Search
  • Follow NativePlanet
Share
» »ಫ್ರೆಂಡ್ಸ್‌ ಜೊತೆ ಜಾಲಿ ಬೈಕ್‌ ರೈಡಿಂಗ್ ಹೋದೋದಾದ್ರೆ ಈ ಟಿಪ್ಸ್‌ ಮರೆಯದಿರಿ

ಫ್ರೆಂಡ್ಸ್‌ ಜೊತೆ ಜಾಲಿ ಬೈಕ್‌ ರೈಡಿಂಗ್ ಹೋದೋದಾದ್ರೆ ಈ ಟಿಪ್ಸ್‌ ಮರೆಯದಿರಿ

ಬೈಕ್‌ ಬಿಡೋದಂದ್ರೆ ಬಹಳಷ್ಟು ಜನರಿಗೆ ಕ್ರೇಜ್ ಆಗಿ ಬಿಟ್ಟಿದೆ. ಇನ್ನು ಬೈಕ್‌ನಲ್ಲಿ ಲಾಂಗ್‌ ಡ್ರೈವ್ ಹೋಗೋದಂತೂ ಸಖತ್ ಮಜಾ ನೀಡುತ್ತದೆ. ಸಾಕಷ್ಟು ಜನ ಫ್ರೆಂಡ್ಸ್‌ ಜೊತೆ ಸೇರಿ ವಾರಾಂತ್ಯದಲ್ಲಿ ಬೈಕ್‌ ರೈಡ್‌ ಹೋಗೋದನ್ನು ನೀವು ನೋಡಿರಬಹುದು. ಬೈಕ್‌ ರೈಡ್‌ ಏನೋ ಮಜಾ ಕೊಡುತ್ತದೆ. ಅದರ ಜೊತೆಗೆ ನಮ್ಮ ಲೈಪ್‌ ಕೂಡಾ ಸೇಫ್ಟಿ ಆಗಿರಬೇಕಲ್ಲ. ಹಾಗಾಗಿ ಬೈಕ್‌ ರೈಡ್‌ ಟ್ರಿಪ್‌ ಹೋಗೋವಾಗ ಯಾವೆಲ್ಲಾ ವಿಷ್ಯಗಳ ಬಗ್ಗೆ ಗಮನದಲ್ಲಿಡಬೇಕು ಅನ್ನೋದರ ಬಗ್ಗೆ ನಾವು ತಿಳಿಸಲಿದ್ದೇವೆ.

ಮೊದಲು ಸುರಕ್ಷತೆ

ಮೊದಲು ಸುರಕ್ಷತೆ

ನೀವು ಸಮೀಪದ ಮಾರುಕಟ್ಟೆಗೆ ಸಾಮಾನು ತೆಗೆದುಕೊಂಡು ಬರಲು ಹೋಗುವುದಾದರೂ ಹೆಲ್ಮೆಟ್ ಧರಿಸಬೇಕು. ಕಾನೂನು ಹೆಲ್ಮೆಟ್‌ ಧರಿಸಲು ಹೇಳುತ್ತಿದೆ. ಅಥವಾ ಇನ್ಯಾರೋ ಹೇಳುತ್ತಿದ್ದಾರೆ ಎನ್ನುವ ಕಾರಣಕ್ಕೆ ನೀವು ಹೆಲ್ಮೆಟ್ ಧರಿಸೋದಲ್ಲ. ಬದಲಾಗಿ ನಿಮಗಾಗಿ ನಿಮ್ಮ ಕುಟುಂಬದವರಿಗಾಗಿ, ನಿಮ್ಮನ್ನು ನಂಬಿಕೊಂಡಿರುವವರಿಗಾಗಿ ನೀವು ಹೆಲ್ಮೆಟ್ ಧರಿಸಿ.

ಗುಣಮಟ್ಟದ ಹೆಲ್ಮೆಟ್

ಗುಣಮಟ್ಟದ ಹೆಲ್ಮೆಟ್

ಉತ್ತಮ ಹೆಲ್ಮೆಟ್‌ನ್ನೇ ತೆಗೆದುಕೊಳ್ಳಿ. ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಹೆಲ್ಮೆಟ್‌ನ್ನು ಖರೀದಿಸಬೇಡಿ. ಹೆಲ್ಮೆಟ್‌ ತೆಗೆದುಕೊಳ್ಳುವಾಗ ನಿಮಗೆ ಕಂಫರ್ಟ್‌ ಆಗಿರುವ, ಜಾಸ್ತಿ ಟೈಟ್ ಆಗಿರದ ಹೆಲ್ಮೆಟ್‌ನ್ನೇ ಖರೀದಿಸಿ. ಹೆಲ್ಮೆಟ್‌ ಧರಿಸುವಾಗ ಸ್ಕಾರ್ಫ್ ಧರಿಸೋದನ್ನು ಮರೆಯದಿರಿ.

