Search
  • Follow NativePlanet
Share
» »ಚೆನ್ನೈಗೆ ಹೋದಾಗ ನೀವು ಇದನ್ನ ಅಪ್ಪಿತಪ್ಪಿಯೂ ಮಾಡಬೇಡಿ

ಚೆನ್ನೈಗೆ ಹೋದಾಗ ನೀವು ಇದನ್ನ ಅಪ್ಪಿತಪ್ಪಿಯೂ ಮಾಡಬೇಡಿ

ಅತಿಯಾದ ಉಷ್ಣತೆ, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳು, ಕಠಿಣ ಕಡಲತೀರಗಳು ಮತ್ತು ಸರಳ ವಾಸ್ತುಶಿಲ್ಪದಿಂದ ಚೆನ್ನೈ ನಿಜಕ್ಕೂ ಭೇಟಿ ನೀಡಬಹುದಾದ ತಾಣವಾಗಿದೆ.

ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ನಗರವು ಭಾರತದ ಅತಿದೊಡ್ಡ ಆಸ್ತಿಯಾಗಿದೆ. ಇದೊಂದು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಬ್ರಿಟಿಷರ ಕಾಲದಿಂದಲೇ ಈ ನಗರವು ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ ಮತ್ತು ದಕ್ಷಿಣದ ಪ್ರಮುಖ ಗೇಟ್ವೇ ಆಗಿದೆ. ಅತಿಯಾದ ಉಷ್ಣತೆ, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳು, ಕಠಿಣ ಕಡಲತೀರಗಳು ಮತ್ತು ಸರಳ ವಾಸ್ತುಶಿಲ್ಪದಿಂದ ಚೆನ್ನೈ ನಿಜಕ್ಕೂ ಭೇಟಿ ನೀಡಬಹುದಾದ ತಾಣವಾಗಿದೆ. ಇದು ಭಾರತದ ಅತಿ ಹೆಚ್ಚು ಸಂದರ್ಶಿತ ನಗರಗಳಲ್ಲಿ ಒಂದಾಗಿದೆ. ಹಾಗಾಗಿ ನೀವು ಚೆನ್ನೈಗೆ ಹೋಗುವಾಗ ಅನೇಕ ಅಂಶಗಳನ್ನು ನೆನಪಿನಟ್ಟಿಕೊಳ್ಳಬೇಕು.

ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಒಂದು ಹೊಸ ನಗರವನ್ನು ಭೇಟಿ ಮಾಡುವುದು ಅಷ್ಟೊಂದು ಸುಲಭವಲ್ಲ. ಅದು ಸಂಪೂರ್ಣವಾಗಿ ವಿಭಿನ್ನವಾದ ಸ್ಥಳೀಯ ಭಾಷೆಯೊಂದಿಗೆ ಅಲ್ಲಿ ಕಾಲ ಕಳೆಯುವುದು, ಅಲ್ಲಿನ ಜನರ ಜೊತೆ ಒಡನಾಡವನ್ನು ಬೆಳೆಸುವುಸುದು ಸುಲಭದ ಮಾತಲ್ಲ. ಹಾಗಾಗಿ ನೀವು ಚೆನ್ನೈಗೆ ಹೋದಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳನ್ನು ತಿಳಿಸಿಕೊಡಲಿದ್ದೇವೆ.

ಆಟೋದವರ ಜೊತೆ ವಾದಕ್ಕಿಳಿಯಬೇಡಿ

ಮುಖ್ಯವಾಗಿ ನೀವು ಊರಿಗೆ ಹೊಸಬರಂತೆ ಕಂಡರೆ , ನಿಮಗೆ ತಮಿಳು ಭಾಷೆ ಬಾರದೆ ಇದ್ದರೆ ಆಟೋದವರು ನಿಮ್ಮನ್ನು ಚೆನ್ನಾಗಿ ಲೂಟಿ ಮಾಡುತ್ತಾರೆ. ಸಿಕ್ಕಾ ಪಟ್ಟೆ ಚಾರ್ಜ್ ಮಾಡುತ್ತಾರೆ. ಅದಕ್ಕಾಗಿ ನೀವು ಈ ಜಂಜಾಟದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ವಾಹನಗಳಾದ ಬಸ್‌, ಮೆಟ್ರೋ ಬಳಸುವುದು ಒಳ್ಳೆಯದು.

