Search
  • Follow NativePlanet
Share
» » ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು

ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು

ತಿರುಚೆಂಡೂರ್ ಮುರುಗನ್ ದೇವಸ್ಥಾನವು ಭಾರತದ ತಮಿಳುನಾಡಿನಲ್ಲಿರುವ ಮುರುಗನ್ ದೇವರಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಪುರಾಣ ಹೆಸರು ಅಥವಾ ಐತಿಹಾಸಿಕ ಹೆಸರು ಜಯಂತಿಪುರಂ ಆಗಿದೆ. ಈ ದೇವಾಲಯವು ತಮಿಳುನಾಡಿನ ನಾಲ್ಕನೇ ಹಿಂದೂ ದೇವಾಲಯವಾಗಿದೆ.

ತೂತುಕುಡಿಯ ತಿರುಚಂದೂರಿನಲ್ಲಿದೆ

ತೂತುಕುಡಿಯ ತಿರುಚಂದೂರಿನಲ್ಲಿದೆ

PC:Raja Ravi Varma

ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಚಂದೂರಿನಲ್ಲಿದೆ ಈ ದೇವಾಲಯ. ಇಲ್ಲಿ ಚೋಳರು, ಪಾಂಡ್ಯರ ಆಳ್ವಿಕೆಯ ಗುರುತುಗಳು ಕಾಣಸಿಕ್ಕಿವೆ. ಹಾಗಾಗಿ ಇದು ಸಾಕಷ್ಟು ಹಳೆಯ ದೇವಾಲಯದು ಎನ್ನಲಾಗುತ್ತದೆ. ಇಲ್ಲಿನ ದೇವಾಲಯದ ವೈಜ್ಞಾನಿಕ ವೈಶಿಷ್ಟ್ಯತೆಗಳು ನಿಜಕ್ಕೂ ಎಂತವರನ್ನಾದರೂ ಬೆರಗುಗೊಳಿಸದೇ ಇರಲಾರದು.

ಕಾಫಿ ನಾಡು ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ ಕಾಫಿ ನಾಡು ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ

ಸುನಾಮಿಗೂ ಬೆದರದ ದೇವಾಲಯ

ಸುನಾಮಿಗೂ ಬೆದರದ ದೇವಾಲಯ

PC:Ssriram mt

2004ರಲ್ಲಿ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ ಸುನಾಮಿಗೆ ಸಾವಿರಾರು ಜನರು ಬಲಿಯಾದರೂ. ಇಡೀ ಊರೇ ನಾಶವಾಯಿತು. ಅಷ್ಟೊಂದು ಭೀಕರ ಅಲೆಗಳು ಬಂದರೂ ಈ ದೇವಾಲಯ ಮಾತ್ರ ಏನೂ ಆಗಿಲ್ಲ. ಈ ದೇವಾಲಯ ಮಾತ್ರ ಯಥಾಸ್ಥಿತಿಯಲ್ಲಿ ನಿಂತಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.

 ಸಾಕಷ್ಟು ಬಂಡೆಗಳಿದ್ದವು

ಸಾಕಷ್ಟು ಬಂಡೆಗಳಿದ್ದವು

ಈ ದೇವಾಲಯ ನಿರ್ಮಿಸುವಾಗ ನಡಸಿದ ಕೆಲವು ತಂತ್ರಗಳಿಂದಾಗಿ ಈ ದೇವಾಲಯ ಸುನಾಮಿಯಿಂದ ಪಾರಾಗಿದೆ. ಸುನಾಮಿ ಹಾನಿಯಾಗಿಲ್ಲ. ದೇವಾಲಯ ನಿರ್ಮಿಸುವಾಗ ಆ ಜಾಗದಲ್ಲಿ ಸಾಕಷ್ಟು ಬಂಡೆಗಳಿದ್ದವಂತೆ. ಆ ಬಂಡೆಗಳಿದ್ದ ಸ್ಥಳದಲ್ಲೇ ದೇವಾಲಯವನ್ನು ನಿರ್ಮಿಸಲಾಗಿದೆ. ಹಾಗಾಗಿ ಆ ಬಂಡೆಗಳು ಸುನಾಮಿಯ ಅಲೆಯನ್ನು ಬೇರೆಡೆಗೆ ಡೈವರ್ಟ್ ಮಾಡಿದ್ದಾವೆ ಎನ್ನಲಾಗುತ್ತದೆ.

ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?

