Search
  • Follow NativePlanet
Share
» »ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ

By Vijay

ಕರ್ನಾಟಕದ ಮಲೆನಾಡಿನ ಭಾಗವಾದ ಶಿವಮೊಗ್ಗ ಜಿಲ್ಲೆಯು ತನ್ನಲ್ಲಿರುವ ಪ್ರಕೃತಿ ಸೌಂದರ್ಯದಿಂದಾಗಿ ಸರ್ವಜನರ ಮನ್ನಣೆಯನ್ನುಗಳಿಸಿದೆ. ಕರ್ನಾಟಕದ ಪ್ರವಾಸೋದ್ಯಮಕ್ಕೂ ತನ್ನದೆ ಆದ ಗಮನಾರ್ಹ ಕೊಡುಗೆಯನ್ನು ನೀಡುತ್ತಲೆ ಇದೆ. ಹಲವು ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ನಾವು ಕಾಣಬಹುದಾಗಿದೆ. ಅಂತಹವುಗಳಲ್ಲಿ ಕೆಲವು ರಾಮಾಯಣದಂತಹ ಮಹಾಕಾವ್ಯಗಳೊಡನೆ ನಂಟು ಹೊಂದಿದ್ದು ಹಿಂದೂಗಳ ಪಾಲಿಗೆ ವಿಶೇಷ ಸ್ಥಾನಗಳಾಗಿದ್ದರೆ ಇನ್ನೂ ಕೆಲವು ರಮಣೀಯವಾದ ಪ್ರಕೃತಿ ಸೌಂದರ್ಯದಿಂದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಸ್ಥಳಗಳಾಗಿವೆ.

ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆಯ ಈ ಒಂದು ಪುಟ್ಟ ಪಟ್ಟಣವು ಪ್ರಾಕೃತಿಕ ದೃಷ್ಟಿಯಿಂದ ಮಾತ್ರವಲ್ಲದೆ ಧಾರ್ಮಿಕವಾಗಿಯೂ ವಿಶೇಷ ಮಹತ್ವಪಡೆದ ಸ್ಥಳವಾಗಿದೆ. ರಾಜಧಾನಿ ಬೆಂಗಳೂರು ಮಹಾನಗರದಿಂದ ಸುಮಾರು 340 ಕಿ.ಮೀ ದೂರವಿರುವ ಈ ಪಟ್ಟಣವು ಶಿವಮೊಗ್ಗ ನಗರದಿಂದ ಕೇವಲ 62 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ. ಶಿವಮೊಗ್ಗ ನಗರ ಹಾಗೂ ಬೆಂಗಳೂರು ನಗರಗಳಿಂದ ತೀರ್ಥಹಳ್ಳಿಗೆ ತೆರಳಲು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳೆರಡೂ ದೊರೆಯುತ್ತವೆ. ಇನ್ನೂ ರೈಲಿನಲ್ಲಿ ತೆರಳಬೇಕಿದ್ದರೆ ಇದಕ್ಕೆ ಹತ್ತಿರದಲ್ಲಿರುವ ರೈಲುನಿಲ್ದಾಣ ಶಿವಮೊಗ್ಗ ರೈಲು ನಿಲ್ದಾಣ. ಮೈಸೂರು ಹಾಗೂ ಬೆಂಗಳೂರುಗಳಿಂದ ಸಾಕಷ್ಟು ರೈಲುಗಳು ಶಿವಮೊಗ್ಗಕ್ಕೆ ಲಭ್ಯವಿದೆ.

ಮಲೆನಾಡಿನ ಮೈಸಿರಿಯಲ್ಲಿ ಆವರಿಸಿರುವ ತೀರ್ಥಹಳ್ಳಿಯು ಭೇಟಿಯಿತ್ತ ಜನರಿಗೆ ಹಲವಾರು ಆಕರ್ಷಣೆಗಳನ್ನು ಸವಿಯಲು ಅವಕಾಶವನ್ನು ಕೊಡುತ್ತದೆ.