ಫೆ, ಮಾರ್ಚ್‌ನಲ್ಲಿ ಚೆನ್ನೈ ಭೇಟಿ ಬೇಡ

ನವವಿವಾಹಿತರು ಫೆ.ಮಾರ್ಚ್ ತಿಂಗಳಲ್ಲಿ ಚೆನ್ನೈಗೆ ಹೋಗುವುದು ಬೇಡ, ಯಾಕೆಂದರೆ ಅಲ್ಲಿ ಬಹಳ ಬಿಸಲಿ ಇದೆ. ಜೊತೆಗೆ ನೀವು ಮಕ್ಕಳನ್ನು ಈ ಸಮಯದಲ್ಲಿ ಚೆನ್ನೈಗೆ ಕರೆದುಕೊಂಡು ಹೋಗುವುದು ಬೇಡ. ಚೆನ್ನೈನಲ್ಲಿ ಟೆಂಪರೇಚರ್‌ ಜಾಸ್ತಿ ಇರುತ್ತದೆ. ಅಲ್ಲಿನ ಬಿಸಿಲು ಮಾಮೂಲಿಯಾಗಿಲ್ಲ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಒಂದು ಬಾಟಲಿ ನೀರನ್ನು ಹಿಡಿದಿಟ್ಟುಕೊಳ್ಳಿ. ಆಗಾಗ ಬಾಯಾರಿಕೆಯಾಗುತ್ತಾಇರುತ್ತದೆ.

ಕಸವನ್ನು ಬಿಸಾಡಬೇಡಿ

ಎಲ್ಲೆಂದರಲ್ಲಿ ಕಸವನ್ನು ಬಿಸಾಡಬೇಡಿ. ಚೆನ್ನೈನಲ್ಲಿರುವ ಕಡಲತೀರಗಳು ಇತರ ಕಡಲ ತೀರಗಳಂತೆ ಇರಬಹುದು. ಆದರೆ ಅದನ್ನು ಹಾಳುಮಾಡಲು ನಮಗೆ ಯಾವುದೇ ಹಕ್ಕಿಲ್ಲ. ನಗರವನ್ನು ಸ್ವಚ್ಛಗೊಳಿಸುವ ಪ್ರಯತ್ನದಲ್ಲಿ ಚೆನ್ನೈ ತುಂಬಾ ಶ್ರಮಿಸುತ್ತಿದೆ. ಹಾಗಾಗಿ ಕಸವನ್ನು ಬಿಸಾಡಿ ನಗರವನ್ನು ಮಾಲಿನ್ಯಗೊಳಿಸುವುದು ಸರಿಯಲ್ಲ.

ಧೂಮಪಾನ ಮಾಡಬೇಡಿ

ನಗರದ ಧೂಮಪಾನಕ್ಕೆ ಬಂದಾಗ ನೀವು ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನೀವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ್ರೆ ಪೊಲೀಸ್‌ ಠಾಣೆಯಲ್ಲಿ ಕೂರಬೇಕಾಗುತ್ತದೆ. ಚೆನ್ನೈ ಅತ್ಯಂತ ಕಠಿಣ ಧೂಮಪಾನ ಕಾನೂನುಗಳನ್ನು ಹೊಂದಿದೆ . ನೀವು ಅವುಗಳನ್ನು ಸರಿಯಾಗಿ ಪಾಲಿಸುವುದು ಉತ್ತಮ.