ಪೂರ್ಣ ಹೆಲ್ಮೆಟ್

ಪೂರ್ಣ ಹೆಲ್ಮೆಟ್

ಹೆಲ್ಮೆಟ್‌ಗಳು ಪೂರ್ಣ ಮುಖವನ್ನು ಹೊಂದಿರಬೇಕು. ಹೆಚ್ಚಿನವರು ಅರ್ಧದಷ್ಟು ಹೆಲ್ಮೆಟ್‌ಗಳನ್ನು ಧರಿಸುತ್ತಾರೆ. ಅದು ನೋಡಲು ಚೆನ್ನಾಗಿರಬಹುದು. ಆದರೆ ನಿಮ್ಮ ತಲೆಯನ್ನು ರಕ್ಷಿಸಲಾರದು. ಯಾವಾಗಲೂ ನಿಮ್ಮ ಹೆಲ್ಮೆಟ್‌ನ್ನು, ಅದರ ಗಾಜನ್ನು

ಸ್ವಚ್ಛವಾಗಿರಿಸಿಕೊಳ್ಳಿ. ಇಲ್ಲವಾದರೆ ನೀವು ಡ್ರೈವ್ ಮಾಡೋವಾಗ ಹೆಲ್ಮೆಟ್‌ನ ಗಾಜಿನ ಮೇಲಿರುವ ಧೂಳು ಡ್ರೈವಿಂಗ್‌ಗೆ ಅಡೆತಡೆಯನ್ನುಂಟು ಮಾಡಬಲ್ಲದು.

ಬೈಕಿಂಗ್ ಜಾಕೆಟ್

ಬೈಕಿಂಗ್ ಜಾಕೆಟ್

ನೀವು ಪದೇ ಪದೇ ಬೈಕ್‌ ರೈಡಿಂಗ್‌ ಹೋಗುತ್ತಿದ್ದರೆ ಬೈಕಿಂಗ್ ಜಾಕೆಟ್, ಪ್ಯಾಂಟ್, ಮಂಡಿ ಗಾರ್ಡ್, ರೈಡಿಂಗ್ ಶೂ ಮತ್ತು ರಕ್ಷಣಾತ್ಮಕ ಕೈಗವಸುಗಳನ್ನು ಬಳಸಿ. ಇವು ನಿಮಗೆ ರಕ್ಷಣೆಯನ್ನು ನೀಡುತ್ತದೆ.

ಬೈಕ್‌ ಸರ್ವಿಸ್ ಮಾಡಿಸಿ

ಬೈಕ್‌ ಸರ್ವಿಸ್ ಮಾಡಿಸಿ

ನೀವು ಯಾವುದೇ ದೂರದ ತಾಣಗಳಿಗೆ ಬೈಕ್‌ ರೈಡ್‌ ಮಾಡ್ತಿದ್ದೀರೆಂದಾದರೆ ಮೊದಲು ಬೈಕ್‌ನ್ನು ಸರ್ವಿಸ್‌ಗೆ ನೀಡಿ. ಬೈಕ್‌ನಲ್ಲಿ ಯಾವುದೇ ದೋಷವಿಲ್ಲವೆನ್ನುವುದನ್ನು ಮನಗೊಳ್ಳಿ. ಇಲ್ಲವಾದಲ್ಲಿ ಪ್ರವಾಸದ ಮಧ್ಯೆ ಮೆಕ್ಯಾನಿಕ್‌ನ್ನು ಹುಡುಕುತ್ತಾ ಕೂರಬೇಕಾದಿತು.

ಪೆಟ್ರೋಲ್ ಪರೀಕ್ಷಿಸಿ

ಪೆಟ್ರೋಲ್ ಪರೀಕ್ಷಿಸಿ

ನಿಯಮಿತ ಮಧ್ಯಂತರಗಳಲ್ಲಿ, ನೀವು ಯಾವಾಗಲೂ ಕ್ಲಚ್ ಪ್ಲೇಟ್‌ಗಳು, ಏರ್ ಫಿಲ್ಟರ್ ಸ್ಪಾರ್ಕ್ / ಸ್ಪಾರ್ಕ್ ಪ್ಲಗ್, ಕ್ಲಚ್ / ಆಕ್ಸೆಲೆರೇಟರ್ / ಬ್ರೇಕ್ ಕೇಬಲ್‌ಗಳು, ಟೈಯರ್‌ಗಳು, ಪೆಟ್ರೋಲ್‌ ಲೆವೆಲ್ ಪರೀಕ್ಷಿಸಿ. ಬೇಕಾದಾಗ ಅವುಗಳನ್ನು ಬದಲಿಸಿಕೊಳ್ಳಬೇಕು.