ತೀರ್ಥಹಳ್ಳಿ:

ತೀರ್ಥಹಳ್ಳಿ:

ದಂತಕಥೆಯ ಪ್ರಕಾರ, ಹಿಂದೆ ಜಮದಗ್ನಿ ಋಷಿಯ ಆದೇಶದಂತೆ ಅವರ ಮಗನಾದ ಪರಶುರಾಮನು ತನ್ನ ಕೊಡಲಿಯಿಂದ ತಾಯಿಯ ರುಂಡವನ್ನು ಕಡಿದು, ನಂತರ ಆ ಕೊಡಲಿಗೆ ತಾಕಿದ ರಕ್ತದ ಕಲೆಯನ್ನು ಅಳಿಸಲೆಂದು ಸಾಕಷ್ಟು ನದಿಗಳಲ್ಲಿ ಶುಚಿಗೊಳಿಸಿದರು ಆದರೂ ಒಂದು ಹನಿ ರಕ್ತದ ಹನಿಯು ಎಲ್ಲೂ ಹೋಗದಾಯಿತು. ಕೊನೆಗೆ ಈ ಕ್ಷೇತ್ರದಲ್ಲಿ ಹರಿದಿರುವ ತುಂಗಾ ನದಿಯಲ್ಲಿ ಪರಶುರಾಮರು ಯಶಸ್ವಿಯಾಗಿ ಕೊಡಲಿಗೆ ತಾಕಿದ ಕೊನೆಯ ಒಂದು ಹನಿಯ ರಕ್ತದ ಕಲೆಯನ್ನು ಅಳಿಸುವಲ್ಲಿ ಯಶಸ್ವಿಯಾದರು. ಆದ್ದರಿಂದ ತೀರ್ಥಕ್ಕೆ ಸಮನಾದ ತುಂಗಾ ನದಿಯ ಹರಿಯುವಿಕೆಯಿಂದಾಗಿ ಇದಕ್ಕೆ ತೀರ್ಥಹಳ್ಳಿ ಎಂಬ ಹೆಸರು ಬಂದಿತು. ಈ ನದಿಯಲ್ಲಿ ಮಿಂದರೆ ಸರ್ವ ಪಾಪಗಳು ಅಳಿಸಿ ಹೋಗುತ್ತವೆ ಎಂಬ ಅಚಲ ನಂಬಿಕೆ ಇಂದಿಗೂ ಇದೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ತೀರ್ಥಹಳ್ಳಿಯ ಪ್ರಮುಖ ಗುರುತರವಾದ ದೇವಾಲಯ ರಾಮೇಶ್ವರ ದೇವಾಲಯ. ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ರಾವಣನ ಸಂಬಂಧಿ ಮಾರೀಚ ಎಂಬ ಅಸುರ ರಾವಣನ ಆದೇಶದಂತೆ ಸೀತೆಯನ್ನು ಸಮ್ಮೋಹನಗೊಳಿಸಲು ಸುಂದರವಾದ ಜಿಂಕೆಯರೂಪದಲ್ಲಿ ಬರಲಾಗಿ ಅದನ್ನು ಕಂಡು ಸೀತೆಯು ಆ ಜಿಂಕೆಯು ತನಗೆ ಬೇಕೆಂಬ ಆಸೆಯನ್ನು ಪತಿ ಶ್ರೀರಾಮನಿಗೆ ವ್ಯಕ್ತಪಡಿಸಿದಳು.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಈ ರೀತಿಯಾಗಿ ಆ ಮಾಯಾ ಜಿಂಕೆಯ ಬೆನ್ನಟ್ಟಿದ ರಾಮನು ಕೊನೆಯದಾಗಿ ತನ್ನ ಬಾಣದಿಂದ ಅದನ್ನು ಸಂಹರಿಸಿದನು. ಒಟ್ಟಾರೆಯಾಗಿ ಈ ಪ್ರಸಂಗ ಜರುಗಿದ್ದು ಈ ಸ್ಥಳದಲ್ಲಿಯೆ ಎಂದು ಕೂಡ ಹೇಳಲಾಗುತ್ತದೆ. ಇದಕ್ಕೆ ಅನುರೂಪವೆಂಬಂತೆ ಮೃಗವಧೆ ಎಂಬ ತಾಣವನ್ನು ಇಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿ ಕಾಣುತ್ತಿರುವುದು ಪರಶುರಾಮರ ತಪಸ್ಸನ್ನಾಚರಿಸಿದ್ದರೆನ್ನಲಾದ ರಾಮ ಮಂಟಪ ಬಳಿಯಿರುವ ಶಿವಲಿಂಗ ಹಾಗೂ ನಂದಿ ವಿಗ್ರಹಗಳು.