ತಮಿಳು ಸಿನಿಮಾದ ಬಗ್ಗೆ ತಮಾಷೆ ಬೇಡ

ತಮಿಳು ಚಿತ್ರವನ್ನು, ಚಿತ್ರರಂಗವನ್ನು ತಮಾಷೆ ಮಾಡುವ ಪ್ರಯತ್ನ ಮಾಡಬೇಡಿ. ತಮಿಳಿಗರು ಸಿನಿಮಾ ನಟರನ್ನು ದೇವರೆಂದು ಆರಾಧಿಸುತ್ತಿದ್ದಾರೆ ಹೀಗಿರುವಾಗ ನೀವು ತಮಿಳು ಸಿನಿಮಾದ ಬಗ್ಗೆ ತಮಾಷೆ ಮಾಡುವುದರಿಂದ ತೊಂದರೆಗೊಳಗಾಗುವ ಸಾಧ್ಯತೆ ಇದೆ. ನೀವು ಕಾಲಿವುಡ್ ಬಗ್ಗೆ ಪ್ರಶಂಸೆಯನ್ನು ನೀಡಲು ಸಾಧ್ಯವಾಗದಿದ್ದರೆ ಅದರ ಬಗ್ಗೆ ಕಮೆಂಟ್ ಮಾಡಲು ಹೋಗಬೇಡಿ.

ಚೆನ್ನೈನ ಧಾರ್ಮಿಕ ಸ್ಥಳಗಳಲ್ಲಿ ಪ್ರವಾಸಿಗರಂತೆ ವರ್ತಿಸಬೇಡಿ

ಚೆನ್ನೈ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ನಗರವಾಗಿದೆ. ಚೆನ್ನೈ ತನ್ನ ಧಾರ್ಮಿಕತೆಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಭಕ್ತಿಯಿಂದ, ಶಾಂತವಾಗಿರಿ. ನೀವೊಬ್ಬ ಪ್ರವಾಸಿಯಂತೆ ವರ್ತಿಸದಿರಿ. ಇಲ್ಲಿ ಸಾಕಷ್ಟು ದೇವಾಲಯಗಳು ಮತ್ತು ವಸ್ತುಸಂಗ್ರಹಾಲಯಗಳು ಇವೆ. ಇಲ್ಲಿನ ದೇವಾಲಯಗಳ ವಾಸ್ತುಶಿಲ್ಪ ನಿಜಕ್ಕೂ ಅದ್ಭುತವಾಗಿದೆ.

ವೆರೈಟಿ ಡ್ರಿಂಕ್ಸ್‌ ಸಿಗೋದಿಲ್ಲ

ನೀವು ಚೆನ್ನೈನಲ್ಲಿ ಸುತ್ತಾಡಿದಲ್ಲೆಲ್ಲಾ ಮದ್ಯ ಸೇವಿಸಬೇಕೆಂದು ನಿರೀಕ್ಷಿಸಬೇಡಿ. ಚೆನ್ನೈ ನಲ್ಲಿ TASMACS ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಎಂಬ ಮಳಿಗೆಗಳಲ್ಲಿ ಮದ್ಯ ದೊರೆಯುತ್ತದೆ. ಹಾಗೆ ಸ್ವಲ್ಪ ಹೈ ಕ್ಲಾಸ್‌ ಬಾರ್‌ಗಳೂ ಇವೆ. ಆದರೆ ಬೆಂಗಳೂರಿನಲ್ಲಿ ಸಿಗುವಂತೆ ವೆರೈಟಿ ವೆರೈಟಿ ಡ್ರಿಂಕ್ಸ್‌ಗಳು ಅಲ್ಲಿ ಸಿಗೋದಿಲ್ಲ. ಜೊತೆಗೆ ಬಹಳ ದುಬಾರಿಯೂ ಆಗಿದೆ.

ಅನ್ನ ಸಾಂಬರ್ ತಿನ್ನಬೇಕು

ಉತ್ತರ ಭಾರತದವರಿಗೆ ಅನ್ನಕ್ಕಿಂತ ಹೆಚ್ಚು ಚಪಾತಿಯಂದ್ರೆ ಇಷ್ಟ. ಹೀಗಿರುವಾಗ ತಮಿಳುನಾಡಿಗೆ ಬಂದು ಚಪಾತಿಯನ್ನು ನಿರೀಕ್ಷಿಸುವುದು ಹುಚ್ಚುತನ ಎಂದೇ ಹೇಳಬಹುದು. ಇಲ್ಲಿ ನೀವು ನಿಮಗಿಷ್ಟವಿದ್ದರೂ, ಇಲ್ಲದಿದ್ದರೂ, ಇಡ್ಲಿ, ದೋಸೆ, ಅನ್ನ ಸಾಂಬರ್ ತಿನ್ನಬೇಕು.

