Search
  • Follow NativePlanet
Share
» »ಲೋಹವನ್ನು ಚಿನ್ನವನ್ನಾಗಿ ಬದಲಾಯಿಸುವ ಕಲ್ಲು ಈ ಕೋಟೆಯಲ್ಲಿದೆಯಂತೆ

ಲೋಹವನ್ನು ಚಿನ್ನವನ್ನಾಗಿ ಬದಲಾಯಿಸುವ ಕಲ್ಲು ಈ ಕೋಟೆಯಲ್ಲಿದೆಯಂತೆ

ತಿಮಾನ್‌ಘಡ್ ಕೋಟೆಯ ಬಗ್ಗೆ ಕೇಳಿದ್ದೀರಾ? ಇದು ರಾಜಸ್ತಾನದಲ್ಲಿರುವ ಒಂದು ಐತಿಹಾಸಿಕ ಕೋಟೆಯಾಗಿದೆ. ತಿಮಾನ್‌ಘಡ್ ಕೋಟೆ ಕಸೌಲಿಗೆ ಮಸಾಲ್ಪುರ್ ತೆಹ್ಸಿಲ್‌ನಲ್ಲಿದೆ. ಕ್ರಿಸ್ತಶಕ 1100 ರಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಇದು ಆಕ್ರಮಣದ ಮೂಲಕ ಶೀಘ್ರದಲ್ಲೇ ನಾಶವಾಯಿತು. ಈ ಕೋಟೆಯನ್ನು ವಿಜಯ ಪಾಲ್ನ ಕುಡಿ, ಯದುವಂಶಿ ರಾಜ ತಿಮಾನ್ಪಾಲ್ 1244 ರಲ್ಲಿ ಪುನರ್ನಿರ್ಮಿಸಲಾಯಿತು. ಕೋಟೆಯ ಸಂಕೀರ್ಣದ ದೇವಾಲಯಗಳ ಅಡಿಯಲ್ಲಿ ಪುರಾತನ ಬೆಲೆಬಾಳುವ ಧಾತುಗಳು, ಕಲ್ಲಿನ ವಿಗ್ರಹಗಳು ಮತ್ತು ಶಿಲ್ಪಗಳನ್ನು ಮರೆಮಾಡಲಾಗಿದೆ ಎಂದು ಜನರು ನಂಬುತ್ತಾರೆ.

 ಮುಹಮ್ಮದ್ ಘೋರಿ ಆಕ್ರಮಣ

ಮುಹಮ್ಮದ್ ಘೋರಿ ಆಕ್ರಮಣ

1196 ಮತ್ತು 1244 AD ನಡುವೆ ಈ ಕೋಟೆಯನ್ನು ಮುಹಮ್ಮದ್ ಘೋರಿಯ ಸೈನ್ಯವು ಆಕ್ರಮಿಸಿಕೊಂಡಿತ್ತು ಎನ್ನುವುದು ಪತ್ತೆಯಾಗಿರುವ ಹಲವಾರು ದಾಖಲೆಗಳು ದೃಢಪಡಿಸುತ್ತವೆ. ಕೋಟೆಯ ಬದಿಯಲ್ಲಿರುವ ಸರೋವರದ ಕೆಳಭಾಗದಲ್ಲಿ ಒಂದು ಪಾರಾಸ್ ಕಲ್ಲು ಇದೆ ಎಂದು ಜನರು ನಂಬುತ್ತಾರೆ.

ಪಾರಾಸ್ ಕಲ್ಲು ಎಂದರೆ ಏನು?

ಪಾರಾಸ್ ಕಲ್ಲು ಎಂದರೆ ಏನು?

ಇದೊಂದು ರೀತಿಯ ಕಲ್ಲು. ಇದರ ಮೂಲಕ ರಾಜ ತಿಮಾನ್ಪಾಲ್ ಲೋಹಗಳನ್ನು ಚಿನ್ನವನ್ನಾಗಿ ಮಾಡುತ್ತಿದ್ದನಂತೆ. ಯಾವುದೇ ಲೋಹವಾದರೂ ಚಿನ್ನವಾಗಿ ಬದಲಾಗುತ್ತಿತ್ತಂತೆ. ಹಾಗಾಗಿ ಈ ಕಲ್ಲನ್ನು ವಶಪಡಿಸಿಕೊಳ್ಳುವ ಸಲುವಾಗಿ ಅನೇಕ ರಾಜರು ತಿಮನ್‌ಘಡ್ ಕೋಟೆಯ ಮೇಲೆ ಆಕ್ರಮಣ ಮಾಡುತ್ತಿದ್ದರಂತೆ.

