಡು ಸೇರ್ಪಡೆಗಳನ್ನು ಮಾಡಲಾಯಿತು. ಸುಂದರ ವರದರಾಜದ ದೇವತೆಯನ್ನು ಪ್ರತಿಷ್ಟಾಪಿಸಲಾಯಿತು. ಜೊತೆಗೆ ಪದ್ಮಾವತಿಗೆ ಪ್ರತ್ಯೇಕ ದೇವಸ್ಥಾನವನ್ನು ನಿರ್ಮಿಸಲಾಯಿತು.

ಇತರ ದೇವತೆಗಳು

ಇತರ ದೇವತೆಗಳು

PC:Malyadri
ದೇವಾಲಯದ ಒಳಗೆ ಹಲವಾರು ದೇವತೆಗಳಿವೆ. ಶ್ರೀ ಪದ್ಮಾವತಿಯ ವಿಗ್ರಹವು ನಿಜಕ್ಕೂ ಪ್ರಶಂಸನೀಯವಾಗಿದೆ. ಪದ್ಮಾವತಿ ತಿರುಪತಿಯ ಮುಖ್ಯ ದೇವರಾದ ವೆಂಕಟೇಶ್ವರನ ಪತ್ನಿ. ಪದ್ಮಾಸಾನದಲ್ಲಿ ಕುಳಿತುಕೊಂಡು ತನ್ನ ಮೇಲಿನ ಕೈಯಲ್ಲಿ ಎರಡು ಕಮಲಗಳನ್ನು ಹಿಡಿದಿದ್ದಳು ಎಂದು ತೋರಿಸಲಾಗಿದೆ. ಅವರ ನಿಲುವು ಬಹಳಷ್ಟು ಪ್ರೀತಿ ಮತ್ತು ಗೌರವವನ್ನು ಬಿಂಬಿಸುತ್ತದೆ. ಕೆಳಗಿನ ಕೈಗಳು ನಿರ್ಭಯತೆ ಮತ್ತು ಆಶೀರ್ವಾದವನ್ನು ಪ್ರತಿನಿಧಿಸುತ್ತವೆ. ಶ್ರೀಕೃಷ್ಣ, ಬಾಲರಾಮ, ಸುಂದರಾರಾಜ ಸ್ವಾಮಿ ಮತ್ತು ಸೂರ್ಯ-ನಾರಾಯಣ ಸ್ವಾಮಿಗಳ ದೇವತೆಗಳು ಸಹ ಸುಂದರವಾದವು.

ಈ ಬೇಸಿಗೆಯಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಸೂಕ್ತ ಈ ಬೇಸಿಗೆಯಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಸೂಕ್ತ

ಆನೆಗೆ ಹೆಚ್ಚಿನ ಪ್ರಾಮುಖ್ಯತೆ

ಆನೆಗೆ ಹೆಚ್ಚಿನ ಪ್ರಾಮುಖ್ಯತೆ

PC:Malyadri
ಕಾರ್ತಿಕಾ ಮಾಸದಲ್ಲಿ ಪದ್ಮಾವತಿ ದೇವಿಯ ಬ್ರಹ್ಮೋತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ. ದೇವಿಯ ಅರ್ಪಣೆಗಳನ್ನು ತಿರುಚನೂರ್‌ಗೆ ವಿಶೇಷವಾಗಿ ಅಲಂಕರಿಸಿದ ಆನೆಯ ಮೇಲೆ ಮೆರವಣಿಗೆ ಮಾಡಲಾಗುತ್ತದೆ. ಕುತೂಹಲಕಾರಿಯಾಗಿ ದೇವಿಯನ್ನು ಹೊರುವ ಆನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೇವಸ್ಥಾನದಲ್ಲಿ ಹಾರಿಸಲ್ಪಟ್ಟ ಧ್ವಜವು ಆನೆಯ ಚಿತ್ರಣವನ್ನು ಹೊಂದಿದೆ. ಆಧ್ಯಾತ್ಮಿಕತೆಗೆ ಪ್ರಸಿದ್ಧವಾದ ಈ ಭೂಮಿಗೆ ಭೇಟಿ ನೀಡುವ ಮೂಲಕ ನೀವು ಪ್ರಭಾವಿತರಾಗುವಿರಿ.

 ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Malyadri
ತಿರುಚುನೂರ್ ದೇವಸ್ಥಾನಕ್ಕೆ ಅನೇಕ ಬಸ್‌ಗಳು ಲಭ್ಯವಿದೆ. ಎಪಿಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಲಭ್ಯವಿದೆ. ಶೇರಿಂಗ್ ಆಟೋಗಳೂ ಲಭ್ಯವಿದೆ. ಹಾಗಾಗಿ ಆಟೋಗಳಿಗೆ ಹೆಚ್ಚಿಗೆ ದುಡ್ಡು ಕೊಡುವ ಅಗತ್ಯವಿಲ್ಲ. ಬಸ್‌ ಮೂಲಕ ಪ್ರಯಾಣ ಬೆಳೆಸುವುದು ಉತ್ತಮ ಆಯ್ಕೆಯಾಗಿದೆ. ಈ ದೇವಸ್ಥಾನವು ತಿರುಪತಿಯಿಂದ ಬರೀ ೫ ಕಿ.ಮೀ ದೂರದಲ್ಲಿರುವುದರಿಂದ ಪ್ರತೀ ೫ ನಿಮಿಷಕ್ಕೊಮ್ಮೆ ಬಸ್‌ಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X