Search
  • Follow NativePlanet
Share
» »ಈ 5 ಸ್ಥಳಗಳಲ್ಲಿ ನಡೆಯುತ್ತದೆ ಅದ್ಭುತವಾದ ದೀಪಾವಳಿ ಸಂಭ್ರಮ..

ಈ 5 ಸ್ಥಳಗಳಲ್ಲಿ ನಡೆಯುತ್ತದೆ ಅದ್ಭುತವಾದ ದೀಪಾವಳಿ ಸಂಭ್ರಮ..

ದೀಪಾವಳಿ ಎಂದರೆ ಮೊದಲಿಗೆ ನೆನಪಾಗುವುದೇ ಪಟಾಕಿಗಳು. ಈ ಪಟಾಕಿಗಳ ಅರ್ಭಟದಿಂದಾಗಿಯೇ ದೀಪಾವಳಿ ಹಬ್ಬದ ಸಂಭ್ರಮ ಎಂದು ಗೊತ್ತಾಗುವುದು. ಪರಿಸರದ ದೃಷ್ಟಿಯಿಂದ ಶಬ್ಧವಿಲ್ಲದ ಪಟಾಕಿಗಳನ್ನು ಒಡೆದು ಪರಿಸರ ಸ್ನೇಹಿಯಾಗಿ. ಇದರಿಂದ ಪ್ರಾಣಿ, ಪಕ್ಷಿಗಳೇ ಅಲ

ದೀಪಾವಳಿ ಎಂದರೆ ಮೊದಲಿಗೆ ನೆನಪಾಗುವುದೇ ಪಟಾಕಿಗಳು. ಈ ಪಟಾಕಿಗಳ ಅರ್ಭಟದಿಂದಾಗಿಯೇ ದೀಪಾವಳಿ ಹಬ್ಬದ ಸಂಭ್ರಮ ಎಂದು ಗೊತ್ತಾಗುವುದು. ಪರಿಸರದ ದೃಷ್ಟಿಯಿಂದ ಶಬ್ಧವಿಲ್ಲದ ಪಟಾಕಿಗಳನ್ನು ಒಡೆದು ಪರಿಸರ ಸ್ನೇಹಿಯಾಗಿ. ಇದರಿಂದ ಪ್ರಾಣಿ, ಪಕ್ಷಿಗಳೇ ಅಲ್ಲದೇ ಮಕ್ಕಳನ್ನು ಹಾಗು ಪರಿಸರವನ್ನು ಕೂಡ ಕಾಪಾಡಿ. ವರ್ಷದಿಂದ ವರ್ಷಕ್ಕೆ ಪರಿಸರ ಸ್ನೇಹಿಯಾದ ದೀಪಾವಳಿಯನ್ನು ಆಚರಣೆ ಮಾಡುತ್ತಿರುವುದು ಒಂದು ಉತ್ತಮವಾದ ಬೆಳವಣಿಗೆಯೇ ಸರಿ.

ಭಾರತದಲ್ಲಿನ ಕೆಲವು ನಗರಗಳು ದೀಪಾವಳಿಯ ಸಂದರ್ಭದಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತವೆ. ದೇವಾಲಯಗಳದಲ್ಲಿನ ಸಂಭ್ರಮ, ಹಲವಾರು ದೇವರ ನಾಮಗಳು, ಬಣ್ಣ ಬಣ್ಣದ ಲೈಟುಗಳು ಸಿಂಗರಿಸಲ್ಪಟ್ಟ ಸುಂದರವಾದ ಹಾದಿ-ಬೀದಿಗಳು ಆಹಾ ಅದ್ಭುತ ಎಂದು ಅನ್ನಿಸದೇ ಇರಲಾರದು. ಹಾಗಾದರೆ ಯಾವ ಯಾವ ನಗರದಲ್ಲಿ ಹೇಗೆಲ್ಲಾ ದೀಪಾವಳಿ ಸಂಭ್ರಮ ಆಚರಿಸುತ್ತಾರೆ ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ಜೈಪುರ್

ಜೈಪುರ್

ಜೈಪುರ್ ಅನ್ನು "ಪಿಂಕ್ ಸಿಟಿ" ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಅದ್ಭುತವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಸುಂದರವಾದ ಕೋಟೆಗಳು ಹಾಗು ಅರಮನೆಗಳು ವಿಶ್ವದಲ್ಲಿಯೇ ಪ್ರಖ್ಯಾತಿಯನ್ನು ಪಡೆದಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೈಪುರದ ಕೆಲವು ಭಾಗಗಳಲ್ಲಿ ಯಾವುದೇ ಪಾಟಕಿಗಳ ಸದ್ದಿಲ್ಲದೇ ದೀಪವನ್ನು ಹಚ್ಚುವುದರಿಂದ ಪರಿಸರ ಸ್ನೇಹಿ ಅಳವಡಿಸಿಕೊಂಡಿದ್ದಾರೆ.