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ರಾಮಮಂಟಪದ ಬಳಿಯಲ್ಲೆ ತುಂಗಾ ನದಿಗೆ ಸಾಂಪ್ರದಾಯಿಕವಾಗಿ ನಿರ್ಮಿಸಲಾಗಿರುವ ಸುಂದರ ಈಜು ಕೊಳ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಪ್ರಕೃತಿ ಸೌಂದರ್ಯದ ತೀರ್ಥಹಳ್ಳಿಯಲ್ಲಿ ಹರಿದಿರುವ ತುಂಗಾ ನದಿಯ ತಟವು ನೋಡಲು ಬಲು ಚೆಂದ. ಅದಕ್ಕೆ ಇಂಬು ನೀಡುವಂತೆ ಇಲ್ಲಿ ದೋಣಿ ವಿಹಾರವಿರುವುದೂ ಪ್ರವಾಸಿಗರಿಗೆ ಪರಮಾನಂದ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ತುಂಗಾ ನದಿಯ ಮಧ್ಯದಲ್ಲಿರುವ ರಾಮ ಮಂಟಪ ಹಾಗೂ ಹಿನ್ನಿಲೆಯಲ್ಲ್೯ಇ ಕಂಡುಬರುವ ಸೇತುವೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ದಂತಕಥೆಯ ಪ್ರಕಾರ, ಇದೆ ಸ್ಥಳದಲ್ಲಿ ವಿಷ್ಣುವಿನ ಅವತಾರ ಹಾಗೂ ಚಿರಂಜೀವಿಗಳಲ್ಲೊಬ್ಬರಾದ ಪರಶುರಾಮರು ತಮ್ಮ ಕೊಡಲಿಗೆ ತಾಕಿದ ರಕ್ತದ ಕೊಲೆಯನ್ನು ತೊಳೆದಿದ್ದರೆನ್ನಲಾಗಿದೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ತೀರ್ಥಹಳ್ಳಿಯ ಗುರುತರ ಪ್ರವಾಸಿ ಆಕರ್ಷಣೆಯಾದ ಸಿದ್ಧರ ಅಥವಾ ಸಿದ್ಧೇಶ್ವರ ಗುಡ್ಡ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ತೀರ್ಥಹಳ್ಳಿಯಲ್ಲಿರುವ ರಾಮೇಶ್ವರ ದೇವಾಲಯದ ಮೂಲ ವಿಗ್ರಹ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ರಾಮೇಶ್ವರ ದೇವಾಲಯದಿಂದ ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾದ ತೀರ್ಥಹಳ್ಳಿಯ ತುಂಗಾ ಸೇತುವೆ. ಪ್ರಸ್ತುತ ಈ ಸೇತುವೆಯು ತೀರ್ಥಹಳ್ಳಿ ಹಾಗೂ ಕುರುವಳ್ಳಿಯನ್ನು ಒಂದಕ್ಕೊಂದು ಬೆಸೆಯುತ್ತದೆ ಹಾಗೂ ಕುರುವಳ್ಳಿಯು ತೀರ್ಥಹಳ್ಳಿಯ ವಿಸ್ತರಿಸಿದ ಭಾಗವಾಗಿದೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ತೀರ್ಥಹಳ್ಳಿಯಲ್ಲಿ ಜರುಗುವ ತೆಪ್ಪೋತ್ಸವದ ಸಂದರ್ಭದಲ್ಲಿ ತುಂಗಾ ನದಿ ತಟದಲ್ಲಿ ಆನಂದದಿಂದ ಸಮಯ ಕಳೆಯುತ್ತಿರುವ ಜನರು. ಹಿನ್ನಿಲೆಯಲ್ಲಿ ಕಾಣುತ್ತಿರುವುದು ತುಂಗಾ ಸೇತುವೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ತೀರ್ಥಹಳ್ಳಿಯ ಗುರುತರ ತಾಣವಾದ ಸಿದ್ಧರ ಗುಡ್ಡದಲ್ಲಿ ಕಂಡುಬರುವ ಬಂಡೆಗಳ ಪ್ರಾಕೃತಿಕ ಗುಹೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಸಿದ್ಧರ ಗುಡ್ಡದಲ್ಲಿ ಕಂಡುಬರುವ ಮತ್ತೊಂದು ಸೋಜಿಗ. ಇದನ್ನು ಬೆಳೆಯುವ ಕಲ್ಲು ಎನ್ನಲಾಗುತ್ತದೆ. ಇದು ಪ್ರತಿ ವರ್ಷವೂ ಬೆಳೆಯುತ್ತಿದೆಯಂತೆ!