ಎಕ್ಟ್ರಾ ಕೀ ಇರಲಿ

ಎಕ್ಟ್ರಾ ಕೀ ಇರಲಿ

ಯಾವಾಗಲೂ ದೂರದ ಊರಿಗೆ ಬೈಕ್‌ ರೈಡ್‌ ಹೋಗುವಾಗ ಒಂದು ಎಕ್ಸ್‌ಟ್ರಾ ಕೀ ಹಿಡಿದುಕೊಳ್ಳಿ. ಪ್ರವಾಸದ ಮಧ್ಯೆ ನೀವು ಎಲ್ಲಾದರೂ ಕೀ ಯನ್ನು ಮರೆತುಬಿಟ್ಟರೆ, ಇಲ್ಲವಾದಲ್ಲಿ ಕಳೆದುಹೋದರೆ ಇನ್ನೊಂದು ಕೀ ಉಪಯೋಗಕ್ಕೆ ಬರುತ್ತದೆ.

ಪರವಾನಗಿ ಪತ್ರ

ಪರವಾನಗಿ ಪತ್ರ

ನಿಮ್ಮ ವಿಮೆ, ನೋಂದಣಿ, ಚಾಲನೆ ಪರವಾನಗಿ ಮತ್ತು ಬೇಕಾಗುವ ಯಾವುದೇ ಇತರ ದಾಖಲೆಗಳ 2 ನಕಲು ಪ್ರತಿಗಳನ್ನು ಇಟ್ಟುಕೊಳ್ಳಿ. ಸಾಮಾನ್ಯವಾಗಿ, ಹೆಚ್ಚಿನ ದ್ವಿಚಕ್ರ ಸಣ್ಣ ಪೆಟ್ಟಿಗೆಗಳನ್ನು ಹೊಂದಿದ್ದು, ಅಲ್ಲಿ ನೀವು ಪೇಪರ್ಸ್, ಪ್ರಥಮ ಚಿಕಿತ್ಸಾ ಮತ್ತು ಸಣ್ಣ ಉಪಕರಣಗಳನ್ನು ಸಿಕ್ಕಿಸಬಹುದು.

ಮಾಹಿತಿ ಪಡೆಯಿರಿ

ಮಾಹಿತಿ ಪಡೆಯಿರಿ

ಪರವಾನಿಗೆ ಅಗತ್ಯವಿರುವ ಕೆಲವು ದೂರದ ಪ್ರದೇಶಗಳಿಗೆ ನೀವು ಸವಾರಿ ಮಾಡುತ್ತಿದ್ದರೆ, ಆ ಪರವಾನಗಿಯನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಎಲ್ಲಾ ಮಾಹಿತಿಯನ್ನು ಸಂಶೋಧಿಸಿ.

ಹೆಚ್ಚು ಪ್ಯಾಕಿಂಗ್ ಬೇಡ

ಹೆಚ್ಚು ಪ್ಯಾಕಿಂಗ್ ಬೇಡ

ಹೆಚ್ಚಿನ ಪ್ಯಾಕಿಂಗ್‌ನ್ನು ತಪ್ಪಿಸಿ. ನಿಮ್ಮ 7 ಜೋಡಿ ಶೂಗಳಿಗೆ ಹೊಂದುವ 3 ವಿವಿಧ ಸನ್‌ಗ್ಲಾಸ್ ಅಥವಾ 4 ವಿಭಿನ್ನ ಸ್ಕಾರ್ಫ್ ನಿಮಗೆ ಅಗತ್ಯವಿಲ್ಲ. ಇವುಗಳೆಲ್ಲವೂ ನಿಮ್ಮ ಬ್ಯಾಗ್‌ನಲ್ಲಿ ಸಾಕಷ್ಟು ಜಾಗವನ್ನು ತೆಗೆದುಕೊಳ್ಳುವುದಲ್ಲದೆ, ಪ್ಯಾಕಿಂಗ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಬದಲಾಗಿ ಕೇವಲ 3 ಟೀ ಶರ್ಟ್‌ ಅಥವಾ ಶರ್ಟ್‌ ಮತ್ತು 3 ಪ್ಯಾಂಟ್‌ಗಳು,ಒಂದು ಜೊತೆ ಶೂ, ಒಂದು ಸನ್‌ಗ್ಲಾಸ್‌ ಸಾಕು. ಒಳಉಡುಪುಗಳನ್ನು ನಿಮಗೆ ಬೇಕಾದಷ್ಟು ಇಟ್ಟುಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X