ಗೋವಾ

ಗೋವಾ

ಗೋವಾ ಒಂದು ಭಾರತದ ಬಹುದೊಡ್ಡದಾದ ಪ್ರವಾಸಿತಾಣವಾಗಿದೆ. ರಜೆ ಸಂದರ್ಭದಲ್ಲಿ ಅತಿ ಹೆಚ್ಚಾಗಿ ಯುವಕರು ಭೇಟಿ ನೀಡುವ ಸ್ಥಳವೆಂದರೆ ಅದು ಗೋವಾ. ಪರಿಸರ ಸ್ನೇಹಿ ಎಂಬ ಮಾತಿಗೆ ಬಂದರೆ ಗೋವಾ ದೀಪಾವಳಿಯಂದು ವಿಶೇಷವಾದ ಗಮನವನ್ನು ಸೆಳೆಯುತ್ತದೆ. ಇಲ್ಲಿನ ಅದ್ಭುತವಾದ ಕಡಲತೀರಗಳು ದೀಪಾವಳಿ ಹಬ್ಬವನ್ನು ಮತ್ತಷ್ಟು ಮೆರುಗು ಹೆಚ್ಚಿಸಲಿದೆ.

Kinshuk Kashyap

ಕೋವಳಂ, ಕೇರಳ ರಾಜ್ಯ

ಕೋವಳಂ, ಕೇರಳ ರಾಜ್ಯ

ಕೇರಳ ಕರಾವಳಿಯ ಒಂದು ಸುಂದರವಾದ ಗ್ರಾಮವಾಗಿದೆ. ಈ ತಾಣವು ಅತ್ಯಂತ ರಮಣೀಯವಾಗಿರುತ್ತದೆ. ತನ್ನಲ್ಲಿರುವ ಸಮುದ್ರ ಹಾಗು ತಂಪಾದ ಗಾಳಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೋವಲಂ ಗ್ರಾಮದ ಪ್ರಜೆಗಳು ತಮ್ಮ ಬಂಧುಗಳೊಂದಿಗೆ ಸಂತಸದಿಂದ ಶಾಂತಿಯುತವಾದ ದೀಪಾವಳಿಯನ್ನು ಆಚರಿಸುತ್ತಾರೆ.


Ashwin Kumar

ಬೆಂಗಳೂರು

ಬೆಂಗಳೂರು

ದೀಪಾವಳಿಯ ಕಾಣಬೇಕಾದರೆ ಬೆಂಗಳೂರಿಗೆ ಭೇಟಿ ನೀಡಬೇಕು. ಇಲ್ಲಿ ಕೆಲವು ಕಡೆ ಭರ್ಜರಿಯಾಗಿ ಪಟಾಕಿಗಳನ್ನು ಸಿಡಿಸಿ ದೀಪಾವಳಿ ಸಂಭ್ರಮ ಆಚರಣೆ ಮಾಡಿದರೆ, ಮತ್ತೆ ಕೆಲವು ಕಡೆ ಪರಿಸರ ಸ್ನೇಹಿಯಾಗಿ ಆಚರಿಸುತ್ತಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದು ನೆಲೆಸಿರುವ ಜನರು ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುತ್ತಾರೆ.


Public.Resource.Org

ಶಿಮ್ಲಾ

ಶಿಮ್ಲಾ

ಹಿಮಾಲಯ ಪ್ರದೇಶ ರಾಜ್ಯದ ಅದ್ಭುತ ತಾಣವಾದ ಶಿಮ್ಲಾದಲ್ಲಿಯೂ ಕೂಡ ದೀಪಾವಳಿಯ ಹಬ್ಬದ ಭರ್ಜರಿಯಾಗಿಯೇ ನಡೆಯುತ್ತದೆ. ಹಿಮದಲ್ಲಿ ಸ್ಕೇಟಿಂಗ್, ಹೈಕಿಂಗ್ ಮಾಡುವಂತಹ ಹಲವಾರು ಚಟುವಟಿಕೆಗಳಿಂದ ಈ ಹಬ್ಬವನ್ನು ಆಚರಿಸುತ್ತಾರೆ ಎಂದೇ ಹೇಳಬಹುದು.


Anupam_ts

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X