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಸಂಜೆಯ ಸಮಯದಲ್ಲಿ ಸುಂದರವಾಗಿ ಗೋಚರಿಸುವ ತುಂಗಾ ಸೇತುವೆಯ ಒಂದು ನೋಟ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಸಿದ್ಧೇಶ್ವರ ಗುಡ್ಡದಲ್ಲಿ ಕಾಣಬಹುದಾದ ಒಂದು ಪುರ್ರತನ ಚಿಕ್ಕ ಗುಡಿ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಐತಿಹಾಸಿಕವಾಗಿಯೂ ಮಹತ್ವಪಡೆದಿರುವ ತೀರ್ಥಹಳ್ಳಿಯಲ್ಲಿ ಕವಳೆದುರ್ಗ ಎಂಬ ಕೋಟೆಯ ತಾಣವನ್ನೂ ಸಹ ಕಾಣಬಹುದು. ಕವಳೆದುರ್ಗಕ್ಕೆ ಕೊಂಡೊಯ್ಯುವ ಪಾದಚಾರಿ ಮಾರ್ಗ ಗಿಡ ಮರಗಳಿಂದ ಸಂಪದ್ಭರಿತವಾಗಿದ್ದು ನಿಸರ್ಗ ಸೌಂದರ್ಯದ ಅನನ್ಯ ಅನುಭವವನ್ನು ಒದಗಿಸುತ್ತದೆ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಕೆಳದಿ ನಾಯಕ, ಹೈದರಾಲಿ ಹಾಗೂ ಟಿಪ್ಪು ಮುಂತಾದವರಾಳಿದ ಕವಳೆ ದುರ್ಗದ ಅಳಿದುಳಿದ ಕೋಟೆಯ ಒಂದು ಪಾಕ್ಷಿಕ ನೋಟ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಕವಳೆದುರ್ಗ ಕೋಟೆಯ ತಾಣದಲ್ಲಿ ಕಂಡುಬರುವ ಒಂದು ಪ್ರಾಚೀನ ದೇಗುಲ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಕವಳೆದುರ್ಗ ಕೋಟೆ ತಾಣದ ಅತಿ ಎತ್ತರದ ಸ್ಥಳದಲ್ಲಿ ನಿರ್ಮಿತವಾದ ಪುರಾತನ ಚಿಕ್ಕ ದೇಗುಲ.

ಚಿತ್ರಕೃಪೆ: Manjeshpv

ತೀರ್ಥಹಳ್ಳಿ:

ತೀರ್ಥಹಳ್ಳಿ:

ಆ ಪುಟ್ಟ ದೇಗುಲದಲ್ಲಿ ಕಂಡುಬರುವ ಲಿಂಗ ರೂಪದ ಒಂದು ದೇವತೆಯ ವಿಗ್ರಹ.

ಚಿತ್ರಕೃಪೆ: Manjeshpv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X