 ಪುರೋಹಿತನಿಗೆ ಕಲ್ಲನ್ನು ನೀಡಿದ ರಾಜ

ಪುರೋಹಿತನಿಗೆ ಕಲ್ಲನ್ನು ನೀಡಿದ ರಾಜ

PC: Advocate A A Khan

ತಿಮನ್‌ಘಡ್ ಕೋಟೆಗೆ ಆಕ್ರಮಣ ಮಾಡಲು ಕಾರಣವೇ ಆ ಕಲ್ಲು ಎನ್ನಲಾಗುತ್ತದೆ. ಮಹಮ್ಮದ್‌ ಘೋರಿ ಈ ಕೋಟೆಯ ಮೇಲೆ ದಾಳಿ ಮಾಡಿದಾಗ ಈ ಕಲ್ಲನ್ನು ರಕ್ಷಿಸುವುದು ಮುಖ್ಯವಾಗಿತ್ತು. ಅದನ್ನು ರಾಜನು ತನ್ನ ಪುರೋಹಿತನಿಗೆ ನೀಡಿದನು. ಪುರೋಹಿತ ಆ ಕಲ್ಲಿನ ಮಹತ್ವದ ಬಗ್ಗೆ ತಿಳಿಯದೆ ಸಾಮಾನ್ಯ ಕಲ್ಲೆಂದು ತಿಳಿದು ಸರೋವರಕ್ಕೆ ಬಿಸಾಡಿದರು.

ಪಾರಾಸ್ ಕಲ್ಲಿಗಾಗಿ ಹುಡುಕಾಟ

ಪಾರಾಸ್ ಕಲ್ಲಿಗಾಗಿ ಹುಡುಕಾಟ

PC:Pramod Kumar Gupta

ಈ ವಿಷಯ ರಾಜನಿಗೆ ತಿಳಿದು ಆ ಕಲ್ಲನ್ನು ಹುಡುಕಾಡಲು ಹರಸಾಹಸ ಪಟ್ಟನು. ಆನೆಗಳಿಂದ ಹುಡುಕಿಸಿದನು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯ ಆನೆ ನೀರಿನಿಂದ ಮೇಲಕ್ಕೆ ಬರುವಾಗ ಆನೆಯ ಕಾಲಿಗೆ ಹಾಕಲಾಗಿದ್ದ ಕಬ್ಬಿಣದ ಸರಪಳಿ ಚಿನ್ನವಾಗಿ ಬದಲಾಯಿತ್ತಂತೆ. ಆ ಮೂಲಕ ಪಾರಸ್ ಕಲ್ಲು ಆ ನದಿಯಲ್ಲೇ ಇದೆ ಎನ್ನಲಾಗುತ್ತದೆ.

ಶಹಾನಾಬಾದ್‌ ಕೋಟೆ

ಶಹಾನಾಬಾದ್‌ ಕೋಟೆ

ತಿಮನ್‌ಘಡ್ ನ ಸ್ವಲ್ಪ ದೂರದಲ್ಲಿರುವ ಶಹಾನಾಬಾದ್‌ ಕೋಟೆಯಲ್ಲಿ ಅಭೂತಪೂರ್ವ ಭಂಡಾರ ಇದೆ ಇಲ್ಲೂ ಪಾರಸ್ ಕಲ್ಲು ಇದೆ ಎನ್ನಲಾಗುತ್ತದೆ. ರಾಜ ತಿಮಾನ್ಪಾಲ್ ಪಾರಸ್ ಕಲ್ಲನ್ನು ರಕ್ಷಿಸುವ ಸಲುವಾಗಿ ಅದನ್ನು ಪಕ್ಕದ ರಾಜರಿಗೆ ಕೊಟ್ಟಿದ್ದ ಎನ್ನಲಾಗುತ್ತದೆ. ಶಹಾನಾಬಾದ್ ಕೋಟೆಯಲ್ಲಿ ಇಂದಿಗೂ ಜನರಿಗೆ ಚಿನ್ನದ ಆಭರಣ ಅಥವಾ ನಾಣ್ಯಗಳು ಸಿಗುತ್ತವೆಯಂತೆ ಶಹಾನಾಬಾದ್‌ ಕೋಟೆಯಲ್ಲಿ ಒಂದು ಮೆಟ್ಟಿಲು ಬಾವಿ ಇದೆ. ಅದರಲ್ಲಿ ಐದು ರಹಸ್ಯ ಕೋಣೆಗಳಿವೆ, ಅವುಗಳಲ್ಲಿ ಬೀಗ ಹಾಕಲಾಗಿತ್ತು. ಇದರೊಳಗೇ ಖಜಾನೆಯನ್ನು ಅಡಗಿಸಿಡಲಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ನವಾಲ್ ಮೆಟ್ಟಿಲು ಬಾವಿ

ನವಾಲ್ ಮೆಟ್ಟಿಲು ಬಾವಿ

ಆದರೆ ಈಗ ಮೆಟ್ಟಿಲು ಬಾವಿಯು ಸ್ಫೋಟಗೊಂಡು ನಾಶವಾಗಿದೆ. ಇದರಲ್ಲಿರುವ ರಹಸ್ಯ ಕೋಣೆಯಲ್ಲಿ ಖಜಾನೆ ಇದೆ ಎನ್ನುತ್ತಾರೆ ಸ್ಥಳೀಯರು. ನವಾಲ್ ಮೆಟ್ಟಿಲು ಬಾವಿಯಲ್ಲಿ ಖಜಾನೆ ಇದೆ ಎನ್ನಲಾಗುತ್ತದೆ. ಆದರೆ ಪಕ್ಕಾ ಸಾಕ್ಷಿ ಸಿಗುವವರೆಗೆ ಇದನ್ನು ನಂಬಲು ಸಾಧ್ಯವಾಗೋದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X