ಪೌರಾಣಿಕ ಹಿನ್ನೆಲೆ

ಪೌರಾಣಿಕ ಹಿನ್ನೆಲೆ

ಮುರುಗನಿಗೆ ವರುಣದೇವ ಒಂದು ವರ ನೀಡಿದ್ದನಂತೆ. ಅದೇನೆಂದರೆ ವರುಣನಿಂದ ಮುರುಗನಿಗೆ ಯಾವುದೇ ತೊಂದರೆ ಆಗೋದಿಲ್ಲ ಎನ್ನುವುದು. ವರ ನೀಡಿದ ಕಾರಣ ಅಷ್ಟೊಂದು ಜಲಪ್ರಳಯವೇ ಆದರೂ ಆ ಮುರುಗನ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗುತ್ತದೆ.

ವಿಗ್ರಹ ಕದ್ದ ಡಚ್ಚರು

ವಿಗ್ರಹ ಕದ್ದ ಡಚ್ಚರು

ದೇವರ ವಿಗ್ರಹವನ್ನು ಡಚ್ಚರು ಕದ್ದು ತಮ್ಮ ದೇಶಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದಾದ ಚಂಡಮಾರುತ ಉಂಟಾಗಿ ಹಡಗಿನಲ್ಲಿ ವಿಗ್ರಹವನ್ನು ಸಾಗಿಸಲು ಸಾಧ್ಯವಾಗೋದಿಲ್ಲ. ಹಾಗಾಗಿ ಡಚ್ಚರು ಈ ವಿಗ್ರಹವನ್ನು ನೀರಿನಲ್ಲಿ ಎಸೆಯುತ್ತಾರೆ. ಒಡಮಲ್ಲಿಯಪ್ಪ ಎನ್ನುವ ವ್ಯಕ್ತಿಗೆ ಮುರುಗನು ಕನಸಿನಲ್ಲಿ ಬಂದು ತನ್ನ ವಿಗ್ರಹ ಇರುವುದರ ಬಗ್ಗೆ ಸುಳಿವು ನೀಡುತ್ತಾನಂತೆ. ಹಾಗೆಯೇ ವಿಗ್ರಹವೂ ದೊರೆಯುತ್ತದೆ.

ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಹನುಮಜಯಂತಿಯಲ್ಲಿ ನೀವೂ ಪಾಲ್ಗೊಳ್ಳಿರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಹನುಮಜಯಂತಿಯಲ್ಲಿ ನೀವೂ ಪಾಲ್ಗೊಳ್ಳಿ

ರಾಜಗೋಪುರ 42 ಮೀ. ಎತ್ತರದಲ್ಲಿದೆ

ರಾಜಗೋಪುರ 42 ಮೀ. ಎತ್ತರದಲ್ಲಿದೆ

ಈ ದೇವಾಲಯದ ರಾಜಗೋಪುರ 42 ಮೀ. ಎತ್ತರದಲ್ಲಿದೆ. ಕನ್ಯಾಕುಮಾರಿಯಿಂದ 70 ಕಿ.ಮೀ ದೂರದಲ್ಲಿದೆ. ವಾಸ್ತುಶಿಲ್ಪದಿಂದ ಇದೊಂದು ಅದ್ಭುತ ಮಂದಿರವಾಗಿದೆ. ಪ್ರತಿದಿನ 9 ಬಾರಿ ಪೂಜೆ ನಡೆಸಲಾಗುತ್ತದೆ. 9 ವಿಧದ ನೈವೇದ್ಯವನ್ನು ಅರ್ಪಿಸಲಾಗುತ್ತದೆ,

 ತಲುಪುವುದು ಹೇಗೆ?

ತಲುಪುವುದು ಹೇಗೆ?

ಈ ದೇವಾಲಯವು ತೂತುಕುಡಿಯಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇಲ್ಲಿದೆ ಸಮೀಪದ ವಿಮಾನನಿಲ್ದಾಣವೆಂದರೆ ತೊಟ್ಟಿಕೊರ್ನ್. ಇದು ಸುಮಾರು 39 ಕಿ.ಮೀ ದೂರದಲ್ಲಿದೆ. ಇನ್ನು ಮಧುರೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 172 ಕಿ.ಮೀ ದೂರದಲ್ಲಿದೆ.
ತಿರುಚೆಂಡೂರಿಗೆ ಸಮೀಪದಲ್ಲೇ ರೈಲು ಹಾಗೂ ಬಸ್ ನಿಲ್ದಾಣಗಳೂ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X