ಲೋಕಲ್ ಟ್ರೈನ್ ಬಳಸಿ

ತಮಿಳಿನಾಡಿನಲ್ಲಿ ಬೆಂಗಳೂರಿನಷ್ಟು ಟ್ರಾಫಿಕ್ ಇಲ್ಲದಿದ್ದರೂ ಟ್ರಾಫಿಕ್ ಸಮಸ್ಯೆ ಸ್ವಲ್ಪ ಜಾಸ್ತಿನೇ ಇದೆ. ಹೀಗಿರುವಾ ನೀವು ಟ್ಯಾಕ್ಸಿಯಲ್ಲಿ, ಆಟೋದಲ್ಲಿ ಹೋಗಿ ಸಮಯ ವ್ಯರ್ಥ ಮಾಡೋದಕ್ಕಿಂತ ಲೋಕಲ್‌ ರೈಲಿನಲ್ಲಿ ಚಲಿಸುವುದು ಒಳ್ಳೆಯದು. ಚೆನ್ನೈನಲ್ಲಿ ಲೋಕಲ್ ಟ್ರೈನ್ ಓಡಾಡುವುದರಿಂದ ಜನರಿಗೆ ಓಡಾಟ ಸುಲಭವಾಗುತ್ತದೆ.

ಹೊಟೇಲ್‌ ರೂಂ ಒಳಗೆ ಬಂಧಿಯಾಗ ಬೇಡಿ

ಚೆನ್ನೈಗೆ ಹೋದಾಗ ಬರೀ ಹೋಟೇಲ್‌ ರೂಂ ಒಳಗೆ ಕಾಲ ಕಳೆಯಬೇಡಿ, ಬದಲಾಗಿ ಅಲ್ಲಿನ ಸುತ್ತಮುತ್ತಲಿನ ಪರಿಸರ, ತಾಣಗಳು, ಲೋಕಲ್ ಸಂಪ್ರದಾಯ, ಆಚಾರ, ವಿಚಾರಗಳ ಬಗ್ಗೆ ತಿಳಿಯಿರಿ. ಲೋಕಲ್ ಜನರೊಂದಿಗೆ ಸಂಭಾಷಿಸಿ. ಅಲ್ಲಿನ ಸಣ್ಣ ಪುಟ್ಟ ಅನುಭವನ್ನು ಪಡೆಯಿರಿ.

ಕಳ್ಳತನದಿಂದ ತಪ್ಪಿಸಿಕೊಳ್ಳಿ

ಚೆನ್ನೈನಂತಹ ಕಿಕ್ಕಿರಿದ ಪ್ರದೇಶಗಳಲ್ಲಿ ಕಳ್ಳತನವಾಗೋದು ಸಾಮಾನ್ಯ. ಅದರಲ್ಲೂ ಚೆನ್ನೈನಲ್ಲಿ ಪ್ರತಿದಿನ ಸಣ್ಣಪುಟ್ಟ ಕಳ್ಳತನ ನಡೆಯುತ್ತಲೇ ಇರುತ್ತದೆ. ಆದ್ದರಿಂದ ನೀವು ಅತ್ಯಂತ ಜಾಗರೂಕರಾಗಿರಬೇಕು. ಬೆಲೆಬಾಳುವ ವಸ್ತುಗಳನ್ನು, ದಾಖಲೆಗಳನ್ನು ಮತ್ತು ದೊಡ್ಡ ಪ್ರಮಾಣದ ಹಣವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಡಿ. ನಿಮ್ಮ ವಸ್ತುಗಳನ್ನು ನೀವೇ ಜಾಗರೂಕರಾಗಿ ಇಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X